Connect with us

ಕ್ರೀಡೆ

ಹತ್ತು ವರ್ಷಗಳ ನಂತರ ವಿರಾಟ್ ಕೊಹ್ಲಿ ಸಿನಿಮಾಗೆ ರಿಎಂಟ್ರಿ; 28ಕ್ಕೆ ಟ್ರೇಲರ್ ರಿಲೀಸ್

Published

on

ಸುದ್ದಿದಿನ ಡೆಸ್ಕ್: ಹತ್ತು ವರ್ಷದ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಿನಿಮಾಗೆ ರಿಎಂಟ್ರಿ ಕೊಡುತ್ತಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಖುಷಿ ಹಂಚಿಕೊಂಡಿರುವ ಕೊಹ್ಲಿ ಹತ್ತು ವರ್ಷಗಳ ಬಳಿಕ ನಟಿಸುತ್ತಿರುವ ಸಿನಿಮಾದ ಶೇರ್ ಮಾಡಿಕೊಂಡಿದ್ದಾರೆ.

ಟ್ವಿಟರ್ ನಲ್ಲಿ ರಿಲೀಸ್ ಮಾಡಿರುವ ಸಿನಿಮಾ ಪೋಸ್ಟರ್ ನಲ್ಲಿ ಆಕ್ಷನ್ ಪೋಸ್ ನೀಡಿದ್ದಾರೆ. ಸಿನಿಮಾದಲ್ಲಿ ನಾಯಕ ನಟನಾಗಿರುವ ಕೊಹ್ಲಿಗೆ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಹತ್ತು ವರ್ಷಗಳ ಬಳಿಕ ವಿರಾಟ ಕೊಹ್ಲಿ ಕೊಹ್ಲಿ ರಿಎಂಟ್ರಿ ಕೊಡುತ್ತಿರುವ ಸಿನಿಮಾದ ಟ್ರೇಲರ್ ಸೆಪ್ಟೆಂಬರ್‌ 28ಕ್ಕೆ ರಿಲೀಸ್ ಆಗಲಿದೆ.

ಕ್ರೀಡೆ

ಭಾರತ ಮಹಿಳಾ ಕ್ರಿಕೆಟ್ ಟೀಂನ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರ ತಾಯಿ-ಸಹೋದರಿ ಕೊರೋನಾಗೆ ಬಲಿ

Published

on

ಸುದ್ದಿದಿನ,ಚಿಕ್ಕಮಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರ ಸಹೋದರಿ ವಾತ್ಸಲ್ಯ ಕೃಷ್ಣಮೂರ್ತಿ ಅವರು ಕೊರೋನಾದಿಂದ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಈ ಮೊದಲು ವೇದ ಕೃಷ್ಣಮೂರ್ತಿಯವರ ತಾಯಿ ಭಾನುವಾರ ಸೋಂಕಿನಿಂದ ಮೃತಪಟ್ಟಿದ್ದರು. ವೇದ ಅವರು ಒಂದು ವಾರದ ಅಂತರದಲ್ಲಿ ತಾಯಿ-ಸಹೋದರಿಯನ್ನು ಕಳೆದುಕೊಂಡಿದ್ದಾರೆ. ಮೃತ ಸಹೋದರಿಯನ್ನು ಗುರುವಾರ ಕಡೂರಿನಲ್ಲಿರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದೆಂದು ತಿಳಿದುಬಂದಿದೆ.

ಇದನ್ನೂ ಓದಿ | ದಾವಣಗೆರೆ | ಹೆಗಡೆ ಡಯಾಗ್ನಸ್ಟಿಕ್ ಸೆಂಟರ್ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ವೇದ ಕೃಷ್ಣಮೂರ್ತಿ ಭಾರತೀಯ ಕ್ರಿಕೆಟ್ ನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಗುರುತಿಸಿಕೊಂಡಿದ್ದರು. ಇದಲ್ಲದೇ ರಾಜ್ಯ ಆರೋಗ್ಯಯ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿಯಲ್ಲಿಯೂ ಪಾಲ್ಗೊಂಡಿದ್ದರು. ಇಷ್ಟೆ ಅಲ್ಲದೆ ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 6 ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್..!

Published

on

ಸುದ್ದಿದಿನ ಡೆಸ್ಕ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 6,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಭಾರತದ ನಾಯಕ ಕೊಹ್ಲಿ 196 ಪಂದ್ಯಗಳಲ್ಲಿ ಮೈಲಿಗಲ್ಲು ತಲುಪಿದ್ದು, ಚೆನ್ನೈನ ಸುರೇಶ್ ರೈನಾ (5,448 ರನ್), ದೆಹಲಿಯ ಶಿಖರ್ ಧವನ್ (5,428), ಹೈದರಾಬಾದ್ನ ಡೇವಿಡ್ ವಾರ್ನರ್ (5,384) ಮತ್ತು ಮುಂಬೈನ ರೋಹಿತ್ ಶರ್ಮಾ (5,368) ಗಿಂತ ಮುಂದಿದ್ದಾರೆ.

ಐಪಿಎಲ್ ಬೆನ್ನಟ್ಟುವಿಕೆಯಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೊಹ್ಲಿಯ ಅಜೇಯ 72 ರನ್ 20 ವರ್ಷದ ದೇವದತ್ ಪಡಿಕ್ಕಲ್ ಅವರು 52 ಎಸೆತಗಳಲ್ಲಿ 101 ವಿಕೆಟ್‌ಗಳನ್ನು ಗಳಿಸಿದರು.

ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 51 ಎಸೆತದಲ್ಲಿ ಶತಕ ಹೊಡೆದರು. ವಿರಾಟ್ ಕೊಹ್ಲಿ 54 ಎಸೆತದಲ್ಲಿ ಅರ್ಧಶತಕ ಹೊಡೆದರು. ಅಂತಿಮವಾಗಿ ಪಡಿಕ್ಕಲ್ 101 ರನ್(52 ಎಸೆತ, 11 ಬೌಂಡರಿ, 6 ಸಿಕ್ಸ್) ಹೊಡೆದರೆ ವಿರಾಟ್ ಕೊಹ್ಲಿ 72 ರನ್(47 ಎಸೆತ, 6 ಬೌಂಡರಿ, 5 ಸಿಕ್ಸರ್) ಹೊಡೆದರು.

ರಾಜಸ್ಥಾನ ರಾಯಲ್ಸ್ ಮಂದಿ ಬೌಲರ್‌ಗಳನ್ನು 7 ಪ್ರಯೋಗಿಸಿದ್ದರೂ ಆರಂಭಿಕ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲೇ ಇಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಕೊರೋನಾ ಪಾಸಿಟಿವ್ : ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

Published

on

ಸುದ್ದಿದಿನ ಡೆಸ್ಕ್ : ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು “ವೈದ್ಯಕೀಯ ಸಲಹೆಯ ಮೇರೆಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿ ನಾನು ಆಸ್ಪತ್ರೆಗೆ ದಾಖಲಿಸಲಾಗಿದ್ದೇನೆ ಎಂದು ಶುಕ್ರವಾರ ಹೇಳಿದ್ದಾರೆ. ಅವರಿಗೆ ಕಳೆದ ವಾರ ಕೊರೋನಾ ಪಾಸಿಟಿವ್ ಬಂದಿತ್ತು.

ನಿಮ್ಮ ಶುಭಾಶಯಗಳು ಮತ್ತು ಪ್ರಾರ್ಥನೆಗಳಿಗೆ ನನ್ನ ಧನ್ಯವಾದಗಳು. ವೈದ್ಯಕೀಯ ಸಲಹೆಯಡಿಯಲ್ಲಿ ಮುನ್ನೆಚ್ಚರಿಕೆಯಾಗಿ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವೇ ದಿನಗಳಲ್ಲಿ ಗುಣಮುಖನಾಗಿ ಮನೆಗೆ ಮರಳುವ ಭರವಸೆ ಇದೆ. ಎಲ್ಲರೂ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ. ವಿಶ್ವಕಪ್ ಗೆದ್ದ 10 ನೇ ವಾರ್ಷಿಕೋತ್ಸವದಲ್ಲಿರುವ ಎಲ್ಲಾ ಭಾರತೀಯರಿಗೆ ಮತ್ತು ನನ್ನ ತಂಡದ ಆಟಗಾರರಿಗೆ ಶುಭಾಶಯಗಳು ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending