ರಾಜಕೀಯ
ಸಂವಿಧಾನ ಸಂಭಾಷಣೆ ಮತ್ತು ದಲಿತ ಸಂವೇದನೆ
ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಸಂವಿದಾನ ಸಂಭಾಷಣೆ ಕಾರ್ಯಕ್ರಮಕ್ಕೆ ರಣಧೀರ ಪಡೆ ಪ್ರತಿಭಟನೆಯ ಮೂಲಕ ತಡೆಯೊಡ್ಡಿತು. ಇದು ನಮ್ಮ ಸಮಾನ ಮನಸ್ಕ ಗೆಳೆಯರ ಮಧ್ಯೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷನಾಗಿ, ದಲಿತ ಚಳುವಳಿ, ಸಂವಿದಾನ ಉಳಿಸಿ ಚಳುವಳಿ, ಮಾನವ ಹಕ್ಕು ಚಳುವಳಿಯ ಸಾಮಾನ್ಯ ಕಾರ್ಯಕರ್ತನಾಗಿ ಈ ಹೋರಾಟವನ್ನು ಯಾಕೆ ಮಾಡಿದೆವು ಎಂದು ಹೇಳಬೇಕಿದೆ. ಅದಕ್ಕಾಗಿ ಈ ಲೇಖನ….
ಸಂವಿಧಾನ ಸಂಭಾಷಣೆ ಎಂಬ ಕಾರ್ಯಕ್ರಮ ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮ ಎಂದು ಹೊರಗಿನ ಪ್ರಪಂಚ ಭಾವಿಸಿದೆ. ಆದರೆ ಅದು ಪೂರ್ಣ ಸತ್ಯವಲ್ಲ. ನಾಲ್ಕು ಕೋಟಿ ವೆಚ್ಚದ ಇಲಾಖೆಯ ಅನುದಾನದ ಎನ್ ಡಿಟಿವಿ ಮತ್ತು ಸಮೃದ್ದ ಭಾರತ ಟಿವಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮವದು. ಖಾಸಗಿ ಟಿವಿ ವಾಹಿನಿಯ ಚರ್ಚಾ ಕಾರ್ಯಕ್ರಮಕ್ಕೆ ಕನ್ನಡ ಜನಗಳ ತೆರಿಗೆ ಹಣ ಬಳಸಲಾಗಿತ್ತು.
ನಿಮಗೆ ನೆನಪಿರಬಹುದು. ಕೆಲವೇ ಕೆಲವು ತಿಂಗಳ ಹಿಂದೆ ಲಕ್ಷಾಂತರ ಜನರನ್ನು ಸೇರಿಸಿ ಐಶಾರಾಮಿಯಾಗಿ ಅಂಬೇಡ್ಕರ್ 150 ಕಾರ್ಯಕ್ರಮ ವನ್ನು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿತ್ತು. ಅದರ ಫಲಿತಾಂಶ ಏನು ಎಂಬುದನ್ನು ಈಗ ಪ್ರಶ್ನಿಸೋದು ಬೇಡ. ಅದಕ್ಕಾಗಿ ಖರ್ಚಾದ ನೂರಾರು ಕೋಟಿಯ ಲೆಕ್ಕ ಕೇಳೋದೂ ಬೇಡ. ಅಂದು ಅತಿಥಿಗಳ ಆಯ್ಕೆಯಲ್ಲಿ ಕನಿಷ್ಠ ನ್ಯಾಯ ಪಾಲಿಸಲಾಗಿತ್ತು. ದೇಶ ವಿದೇಶದ ಉಪನ್ಯಾಸಕರ ಜೊತೆಗೆ ಕನ್ನಡ ಸಾಹಿತಿ, ಚಿಂತಕರು, ಹೋರಾಟಗಾರರಿಗೆ ವೇದಿಕೆಯಲ್ಲಿ ಸಮಾನಾವಕಾಶ ಒದಗಿಸಲಾಗಿತ್ತು. ಸಾವಿರಾರು ದಲಿತರು, ಯುವಕರು, ಮಹಿಳೆಯರು ಅವರ ಉಪನ್ಯಾಸದಿಂದ ಜ್ಞಾನ ಪಡೆದುಕೊಂಡಿದ್ದರು.
ಅದರ ದುಂದುವೆಚ್ಚವನ್ನು ನಾವು ವಿರೋಧಿಸಿದ್ದರೂ ಎಲ್ಲರ ಒಳಗೊಳ್ಳುವಿಕೆಯ ಕಾರಣಕ್ಕೆ ಸ್ವಾಗತಿಸಿದ್ದೆವು. ಕೆಲ ತಿಂಗಳ ಹಿಂದೆ ನಡೆದಿದ್ದ ಈ ಕಾರ್ಯಕ್ರಮವನ್ನು ಯೂನಿವರ್ಸಿಟಿ ಸಹಯೋಗದಲ್ಲಿ ಮಾಡಲಾಗಿತ್ತು. ಅತಿಥಿಗಳ ಆಯ್ಕೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿಗೆ ಸಮಿತಿ ರಚಿಸಿ ನಡೆಸಲಾಗಿತ್ತು. ಇವತ್ತು ನಡೆಯುತ್ತಿದ್ದ ಸಂವಿಧಾನ ಸಂಭಾಷಣೆಗೆ ಅತಿಥಿಗಳನ್ನು ಯಾವ ಮಾನದಂಡದಲ್ಲಿ ಅಂತಿಮಗೊಳಿಸಲಾಯಿತು ? ಟಿವಿ ಕಾರ್ಯಕ್ರಮಕ್ಕೆ ಬೇಕಾದ ರೀತಿಯ ಟಿಆರ್ ಪಿ ವ್ಯಕ್ತಿಗಳನ್ನು ಮಾತ್ರ ಕರೆಯಲಾಗಿತ್ತು. ಕನ್ನಡ ನೆಲದ ಸಾಹಿತಿಗಳು, ಹೋರಾಟಗಾರರು, ದಲಿತ ಚಿಂತಕರಿಗೆ ವೇದಿಕೆಯಿರಲಿಲ್ಲ.
ಕನ್ನಡದ ದಲಿತ ಹೋರಾಟ, ಸಂವಿದಾನ ಉಳಿಸಿ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ದೇವನೂರು ಮಹಾದೇವ, ಮಾವಳ್ಳಿ ಶಂಕರ್, ಡಾ ಸಿ ದ್ವಾರಕನಾಥ್, ದಿನೇಶ್ ಅಮಿನ್ ಮಟ್ಟು, ಕೆ ಎಲ್ ಅಶೋಕ್, ಡಾ ವಾಸು, ದು ಸರಸ್ವತಿ, ಎನ್ ಮಹೇಶ್, ಮಾರಸಂದ್ರ ಮುನಿಯಪ್ಪ, ಹರಿರಾಮ್, ಮಾರುತಿ ಮಾನ್ಪಡೆ, ಬರಗೂರು ರಾಮಚಂದ್ರ ಸೇರಿದಂತೆ ಯಾರೂ ಸಮಾಜ ಕಲ್ಯಾಣ ಇಲಾಖೆಗೆ ಗೊತ್ತೇ ಇಲ್ಲವೇ ? ಉತ್ತರ ಭಾರತದ ಸೊಫೆಸ್ಟಿಕೇಟೆಡ್ ಭಾಷಣಕಾರರು ಮತ್ತು ಬಿಜೆಪಿಗರನ್ನು ಕರೆಸಿ ಪ್ಯಾನಲ್ ಡಿಸ್ಕಷನ್ ಮಾಡಿ ಅರಚಾಟ ಮಾಡಿಸಲು ನಮ್ಮ ಸಮಾಜ ಕಲ್ಯಾಣ ಇಲಾಖೆಯ ಕೋಟಿ ಕೋಟಿ ಹಣವನ್ನು ನೀಡಬೇಕೇ ?
ಇವತ್ತು ನಮ್ಮ ಹೋರಾಟವನ್ನು ವಿರೋಧಿಸುವವರಿಗೆ ಇಂತಹ ಒಂದು ಕಾರ್ಯಕ್ರಮ ನಡೆಯುವುದಿತ್ತು ಎಂದು ಗೊತ್ತಾಗಿದ್ದು ಕಾರ್ಯಕ್ರಮ ರದ್ದಾದಾಗಲೇ ! ಹೊಟೇಲ್ ಅಶೋಕಾ ಎಂಬ ಸೆವೆನ್ ಸ್ಟಾರ್ ಹೊಟೆಲ್ ನಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ “ನನ್ನ ಜನಕ್ಕೆ” ಪ್ರವೇಶವಿರಲಿಲ್ಲ. ಸೂಟು ಬೂಟಿನ ಮಂದಿಗೆ ಮಾತ್ರ ಪ್ರವೇಶವಿತ್ತು. ಅದೂ 600 ಜನರಿಗೆ ಮಾತ್ರ. ಆನ್ ಲೈನ್ ನಲ್ಲಿ ನೊಂದಣಿ ಮಾಡಿಕೊಂಡು ಪ್ರವೇಶ ಪತ್ರವನ್ನು ಪಡೆಯಬೇಕಿತ್ತು. ನನ್ನ ಜನಗಳು ಆನ್ ಲೈನ್ ಪರಿಣತರಲ್ಲ. ನನ್ನ ಜನಗಳ ವೇಷಭೂಷನ ನೋಡಿದರೆ ಹೊಟೇಲ್ ಅಶೋಕದ ಸೂಟುದಾರಿ ವಾಚ್ ಮೆನ್ ಗೇಟು ತೆರೆಯಲ್ಲ. ಇದನ್ನೇ ಆಧುನಿಕ ಭಾರತದ ಬ್ರಾಹ್ಮಣ್ಯ ಎನ್ನುತ್ತಾರೆ.
ಸಮಾಜ ಕಲ್ಯಾಣ ಇಲಾಖೆಗೆ ಭ್ರಷ್ಟಾಚಾರದ ಹೊರತಾದ ಕಾರಣವಿದ್ದರೆ ಈ ಕಾರ್ಯಕ್ರಮವನ್ನು ವಸಂತನಗರದ ಅಂಬೇಡ್ಕರ್ ಭವನದಲ್ಲೋ, ಟೌನ್ ಹಾಲ್ ನಲ್ಲೋ, ಅರಮನೆ ಮೈದಾನದಲ್ಲೋ ನಡೆಸಬಹುದಿತ್ತು. ಅಥವಾ ಯಾವುದಾದರೂ ಯೂನಿವರ್ಸಿಸಿ ಮೂಲಕವಾದರೂ ಮಾಡಬಹುದು. ಒಂದಷ್ಟು ವಿದ್ಯಾರ್ಥಿಗಳು, ಯುವಕರು ಈ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ತೊಡಗಿಕೊಂಡು ಸಂವಿದಾನ ಉಳಿಸುವ ಹೋರಾಟಗಾರರಾಗುತ್ತಿದ್ದರು. ಆದರೆ ಈ ಕಾರ್ಯಕ್ರಮದ ಪ್ರತಿಯೊಂದು ವ್ಯವಸ್ಥೆಯನ್ನು ಬಹುರಾಷ್ಟ್ರೀಯ ಕಾರ್ಪೋರೇಟ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ರಿಜಿಸ್ಟ್ರೇಷನ್, ಊಟ, ಅತಿಥಿ ಸತ್ಕಾರ ಎಲ್ಲವೂ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಗುತ್ತಿಗೆ. ಅವರಿಗೆ ದಲಿತ ಸಾಹಿತಿಯೂ ಗೊತ್ತಿಲ್ಲ, ಹೋರಾಟ ಅಂದರೇನು ಎಂದೇ ತಿಳಿದಿಲ್ಲ.
ಪ್ರತಿಯೊಬ್ಬರಿಗೂ 2500 ಬೆಲೆಯ ಊಟ, 350 ಬೆಲೆಯ ಟೀ ಕಾಫಿ, 700 ರೂಪಾಯಿ ಸಂಜೆಯ ಕಾಫಿ ಮತ್ತು ಲಘುಉಪಹಾರ, 1500 ರೂಪಾಯಿ ಬೆಲೆಯ ಬೆಳಗಿನ ಉಪಹಾರದ ವ್ಯವಸ್ಥೆಯನ್ನು 600 ಜನರಿಗೆ ಮಾಡಲಾಗಿತ್ತು. 35 ಸಾವಿರ ರೂಪಾಯಿ ಬೆಲೆಯ ಸೂಟ್ ರೂಂ, ಪ್ರತೀ ಗೆಸ್ಟ್ ಗೆ ಅತಿಥಿ ಸತ್ಕಾರಕ್ಕೆ ಕೆಎಎಸ್ ಅಧಿಕಾರಿ… ಈ ರೀತಿ ಒಟ್ಟು ನಾಲ್ಕು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತೆ. ಅಲ್ಲೆಲ್ಲೂ ಕನ್ನಡ ದಲಿತರಿಗೆ ಬಿಡಿ, ಕನ್ನಡದ ಸಾಹಿತಿ ಚಿಂತಕ, ದಲಿತ ಹೋರಾಟಗಾರರಿಗೂ ಪ್ರವೇಶವಿಲ್ಲ. ಟಿವಿ ಟಿಆರ್ ಪಿ ಹೊಂದಿರುವ ಪ್ಯಾನಲ್ ಡಿಸ್ಕಷನ್ ನಲ್ಲಿ ಅರಚಾಡುವ ಭಾಷಣಕಾರರಿಗೆ ಮಾತ್ರ ಪ್ರವೇಶ ! ಈ ಕಾರ್ಯಕ್ರಮಕ್ಕೆ ನಮ್ಮ ಸರಕಾರದ ತೆರಿಗೆ ಹಣ ಬಳಸಬೇಕೇ ? ಈ ಆಧುನಿಕ ಬ್ರಾಹ್ಮಣ್ಯದ ಭ್ರಷ್ಟಾಚಾರದ ಕಾರ್ಯಕ್ರಮವನ್ನು ನೋಡಿಯೂ ಸುಮ್ಮನಿರಬೇಕೇ ?
ಬಸವಣ್ಣನ ಅನುಯಾಯಿ, ಲಕ್ಷಾಂತರ ಬಡವರ ಬದುಕು ಬೆಳಗಿಸಿದ ಸಂತ ಶಿವಕುಮಾರ ಸ್ವಾಮಿಗಳ ನಿಧನದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಶೋಕಾಚರಣೆಯ ಆದೇಶವನ್ನು ಉಲ್ಲಂಘಿಸಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಕನ್ನಡದ ಜನಗಳಿಗೆ ಉಪಯೋಗವಿಲ್ಲದ, ಕನ್ನಡದ ದಲಿತರಿಗೆ ಪ್ರವೇಶವಿಲ್ಲದ, ದಲಿತ ಸಂವೇದನೆಯಿಲ್ಲದ, ಚಳುವಳಿ ಸಂವೇದನೆ ಇಲ್ಲದ ಈ ಕಾರ್ಯಕ್ರಮಕ್ಕೆ ಕನ್ನಡದ ಸಂವೇದನೆಯೂ ಇರಲಿಲ್ಲ. ಆದ್ದರಿಂದ ಪ್ರತಿಭಟಿಸಿ ಕಾರ್ಯಕ್ರಮ ನಿಲ್ಲಿಸಿದೆವು. ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ನಮ್ಮ ಜನಗಳ ಕಾರ್ಯಕ್ರಮವಲ್ಲದ ಈ ಕಾರ್ಯಕ್ರಮಕ್ಕೆ ಬಿಡುಗಡೆಯಾದ ನಮ್ಮ ಜನಗಳ ತೆರಿಗೆ ಹಣವಾದ ಇಲಾಖಾ ಅನುದಾನವನ್ನು ತಡೆ ಹಿಡಿಯಬೇಕು. ಅದು ಕನ್ನಡದ ದಲಿತೋದ್ದಾರಕ್ಕೆ ಮೀಸಲಾದ ಹಣ. ಅದು ನಮಗೇ ಸೇರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಚಾಲ್ತಿಯಲ್ಲಿರುತ್ತದೆ.
-ಬಿ.ಹರೀಶ್ ಕುಮಾರ್
ರಾಜ್ಯಾಧ್ಯಕ್ಷ
ಕರ್ನಾಟಕ ರಣಧೀರ ಪಡೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಕ್ರೀಡೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಬದಲಾಯಿಸದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ
ಸುದ್ದಿದಿನಡೆಸ್ಕ್:ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಹೊಸ ಕರೆನ್ಸಿಯನ್ನು ಪರಿಚಯಿಸುವುದಾಗಲಿ ಅಥವಾ ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಅನ್ನು ಬದಲಿಸಿ ಬೇರೆ ಕರೆನ್ಸಿಗಳನ್ನು ಬೆಂಬಲಿಸುವ ಕೆಲಸ ಮಾಡದಿರಲು ಬದ್ಧವಾಗಿರಬೇಕು, ಇಲ್ಲವಾದಲ್ಲಿ, 100 ಪ್ರತಿಶತ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ಅವರು, ಈ ದೇಶಗಳು ಯುಎಸ್ ಡಾಲರ್ ಅನ್ನು ಬದಲಿಸುವ ಕೆಲಸ ಮಾಡುವುದಿಲ್ಲ ಎಂಬ ಬದ್ಧತೆಯ ಅಗತ್ಯವಿದೆ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಬ್ರಿಕ್ಸ್ ಅಮೆರಿಕಾ ಡಾಲರ್ ಅನ್ನು ಬದಲಿಸುವ ಯಾವುದೇ ಅವಕಾಶವಿಲ್ಲ, ಮತ್ತು ಇದನ್ನು ಪ್ರಯತ್ನಿಸುವ ಯಾವುದೇ ದೇಶ ಅಮೆರಿಕದೊಂದಿಗಿನ ಸಂಬಂಧಗಳಿಗೆ ವಿದಾಯ ಹೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ವಿಶ್ವ ಏಡ್ಸ್ ದಿನ; ಎಚ್ಐವಿ ಚಿಕಿತ್ಸೆ – ನಿರ್ಮೂಲನೆ ಕುರಿತು ಜಾಗೃತಿ ಅಭಿಯಾನ
ಸುದ್ದಿದಿನಡೆಸ್ಕ್:ಅಕ್ವೈರ್ಡ್ ಇಮ್ಯುನೊ ಡೆಫಿಷಿಯನ್ಸಿ ಸಿಂಡ್ರೋಮ್-ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ.
ಎಚ್ಐವಿ ವಿರುದ್ಧದ ಹೋರಾಟದಲ್ಲಿ ಜನರು ಒಂದಾಗಲು ಮತ್ತು ಎಚ್ಐವಿ ಯೊಂದಿಗೆ ಬದುಕು ಸಾಗಿಸುತ್ತಿರುವವರಿಗೆ ಬೆಂಬಲ ಸೂಚಿಸಲು ಈ ದಿನವು ಅವಕಾಶವನ್ನು ಒದಗಿಸುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಅವರು ಮಧ್ಯಪ್ರದೇಶದ ಇಂದೋರ್ನಲ್ಲಿಂದು ವಿಶ್ವ ಏಡ್ಸ್ ದಿನ 2024 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವರ್ಷದ ವಿಶ್ವ ಏಡ್ಸ್ ದಿನ, ಏಡ್ಸ್ ಕುರಿತು ಜಾಗೃತಿ ಮೂಡಿಸುವುದು, ಚಿಕಿತ್ಸಾ ವಿಧಾನಗಳನ್ನು ಉತ್ತೇಜಿಸುವುದು ಮತ್ತು ಎಚ್ಐವಿ-ಏಡ್ಸ್ ನಿಂದ ಪೀಡಿತರ ವಿರುದ್ಧದ ತಾರತಮ್ಯವನ್ನು ತೊಡೆದುಹಾಕುವುದರ ಮೇಲೆ ಕೇಂದ್ರೀಕರಿಸುತ್ತದೆ. ’ಸರಿಯಾದ ಮಾರ್ಗವನ್ನು ತೆಗೆದುಕೊಳ್ಳಿ’ ಎಂಬುದು 2024 ರ ಘೋಷವಾಕ್ಯವಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಎನ್ಎಸಿಓ, 1992 ರಿಂದ ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತಿದೆ. ಈ ಆಚರಣೆಗಳು 2030 ರ ವೇಳೆಗೆ ಏಡ್ಸ್ಅನ್ನು ನಿರ್ಮೂಲನೆಗೊಳಿಸುವ ಜಾಗತಿಕ ಗುರಿಯನ್ನು ಅನುಸರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಬದಲಾಯಿಸದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ
-
ದಿನದ ಸುದ್ದಿ6 days ago
ಇಂದು ವಿಶ್ವ ಏಡ್ಸ್ ದಿನ; ಎಚ್ಐವಿ ಚಿಕಿತ್ಸೆ – ನಿರ್ಮೂಲನೆ ಕುರಿತು ಜಾಗೃತಿ ಅಭಿಯಾನ
-
ಕ್ರೀಡೆ3 days ago
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ರಾಘವೇಂದ್ರ ಎನ್ ಬಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
-
ದಿನದ ಸುದ್ದಿ2 days ago
ಚನ್ನಗಿರಿ |ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ
-
ಕ್ರೀಡೆ3 days ago
ಅದ್ವಿತೀಯ 2024ರಲ್ಲಿ ಜಿಎಂಐಟಿ ಕಾಲೇಜಿನ ಸಿಎಸ್ಇ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನ
-
ದಿನದ ಸುದ್ದಿ4 days ago
ಫೆಂಗಲ್ ಚಂಡಮಾರುತ | ರಾಜ್ಯದ ವಿವಿಧೆಡೆ ಮಳೆ ; ಕೆಲವು ಜಿಲ್ಲೆಯಲ್ಲಿ ರಜೆ ಘೋಷಣೆ
-
ಕ್ರೀಡೆ4 days ago
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ2 days ago
ವಿಶಾಖಪಟ್ಟಣಂನಲ್ಲಿ ಆಲ್ ಇಂಡಿಯ ಕ್ರೀಡಾಕೂಟಕ್ಕೆ ಪೇದೆ ಕೆ.ಆರ್.ಹುಲಿರಾಜ ಆಯ್ಕೆ