ಬಹಿರಂಗ
ರಾವಣ ದುಷ್ಟನೇ..? ಯಾಕೆ ವೈದಿಕರು ಅವನನ್ನು ದ್ವೇಷಿಸುತ್ತಾರೆ..?
- ವಿ.ಎಸ್.ಬಾಬು
ಒಂದು ಜನಾಂಗವನ್ನು ನಾಶ ಮಾಡಬೇಕಾದರೆ ಮೊದಲು ಆ ಜನಾಂಗದ ಆಹಾರ ಪದ್ಧತಿಗಳನ್ನು ಆಚಾರಗಳನ್ನು, ಅವರಾಡುವ ಭಾಷೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು. ಇವೆಲ್ಲಕ್ಕೂ ಮೊದಲು ಆ ಜನಾಂಗ ರಾಜಕೀಯ ಅಧಿಕಾರವನ್ನು ಕಳೆದುಕೊಳ್ಳಬೇಕು! ಹೀಗೆ ತಮ್ಮೆಲ್ಲ ವೈಭವ ಅಂತಸ್ತು, ಅಧಿಕಾರವನ್ನು ಕಾಲಕ್ರಮೇಣ ಕಳೆದುಕೊಂಡು ಹೀನಾಯ, ಅಸ್ಪೃಶ್ಯ ಸಮಾಜವಾಗಿ ಮಾರ್ಪಾಡಾಗಿದ್ದು ನಾಗ ಜನಾಂಗ! ಈ ಜನಾಂಗದವರೇ ಅಸುರರು, ರಾಕ್ಷಸರು, ದೈತ್ಯರು ಎಂಬ ಪ್ರಬಲ ಗಣಗಳು! ಇವರ ಪಳೆಯುಳಿಕೆಗಳೇ ಇಂದು ನಾವು ನೋಡುತ್ತಿರುವ ಇಲ್ಲಿನ ಮೂಲನಿವಾಸಿಗಳು; ಅಂದರೆ ಅಸ್ಪೃಶ್ಯರು. ಶೂದ್ರರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು!
ಇದೇ ನಾಗ ಜನಾಂಗದ ಪ್ರಬಲ ದೊರೆ, ಮಹಾನ್ ಬೌದ್ಧ ಭಿಕ್ಕು, ಅಹಿಂಸಾವಾದಿ, ಮಹಾಜ್ಞಾನಿ, ರಾಕ್ಷಸ ಗಣದ ನಾಯಕ, ಅಮೋಘ ಸಂಗೀತಕಾರ, ಚಕ್ರವರ್ತಿ ರಾವಣನನ್ನು ಪರಿಚಯ ಸದ್ಯದ ಅಗತ್ಯವಾಗಿದೆ. ದುರಂತವೆಂದರೆ ದಸರಾ ಉತ್ಸವದ ಸಮಯದಲ್ಲಿ ಉತ್ತರ ಭಾರತದ ದೆಹಲಿಯಲ್ಲಿ ರಾಮಲೀಲಾ ಹಾಡುವಾಗ ರಾವಣ, ಕುಂಭಕರ್ಣ, ಮೇಘನಾದ ಇವರುಗಳ ಪ್ರತಿಕೃತಿಗಳನ್ನು ಸುಟ್ಟರು. ಇದು ಇನ್ನೂ ಬೇರೆ ಬೇರೆ ರಾಜ್ಯಗಳಲ್ಲೂ ಸಹ ನಡೆಯುತ್ತದೆ! ಇದರಲ್ಲಿ ಖುದ್ದು ಭಾಗವಹಿಸಿ ನೂರಾರು ಮನುವಾದಿಗಳು ಆನಂದ ವ್ಯಕ್ತಪಡಿಸಿದರು. ಏಕೆಂದರೆ ಅವರಿಗೆ ತಮ್ಮ ಇತಿಹಾಸದ ಪ್ರಜ್ಞೆಯಿದೆ! ಆದರೆ ನಮ್ಮ ಪೂರ್ವಿಕನಾದ ರಾವಣನನ್ನು ನಾವೇ ಸುಟ್ಟು ಆನಂದಿಸುತ್ತೇವಲ್ಲ ಇದೇನಿದು ನಮ್ಮ ದುರಂತ? ಯಾರು ಆ ರಾವಣ?
[Dr.K. Jamnandas ರವರ #Ravana_A_Nonvoilent_Gana_Nayaka_Chief_of_Republics_contemporary_with_the_Buddha ಎನ್ನುವ ಲೇಖನದಲ್ಲಿ ಅಧ್ಯಾಯ 6] ರಾವಣನನ್ನು ಗೌತಮ ಬುದ್ಧರ ಸಮಕಾಲೀನ ಎಂದಿದ್ದಾರೆ!
ಆರ್ಯ ಕುಲಪ್ರವರ್ತಕರಿಗೆ ಇತಿಹಾಸ ಪ್ರಜ್ಞೆಯಿದೆ. ಅವರಿಗೆ ರಾವಣನನ್ನು ತಾವು ಏಕೆ ಸುಟ್ಟಿದ್ದು ಎಂಬ ಅರಿವಿದೆ. ಆದರೆ ಅವರ ಜೊತೆ ಸೇರಿ ಇಲ್ಲಿನ ಮೂಲನಿವಾಸಿಗಳು ರಾವಣನನ್ನು ತಮ್ಮ ಕೈಯಾರೆ ತಮ್ಮ ಹಿರಿಯರನ್ನೆ ತಮ್ಮ ಪೂರ್ವಿಕರನ್ನೆ ಸುಡುತ್ತಿದ್ದಾರಲ್ಲ, ಇದನ್ನು ನೋಡಿ ಅಥವಾ ದುಃಖವಾಗುತ್ತಿದೆ. “ರಾವಣ, ಕುಂಭಕರ್ಣರನ್ನು ನಾವು ಯಾಕೆ ಸುಡುತ್ತೇವೆ” ಎಂಬ ಪ್ರಜ್ಞೆಯಿಲ್ಲ ! ಮೇಲುನೋಟಕ್ಕೆ “ರಾವಣ ಕೆಟ್ಟವನು ರಾಮ ಒಳ್ಳೆಯವನು” ಎಂದಷ್ಟೇ ತಿಳಿದಿರುವ ನಮಗೆ “ರಾವಣ ಯಾರು? ಯಾಕೆ ವೈದಿಕರು ಅವನನ್ನು ದ್ವೇಷಿಸುತ್ತಾರೆ?” ಎಂಬುದರ ಅರಿವಿಲ್ಲ ! ಬಂಧುಗಳೇ ಬನ್ನಿ ಮಹಾನ್ ನಾಯಕ ರಾವಣನನ್ನು ಪರಿಚಯ ಮಾಡಿಕೊಳ್ಳೋಣ.
ರಾವಣನು ಪುಲಸ್ತ್ಯ ವಂಶದ ವಿಶ್ರವಸುವಿನ ಮೊಮ್ಮಗ. ಪುಲಸ್ತ್ಯ ವಂಶದ ಅಸುರರು ಜಗತ್ತಿನ ನಾನಾ ಭಾಗಗಳಲ್ಲಿ ಆಳ್ವಿಕೆ ಮಾಡಿದವರು! ಸೋಮಾಲಿಯಾ, ಮಾಲ್ಡೀವ್ಸ್, ಸುಮಾತ್ರ, ಜಾವಾ, ಸಿಂಹಳ, ಕೊಂಕಣ ಮುಂತಾದ ಕಡೆಗಳಲ್ಲಿ ರಾಜ್ಯಭಾರ ಮಾಡಿದ ಇವರನ್ನು “ಅಸುರ ಸಾಮ್ರಾಟರು” ಎಂದು ಕರೆಯುತ್ತಿದ್ದರು. ಆದಿವಾಸಿಗಳ ಕುಲಗಳು ಪ್ರಾಣಿ, ಪಕ್ಷಿ, ಮರ ಇವುಗಳ ಹೆಸರುಗಳನ್ನು ಹೊಂದಿದ್ದವು. ಆದಿವಾಸಿ ಭಾಷೆಯಲ್ಲಿ ‘ಪುಲೈ’ ಎಂದರೆ ‘ಸಿಂಹ’ ಎಂದು ಹೆಸರು. ಪುಲಸ್ತ್ಯ ವಂಶವು ಪುಲೈ ಎಂದು ಹೆಸರು ಪಡೆದಿತ್ತು. ಪ್ರಕೃತಿಯ ಆರಾಧಕನಾದ ರಾವಣನನ್ನು ವಾಲ್ಮೀಕಿಯೇ ಸ್ವತಃ ‘ಮಹಾತ್ಮ’ ಎಂದು ಕರೆದಿದ್ದಾನೆ.
ತೃಣಬಿಂದು ಪುಲಸ್ತ್ಯ ನ ಹೆಂಡತಿ. ವಿಶ್ರವಸುವಿನ ಹೆಂಡತಿ ಕೇಕಯ, ಆಕೆ ರಾವಣನ ತಾಯಿ. ವಿಶ್ರವಸುವಿನ ಇನ್ನೊಂದು ಹೆಸರು ಕುಬೇರ ವಿರೇಂದು. ಇವನ ಮಗನೇ ರಾವಣ! ರಾವಣನ ಪೂರ್ತಿ ಹೆಸರು ಏನು ಎಂಬುದನ್ನು [ರಾಮದೇವ್ ಪಾಸ್ವಾನರ ಪುಸ್ತಕ “ಭಾರತ್ ಸೆ ಆರ್ಯರಲ್ಲಿ ರಾ ಜುನೇರ್ ವ ರೇಂದು ನ ರೇಂದರ್ ಎಂದು ಹೇಳಿದೆ.] ಇದರ ಸಂಕ್ಷಿಪ್ತ ರೂಪ (Ra Va Na) ರಾವಣ!
ಚಂದ್ರಿಕ ಪ್ರಸಾದ್ ಜಿದ್ನಾಸು ಎಂಬ ಪ್ರಸಿದ್ಧ ಇತಿಹಾಸಕಾರರು ‘ರಾವಣನ ಗೋಂಡ ಆದಿವಾಸಿ ಕುಲಕ್ಕೆ ಸೇರಿದವನು ಮತ್ತು ಅವನ ಆಡಳಿತ ಭಾರತ ದೇಶದ ಮಧ್ಯಭಾಗದಿಂದ ಸಿಂಹಳದವರೆಗೂ ಹಬ್ಬಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.
[ಪೂರ್ಣಲಿಂಗಮ್_ಪಿಳ್ಳೆ ಎಂಬ ಇತಿಹಾಸಕಾರರು ತಮ್ಮ ‘ರಾವಣ ದ ಕಿಂಗ್ ಆಫ್ ಲಂಕಾ’ ಎಂಬ ಕೃತಿಯಲ್ಲಿ Ravana is represented as the Titanic. Inotherwords the auntibrahmnical aboriginal fetish worshipping monarch of Lanka of Ceylon’ ಎಂದಿದ್ದಾರೆ.]
ಮೂಲತಃ ರಾವಣ ಪ್ರಕೃತಿ ಆರಾಧಕನಾಗಿದ್ದು ಆರ್ಯರು ನಡೆಸುತ್ತಿದ್ದ ಯಜ್ಞಯಾಗಗಳನ್ನು ಸರ್ವನಾಶ ಮಾಡಿ ಸಾವಿರಾರು ಗಿಡಮರಗಳನ್ನು, ಪ್ರಾಣಿಗಳನ್ನು ರಕ್ಷಿಸುವುದಕ್ಕೆಂದೇ ಪ್ರಬಲ ದೈತ್ಯ ಸೇನೆಯನ್ನು ಹೊಂದಿದ್ದ. ಆರ್ಯರು ತಯಾರಿಸುತ್ತಿದ್ದ ಹೇರಳ, ‘ಮಧುಪರ್ಕ’ವನ್ನು ಭೂಮಿಗೆ ಚೆಲ್ಲಿ ಅವರಿಗೆ ದಕ್ಕದಂತೆ ಮಾಡಿ ಗೋಬ್ರಾಹ್ಮಣರನ್ನು ಕಾಡಿನಿಂದ ಅಟ್ಟಿಸಿಕೊಂಡು ಹೋಗಲೆಂದೇ ಸಾವಿರಾರು ಅಸುರರನ್ನು ನೇಮಿಸಿದ್ದ ! ಸದಾ ಕಾಲವೂ ಎಚ್ಚರವಾಗಿದ್ದು ರಾತ್ರಿ ವೇಳೆ ಬೆಳಗು ಹಸುಗಳನ್ನು, ಕುದುರೆಗಳನ್ನು, ಆಡುಗಳನ್ನು, ಕುರಿಗಳನ್ನು ಈ ಋಷಿ-ಮುನಿಗಳು ಕದ್ದು ತಮ್ಮ ಆಶ್ರಮಗಳಲ್ಲಿ ಕಟ್ಟಿಕೊಳ್ಳುತ್ತಿದ್ದವದನ್ನು ತಪ್ಪಿಸಲು ಅಸುರರು ನಾನಾ ಸಾಹಸಗಳನ್ನು ಮಾಡಬೇಕಾಗಿತ್ತು. ಕಾಡಿನಲ್ಲಿ ಆರ್ಯರು ಅಳೆಯುತ್ತಿದ್ದುದು, ಋಷಿಗಳು ಕಾಡಿನಲ್ಲಿ ವಾಸವಾಗಿದ್ದುದು ಎಲ್ಲವೂ ಆಹಾರಕ್ಕೆ ಹೊರತು ಯಾವ ಧರ್ಮ ರಕ್ಷಣೆಗೂ ಅಲ್ಲ. ಆರ್ಯರಿಗೆ ಉನ್ನತಮಟ್ಟದ ಜೀವನದ ಕಲ್ಪನೆಯೇ ಇರಲಿಲ್ಲ ! ಆ ರೀತಿ ಭವ್ಯ ಬದುಕನ್ನು ಬದುಕಿದವರು ಅಸುರರು; ಇಲ್ಲಿನ ಮೂಲನಿವಾಸಿಗಳು!
ಮರಾಠಿ ವಿಶ್ವಕೋಶ ಪುಟ 781 ರಲ್ಲಿ ವಿಶ್ವಾಮಿತ್ರನ ಯಜ್ಞ ಮಾಡುತ್ತಿದ್ದಾಗ ಇದನ್ನು ನಾಶಪಡಿಸಲು ಮಾರೀಚ ಮತ್ತು ಸುಬಾಹು ಎಂಬ ಅಸುರರು ಬಂದಾಗ ಅವರನ್ನು ಅಟ್ಟಿಸಿಕೊಂಡು ಹೋದವರು ರಾಮ ಲಕ್ಷ್ಮಣರು ಎಂಬ ಉಲ್ಲೇಖವಿದೆ! ರಾಮ ಲಕ್ಷ್ಮಣ ಕಾಡಿಗೆ ಬಂದದ್ದು ಅಸುರರನ್ನು ಹಾಳುಮಾಡಲು ಮತ್ತು ಋಷಿಗಳಿಗೆ ಯಜ್ಞದಲ್ಲಿ ನೆರವಾಗಲೇ ಹೊರತು ಇನ್ಯಾವ ಲೋಕ ಕಲ್ಯಾಣಕ್ಕಾಗಲಿ ಅಲ್ಲ ! ಯಾಗಗಳನ್ನು ನಾಶಮಾಡಿದ ಅಸುರರನ್ನು ಮನಬಂದಂತೆ ಹೀಯಾಳಿಸುವ ಆರ್ಯರು ಜಗತ್ತಿನ ಪ್ರಥಮ ಜೀವವಿರೋಧಿಗಳು! ಮೂಲನಿವಾಸಿಗಳ ಬದುಕು, ಸಂಸ್ಕೃತಿಯನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ರಾವಣ ಆರ್ಯರ ವೈರಿಯಾಗಿದ್ದುದು ಸರಿ! ಇದರಲ್ಲಿ ತಪ್ಪೇನು? [ಚಾತುರ್ಸೇ ನ್ ಎಂಬ ಲೇಖಕರ ಕೃತಿ “Wayam Raksham” ನಲ್ಲಿ ರಾಕ್ಷಸರು Wayam Rakshan ಎನ್ನುವ ರಕ್ಷಕರನ್ನು ಹೊಂದಿದ್ದು, ಅವರು ಯಜ್ಞಗಳನ್ನು ನಾಶಪಡಿಸುವ ಕೆಲಸವೊಂದನ್ನೇ ಮಾಡುತ್ತಿದ್ದರು ಎಂದು ಹೇಳಿದ್ದಾರೆ!]
‘Wayam Raksham’ ಎಂದರೆ ‘We Protect’ ಎಂದು ಅರ್ಥ.
ಮುಂದುವರೆಯುವುದು…..
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



