ಲೈಫ್ ಸ್ಟೈಲ್
ಅಮೃತದಂಥಹ ಅಮೃತ ಬಳ್ಳಿ

ಅನೇಕ ಔಷಧಿಗುಣಗಳಿಂದ ಮತ್ತು ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದೆ, ಎಲ್ಲಾ ಕಡೆ ಸುಲಭವಾಗಿ ದೊರಕುವ ‘ಅಮೃತ ಬಳ್ಳಿ’ ಆಯುರ್ವೇದದಲ್ಲಿ ಬಹು ಜನಪ್ರಿಯ ಔಷಧವಾಗಿದೆ. ಭಾರತದ ಎಲ್ಲಾ ಕಡೆ ದೊರೆಯುತ್ತದೆ.ಇಂದಿನ ದಿನಗಳಲ್ಲಿ ಔಷಧಿಯಾಗಿ ಅಪಾರ ಬೇಡಿಕೆ ಆಗಿರುವುದರಿಂದ ಬೇಸಾಯ ಬೆಳೇಯಾಗಿ ಇದನ್ನು ಕೃಷಿ ಮಾಡುತ್ತಿದ್ದಾರೆ.
ಈ ಅಮೃತ ಬಳ್ಳಿಯ ಕಾಂಡ ಭಾಗ ಮೃದುವಾಗಿದ್ದು ಇದರ ಮೇಲ್ಬಾಗದ ಸಿಪ್ಪೆಯು ತೆಳುವಾಗಿದ್ದು; ಮಾಸಲು ಬಣ್ಣದಿಂದ ಕೂಡಿದೆ. ಇದು ವೀಳ್ಯೆದೆಲೆಯನ್ನು ಹೋಲುತ್ತದೆ. ಕಾಯಿಗಳು ಹಸಿರಾಗಿದ್ದು, ಹಣ್ಣಾದ ಮೇಲೆ ಆಕರ್ಷಕ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕಾಂಡದ ಮೇಲೆ ಪೊರೆಯನ್ನು ತೆಗೆದರೆ ಅದರಲ್ಲಿ ಲೋಳೆಯಂತೆ ಅಂಟುದ್ರವ್ಯ ಕಂಡುಬರುತ್ತದೆ.
ಔಷಧೀಯ ಗುಣಗಳು
- ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಸಂಜೀವಿನಿಗೆ ಸಮನಾದ ಒಂದು ವನಸ್ಪತಿ ಎಂದು ಪರಿಗಣಿಸಿದೆ. ಖಾರ,ಕಹಿ,ಒಗರು ರಸಗಳಿಂದ ಕೂಡಿರುವ ಇದು, ಉಷ್ಣವಿರ್ಯವುಳ್ಳದಾಗಿದ್ದು ದೀಪದ, ಪಾಚನ,ಗ್ರಾಹೀ ಗುಣವನ್ನು ಹೊಂದಿದೆ.
- ವಾತ ಪಿತ್ತ, ಕಫದೋಷಗಳನ್ನು ಸಮಸ್ಥಿತಿಯಲ್ಲಿಡುವ ಇದು-ಜ್ವರ, ಕುಷ್ಟ, ಕಾಮಾಲೆ, ಮಧುಮೇಹ, ಕೆಮ್ಮು, ದಮ್ಮು, ರಕ್ತಹೀನತೆ, ಆಮವಾತ, ರಕ್ತಪಿತ್ತ, ಸ್ತನ್ಯ ಶೋಧಕ, ದಾಹ… ಇಂತಹ ಹತ್ತು ಹಲವು ರೋಗಗಳಿಗೆ ಉತ್ತಮ ಔಷಧವಾಗಬಲ್ಲ ಇದೊಂದು ಶ್ರೇಷ್ಠ ರಸಾಯನ.ಇದರ ಸೇವನೆಯಿಂದ ರೋಗ ನಿವಾರಣೆಯಲ್ಲದೆ; ಆರೋಗ್ಯ ನಿರ್ವಹಣೆಗೂ ಸಹಾಯವಾಗುತ್ತದೆ.
- ಇದನ್ನು ಒಂದು ವರ್ಷದವರೆಗೂ ಉಪಯೋಗಿಸಬಹುದು. ಅನಂತರ ಇದರ ಸತ್ವ ಕಡಿಮೆ ಆಗುತ್ತದೆ. ತಾಜಾ ಅಮೃತಬಳ್ಳಿಯಿಂದ ವಿಶೇಷವಾಗಿ ತಯಾರಿಸಿದ ಅಮೃತಸತ್ವ ಅಥವಾ ಗುಡೂಚಿಸತ್ವ ಅನೇಕ ರೋಗಗಳಿಗೆ ಉಪಯೋಗವಾಗುವ ಒಂದು ಅಮೂಲ್ಯ ಔಷಧ.
ಅಮೃತಬಳ್ಳಿ ಬಾಯಿಗೆ ಕಹಿಯಾದರೂ ಉದರಕ್ಕೆ ಸಿಹಿ. ಇದರ ಸೇವನೆಯಿಂದ ಆಯುóಯ, ಆರೋಗ್ಯ ವೃದ್ಧಿಯಾಗುತ್ತದೆ. - ಪ್ರತಿನಿತ್ಯ ಎರಡು ಚಮಚ ಅಮೃತ ಬಳ್ಳೀಯ ರಸಕ್ಕೆ ಒಂದು ಅಥವಾ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮೂರು ತಿಂಗಳು ಸೇವಿಸುತ್ತಾ ಬಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
- ರಕ್ತದೊತ್ತಡ, ಬೊಜ್ಜು, ಅಜೀರ್ಣ, ಅಗ್ನಿಮಾಂದ್ಯಗಳು ದೂರವಾಗುತ್ತವೆ. ತಾಜಾ ಅಮೃತಬಳ್ಳಿಯ ರಸ ದೊರಕದಿದ್ದಾಗ ಒಣಗಿದ ಅಮೃಥ ಬಳ್ಳಿಯ ಕಷಾಯವನ್ನು ಸೇವಿಸಬಹುದು.
- ಅಮೃತಬಳ್ಳಿ ಆಡುಸೋಗೆ ಎಲೆ ಹಾಗೂ ಸೋಗದಬೇರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ತಯಾರಿಸಿದ ಕಷಾಯ ವಿಷಮ ಶೀತಜ್ವರ, ಮಲೇರಿಯಾ ಜ್ವರಗಳಿಗೆ ಉತ್ತಮ ಔಷಧ.
- 15-30 ಮಿ.ಲೀಟರ್ ಕಷಾಯಕ್ಕೆ 1-2 ಚಮಚ ಜೇನು ಸೇರಿಸಿ ದಿನಗಳಲ್ಲಿ 3-4 ಬಾರಿ ಕೊಡಬಹುದು. ಶೀತ ಮತ್ತು ಕಫ, ಜ್ವರದಲ್ಲಿ ಅಮೃತಬಳ್ಳಿ, ತುಳಸಿ ಮತ್ತು ಆಡುಸೋಗೆ ಎಲೆಗಳಿಂದ ತಯಾರಿಸಿದ ಕಷಾಯ ಶ್ರೇಷ್ಠ ಔಷಧ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.
54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

ಸುದ್ದಿದಿನ,ಬೆಂಗಳೂರು:ಆರ್‌ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್ ರೆಸ್ಟೋರೆಂಟ್‌ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.
ಬೆಂಗಳೂರಿನ #NativeCooks ಫುಡ್ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.
ಹೌದು, ಹೆಬ್ಬಾಳ, ಆರ್‌ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್‌ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್‌ಬಾಕ್ಸ್‌ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.
ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್ ಕುಕ್ಸ್ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್. ವೆಜ್ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್‌ವೆಜ್ ಊಟವನ್ನು 135 ರೂಪಾಯಿಗೆ ಹಾಗೂ ಎಕ್ ಮೀಲ್‌ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.
ಸದ್ಯಕ್ಕೆ ಹೆಬ್ಬಾಳ, ಆರ್‌ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ3 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ2 days ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ3 days ago
ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ16 hours ago
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ
-
ದಿನದ ಸುದ್ದಿ3 days ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್
-
ದಿನದ ಸುದ್ದಿ2 days ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ