ದಿನದ ಸುದ್ದಿ
ದಾವಣಗೆರೆ | 8 ಮಿ.ಮೀ ಮಳೆ : 2.15 ಲಕ್ಷ ನಷ್ಟ

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಅ.13 ರಂದು 8.0 ಮಿ.ಮೀ ಮಳೆಯಾಗಿದ್ದು, ಒಟ್ಟು ರೂ.2.15 ಲಕ್ಷ ನಷ್ಟ ಸಂಭವಿಸಿರುತ್ತದೆ.
ಮಳೆ ವಿವರ
- ಚನ್ನಗಿರಿ ತಾಲ್ಲೂಕಿನಲ್ಲಿ 6.0 ಮಿ.ಮೀ ವಾಡಿಕೆಗೆ 7.0 ಮಿ.ಮೀ ವಾಡಿಕೆ ಮಳೆಯಾಗಿದೆ.
- ದಾವಣಗೆರೆ ತಾಲ್ಲೂಕಿನಲ್ಲಿ 4.0 ಮಿ.ಮೀ ವಾಡಿಕೆಗೆ 4.0 ಮಿ.ಮೀ ವಾಸ್ತವ ಮಳೆಯಾಗಿದೆ.
- ಹರಿಹರ ತಾಲ್ಲೂಕಿನಲ್ಲಿ 7.0 ಮಿ.ಮೀ ವಾಡಿಕೆಗೆ 5.0 ಮಿ.ಮೀ ವಾಸ್ತವ ಮಳೆಯಾಗಿದೆ.
- ಹೊನ್ನಾಳಿ ತಾಲ್ಲೂಕಿನಲ್ಲಿ 4.0ಮಿ.ಮೀ ವಾಡಿಕೆಗೆ 18.0 ಮಿ.ಮೀ ವಾಸ್ತವ ಮಳೆಯಾಗಿದೆ.
- ಜಗಳೂರು ತಾಲ್ಲೂಕಿನಲ್ಲಿ 5.0 ಮಿ.ಮೀ ವಾಡಿಕೆಗೆ 11.0 ಮಿ.ಮೀ ವಾಸ್ತವ ಮಳೆಯಾಗಿದೆ.
- ನ್ಯಾಮತಿ ತಾಲ್ಲೂಕಿನಲ್ಲಿ 5.0 ಮೀ.ಮೀ ವಾಡಿಕೆಗೆ 10.0 ಮಿ.ಮೀ ವಾಸ್ತವ ಮಳೆಯಾಗಿದ್ದು ಜಿಲ್ಲೆಯ ಸರಾಸರಿ 5.0 ಮಿ.ಮೀ ವಾಡಿಕೆಗೆ 8.0 ಮಿ.ಮೀ ವಾಡಿಕೆ ಮಳೆಯಾಗಿದೆ.
ಅಂದಾಜು ನಷ್ಟ
ಹರಿಹರ ತಾಲ್ಲೂಕಿನಲ್ಲಿ 2 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು ರೂ.1 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ನ್ಯಾಮತಿ ತಾಲ್ಲೂಕಿನಲ್ಲಿ 1 ದನದ ಕೊಟ್ಟಿಗೆ ಹಾನಿಯಾಗಿದ್ದು, ರೂ.15 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 3 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ.1 ಲಕ್ಷ ಅಂದಾಜು ನಷ್ಟ ಸಂಭವಿಸಿದ್ದು ಜಿಲ್ಲೆಯಲ್ಲಿ ಒಟ್ಟಾರೆ ರೂ.2.15 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಎಸ್.ಎಲ್.ಸಿ, ಐಟಿಐ, ಡಿಪ್ಲೋಮ, ಬಿ.ಇ ಪಾಸಾದವರಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಹರಿಹರ ತಾಲ್ಲೂಕಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2020-21ನೇ ಸಾಲಿನ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷ ಘಟಕಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್.ಸಿ.ಪಿ-ಟಿ.ಎಸ್.ಪಿ) ಮೂಲಕ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ, ಐಟಿಐ, ಡಿಪ್ಲೋಮ, ಬಿ.ಇ ಯಲ್ಲಿ ಪಾಸಾಗಿರುವ ಅಭ್ಯರ್ಥಿಗಳಿಗೆ 2 ತಿಂಗಳು ಅವಧಿಯ ತರಬೇತಿಗಳನ್ನು ಉಚಿತವಾಗಿ ನೀಡಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು. ತರಬೇತಿ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು.
ಶಿಬಿರದಲ್ಲಿ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಗೆ ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್, ಸಿ.ಎನ್.ಸಿ. ಆಪರೇಟರ್ ಟರ್ನಿಂಗ್, ಸಿ.ಎನ್.ಸಿ. ಪ್ರೋಗ್ರಾಮರ್ ಹಾಗೂ ಕನ್ವೆನ್ಷನಲ್ ಟರ್ನಿಂಗ್ ಮಷಿನ್ ಆಪರೇಟರ್, ಮಿಲ್ಲಿಂಗ್ ಮಷಿನ್ ಆಪರೇಟರ್, ಸರ್ಫೇಸ್ಗ್ರೈಂಡಿಂಗ್ ಮಷಿನ್ ಆಪರೇಟರ್ ಕೋರ್ಸ್ಗಳನ್ನು ಮತ್ತು ಡಿಪ್ಲೋಮಾ ಅಥವಾ ಬಿ.ಇ ಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಡಿಸೈನರ್-ಮೆಕ್ಯಾನಿಕಲ್, ಪ್ರೊಡಕ್ಷನ್ ಇಂಜಿನಿಯರ್ ತರಬೇತಿಗಳನ್ನುನೀಡಲಾಗುವುದು.
ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ಅರ್ಜಿ ಸಲ್ಲಿಸಲು ಮಾ.20 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಜಿ.ಟಿ.ಟಿ.ಸಿ., 22 ಸಿ&ಡಿ, ಕೆಐಎಡಿಬಿ, ಇಂಡಸ್ಟ್ರೀಯಲ್ ಏರಿಯಾ ಹರ್ಲಾಪುರ, ಕೆ.ಎಸ್.ಆರ್.ಟಿ.ಸಿ. ಡಿಪೋ ಹತ್ತಿರ, ಹರಿಹರ ಹಾಗೂ ದೂರವಾಣಿ ಸಂಖ್ಯೆ 08192-24937, 9916908111, 8884488202, 8711913947ಕ್ಕೆ ಸಂಪರ್ಕಿಸಿ ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿ ವೇತನ | ಆನ್ಲೈನ್ ಅರ್ಜಿ ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ : ಮೆಟ್ರಿಕ್ ನಂತರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರ ವಿದ್ಯಾರ್ಥಿವೇತನ ಶುಲ್ಕವಿನಾಯಿತಿ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯ ನೀಡಲು ಆಹ್ವಾನಿಸಲಾಗಿದ್ದ ಆನ್ಲೈನ್ ಅರ್ಜಿ ಅವಧಿಯನ್ನು ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾ 05 ನಿಗದಿಪಡಿಸಲಾಗಿತ್ತು. ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಪೋಷಕರು/ವಿದ್ಯಾರ್ಥಿಗಳು/ಶಿಕ್ಷಣ ಸಂಸ್ಥೆಗಳು ಮನವಿ ಸಲ್ಲಿಸಿದ್ದು, ಪ್ರಯುಕ್ತ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಅರ್ಜಿ ಸಲ್ಲಿಸುವ ಕೊನೆಯ ಮಾ.20 ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ : www.ssp.postmatric.karnataka.gov.in
ದೂ.ಸಂ: 8050770005/8050770004 ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ: 080-35254757 ಇಮೇಲ್- [email protected] ನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಡಿಕೆಯಲ್ಲಿ ಅರಳು ಉದುರುವ, ಹಿಂಗಾರು ಒಣಗುವ ಮತ್ತು ಹಿಂಗಾರ ತಿನ್ನುವ ಸಮಸ್ಯೆ : ರೈತರು ತೆಗೆದುಕೊಳ್ಳಬೇಕಾದ ಕ್ರಮಗಳು

ಸುದ್ದಿದಿನ,ದಾವಣಗೆರೆ : ಅಡಿಕೆಯಲ್ಲಿ ಹಿಂಗಾರ (ಹೊಂಬಾಳೆ) ತಿನ್ನುವ ಹುಳುಗಳು, ಹರಳು ಉದುರುವುದು, ಹಿಂಗಾರು ಕೊಳೆ ರೋಗ ಕಾಣಿಸಿಕೊಂಡಿದ್ದು ಅದನ್ನು ತಡೆಗಟ್ಟಲು ರೈತರು ಅಗತ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಗಿರಿನಾಯ್ಕ್ ಪ್ರಕಟಣೆಯ ಮೂಲಕ ಸಲಹೆ ನೀಡಿದ್ದಾರೆ.
ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಹರಳು ಉದುರುವುದು ಮತ್ತು ಹಿಂಗಾರ ಕೊಳೆ ರೋಗ. ಅಡಿಕೆಯಲ್ಲಿ ಹಿಂಗಾರ ಬಿಚ್ಚಿ ಕಾಳು ಕಟ್ಟುವ ಮೊದಲೇ ಕೀಟಗಳು ಆಕ್ರಮಿಸಿಕೊಳ್ಳುವುದರಿಂದ ಹಿಂಗಾರ ಸಂಪೂರ್ಣವಾಗಿ ನಾಶವಾಗುತ್ತಿದೆ.
ಹಿಂಗಾರಿಗೆ ಕೊಲೆ ಟ್ರೊಟ್ರೈಕಮ್ಗ್ಲೀಯೋಸ್ಪೊರಿಯ್ಡಿಸ್ ಎಂಬ ಶಿಲೀಂದ್ರದ ಸೋಂಕಿಗೆ ಒಳಗಾದಾಗ ಹಿಂಗಾರ ಒಣಗುವ ಮತ್ತು ಅನುಚಿತ ನೀರಿನ ನಿರ್ವಹಣೆ ಹಾಗೂ ಲಘು ಪೋಷಕಾಂಶಗಳ ಕೊರತೆಯಿಂದ ಅರಳು ಉದುರುವ ಸಮಸ್ಯೆ ಕಂಡು ಬರುತ್ತಿದೆ.
ಉತ್ತಮ ಗಿಡಗಳ ಸಂರಕ್ಷಣೆಗಾಗಿ ರೋಗ ಪೀಡಿತ ಒಣಗಿದ ಹಿಂಗಾರನ್ನು ತೋಟದಿಂದ ತೆಗೆದು ನಾಶಪಡಿಸಬೇಕು ಅಥವಾ ಕಿತ್ತು ಸುಡಬೇಕು ಮತ್ತು ಹೊಸದಾಗಿ ಬಂದ ಹಿಂಗಾರಿನಲ್ಲಿ ಈ ಸಮಸ್ಯೆ ಕಂಡು ಬಂದಲ್ಲಿ ಕಾರ್ಬನ್ಡೈಜಿಮ್ + ಮ್ಯಾಂಕೊಜೆಬ್ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಇದನ್ನೂ ಓದಿ | ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!
ಇದರ ಜೊತೆಗೆ ರಸ ಹೀರುವ ಕೀಟಗಳ (ಶಲ್ಕಗಳು ಮತ್ತು ಅಫಿಡ್) ನಿಯಂತ್ರಣಕ್ಕೆ ಅಂತವ್ರ್ಯಾಪಿ ಕೀಟನಾಶಕ ಪ್ಯೂಪ್ರನಿಲ್ 1 ರಿಂದ 1.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಇಮಿಡಾಕ್ಲೋಪ್ರಿಡ್+ ಅಸಿಫೇಟ್ ಮಿಶ್ರಣದ ಕೀಟನಾಶಕವನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಅಡಿಕೆಯಲ್ಲಿ ಪ್ರಮುಖವಾಗಿ ಹರಳು ಉದುರುವ ಸಮಸ್ಯೆ ಕಂಡು ಬರುತ್ತಿದ್ದು ಇದರ ನಿರ್ವಹಣೆಗೆ ಕೀಟ ನಾಶಕಗಳ ಸಿಂಪಡಿಸುವ ಸಂದರ್ಭದಲ್ಲಿ ಲಘು ಪೋಷಕಾಂಶಗಳ ಮಿಶ್ರಣವನ್ನು 5 ಮಿ.ಲೀ. ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಮತ್ತು ಉತ್ತಮ ನೀರಿನ ನಿರ್ವಹಣೆಯಿಂದ ಹರಳು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಮತ್ತು ಮಣ್ಣು ನೀರು ಪರೀಕ್ಷೆ ಮಾಡಿಸುವುದರಿಂದ ರೋಗ ಬಾಧೆಗಳನ್ನು ತಡೆಗಟ್ಟಬಹುದು.
ಹೆಚ್ಚಿನ ಮಾಹಿತಿಗಾಗಿ ಆಯಾ ಹೋಬಳಿಯ ತೋಟಗಾರಿಕೆ ಅಧಿಕಾರಿಗಳು ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಇವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಸಿನಿ ಸುದ್ದಿ5 days ago
ಇಂದು ಕನ್ನಡ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ | ಒಂಟಿ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?
-
ದಿನದ ಸುದ್ದಿ7 days ago
ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ
-
ಸಿನಿ ಸುದ್ದಿ5 days ago
ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!
-
ಭಾವ ಭೈರಾಗಿ5 days ago
ಕವಿತೆ | ಕಾಮಧೇನು
-
ನಿತ್ಯ ಭವಿಷ್ಯ6 days ago
ಫೆಬ್ರವರಿ-27 | ಈ ರಾಶಿಯವರಿಗೆ ಬಯಸಿದ್ದೆಲ್ಲ ಸಿಗುವುದು! ಶನಿವಾರ- ರಾಶಿ ಭವಿಷ್ಯ
-
ದಿನದ ಸುದ್ದಿ7 days ago
ದಾವಣಗೆರೆ ಜಿ.ಪಂ ಸಾಮಾನ್ಯ ಸಭೆ | ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸುವಂತೆ ಸದಸ್ಯರ ಒತ್ತಾಯ
-
ನಿತ್ಯ ಭವಿಷ್ಯ6 days ago
ಜ್ಯೋತಿಷ್ಯಶಾಸ್ತ್ರ | ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು..? ಕಂಕಣಬಲ ಕೂಡಿ ಬರಲು ಏನು ಮಾಡಬೇಕು..?
-
ನಿತ್ಯ ಭವಿಷ್ಯ5 days ago
ಸೋಮವಾರ ರಾಶಿ ಭವಿಷ್ಯ : ಕರೆ ಮಾಡಿ ಕಷ್ಟಗಳನ್ನು ಪರಿಹರಿಸಿಕೊಳ್ಳಿ