ದಿನದ ಸುದ್ದಿ
ಬಾಂಬ್ ಸೈಕ್ಲೋನ್
ಭಾರತದಲ್ಲಿ ಮಾನ್ಸೂನ್ ಪ್ರವೇಶ ಹಾಗೂ ಹಿಂದಿರುಗುವಿಕೆ ನಡುವಿನ ಅವಧಿಯಲ್ಲಷ್ಟೇ ಚಂಡಮಾರುತ (ಸೈಕ್ಲೋನ್) ಉಂಟಾಗುತ್ತವೆ. ಇಲ್ಲಿ ಸೈಕ್ಲೋನ್ ಎಂದರೆ ವೇಗದ ಗಾಳಿ, ಬಿಡದೆ ಸುರಿಯುವ ಮಳೆಯಷ್ಟೇ ಇರುತ್ತದೆ. ಆದರೆ, ವಿಶ್ವದ ವಿವಿಧ ಪ್ರದೇಶಗಳಲ್ಲಿ ಉಂಟಾಗುವ ಚಂಡಮಾರುತಗಳು ರೌದ್ರವಾಗಿರುತ್ತದೆ.
ಕೆಲ ಪ್ರದೇಶಗಳಲ್ಲಿ ಮಳೆಗಾಲದಲ್ಲಷ್ಟೇ ಅಲ್ಲದೆ ಚಳಿಗಾಲದಲ್ಲೂ ಸೈಕ್ಲೋನ್ ಉಂಟಾಗುತ್ತದೆ.ಹೀಗೆ ಚಳಿಗಾಲದಲ್ಲಿ ಉಂಟಾಗುವ ಬಿರುಗಾಳಿಗೆ ‘ಬಾಂಬ್ ಸೈಕ್ಲೋನ್’ ಎನ್ನುತ್ತಾರೆ. ಮುಖ್ಯವಾಗಿ ಉತ್ತರ ಅಮೆರಿಕ ಪ್ರದೇಶದಲ್ಲಿ ಬಾಂಬ್ ಸೈಕ್ಲೋನ್ ಉಂಟಾಗುತ್ತದೆ. ಈ ಭಾಗದಲ್ಲಿ 8 ಕೋಟಿಗೂ ಹೆಚ್ಚು ಜನ ನೆಲೆಸಿದ್ದು, ಸುಮಾರು 2.2 ಕೋಟಿ ಜನ ಕರಾವಳಿ ಪ್ರವಾಹದ ಅಪಾಯಕ್ಕೆ ಸಿಲುಕುತ್ತಾರೆ.
ಏನಿದು ಬಾಂಬ್ ಸೈಕ್ಲೋನ್?: ಚಳಿಗಾಲದ ಬಿರುಗಾಳಿ ಕ್ಷಿಪ್ರವಾಗಿ ರೂಪುಗೊಂಡು, ಹೆಚ್ಚು ವೇಗವಾಗಿ ಬೀಸುವುದರಿಂದ ಹವಾಮಾನ ಶಾಸ್ತ್ರಜ್ಞರು ಇದಕ್ಕೆ ‘ಬಾಂಬ್ ಸೈಕ್ಲೋನ್’ ಎಂದು ಹೆಸರಿಟ್ಟಿದ್ದಾರೆ. ಸುಮಾರು 24 ಗಂಟೆಗಳ ಕಾಲ ವಾತಾವರಣದ ಒತ್ತಡ 24 ಮಿಲಿಬಾರ್‌ನಷ್ಟು ಕನಿಷ್ಠ ಮಟ್ಟದಲ್ಲಿದ್ದಾಗ ಈ ಬಾಂಬ್ ಸೈಕ್ಲೋನ್‌ಗಳು ರೂಪುಗೊಳ್ಳುತ್ತವೆ. ಕೆಲವೇ ನಿಮಿಷಗಳಲ್ಲಿ ರೂಪುಗೊಂಡು ಪ್ರಚಂಡ ವೇಗದಲ್ಲಿ ಬೀಸಲಾರಂಭಿಸುತ್ತವೆ.ವಾತಾವರಣದ ಒತ್ತಡ ಕಡಿಮೆಯಾದಷ್ಟೂ, ಬಿರುಗಾಳಿಯ ತೀವ್ರತೆ ಹೆಚ್ಚಿರುತ್ತದೆ.
ಕಾರ್ಯಚಟುವಟಿಕೆ ಹೇಗೆ?: ವಾತಾವರಣದಲ್ಲಿ ಉಷ್ಣಗಾಳಿ ಮತ್ತು ಶೀತಗಾಳಿಗಳೆರಡೂ ಸಂಧಿಸಿದಾಗ ವಾತಾವರಣದಲ್ಲಿ ಭಾರಿ ವಾಯುಭಾರ ಕುಸಿತವಾಗುತ್ತದೆ. ಭೂಮಿ ಚಲನೆಯ ಪರಿಣಾಮ ಗಾಳಿಯೂ ಚಲಿಸಲಾರಂಭಿಸುತ್ತದೆ. ಇದರಿಂದ ಚಂಡಮಾರುತ ಉಂಟಾಗುತ್ತದೆ. ಈ ರೀತಿ ಉಂಟಾಗುವ ಚಂಡಮಾರುತಗಳು ಉತ್ತರಗೋಳಾರ್ಧದಲ್ಲಿ ಅಪ್ರದಕ್ಷಿಣವಾಗಿ (Counterclockwise) ಸುತ್ತುತ್ತವೆ.
ಹರಿಕೇನ್, ಸೈಕ್ಲೋನ್, ಟೈಫೋನ್‌ಗಳ ವ್ಯತ್ಯಾಸ:
ಹರಿಕೇನ್, ಸೈಕ್ಲೋನ್ ಹಾಗೂ ಟೈಫೋನ್‌ಗಳೆಲ್ಲವೂ ಉಷ್ಣವಲಯದ ಬಿರುಗಾಳಿಗಳಾಗಿವೆ. ಇವೆಲ್ಲವುಗಳ ಗುಣಗಳು ಒಂದೇ ಆಗಿದ್ದು, ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗಿದೆ.
ಈ ಚಂಡಮಾರುತಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸಿದವೆಂದರೆ ಆಸ್ತಿ ಹಾಗೂ ಜೀವ ಹಾನಿ ಉಂಟುಮಾಡುತ್ತವೆ. ಉತ್ತರ ಅಟ್ಲಾಂಟಿಕ್ ಹಾಗೂ ಈಶಾನ್ಯ ಪೆಸಿಫಿಕ್ ಸಾಗರಗಳಲ್ಲಿ ಉಂಟಾಗುವ ಚಂಡಮಾರುತಗಳಿಗೆ ಹರಿಕೇನ್ ಎನ್ನುತ್ತಾರೆ.
ದಕ್ಷಿಣ ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದಲ್ಲಿ ಉಂಟಾಗುವ ಚಂಡಮಾರುತಗಳಿಗೆ ಸೈಕ್ಲೋನ್ ಎಂದೂ, ವಾಯವ್ಯ ಪೆಸಿಫಿಕ್ ಭಾಗದಲ್ಲಿ ಉಂಟಾಗುವ ಚಂಡಮಾರುತಗಳಿಗೆ ಟೈಪೋನ್‌ಗಳೆಂದು ಕರೆಯುತ್ತಾರೆ. ಇದಲ್ಲದೆ ಸ್ಥಳೀಯವಾಗಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ಪ್ರಪಂಚದ ಮುಖ್ಯ ಸ್ಥಳೀಯ ಮಾರುತಗಳು:
* ಪೋಹನ್ – ಮಧ್ಯ ಯೂರೋಪ್
* ಚಿನೂಕ್ – ರಾಕಿ ಪರ್ವತ
* ಸಾಂತಾ ಆನಾ – ಕ್ಯಾಲಿಫೋರ್ನಿಯಾ
* ಯಾಮೋ- ಜಪಾನ್
* ಜೋಂಡಾ – ಅರ್ಜೆಂಟೈನಾದ ಆ್ಯಂಡೀಸ್’
* ಪರ್ವತ
* ಬ್ರಿಕ್ ಫೀಲ್ಡರ್ – ಆಸ್ಟ್ರೇಲಿಯಾ
* ಖಾಮ್‌ಸಿನ್ – ಈಜಿಪ್
* ಸಿಮೂನ್ – ಸಹರಾ ಮರುಭೂಮಿ
* ಬ್ಯಾಕ್ ರೋಲರ್ – ಯುಎಸ್‌ಎ
* ನಾರ್ವೆಸ್ಟರ್- ಆಸ್ಟ್ರೇಲಿಯಾ ಹಾಗೂ ಪಶ್ಚಿಮ ಭಾರತ
(ಸಂಗ್ರಹ)
ವಿಡಿಯೋ ಸುದ್ದಿ ನೋಡಲು ಸುದ್ದಿದಿನ Youtube channel ಗೆ subscribe ಆಗಿ:

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ5 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ3 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ2 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

