Connect with us

ನಿತ್ಯ ಭವಿಷ್ಯ

ಶುಕ್ರವಾರದ ಭವಿಷ್ಯವಾಣಿ

Published

on

ಶ್ರೀ ಮೂಕಾಂಬಿಕ ದೇವಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು ಗಿರಿಧರಭಟ್
ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ:
9945410150

ಮೇಷ ರಾಶಿ

ಬಹು ಆಕಾಂಕ್ಷಿತ ಕಾರ್ಯವು ಕೈಗೂಡಲು ಸನ್ನಿಹಿತವಾಗಿದೆ. ನಿಮ್ಮ ಯೋಚನಾಲಹರಿ ಹೊಸ ಆಯಾಮದಿಂದ ಕೂಡಿದ್ದು ನವೀನ ಕಾರ್ಯಗಳಿಗೆ ಪ್ರೇರಣೆ ನೀಡಲಿದೆ. ಆರ್ಥಿಕ ಬಂಡವಾಳದ ವಿಷಯವಾಗಿ ಸಮಸ್ಯೆಗಳು ಬರಬಹುದು. ಕುಟುಂಬದವರ ಬಳಿ ನಿಮ್ಮ ಯೋಜನೆ ಪ್ರಸ್ತಾಪಿಸುವುದರಿಂದ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ

ನಿಂತಿರುವ ಕಾರ್ಯಗಳು ಪುನಶ್ಚೇತನ ಗೊಳ್ಳಲಿದೆ. ಆತ್ಮೀಯರಿಂದ ನಂಬಿಕೆದ್ರೋಹ ವಾಗುವ ಸಾಧ್ಯತೆ ಕಾಣಬಹುದು, ಆದಷ್ಟು ನಿಮ್ಮ ಯೋಜನೆಗಳನ್ನು ಗೌಪ್ಯವಾಗಿ ಕಾಪಾಡಿಕೊಳ್ಳಿ. ಮಕ್ಕಳ ವಿಷಯವಾಗಿ ನಿಮ್ಮಲ್ಲಿ ಬೇಸರ ಮೂಡಬಹುದು. ಸಂಗಾತಿಯ ಕಠೋರ ಮಾತುಗಳು ನಿಮ್ಮ ಮನಸ್ಸಶಾಂತಿಯನ್ನು ಕದಡ ಬಹುದಾಗಿದೆ, ಆದಷ್ಟು ನಿಮ್ಮ ಈ ದಿನದ ಕಾರ್ಯ ಕಲಾಪಗಳಲ್ಲಿ ತಾಳ್ಮೆ ಅವಶ್ಯಕವಾಗಿದೆ.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ

ನಿಮ್ಮನ್ನು ಅನಗತ್ಯವಾಗಿ ಪ್ರೇರೇಪಣೆ ನೀಡಿ ಅಚಾತುರ್ಯವಾದಂತಹ ಕಾರ್ಯಗಳಿಗೆ ಎಡೆ ಮಾಡಿಕೊಳ್ಳಲಿದ್ದಾರೆ ಆದಷ್ಟು ಎಚ್ಚರವಹಿಸಿ. ನಿಮ್ಮ ಸುತ್ತಲಿರುವ ಹೊಗಳುವ ಜನಗಳ ನಂಬುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ನಿಮ್ಮ ವ್ಯವಸ್ಥಿತ ಕಾರ್ಯಗಳಿಗೆ ಹಾನಿ ತಂದೊಡ್ಡುವ ದುರುದ್ದೇಶಗಳು ಕಂಡುಬರುತ್ತದೆ.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ

ಹಣ ಗಳಿಕೆ ವಿಷಯದಲ್ಲಿ ನಿಮ್ಮ ವ್ಯವಹಾರ ಚಾತುರ್ಯ ತುಂಬಾ ಉತ್ತಮವಾಗಿ ಮೂಡಿಬರುತ್ತದೆ. ಆರ್ಥಿಕವಾಗಿ ಬಲಿಷ್ಠವಾಗಿರುತ್ತೀರಿ. ಕುಟುಂಬದಿಂದ ನಿಮ್ಮ ಕೆಲಸಗಳಿಗೆ ಸಹಾಯ ಮತ್ತು ಬಂಡವಾಳ ದೊರೆಯಲಿದೆ. ಪತ್ನಿಯ ಸಾಂಗತ್ಯದಲ್ಲಿ ವಿಶೇಷವಾದ ಹಾಸ್ಯ ಚಟಾಕಿ ಗಳಲ್ಲಿ ಕಾಲ ಕಳೆಯುತ್ತೀರಿ. ನವೀನ ಕಾರ್ಯಗಳಿಗೆ ಅಡಿಪಾಯ ಹಾಕುವ ಸಾಧ್ಯತೆ ಕಾಣಬಹುದು.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ

ಸಹವಾಸ ದೋಷದಿಂದ ನಿಮ್ಮ ವ್ಯಕ್ತಿತ್ವ ಅದಪತನ ವಾಗಬಹುದು, ಉತ್ತಮವಾದ ಸಂಘವನ್ನು ಬೆಳೆಸಿಕೊಳ್ಳಿ. ನಿಮ್ಮ ಕಾರ್ಯಗಳ ಅದರ ರೂಪರೇಷೆ ವ್ಯವಸ್ಥಿತವಾಗಿ ಇರಲಿ, ಮುಂದೆ ಬರಲಿರುವ ಯೋಜನೆಗಳಿಗೆ ಇಂದಿನಿಂದಲೇ ತಾಲೀಮು ನಡೆಸಿ, ಇದು ನಿಮ್ಮ ಜೀವನಕ್ಕೆ ಅತ್ಯಮೂಲ್ಯ ವಾಗಿರುತ್ತದೆ. ಮನಸ್ಸಿನಲ್ಲಿ ಮೂಡುವ ಆಲೋಚನೆಗಳು ಗೊಂದಲ ತರಿಸಬಹುದು. ಕೆಲವು ವಿಷಯಗಳು ದೂರದಿಂದ ಚೆಂದ ಕಾಣುತ್ತದೆ ಆದರೆ ಅದರ ಅಸ್ತಿತ್ವವು ನಿಮಗೆ ಸಂಕಟ ನೀಡಬಹುದು. ಮನೋ ಕಾಮನೆಗಳನ್ನು ನಿಗ್ರಹಿಸುವುದು ಒಳಿತು.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಪತ್ನಿಯ ಮಾತುಗಳನ್ನು ಅಲಕ್ಷಿಸದೆ ಪರಿಗಣನೆಗೆ ತೆಗೆದುಕೊಳ್ಳುವುದು ಮುಖ್ಯ. ಸ್ವಾರ್ಥಿ ಜನಗಳಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ. ನಿಮ್ಮ ಹತ್ತಿರ ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ತಂತ್ರ ಮಾಡಲಿದ್ದಾರೆ. ನೀವು ಭೋಗವಿಲಾಸತನವನ್ನು ಪ್ರದರ್ಶಿಸುವುದು ಒಳ್ಳೆಯದಲ್ಲ. ವ್ಯವಹಾರದಲ್ಲಿ ನೈಜತೆ ಮತ್ತು ನೇರವಾಗಿರಲಿ ನಿಮ್ಮ ಮಾತು ಇದು ಉತ್ತಮ ವ್ಯಾಪಾರಕ್ಕೆ ಸಾಕ್ಷಿಯಾಗಲಿದೆ. ಇತರರ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಂಡು ಗೊಂದಲ ಮಾಡಿಕೊಳ್ಳಬೇಡಿ. ಸಂಗಾತಿಯೊಡನೆ ಪ್ರೇಮದಿಂದ ನಡೆದುಕೊಳ್ಳಿ.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ

ಅಂದುಕೊಂಡ ಕಾರ್ಯಗಳು ಕೈಗೂಡಲಿದೆ. ನಿಮ್ಮ ಹೊಸ ಆಲೋಚನೆಯು ಉತ್ತಮವಾದ ಕೆಲಸಕ್ಕೆ ಪ್ರೇರಣೆ ನೀಡುತ್ತದೆ. ಹಣಕಾಸಿನ ವಿಷಯದಲ್ಲಿ ಅಡೆತಡೆಗಳು ಕಂಡುಬರಲಿದೆ. ಕುಟುಂಬದ ಬೆಂಬಲ ಪಡೆಯಲು ನೀವು ಮುಂದಾಗಿ. ನಿಮ್ಮ ಕೆಲವು ಕಾರ್ಯಗಳು ತಟಸ್ಥವಾಗಿದೆ ಅದನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸುವುದು ಒಳ್ಳೆಯದು. ವ್ಯವಹಾರದಲ್ಲಿ ನಿಮ್ಮ ಆಲೋಚನೆ ತ್ವರಿತಗತಿಯಲ್ಲಿ ಇರಲಿ. ಸಂಗಾತಿಯೊಡನೆ ಬಾಂಧವ್ಯ ಬೆಳೆಸುವ ಪ್ರಯತ್ನ ಮಾಡಿ.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ

ನಿಮ್ಮ ಕೆಲಸದ ಬಗೆಗಿನ ನಿಷ್ಠೆ ಮೆಚ್ಚುಗೆ ಗಳಿಸುತ್ತದೆ. ಯೋಜನೆಗಳು ಸಕಾಲದಲ್ಲಿ ನಿಮ್ಮ ಕೈಹಿಡಿಯುವುದು ನಿಶ್ಚಿತ. ಅಧಿಕಾರಿ ವರ್ಗಗಳಿಂದ ಭರಪೂರ ಪ್ರಶಂಸೆ ಸಿಗಲಿದೆ. ಕೆಲಸದ ಒತ್ತಡದಿಂದ ಆಯಾಸ ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನ ನೀಡಿ. ನೀವು ಯಾರಿಗೂ ತಿಳುವಳಿಕೆ ಹೇಳುವ ಪ್ರಯತ್ನ ಮಾಡದಿರುವುದು ಸೂಕ್ತ. ಸ್ನೇಹಿತರ ಭೇಟಿಯಿಂದ ಸಂತೋಷದ ವಾತಾವರಣ ಇರಲಿದೆ.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ

ಕೆಲಸವನ್ನು ಶ್ರದ್ಧೆಯಿಂದ ಆರಂಭಿಸಿ ಯಾವುದೇ ಭಯಬೇಡ. ನೀವು ನಡೆಸುವ ಕಾರ್ಯಗಳು ಉತ್ತಮವಾದ ಕ್ಷಮತೆಯಿಂದ ಕೂಡಿರಲಿದೆ. ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ನಿಮ್ಮ ಮನಸ್ಥಿತಿಗೆ ಯಾವುದೇ ಚಂಚಲತೆಯನ್ನು ಬರದಂತೆ ನೋಡಿಕೊಳ್ಳಿ. ಕೆಲಸದ ನಿಖರ ಲೆಕ್ಕಚಾರವನ್ನು ಮೊದಲೇ ನಿರ್ಧರಿಸಿ. ಕುಟುಂಬದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ, ಆದಷ್ಟು ಶುಭ್ರತೆಗೆ ಒತ್ತು ನೀಡುವುದು ಒಳ್ಳೆಯದು.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ

ಹತಾಶ ಮನಸ್ಥಿತಿಯಿಂದ ಹೊರಬರಲು ಪ್ರಯತ್ನಪಡಿ. ನಿಮ್ಮ ಕಾರ್ಯಗಳಿಗೆ ಆತ್ಮೀಯರು ಸಹಕಾರ ನೀಡಲಿದ್ದಾರೆ ಮತ್ತು ನಿಮ್ಮ ಕುಶಲತೆ ತಂತ್ರಗಾರಿಕೆಯೂ ನಷ್ಟವಾಗದಂತೆ ತಡೆಗಟ್ಟಲಿದೆ. ಹಿರಿಯರ ಮಾತಿಗೆ ಬೆಲೆ ನೀಡುವುದು ಒಳ್ಳೆಯದು. ನಿಮ್ಮ ಗ್ರಾಹಕರ ಬದ್ಧತೆಯನ್ನು ಕಾಪಾಡಿಕೊಳ್ಳಿ. ವ್ಯಾಪಾರದಲ್ಲಿ ಬರುವ ಸ್ಪರ್ಧೆಗಳಿಗೆ ನೀವು ತಯಾರಿ ನಡೆಸುವುದು ಕ್ಷೇಮ. ಸಂಗಾತಿಯ ಕುಟುಂಬದಿಂದ ಅನುಕೂಲಕರ ವಾತಾವರಣ ಮೂಡಲಿದೆ.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ

ಕೌಟುಂಬಿಕ ಸಮಸ್ಯೆಗಳನ್ನು ಇಂದು ನೀವು ಇತ್ಯರ್ಥ ಪಡಿಸಲು ವಿಶೇಷ ಕಾಳಜಿ ವಹಿಸುತ್ತೀರಿ. ಕೆಲವರು ಸಮಸ್ಯೆಗಳನ್ನು ತೆಗೆದುಕೊಂಡು ಪರಿಹಾರಕ್ಕಾಗಿ ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಗಣ್ಯ ವ್ಯಕ್ತಿಗಳ ಬೇಟಿ ಮಾಡುವಿರಿ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮಗಳಿಗೆ ಇಂದೇ ರೂಪರೇಷೆ ಮಾಡಿಕೊಳ್ಳುವ ಚಿಂತನೆ ನಿಮ್ಮದು.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ

ಗೃಹ ಅಲಂಕಾರಕ್ಕೆ ವಿಶೇಷ ಗಮನ ಹರಿಸುತ್ತೀರಿ. ಪತ್ನಿಯ ಜೊತೆಗೆ ವಸ್ತುಗಳ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೀರಿ. ಬಂದು ವರ್ಗದೊಡನೆ ಆಸ್ತಿ ಹಣಕಾಸಿಗಾಗಿ ವ್ಯಾಜ್ಯಗಳು ಸೃಷ್ಟಿಯಾಗಬಹುದು. ವೈಯಕ್ತಿಕ ಸಮಸ್ಯೆಗಳನ್ನು ಕೆಲಸ ಕಾರ್ಯದಲ್ಲಿ ತರಬೇಡಿ. ಸಕಾರಾತ್ಮಕವಾಗಿ ಚಿಂತಿಸುವುದರಿಂದ ಎಲ್ಲವೂ ಸರಿ ಹೋಗುತ್ತದೆ.

ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

ದಿನದ ಸುದ್ದಿ

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!

Published

on

ಇಂದಿನ ರಾಶಿ ಭವಿಷ್ಯ - ಸೆಪ್ಟೆಂಬರ್ 10, 2026

ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ.

http://Visit : www.suddidina.com

ಮೇಷ: ಹಣಕಾಸಿನ ವಿಚಾರದಲ್ಲಿ ಶುಭ ದಿನ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.

ವೃಷಭ: ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿ ಬರಲಿವೆ. ಮಾತಿನ ಮೇಲೆ ನಿಯಂತ್ರಣ ಇರಲಿ. ಪ್ರಯಾಣದ ಯೋಗವಿದೆ.

ಮಿಥುನ: ಉದ್ಯೋಗದಲ್ಲಿ ಪ್ರಗತಿಯ ಸೂಚನೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಉಲ್ಲಾಸ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.

ಕರ್ಕಾಟಕ: ವ್ಯಾಪಾರದಲ್ಲಿ ಲಾಭದ ನಿರೀಕ್ಷೆ. ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಹಳೆಯ ಸಾಲ ವಸೂಲಿಯಾಗಲಿದೆ.

ಸಿಂಹ: ಆತ್ಮವಿಶ್ವಾಸ ಹೆಚ್ಚಾಗುವ ದಿನ. ಸರ್ಕಾರಿ ಕೆಲಸಗಳು ಸುಗಮವಾಗಿ ನಡೆಯಲಿವೆ. ಮಕ್ಕಳಿಂದ ಶುಭ ಸುದ್ದಿ ಸಿಗಲಿದೆ.

ಕನ್ಯಾ: ಕೆಲಸದ ಒತ್ತಡ ಹೆಚ್ಚಿರಬಹುದು, ತಾಳ್ಮೆಯಿಂದ ಇರಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಸಂಜೆ ವೇಳೆಗೆ ಶುಭ ಸುದ್ದಿ.

ತುಲಾ: ಹೊಸ ಅವಕಾಶಗಳು ಬಾಗಿಲು ತಟ್ಟಲಿವೆ. ನಿಮ್ಮ ಪ್ರತಿಭೆಗೆ ಮನ್ನಣೆ ಸಿಗಲಿದೆ. ಪ್ರೇಮ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ.

ವೃಶ್ಚಿಕ: ಆಸ್ತಿ ವಿಚಾರದಲ್ಲಿ ಜಯ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ.

ಧನು: ಧೈರ್ಯದಿಂದ ಕೈಗೊಂಡ ನಿರ್ಧಾರ ಯಶಸ್ಸು ತರಲಿದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬಗೆಹರಿಯಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ.

ಮಕರ: ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ. ಕಛೇರಿಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ.

ಕುಂಭ: ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ಸಿಗುವ ದಿನ. ಹೊಸ ವಸ್ತು ಖರೀದಿ ಯೋಗವಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚಾಗಲಿದೆ.

ಮೀನ: ಮನಸ್ಸಿನಲ್ಲಿ ಗೊಂದಲಗಳು ನಿವಾರಣೆಯಾಗಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ದೂರದ ಸಂಬಂಧಿಯಿಂದ ಸುದ್ದಿ ಬರಲಿದೆ.

Continue Reading

ನಿತ್ಯ ಭವಿಷ್ಯ

ಮೇಷದಿಂದ ಮೀನದವರೆಗೆ: ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯದಲ್ಲಿ ಏನಿದೆ?

Published

on

ಇಂದು ಯಾರಿಗೆ ಹಣಲಾಭ? ಯಾರಿಗೆ ಹೊಸ ಅವಕಾಶ? 12 ರಾಶಿಗಳ ದಿನಭವಿಷ್ಯ ಇಲ್ಲಿದೆ

ಸುದ್ದಿದಿನ,ರಾಶಿಭವಿಷ್ಯ: ಇಂದಿನ ದಿನವು ಪ್ರತಿಯೊಂದು ರಾಶಿಗೂ ವಿಭಿನ್ನ ಅನುಭವಗಳನ್ನು ತರುವ ಸಾಧ್ಯತೆ ಇದೆ. ಕೆಲವರಿಗೆ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಮತ್ತೊಂದೆಡೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಿರ್ಧಾರ ಅಗತ್ಯವಾಗಬಹುದು. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಕೆಲವು ರಾಶಿಗಳಿಗೆ ದೊರೆಯಲಿದ್ದು, ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಅಧ್ಯಯನ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ದಿನದ ಪ್ರಮುಖ ನಿರ್ಧಾರಗಳಲ್ಲಿ ಆತುರಕ್ಕಿಂತ ವಿವೇಕಕ್ಕೆ ಆದ್ಯತೆ ನೀಡುವುದು ಉತ್ತಮ.

http://Visit : www.suddidina.com

ಮೇಷ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚು ತಪ್ಪಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಬೇಕು.

ವೃಷಭ ರಾಶಿ

ಬಹುದಿನಗಳಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ಕುಟುಂಬದವರ ಸಲಹೆ ಉಪಯುಕ್ತವಾಗಲಿದೆ. ಆರೋಗ್ಯದ ಕಡೆ ಗಮನ ನೀಡಿ.

ಮಿಥುನ ರಾಶಿ

ಕೆಲಸದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗಲಿದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಸಹಕಾರಿಯಾಗಬಹುದು. ಹಣದ ವ್ಯವಹಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಮುಂದುವರಿಯಿರಿ.

ಕಟಕ ರಾಶಿ

ಕುಟುಂಬದ ವಿಚಾರಗಳು ಹೆಚ್ಚಿನ ಗಮನ ಸೆಳೆಯಬಹುದು. ಉದ್ಯೋಗದಲ್ಲಿ ಒತ್ತಡ ಕಂಡುಬಂದರೂ ಸಮಾಧಾನದಿಂದ ನಿರ್ವಹಿಸಿ. ಆತುರದ ನಿರ್ಧಾರಗಳಿಂದ ದೂರವಿರುವುದು ಒಳಿತು.

ಸಿಂಹ ರಾಶಿ

ವೃತ್ತಿಜೀವನದಲ್ಲಿ ಪ್ರಗತಿಯ ಸೂಚನೆಗಳಿವೆ. ಹಿರಿಯರಿಂದ ಮೆಚ್ಚುಗೆ ದೊರೆಯಬಹುದು. ಹಣಕಾಸಿನ ಸ್ಥಿತಿ ಸುಧಾರಿಸುವ ಅವಕಾಶವಿದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು.

ಕನ್ಯಾ ರಾಶಿ

ಹೊಸ ಯೋಜನೆ ಆರಂಭಿಸಲು ದಿನ ಅನುಕೂಲಕರವಾಗಿರಬಹುದು. ಕೆಲಸದಲ್ಲಿ ಏಕಾಗ್ರತೆ ಹೆಚ್ಚಲಿದೆ. ಖರೀದಿ ಮಾಡುವಾಗ ಅಗತ್ಯ-ಅನಗತ್ಯವನ್ನು ಅಳೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ತುಲಾ ರಾಶಿ

ಸಂಬಂಧಗಳಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾದರೂ ಮಾತುಕತೆಯಿಂದ ಪರಿಹರಿಸಬಹುದು. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಬರಬಹುದು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ.

ವೃಶ್ಚಿಕ ರಾಶಿ

ಹಳೆಯ ಕೆಲಸವೊಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಎಚ್ಚರಿಕೆಯ ಹೆಜ್ಜೆ ಅಗತ್ಯ. ಕುಟುಂಬದವರಿಂದ ಬೆಂಬಲ ಸಿಗಲಿದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.

ಧನು ರಾಶಿ

ಹೊಸ ಅವಕಾಶಗಳು ನಿಮ್ಮ ಗಮನ ಸೆಳೆಯಬಹುದು. ದೂರದ ಪ್ರಯಾಣದ ಯೋಜನೆ ರೂಪುಗೊಳ್ಳಬಹುದು. ಹಣದ ವಿಚಾರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆತ್ಮವಿಶ್ವಾಸ ಹೆಚ್ಚಲಿದೆ.

ಮಕರ ರಾಶಿ

ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಯೋಜನೆಯಂತೆ ಕಾರ್ಯನಿರ್ವಹಿಸಿದರೆ ಯಶಸ್ಸು ಸಿಗಲಿದೆ. ಹಿರಿಯರ ಮಾರ್ಗದರ್ಶನ ಪ್ರಯೋಜನಕಾರಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ.

ಕುಂಭ ರಾಶಿ

ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಮಯ. ಉದ್ಯೋಗದಲ್ಲಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ಮಾಹಿತಿ ಸಂಗ್ರಹಿಸಿ ನಿರ್ಧರಿಸಿ. ಸ್ನೇಹಿತರಿಂದ ನೆರವು ದೊರೆಯಬಹುದು.

ಮೀನ ರಾಶಿ

ಮನಸ್ಸಿನ ಗೊಂದಲಗಳು ನಿಧಾನವಾಗಿ ಕಡಿಮೆಯಾಗಬಹುದು. ಕುಟುಂಬದೊಂದಿಗೆ ಸಂತಸದ ಕ್ಷಣಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಉಳಿತಾಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಪರಿಶ್ರಮದ ಫಲ ದೊರೆಯಬಹುದು.

Continue Reading

ನಿತ್ಯ ಭವಿಷ್ಯ

Today Rashi Bhavishya September 1 2026: ಇಂದಿನ ರಾಶಿಭವಿಷ್ಯ; ಈ 5 ರಾಶಿಗೆ ಶುಭಫಲ

Published

on

ರಾಶಿಭವಿಷ್ಯ ಸೆಪ್ಟೆಂಬರ್ 1: ಈ 5 ರಾಶಿಗೆ ಅದೃಷ್ಟದ ಬಾಗಿಲು ಓಪನ್‌! ಹಣ, ಉದ್ಯೋಗ, ವ್ಯವಹಾರದಲ್ಲಿ ಶುಭಫಲ; ನಿಮ್ಮ ರಾಶಿ ಹೇಗಿದೆ?

ಸುದ್ದಿದಿನ,ರಾಶಿಭವಿಷ್ಯ: ಸೆಪ್ಟೆಂಬರ್‌ 1, 2026ರ ದಿನವು ಹಲವು ರಾಶಿಗಳಿಗೆ ಹೊಸ ಅವಕಾಶಗಳು, ಆರ್ಥಿಕ ಪ್ರಗತಿ ಮತ್ತು ವೃತ್ತಿಯಲ್ಲಿ ಮುನ್ನಡೆಯ ಸೂಚನೆ ನೀಡುತ್ತಿದೆ. ಜ್ಯೋತಿಷ್ಯಾಧಾರಿತ ದಿನಭವಿಷ್ಯದ ಪ್ರಕಾರ ಮೇಷ, ವೃಷಭ, ಮಿಥುನ, ತುಲಾ ಮತ್ತು ಮಕರ ರಾಶಿಯವರಿಗೆ ವಿಶೇಷವಾಗಿ ಅನುಕೂಲಕರ ಬೆಳವಣಿಗೆಗಳ ಸಾಧ್ಯತೆ ಇದೆ.

ಆದರೆ ಪ್ರತಿಯೊಂದು ರಾಶಿಗೂ ದಿನ ಒಂದೇ ರೀತಿಯಾಗಿರುವುದಿಲ್ಲ. ಕೆಲವರಿಗೆ ಹಣಕಾಸಿನಲ್ಲಿ ಲಾಭದ ಸೂಚನೆ ಇದ್ದರೆ, ಇನ್ನು ಕೆಲವರು ಆರೋಗ್ಯ, ಖರ್ಚು, ಕುಟುಂಬ ಸಂಬಂಧ ಅಥವಾ ಕೆಲಸದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಬೇಕಾಗುತ್ತದೆ.

http://Visit : www.suddidina.com

ಮೇಷ ರಾಶಿ

ಆರ್ಥಿಕ ಸಮಸ್ಯೆಗಳಿಂದ ಸ್ವಲ್ಪ ಪರಿಹಾರ ದೊರೆಯುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿ ಕಾಣಬಹುದು. ಆದರೆ ಆರೋಗ್ಯ ಮತ್ತು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ವೃಷಭ ರಾಶಿ

ಹಣಕಾಸಿನ ವಿಚಾರದಲ್ಲಿ ಉತ್ತಮ ದಿನ. ಕುಟುಂಬದ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಲಿದೆ. ಶಿಕ್ಷಣ ಹಾಗೂ ವ್ಯವಹಾರದಲ್ಲಿ ಯಶಸ್ಸಿನ ಸಾಧ್ಯತೆ ಇದೆ. ಖರ್ಚು ಹೆಚ್ಚಾಗದಂತೆ ನಿಯಂತ್ರಿಸುವುದು ಮುಖ್ಯ.

ಮಿಥುನ ರಾಶಿ

ನಿರೀಕ್ಷಿತ ಯಶಸ್ಸು ದೊರೆಯುವ ಸಾಧ್ಯತೆ ಇದೆ. ಹಳೆಯ ಕೆಲಸದ ಸಮಸ್ಯೆಗಳು ಬಗೆಹರಿಯಬಹುದು. ಕೋರ್ಟ್‌ ಅಥವಾ ಕಾನೂನು ಸಂಬಂಧಿತ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆ ಸಾಧ್ಯ. ಆದರೆ ಯಾರಿಗೂ ದೊಡ್ಡ ಮೊತ್ತದ ಹಣ ಸಾಲ ನೀಡಬೇಡಿ.

ಕಟಕ ರಾಶಿ

ಕುಟುಂಬದ ವಿಚಾರಗಳಲ್ಲಿ ಹೆಚ್ಚಿನ ಗಮನ ನೀಡಬೇಕಾದ ದಿನ. ಯಾವುದೇ ಕೆಲಸವನ್ನು ಯೋಜನೆಯೊಂದಿಗೆ ಆರಂಭಿಸಿದರೆ ಉತ್ತಮ ಫಲಿತಾಂಶ ಸಿಗಬಹುದು. ಮಾನಸಿಕ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.

ಸಿಂಹ ರಾಶಿ

ಕೆಲಸದಲ್ಲಿ ಶ್ರಮ ಹೆಚ್ಚಿಸಬೇಕಾದ ದಿನ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಬಹುದು. ಕುಟುಂಬದಲ್ಲಿದ್ದ ಕೆಲವು ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಅಧಿಕಾರಿಗಳು ಅಥವಾ ಹಿರಿಯರೊಂದಿಗೆ ಮಾತನಾಡುವಾಗ ತಾಳ್ಮೆ ಅಗತ್ಯ.

ಕನ್ಯಾ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಪ್ರಯತ್ನಗಳು ಫಲ ನೀಡುವ ಸಾಧ್ಯತೆ ಇದೆ. ಕೆಲಸದಲ್ಲಿನ ಅಡೆತಡೆಗಳು ದೂರವಾಗಬಹುದು. ವೃತ್ತಿಗೆ ಸಂಬಂಧಿಸಿದ ಶುಭ ಸುದ್ದಿ ಸಿಗುವ ನಿರೀಕ್ಷೆಯಿದೆ. ದೊಡ್ಡ ಹೂಡಿಕೆ ಮತ್ತು ದೂರ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ.

ತುಲಾ ರಾಶಿ

ಹಠಾತ್ ಆರ್ಥಿಕ ಲಾಭದ ಅವಕಾಶಗಳು ಬರಬಹುದು. ಆದಾಯ ಹೆಚ್ಚಿಸುವ ಪ್ರಯತ್ನಗಳಿಗೆ ಉತ್ತಮ ಸಮಯ. ಕುಟುಂಬದವರೊಂದಿಗೆ ಮನಸ್ಸಿನ ಮಾತುಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಿ. ಕೋಪ ಹಾಗೂ ಮಾತಿನ ಮೇಲೆ ನಿಯಂತ್ರಣ ಇರಲಿ.

ವೃಶ್ಚಿಕ ರಾಶಿ

ಶುಭ ಸುದ್ದಿಯ ನಿರೀಕ್ಷೆಯಿದೆ. ಅದೃಷ್ಟದ ಬೆಂಬಲ ದೊರೆಯುವ ಸಾಧ್ಯತೆ ಇದ್ದು, ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬಹುದು. ವ್ಯವಹಾರದಲ್ಲಿ ಹಣಕಾಸಿನ ಲಾಭದ ಅವಕಾಶವಿದೆ. ಆದರೆ ಅನಗತ್ಯ ಪ್ರಯಾಣ ಮತ್ತು ವಾದಗಳಿಂದ ದೂರವಿರಿ.

ಧನು ರಾಶಿ

ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಹುದು. ದೂರದ ಸ್ಥಳದಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಬಹುದು. ಆದರೆ ಖರ್ಚು ಹೆಚ್ಚಾಗದಂತೆ ನೋಡಿಕೊಳ್ಳಿ ಹಾಗೂ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಮಕರ ರಾಶಿ

ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸೂಚನೆ ಇದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಮೆಚ್ಚುಗೆ ದೊರೆಯಬಹುದು. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವ ಸಾಧ್ಯತೆ ಇದೆ. ವೃತ್ತಿ ಮತ್ತು ಉದ್ಯಮದಲ್ಲಿ ಪ್ರಮುಖ ನಿರ್ಧಾರಗಳನ್ನು ವಿಳಂಬ ಮಾಡದೆ ಸೂಕ್ತವಾಗಿ ತೆಗೆದುಕೊಳ್ಳಿ.

ಕುಂಭ ರಾಶಿ

ಉನ್ನತ ಅಧಿಕಾರಿಗಳ ಸಹಕಾರದಿಂದ ವೃತ್ತಿಯಲ್ಲಿ ಮುನ್ನಡೆ ಸಾಧಿಸಬಹುದು. ನಾಯಕತ್ವದ ಸಾಮರ್ಥ್ಯ ಹೆಚ್ಚಲಿದೆ. ಸಂಬಂಧಿಕರ ಭೇಟಿ ಸಾಧ್ಯ. ಕುಟುಂಬದಲ್ಲಿ ಅನಗತ್ಯ ಸಂಘರ್ಷಕ್ಕೆ ಅವಕಾಶ ಕೊಡಬೇಡಿ. ವ್ಯವಹಾರದಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ.

ಮೀನ ರಾಶಿ

ಗುರುಗತಿಯ ಅನುಕೂಲದಿಂದ ಕೆಲವು ವಿಚಾರಗಳಲ್ಲಿ ಪ್ರಗತಿ ಸಾಧ್ಯ. ವಿದೇಶಕ್ಕೆ ಸಂಬಂಧಿಸಿದ ಅವಕಾಶ ಅಥವಾ ಶುಭ ಸುದ್ದಿ ಸಿಗಬಹುದು. ಆದರೆ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚು ಮತ್ತು ದೊಡ್ಡ ಹೂಡಿಕೆಗಳನ್ನು ತಪ್ಪಿಸುವುದು ಉತ್ತಮ.

ಸೂಚನೆ: ಮೇಲಿನ ರಾಶಿಭವಿಷ್ಯ ಜ್ಯೋತಿಷ್ಯಾಧಾರಿತ ಸಾಮಾನ್ಯ ಮಾಹಿತಿಯಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಫಲಿತಾಂಶ ಭಿನ್ನವಾಗಬಹುದು.

Continue Reading

Trending