ದಿನದ ಸುದ್ದಿ
ಈ ಹತ್ತು ಸಂಶೋಧನೆಗಳ ಇತಿಹಾಸ ತಿಳಿದರೆ ಅಚ್ಚರಿ ಪಡುತ್ತೀರಿ ?
ನಾವು ನಮ್ಮ ದಿನ ನಿತ್ಯದ ಜೀವನದಲ್ಲಿ ಬಳಸುವ ಈ 10 ಸಾಧನಗಳನ್ನು ಸಂಶೋಧಿಸಿದವರು ಮುಸ್ಲಿಮರು.
ಇಂದು ನಾವು ಜೀವಿಸುತ್ತಿರುವ ಪ್ರಪಂಚದಲ್ಲಿ ಅನೇಕ ಅನೇಕ ತಂತ್ರಜ್ಞಾನಗಳು ಬೆಳೆದು ನಿಂತಿದೆ. ತಂತ್ರಜ್ಞಾನ ಬೆಳೆದ ಹಾಗೆ ಮನುಷ್ಯನ ಜೀವನ ಕ್ರಮ ಬದಲಾಗ ತೊಡಗಿದೆ. ಈ ರೀತಿ ಬೆಳೆದು ನಿಂತ ತಂತ್ರಜ್ಞಾನದ ಹಿಂದೆ ಮುಸ್ಲಿಮರ ಕೊಡುಗೆ ಇದೆ ಎಂದ್ರೆ ನಂಬ್ತೀರಾ..? ಯಾಕೆ ನಂಬಲ್ವ…? ಹಾ… ನಂಬ್ಲೇ ಬೇಕು. ಯಾಕಂದ್ರೆ ಮುಸ್ಲಿಮರ ಸಂಶೋಧನೆ 1000 ವರ್ಷಗಳ ಇತಿಹಾಸವಿದೆ. ಮುಸ್ಲಿಮರು ಸಂಶೋಧಿಸಿದ ವಸ್ತುಗಳು ಇಂದು ಡೆವಲಪ್ ಆಗಿ ಕೆಲವೊಂದು ವಸ್ತುಗಳು ಇನ್ಯಾರೋ ಯುರೋಪಿಯನ್ ಸಂಶೋಧಕನ ಹೆಸರಿನೊಂದಿಗೆ ತಳಕು ಹಾಕಿಕೊಂಡಿದೆ. ಇವತ್ತು ನಾವು ನಿಮಗೆ ಮುಸ್ಲಿಮರು ಈ ಜಗತ್ತಿಗೆ ನೀಡಿದ ಇಂದು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುವ 10 ವಸ್ತುಗಳನ್ನು ಪರಿಚಯ ಮಾಡಿಕೊಡಲಿದ್ದೇವೆ.
1.ಕಾಫಿ:
ಈ ಸಂಶೋಧನೆಗೆ 1200 ವರ್ಷಗಳ ಇತಿಹಾಸವಿದೆ. ಖಾಲಿದ್ ಎನ್ನುವ ಅರಬ್ ಹುಡುಗನೊಬ್ಬ ಇಥಿಯೋಪಿಯನ್ ಇಳಿಜಾರು ಪ್ರದೇಶಗಳಲ್ಲಿ ಆಡು ಮೇಯಿಸುತ್ತಿರುವಾಗ ಬೆಟ್ಟದ ತಪ್ಪಲಿನಲ್ಲಿ ಒಂದು ಬೀಜವು ದೊರೆಯಿತು. ಅದನ್ನು ಜಗಿದು ನೋಡಿದ ಆತನಿಗೆ ರುಚಿಸಿತು. ಬೀಜವನ್ನು ಮನೆಗೆ ಕೊಂಡು ಹೋಗಿ ನೀರಿನಲ್ಲಿ ಬೇಯಿಸಿ ಪ್ರಯೋಗ ನಡೆಸಿದಾಗ ಅದರ ಬೇಯಿಸಿದ ನೀರಿನ ರುಚಿ ಬಹಳ ಸ್ವಾದಿಷ್ಟವಾಗಿತ್ತು. ಕೊನೆಗೆ ಬೀಜವನ್ನು ಒಣಗಿಸಿ ಪುಡಿ ಮಾಡಿ ಪ್ರಯೋಗ ಮಾಡಿದ ಹೀಗೆ ಸಂಶೋಧಿಸಲ್ಪಟ್ಟ ಬೀಜವು “ಅಲ್-ಖವಾಹ್” ಎಂದು ಹೆಸರಾಯಿತು. ಇದುವೇ ಯುರೋಪ್ಗೆ ಕಾಲಿಟ್ಟಾಗ “ಕಾಫಿ” ಎಂದು ಪ್ರಸಿದ್ಧಿ ಪಡೆಯಿತು.
2. ಗಡಿಯಾರ
ನಮ್ಮ ಜೀವನವನ್ನು ಸ್ವಸ್ಥವಾಗಿ ಮುನ್ನಡೆಸಲು ನಮಗೆ ಇಂದು ಸಮಯ ಅತ್ಯಗತ್ಯವಾಗಿದೆ. ಇದನ್ನೂ ಕೂಡ ಎಂಟು ನೂರು ನೂರು ವರ್ಷಗಳ ಹಿಂದೆ ಮುಸ್ಲಿಮರು ಮಾಡಿದ್ದರು. ಆಗ್ನೇಯದ ಟರ್ಕಿಯ ಡಯಾರ್‌ಬಕೀರ್ ಎಂಬಲ್ಲಿ ಅಲ್-ಜಝಾರಿ ಎಂಬ ವ್ಯಕ್ತಿಯೊಬ್ಬರು ತುಂಬಾ ಧಾರ್ಮಿಕ ವ್ಯಕ್ತಿಯಾಗಿದ್ದರು. ಮತ್ತು ಅತ್ಯಂತ ಪರಿಣತ ಎಂಜಿನಿಯರ್ ಕೂಡ ಆಗಿದ್ದು, ಇವರು ಗಡಿಯಾರ ಎಂಬ ಸ್ವಯಂಚಾಲಿತ ಯಂತ್ರದ ಪರಿಕಲ್ಪನೆಗೆ ಜನ್ಮ ನೀಡಿದರು. 1206 ರ ಹೊತ್ತಿಗೆ ಅಲ್-ಜಝಾರಿ ಎಲ್ಲಾ ಆಕಾರಗಳ ಮತ್ತು ಗಾತ್ರಗಳ ಹಲವಾರು ಗಡಿಯಾರಗಳನ್ನು ಮಾಡಿದ್ದರು.
ಅಲ್ ಜಝಾರಿಯವರ ಗಡಿಯಾರ ಸಂಶೋಧನೆಗೆ ಪ್ರೇರಣೆಯಾದದ್ದು ಪ್ರತಿದಿನ ಮುಸ್ಲಿಮರು ಕಡ್ಡಾಯವಾಗಿ ನಿರ್ವಹಿಸುವ ಐದು ಹೊತ್ತಿನ ಪ್ರಾರ್ಥನೆಯ ಸಮಯವನ್ನು ಅರಿಯುವುದಾಗಿತ್ತು. ಸುದೀರ್ಘ ಸಂಶೋಧನೆಯ ನಂತರ ಒಂದು ಉತ್ತಮ ಗಡಿಯಾರವನ್ನು ನಿರ್ಮಿಸುವಲ್ಲಿ ಜಝಾರಿ ಯಶಸ್ವಿಯಾಗಿದ್ದರು.
3.ಕ್ಯಾಮರಾ
ಇಬ್ನ್ ಅಲ್-ಹೈಥಮ್ ದೃಗ್ವಿಜ್ಞಾನವನ್ನು ಸಂಶೋಧಿಸಿದರು. ಕಣ್ಣಿನಿಂದ ಹೊರಸೂಸುವ ಅದೃಶ್ಯವಾದ ಬೆಳಕು ದೃಷ್ಟಿಗೆ ಕಾರಣವಾಗಿದೆಯೆಂಬ ಗ್ರೀಕ್ ಕಲ್ಪನೆಯನ್ನು ಅವರು ತಿರಸ್ಕರಿಸಿದರು. ಇದರ ಬದಲಾಗಿ ಬೆಳಕಿನಿಂದ ದೃಷ್ಟಿಯು ಉಂಟಾಗುತ್ತದೆ. ಬೆಳಕು ಒಂದು ವಸ್ತುವನ್ನು ಪ್ರತಿಫಲಿಸುತ್ತದೆ ಮತ್ತು ಕಣ್ಣಿನ ಅಕ್ಷಿ ಪಟಲವನ್ನು ಪ್ರವೇಶಿಸುತ್ತದೆ. ಅಕ್ಷಿ ಪಟಲದ ತೆರೆಯಲ್ಲಿ ವಸ್ತುವಿನ ಆಕಾರವು ಮೂಡುತ್ತದೆ ಎಂದು ದೃಷ್ಟಿಯನ್ನು ಸರಿಯಾಗಿ ವಿಶ್ಲೇಷಿಸಿದರು.ಒಂದು ಬದಿಯಲ್ಲಿ ಡಾರ್ಕ್ ರೂಮ್ ನಿಂದ ಒಂದು ಪಿನ್ ಹೋಲ್(ರಂಧ್ರ) ನ ಮೂಲಕ ಬೆಳಕನ್ನು ಇನ್ನೊಂದು ಬದಿಯಲ್ಲಿ ಬಿಳಿ ಹಾಳೆಯ ಮೇಲೆ ಹಾಯಿಸಿ ಅವರು ತನ್ನ ಸಿದ್ಧಾಂತಕ್ಕೆ ಪುರಾವೆಯನ್ನು ನೀಡಿದರು.
ಈ ಪ್ರಯೋಗದಲ್ಲಿ ಬೆಳಕು ರಂಧ್ರದ ಮೂಲಕ ಬಂದಿತು ಮತ್ತು ಬಿಳಿ ಹಾಳೆಯಲ್ಲಿ ಕೋಣೆಯ ಹೊರಗಡೆ ಇರುವ ವಸ್ತುಗಳ ವಿಲೋಮ ಚಿತ್ರವೊಂದನ್ನು ಯೋಜಿಸಿತು. ಅವರು ಇದನ್ನು “ಕಮರಾ” ಎಂದು ಕರೆದರು. ಇದು ವಿಶ್ವದ ಮೊದಲ ಬಿಂಬಗ್ರಾಹಿ ಕ್ಯಾಮರಾ ಆಗಿತ್ತು.
4.ಶುಚಿತ್ವ ಸಾಧನಗಳು
ಶುಚಿತ್ವವು ಮುಸ್ಲಿಮರ ವಿಶ್ವಾಸದ ಭಾಗವಾಗಿದೆ. 10 ನೆಯ ಶತಮಾನದ ಇಸ್ಲಾಮಿಕ್ ಜಗತ್ತಿನಲ್ಲಿ ಟಾಯ್ಲೆಟ್ ಬಾತ್ರೂಮ್ ಮತ್ತು ನೈರ್ಮಲ್ಯ ಅಭ್ಯಾಸಗಳು ಕಂಡುಬರುವ ಉತ್ಪನ್ನಗಳ ಸಂಶೋಧನೆ ನಡೆಯಿತು. 13 ನೇ ಶತಮಾನದಲ್ಲಿ, ಗಡಿಯಾರ ಸಂಶೋಧಿಸಿದ ಅದೇ ಇಂಜಿನಿಯರ್ ಅಲ್-ಜಝಾರಿ, “ವುದು”(ಅಂಗಶುದ್ಧಿ) ಯಂತ್ರಗಳನ್ನು ಒಳಗೊಂಡಂತೆ ಯಾಂತ್ರಿಕ ಸಾಧನಗಳನ್ನು ವಿವರಿಸುವ ಒಂದು ಎಂಜಿನಿಯರಿಂಗ್ ಸಂಸೋಧನೆಯ ಪುಸ್ತಕವನ್ನು ಬರೆದರು.
ಈ ವುದೂ ಯಂತ್ರವು ಒಂದು ಮೊಬೈಲ್ ಡಿವೈಸ್(ಸ್ಥಳಾಂತರಿಸ ಬಹುದಾದ ವಸ್ತು) ಆಗಿತ್ತು. ಅದನ್ನು ಯಾರಾದರೂ ಅತಿಥಿ ಇದ್ದರೆ ಅವರಿಗಾಗಿ ತೆಗೆದು ಕೊಂಡು ಹೋಗಲಾಗುತ್ತಿತ್ತು. ಅತಿಥಿ ಯಂತ್ರದ ತಲೆಯನ್ನು ಸ್ಪರ್ಶಿಸಿದಾಗ ಎಂಟು ಸಣ್ಣ ರಂಧ್ರಗಳಲ್ಲಿ ನೀರು ಬರುತ್ತಿತ್ತು. ಶುದ್ಧೀಕರಣಕ್ಕಾಗಿ ಸಾಕಷ್ಟು ನೀರು ನೀಡುವುದು. ಮತ್ತು ನೀರನ್ನು ಮಿತ ಬಳಕೆ ಮಾಡಿ ಸಂರಕ್ಷಿಸುವುದು ಇದರ ಉದ್ದೇಶವಾಗಿತ್ತು. ಮುಸ್ಲಿಮರು ನಿಜವಾಗಿಯೂ ಸ್ವಚ್ಛವಾಗಿರಲು ಬಯಸುತ್ತಾರೆ ಮತ್ತು ನೀರಿನಿಂದ ಮಾತ್ರ ತೊಳೆದರೆ ಶುದ್ಧಿಯಾಗಲಾರದು ಎಂಬುದನ್ನು ಅರಿತು, ಅವರು ಸಾಬೂನು ಕಂಡು ಹಿಡಿದರು. ಇದಕ್ಕಾಗಿ ಆಲಿವ್ ಎಣ್ಣೆಯನ್ನು “ಅಲ್-ಖಲಿ” ಎಂಬ ಉಪ್ಪು-ತರಹದ ಪದಾರ್ಥದೊಂದಿಗೆ ಮಿಶ್ರ ಮಾಡಿದರು. ನಂತರ ಅದನ್ನು ಸರಿಯಾದ ಮಿಶ್ರಣವನ್ನು ಸಾಧಿಸಲು ಬೇಯಿಸಿದರು. ಅದು ಗಟ್ಟಿಯಾದ ನಂತರ ಸ್ನಾನಗೃಹಗಳಲ್ಲಿ ಬಳಸಿದರು.
5.ಸುಗಂಧ ದ್ರವ್ಯ
ಅಲ್-ಕಿಂಡಿ ಅವರು ಸುಗಂಧ ದ್ಯವ್ಯದ ಬಗ್ಗೆ ಒಂದು ಪುಸ್ತವಕವನ್ನು ಬರೆದರು. ಇದು ಇಂಗ್ಲೀಷ್ ನಲ್ಲಿ, “ಕೆಮಿಸ್ಟ್ರಿ ಆಫ್ ಪರ್ಫ್ಯೂಮ್ ಅಂಡ್ ಡಿಸ್ಟೈಲೇಶನ್ಸ್” ಎಂಬ ಹೆಸರಿನಲ್ಲಿ ಲಭ್ಯವಿದೆ. ಸುಗಂಧ ತಯಾರಿಕೆಯ ಶತಮಾನಗಳ-ಹಳೆಯ ಸಂಪ್ರದಾಯವು ಮುಸ್ಲಿಂ ವಿಜ್ಞಾನಿಗಳು ಮತ್ತು ಅವರ ಶುದ್ಧೀಕರಣದ ವಿಧಾನಗಳಿಂದ ಸಾಧ್ಯವಾಯಿ. ಕಿಂಡಿಯವರ ಪುಸ್ತಕದಲ್ಲಿ ಸಸ್ಯಗಳು ಮತ್ತು ಹೂವುಗಳನ್ನು ಬಟ್ಟಿ ಇಳಿಸಿ ಸುಗಂಧದ್ರವ್ಯ ಮತ್ತು ಔಷಧಿಗಳನ್ನು ತಯಾರಿಸುವ ವಿಧಾನಗಳನ್ನು ವಿವರಿಸಲಾಗಿತ್ತು.
6.ವಿಶ್ವ ವಿದ್ಯಾನಿಲಯಗಳು
ಜ್ಞಾನದ ಅನ್ವೇಷಣೆ ಮುಸ್ಲಿಮರ ಹೃದಯಕ್ಕೆ ಹತ್ತಿರದಲ್ಲಿದೆ. ಕುರ್‌ಆನ್‍ನ ಜ್ಞಾನವನ್ನು ಸಂಪಾದಿಸುವುದು ಅತೀ ಅವಶ್ಯಕವೆಂದು ಮುಸ್ಲಿಮರಿಗೆ ಆಜ್ಞಾಪಿಸಲಾಗಿದೆ. ಆದ್ದರಿಂದ ಫಾತಿಮಾ ಅಲ್ ಫಿಹ್ರಿ ಎಂಬ ಮಹಿಳೆಯು ಮೊರಕ್ಕೋದ ಫೆಜ್ ಎಂಬಲ್ಲಿ ಮದರಸಾ ರೂಪದ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸ್ಥಾಪನೆಯು ಅತೀ ಶೀಘ್ರದಲ್ಲೇ ಅತೀ ದೊಡ್ಡ ಧಾರ್ಮಿಕ ಶಿಕ್ಷಣ ಮತ್ತು ರಾಜಕೀಯ ಚರ್ಚೆಗಾಗಿ ಒಂದು ಸ್ಥಳವಾಗಿ ಅಭಿವೃದ್ಧಿ ಹೊಂದಿತು. ಕ್ರಮೇಣ ತನ್ನ ಶಿಕ್ಷಣವನ್ನು ಎಲ್ಲಾ ವಿಷಯಗಳಲ್ಲೂ, ವಿಶೇಷವಾಗಿ ನೈಸರ್ಗಿಕ ವಿಜ್ಞಾನಗಳಿಗೆ ವಿಸ್ತರಿಸಿತು. ಆದ್ದರಿಂದ ಇದು ಇತಿಹಾಸದಲ್ಲಿನ ಮೊದಲ ವಿಶ್ವವಿದ್ಯಾನಿಲಯ ಎಂದು ಪ್ರಸಿದ್ಧಿ ಪಡೆಯಿತು. ಫೆಜ್ನಲ್ಲಿನ “ಅಲ್-ಖರವಾಯಿನ್” ವಿಶ್ವ ವಿದ್ಯಾನಿಲಯ ಇವತ್ತಿಗೂ ಕಾರ್ಯಾಚರಿಸುತ್ತಿದೆ.
7.ಹಾರುವ ಯಂತ್ರ (ವಿಮಾನ)
ಸ್ಪೇನ್ ನ ಅಬ್ಬಾಸ್ ಇಬ್ನ್ ಫಿರ್ನಾಸ್ ಹಾರುವ ಯಂತ್ರವನ್ನು ನಿರ್ಮಿಸಲು ಮತ್ತು ವಾಸ್ತವವಾಗಿ ಹಾರಲು ನಿಜವಾದ ಪ್ರಯತ್ನವನ್ನು ಮಾಡಿದ ಮೊದಲ ವ್ಯಕ್ತಿ. 9 ನೆಯ ಶತಮಾನದಲ್ಲಿ ಅವರು ಪಕ್ಷಿ ವೇಷಭೂಷಣವನ್ನು ಹೋಲುವ ರೆಕ್ಕೆಯ ಉಪಕರಣವನ್ನು ವಿನ್ಯಾಸಗೊಳಿಸಿದರು. ಸ್ಪೇನ್ನ ಕಾರ್ಡೊಬ ಬಳಿ ತನ್ನ ಅತ್ಯಂತ ಪ್ರಸಿದ್ಧವಾದ ಪ್ರಯೋಗದಲ್ಲಿ, ಫಿರ್ನಾಸ್ ಕೆಲವು ಕ್ಷಣಗಳಿಗಾಗಿ ಮೇಲ್ಮುಖವಾಗಿ ಹಾರಿಹೋದರು. ಆದರೆ ಪಕ್ಷಿಗಳು ತಮ್ಮ ಕೊಕ್ಕಿನ ಸಹಾಯದಿಂದ ಇಳಿಯುತ್ತದೆ ಎಂಬುದನ್ನು ಅಬ್ಬಾಸ್ ಇಬ್ನ್ ಫಿರ್ನಾಸ್ ಗೆ ತಿಳಿದಿರಲಿಲ್ಲ. ಇದರಿಂದಾಗಿ ಅವರು ಅವೈಜ್ಞಾನಿಕವಾಗಿ ಕೆಳಗಿಳಿದು ಬೆನ್ನು ಮೂಳೆ ಮುರಿದು ಕೊಂಡರು.
8.ಶಸ್ತ್ರಚಿಕಿತ್ಸಾ ಉಪಕರಣಗಳು
ನಾವು 10 ನೆಯ ಶತಮಾನದಲ್ಲಿ ಪ್ರಯಾಣಿಸಿದರೆ, ಪಾಶ್ಚಾತ್ಯರಿಂದ “ಅಬುಲ್ಕಾಸಿಸ್” ಎಂದು ಕರೆಯಲ್ಪಡುವ ವ್ಯಕ್ತಿ ಶಸ್ತ್ರಚಿಕಿತ್ಸಾ ಉಪಕರಣಗಳ ಪಿತಾಮಹ. ಇವರ ಪೂರ್ಣ ಹೆಸರು “ಅಬುಲ್ ಖಾಸಿಮ್ ಖಲಾಫ್ ಇಬ್ನ್ ಅಲ್-ಅಬಾದ್ ಅಲ್-ಝಹ್ರಾವಿ”. ಇವರು ಬರೆದ “ಅಲ್-ತದ್ರಿಫ್” ಗ್ರಂಥವನ್ನು ಆ ಕಾಲದಲ್ಲಿ ಯುರೋಪಿಯನ್ನರು “ಮೆಡಿಕಲ್ ಎನ್ಸೈಕ್ಲೋಪೀಡಿಯ” ಎಂದು ಕರೆದರು. ಇದು ಸುಮಾರು ಇನ್ನೂರಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಪರಿಚಯಿಸಿದ ಒಂದು ದಿಗ್ಭ್ರಮೆಗೊಳಿಸುವ ಮಾಹಿತಿಗಳನ್ನು ಹೊಂದಿತ್ತು. ಆ ಕಾಲದಲ್ಲಿ ಶಸ್ತ್ರ ಚಿಕಿತ್ಸಾ ಪದ್ಧತಿ ಇತ್ತಾದರೂ ಅದಕ್ಕಾಗಿ ಉಪರಕರಣಗಳನ್ನು ಬಳಸುವ ಇವರ ಸಂಶೋಧನೆ ಪ್ರಸಿದ್ದಿಯಾಯಿತು.
9.ಭೂಪಟ ಮತ್ತು ದಿಕ್ಸೂಚಿ
ಇವತ್ತು ಗೂಗಲ್ ಮ್ಯಾಪ್ ಮುಂತಾದ ಟೆಕ್ನಾಲಜಿಗಳು ಅಭಿವೃದ್ಧಿ ಹೊಂದಿದೆಯಾದರೂ, ಹಿಂದಿನ ಕಾಲದಲ್ಲಿ ಮಣ್ಣಿನ ಫಲಕಗಳ ಮೇಲೆ ಭೂಪಟದ ಚಿತ್ರವನ್ನು ಬರೆದು ಅದನ್ನು ಮಾರ್ಗ ಸೂಚಿಯಾಗಿ ಬಳಸುತ್ತಿದ್ದರು. 3,500 ವರ್ಷಗಳ ಹಿಂದಿನಿಂದಲೂ ಇದನ್ನು ಬಳಸಲಾಗುತ್ತಿತ್ತು. ತದನಂತರ ಪೇಪರ್ ಟೆಕ್ನಾಲಜಿ ಅಭಿವೃದ್ಧಿಯಾದ ನಂತರ ಪೇಪರ್ ಹಾಳೆಗಳಲ್ಲಿ ಇದನ್ನು ಬಳಸಲಾಗುತ್ತಿತ್ತು. ಆದರೆ ಎಲ್ಲಾ ಕಾಲದಲ್ಲೂ ಭೂಪಟ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದವರು ಮುಸ್ಲಿಮರು ಎಂಬುದು ಗಮನಾರ್ಹ.
ಮುಸ್ಲಿಮರು ವ್ಯಾಪಾರಕ್ಕಾಗಿ ಮತ್ತು ಅವರ ಧಾರ್ಮಿಕ ಕಾರಣಗಳಿಗಾಗಿ ತಮ್ಮ ಮನೆಗಳನ್ನು ಬಿಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಜಗತ್ತಿನ ವಿವಿಧ ಪ್ರದೇಶಗಳ ಮಾರ್ಗವನ್ನು ಕಂಡುಹಿಡಿಯಲು ಪ್ರಾರಂಭಿಸಿದರು. ಇದಕ್ಕಾಗಿ ಭೂಪಟಗಳ ಬಳಕೆ ಮಾಡಿದರು ನಂತರ ಜಲಮಾರ್ಗಗಳ ಅನ್ವೇಷಣೆಗೆ ದಿಕ್ಸೂಚಿಯನ್ನು ಅಭಿವೃದ್ಧಿ ಪಡಿಸಿದರು.
10.ಅಲ್ಜೀಬ್ರಾ (ಬೀಜ ಗಣಿತ)
“ಅಲ್ಜೀಬ್ರಾ” ಎಂಬ ಪದವು ಪರ್ಷಿಯನ್ ಗಣಿತ ಶಾಸ್ತ್ರಜ್ಞ 9 ನೇ ಶತಮಾನದ ಪ್ರಸಿದ್ಧವಾದ “ಕಿಟಾಬ್ ಅಲ್-ಜಬ್ ವಾ ಲಾ-ಮುಗಾಬಲಾ” ಎಂಬ ಶೀರ್ಷಿಕೆಯಿಂದ ಬಂದಿದೆ, ಇದು ಸ್ಥೂಲವಾಗಿ “ದಿ ಬುಕ್ ಆಫ್ ರೀಸನಿಂಗ್ ಅಂಡ್ ಬ್ಯಾಲೆನ್ಸಿಂಗ್” ಎಂದು ಭಾಷಾಂತರಿಸುತ್ತದೆ. ಆಲ್-ಖ್ವಾರಿಜ್ಮಿ ಬೀಜಗಣಿತದ ಪ್ರಾರಂಭವನ್ನು ಪರಿಚಯಿಸುತ್ತಾನೆ. ಈ ಹೊಸ ಕಲ್ಪನೆಯು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ವಾಸ್ತವವಾಗಿ, ಇದು ಗಣಿತಶಾಸ್ತ್ರದ ಗ್ರೀಕ್ ಪರಿಕಲ್ಪನೆಯಿಂದ ಒಂದು ಕ್ರಾಂತಿಕಾರಿ ಚಲನೆಯಾಗಿತ್ತು, ಇದು ಮೂಲಭೂತವಾಗಿ ಜ್ಯಾಮಿತಿಯನ್ನು ಆಧರಿಸಿದೆ. ಗಣಿತಜ್ಞ ಅಲ್-ಖ್ವಾರಿಜ್ಮಿಯು ಒಂದು ಸಂಖ್ಯೆಯನ್ನು ಅಧಿಕಾರಕ್ಕೆ ಏರಿಸುವ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ವ್ಯಕ್ತಿ.
ಸಂಗ್ರಹ

ದಿನದ ಸುದ್ದಿ
ಮಹಾರಾಷ್ಟ್ರ | ಕೋವಿಡ್ ಸೆಂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ 13 ಸೋಂಕಿತರು ಸಾವು..!

ಸುದ್ದಿದಿನ ಡೆಸ್ಕ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಸೈ ವಿರಾರ್ನಲ್ಲಿರುವ ಕೋವಿಡ್ -19 ಕೇಂದ್ರದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 13 ರೋಗಿಗಳು ಸಾವನ್ನಪ್ಪಿದ ನಂತರ ಶುಕ್ರವಾರ ಮಹಾರಾಷ್ಟ್ರದ ಆತಂಕಗಳು ಮತ್ತಷ್ಟು ಹೆಚ್ಚಿವೆ.
ಮುಂಜಾನೆ 03: 13 ಕ್ಕೆ ಬಂಜಾರ ಹೋಟೆಲ್ನಿಂದ ತಿರುಪತಿ ನಗರದ ವಿಜಯ್ ವಲ್ಲಭ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುಂಜಾನೆ 5.50 ರ ಸುಮಾರಿಗೆ ಬೆಂಕಿ ನಂದಿಸಲಾಯಿತು. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಬೆಂಕಿ ಕಾಣಿಸಿಕೊಂಡಿದೆ.
Maharashtra | 13 people have died in a fire that broke out at Vijay Vallabh COVID care hospital in Virar, early morning today pic.twitter.com/DoySNt4CSQ
— ANI (@ANI) April 23, 2021
ವಾಸೈ ವಿರಾರ್ ನಗರ ಮುನ್ಸಿಪಲ್ ಕಾರ್ಪೊರೇಷನ್ (ವಿವಿಸಿಎಂಸಿ) ತಂಡಗಳು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಘಟನೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.
Maharashtra | 13 people have died after a fire broke out in the Intensive Care Unit (ICU) around 3am today. 21 patients including those in critical condition have been shifted to another hospital: Dr. Dilip Shah, official, Vijay Vallabh COVID care hospital, Virar pic.twitter.com/0GNUlHlgt4
— ANI (@ANI) April 23, 2021
ಪಾಲ್ಘರ್ ಅವರ ರಕ್ಷಕ ಸಚಿವರಾಗಿರುವ ಕೃಷಿ ಸಚಿವ ದಾದಾ ಭೂಸ್ ಅವರು “ನಾನು ಘಟನೆಯ ಸ್ಥಳ ತಲುಪಿದ್ದು, 13 ಸಾವುಗಳು ಉಂಟಾಗಿರುವುದನ್ನು ಖಚಿತ ಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ

ಸುದ್ದಿದಿನ, ಬೆಂಗಳೂರು :400 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಸಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ಅವರ ಕಚೇರಿ ಗುರುವಾರ ತಿಳಿಸಿದೆ.
ಇದು ಖರೀದಿಯ ಮೊದಲ ಹಂತವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದ್ದು,”ಇದನ್ನು 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ಲಸಿಕೆ ಹಾಕಲು ಬಳಸಲಾಗುತ್ತದೆ” ಎಂದು ಅದು ಹೇಳಿದೆ. ಇಲ್ಲಿಯವರೆಗೆ, ಕರ್ನಾಟಕವು 45 ವರ್ಷಕ್ಕಿಂತ ಮೇಲ್ಪಟ್ಟ 76.41 ಲಕ್ಷ ಜನರಿಗೆ ಲಸಿಕೆ ನೀಡಿದೆ.
ಇದನ್ನೂ ಓದಿ | ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿಪೂರ್ಣಗೊಳಿಸಬೇಕು : ಎಂಪಿ ಜಿ.ಎಂ. ಸಿದ್ದೇಶ್ವರ
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಥಳೀಯವಾಗಿ ತಯಾರಿಸಿದ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯನ್ನು ಕೋವಿಶೀಲ್ಡ್ ಖರೀದಿಸಲು ಯಡಿಯೂರಪ್ಪ ಅವರು ನಿರ್ಧರಿಸಿದ್ದಾರೆ.
18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರನ್ನು ಒಳಗೊಳ್ಳುವ ಮೂರನೇ ಹಂತದ ವ್ಯಾಕ್ಸಿನೇಷನ್ ಮೇ 1 ರಿಂದ ಪ್ರಾರಂಭವಾಗುತ್ತದೆ. ಕೆಲವು ಬಿಜೆಪಿ ಆಡಳಿತದ ರಾಜ್ಯಗಳು ಎಲ್ಲಾ ವಯಸ್ಕರಿಗೆ ಉಚಿತವಾಗಿ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿವೆ. ಈ ಕುರಿತು ಕರ್ನಾಟಕ ಇನ್ನೂ ಕರೆ ನೀಡಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇಲಾಖಾ ಪರೀಕ್ಷೆ ಮುಂದೂಡಿಕೆ

ಸುದ್ದಿದಿನ,ದಾವಣಗೆರೆ: 2020 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಏ.22 ರಿಂದ 30 ರವೆರೆಗೆ ನಡೆಸಲು ನಿಗದಿಪಡಿಸಿದ್ದು, ಕೋವಿಡ್ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಇದನ್ನೂ ಓದಿ | ನ್ಯಾಯಾಧಿಕರಣದಲ್ಲಿ ತರಬೇತಿ ನೀಡಲು ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಹಾಜರಾಗಬೇಕಿದ್ದು, ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಡಿಸಿರುವ ಆದೇಶದ ಮಾರ್ಗಸೂಚಿಗಳನ್ನು ಪಾಲಿಸುವ ಉದ್ದೇಶದಿಂದ ಏ.21 ರಿಂದ ಮೇ 4 ರವರೆಗೆ ರಾತ್ರಿ ಮತ್ತು ವಾರಾಂತ್ಯದವರೆಗೂ ಕಫ್ರ್ಯೂ ಜಾರಿಯಾಗಿರುವುದರಿಂದ ಮುಂದಿನ ಪರೀಕ್ಷಾ ದಿನಾಂಕವನ್ನು ನಂತರದ ದಿನಗಳಲ್ಲಿ ಆಯೋಗದ ಅಂತರ್ಜಾಲ http://kpsc.kar.nic.in ರಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ನಿಶ್ಚಿತಾರ್ಥ ಸಂಭವ! ಶನಿವಾರ- ರಾಶಿ ಭವಿಷ್ಯ ಏಪ್ರಿಲ್-17,2021
-
ನಿತ್ಯ ಭವಿಷ್ಯ5 days ago
ಈ ರಾಶಿಯವರಿಗೆ ಸಂಜೆಯೊಳಗೆ ಒಂದು ಖುಷಿ ಸಂದೇಶ! ಭಾನುವಾರ- ರಾಶಿ ಭವಿಷ್ಯ ಏಪ್ರಿಲ್-18,2021
-
ದಿನದ ಸುದ್ದಿ5 days ago
ಸಾಮಾಜಿಕ ಸಂವರ್ಧನೆಗೆ ಸಾಹಿತ್ಯಿಕ ಚರ್ಚೆ ಅವಶ್ಯ : ಹಿರಿಯ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ
-
ದಿನದ ಸುದ್ದಿ5 days ago
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ
-
ದಿನದ ಸುದ್ದಿ3 days ago
ಹಳೇ ಕುಂದುವಾಡ ಮನಾ ಯುವ ಬ್ರಿಗೇಡ್, ಜರವೇ ನಾಲ್ಕನೇ ವಾರ್ಷಿಕೋತ್ಸವ | ಯುವಕರ ಸಮಾಜ ಮುಖಿ ಕೆಲಸಗಳು ಉತ್ತಮ ನಾಯಕತ್ವಕ್ಕೆ ಬುನಾದಿ : ಮೇಯರ್ ಎಸ್.ಟಿ.ವೀರೇಶ್
-
ದಿನದ ಸುದ್ದಿ5 days ago
ಡೀಲರ್ಶಿಪ್ಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ದಾವಣಗೆರೆ | ಮೇ 04 ರವರೆಗೆ ರಾತ್ರಿ ಕಫ್ರ್ಯೂ ಹಾಗೂ ವಾರಾಂತ್ಯ ಕಫ್ರ್ಯೂ ಘೋಷಣೆ