ರಾಜಕೀಯ
ಪಬ್ಲಿಕ್ ರಂಗಣ್ಣನನ್ನು ಹುಚ್ಚ ಎಂದ ಅಟ್ಯಾಕ್ ಅರ್ಜುನ್
ಸುದ್ದಿ ದಿನ ಡೆಸ್ಕ್: ಪಬ್ಲಿಕ್ ಟಿವಿ ಸಂಪಾದಕ ಹೆಚ್ ಆರ್ ರಂಗನಾಥ್ ಅವರನ್ನು ಫೆಸ್ಬುಕ್ನಲ್ಲಿ ಟೀಕಿಸಿರುವ ಕಾಂಗ್ರೆಸ್ ಬೆಂಬಲಿಗನೊಬ್ಬನ ವಿಡಿಯೊ ವೈರಲ್ ಆಗಿದೆ.
ತನ್ನನ್ನು ಅಟ್ಯಾಕ್ ಅರ್ಜುನ್ ಎಂದು ಪರಿಚಯಿಸಿಕೊಳ್ಳುವ ಈತ ರಂಗನಾಥ್ ಅವರನ್ನು ಏಕ ವಚನದಲ್ಲಿ ಟೀಕಿಸಿದ್ದಾನೆ.
‘ರಂಗನಾಥ್ ಅವರೇ ನಿಮಗೇನಾದ್ರು ಮಾನ ಮರ್ಯಾದೆ ಇದೆಯಾ? ನೀನೊಬ್ಬ ಹುಚ್ಚ, ಸುದ್ದಿ ನಿರೂಪಣೆ ಪ್ರಾಥಮಿಕ ತಂತ್ರಗಳೂ ನಿನಗೆ ಗೊತ್ತಿಲ್ಲ. ನೀನು ಮತ ಹಾಕದೆ ಬಂದು ಜನಕ್ಕೆ ಏನು ಪಾಠ ಹೇಳ್ತಿಯಾ?’ ಎಂದು ಕ್ಲಾಸ್ ತೆಗೆದುಕೊಂಡಿದ್ದಾನೆ.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದಲ್ಲಿ ಹಣಕಾಸು ಸಚಿವ ಸ್ಥಾನ ಯಾರಿಗೆ ನೀಡಬೇಕೆಂಬ ಚರ್ಚೆಯೊಂದರಲ್ಲಿ ರಂಗನಾಥ್ ಅವರು ಕಾಂಗ್ರೆಸ್ ನಾಯಕರು ಹಾಗು ಪಕ್ಷ ಕುರಿತು ಕಟುವಾಗಿ ಮಾತನಾಡಿದ್ದರು. ಇದರಿಂದ ಕೆಂಡಾ ಮಂಡಲವಾದ ಅರ್ಜುನ್ ಎಂಬ ಕಾರ್ಯಕರ್ತ ತನ್ನ ಆಕ್ರೋಶವನ್ನು ವಿಡಿಯೊದಲ್ಲಿ ವ್ಯಕ್ತಪಡಿಸಿದ್ದಾನೆ.
ದಿನದ ಸುದ್ದಿ
ವಿಜಯನಗರ ಜಿಲ್ಲೆ ರಚನೆ; ಆಕ್ಷೇಪಣೆ ಪರಿಶೀಲಿಸಿ ಶೀಘ್ರ ನಿರ್ಣಯ: ಸಚಿವ ಆನಂದಸಿಂಗ್

ಸುದ್ದಿದಿನ,ಬಳ್ಳಾರಿ: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ 30ಸಾವಿರ ಆಕ್ಷೇಪಣೆಗಳು ಬಂದಿದ್ದು;ಅವುಗಳನ್ನು ಪರಿಶೀಲಿಸಿ ಜಿಲ್ಲೆ ರಚನೆ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಗಳು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಕೊಡುವುದು ಬೇಡ ಅಂದಿದ್ದಾರೆ;ಪ್ರತಿಕ್ರಿಯೆ ನೀಡಲ್ಲ. ಜ.28ರಿಂದ ಅಧಿವೇಶನ ಆರಂಭವಾಗಲಿದ್ದು,ಸಹಜವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದು ಹೇಳಿದ ಸಚಿವ ಆನಂದಸಿಂಗ್ ಅವರು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಮಾಧ್ಯಮದವರು ಪದೇಪದೆ ಕೇಳಿದ ಪ್ರಶ್ನೆಗೆ ನೋ ರಿಯಾಕ್ಷನ್ ಒನ್ಲಿ ಆ್ಯಕ್ಷನ್ ಎಂದರು.
ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದೆ.ಸಂಕಷ್ಟದ ಸಂದರ್ಭದಲ್ಲಿ ಡಿಎಂಎಫ್ ಅನುದಾನ ನೆರವಾಗಿದೆ ಎಂದು ಹೇಳಿದ ಸಚಿವ ಆನಂದಸಿಂಗ್ ಅವರು ಡಿಎಂಎಫ್ ಅನುದಾನ ಬಳಸಿಕೊಂಡು ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕಚೇರಿ ಬಳ್ಳಾರಿಯಲ್ಲಿ ಅರಂಭಿಸುವುದಕ್ಕೆ ಕ್ರಮವಹಿಸಲಾಗುವುದು ಎಂದು ಅವರು ವಿವರಿಸಿದರು.
ಮೊದಲ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆದವರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳಾಗಿಲ್ಲ. ಜಿಲ್ಲೆಯಲ್ಲಿ ನೋಂದಣಿಯಾದ 20ಸಾವಿರ ಆರೋಗ್ಯ ಸಿಬ್ಬಂದಿಯಲ್ಲಿ ಅಂದಾಜು 7ಸಾವಿರ ಜನರು ಇದುವರೆಗೆ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂಳಿದವರು ಇನ್ನೂ ಕೆಲದಿನಗಳಲ್ಲಿ ಪಡೆದುಕೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸದ ದೇವಿಂದ್ರಪ್ಪ, ಶಾಸಕ ನಾಗೇಂದ್ರ, ಡಿಸಿ ಪವನಕುಮಾರ್ ಮಾಲಪಾಟಿ,ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್,ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹನುಮಂತಪ್ಪ ಮತ್ತಿತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕುರುಬ ಎಸ್ ಟಿ ಹೋರಾಟ | ಪಾದಯಾತ್ರೆಯಲ್ಲಿ ಕಾಗಿನೆಲೆ ಶ್ರೀ ಸರ್ಕಾರಕ್ಕೆ ಕೊಟ್ರು ಡೆಡ್ ಲೈನ್..!

ಸುದ್ದಿದಿನ, ದಾವಣಗೆರೆ : ರಾಜ್ಯ ಸರ್ಕಾರಕ್ಕೆ ಒಂದರ ಮೇಲೊಂದು ತಲೆ ನೋವು ಶುರುವಾಗ್ತಿದೆ. ಒಂದು ಕಡೆ ಪಂಚಮಸಾಲಿ ಹೋರಾಟ, ಮತ್ತೊಂದೆಡೆ ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ಆಗ್ರಹ. ಕಾಗಿನೆಲೆ ಶ್ರೀ ಗಳ ನೇತೃತ್ವದಲ್ಲಿ ಹೊರಟಿರುವ ಪಾದಯಾತ್ರೆ ಬೆಣ್ಣೆನಗರಿಗೆ ಬಂದು ತಲುಪಿದ್ದು, ಮೊದಲ ಭಾರೀಗೆ ಸರ್ಕಾರಕ್ಕೆ ಕಾಗಿನೆಲೆ ಶ್ರೀಗಳು ಖಡಕ್ ವಾರ್ನಿಂಗ್ ನೀಡುವ ಡೆಡ್ ಲೈನ್ ನೀಡಿದ್ದಾರೆ.
ಆ ಒಂದು ಪಾದಯಾತ್ರೆಯಲ್ಲಿ ಕೇಳಿದ್ದು ಒಂದೇ ಘೋಷಣೆ ವಾಕ್ಯ ಬೇಕೆ ಬೇಕು ಎಸ್ ಟಿ ಬೇಕು, ಬೇಕೆ ಬೇಕು ಎಸ್ ಟಿ ಬೇಕು. ಹೌದು., ಸಾಗರೋಪಾದಿಯಲ್ಲಿ ಜನ ಆ ಒಬ್ಬ ಸ್ವಾಮಿಜಿ ಜೊತೆ ಕೈಗೊಡಿಸಿದ್ದರು, ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸದ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ.
ಮಕರ ಸಂಕ್ರಾಂತಿಗೆ ಸೂರ್ಯ ತನ್ನ ದಿಕ್ಕು ಬದಲಿಸುವಂತೆ ನಿರಂಜನಾನಂದಪುರಿ ಸ್ವಾಮೀಜಿ ಕುರುಬ ದಿಕ್ಕು ಬದಲಿಸುವ ಪಣ ತೊಟ್ಟಿದ್ದಾರೆ. ಅದಕ್ಕೆ ಜನವರಿ ೧೫ ರಂದೆ ಹಾವೇರಿಯ ಕಾಗಿನೆಲೆ ಪೀಠದಿಂದ ಪಾದಯಾತ್ರೆ ಆರಂಭಿಸಿದ್ದು ಸದ್ಯ ಪಾದಯಾತ್ರೆ ದಾವಣಗೆರೆಗೆ ಬಂದು ತಲುಪಿದೆ, ಡೊಳ್ಳು ಕುಣಿತ, ಕುಂಬಮೇಳದ ಸ್ವಾಗತದೊಂದಿಗೆ ಜನರು ಸಾಗರೋಪಾದಿಯಲ್ಲಿ ಬಂದು ಜೈ ಎಂದಿದ್ದು, ಇದು ಎಸ್ ಟಿ ಹೋರಾಟಕ್ಕೆ ಮತ್ತುಷ್ಟು ಬಲ ನೀಡಿದೆ.
ಈ ವೇಳೆ ಹೋರಾಟವನ್ನುದ್ದೇಶಿಸಿ ಮಾತನಾಡಿದ ಕಾಗಿನೆಲೆ ಶ್ರೀ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಎಸ್ ಟಿ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಶಾಂತಿಯುತವಾಗಿ ನಡೆಯುತ್ತಿದೆ. ಒಂದು ವೇಳೆ ನಮ್ಮ ಹೋರಾಟಕ್ಕೆ ಸರಿಯಾದ ಬೆಲೆ ಸಿಗದೆ ಹೋದಲ್ಲಿ ನಮ್ಮ ಹೋರಾಟ ತೀವ್ರಗೊಳ್ಳಲಿದೆ, ಟಗರು ಗುದ್ದಿದರೆ ಸಂಸತ್ ಭವನ ನಡುಗಲಿದೆ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಸೇರಿದ್ದು ಪಾದಯಾತ್ರೆಗೆ ಮತ್ತಷ್ಟು ಶಕ್ತಿ ತುಂಬಿತು.. ಇನ್ನೂ ಸಮಾವೇಶಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಆಗಮಿಸಿ, ಸಿದ್ದರಾಮಯ್ಯ ವಿರುದ್ದ ಗುಡುಗಿದ್ರು, ಸಿದ್ದರಾಮಯ್ಯ ಕೇವಲ ನಾಲ್ಕು ಜಿಲ್ಲೆಗೆ ಶಿಫಾರಸ್ಸು ಮಾಡಿದ್ರು, ಈಗ ನಾವು ಇಡೀ ಕರ್ನಾಟಕಕ್ಕೆ ST ಕೇಳುತ್ತಿದ್ದೇವೆ, ಕೈಮುಗಿದು ಕೇಳುತ್ತೇನೆ ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ನವರಿಗೆ ಟಾಂಗ್ ಕೊಟ್ರು.
|ನಿರಂಜನಾನಂದಪುರಿ ಸ್ವಾಮೀಜಿ, ಕನಕಗುರು ಪೀಠ
ಒಟ್ಟಾರೆ ಈಗಾಗಲೇ ಸಂಪುಟ ವಿಸ್ತರಣೆಯಿಂದ ಇಕ್ಕಟ್ಟಿನಲ್ಲಿ ಸಿಲುಕಿರುವ ಸರ್ಕಾರಕ್ಕೆ ಇದೀಗ ST ಹೋರಾಟ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಅದರಲ್ಲೂ ಆಡಳಿತ ಪಕ್ಷದವರೆ ಆದ ಕೆಎಸ್ ಈಶ್ವರಪ್ಪ, ಎಂ ಟಿಬಿ ನಾಗರಾಜ್, ಆರ್ ಶಂಕರ್, ಎಚ್ ವಿಶ್ವನಾಥ್ ಹೋರಾಟಕ್ಕೆ ದುಮುಕಿದ್ದು, ಸರ್ಕಾಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
| ಕೆ.ಎಸ್. ಈಶ್ವರಪ್ಪ, ಸಚಿವರು
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಾಷ್ಟ್ರೀಯ ತನಿಖಾ ದಳದಿಂದ ಸಮನ್ಸ್ ಪಡೆದಿದ್ದ ಖಾಲ್ಸಾ ಏಡ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ..!

ಸುದ್ದಿದಿನ,ನವದೆಹಲಿ: ಕಳೆದ ಎರಡು ತಿಂಗಳಿಂದ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆನ್ನೆಲುಬುನಂತಿರುವ ಖಾಲ್ಸಾ ಏಡ್ ಎಂಬ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ 2021ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ.
ಜ. 16ರಂದು ಈ ಸಂಸ್ಥೆಗೆ ದೇಣಿಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಶ್ನಿಸಿ ರಾಷ್ಟ್ರೀಯ ತನಿಖಾ ದಳವು ಸಮನ್ಸ್ ನೀಡಿತ್ತು.ಕೆನಡಾದ ಸಂಸದರಾದ ಉಪಲ್ ಅವರು ಖಾಲ್ಸಾ ಸಂಸ್ಥೆಯನ್ನು ನಾಮನಿರ್ದೇಶನಕ್ಕೆ ಮನವಿ ಮಾಡಿ ಜ. 14ರಂದು ಪತ್ರ ಬರೆದಿದ್ದರು.
ಇಂಗ್ಲೆಂಡಿನ ಮೂಲದ ಖಾಲ್ಸಾ ಏಡ್ ಸಂಸ್ಥೆ 1999ರಲ್ಲಿ ರವೀಂದರ್ ಸಿಂಗ್ ಅವರಿಂದ ಸ್ಥಾಪನೆಯಾಯಿತು. ಸಿಖ್ ಸಮುದಾಯದ ಈ ಸಂಸ್ಥೆಯು ನಿಧಾನವಾಗಿ ವಿಶ್ವದಾದ್ಯಂತ ತನ್ನ ಸೇವಾ ಚಟುವಟಿಕೆಗಳನ್ನು ವಿಸ್ತರಿಸಿ ತು. ”ಮನುಕುಲವನ್ನು ಒಂದೆಂದು ಭಾವಿಸಿ, ಮಾನವೀಯತೆಯ ಸೇವೆ” ಮಾಡುವುದು ಈ ಸಂಸ್ಥೆಯ ಧ್ಯೇಯ.
ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನಿರಂತರವಾಗಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಖಾಲ್ಸಾ ಏಡ್, ಪ್ರವಾಹ ಸೇರಿದಂತೆ ಯಾವುದೇ ರೀತಿಯ ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಎಲ್ಲ ರೀತಿಯ ನೆರವನ್ನು ಒದಗಿಸಿದೆ.
ಇಲ್ಲಿ ಉಲ್ಲೇಖಿಸಬಹುದಾದ ಕೆಲವು ನೆರವಿನ ಚಟುವಟಿಕೆಗಳು ಇಂತಿವೆ
- 1999ರ ಟರ್ಕಿ ಭೂಕಂಪದ ವೇಳೆ ಸಂತ್ರಸ್ತರಿಗೆ ಮೂಲ ಸೌಕರ್ಯ.
- 2000ದಲ್ಲಿ ಒರಿಸಾದಲ್ಲಿ ಚಂಡಮಾರುತದಿಂದ ಉಂಟಾದ ಅನಾಹುತದ ರಕ್ಷಣಾ ಕಾರ್ಯಕ್ಕೆ ಸ್ವಯಂ ಸೇವಕರ ರವಾನೆ
- ಆಫ್ಘಾನಿಸ್ತಾನದಲ್ಲಿ 2003ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಉಪಕರಣ ಹಾಗೂ ಆರ್ಥಿಕ ನೆರವು.
- 2016ರಲ್ಲಿ ಲಂಡನ್ನಲ್ಲಿ ಉಂಟಾದ ಪ್ರವಾಹದಿಂದಾಗಿ ಸಂತ್ರಸ್ತರಿಗೆ ಶಿಬಿರಗಳ ಸ್ಥಾಪನೆ ಮತ್ತು ನೆರವು.
- ಬಾಂಗ್ಲಾ-ಮಯನ್ಮಾರ್ ಗಡಿಯಲ್ಲಿದ್ದ ರೊಹಿಂಗ್ಯಾ ನಿರಾಶ್ರಿತರಿಗೆ ಸೇವೆ.
2018ರಲ್ಲಿ ಇಡೀ ಕೇರಳವನ್ನು ನಡುಗಿಸಿದ ಪ್ರವಾಹದ ವೇಳೆ ಅತಿ ದೊಡ್ಡ ನೆರವಿನ ಕಾರ್ಯವನ್ನು ನಡೆಸಿದ ಹೆಗ್ಗಳಿಕೆ ಖಾಲ್ಸಾ ಸಂಸ್ಥೆಯದ್ದು.
ಈಗ ಪಂಜಾಬಿನಿಂದ ಆರಂಭವಾಗಿ ಕೃಷಿ ನೀತಿಗಳ ವಿರುದ್ಧ ನಡೆಯುತ್ತಿರುವ ಭಾರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಒದಗಿಸಿದ್ದು, ಬಟ್ಟೆ, ಊಟ, ವೈದ್ಯಕೀಯ ನೆರವು ಸೇರಿದಂತೆ ಎಲ್ಲ ರೀತಿಯಲ್ಲೂ ಬೆಂಬಲಕ್ಕೆ ನಿಂತಿದ್ದೆ. ಸರ್ಕಾರ ವಿರುದ್ಧದ ಹೋರಾಟಕ್ಕೆ ಈ ರೀತಿಯಲ್ಲಿ ಬೆನ್ನಿಗೆ ನಿಂತ ಕಾರಣಕ್ಕೆ ಭಯೋತ್ಪಾದಕ ಸಂಸ್ಥೆ ಎಂದು ದೂಷಿಸಿದ್ದು ಅಲ್ಲದೆ, ವಿಚಾರಣೆಗೆ ಕರೆದಿತ್ತು. ಆದರೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ವಿಚಾರಣೆ ಮುಂದೂಡಿದೆ.
ಕೃಪೆ | ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕವೇ ತವರು..!
-
ದಿನದ ಸುದ್ದಿ7 days ago
ರಾಷ್ಟ್ರೀಯ ತನಿಖಾ ದಳದಿಂದ ಸಮನ್ಸ್ ಪಡೆದಿದ್ದ ಖಾಲ್ಸಾ ಏಡ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ..!
-
ದಿನದ ಸುದ್ದಿ7 days ago
ಕುರುಬ ಎಸ್ ಟಿ ಹೋರಾಟ | ಪಾದಯಾತ್ರೆಯಲ್ಲಿ ಕಾಗಿನೆಲೆ ಶ್ರೀ ಸರ್ಕಾರಕ್ಕೆ ಕೊಟ್ರು ಡೆಡ್ ಲೈನ್..!
-
ದಿನದ ಸುದ್ದಿ4 days ago
ಸಿನಿಮಾ ಪಯಣಕ್ಕೆ ರೀ ಎಂಟ್ರಿ ಕೊಟ್ಟ ಮಂದಹಾಸ ಬೆಡಗಿ : ಬಿಂದುಶ್ರೀ
-
ದಿನದ ಸುದ್ದಿ23 hours ago
ದಾವಣಗೆರೆ | ಅತ್ಯಾಚಾರ ಅಪರಾಧಿಗೆ 15 ವರ್ಷ ಸಜೆ, 26 ಸಾವಿರ ದಂಡ
-
ದಿನದ ಸುದ್ದಿ2 days ago
ದಾವಣಗೆರೆ | ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ : ಅಂತಿಮ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳ ಆಹ್ವಾನ
-
ದಿನದ ಸುದ್ದಿ7 days ago
ನಾರಾಯಣ ಗೌಡರು ಯಾರು..? ಅಂದ ಸಚಿವ ಡಾ.ಸುಧಾಕರ್ ಕ್ಷಮೆಯಾಚಿಸಲೇ ಬೇಕು
-
ಕ್ರೀಡೆ2 days ago
ಸಹಾಯಧನ ನೀಡಲು ಕ್ರೀಡಾಪಟುಗಳಿಂದ ಪ್ರಸ್ತಾವನೆಗಳ ಆಹ್ವಾನ