Connect with us

ದಿನದ ಸುದ್ದಿ

ಕಿಕಿ ಡ್ಯಾನ್ಸ್ ಆಯ್ತು ಈಗ ಸೂಜಿಗೆ ದಾರ ಪೋಣಿಸೋ ಚಾಲೆಂಜ್

Published

on

ಸುದ್ದಿದಿನ ಡೆಸ್ಕ್: ಯುವಕರನ್ನು ಹುಚ್ಚೆಬ್ಬಿಸಿದ ಕಿಕಿ ಡ್ಯಾನ್ಸ್ ನಂತರ ಈಗ ಸೂಜಿಗೆ ದಾರ ಪೋಣಿಸುವ ಚಾಲೆಂಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದೊಡ್ಡ ದೊಡ್ಡ ನಟರು ಈ ಚಾಲೆಂಜ್‍ನಲ್ಲಿ ಸೋತಿದ್ದಾರೆ.

ಹಿಂದಿಯಲ್ಲಿ ಸುಯೀ ಧಾಗಾ ಹೆಸರಿನ ಈ ಚಾಲೆಂಜ್ ಸವೀಕರಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಹತ್ತು ಸೆಕೆಂಡ್‍ಗಳಲ್ಲಿ ಸೂಜಿಗೆ ದಾರ ಪೋಣಿಸುವ ಸವಾಲಿನಲ್ಲಿ ಸೊತಿದ್ದಾರೆ. ಫಿಲ್ಮ್ ಫೇರ್ ಸಂಪಾದಕ ಜಿತೇಶ್ ಸಬ್ಬಾದಿಯಾ ಅವರೂ ಕೂಡ ಈ ಸವಾಲು ಸ್ವೀಕರಿಸಿದ್ದರು. ಲಖನೌನಲ್ಲಿ ಕೆಲವು ಆರ್‍ಜೆಗಳಿಗೆ ನಟ ವರುಣ್ ಧವನ್ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ಈ ಸವಾಲು ನೀಡಿದ್ದರು.

https://twitter.com/akshaykumar/status/1041910604070576128
ವರುಣ್ ಧವನ್ ಹಾಗೂ ಅನುಷ್ಕಾ ಶರ್ಮಾ ಜೋಡಿಯ ಸುಯಿ ಧಾಗಾ ಸಿನಿಮಾ ಇನ್ನೇನು ಬಿಡುಗಡೆಯಾಗಲಿದ್ದು. ಈ ಚಿತ್ರದಲ್ಲಿ ವರುಣ್ ಅವರು ಟೈಲರ್ ಪಾತ್ರ ನಿರ್ವಹಿಸಲಿದ್ದಾರೆ. ಲೇಡೀಸ್ ಟೈಲರ್‍ವೊಬ್ಬ ತನ್ನ ವೃತ್ತಿಯಲ್ಲಿ ಹೇಗೆ ಮುಂದೆಬರುತ್ತಾನೆ ಎಂಬ ಅಂಶವನ್ನು ಇಟ್ಟುಕೊಂಡು ಈ ಸಿನಿಮಾ ಚಿತ್ರಿಸಲಾಗಿದೆ.
ಸಿನಿಮಾದ ಪ್ರಮೋಶನ್‍ಗಾಗಿ ಚಿತ್ರತಂಡವು ಸುಯಿ ಧಾಗಾ ಚಾಲೆಂಜ್ ನೀಡುತ್ತಿದೆ. ಹತ್ತು ಸೆಕೆಂಡ್‍ಗಳಲ್ಲಿ ಸೂಜಿಯೊಳಗೆ ದಾರ ಪೋಣಿಸುವುದೇ ಈ ಸವಾಲು. ನಟ ಅಕ್ಷನ್ ಕುಮಾರ್ ಅವರು ಮೊದಲ ಹತ್ತು ಸೆಕೆಂಡ್‍ನಲ್ಲಿ ಸೂಜಿಯ ಕಣ್ಣಿನೊಳಗೆ ದಾರ ಪೋಣಿಸಲು ಹೋಗಿ ಅದ ಸಾಧ್ಯವಾಗದಿದ್ದಾಗ ಇನ್ನೂ ಹತ್ತು ಸೆಕೆಂಡ್ ಪಡೆದು ಅದರಲ್ಲೂ ಸೋತರು. ಈ ವಿಡಿಯೊವನ್ನು ಅಕ್ಷಯ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವರುಣ್ ಹಾಗೂ ಅನುಷ್ಕಾ ಸಿನಿಮಾ ಬಾಕ್ಸ್ ಆಫೀಸ್ ಚಿಂದಿ ಮಾಡಲಿ ಎಂದು ಹರಸಿದ್ದಾರೆ.

ದಿನದ ಸುದ್ದಿ

ದಾವಣಗೆರೆ | ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ

Published

on

ಸುದ್ದಿದಿನ,ದಾವಣಗೆರೆ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020 ರ ಚುನಾವಣೆಯ ನಂತರ ಮೊದಲನೇ 30 ತಿಂಗಳ ಅವಧಿಗೆ ಜಿಲ್ಲೆಯ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕುಗಳ ಗ್ರಾ.ಪಂಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳಿಗೆ ತಂತ್ರಾಂಶದ ಮೂಲಕ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯು ಬುಧವಾರ ಜಿಲ್ಲಾಡಳಿತ ಭವನದ ತುಂಗ ಭದ್ರ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ವೇಳೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚುನಾವಣಾ ತಹಶೀಲ್ದಾರ್ ಪ್ರಸಾದ್ ಇತರೆ ಅಧಿಕಾರಿಗಳು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೈತ ಪರೇಡ್ ವೇಳೆ ಅಹಿತಕರ ಘಟನೆ ; ಹೋರಾಟದಿಂದ ಹಿಂದೆ ಸರಿದ ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಸಂಘಟನೆ

Published

on

ಸುದ್ದಿದಿನ,ನವದೆಹಲಿ : ಗಣರಾಜ್ಯೊತ್ಸವ ದಿನದಂದು ದೆಹಲಿಯಲ್ಲಿ ರೈತ ಪರೇಡ್‌ ವೇಳೆ ನಡೆದ ಅಹಿತಕರ ಬೆಳವಣಿಗೆಯಿಂದ ಬೇಸರಗೊಂಡಿರುವ ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಸಂಘಟನೆ ಹೋರಾಟದಿಂದ ಹಿಂದೆ ಸರಿದಿದೆ.

ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಸಂಘಟನೆ ಹಾಗೂ
ಆಲ್‌ ಇಂಡಿಯಾ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿಯ ಮುಖಂಡರೂ ಆಗಿರುವ ವಿ ಎಂ ಸಿಂಗ್‌ ಇಂದು ಮಾಧ್ಯಮವನ್ನುದ್ದೇಶಿಸಿ ಮಾತನಾಡಿ ಈ ವಿಷಯ ಪ್ರಕಟಿಸಿದ್ದಾರೆ.

ಭಿನ್ನ ಉದ್ದೇಶವಿರುವವರೊಂದಿಗೆ ನಾವು ಹೋರಾಟ ಮುಂದುವರೆಸಲು ಸಾಧ್ಯವಿಲ್ಲವೆಂದು ವಿ ಎಂ ಸಿಂಗ್‌ ಹೇಳಿದ್ದಾರೆ.

ಮಂಗಳವಾರ ನಡೆದ ಬೆಳವಣಿಗೆಗಳು, ರೈತ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ 7 ಗಂಟೆಗೆ ಕಿಸಾನ್‌ ಏಕ್ತಾ ಮೋರ್ಚಾ ಪತ್ರಿಕಾಗೋಷ್ಠಿ ಕರೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಮ ಪಂಚಾಯತಿ ಸದಸ್ಯರಿಗೆ ಹೂವಿನಹೊಳೆ ಪ್ರತಿಷ್ಠಾನ ಗೌರವ ಸದಸ್ಯತ್ವ ಪ್ರದಾನ : ಹಂಚಗುಳಿ ಗ್ರಾಮ ರಾಜ್ಯಕ್ಕೆ ಮಾದರಿ

Published

on

ಸುದ್ದಿದಿನ, ರಾಮನಗರ : ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಅರಕೆರೆ ಗ್ರಾಮ ಪಂಚಾಯಿತಿಗೆ ಹಂಚಗುಳಿ ಗ್ರಾಮದಿಂದ ಆಯ್ಕೆಯಾದ ಸದಸ್ಯರಾದ ಮಲ್ಲೇಶ್ ಹಾಗೂ ಶಾಂತಮ್ಮ ಅವರಿಗೆ ”ಹೂವಿನಹೊಳೆ ಪ್ರತಿಷ್ಠಾನದ ಐದು ವರ್ಷಗಳ ಗೌರವ ಸದಸ್ಯತ್ವ” ಪ್ರದಾನ ಮಾಡಲಾಯಿತು ಇದೇ ಸಂದರ್ಭದಲ್ಲಿ ನಮ್ನೂರಿಗೆ ನಮ್ಮ ಉಸಿರು ಬಳಗದಿಂದ ಹಂಚಗುಳಿ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮುನುಚ್ಚೆಗೌಡರು ಉದ್ಘಾಟನೆ ಮಾಡಿ ಮಾತನಾಡುತ್ತಾ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಶಾಲೆಗಳನ್ನು ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹೂವಿನಹೊಳೆ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ನಂದಿ ಜೆ ಹೂವಿನಹೊಳೆ ಗ್ರಾ.ಪ. ಸದಸ್ಯರಿಗೆ ಗೌರವ ಸದಸ್ಯತ್ವ ಪ್ರದಾನ ಮಾಡಿ ಮುಂದಿನ ಐದು ವರ್ಷಗಳಲ್ಲಿ ಹಂಚಗುಳಿ ಗ್ರಾಮದಲ್ಲಿ ನಾವು ಕೆಲಸ ಮಾಡಲು ಹಾಗೂ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೆವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ ಡಿ ಟಿ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ದಿಲೀಪ್ ಕುಮಾರ್ ಮಾತನಾಡಿ ಶಿಕ್ಷಣ ಎಲ್ಲರ ಹಕ್ಕು ಪ್ರತಿ ಗ್ರಾಮದ ಯುವಕರಿಗೂ ಉನ್ನತ ಕೆಲಸ ಸಿಗುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಹೂವಿನಹೊಳೆ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ನಾಯ್ಕಲ್ ದೊಡ್ಡಿ ಚಂದ್ರಶೇಖರ್, ಪ್ರಧಾನ ಸಂಚಾಲಕರಾದ ಹಂಚಗುಳಿ ಗಿರೀಶ್ ,ಸುನೀಲ್ ಕುಮಾರ್,ರಾಜಣ್ಣ ಹಾಗೂ ಗ್ರಾಮದ ಮುಖಂಡರಾದ,ಚೆಲುವರಾಜು, ಚಿಕೈದೆಗೌಡ, ಸುಂದ್ರೆಶ್, ಮಣಿಕಂಠ, ಮುತ್ತುರಾಜು,ಭಾಸ್ಕರ್, ಶಿವಕುಮಾರ್ ಅರ್ಚಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending