Connect with us

ದಿನದ ಸುದ್ದಿ

ಚಿತ್ರದುರ್ಗ | “ಮದಕರಿ ನಾಯಕ ರಥಯಾತ್ರೆ”ಗೆ ಅನುಮತಿಕೊಡದಂತೆ ಒತ್ತಾಯಿಸಿ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಡಿಸಿ ಗೆ ಮನವಿ

Published

on

ಸುದ್ದಿದಿನ, ಚಿತ್ರದುರ್ಗ : ಮ್ಯಾಸ ನಾಯಕರ ಐತಿಹಾಸಿಕ ಸಾಂಸೃತಿಕ ಪುರುಷರನ್ನು ಬಿಜೆಪಿ(ಎಸ್‌ಟಿ) ಮೋರ್ಚದ ಸಂಘಟನೆಯು ಒಂದು ಪಕ್ಷ, ಒಂದು ಧರ್ಮಕ್ಕೆ ಸೀಮಿತಗೊಳಿಸಿ ದುರುಪಯೋಗಪಡಿಸಿಕೊಳ್ಳಲು ಉದ್ದೇಶಿಸಿರುವ ಕಾರಣ “ಮದಕರಿ ನಾಯಕ ರಥಯಾತ್ರೆ”ಗೆ ಅನುಮತಿಕೊಡದಂತೆ ಒತ್ತಾಯಿಸಿ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ಮೂಲಕ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಮಿತಿಯು ಮ್ಯಾಸ ಬೇಡ-ಮ್ಯಾಸ ನಾಯಕ ಬುಡಕಟ್ಟು ಜನರ ಸಂಸ್ಕ್ಥತಿ, ಇತಿಹಾಸ, ಹಕ್ಕುಗಳ ರಕ್ಷಣೆ ಮತ್ತು ಮ್ಯಾಸ ಬೇಡರ ಜೀವನೊದ್ದಾರಕ್ಕಾಗಿ ಶ್ರಮಿಸುತ್ತಿದೆ. ಆದರೆ ಬಿಜೆಪಿ (ಎಸ್‌ಟಿ) ಮೋರ್ಚದವರು ನಮ್ಮ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ನಾಯಕರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ 2011ರಲ್ಲಿ ನಾಯಕ ಸಮಾನಾರ್ಥಕ ಮ್ಯಾಸ ನಾಯಕ ಪದವನ್ನು ಕೇಂದ್ರದ ಹಿಂದುಳಿದ ಜಾತಿ(OBC)ಪಟ್ಟಿಗೆ ಸೇರ್ಪಡೆ ಮಾಡಿರುತ್ತಾರೆ. ಹಿಂದುಳಿದ ಜಾತಿಪಟ್ಟಿಯಲ್ಲಿರುವ ತಳವಾರ ಪರಿವಾರ ಜಾತಿಗಳನ್ನು ನಾಯಕ ಸಮಾನಾರ್ಥಕ ಪದಗಳಾಗಿ 2020ರಲ್ಲಿ ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಿ ನಿಜವಾದ ಬುಡಕಟ್ಟು ಜನಾಂಗಕ್ಕೆ ದ್ರೋಹ ಮಾಡಿರುತ್ತಾರೆ.

ಮಾರ್ಚ್‌ 2022ರಿಂದ ಪರಿಶಿಷ್ಟ ಪಂಗಡದಲ್ಲಿ ನಾಯಕ ಬದಲಾಗಿ ನಾಯಕ(ತಳವಾರ) ನಾಯಕ(ಪರಿವಾರ ಮತ್ತು ತಳವಾರ) ಎಂದು ಎಸ್‌ಟಿ ಪ್ರಮಾಣ ಪತ್ರವನ್ನು ನೀಡುವಂತೆ ಮಾಡಿ ನಾಯಕ ಪಂಗಡದವರಿಗೆ ಕಾನೂನಿನ ಹಾನಿಯುಂಟು ಮಾಡಿರುತ್ತಾರೆ. ಮದಕರಿ ನಾಯಕ ಜನಿಸಿದ ಮ್ಯಾಸ ನಾಯಕ ಜನಾಂಗಕ್ಕೆ ಇಷ್ಟೇಲ್ಲ ಅನ್ಯಾಯವನ್ನು ಮಾಡಿದ ಬಿಜೆಪಿಯವರಿಗೆ ಮದಕರಿ ನಾಯಕರ ಹೆಸರನ್ನು ಬಳಸಿಕೊಳ್ಳಲು ಯಾವುದೇ ನೈತಿಕ ಹಕ್ಕು ಇಲ್ಲ.

ರಾಜವೀರ ಮದಕರಿ ನಾಯಕರನ್ನು ತಳವಾರ(ಊರುನಾಯಕ) ಜಾತಿಯವರು ಕಬಳಿಸಲು ಸಂಚೂರೂಪಿಸಿರುತ್ತಾರೆ. ಬಿಜೆಪಿ (ಎಸ್.ಟಿ) ಮೋರ್ಚದ ರಾಜ್ಯಾಧ್ಯಕ್ಷ ಮ್ಯಾಸ ನಾಯಕ ಬುಡಕಟ್ಟು ಜನಾಂಗಕ್ಕೆ ಸೇರಿರುವುದಿಲ್ಲ. ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ನಾಯಕರಾದ ರಾಜವೀರ ಮೆದಕೇರಿ ನಾಯಕರನ್ನು ಯಾವುದೇ ಒಂದು ಪಕ್ಷ, ಒಂದು ಧರ್ಮಕ್ಕೆ ಸೀಮಿತಿಗೊಳಿಸುವುದನ್ನು ವಿರೋಧಿಸಿಸುತ್ತೇವೆ ಎಂದರು.

ರಾಜವೀರ ಮದಕರಿ ನಾಯಕರು ಯಾವುದೇ ಒಂದು ಪಕ್ಷದ ಆಸ್ತಿಯಾಗಿರುವುದಿಲ್ಲ. ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಐತಿಹಾಸಿಕ ಸಾಂಸೃತಿಕ ಪುರುಷರನ್ನು ಒಂದು ಪಕ್ಷ, ಒಂದು ಧರ್ಮಕ್ಕೆ ಸೀಮಿತಗೊಳಿಸಿ ದುರುಪಯೋಗ ಪಡಿಸಿಕೊಳ್ಳುವ ಕ್ರಮವನ್ನು ವಿರೋಧಿಸಲಿದ್ದೇವೆ ಎಂದು ಕಿಡಿಕಾರಿದರು.

ಬಿಜೆಪಿ (ಎಸ್.ಟಿ) ಮೋರ್ಚದವರು ಚುನಾವಣೆ ಉದ್ದೇಶಕ್ಕಾಗಿ 15 ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಿಗೆ ಮಾತ್ರ ಸೀಮಿತಗೋಳಿಸಿ ಮ್ಯಾಸ ನಾಯಕರ ಐತಿಹಾಸಿಕ ಸಾಂಸೃತಿಕ ಪುರಷರಾದ ಚಿತ್ರದುರ್ಗ ಪಾಳೆಯಗಾರ ಶ್ರೀ ರಾಜವೀರ ಮದಕರಿ ನಾಯಕರ ರಥಯಾತ್ರೆಯನ್ನು ಹಮ್ಮಿಕೊಂಡಿರುತ್ತಾರೆ. ಬಿಜೆಪಿಯವರಿಗೆ ಚಿತ್ರದುರ್ಗ ಪಾಳೆಯಗಾರರಾದ ರಾಜವೀರ ಮದಕರಿ ನಾಯಕರ ಬಗ್ಗೆ ಅಷ್ಟೋಂದು ಅಭಿಮಾನವಿದ್ದರೆ ಮೊದಲು ಮ್ಯಾಸ ನಾಯಕ ಜನಾಂಗಕ್ಕೆ ಮಾಡಿರುವ ಮೋಸ ಮತ್ತು ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇರುವುದರಿಂದ “ರಾಜವೀರ ಮದಕರಿ ನಾಯಕ ರಾಥಯಾತ್ರೆ”ಯನ್ನು 15 ಎಸ್.ಟಿ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಇಡೀ ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಿ. ಆದರೆ ದುರುದ್ದೇಶ ಇಟ್ಟುಕೊಂಡು 15 ಎಸ್.ಟಿ. ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಿ ಮಾಡುವ ಈ ರಥಯಾತ್ರೆಯಿಂದ Tribal ಮತ್ತು Non Tribal(ಪಂಗಡ ಮತ್ತು ಜಾತಿ)ಗಳ ನಡುವೆ ಮತ್ತು ಧರ್ಮ ಧರ್ಮಗಳ ಮಧ್ಯ ಕೋಮುಗಲಭೆ ಸೃಷ್ಟಿಸುವ ಹುನ್ನಾರ ಅಡಗಿದೆ‌ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಕೆ.ಬಿ.ಓಬಣ್ಣ, ದೊಡ್ಡಮನಿ ಪ್ರಸಾದ್‌, ಡಾ.ಕೆ.ಎ.ಓಬಳೇಶ, ಡಾ.ಗೆರೆಗಲ್‌ ಪಾಪಯ್ಯ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending