Connect with us

ದಿನದ ಸುದ್ದಿ

ವನ್ಯಜೀವಿ ಅಭಯಾರಣ್ಯವಾಗುವತ್ತ ‘ಮಲೆ ಮಹದೇಶ್ವರ ಬೆಟ್ಟ’

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಅಭಯಾರಣ್ಯಕ್ಕೆ ಹುಲಿ ಸಂರಕ್ಷಿತಾರಣ್ಯ ಮಾನ್ಯತೆ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೇಳಿದ ಮಾಹಿತಿಯನ್ನು ಮಲೆಮಹದೇಶ್ವರ ವನ್ಯಜೀವಿ ವಿಭಾಗದಿಂದ ವರದಿಯನ್ನು ಕಳಿಸಲಾಗಿದೆ. 907 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ 15 ಹುಲಿಗಳನ್ನು ಮಲೆಮಹದೇಶ್ವರ ಬೆಟ್ಟ ಹೊಂದಿದೆ. ಅಂದುಕೊಂಡಂತೆ ಆದರೆ ಮುಂದೆ ಮಲೆಮಹದೇಶ್ವರ ಬೆಟ್ಟ ರಾಷ್ಟ್ರದ 15ನೇ ಹಾಗೂ ರಾಜ್ಯದ 6ನೇ ವನ್ಯಜೀವಿ ಅಭಯಾರಣ್ಯವಾಗಲಿದೆ.

ದಿನದ ಸುದ್ದಿ

ದಸರಾ,ದೀಪಾವಳಿ ಹಬ್ಬ ; ಹಣ ವಸೂಲಿಗೆ ಇಳಿದ ಖಾಕಿ ಪಡೆ

Published

on

  • ವಿಶೇಷ ವರದಿ : ಗಿರೀಶ್ ಕುಮಾರ್ ಗೌಡ, ಬಳ್ಳಾರಿ

5, 10 ಸಾವಿರ ರೂಪಾಯಿ ಪ್ರತಿ ಅಂಗಡಿ, ಲಾಡ್ಜ್, ಹೋಟೆಲ್ ಗಳಿಂದ ಹಣ ವಸೂಲಿಗೆ ಇಳಿದ ಖಾಕಿ ಪಡೆ.

ಸುದ್ದಿದಿನಡೆಸ್ಕ್:ದೇಶ ಹಾಗೂ ರಾಜ್ಯ ರಕ್ಷಣೆಗೆ ಪೋಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಮುಖ್ಯವಾಗಿದೆ. ಆದರೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಹಾಗೂ ಇನ್ನಿತರ ತಾಲೂಕುಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಐದಾರು ಪೊಲೀಸ್ ಸಿಬ್ಬಂದಿಗಳು ಸೇರಿ ದುಡ್ಡಿನ ಮಾಮೂಲು ಎತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಪೋಲೀಸ್ ಠಾಣೆಯ ಕೆಲ ಸಿಬ್ಬಂದಿಗಳು ಸಾರ್ವಜನಿಕರ ಅಂಗಡಿ, ಹೋಟೆಲ್, ಲಾಡ್ಜ್, ಬಾರ್ ಹಾಗೂ ರೆಸ್ಟೋರೆಂಟ್, ಸಂಘ ಸಂಸ್ಥೆಗಳು ಅಧ್ಯಕ್ಷರ ಬಳಿ ಹಾಗೂ ಇನ್ನಿತರ ವ್ಯಾಪಾರ ಮಾಡುವವರ ಹತ್ತಿರ ಹಾಗೂ ಅವರ ಮಾಲೀಕರ ಬಳಿ ಹೋಗಿ ನಾವು ಪೋಲಿಸರು ದಸರ ಮತ್ತು ದೀಪಾವಳಿ ಹಬ್ಬಕ್ಕೆ ಮಾಮೂಲಿ ಕೊಡಿ ಎಂದು ದೌರ್ಜನ್ಯ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಪೋಲೀಸ್ ಇಲಾಖೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.

ಇನ್ನು ಈ ವಿಚಾರವಾಗಿ ಪೋಲೀಸ್ ಠಾಣೆಯಲ್ಲಿ ಯಾವ ಸಿಬ್ಬಂದಿಗಳು ಹೆಚ್ಚಿನ ಹಣದ ಸವಾಲು ಹಾಕುತ್ತಾರೋ ಅವರು ಈ ನಗರದಲ್ಲಿ ಇವರ ಠಾಣೆಗೆ ಬರುವ ವ್ಯಾಪ್ತಿಯಲ್ಲಿ ಹಣವನ್ನು ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡಿ ಹಣವನ್ನು ಕೀಳುತ್ತಾರೆ. ಇದರಿಂದ ನಗರದಲ್ಲಿ ವ್ಯಾಪಾರ, ವ್ಯವಹಾರ ಮಾಡುವವರು ಮನನೊಂದಿದ್ದಾರೆ.

ಅನೇಕ ವರ್ಷಗಳಿಂದ ಈ ದಸರಾ ದೀಪಾವಳಿ ಮಾಮೂಲಿ ಹಣ ವಸೂಲಿ ಮಾಡುವ ಕಾರ್ಯ ಇರಲಿಲ್ಲ. ಮತ್ತೆ 2024 ರಲ್ಲಿ ವಿಜಯನಗರ ಜಿಲ್ಲೆಯ ವಿವಿಧ ತಾಲೂಕಿನ ಪೋಲೀಸ್ ಠಾಣೆಯ ಕೆಲ ಸಿಬ್ಬಂದಿಗಳು ಠಾಣೆಯ ಪರವಾಗಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಖಾಸಗಿ ಸಂಘದ ಅಧ್ಯಕ್ಷರೊಬ್ಬರು ತಿಳಿಸಿದರು‌.

ಲಕ್ಷಗಟ್ಟಲೆ ಹಣವನ್ನು ಸಾರ್ವಜನಿಕರಿಂದ ಅಂಗಡಿ ಮಾಲೀಕರಿಂದ ಪಡೆದು ನಂತರ ಠಾಣೆಯಲ್ಲಿ ಇರುವ ಪೋಲೀಸ್ ಅಧಿಕಾರಿಗಳಿಗೆ, ಎಸ್.ಐ ಮತ್ತು ಎ.ಎಸ್.ಐ ಹಾಗೂ ಮುಖ್ಯಪೇದೆ, ಪೇದೆಗಳಿಗೆ ಹಣವನ್ನು ಭಾಗ ಮಾಡಿ ಹಂಚಿಕೊಳ್ಳುತ್ತಾರೆ. ಸವಾಲು ಯಾರು ಮಾಡಿರುತ್ತಾರೋ ಅವರಿಗೆ ಲಕ್ಷಗಟ್ಟಲೆ ಹಣ ಬರುತ್ತದೆ. ಇವರುಗಳು ಬಹಳ ವರ್ಷಗಳಿಂದ ಇದ್ದ ಠಾಣೆಯಲ್ಲಿ ಉಳಿದುಕೊಂಡಿದ್ದಾರೆ.

ಇನ್ನು ನಗರದ ಶಾನ್ ಭೋಗ ಹೋಟೆಲ್ ಪಕ್ಕದಲ್ಲಿ ಇರುವ ರಸ್ತೆಯಲ್ಲಿ ನಿಂತುಕೊಂಡು ಐವರು ಪೊಲೀಸರು ಸಿವಿಲ್ ಡ್ರಸ್ ನಲ್ಲಿ ಇಳಿದು ಹಣ ವಸೂಲಿ ಮಾಡುತ್ತಿರುವ ದುರ್ಘಟನೆ ನಡೆದಿದೆ.


  • ಈ ವಿಷಯದ ಬಗ್ಗೆ ಏನಾದ್ರೂ ಆಧಾರಗಳು ಇದ್ದರೆ ಹೇಳಿ, ಸಿಸಿ ಕ್ಯಾಮರಗಳನ್ನು ಚೆಕ್ ಮಾಡಿಸುವೆ, ಈ ಕೂಡಲೇ ಡಿವೈಎಸ್ಪಿ ಅವರ ಬಳಿ ಮಾತನಾಡುತ್ತೇನೆ ಎಂದರು.

| ಹರಿಬಾಬು – ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ
ವಿಜಯನಗರ ಜಿಲ್ಲೆ


ಸವಾಲು ಹಾಕಿದ ಪೋಲೀಸ್ ಪೇದೆಗಳು ಒಂದು ಠಾಣೆಯಿಂದ ಐದಾರು ಸಿಬ್ಬಂದಿಗಳು ಸೇರಿ, ಅವರ ಠಾಣೆಯ ವ್ಯಾಪ್ತಿಗೆ ಬರುವ ಪ್ರತಿ ಅಂಗಡಿ, ಹೋಟೆಲ್, ಲಾಡ್ಜ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಹೋಗಿ ಬುಕ್ ಕೊಟ್ಟು ನಿಮ್ಮ ಹೆಸರು ಬರೆದು 5 ಸಾವಿರ, 10 ಸಾವಿರ ಹಣ ಕೊಡಿ ದಸರಾ-ದೀಪಾವಳಿ ಮಾಮೂಲು ಎಂದು ಹಣವನ್ನು ವಸೂಲಿ ಮಾಡುತ್ತಿದ್ದಾರೆ.

ಪ್ರತಿಯೊಂದು ಠಾಣೆಯ ಪಿ.ಎಸ್.ಐ ಹಾಗೂ ಡಿವೈಎಸ್ಪಿ ಅವರಿಗೂ ಇದರ ಬಗ್ಗೆ ಮಾಹಿತಿ ಇರುತ್ತದೆ ಆದರೆ ಸಿಬ್ಬಂದಿಗಳು ಮಾತ್ರ ಬಲಿಯಾಗುತ್ತಾರೆ ಎನ್ನುವ ಆರೋಪ ಸಹ ಇದೆ.

ವಿಜಯನಗರ ಜಿಲ್ಲೆಯ ಪ್ರತಿಯೊಂದು ಠಾಣೆಯಲ್ಲಿ ಐದಾರು ಸಿಬ್ಬಂದಿಗಳು ಈ ಮಾಮೂಲು ತರುವ ಕೆಲಸ ಮಾಡುತ್ತಾರೆ ಅವರಿಗೆ ಯಾವುದೇ ಡ್ಯೂಟಿ ಸಹ ಇರೋಲ್ಲ. ಇದರಲ್ಲಿ ಎಸ್.ಬಿ, ಕ್ರೈಮ್ ಸಿಬ್ಬಂದಿಗಳು ಇರುತ್ತಾರೆ. ಅದೇ ಊರಿನ ಸಿಬ್ಬಂದಿಗಳು ಬಹಳ ವರ್ಷಗಳಿಂದ ಇದೇ ಕೆಲಸ ಮಾಡುತ್ತಾರೆ ಎನ್ನುವ ದೊಡ್ಡ ಆರೋಪ ಸಹ ಇದೆ.

ಈ ‘ಮಾಮೂಲು’ ವಿರುದ್ಧ ವಿಜಯನಗರ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಹರಿಬಾಬು ಅವರು ಕ್ರಮತೆಗೆದು ಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

Published

on

ಸುದ್ದಿದಿನ,ದಾವಣಗೆರೆ : ಕಳದೆ 15 ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಅಸ್ಥಿಪಂಜರದ ರೂಪದಲ್ಲಿ ಪೊದೆಯೊಂದರಲ್ಲಿ ಪತ್ತೆಯಾದ ಘಟನೆ ದಾವಣಗೆರೆ ತಾಲೂಕಿನ ಅಣಜಿ ಕೆರೆ ಏರಿಯ ಬಳಿ ನಡೆದಿದೆ.

ದಾವಣಗೆರೆ ತಾಲೂಕಿನ ಕಡ್ಲೇಬಾಳು ಗ್ರಾಮದ ತಿಪ್ಪೇಶ್ ಎಂಬಾತ ಕಳೆದ 15 ದಿನಗಳ ಹಿಂದೆ ಕಾಣೆಯಾಗಿದ್ದು ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನಾಪತ್ತೆಯಾಗಿದ್ದ ತಿಪ್ಪೇಶ್ ಮೃತ ಬೈಕ್ ಪಕ್ಕದಲ್ಲೇ ಪೊದೆಯೊಂದರಲ್ಲಿ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದೆ. ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿಗಳು ಪೊದೆಯೊಳೆಗೆ ಬೈಕ್ ಹಾಗೂ ಅಸ್ಥಿಪಂಜರ ಕಂಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಬೈಕ್ ನಂಬರ್ ಪರಿಶೀಲಿಸಿದಾಗ ಕಡ್ಲೇಬಾಳು ಗ್ರಾಮದಲ್ಲಿ ನಾಪತ್ತೆಯಾಗಿದ್ದ ತಿಪ್ಪೇಶ್ ಎಂದು ವಿಷಯ ತಿಳಿದಿದ್ದು ಕೂಡಲೇ ಗ್ರಾಮಸ್ಥರನ್ನ ಕರೆಯಿಸಿ ಪರಿಶೀಲನೆ ನಡೆಸಿದಾಗ ತಿಪ್ಪೇಶ್ ಮೃತ ಎಂದು ಗೊತ್ತಾಗಿದ್ದು, ಇದೀಗ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಗಳೂರು | ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿ ಕೊಂದ ಪತಿ

Published

on

ಕೊಲೆಯಾದ ಸತ್ಯಮ್ಮ

ಸುದ್ದಿದಿನ,ದಾವಣಗೆರೆ : ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿಯನ್ನ ಪತಿ ಕೊಲೆ ಮಾಡಿರುವ ಘಟನೆ ಜಗಳೂರು ತಾಲೂಕಿನ ಹೊಸಬುಳ್ಳಾಪುರ ಗ್ರಾಮದಲ್ಲಿ ನಡೆದಿದೆ.

ಸತ್ಯಮ್ಮ ಎಂಬಾಕೆ ಪತಿಯಿಂದ ಕೊಲೆಯಾಗಿದ್ದು, ತಾಲೂಕಿನ ಹೊಸಬುಳ್ಳಾಪುರ ಗ್ರಾಮದ ಆಕೆಯನ್ನ ಕಳೆದ 12 ವರ್ಷಗಳ ಹಿಂದೆ ಜಗಳೂರು ತಾಲೂಕಿನ ಉಜ್ಜಪ್ಪವಡೆಯರಹಳ್ಳಿಯ ಅಣ್ಣಪ್ಪ ಎಂಬಾಂತ ಪ್ರೇಮಿಸಿ ಮದುವೆಯಾಗಿದ್ದ. ಇವರಿಬ್ಬರ ಸುಖ ಸಂಸಾರಕ್ಕೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಕೂಡ ಇತ್ತು. ಗಾರೆ ಕೆಲಸಕ್ಕೆ ಹೋಗುತ್ತಿದ್ದ ಅಣ್ಣಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ.

ಕುಡಿದು ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಅಣ್ಣಪ್ಪ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ರಾಜಿ ಸಂದಾನ ಕೂಡ ನಡೆದಿದ್ದು ಪೊಲೀಸರು ಹೊಂದಿ ಕೊಂಡು ಹೋಗುವಂತೆ ಬುದ್ದಿ ಹೇಳಿದ್ದರು. ಆದರೂ ಕುಡಿದು ಬಂದು ಹೆಂಡತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಅಣ್ಣಪ್ಪ ನಿತ್ಯ ದುಡ್ಡಿಗಾಗಿ ಹೆಂಡತಿಯನ್ನ ಪೀಡಿಸುತ್ತಿದ್ದ. ಅದೇ ರೀತಿ ಗೃಹಲಕ್ಷ್ಮಿ ಹಣ ಕಳೆದ ವಾರವಷ್ಟೇ ಸತ್ಯಮ್ಮನ ಅಕೌಂಟ್ ಗೆ ಬಂದಿದೆ. ಅತಿಯಾದ ಮಳೆಯಿಂದ ಕೂಲಿ ಕೆಲಸ ಇಲ್ಲದೇ ಪರದಾಡುತ್ತಿದ್ದ ಅಣ್ಣಪ್ಪ ಪತ್ನಿ ಸತ್ಯಮ್ಮಳಿಗೆ ಗೃಹ ಲಕ್ಷ್ಮಿ ಹಣ ಬಿಡಿಸಿಕೊಡುವಂತೆ ಪೀಡಿಸುತ್ತಿದ್ದನಂತೆ.

ಅಣ್ಣಪ್ಪನ ಕಾಟ ತಾಳಲಾರದೆ ಸತ್ಯಮ್ಮ ಮಗನೊಂದಿಗೆ ಅಸಗೋಡು ಗ್ರಾಮದ ಕೆನರಾ ಬ್ಯಾಂಕ್ ಶಾಖೆಗೆ ಹಣ ಬಿಡಿಸಿಕೊಳ್ಳಲು ಬಂದಾಗ ಹಿಂಬಾಲಿಸಿದ ಅಣ್ಣಪ್ಪ ಬ್ಯಾಂಕ್ ನಲ್ಲೆ ಹಣ ಕೊಡು ಎಂದು ಹೆಂಡತಿಯೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಕೊನೆಗೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಬಳಿಕ ಉಜ್ಜಪ್ಪರವಡೇರಹಳ್ಳಿ ಸಮೀಪದ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದು, ಕೊಲೆ ಮಾಡಿ ಮೈನ್ಸ್ ವಯರ್ ಕೆಳಗೆ ಬಿಸಾಕಿ ಹೋಗಿದ್ದಾನೆ. ಅಲ್ಲದೆ ಕರೆಂಟ್ ಹೊಡೆದು ಸತ್ತೋಗಿದ್ದಾಳೆ ಎಂದು ಕಥೆ ಕಟ್ಟಿದ್ದನಂತೆ.

ಇನ್ನು ಸತ್ಯಮ್ಮ ಸತ್ತಾಗಿನಿಂದ ಅಣ್ಣಪ್ಪ ಹಾಗೂ ಆತನ ಕುಟುಂಭಸ್ಥರು ತಲೆಮರೆಸಿಕೊಂಡಿದ್ದು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ರವಾನೆ ಮಾಡಿದ್ದು, ಕೊಲೆ ಆರೋಪಿ ಅಣ್ಣಪ್ಪ ವಿರುದ್ದ ಸತ್ಯಮ್ಮ ಸಂಬಂಧಿಕರು ಅಕ್ರೋಶ ಹೊರ ಹಾಕಿದ್ದು, ಆತನಿಗೆ ತಕ್ಕ ಶಿಕ್ಷೇಯಾಗಲಿ ಎಂದು ಹಿಡಿ ಶಾಪ ಹಾಕಿದರು.
ಇದೀಗ ಅಣ್ಣಪ್ಪ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ4 hours ago

ದಸರಾ,ದೀಪಾವಳಿ ಹಬ್ಬ ; ಹಣ ವಸೂಲಿಗೆ ಇಳಿದ ಖಾಕಿ ಪಡೆ

ವಿಶೇಷ ವರದಿ : ಗಿರೀಶ್ ಕುಮಾರ್ ಗೌಡ, ಬಳ್ಳಾರಿ 5, 10 ಸಾವಿರ ರೂಪಾಯಿ ಪ್ರತಿ ಅಂಗಡಿ, ಲಾಡ್ಜ್, ಹೋಟೆಲ್ ಗಳಿಂದ ಹಣ ವಸೂಲಿಗೆ ಇಳಿದ ಖಾಕಿ...

ದಿನದ ಸುದ್ದಿ4 hours ago

ದಾವಣಗೆರೆ | ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಸುದ್ದಿದಿನ,ದಾವಣಗೆರೆ : ಕಳದೆ 15 ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಅಸ್ಥಿಪಂಜರದ ರೂಪದಲ್ಲಿ ಪೊದೆಯೊಂದರಲ್ಲಿ ಪತ್ತೆಯಾದ ಘಟನೆ ದಾವಣಗೆರೆ ತಾಲೂಕಿನ ಅಣಜಿ ಕೆರೆ ಏರಿಯ...

ದಿನದ ಸುದ್ದಿ5 hours ago

ಜಗಳೂರು | ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿ ಕೊಂದ ಪತಿ

ಸುದ್ದಿದಿನ,ದಾವಣಗೆರೆ : ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿಯನ್ನ ಪತಿ ಕೊಲೆ ಮಾಡಿರುವ ಘಟನೆ ಜಗಳೂರು ತಾಲೂಕಿನ ಹೊಸಬುಳ್ಳಾಪುರ ಗ್ರಾಮದಲ್ಲಿ ನಡೆದಿದೆ. ಸತ್ಯಮ್ಮ ಎಂಬಾಕೆ ಪತಿಯಿಂದ ಕೊಲೆಯಾಗಿದ್ದು, ತಾಲೂಕಿನ...

ದಿನದ ಸುದ್ದಿ5 hours ago

ದಾವಣಗೆರೆ | ಅ.29ರಂದು ರೈತರಿಗೆ ಸುಸ್ಥಿರ ಕೃಷಿ ತರಬೇತಿ ಕಾರ್ಯಕ್ರಮ

ಸುದ್ದಿದಿನ,ದಾವಣಗೆರೆ:ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಾಡಜ್ಜಿ, ಇಲ್ಲಿ ಅಕ್ಟೋಬರ್ 29 ರಂದು ಜಿಲ್ಲೆಯ ರೈತರಿಗೆ ಸುಸ್ಥಿರ ಕೃಷಿ-ಸ್ವಾವಲಂಭಿ ಜೀವನಕ್ಕಾಗಿ ನೂತನ ತಾಂತ್ರಿಕತೆಗಳ ಕುರಿತು ಒಂದು ದಿನದ ತರಬೇತಿ...

ದಿನದ ಸುದ್ದಿ5 hours ago

ದಾವಣಗೆರೆ | ಒಳಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ; ಹೋರಾಟಕ್ಕೆ ಸ್ಪಂದಿಸದಿದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ : ಸರ್ಕಾರಕ್ಕೆ ಎಚ್ಚರಿಕೆ

ಸುದ್ದಿದಿನ,ದಾವಣಗೆರೆ ; ಒಳಮೀಸಲಾತಿಗೆ ಆಗ್ರಹಿಸಿ ಜಿಲ್ಲಾ ಮಾದಿಗ ಸಮಾಜ ಹಾಗೂ ಛಲವಾದಿ ಮಹಾಸಭಾ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಯದೇವ ವೃತ್ತ, ಅಶೋಕ ರಸ್ತೆ ಮಾರ್ಗವಾಗಿ...

ದಿನದ ಸುದ್ದಿ6 hours ago

ಜಗಳೂರು| ಐಟಿಐ ನೇರ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಜಗಳೂರು ಇಲ್ಲಿ ಐಟಿಐ ಕೋರ್ಸ್ ಗಳಲ್ಲಿ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕಾಗಿ ಎಸ್ ಎಸ್ ಎಲ್ ಸಿ ಪಾಸಾದ...

ದಿನದ ಸುದ್ದಿ6 hours ago

ದಾವಣಗೆರೆ | ನಾಳೆ ವಿದ್ಯುತ್ ವ್ಯತ್ಯಯ

ಸುದ್ದಿದಿನ,ದಾವಣಗೆರೆ: ಕುಕ್ಕವಾಡ ಮತ್ತು ಶ್ಯಾಗಲೆ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕುಕ್ಕವಾಡ, ಕೊಲಕುಂಟೆ,...

ದಿನದ ಸುದ್ದಿ6 hours ago

ಸರ್ಕಾರಿ ನೌಕರರ ಜಿಲ್ಲಾ ಶಾಖೆ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ

ಸುದ್ದಿದಿನ,ದಾವಣಗೆರೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ನಗರದ ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಸಂಘದ ಮೇರಿದೇವಾಸಿಯಾ...

ದಿನದ ಸುದ್ದಿ7 hours ago

ರಾಜ್ಯಾದ್ಯಂತ ಕಿತ್ತೂರು ಚೆನ್ನಮ್ಮ ವಿಜಯೋತ್ಸವ; ಹುಟ್ಟೂರು ಕಾಕತಿಯಲ್ಲಿ ಹಬ್ಬದ ಸಂಭ್ರಮ

ಸುದ್ದಿದಿನಡೆಸ್ಕ್:ಕಿತ್ತೂರ ರಾಣಿ ಚನ್ನಮ್ಮ 200ನೇ ವರ್ಷದ ವಿಜಯೋತ್ಸವ ಐತಿಹಾಸಿಕ ಹೋರಾಟದ ಮಹತ್ವವನ್ನು ಸಾರಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ರಾಣಿ ಚೆನ್ನಮ್ಮ...

ದಿನದ ಸುದ್ದಿ8 hours ago

ಕುವೆಂಪು ವಿಶ್ವವಿದ್ಯಾಲಯದ ಪ್ರವೇಶಾತಿಗೆ ಅವಧಿ ವಿಸ್ತರಣೆ

ಸುದ್ದಿದಿನ,ಶಿವಮೊಗ್ಗ:ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಲಿನ ಸ್ನಾತಕೊತ್ತರ ಪದವಿ/ ಸ್ನಾತಕೊತ್ತರ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗೆ ಯು.ಯು.ಸಿ.ಎಂ.ಎಸ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು....

Trending