ದಿನದ ಸುದ್ದಿ
ಪುರೋಹಿತಶಾಹಿ ವ್ಯವಸ್ಥೆ ತೊಲಗಿಸಿ ಶೋಷಿತರಿಗೆ ನ್ಯಾಯ ಒದಗಿಸಿಕೊಟ್ಟವರು ಬಸವಣ್ಣ : ಡಿಸಿ ಮಹಾಂತೇಶ ಬೀಳಗಿ

ಸುದ್ದಿದಿನ,ದಾವಣಗೆರೆ : ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ರಾಜ್ಯದ ಕನಸು ಕಂಡು ಅನುಭವ ಮಂಟಪ ಸ್ಥಾಪಿಸಿ ಶೋಷಣೆಗೆ ಒಳಪಟ್ಟ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ದಬ್ಬಾಳಿಕೆ ದೌರ್ಜನ್ಯಗಳಿಂದ ದಮನಿತ ಸಮುದಾಯಗಳನ್ನು ಮುಕ್ತಗೊಳಿಸಲು ಹೋರಾಡಿದ ಮಹಾನ್ ವ್ಯಕ್ತಿ ಹಾಗೂ ಮೂಢನಂಬಿಕೆ, ಜಾತಿವ್ಯವಸ್ಥೆ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆಯಂತಹ ಅನಿಷ್ಟ ಆಚರಣೆಗಳನ್ನು ತೊಡೆದುಹಾಕಿ ಕಾಯಕ ಸಮಾನತೆ, ಲಿಂಗ ಸಮಾನತೆ ಸಾರಿದವರು ಅಣ್ಣ ಬಸವಣ್ಣನವರು. ದೇವರನ್ನು ಕಾಣಲು ಮಧ್ಯವರ್ತಿಗಳನ್ನು ಸಂಪರ್ಕಿಸಬೇಕಾಗುವಂತಹ ಕಾಲದಲ್ಲಿ ನಿಷ್ಠೆಯ ಕಾಯಕ ಮಾಡುವ ಜೊತೆಗೆ ಮನದಲ್ಲಿಯೇ ದೇವರನ್ನು ಕಾಣಬಹುದು ಎಂದು ತೋರಿಸಿಕೊಟ್ಟರು.
ಕಾಯಕದಿಂದ ಬರುವ ಸಂಪತ್ತನ್ನು ತನಗಾಗಿ ಬಳಸುವ ಜೊತೆಗೆ ಸಮಾಜಕ್ಕೂ ಮೀಸಲಿರಿಸಬೇಕು ಎನ್ನುವಂತಹ ದಾಸೋಹದ ಸಿದ್ಧಾಂತವನ್ನು ತಿಳಿಸಿಕೊಟ್ಟು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳ ಫಲ ತಲುಪುವಂತೆ ಮಾಡಬೇಕು ಎಂದು ತಳಪಾಯ ಹಾಕಿಕೊಟ್ಟವರು ಜಗಜ್ಯೋತಿ ಬಸವಣ್ಣನವರು, ಹಾಗಾಗಿ ಎಲ್ಲರೂ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್, ಬಸವಣ್ಣನವರು ಹುಟ್ಟದೆ ಇದ್ದರೆ ಎಲ್ಲರೂ ಕೂಡ ಪ್ರಾಣಿ-ಪಶುಗಳಂತೆ ಜೀವನ ನಡೆಸಬೇಕಿತ್ತು, 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಎಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಜೊತೆಗೆ ಅಂತರ್ಜಾತಿ ವಿವಾಹವನ್ನು ಪ್ರೊತ್ಸಾಹಿಸಿ ಸಮಾಜದಲ್ಲಿ ಬೇರೂರಿದ್ದ ಜಾತಿವ್ಯವಸ್ಥೆಯನ್ನು ತೊಲಗಿಸಲು ಶ್ರಮಿಸಿದವರು ಬಸವಣ್ಣನವರು ಎಂದು ಹೇಳಿದರು.
ಸನಾವುಲ್ಲಾ ನವಿಲೆಹಾಳ್ ಬಸವಣ್ಣನವರು ಕುರಿತು ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರ ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ, ಕತ್ತಲೆಯಲ್ಲಿದೆ ಸಮಾಜಕ್ಕೆ ಜ್ಯೋತಿಯಾಗಿ ಬಂದು ಸಮಾಜವನ್ನು ಶುದ್ಧಗೊಳಿಸುವ ಮೂಲಕ ಕಾಯಕದ ಅರಿವನ್ನು ಮೂಡಿಸಿ, ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಲಿಂಗ ಅಸಮಾನತೆ, ಮೌಢ್ಯದ ವಿರುದ್ಧ ಹೋರಾಟ ಮಾಡಿದವರು ಬಸವಣ್ಣನವರು ಎಂದು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಹಾನಗರ ಪಾಲಿಕೆ ಮಹಾಪೌರರಾದ ಜಯಮ್ಮ ಗೋಪಿನಾಯ್ಕ್, ಮಾಜಿ ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಮೇಯರ್ಗಳಾದ ಬಿ.ಜಿ ಅಜಯ್ಕುಮಾರ್, ಎಸ್.ಟಿ ವೀರೇಶ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ, ಮಹಾನಗರ ಪಾಲಿಕೆ ಉಪಮೇಯರ್ ಗಾಯಿತ್ರಿಬಾಯಿ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಸವಣ್ಣನವರ ಅನುಯಾಯಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಆರ್.ಶೀತಲ್ಗೆ ಮೂರು ಚಿನ್ನದ ಪದಕಗಳು

ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಕನ್ವೆಷನ್ ಸೆಂಟರ್ನಲ್ಲಿ ಮೇ 15ರಂದು ನಡೆದ 59ನೇ ಘಟಿಕೋತ್ಸವದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ಎಸ್.ಬಿ.ರುದ್ರಕುಮಾರ್ ಇವರ ಪುತ್ರಿಯಾದ ಎಸ್.ಆರ್. ಶೀತಲ್ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
2023-24ನೇ ಸಾಲಿನಲ್ಲಿ 10,000 ಅಂಕಗಳಿಗೆ ಸರಾಸರಿ 9.104 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಯಾಂಕಿತರಾಗಿರುವ ಎಸ್.ಆರ್. ಶೀತಲ್ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ ಚಿನ್ನದ ಪದಕ ಹಾಗೂ ಡಾ.ಆರ್.ರಾಮಯ್ಯ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಆರೋಗ್ಯಕರ ಡಯಟ್ ಮಾಡಲು ಈ ಟಿಪ್ಸ್ ಗಳನ್ನು ಅನುಸರಿಸಿ

ಆರೋಗ್ಯಕರ ಡಯಟ್ ಮಾಡಲು ಈ ಟಿಪ್ಸ್ ಗಳನ್ನು ಅನುಸರಿಸಿ
1.ಪೌಷ್ಟಿಕತೆಯ ಸಮತೋಲನ
ಆರೋಗ್ಯಕರ ಡಯಟ್ನಲ್ಲಿ ಮ್ಯಾಕ್ರೋನ್ಯೂಟ್ರಿಯೆಂಟ್ಗಳು (ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ಕೊಬ್ಬು) ಮತ್ತು ಮೈಕ್ರೋನ್ಯೂಟ್ರಿಯೆಂಟ್ಗಳು (ವಿಟಮಿನ್ಗಳು, ಖನಿಜಗಳು) ಸಮತೋಲನವಿರಬೇಕು. ಉದಾಹರಣೆಗೆ, ಭಾರತೀಯ ಆಹಾರದಲ್ಲಿ ರಾಗಿ, ಜೋಳ, ಕ್ವಿನೋವಾ, ದ್ವಿದಳ ಧಾನ್ಯಗಳು, ಮತ್ತು ಸೊಪ್ಪುಗಳು ಸಮತೋಲಿತ ಆಹಾರವನ್ನು ಒದಗಿಸುತ್ತವೆ.
ಗ್ಲೈಸೆಮಿಕ್ ಇಂಡೆಕ್ಸ್ (GI) : ಕಡಿಮೆ GI ಆಹಾರಗಳಾದ ಓಟ್ಸ್, ಕಂದು ಅಕ್ಕಿ, ಮತ್ತು ಕಾಳುಗಳು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತವೆ, ಇದು ಡಯಾಬಿಟೀಸ್ ನಿರ್ವಹಣೆಗೆ ಸಹಾಯಕವಾಗಿದೆ.
2. ಸ್ಥಳೀಯ ಮತ್ತು ಋತುಮಾನದ ಆಹಾರಗಳ ಆಯ್ಕೆ
ಕರ್ನಾಟಕದಂತಹ ಪ್ರದೇಶಗಳಲ್ಲಿ, ರಾಗಿ ರೊಟ್ಟಿ, ತರಕಾರಿ ಸಾಂಬಾರ್, ಕೋಸಂಬರಿ, ಮತ್ತು ಒಣಗಿದ ಹಣ್ಣುಗಳು (ಬಾದಾಮಿ, ಗೋಡಂಬಿ) ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯಕರ ಆಯ್ಕೆಗಳಾಗಿವೆ. ಇವು ಪರಿಸರ ಸ್ನೇಹಿಯಾಗಿರುತ್ತವೆ ಮತ್ತು ತಾಜಾತನವನ್ನು ಖಾತ್ರಿಪಡಿಸುತ್ತವೆ.
ಋತುಮಾನದ ಹಣ್ಣುಗಳು : ಮಾವಿನಹಣ್ಣು, ಜಾಮೂನ್, ದಾಳಿಂಬೆ ಇತ್ಯಾದಿಗಳು ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ.
3. ಗಟ್ ಹೆಲ್ತ್ (ಕರುಳಿನ ಆರೋಗ್ಯ)
ಆರೋಗ್ಯಕರ ಕರುಳು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿದೆ. ಮೊಸರು, ಮಜ್ಜಿಗೆ, ಒಣಗಿದ ಹಣ್ಣುಗಳು, ಮತ್ತು ಫೈಬರ್ ಶ್ರೀಮಂತ ಆಹಾರಗಳಾದ ತರಕಾರಿಗಳು ಮತ್ತು ಧಾನ್ಯಗಳು ಪ್ರೋಬಯಾಟಿಕ್ಗಳು ಮತ್ತು ಪ್ರಿಬಯಾಟಿಕ್ಗಳನ್ನು ಒದಗಿಸುತ್ತವೆ. ಉದಾಹರಣೆ: ರಾಗಿ ಮತ್ತು ತರಕಾರಿಗಳಿಂದ ತಯಾರಿಸಿದ ಖಿಚಡಿ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
4. ಸಂಸ್ಕರಿತ ಆಹಾರದಿಂದ ದೂರ
ಸಂಸ್ಕರಿತ ಆಹಾರಗಳು (ಚಿಪ್ಸ್, ಸಕ್ಕರೆಯಿಂದ ಕೂಡಿದ ಪಾನೀಯಗಳು, ಫಾಸ್ಟ್ ಫುಡ್) ದೀರ್ಘಕಾಲೀನವಾಗಿ ಒಬೇಸಿಟಿ, ಡಯಾಬಿಟೀಸ್, ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಇವುಗಳ ಬದಲಿಗೆ ತಾಜಾ, ಗೃಹ ತಯಾರಿಕೆಯ ಆಹಾರವನ್ನು ಆದ್ಯತೆ ನೀಡಿ.
5. ವೈಯಕ್ತಿಕಗೊಳಿಸಿದ ಡಯಟ್
ವಯಸ್ಸು, ಲಿಂಗ, ದೈಹಿಕ ಚಟುವಟಿಕೆ, ಮತ್ತು ಆರೋಗ್ಯ ಸ್ಥಿತಿಗೆ ತಕ್ಕಂತೆ ಡಯಟ್ ರೂಪಿಸಿ. ಉದಾಹರಣೆಗೆ, ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳು ಬೇಕಾಗುತ್ತವೆ, ಆದರೆ ವಯಸ್ಸಾದವರಿಗೆ ಕಡಿಮೆ ಕ್ಯಾಲೋರಿ ಆದರೆ ವಿಟಮಿನ್ಗಳ ಶ್ರೀಮಂತ ಆಹಾರ ಸೂಕ್ತವಾಗಿರುತ್ತದೆ.
6. ಹೈಡ್ರೇಷನ್ ಮತ್ತು ಜೀವನಶೈಲಿ
ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ತೆಂಗಿನೀರು, ಮಜ್ಜಿಗೆ, ಅಥವಾ ಗಿಡಮೂಲಿಕೆ ಚಹಾವನ್ನು ಸೇವಿಸಿ. ಆರೋಗ್ಯಕರ ಡಯಟ್ನ ಜೊತೆಗೆ, 30 ನಿಮಿಷಗಳ ದೈಹಿಕ ಚಟುವಟಿಕೆ (ಯೋಗ, ವಾಕಿಂಗ್, ಅಥವಾ ಜಿಮ್) ಮತ್ತು 7-8 ಗಂಟೆಗಳ ನಿದ್ರೆಯನ್ನು ಸಂಯೋಜಿಸಿ.
ನಿರ್ದಿಷ್ಟ ಆರೋಗ್ಯಕರ ಡಯಟ್ ಯೋಜನೆ
ಬೆಳಗಿನ ಉಪಾಹಾರ:ರಾಗಿ ದೋಸೆ + ಚಟ್ನಿ, ಅಥವಾ ಓಟ್ಸ್ ಉಪ್ಮಾ + ತರಕಾರಿಗಳು. ಮಧ್ಯಾಹ್ನದ ತಿಂಡಿ: ತೆಂಗಿನೀರು ಅಥವಾ ಮೊಸರು + ಒಂದು ಹಣ್ಣು (ಸೀಬೆ, ಬಾಳೆಹಣ್ಣು).
ಮಧ್ಯಾಹ್ನದ ಊಟ: ಕಂದು ಅಕ್ಕಿ, ಸಾಂಬಾರ್, ಪಾಲಕ್ ಸೊಪ್ಪಿನ ಪಲ್ಯ, ಮತ್ತು ಕೋಸಂಬರಿ. ಸಂಜೆಯ ತಿಂಡಿ: ಬೇಯಿಸಿದ ಕಾಳುಗಳು (ಕಡಲೆಕಾಯಿ, ಕಡಲೆ) ಅಥವಾ ಒಣಗಿದ ಹಣ್ಣುಗಳು.ರಾತ್ರಿಯ ಊಟ: ರಾಗಿ ರೊಟ್ಟಿ + ತರಕಾರಿ ಕೂಟು, ಅಥವಾ ಜೋಳದ ರೊಟ್ಟಿ + ಮೊಸರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೇ 22 | ಇಂದಿನ ಅಡಿಕೆ ದರ

ಇಂದು, ಮೇ 22, 2025 ರಂದು ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಹೀಗಿವೆ (ಪ್ರತಿ ಕ್ವಿಂಟಾಲ್ಗೆ ರೂಪಾಯಿಗಳಲ್ಲಿ):
ಶಿವಮೊಗ್ಗ ಮಾರುಕಟ್ಟೆ:
ರಾಶಿ: ₹48,169 (ಕನಿಷ್ಠ) – ₹58,099 (ಗರಿಷ್ಠ), ಮೋಡಲ್ ಬೆಲೆ: ₹55,869
ಸರಕು: ₹60,399 (ಕನಿಷ್ಠ) – ₹92,510 (ಗರಿಷ್ಠ), ಮೋಡಲ್ ಬೆಲೆ: ₹77,009
ಬೆಟ್ಟೆ: ₹51,319 (ಕನಿಷ್ಠ) – ₹58,219 (ಗರಿಷ್ಠ), ಮೋಡಲ್ ಬೆಲೆ: ₹57,989
ಗೊರಬಲು: ₹15,499 (ಕನಿಷ್ಠ) – ₹30,699 (ಗರಿಷ್ಠ), ಮೋಡಲ್ ಬೆಲೆ: ₹28,429
ಚನ್ನಗಿರಿ ಮಾರುಕಟ್ಟೆ (ದಾವಣಗೆರೆ):
ರಾಶಿ: ₹41,199 (ಕನಿಷ್ಠ) – ₹59,312 (ಗರಿಷ್ಠ), ಮೋಡಲ್ ಬೆಲೆ: ₹57,767
ಸಾಗರ ಮಾರುಕಟ್ಟೆ (ಶಿವಮೊಗ್ಗ):
ಚಾಲಿ: ₹35,699 (ಕನಿಷ್ಠ) – ₹37,141 (ಗರಿಷ್ಠ), ಮೋಡಲ್ ಬೆಲೆ: ₹36,699
ಬಿಳೆಗೋಟು: ₹21,611 (ಕನಿಷ್ಠ) – ₹25,587 (ಗರಿಷ್ಠ), ಮೋಡಲ್ ಬೆಲೆ: ₹24,111
ಕೆಂಪುಗೋಟು: ₹17,599 (ಕನಿಷ್ಠ) – ₹27,499 (ಗರಿಷ್ಠ), ಮೋಡಲ್ ಬೆಲೆ: ₹24,919
ರಾಶಿ: ₹22,899 (ಕನಿಷ್ಠ) – ₹57,470 (ಗರಿಷ್ಠ), ಮೋಡಲ್ ಬೆಲೆ: ₹56,621
ಕುಮಟಾ ಮಾರುಕಟ್ಟೆ (ಉತ್ತರ ಕನ್ನಡ):
ಚಿಪ್ಪು: ₹11,199 (ಕನಿಷ್ಠ) – ₹26,919 (ಗರಿಷ್ಠ), ಮೋಡಲ್ ಬೆಲೆ: ₹24,549
ಕೋಕಾ: ₹6,899 (ಕನಿಷ್ಠ) – ₹22,189 (ಗರಿಷ್ಠ), ಮೋಡಲ್ ಬೆಲೆ: ₹20,429
ಹಣ್ಣು: ₹32,589 (ಕನಿಷ್ಠ) – ₹42,500 (ಗರಿಷ್ಠ), ಮೋಡಲ್ ಬೆಲೆ: ₹39,729
ಚಿತ್ರದುರ್ಗ ಮಾರುಕಟ್ಟೆ:
ರಾಶಿ: ₹52,449 (ಕನಿಷ್ಠ) – ₹52,899 (ಗರಿಷ್ಠ), ಮೋಡಲ್ ಬೆಲೆ: ₹52,679
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ5 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ4 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ4 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಹೃದಯಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೇ..?
-
ದಿನದ ಸುದ್ದಿ3 days ago
ಇಂದಿನ ಅಡಿಕೆ ದರ ಪಟ್ಟಿ
-
ದಿನದ ಸುದ್ದಿ4 days ago
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ