Connect with us

ದಿನದ ಸುದ್ದಿ

ಅಭಿಯಾನದಲ್ಲಿ ಪೋಸ್ಟರ್ ಅಸ್ತ್ರ: ಸಲ್ಲದ ಎಡವಟ್ಟು..!

Published

on

ಸಾಂದರ್ಭಿಕ ಚಿತ್ರ
  • ಪ್ರಜ್ವಲ್ ತೇಜ ಡಿ.ಎಸ್, ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ತ್ತೀಚಿನ ದಿನಗಳಲ್ಲಿ ಪ್ರತಿ ಮಾಧ್ಯಮದಲ್ಲಿನ ಸಹ ಹೆಚ್ಚು ಸುದ್ದಿಯಲ್ಲಿರುವ ಪೋಸ್ಟರ್ ಅಭಿಯಾನ ಸಾಕಷ್ಟು ಗಮನ ಸೆಳೆಯುವುದರಲ್ಲಿ ಗೆದ್ದಿದ್ದರು. ಇದು ಸಹ ಸಾರ್ವಜನಿಕರಲ್ಲಿ ಪ್ರಜ್ಞೆಯನ್ನು ಮೂಡಿಸುವಲ್ಲಿ ಎಷ್ಟು ಮಾತ್ರ ಯಶಸ್ಸು ಕಂಡಿದೆ ಎಂಬುದು ಗಮನಿಸಬೇಕಾದ ವಿಷಯ.

ಸಾಮಾನ್ಯವಾಗಿ ಯಾವುದೇ ಚುನಾವಣಾ ಅಭಿಯಾನಗಳಲ್ಲಿ ತಮ್ಮ ಪಕ್ಷಗಳ ಈ ಹಿಂದಿನ ಯಶಸ್ಸು, ಕಾರ್ಯ ಮತ್ತು ಸಾಧನೆಗಳನ್ನು ತೋರ್ಪಡಿಸುವುದು ಅಥವಾ ಮುಂದೆ ತಮ್ಮ ಗುರಿಯೇನು ಎನ್ನುವುದು ಜನರಲ್ಲಿ ಪ್ರಜ್ಞಾವಂತಿಗೆ ಮೂಡಿಸುವ ಕೆಲಸ ಮಾಡುತ್ತಿತ್ತು. ಅದುವೇ ಪ್ರಚಾರದ ಭಾಗವಾಗಿತು. ಆದರೆ ಈಗ ಸುದ್ದಿಯಲ್ಲಿರುವ ಪೋಸ್ಟರ್ ಅಭಿಯಾನಗಳು ಜನರಲ್ಲಿ ಆಸಕ್ತಿ ಮೂಡಿಸುವ ಬದಲು ಪಕ್ಷಗಳ ಪರಸ್ಪರ ಸಂಘರ್ಷ, ಒಬ್ಬರ ಮೇಲೊಬ್ಬರು ಮಾಡುತ್ತಿರುವ ಆರೋಪಗಳು ಮಾತ್ರ ಕಾಣಸಿಗುತ್ತದೆ. ಇದು ಯಾವ ರೀತಿ ಉಪಯುಕ್ತವೆನ್ನುವುದು ರಾಜಕೀಯ ಪಕ್ಷಗಳು ಒಮ್ಮೆ ಯೋಚಿಸಬೇಕಾಗಿದೆ.

ಮುಖ್ಯವಾಗಿ ಜನರಿಗೆ ಪಕ್ಷವು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದೇವೆ ಎಂದು ಯೋಚಿಸಬೇಕು. ಈ ಹಿಂದೆ ಪೋಸ್ಟರ್ ಗಳು ತಮ್ಮ ತಮ್ಮ ರಾಜಕೀಯ ಪಕ್ಷಗಳ ಯೋಜನೆ ಮತ್ತು ಜನರನ್ನು ತಲುಪುವ ಪ್ರಚಾರದ ಸಾಧನವಾಗಿ ಇರುತ್ತಿತು. ಆದರೆ, ಈಗ ಎದುರಾಳಿ ಪಕ್ಷದ ತೇಜೋವಧೆ ಮಾಡುವ ಸಾಧನವಾಗಿದೆ. ಈ ಪೋಸ್ಟರ್ ಅಭಿಯಾನವು ವಿರೋಧ ಪಕ್ಷ ಕಾಂಗ್ರೆಸ್ ನ ನಾಯಕರು ‘ಪೇ ಸಿಎಂ’ ಎಂದು ಶುರು ಮಾಡಿದ ಕಾರಣ ಅದು ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ಸಾಕಷ್ಟು ಕೋಲಹಲ ಮತ್ತು ಚರ್ಚೆಗೆ ಕಾರಣವಾಗಿತ್ತು. ಆ ಪೋಸ್ಟರ್ ಗಳಲ್ಲಿ ಕ್ಯೂಆರ್ ಕೋಡ್ ಇರಿಸಿ 40% ಕಮಿಷನ್ ಆರೋಪಿಗಳಿಗೆ ತುಪ್ಪ ಸುರಿಯಿತು. ಅದನ್ನು ಆಡಳಿತ ಪಕ್ಷವು ಅದನ್ನು ಸರಿಪಡಿಸಲು ಅಥವಾ ಸಮರ್ಥನೆ ನೀಡಲು ಹೋಗದೆ ಪ್ರತ್ಯುತ್ತರವಾಗಿ ಮತ್ತೊಂದು ಪೋಸ್ಟರ್ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ತಾವು ಹಿಂದೆ ಬಿದ್ದಿಲ್ಲ ಎಂದು ತೋರಿಸುವ ಪ್ರಯತ್ನವಾಯಿತು

ಅದರಿಂದಾಗಿ ಹೊರಗೆ ಬಂದ ಸವಾಲು ಕೆಪಿಸಿಸಿ (ಕರ್ನಾಟಕ ಪ್ರೋವಿಜಿನಲ್ ಕರಪ್ಶನ್ ಕಂಪನಿ) ಪೋಸ್ಟರ್ ಗಳು. ಇದರಿಂದ ಒಬ್ಬರ ಮೇಲೆ ಒಬ್ಬರು ಕೆಸರು ಎರಚುವ ಕೆಲಸ ಮಾಡಿದ್ದಾರೆ. ಹೊರತು ಅದರಿಂದ ಯಾವುದೇ ಸಕಾರಾತ್ಮಕ ಬೆಳವಣಿಗೆಗೆ ದಾರಿ ಮಾಡಲಿಲ್ಲ. ಈ ಗಲಭೆ ಅಲ್ಲಿಗೆ ನಿಲ್ಲದೆ ಹೊಸ ರೂಪ ಪಡೆಯುತ್ತಾ ಸೇ ಸಿಎಂ ಮತ್ತು ಸೇ ಮೇಯರ್ ಎಂದು ವಿವಿಧ ನಗರಗಳ ಆಡಳಿತ ಪಕ್ಷದ ಮೇಯರ್ ಗಳ ಮೇಲೆ ದಾಳಿ ನಡೆಸುವ ಕೆಲಸ ಪ್ರತಿಪಕ್ಷವು ಮುಂದುವರೆಸಿದೆ.

ಇದು ಪರಸ್ಪರ ವಾಗ್ದಾಳಿಗೆ ಮತ್ತು ಕೋಲಾಹಲ ಸೃಷ್ಟಿಸುತ್ತಿದೆ. ಈ ರೀತಿಯ ಬೆಳವಣಿಗೆ ಎಷ್ಟು ಮಾತ್ರ ಉಪಯುಕ್ತ ಎನ್ನುವುದು ಪರಸ್ಪರ ಎಲ್ಲಾ ರಾಜಕೀಯ ಪಕ್ಷಗಳು ಒಮ್ಮೆ ಯೋಚಿಸುವುದು ಸರಿ ಇಲ್ಲವಾದಲ್ಲಿ ಅದು ನಗೆ ಪಾಟಲು ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಒಂದೆಡೆ ಸಾಕಷ್ಟು ಸಾವು ನೋವುಗಳು ಮತ್ತು ವರುಣನ ಆರ್ಭಟ ಹೆಚ್ಚಾಗಿ ರಾಜ್ಯವೇ ಅಲ್ಲೋಲ ಕಲ್ಲೋಲ ಆಗಿರುವ ಸಮಯದಲ್ಲಿ ಈ ರೀತಿಯ ಪರಸ್ಪರ ವಾಗ್ದಾಳಿಗಳು ಯಾವ ರೀತಿ ಪ್ರಜ್ಞಾವಂತಿಕೆ ಯನ್ನು ಜನರಲ್ಲಿ ಮೂಡಿಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕಾಗಿದೆ.

ಚರ್ಚಿಸಲು ಮತ್ತು ಗಮನಿಸಬೇಕಾದ ಸಾಕಷ್ಟು ಸಮಸ್ಯೆಗಳಿರುವಾಗ ಜನರಲ್ಲಿ ಮತ್ತು ರಾಜಕೀಯ ಪಕ್ಷಗಳ ವಲಯದಲ್ಲಿ ಈ ಪೋಸ್ಟರ್ ವಿವಾದವು ಯಾವುದೇ ಏಳಿಗೆ ಮಾಡುವಲ್ಲಿ ಉಪಯೋಗವಿಲ್ಲ. ಇದರ ಜತೆ ಜತೆಗೆ ನಡೆಯುತ್ತಿರುವ ಜನ ಸಂಕಲ್ಪ ಮತ್ತು ಭಾರತ್ ಜೋಡೋ ಯಾತ್ರೆಗಳು ಇದಕ್ಕೆ ಒಂದಷ್ಟು ಪುಷ್ಟಿ ನೀಡುವ ಕೆಲಸ ಮಾಡುತ್ತಿದೆ. ಚುನಾವಣೆಯ ಪ್ರಚಾರವೆಂದರೆ ಜನರು ತಮ್ಮನ್ನು ತಮ್ಮ ಪಕ್ಷವನ್ನು ಏಕೆ ಜನ ಆರಿಸಬೇಕು ಎಂಬುದು ತಿಳಿ ಹೇಳಬೇಕೆ ಹೊರತು ಅದು ತಮ್ಮ ಎದುರಾಳಿ ಪಕ್ಷಕ್ಕೆ ಧಕ್ಕೆ ಮತ್ತು ತೇಜೋವಧೆ ಮಾಡುವಂತಿರಬಾರದು, ಇದು ಕೇವಲ ನೈತಿಕತೆಯ ವಿಚಾರವಲ್ಲ ಅದು ಕಾನೂನಿನಲ್ಲಿರುವ ಒಂದು ಚೌಕಟ್ಟು.

ಪ್ರಜ್ವಲ್ ತೇಜ ಡಿ.ಎಸ್

ಪ್ರತಿಪಕ್ಷಗಳನ್ನು ಚುನಾವಣೆಯ ಸಮಯದಲ್ಲಿ ತೇಜೋವಧೆ ಮಾಡುವುದು ಅಥವಾ ಅವರ ಮನೋಭಾವನೆಗಳನ್ನು ನೋಯಿಸುವುದು ಕಾನೂನು ರೀತಿಯಲ್ಲಿ ಅಪರಾಧವಾಗುತ್ತದೆ. ಜನರಿಗೆ ಬಿಡಿಸಿ ಹೇಳಬೇಕಾಗಿರುವ ಸ್ಥಾನದಲ್ಲಿರುವ ನಾಯಕರೇ ಅಪರಾಧಿಗಳಾಗಿ ನಿಲ್ಲುವುದು ಎಷ್ಟು ಸರಿ. ಪೋಸ್ಟರ್ ಎನ್ನುವುದು ಸ್ವಯಂ ಪ್ರಚಾರಕ್ಕಾಗಿ ಮೂಡಿ ಬಂದಿರುವ ಒಂದು ಸಾಧನ ಅಷ್ಟೇ ಅದಕ್ಕೆ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಈ ಪೋಸ್ಟರ್ ಅಭಿಯಾನ ಚುನಾವಣೆ ಮುಗಿಯುವವರೆಗೂ ಚಲಾವಣಾಯಾಗುವ ಎಲ್ಲ ಸಾಧ್ಯತೆಗಳು ಇವೆ.

ಮೊದಲು ಕೇವಲ ಬೆಂಗಳೂರು ನಗರದಲ್ಲಿ ಶುರುವಾಗಿ ನಂತರ ಈಗ ರಾಜ್ಯದ ನಾನಾ ಭಾಗಗಳಿಗೂ ವಿಸ್ತರಿಸಿದೆ. ಹೊಸ ಹೊಸ ರೂಪದಲ್ಲಿ ಜನರಿಗೆ ದರ್ಶನ ನೀಡುತ್ತಿದೆ. ಶುರುವಾಗಿ ಸಾಕಷ್ಟು ದಿನಗಳು ಕಳೆದರು ಸಹ ಇದರ ಕಾವು ಇನ್ನು ಕಡಿಮೆಯಾಗಿಲ್ಲ, ಜತೆ ಜತೆಗೆ ಇದಕ್ಕೆ ಸಾಮಾನ್ಯರು ಕೂಡ ಸಮೂಹ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುವುದು ವಿಪರ್ಯಾಸ. ಇದು ಜನರಲ್ಲಿ ಒಂದು ರೀತಿಯ ಮನರಂಜನೆ ಮತ್ತು ವ್ಯಂಗ್ಯ ಚಿತ್ರಣ ಹಾಸ್ಯವಾಗಿ ಮೂಡಿ ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಸುದ್ದಿಯಾಗಿದೆ ಅಂದರೆ ಅದು ಇಷ್ಟವಾಗಿದೆ ಎಂದು ತಿಳಿಯುವುದು ಮೂರ್ಖತನವಾಗುತ್ತದೆ. ಈ ಪೋಸ್ಟರ್ ಅಭಿಯಾನ ಮಾಡುವ ಬದಲು ಜನರಲ್ಲಿ ವಿಶ್ವಾಸ ಮೂಡಿಸುವ ಸಾಕಷ್ಟು ಅವಕಾಶಗಳು ಇರುವುದನ್ನು ಬಳಸಿಕೊಳ್ಳುವುದೇ ಉತ್ತಮ.

ಈಗ ಆಗಿರುವ ಬದಲಾವಣೆಗಳು ಸಾಮಾನ್ಯರಿಗೆ ಉಪಯುಕ್ತ ಆಗುವ ಲಕ್ಷಣಗಳಿಲ್ಲ, ಇವುಗಳನ್ನು ಮಾಡುವ ಬದಲು ಜನರಿಗೆ ಬೇಕಾದ ಅಥವಾ ಉಪಯುಕ್ತವಾದ ವಿಚಾರಗಳನ್ನು ಚರ್ಚಿಸುವ ಅವಶ್ಯಕತೆ ಪ್ರಸ್ತುತ ಹೆಚ್ಚಿದೆ. ಈ ಹಿಂದೆ ಮತ್ತು ಪ್ರಸ್ತುತ ನಡೆಯುತ್ತಿರುವಂತಹ ಯಾತ್ರೆಗಳಿಗಿಂತ ಈ ಪೋಸ್ಟರ್ ಅಭಿಯಾನ ಹೆಚ್ಚು ಸುದ್ದಿಯಾಗಿರುವುದು ವಿಪರ್ಯಾಸವೇ ಸರಿ. ಈ ರೀತಿಯ ಅಭಿಯಾನಗಳು ಜನರಲ್ಲಿ ವಿಶ್ವಾಸ ಮತ್ತು ಸಕಾರಾತ್ಮಕತೆ ಮೂಡಿಸುವ ಬದಲು ನಕಾರಾತ್ಮಕವಾದ ವಾತಾವರಣ ಸೃಷ್ಟಿಯಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending