ದಿನದ ಸುದ್ದಿ
ವಿಡಿಯೊ | ಜನತಾ ಕರ್ಫ್ಯೂ : ದಾವಣಗೆರೆ ಸಂಪೂರ್ಣ ಬಂದ್
ದಾವಣಗೆರೆ, ಸುದ್ದಿದಿನ : ಕೊರೋನಾ ಸೋಂಕು ತಡೆಗಟ್ಟುವ ಸಲುವಾಗಿ ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರ ಬಹುತೇಕ ಸ್ತಬ್ಧ ವಾಗಿತ್ತು.
ನಗರದ ಗುಂಡಿ ಮಹೇದವಪ್ಪ ವೃತ್ತ, ಖಾಸಗಿ ಬಸ್ ನಿಲ್ದಾಣ, ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ, ಅಶೋಕ ರಸ್ತೆಯಲ್ಲಿ ಅಲ್ಲಲ್ಲಿ ಆಟೋಗಳು ಸಂಚರಿಸುತ್ತಿದ್ದದ್ದು ಬಿಟ್ಟರೆ ಉಳಿದಂತೆ ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಮಗು : ಆತಂಕದ ಕ್ಷಣಗಳು
- ರುದ್ರಪ್ಪ ಹನಗವಾಡಿ
ಮದುವೆಯಾಗಿ 1-2 ವರ‍್ಷ ಮಕ್ಕಳ ಕನಸು ಬೇಡ ಎಂದು ಯೋಚಿಸಿದ್ದರೂ ಅದೇನು ಸಫಲವಾಗದೆ ನನ್ನ ಮಗ ಶಿಶಿರ ಆಗಮಿಸಿದ್ದ.
ಭದ್ರಾವತಿಯಲ್ಲಿ ಇಂದಿರಾ ಅವರ ಮನೆಗೆ ಹೋಗಿ ಅಲ್ಲಿಂದ ಲೇಡಿ ಡಾಕ್ಟರ್ ಬಳಿ ಹೋಗಿ ತಪಾಸಣೆ ಮಾಡಿಸಿದೆವು. ನಮ್ಮಿಬ್ಬರ ರಕ್ತದ ಗುಂಪು ಆರ್‌ಹೆಚ್ ಪಾಸಿಟಿವ್ ನೆಗೆಟಿವ್‌ಗಳಾಗಿದ್ದು ನೀವು ರ‍್ಭಿಣಿ ಆಗಲು ಸಾಧ್ಯವಿಲ್ಲ. ಇದೆಲ್ಲ ಹೇಗಾಯಿತೆಂಬ ಅಭಿಪ್ರಾಯ ತಿಳಿಸಿ, ನಮಗೆ ದಿಗಿಲು ಬೀಳುವಂತೆ ವಿವರಿಸಿದ್ದಳು. ನಮಗಾರಿಗೂ ಬೇರೆ ಡಾಕ್ಟರ್ ಪರಿಚಯವಿಲ್ಲದೆ ಇರುವಾಗ ಡಾ. ಹೆಚ್. ಶಿವರಾಂ ಅವರು ಮೆಗ್ಗಾನ್ ಹಾಸ್ಪಿಟಲ್‌ನಲ್ಲಿ ಜನರಲ್ ಫಿಜಿಸಿಯನ್ ಆಗಿ ಇರುವುದು ತಿಳಿಯಿತು.
ಶಿವರಾಂ ಡಾಕ್ಟರ್ ನಮಗೆ ಮೈಸೂರಿನಲ್ಲಿರುವಾಗ ಎಸ್‌ವೈಎಸ್ ರ‍್ಯಕ್ರಮಗಳ ಹುಡುಗರ ಆರೋಗ್ಯ ಸಮಸ್ಯೆ ಬಂದಾಗ ಉಪಚರಿಸುತ್ತಿದ್ದರು. ಡಾ. ಶಿವರಾಂ ಅವರು ಹಾಸನ ಜಿಲ್ಲೆಯ ಸಕಲೇಶಪುರದ ಹಾನಬಾಳ್ ಗ್ರಾಮದವರು. ಶಿವರಾಂ ಅವರಿಗೆ ರ‍್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ, ಸುಂದರೇಶ್, ರವರ‍್ಮಕುಮಾರ್ ಇವರೆಲ್ಲ ಪರಿಚಯವಿದ್ದವರು. ಮತ್ತು ನನಗೆ ಮೈಸೂರಿನಲ್ಲಿ ಓದುವಾಗಲೇ ಪರಿಚಯವಾಗಿದ್ದರು. ನಾನು ಮೈಸೂರು ಮಹಾರಾಜಾ ಕಾಲೇಜಿನಿಂದ ಬಿಆರ್‌ಪಿಗೆ ಬಂದದ್ದು, ನಂತರ ಮದುವೆಯಾದದ್ದು ಈಗ ನನ್ನ ಹೆಂಡತಿ ಗರ‍್ಭಿಣಿ ಆಗಿರುವ ಸುದ್ದಿ ತಿಳಿದು ಸಂತೋಷಗೊಂಡರು. ನಂತರ ಗಾಯತ್ರಿ ಭದ್ರಾವತಿಯ ಲೇಡಿ ಡಾಕ್ಟರ್ ಹೇಳಿದ ವಿಚಾರ ತಿಳಿಸಿದೆ.
ಅವರು ತಪಾಸಣೆ ನಡೆಸಿ ಇದೆಲ್ಲ ಏನೂ ಇಲ್ಲ ಇಡೀ ಏಶಿಯಾ ಖಂಡದಲ್ಲಿ ಶೇ 15ರಷ್ಟು ಜನರು ಆರ್‌ಹೆಚ್ ಪಾಸಿಟಿವ್ ನೆಗಟಿವ್ ಸಮಸ್ಯೆ ಇರುವವರು, ಅದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ ಎಂದು ಹೇಳಿ ಆಗ ಗೈನಾಕಾಲಜಿಸ್ಟ್ ಆಗಿದ್ದ ಡಾ. ಮುರುಗೇಂದ್ರಪ್ಪ ಅವರಿಗೆ ರೆಫರ್ ಮಾಡಿ ತಪಾಸಣೆ ನಡೆಸಿದ ನಂತರ ಕೆಲವು ಸಲಹೆ ನೀಡಿದರು. ಕೆಲವು ದಿನ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ ಮೇರೆಗೆ ನಾವಿಬ್ಬರೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಈ ಸಮಯದಲ್ಲಿ ಗಾಯತ್ರಿಗೆ ಹಾಲು ಮೆತ್ತನೆ ಅನ್ನ ಬಿಟ್ಟರೆ ಬೇರೇನೂ ಪಥ್ಯ ಹೇಳಿರಲಿಲ್ಲ. ನಾವು ಅದಕ್ಕಾಗಿ ಒಂದು ಸ್ಟವ್ ತಂದು ಅನ್ನ ಮತ್ತು ಹಾಲನ್ನು ನಮಗೆ ನೀಡಿದ ರೂಂನಲ್ಲಿಯೇ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ನನಗೆ ಇಂದಿರಾ ಮತ್ತವರ ಸ್ನೇಹಿತರಾದ ಸಾಕಮ್ಮ ಹಾಗೂ ಎಂ.ಬಿ. ನಟರಾಜ್ ಅವರ ಪತ್ನಿ ಲಕ್ಷ್ಮಿ ಇವರುಗಳ ಮನೆಯಿಂದ ಚೆನ್ನಾಗಿರುವ ಊಟ ಬರುತ್ತಿತ್ತು. ಜೊತೆಗೆ ಶಿವರಾಂ ಅವರ ನಿವಾಸ ಕೂಡ ಆಸ್ಪತ್ರೆ ಹತ್ತಿರವಿತ್ತು. ನನಗೆ ಅವರ ಮನೆಗೆ ಹೋಗಿ ಊಟ ಮಾಡಿಕೊಂಡು ಬರಲು ಶಿವರಾಂ ಡಾಕ್ಟರ್ ಹೇಳುತ್ತಿದ್ದರು.
ಶಿವರಾಂ ಅವರ ಶ್ರೀಮತಿ ಆಶಾ, ಅತ್ತೆ ಶಾರದಮ್ಮ ಮತ್ತವರ ತಾಯಿ ತಂದೆ ಕೂಡ ಮನೆಯಲ್ಲೇ ಇದ್ದರು. ಅವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದರು. ಶಿವರಾಂ ಅವರ ಮಾವ ಸ್ವಾತಂತ್ರ್ಯ ಹೋರಾಟಗಾರರು. ರೈತ ಸಂಘದಲ್ಲಿ ಸಕ್ರಿಯ ನಾಯಕರಾಗಿದ್ದರು. ಈ ಎಲ್ಲರ ಪರಿಚಯದಿಂದಾಗಿ ನನಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯತ್ರಿಯ ಆರೋಗ್ಯ ತಪಾಸಣೆ ಸಮಯದಲ್ಲಿ ಇದ್ದ ಆತಂಕ ದೂರವಾಗಿತ್ತು. ಪ್ರಭು ಜೊತೆಗೆ, ದಿವಾಕರ ಹೆಗ್ಗಡೆ ಆಗ ತಾನೆ ತನ್ನ ಪುಸ್ತಕದ ಅಂಗಡಿ ತೆರೆದುಕೊಂಡಿದ್ದರು. ಜೊತೆಗೆ ಲಂಕೇಶ್ ಪತ್ರಿಕೆಯ ವರದಿಗಾರನೂ ಆಗಿ ಶಿವಮೊಗ್ಗದಲ್ಲಿದ್ದರು. ನಾನು ಬಿಆರ್‌ಪಿಯಿಂದ ಊರಿಗೆ ಬರುವಾಗಲೆಲ್ಲ ನನ್ನ ಲಗ್ಗೇಜನ್ನು ಹೆಗ್ಗಡೆ ಬುಕ್ ಸ್ಟಾಲ್‌ನಲ್ಲಿಟ್ಟು ಪ್ರಭು ಜೊತೆ ಮಾತಾಡಿಕೊಂಡು ರಾತ್ರಿ ಬಿಆರ್‌ಪಿಗೆ ಹೋಗುತ್ತಿದ್ದೆ. ಹಾಗಾಗಿ ಶಿವಮೊಗ್ಗದಲ್ಲಿದ್ದ ಪ್ರಭು, ಮಂಜಪ್ಪ, ದಿವಾಕರ, ಹೆಗ್ಗಡೆ, ಡಾ. ಶಿವರಾಂ, ಎಂ.ಬಿ. ನಟರಾಜ್ ಇವರೆಲ್ಲರ ಒಡನಾಟದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯತ್ರಿ ವಿಶ್ರಾಂತಿಯಲ್ಲಿದ್ದಾಗ, ನನಗಿದ್ದ ಗೆಳೆಯರ ಸಹಾಯದಿಂದ ನಾವು ನಾವೇ ನಿಭಾಯಿಸಿಕೊಂಡೆವು. ಇಂತಹ ಸರ‍್ಭಗಳಲ್ಲಿ ಹೆಣ್ಣು ಮಕ್ಕಳಿಗೆ ಏಕಾಂಗಿತನ ಮತ್ತು ತೌರ ಮನೆ ಕಾಡುತ್ತದೆ. ಆದರೆ ಎರಡೂ ಕಡೆಯಿಂದ ನಮಗೆ ಸಾನ್ನಿಧ್ಯದ ಅನುಕೂಲ ಪಡೆಯುವ ಅವಕಾಶವಾಗಲಿಲ್ಲ. ಇದ್ದ ಸ್ನೇಹ ಬಳಗವೇ ಈ ಎಲ್ಲ ಕೊರತೆಯನ್ನು ನಮಗೆ ಪೂರೈಸಿತ್ತು.
ಆ ನಂತರ ಪ್ರತಿ ತಿಂಗಳೂ ತಪಾಸಣೆ ಮತ್ತು ಶುಶ್ರೂಷೆಯ ನಂತರ 3-4 ದಿನ ಮುಂಚಿತವಾಗಿ ಹೆರಿಗೆಗೆ ಬರಬೇಕೆಂದು ಸೂಚಿಸಿದ್ದರು. ಅದರಂತೆ ಹೋಗಿ ಆಸ್ಪತ್ರೆ ಸೇರಿದ್ದೆವು. ನಾವು ಆಸ್ಪತ್ರೆಯಲ್ಲಿ ಇದ್ದಾಗ ಡಾ. ಶಿವರಾಂ ಅವರು ನಮ್ಮಿಬ್ಬರನ್ನು ಸಂಜೆ ಊಟಕ್ಕೆ ಮನೆಗೆ ಆಹ್ವಾನಿಸಿದ್ದರು. ಅವರದು ತುಂಬಿದ ಮನೆಯಾಗಿತ್ತು. ಬಸುರಿ ಹೆಂಗಸೆAದು ಡಾ. ಶಿವರಾಂ ಅವರ ಹೆಂಡತಿ ಆಶಾ ಮತ್ತು ಅವರ ತಾಯಿ ಶಾರದಮ್ಮನವರು ವಿಶೇಷ ಅಡುಗೆ ಮಾಡಿ ಅಕ್ಕರೆಯಿಂದ ಆದರಿಸುತ್ತಿದ್ದರು. ಅಂದು ಸಂಜೆ ಅವಳಿನ್ನೂ ರ‍್ತಿ ಊಟ ಮುಗಿಸುವ ಮುಂಚೆಯೇ ಹೆರಿಗೆ ನೋವು ಕಾಣಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಡಾ. ಶಿವರಾಂ ಅವರು ದಾಖಲು ಮಾಡಿಸಿದರು. ಇಡೀ ರಾತ್ರಿ ಹೆರಿಗೆ ರ‍್ಡ್ ಒಳಗೆ ಇದ್ದ ಗಾಯತ್ರಿಗೆ ಮಾರನೆ ದಿನ ಮಧ್ಯಾಹ್ನವಾದರೂ ಹೆರಿಗೆ ಆಗಿರಲಿಲ್ಲ. ನಾನು ಹೊರಗಡೆ ಇದ್ದ ಬೆಂಚ್ ಮೇಲೆ ಕೂತು ಕಾಯುತ್ತಿದ್ದೆ. ಪ್ರಭು ಫ್ರೆಂಡ್ ಶಶಿ ಮೂಲಕ ಭದ್ರಾವತಿಗೆ ಹೋಗಿ ಇಂದಿರಾ ಅವರನ್ನು ಕರೆದುಕೊಂಡು ಬರಲು ಕಳಿಸಿದ್ದೆ. ಅವರು ಆಫೀಸಿಗೆ ರಜೆ ಹಾಕಿ ಬರುವ ಸಮಯಕ್ಕಾಗಲೇ ಗಾಯತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ದಿನಾಂಕ 11-03-81ಸಂಜೆ 4ಗಂಟೆ ಸುಮಾರಿಗೆ ಗಂಡು ಮಗು ಜನನವಾಗಿತ್ತು. ಡಾ. ಶಿವರಾಂ ಮನೆಯ ಇಬ್ಬರು ಮಕ್ಕಳು ಸೇರಿದಂತೆ ಎಲ್ಲರೂ ಬಂದು ನೋಡಿ ಸಂತಸಪಟ್ಟರು. ಮಗುವಿನ ಬೆಳವಣಿಗೆ ಹೆಚ್ಚಾಗಿದ್ದ ಕಾರಣ ಈoಡಿಛಿeಠಿs ಮುಖಾಂತರ ಮಗುವನ್ನು ಹೊರತೆಗೆಯಬೇಕಾಯಿತು ಎಂದು ಡಾಕ್ಟರ್ ಹೇಳಿದರು. ಭದ್ರಾವತಿಯಿಂದ ಬಂದ ಇಂದಿರಾ ಕೂಡಲೆ ರ‍್ಣ ಜವಾಬ್ದಾರಿ ತೆಗೆದುಕೊಂಡು, ಅಲ್ಲಿಂದ ಅವರ ಮನೆಗೆ ಕರೆದುಕೊಂಡು ಹೋಗಿ ಒಂದು ತಿಂಗಳ ಕಾಲ ಬಾಣಂತನ ಮಾಡಿ ಬಿ.ಆರ್.ಪಿಗೆ ನಾವು ಬರುವವರೆಗೆ ಮಗು ಬಾಣಂತಿಯನ್ನು ನೋಡಿಕೊಂಡದ್ದು ಮರೆಯಲಾಗದ ಘಟನೆಯಾಗಿ ಉಳಿದಿದೆ.
ಭದ್ರಾವತಿಗೆ ಮಗು ಬಾಣಂತಿ ಕೃಷ್ಣಪ್ಪನವರ ಮನೆಗೆ ಹೋಗಿ ಉಳಿದಿದ್ದೆವು. ಮಗುವಿನ ಬಾಣಂತನ ಆರೈಕೆಯನ್ನು ಮಾಡಲು ಶಿವಮೊಗ್ಗ ಮುನೀರ್ ಅವರ ತಾಯಿ ಬಚ್ಚಿಮ್ಮ ಅವರು ರ‍್ಕಾರಿ ಆಸ್ಟತ್ರೆಯಲ್ಲಿ ರ‍್ಸ ಆಗಿದ್ದವರು. ಅವರು ಬೆಳಿಗ್ಗೆ ಮತ್ತು ಸಂಜೆ ಬಂದು ಸಹಾಯ ಮಾಡುತ್ತಿದ್ದರು. ಇಂದಿರಾ ಬೆಳಿಗ್ಗೆ ಬಾಣಂತಿಗೆ ಮತ್ತು ಮತ್ತೆಲ್ಲರಿಗೂ ಅಡುಗೆ ಮಾಡಿಟ್ಟು ಆಫೀಸಿಗೆ ಹೋಗುತ್ತಿದ್ದರು. ಗಾಯತ್ರಿ ಮೌಖಿಕವಾಗಿ ಅವಳೇನು ಹೇಳದಿದ್ದರೂ ಭಾವನಾತ್ಮಕವಾಗಿ ಅವಳಿಗೆ ಬಹಳ ಕಷ್ಟದ ದಿನಗಳಾಗಿದ್ದವು. ಅವನ್ನೆಲ್ಲ ಮಗುವಿನ ಮುಖ ನೋಡಿಕೊಂಡು ಬಚ್ಚಿಮ್ಮನ ಶುಶ್ರೂಷೆಯಲ್ಲಿ ಕಾಲ ಹಾಕುತ್ತಿದ್ದಳು. ನಾನು ಕೂಡ ಮಗುವಿಗೆ ಎಣ್ಣೆ ಹಚ್ಚಿ ಬಿಸಿನೀರ ಸ್ನಾನ ಮಾಡಿಸುವುದನ್ನು ಬಚ್ಚಿಮ್ಮನಿಂದ ವಿಶೇಷವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಒಂದು ತಿಂಗಳ ನಂತರ ಬಿಆರ್‌ಪಿಯ ಮನೆಗೆ ಬಂದಿದ್ದೆವು. ಈ ನಡುವೆ ಮಾಧ್ಯಮಿಕ ತರಗತಿಯಲ್ಲಿ ಓದುತ್ತಿದ್ದ ನನ್ನ ತಂಗಿಯನ್ನು ಕರೆತಂದು ಬಿಆರ್‌ಪಿಯಲ್ಲಿ ಶಾಲೆಗೆ ಸೇರಿಸಿದ್ದೆ. ನಾವು ಬಿಆರ್‌ಪಿಗೆ ಬಂದ ಮೇಲೆ ಊರಿನಿಂದ ಅವ್ವ ಕೂಡ ಬಂದು ಸ್ವಲ್ಪ ದಿನ ಬಾಣಂತನ ಮಾಡುವ ಶಾಸ್ತ್ರ ಮಾಡಿದ್ದಳು.
ಆ ನಂತರ ಮೂರು ತಿಂಗಳಲ್ಲಿ ಮಗುವಿಗೆ ನಾಮಕರಣ ಮಾಡುವ ಸಣ್ಣ ಸಮಾರಂಭವನ್ನು ರ‍್ಪಡಿಸಿದ್ದೆವು. ಆಗ ಇಂದಿರಾ – ಕೃಷ್ಣಪ್ಪನವರು ಸೇರಿದಂತೆ ಬಿಆರ್‌ಪಿಯಲ್ಲಿನ ಕೇಶವರ‍್ತಿ, ಪ್ರಭು, ಗ್ರಂಥಪಾಲಕರಾಗಿದ್ದ ರಾಮಕೃಷ್ಣಗೌಡ ಇನ್ನೂ ಅನೇಕರು ಭಾಗವಹಿಸಿ ಶಿಶಿರ ಎಂದು ಹೆಸರಿಟ್ಟು ಸಂಭ್ರಮ ಪಟ್ಟೆವು. ಮಗುವಿಗೆ 3 ತಿಂಗಳು ಮುಗಿದ ನಂತರ ನಮ್ಮ ಮನೆ ಹತ್ತಿರದಲ್ಲೇ ಇದ್ದ ಅರವಿಂದ ಆಶ್ರಮದವರು ನಡೆಸುತ್ತಿದ್ದ ಪ್ರಾಥಮಿಕ ಶಾಲೆಗೆ ಗಾಯತ್ರಿ ಟೀಚರ್ ಆಗಿ ಸೇರಿಕೊಂಡಳು. ಶಿಶಿರನನ್ನು ಬೆಳಿಗ್ಗೆ ಸ್ನಾನ ಮಾಡಿಸಿ ತಿಂಡಿ ತಿನಿಸಿದ್ದು ಬಿಟ್ಟರೆ ಅವನನ್ನು ನಮ್ಮ ಇಡೀ ಬೀದಿಯಲ್ಲಿರುವವರು ಎತ್ತಿಕೊಂಡು ಹೋಗಿ ಊಟ ನಿದ್ದೆ ಮಾಡಿಸಿಕೊಂಡು ಸಂಜೆಗೆ ಮನೆಗೆ ತಂದು ಬಿಡುತ್ತಿದ್ದರು. ಅವನ ಆಗಮನದಿಂದ ನಮಗಿದ್ದ ಪ್ರತ್ಯೇಕತೆ ಕಳೆದು ಎಲ್ಲರೂ ನಮ್ಮನ್ನು `ಬುಡ್ಲ್ಲಿ’ ಅಪ್ಪ ಅಮ್ಮ ಎಂದು ಮಕ್ಕಳು, ದೊಡ್ಡವರು ಹೊರಗಡೆ ಹೋದಾಗ ಗುರುತಿಸಿ ಮಾತಾಡುವಂತಾಗಿತ್ತು. ನಮಗಿಂತಲೂ `ಬುಡ್ಲಿ’ಗೆ ಹೆಚ್ಚು ಪರಿಚಯದ ಹುಡುಗರ ದಂಡು ಸೃಷ್ಟಿಯಾಗಿತ್ತು. ಇನ್ನು ಇವಳು ಟೀಚರ್ ಕೆಲಸದಿಂದ ನನ್ನ ರ‍್ಥಿಕ ಸಂಕಷ್ಟಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾದವು. ನಾನು ಮಾಡಿಕೊಂಡಿದ್ದ 15 ಸಾವಿರ ಸಾಲಕ್ಕೂ ನನಗೆ ವಿಶ್ವವಿದ್ಯಾಲಯದಿಂದ ಬರಬೇಕಾಗಿದ್ದ ಅರರ‍್ಸ್ ಬಂದು ನನ್ನ ಎಲ್ಲ ಸಾಲವನ್ನು ತೀರಿಸಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.
ನಾನು ಕೆಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡದ್ದು ಮೊದಲೇ ಹೇಳಿದ್ದೇನೆ. ಅದರ ಪರೀಕ್ಷೆ ಬರೆಯಲು ಮೈಸೂರನ್ನು ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದ ಕಾರಣ 1981ರಲ್ಲೇ ಮೈಸೂರಿಗೆ ಹೋಗಿ ಸುಮಾರು 15 ದಿನಗಳ ರಜೆ ಹಾಕಿ ಪರೀಕ್ಷೆ ಬರೆದೆ. ಆ ಸಮಯದಲ್ಲಿ ರೊಟ್ಟಿ, ಚಟ್ನಿ ಪುಡಿ, ಪುಳಿಯೋಗರೆ ವಾರಕ್ಕೂ ಹೆಚ್ಚು ಆಗುವಷ್ಟನ್ನು ಮಾಡಿಕೊಂಡು ಗಂಗೋತ್ರಿಯಲ್ಲಿರುವ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ನಾವು ಮೂವರೂ ಉಳಿಯುತ್ತಿದ್ದೆವು. ನಾನು ಪರೀಕ್ಷೆಗೆ ಹೋದಾಗ ಗಾಯತ್ರಿ ಶಿಶಿರ ಇಬ್ಬರೇ ಅಲ್ಲಿರುವ ಗಿಡಮರಗಳನ್ನು ನೋಡುತ್ತಾ ಇರುತ್ತಿದ್ದರು.
ಈ ಸಮಯದಲ್ಲಿ ದೇವಯ್ಯ ಹರವೆ ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿ ಕನ್ನಡ ಅಧ್ಯಾಪಕನಾಗಿದ್ದು, ಡಿ.ಎಸ್.ಎಸ್. ಸ್ಥಾಪಕ ಸದಸ್ಯರುಗಳ ಜೊತೆ ಗಟ್ಟಿ ದನಿಯಾಗಿದ್ದರು. ನಾನು ಇರುವ ಸುದ್ದಿ ತಿಳಿದು ನಮ್ಮ ಗೆಸ್ಟ್ಹೌಸ್‌ಗೆ ಬಂದು ಪುಳಿಯೋಗರೆ ತಿಂದು `ಗಾಯತ್ರಮ್ಮ, ಎಲ್ಲಾ ಪುಳಿಯೋಗರೆ ನನಗೆ ಕೊಡಿ ರುದ್ರಣ್ಣನಿಗೆ ನಾನು ಬಿಸಿ ಮಾಂಸದೂಟ ಮಾಡಿಸುವೆ’ ಎಂದು ಹೇಳಿ ನಮ್ಮೆಲ್ಲರನ್ನು ತನ್ನ ಮನೆಗೂ ಕರೆದುಕೊಂಡು ಹೋಗಿದ್ದ. ದೇವಯ್ಯ ಹರವೆ ಮತ್ತು ಪುಷ್ಪ ನಮಗೆ ಆಗ ಪರಿಚಯವಾಗಿ ನಂತರದ ದಿನಗಳಲ್ಲಿ ಅವರ ಮನೆಗೆ ಪುಳಿಯೋಗರೆಯೊಡನೆ ಆಗಾಗ ಹೋಗಿ ಬರುತ್ತಿದ್ದೆವು.
ಬುಡ್ಲಿಯನ್ನು ನೋಡುವ ನೆಪದಲ್ಲಿ ವಿಶಾಖಪಟ್ಟಣದಲ್ಲಿದ್ದ ಗಾಯತ್ರಿಯ ದೊಡ್ಡ ಅಕ್ಕ ಶಕುಂತಲಾರ‍್ತಿ ಮತ್ತು ಅವರ ಹಿರಿಯ ಮಗಳಾದ ಮೀನಾ ಬಿಆರ್‌ಪಿಗೆ ಬಂದು ಒಂದು ದಿನ ಉಳಿದು ನಂತರ ನರಸಿಂಹರಾಜಪುರಕ್ಕೆ ಹೋಗಿದ್ದರು. ಆಗ ಅವರಿಂದ ಗಾಯತ್ರಿ ತಂದೆ ತಾಯಿ ಇಬ್ಬರಿಗೂ ನಾವಿಬ್ಬರು ಮತ್ತು `ಬುಡ್ಲಿ’ ಆರಾಮವಾಗಿ ಇರುವುದಾಗಿಯೂ ಮತ್ತು ಅವರಿವರು ತೇಲಿ ಬಿಡುತ್ತಿದ್ದ ಸುಳ್ಳಿನ ಸುದ್ದಿಗಳಲ್ಲಿ ಸತ್ಯಾಂಶವಿಲ್ಲವೆAದು ತಿಳಿಸಿ, ಅವರಿಗೆ ನಮ್ಮ ಮದುವೆಯ ಘಟನೆಯ ನಂತರ ಸ್ವಲ್ಪಮಟ್ಟಿನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.
ಕೃಷ್ಣಪ್ಪನವರು ಎಸ್‌ವೈಎಸ್ ಸಂಘಟನೆಯಲ್ಲಿ 1970ರ ದಶಕದ ಪ್ರಾರಂಭದಿAದ ಇದ್ದರೂ, ಕ್ರಮೇಣ ದಲಿತರ ಸಮಸ್ಯೆಗಳಿಗೆ ಪ್ರತ್ಯೇಕ ಸಂಘಟನೆಯ ಅವಶ್ಯಕತೆ ಕಂಡುಕೊAಡು ಭದ್ರಾವತಿಯಲ್ಲಿ ರಾಜ್ಯ ಮಟ್ಟದ ಜಾತಿ ವಿನಾಶ ಸಮ್ಮೇಳನ ಆಯೋಜಿಸಿದ್ದರು. ಭದ್ರಾವತಿಯಲ್ಲಿ ಆಗಿನ ಕೃಷ್ಣಪ್ಪನವರ ತಂಡದಲ್ಲಿ, ಎನ್. ಗಿರಿಯಪ್ಪ, ಟಿ. ರಾಜಣ್ಣ, ಹಾಲಯ್ಯ, ನರಸಿಂಹಯ್ಯ, ಚನ್ನಕೇಶವ, ಗಂಗಣ್ಣ, ಶಿವಲಿಂಗ, ಚಂದ್ರನ್, ಅತ್ತಿಗುಂದ ಕರಿಯಪ್ಪ, ಮಹಾಲಿಂಗರ‍್ತಿ ಜಿ., ಎಂಪಿಎಂನ ಕೃಷ್ಣರ‍್ತಿ ಇವರೆಲ್ಲ ಆಪ್ತ ವಲಯದಲ್ಲಿದ್ದು ಏನೇ ಹೋರಾಟದ ಕರೆ ಕೊಟ್ಟಾಗ ಬಂದು ಸೇರುತ್ತಿದ್ದರು.
ಇತರ ಮಿತ್ರ ಪಡೆ ಭದ್ರಾವತಿಯಲ್ಲಿ ದೊಡ್ಡದಿತ್ತು. ವಕೀಲ ನಾಗೇಂದ್ರರಾವ್, ಪ್ರೊ. ಚಂದ್ರಶೇಖರಯ್ಯ, ಬಿ. ರಾಜಣ್ಣ, ಶಿವಮೊಗ್ಗದ ಮುನೀರ್, ಸಾಸ್ವೆಹಳ್ಳಿ ಹಾಲಪ್ಪ, ಎಂ.ಎಲ್. ನಾಗಭೂಷಣ, ವೈ.ಎನ್. ಆಚಾರ್, ಶಿವಪ್ರಸಾದ್ (ವಿಐಎಸ್‌ಎಲ್), ಚಂದ್ರಪ್ರಸಾದ್ ತ್ಯಾಗಿ, ನಿಸಾರ್ ಅಹಮದ್, ರಾಚಪ್ಪ ಹೆಚ್, ವಾಗೀಶ್, ರಾಘವೇಂದ್ರ ರಾವ್ (ದಲಿತರ ಪರ ವಕೀಲರಾಗಿ ಮೊಕದ್ದಮೆಗಳನ್ನು ನಡೆಸುತ್ತಿದ್ದರು) ಇದ್ದರು. ಮಾದೇವ, ಸಿದ್ದಲಿಂಗಯ್ಯ, ವೆಂಕಟಸ್ವಾಮಿ, ಮುನಿವೆಂಕಟಪ್ಪ, ನಾರಾಯಣಸ್ವಾಮಿ, ದಿವಾಕರ ಹೆಗ್ಗಡೆ, ಎಂ.ಬಿ. ನಟರಾಜ್, ಸತ್ಯನಾರಾಯಣರಾವ್ ಅಣತಿ, ಚನ್ನಣ್ಣ ವಾಲೀಕಾರ, ದೇವಯ್ಯ ಹರವೆ ಇನ್ನು ಅನೇಕರು ರಾಜ್ಯದಾದ್ಯಂತ ಚೆದುರಿದ್ದ ಕೃಷ್ಣಪ್ಪನವರ ಹೋರಾಟದ ಸಂಗಾತಿಗಳಾಗಿದ್ದರು.
ಇವರೆಲ್ಲರ ಸಮಾಗಮವೆಂಬಂತೆ ಬಿಆರ್‌ಪಿಯಲ್ಲಿರುವ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ದಲಿತ ಸರ‍್ಷ ಸಮಿತಿಯ ತರಬೇತಿ ಶಿಬಿರವನ್ನು ಆಯೋಜಿಸಿದ್ದರು. ಆಗ ಬಂದ ಸಂಘಟಕರಿಗೆ ಊಟ ವಸತಿ ಮತ್ತು ಬಸ್ ರ‍್ಜ್ ಹೊಂದಿಸುವಲ್ಲಿ ಕೃಷ್ಣಪ್ಪನವರು ಪಡುತ್ತಿದ್ದ ಪಾಡನ್ನು ಬೇರೆ ಯಾವ ದಲಿತ ಸಂಘಟಕರು ಅನುಭವಿಸಿಲ್ಲ. ನಾನು ಮತ್ತು ನಮ್ಮಲ್ಲಿನ ಪ್ರಗತಿಪರ ಅಧ್ಯಾಪಕರು, ಸಹೋದ್ಯೋಗಿಗಳು ಸೇರಿ ಸ್ವಲ್ಪ ಹಣ ಸಂಗ್ರಹಿಸಿಕೊಟ್ಟಿದ್ದೆವು. ಅಲ್ಲಲ್ಲೆ ಪ್ರಗತಿಪರವಾಗಿ ಬರೆದುಕೊಂಡು ಹೋರಾಟಗಳನ್ನು ಮಾಡುತ್ತಿದ್ದ ದಲಿತರು ಅಂಬೇಡ್ಕರ್ ಸಿದ್ಧಾಂತದ ಗಟ್ಟಿ ನೆಲೆಯಲ್ಲಿ ಆತ್ಮೀಯ ಸಂಬಂಧಿಕರಂತೆ ಕೃಷ್ಣಪ್ಪನವರ ಸುತ್ತ ಒಟ್ಟುಗೂಡಿ ಇಂತಹ ಸಮಾವೇಶಗಳಲ್ಲಿ ಭಾಗವಹಿಸಿ ರ‍್ಚಿಸುತ್ತಿದ್ದರು.
ಬುಡ್ಲಿ ಬಂದ ನಂತರ, ಟೀಚರ್ ಕೆಲಸ ಸೇರಿದ ಗಾಯತ್ರಿ ಮನೆಯ ಹಿಂದೆ ಮುಂದೆ ಇದ್ದ ಜಾಗದಲ್ಲಿ ತರಕಾರಿ ಜೊತೆಗೆ ಇದ್ದ ಮಾವಿನ ಮರ ಮತ್ತು ದೊಡ್ಡ ನುಗ್ಗೆಮರ, ಸೀತಾಫಲದ ಮರಗಳನ್ನು ಸಂರಕ್ಷಿಸಿಕೊಂಡು ಸಾಕಷ್ಟು ಫಲ ಪಡೆಯುತ್ತಿದ್ದೆವು. ಬಂದ ಸಂಬಳದಲ್ಲಿ ಹತ್ತಿರದಲ್ಲಿದ್ದ ಲಕ್ಕವಳ್ಳಿಯಲ್ಲಿ ನಡೆಯುವ ಸಂತೆಗೆ ಹೋಗಿ ಅಗತ್ಯ ವಸ್ತುಗಳನ್ನು ವಾರಕ್ಕೊಮ್ಮೆ ಕೊಂಡು ಬರುತ್ತಿದ್ದೆವು. ಬಂದ ಎಲ್ಲ ಸಂಬಳದಲ್ಲಿ ದುಂದಾಗಿ ರ‍್ಚು ಮಾಡುತ್ತಾ ಉಳಿತಾಯ ಮತ್ತು ಅಚ್ಚುಕಟ್ಟುತನವಿಲ್ಲದೆ ಸ್ವಚ್ಛಂದವಾಗಿದ್ದ ನನಗೆ ಮದುವೆ ನಂತರ ಮಗು ಶಿಶಿರ ಬಂದು ಸಂಸಾರ ಜೀವನದ ಹೊಸ ಜೀವನಾನುಭವವನ್ನು ನೀಡಿತೆಂದೇ ಹೇಳಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ವಿಶ್ವಸಂಸ್ಥೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ವರ್ಷ ಕೃತಕ ಬುದ್ದಿಮತ್ತೆ ಉತ್ತಮ ಸರ್ಕಾರದ ಉಪಕರಣ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದ್ದು ಜಿಲ್ಲೆಯಲ್ಲಿ ಆಯೋಜಿಸಲಾದ ಬೃಹತ್ ಮಾನವ ಸರಪಳಿಯಲ್ಲಿ 85 ಸಾವಿರಕ್ಕಿಂತ ಹೆಚ್ಚು ಜನರು ಭಾಗಿಯಾಗುವ ಮೂಲಕ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಮತ್ತು ಶ್ರೇಷ್ಠ ಎಂದು ಸಾಬೀತು ಮಾಡಿದ್ದಾರೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಭಾನುವಾರ ಹರಿಹರದ ಮಹಾತ್ಮ ಗಾಂಧೀ ಮೈದಾನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನ್ಯಾಮತಿ ಗಡಿಯಿಂದ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 25 ಗ್ರಾಮಗಳು, 2 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಸೇರಿ ರಾಣೆಬೆನ್ನೂರು ಗಡಿವರೆಗೆ 80 ಕಿ.ಮೀ ಉದ್ದದ ಮಾನವ ಸರಪಳಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಹಾಗೂ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಾತ್ಮ ಗಾಂಧಿ ಹಾಗೂ ಡಾ;ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ಅಂದರೆ ಸ್ವಾತಂತ್ರ್ಯ, ಸಮಾನತೆ, ನ್ಯಾಯಪರತೆ ಮತ್ತು ಎಲ್ಲಾ ಮಾನವನ ಘನತೆಯನ್ನು ಕಾಪಾಡುವುದಾಗಿದೆ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲ, ಸ್ವಾತಂತ್ರ್ಯ ಮತ್ತು ಅವಕಾಶಗಳ ಮೂರ್ತರೂಪ, ಇದು ಧ್ವನಿ ಇಲ್ಲದವರಿಗೆ ಧ್ವನಿಯಾಗುತ್ತದೆ. ಸಾಮಾಜಿಕ ನ್ಯಾಯ ಕಾಪಾಡುವ ಬಲಿಷ್ಠ ವ್ಯವಸ್ಥೆ ಇದಾಗಿದ್ದು ಶ್ರೇಷ್ಠವೆಂದು ನಂಬಿದ್ದೇವೆ. ಜಾಗತಿಕವಾಗಿ ವಿಶ್ಲೇಷಣೆ ಮಾಡಿದಾಗ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆಯೋ ಎನಿಸುತ್ತದೆ, ಈ ನಿಟ್ಟಿನಲ್ಲಿ ಜನರು ನಿರಂತರ ಜಾಗರೂಕತೆ, ಪೋಷಣೆ ಮತ್ತು ರಕ್ಷಣೆ ಮಾಡಬೇಕಾಗುತ್ತದೆ.ಸರ್ವಾಧಿಕಾರಿ ಆಡಳಿತಗಳು ಸ್ಥಿರತೆಯ ಭರವಸೆ ನೀಡುತ್ತವಾದರೂ ದಬ್ಬಾಳಿಕೆ, ಭಯವುಂಟು ಮಾಡುತ್ತವೆ, ಜನರು ಮತದಾನ ಮೂಲಕ ತಮ್ಮ ಪ್ರಭುತ್ವತೆಯನ್ನು ಮೆರೆಯಬೇಕಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಸಂಸ್ಥೆಗಳ ಜವಾಬ್ದಾರಿಯ ಜೊತೆಗೆ ನಾಗರಿಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಚುನಾವಣೆಯಲ್ಲಿ ಮತ ಹಾಕುವುದಷ್ಟೆ ಮತದಾರರ ಜವಾಬ್ದಾರಿ ಮತ್ತು ಪ್ರಕ್ರಿಯೆ ಎಂದುಕೊಳ್ಳದೆ, ಸರ್ಕಾರದ ಆಗುಹೋಗುಗಳಲ್ಲಿ ನಾಗರಿಕರಾಗಿ ತೊಡಗಿಸಿಕೊಂಡು, ಇತರರ ಹಕ್ಕುಗಳನ್ನು ಗೌರವಿಸಿ ಪಾರದರ್ಶಕ ಆಡಳಿತದ ಹೊಣೆಗಾರಿಕೆ ಅರಿತುಕೊಂಡು ಆಡಳಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗವುದು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರು ಕ್ರಿಯಾಶೀಲರಾಗಿ ಚುನಾವಣೆಗಳಲ್ಲಿ ಭಾಗಿಯಾಗಬೇಕು. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕು ನೀಡಲಾಗಿದೆ, ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಮತದಾರರಾಗಲಿದ್ದು ಎಲ್ಲರೂ ಮತದಾರರಾಗಿ ಚುನಾವಣೆಗಳಲ್ಲಿ ಪ್ರಭುದ್ದ ಮತದಾರರಾಗಿ ಭಾಗಿಯಾಗಬೇಕೆಂದು ವಿದ್ಯಾರ್ಥಿಗಳ ಕುರಿತು ಮಾತನಾಡಿದರು.
ಹರಿಹರ ಶಾಸಕರಾದ ಬಿ.ಪಿ.ಹರೀಶ್ ರವರು ಸಂವಿಧಾನ ಪೀಠಿಕೆಯನ್ನು ಓದಿದರು. ಈ ವೇಳೆ ಮಾತನಾಡಿದ ಅವರು ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕøತಿ, ಪ್ರಾಂತ್ಯಗಳನ್ನು ಹೊಂದಿದ್ದರೂ ಪ್ರಜಾಪ್ರಭುತ್ವದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಸಂವಿಧಾನದಡಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಶಸ್ಸನ್ನು ಸಾಧಿಸಿ ಅಭಿವೃದ್ದಿಯಲ್ಲಿ ಶ್ರೀಮಂತ ದೇಶಗಳೊಂದಿಗೆ ಸ್ಪರ್ಧೆಯಲ್ಲಿದೆ ಎಂದರು.
ಶಿವಮೊಗ್ಗ ಗಡಿ ಗ್ರಾಮ ನ್ಯಾಮತಿ ತಾಲ್ಲೂಕಿನ ಟಿ.ಗೋಪಗೊಂಡನಹಳ್ಳಿಯಿಂದ ಹರಿಹರ ತಾಲ್ಲೂಕಿನ ಹಾವೇರಿ ಜಿಲ್ಲೆಯ ಗಡಿ ಗ್ರಾಮದವರೆಗೆ 80 ಕಿ.ಮೀ ಅಂತರದಲ್ಲಿ 85 ಸಾವಿರಕ್ಕಿಂತ ಹೆಚ್ಚಿನ ಜನರು ಭಾಗಿಯಾಗಿ, ಇದರಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ವಿವಿಧ ವೇಷಭೂಷಣಗಳಲ್ಲಿ ಭಾಗಿಯಾಗಿದ್ದರು. ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಕಲಾವಿದರು, ಸಂಘ, ಸಂಸ್ಥೆಯವರು, ಸರ್ಕಾರಿ ನೌಕರರು, ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಮಂದಿ ರಸ್ತೆಯುದ್ದಕ್ಕೂ ಎಡಬದಿಯಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಸಂವಿಧಾನ ಪೀಠಿಕೆ ವಾಚನ ಮಾಡಿದರು. ಹರಿಹರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ದಗಂಗಾ ಶಾಲೆ ವಿದ್ಯಾರ್ಥಿಗಳು ವಿನೂತನವಾಗಿ ಭಾರತ ಭೂಪಟ ರಚನೆ ಮಾಡಿದರು. ವೇದಿಕೆಯಲ್ಲಿ ಭಾಗವಹಿಸಿದ್ದ ಗಣ್ಯರು ಸಸಿಗಳನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಿದ್ದಗಂಗಾ ಶಾಲೆ ಜಯಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
HAL | ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹೆಚ್.ಎ.ಎಲ್ ಬೆಂಗಳೂರು ಇವರು ಐ.ಟಿ.ಐ. ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಯನ್ನು ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 5 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಅಭ್ಯರ್ಥಿಗಳು http://apprenticeshipindia.gov.in
ಈ ವೆಬ್‍ಸೈಟ್‍ನಲ್ಲಿ ಅಪ್ರೆಂಟೀಸ್‍ಗಾಗಿ ನೋಂದಾಯಿಸಿ, ಕಡ್ಡಾಯವಾಗಿ ನೋಂದಣಿ ಸಂಖ್ಯೆಯನ್ನು ತರತಕ್ಕದ್ದು,
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಆಡಳಿತ ಭವನ, ದಾವಣಗೆರೆ ದೂ.ಸಂ:08192-259446,7406323294 ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ
-
ದಿನದ ಸುದ್ದಿ4 days ago
ನಕಲಿ ವೈದ್ಯರಿಗೆ ದಂಡ ; ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ
-
ದಿನದ ಸುದ್ದಿ3 days ago
ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
-
ದಿನದ ಸುದ್ದಿ3 days ago
ಆರಗದಲ್ಲಿ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆ
-
ದಿನದ ಸುದ್ದಿ17 hours ago
ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ2 days ago
ದಾವಣಗೆರೆ | ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ
-
ದಿನದ ಸುದ್ದಿ17 hours ago
HAL | ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ ಅವಧಿ ವಿಸ್ತರಣೆ