ದಿನದ ಸುದ್ದಿ
ನೋಟು ಅಮಾನ್ಯೀಕರಣ | ಓವರ್ ಟೈಮ್ ಕೆಲಸ ಮಾಡಿದ ಬ್ಯಾಂಕ್ ನೌಕರರ ಹಣ ವಾಪಾಸ್ ಪಡೆಯಲು ಆದೇಶ

ಸುದ್ದಿದಿನ ಡೆಸ್ಕ್ | ಕಳೆದ ಎರಡು ವರ್ಷಗಳ ಹಿಂದೆ ರಜಾದಿನಗಳಲ್ಲೂ ನಿದ್ದೆ, ಆಹಾರ ಲೆಕ್ಕಕ್ಕೆ ತೆಗೆದುಕೊಳ್ಳದೇ ಅಮಾನ್ಯೀಕರಣದ ವೇಳೆ ಕೆಲಸ ಮಾಡಿದ್ದ ಬ್ಯಾಂಕ್ ನೌಕರರಿಗೆ ಎಸ್ಬಿಐ ಶಾಕಿಂಕ್ ನ್ಯೂಸ್ ನೀಡಿದ್ದು, ಅಮಾನ್ಯೀಕರಣ ವೇಳೆ ಹೊಸ ನೋಟ್ ಬದಲಾವಣೆ ಸಂದರ್ಭದಲ್ಲಿ ಓವರ್ ಟೈಮ್ ಹಣ ನೀಡಿದ್ದ ವಾಪಸ್ ಪಡೆಯುವ ಆದೇಶ ನೀಡಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಜತೆಗೆ ವಿಲನಗೊಂಡ ಐದು ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರ್ಯಾವಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ ಬ್ಯಾಂಕುಗಳ 70,000 ನೌಕರರು ಹಣ ವಾಪಸ್ ಮಾಡಬೇಕಾಗಿದೆ. 2017ರ ಏಪ್ರಿಲ್ 1ರಂದು ಎಸ್ಬಿಐ ಜತೆಗೆ ವಿಲೀನಗೊಂಡಿದ್ದವು.
ಇದಕ್ಕೂ ಮೊದಲು ಅಂದರೆ 2016ರ 14ರಿಂದ ಡಿಸೆಂಬರ್ 30 ಅವಧಿಯಲ್ಲಿ ನೋಟುಗಳ ಅಮಾನ್ಯೀಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ಬ್ಯಾಂಕ್ಗಳ ನೌಕರರು ಪರಿಹಾರ ಪಡೆಯಲು ಅರ್ಹರಲ್ಲ. ಈ ಕೆಲಸದ ತೀವ್ರ ಒತ್ತಡ ಇದ್ದುದರಿಂದ ನೌಕರರಿಗೆ ಓಟಿಯ ಭರವಸೆ ನೀಡಲಾಗಿತ್ತು.
ಇದೇ ವರ್ಷದ ಮಾರ್ಚ್ – ಮೇನಲ್ಲಿ ಅಧಿಕಾರಿಗಳಿಗೆ ಗರಿಷ್ಠ ತಲಾ 30,000 ರೂ. ಮತ್ತು ಇತರ ಸಿಬ್ಬಂದಿಗೆ ಅಂದಾಜು 15,000 ರೂ. ಪಾವತಿಸಿತ್ತು. ಆದರೆ, ವಿಲೀನ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳು ಎಸ್.ಬಿಐನ ಕ್ರಮವನ್ನು ಅಲ್ಲೆಗಳೆದಿದ್ದು, ಎಸ್.ಬಿಐ ಬ್ಯಾಂಕ್ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ನಿತೇಶ ಪಾಟೀಲ

ರಸ್ತೆ ಅಪಘಾತಗಳನ್ನು ತಪ್ಪಿಸಲು ಇಲಾಖೆಗಳು ಸಮನ್ವಯತೆಯಿಂದ ಕಾರ್ಯಮಾಡಬೇಕು : ಜಿಲ್ಲಾಧಿಕಾರಿ ನಿತೇಶ ಪಾಟೀಲ
ಸುದ್ದಿದಿನ,ಧಾರವಾಡ : ಕಳೆದ ಸಾಲಿಗೆ ಹೋಲಿಸಿದರೆ ಧಾರವಾಡ ಜಿಲ್ಲೆಯಲ್ಲಿ 2020 ನೇ ಸಾಲಿಗೆ ಕಡಿಮೆ ಪ್ರಮಾಣದಲ್ಲಿ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಸಾರಿಗೆ, ಪೊಲೀಸ್, ಲೊಕೋಪಯೋಗಿ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದರೆ ರಸ್ತೆ ಅಪಘಾತಗಳು ಸಂಭವಿಸದಂತೆ ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಭವನದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ 30 ಕಿ.ಮೀ ರಸ್ತೆಯಲ್ಲಿನ ಅಪಘಾತಗಳನ್ನು ತಪ್ಪಿಸಲು ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪ್ರತಿ ಕಿ.ಮೀ.ಗೆ 60 ವೇಗದ ಮಿತಿ ಇದ್ದರೂ ಬಸ್, ಟ್ರಕ್, ಮಿನಿಬಸ್, ಕಾರ್ ಮುಂತಾದ ವಾಹನಗಳ ಚಾಲಕರು ನಿಯಮ ಪಾಲಿಸದೇ ವೇಗವಾಗಿ ವಾಹನ ಚಾಲನೆ, ವಾಹನಗಳ ಓವರ್ಟೆಕ್ ಮಾಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತ, ಸಾವು-ನೋವು ಆಗುತ್ತಿವೆ.
ರಸ್ತೆ ನಿರ್ವಾಹಕ ಗುತ್ತಿಗೆದಾರ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡ ಬೈಪಾಸ್ನ 30 ಕಿ.ಮೀ ರಸ್ತೆ ಪರಿಶೀಲಿಸಿ ಮುಂದಿನ 72 ಗಂಟೆಗಳಲ್ಲಿ ಅಪಾಯಕಾರಿ ಸ್ಥಳ, ಸೇತುವೆ ತಿರುವು ಗುರುತಿಸಿ ಅಲ್ಲಿ ಕನಿಷ್ಠ 20 ಎಚ್ಚರಿಕೆ ಫಲಕ, ವೇಗದ ಮೀತಿ ಸೂಚಿಸುವ ಮತ್ತು ಸುರಕ್ಷತಾ ನಿಯಮಗಳ ಫಲಕಗಳನ್ನು ಅಳವಡಿಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಹುಬ್ಬಳ್ಳಿ-ಧಾರವಾಡದ 30 ಕಿ.ಮೀ. ಬೈಪಾಸ್ ರಸ್ತೆಯ ಮಧ್ಯದಲ್ಲಿ ರಬ್ಬರ ಮತ್ತು ಫೈಬರ್ ಸಾಧನ ಬಳಸಿ, ರಸ್ತೆ ವಿಭಜಕಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು. ರಸ್ತೆ ಅಗಲೀಕರಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದು, ಅನುಮತಿ ಬಂದ ತಕ್ಷಣ ಈ ಕುರಿತು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಫುಟ್ಪಾತ್ ಅತಿಕ್ರಮಿಸಿ ಅನೇಕ ರೀತಿಯ ಅಂಗಡಿ, ವ್ಯಾಪಾರಗಳು ಅನಧಿಕೃತವಾಗಿ ನಡೆಯುತ್ತಿವೆ. ಟೊಲ್ ಪಕ್ಕದಲ್ಲಿಯೇ ಗುತ್ತಿಗೆದಾರರಿಗೆ ನೀಡಿರುವ ಜಾಗದಲ್ಲಿ ನಿಯಮ ಉಲ್ಲಂಘಿಸಿ ಅಂಗಡಿ ನಿರ್ಮಾಣ, ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಲಾಗಿದೆ. ಈ ಕುರಿತು ರಸ್ತೆ ನಿರ್ವಾಹಕ ಗುತ್ತಿಗೆದಾರ ಸಂಸ್ಥೆಗೆ ನೋಟೀಸ್ ನೀಡಿ ಮತ್ತು ಸೂಕ್ತ ಬಂದೋಬಸ್ತ್ನಲ್ಲಿ ಎಲ್ಲ ಅತಿಕ್ರಮಣಗಳನ್ನು ಶೀಘ್ರದಲ್ಲಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು.
ಇತ್ತೀಚಿಗೆ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಸುನೀಗಿದವರ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮತ್ತು ಟಿಪ್ಪರ್ ವಾಹನದ ಚಾಲಕನ ಮೇಲೆ ಅಜಾಗರೂಕತೆಯ ವಾಹನ ಚಾಲನೆ ಸೇರಿದಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಬಿ.ಆರ್.ಟಿ.ಎಸ್. ರಸ್ತೆಯಲ್ಲಿ ಖಾಸಗಿ ಹಾಗೂ ಕೆಲವು ಸರಕಾರಿ ಇಲಾಖೆ ವಾಹನಗಳು ಸಂಚರಿಸುತ್ತಿರುವುದು ಕಂಡು ಬರುತ್ತಿದೆ. ನಗರ ಪೊಲೀಸ್ ಆಯುಕ್ತರು ಬಿಆರ್ಟಿಎಸ್ ರಸ್ತೆಯಲ್ಲಿ ಬಿಆರ್ಟಿಎಸ್ ಬಸ್ಗಳನ್ನು ಹೊರತುಪಡಿಸಿ ಯಾವ ತುರ್ತು ವಾಹನಗಳು ಸಂಚರಿಸಬೇಕೆಂದು ನಿರ್ಧರಿಸಿ, ಅಧಿಸೂಚನೆ ಹೊರಡಿಸಬೇಕು. ಮತ್ತು ಅಧಿಸೂಚಿತವಲ್ಲದ ವಾಹನಗಳು ಸಂಚರಿಸಿದರೆ ತಕ್ಷಣ ದಂಡ ವಿಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ರಾಜ್ಯ ಕಾನೂನು, ಸುವ್ಯವಸ್ಥೆ ಹಾಗೂ ಸಂಚಾರಿ ವಿಭಾಗದ ಅಪರ ಪೊಲೀಸ್ ಮಹಾನಿರ್ದೇಶಕ ಪ್ರತಾಪರೆಡ್ಡಿ ಅವರು ಮಾತನಾಡಿ, ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ವಾಹನ ಹಾಗೂ ವಾಹನ ಚಾಲಕರಿಂದ ಕಾನೂನು ಹಾಗೂ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಪಾಯಕಾರಿ ರಸ್ತೆ, ತಿರುವು, ಸೇತುವೆಗಳ ಸಮೀಪದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಎಚ್ಚರಿಕೆ ಸಂದೇಶಗಳನ್ನು ಚಾಲಕರಿಗೆ ಎದ್ದು ಕಾಣುವಂತೆ ಅಳವಡಿಸಬೇಕು ಎಂದು ಹೇಳಿದರು.
ಉತ್ತರವಲಯದ ಪೊಲೀಸ್ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ, ತಿರುವು, ಸೇತುವೆಗಳ, ಸುಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ರಸ್ತೆ ಸುರಕ್ಷತೆ ಹಾಗೂ ಎಚ್ಚರಿಕೆ ಸಂದೇಶದ ಫಲಕಗಳ ಅಳವಡಿಕೆ, ನಿರ್ವಹಣೆ ಕುರಿತು ಮೇಲುಸ್ತುವಾರಿ ಮಾಡಿ ನಿಗಾವಹಿಸಬೇಕು. ಗುತ್ತಿಗೆದಾರನ ನಿರ್ವಹಣೆ ಕುರಿತು ನಿಯಮಗಳ ಪಾಲನೆ ಆಗಿರುವುದನ್ನು ಪರಿಶೀಲಿಸಬೇಕೆಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಲಾಬೂರಾಮ ಅವರು ಮಾತನಾಡಿ, ರಸ್ತೆ ಸುರಕ್ಷತಾ ಹಾಗೂ ಸಂಚಾರಿ ನಿಯಮಗಳ ಪಾಲನೆಗೆ ಆಧ್ಯತೆ ನೀಡಬೇಕು. ಹೆದ್ದಾರಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬೈಪಾಸ್, ಬಿಆರ್ಟಿಎಸ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳನ್ನು ಪರಿಶೀಲಿಸಿ, ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿ, ವಾಹನಗಳ ಚಾಲಕರು ರಾತ್ರಿ ಸಂಚರಿಸುವಾಗ ಪ್ರಖರ ಬೆಳಕಿನ ಹೆಡ್ಲೈಟ್ ಬಳಸುತ್ತಾರೆ. ಇದರಿಂದಾಗಿ ಎದುರಿಗೆ ಬರುವ ವಾಹನಗಳಿಗೆ ದಾರಿ ಕಾಣದಾಗುತ್ತದೆ. ತಿರುವುಗಳಲ್ಲಿ ಮತ್ತು ನಿರ್ಧಿಷ್ಟಪಡಿಸಿದ ವೇಗದ ಮಿತಿ ಪಾಲಿಸದೇ ವೇಗವಾಗಿ ವಾಹನ ಚಲಾಯಿಸುತ್ತಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳ ನೋಂದಣಿ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಕೊಡುವಾಗ ಇವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ. ಸುಶೀಲ ಅವರು ರಸ್ತೆ ಸುರಕ್ಷತೆ, ಅಪಘಾತಗಳ ನಿಯಂತ್ರಣ ಕುರಿತು ಸಭೆಯಲ್ಲಿ ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ತವಾಡಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಡಿವೈಎಸ್ಪಿಗಳಾದ ಎಂ.ಬಿ. ಸಂಕದ, ರಾಮನಗೌಡ ಹಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಬಿ. ಚೌಡನ್ನವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಆರ್.ಕೆ. ಮಠದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಲ್. ಹಂಚಾಟೆ, ನೈಸ್ ಸಂಸ್ಥೆಯ ಪ್ರತಿನಿಧಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯರು, ರಸ್ತೆ ನಿರ್ವಹಣಾ ಗುತ್ತಿಗೆದಾರರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಹಾಜನ್ ವರದಿಯೇ ಅಂತಿಮ ; ಉದ್ಭವ್ ಠಾಕ್ರೆ ಉದ್ಧಟ ನುಡಿಗೆ ಯಡಿಯೂರಪ್ಪ ತಿರುಗೇಟು

ಸುದ್ದಿದಿನ, ಬೆಂಗಳೂರು : ‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ. ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು,ಹೀಗಿರುವಾಗ ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ ಎಂದಿದ್ದಾರೆ.
ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ’. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಆಗುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂತೇಬೆನ್ನೂರು | ರಾಷ್ಟ್ರಪತಿ ಪದಕ ಪ್ರಶಸ್ತಿ ವಿಜೇತ ನಿವೃತ್ತ ಎ.ಸಿ.ಪಿ ರುದ್ರಪ್ಪ ಎಮ್ ಎನ್. ಅವರಿಗೆ ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಹಿರಿಯ ಕಿರಿಯ ಅಧಿಕಾರಿಗಳು ಹಾಗೂ ಕುಟುಂಬದವರ ಸಹಕಾರ ಮತ್ತು ಸ್ವಂತ ಜ್ಞಾನವೆ ಕಾರಣ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೂಳಿ ಅಭಿಮತ
ಸುದ್ದಿದಿನ,ಚನ್ನಗಿರಿ/ಸಂತೇಬೆನ್ನೂರು:ಕುಟುಂಬಸ್ಥರ ಹಾಗೂ ಸಹಪಾಠಿ ಸ್ನೇಹಿತರನ್ನೊಳಗೊಂಡು ತಾನು ಓದಿದ ಶಾಲೆಯಲ್ಲಿ ಗ್ರಾಮಸ್ಥರಿಂದ ಸನ್ಮಾನವನ್ನು ಸ್ವೀಕರಿಸುವುದು ಅತ್ಯಂತ ಉನ್ನತ ಮಟ್ಟದ ಸನ್ಮಾನವಾಗಿದೆ, ಇದಕ್ಕಿಂತ ದೊಡ್ಡ ಸನ್ಮಾನ ಬೇರೊಂದಿಲ್ಲ ಎಂದು ಚನ್ನಗಿರಿ ಉಪವಿಭಾಗದ ಉಪಾದೀಕ್ಷರಾದ ಪ್ರಶಾಂತ್ ಜಿ ಮುನ್ನೂಳಿರವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರಪತಿ ಪದಕ ಪ್ರಶಸ್ತಿ ಪಡೆಯಲು ಹಿರಿಯ -ಕಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸ್ವಂತ ಕುಟುಂಬದವರ ಸಹಕಾರ ಹಾಗೂ ಸ್ವಂತ ಜ್ಞಾನೇ ಕಾರಣ ಎಂದರು.
ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು
ಗ್ರಾಮದವರಾದ ಎಮ್,ಎನ್ ರುದ್ರಪ್ಪ ನಿವೃತ್ತ
ಪೋಲೀಸ್ ಉಪ ಆಯುಕ್ತರು ಸಂತೇಬೆನ್ನೂರು ಇವರು ಇತ್ತೀಚಿಗೆ ರಾಷ್ಟ್ರಪತಿ ಪದಕ ಸ್ವೀಕರಿಸಿದ್ದರು.
ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪುರಸ್ಕೃತರಿಗೆ ಏರ್ಪಡಿಸಿದ್ದ ಅಭಿನಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಲಾಖೆಯ ಮೇಲಾಧಿಕಾರಿಗಳಿಂದ ಸಿಗುವ ಪ್ರಶಸ್ತಿಗಳು ದೊರೆತರೆ ತುಂಬಾನೆ ಖುಷಿ ಪಡುತ್ತೇವೆ ರಾಷ್ಟ್ರಪತಿಗಳ ಪದಕ ದೊರೆಯುವುದು ಸಾಕಷ್ಠು ಶ್ರಮ ಬೇಕಾಗುತ್ತದೆ.
ಸಂತೇಬೆನ್ನೂರು ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ವಿಶೇಷತೆಯನ್ನೊಳಗೊಂಡಿದ್ದವರಾಗಿದ್ದಾರೆ, ಇಲ್ಲಿನ ಪ್ರತಿಭೆಗಳು, ವ್ಯಕ್ತಿತ್ವಗಳು, ಸಾಧನೆಗಳು ಹಾಗೂ ಐತಿಹಾಸಿಕ ಕೊಡುಗೆಗಳು ಮತ್ತು ಈ ಊರಿನ ಜನರು ವಿಶೇಷತೆಯುಳ್ಳವರಾಗಿದ್ದಾರೆ. 15 ದಿನಗಳೊಳಗೆ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕ ಕಾರ್ಯಕ್ರಮ ರೂಪಿಸಲು ಗ್ಯಾಲಕ್ಸಿ ತಂಡದ ಸದಸ್ಯರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ನಿವೃತ್ತ ಎ,ಸಿ,ಪಿ ರುದ್ರಪ್ಪ ಎಂ,ಎನ್ ನನ್ನ ಗುರುಗಳು ಸಿ,ಪಿ,ಐ ಆರ್.ಆರ್. ಪಾಟೀಲ್ .
1978-79 ರಲ್ಲಿ ನಾನು ಧಾರಾವಾಡದ ವಿಧ್ಯಾರಣ್ಯ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ರುದ್ರಪ್ಪ ಎಮ್ ಎನ್ ಧೈಹಿಕ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು ಇವರು ಕ್ರೀಡಾಪಟುವಾಗಿ ಉನ್ನತ ಶಿಖರದಲ್ಲಿದ್ದರು, ಇವರ ಆಟದ ವೈಖರಿಯನ್ನ ನನ್ನ ಜೀವನದಲ್ಲಿ ಅಳವಡಿಸಿಕೊಂಡು ನಾನೊಬ್ಬ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲಿಕ್ಕೆ ಇವರ ಹಿತನುಡಿಗಳು , ನನ್ನ ಜೀವನದಲ್ಲಿ ಪರಿಣಾಮ ಬೀರಿದೆ ನನ್ನ ಗುರುಗಳ ಜನನ ಸ್ಥಳದಲ್ಲಿ ನಾನು ವೃತ್ತ ನಿರೀಕ್ಷಕನಾಗಿ ಸೇವೆ ಸಲ್ಲಿಸಲ್ಲಿಸುತ್ತಿರುವುದು ನನಗೆ ತುಂಭಾ ಹೆಮ್ಮೆಎನಿಸುತಿದೆ ಎಂದರು.
ಮುಖ್ಯಮಂತ್ರಿ ಪದಕ ಪ್ರಶಸ್ತಿ ವಿಜೇತರಾದ ಚನ್ನಗಿರಿ ವೃತ್ತ ನಿರೀಕ್ಷಕರಾದ ಆರ್ ಆರ್ ಪಾಟೀಲ್ ಮಾತನಾಡಿದರು. ನಂತರ ಸಂತೇಬೆನ್ನೂರು ಪಿಎಸ್ಐ ಎಸ್ ಎಸ್ ಮೇಟಿ ಮಾತನಾಡಿ ಸಂತೇಬೆನ್ನೂರು ಪೋಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿರುವುದು ನನ್ನ ಭಾಗ್ಯವಾಗಿದೆ ಎಂದರು. ಇಲ್ಲಿನ ಜನರ ಪ್ರೀತಿ ವಿಶ್ವಾಸ ಪ್ರೋತ್ಸಹ ಶ್ಲಾಘನೀಯವಾದುದು.
ಇಲ್ಲಿನ ಜನ ಶ್ರೇಯೋಬಿವೃದ್ದಿಗೆ ಗ್ಯಾಲಕ್ಸಿ ಟೀಮ್ ಹಾಗೂ ತಂಡ ಇಲಾಖೆಯೊಂದಿಗೆ ಸಹಕರಿಸಿರುತ್ತಾರೆ ಸಂತೇಬೆನ್ನೂರು ವಾಲಿಬಾಲ್ ಆಟದ ತವರೂರಾಗಿದೆ. ನೋಬೆಲ್ ಸನ್ಮಾನಕ್ಕಿಂತ ದೊಡ್ಡದಾದ ಹುಟ್ಟೂರಲ್ಲಿ ಕುಟುಂಬಸ್ಥರ ಜೊತೆ ಸನ್ಮಾನ ಸ್ವಿಕರಿಸಿರು ಅತ್ಯುನ್ನತವಾಗಿದ್ದು ಬೆಳೆಯುವ ನಮ್ಮಂತ ಕಿರಿಯ ಅಧಿಕಾರಿಗಳಿಗೆ ನಿಮ್ಮ ಮಾರ್ಗದರ್ಶನ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರೇಶ್ ಪ್ರಸಾದ್ ಕೆಎಸ್.ಪ್ರಜಾವಾಣಿ ವರದಿಗಾರರು ವಹಿಸಿ ಪ್ರಸ್ತಾವಿಕ ನುಡಿಯನ್ನು ನುಡಿದರು, ಚಂದ್ರಶೇಖರ್ ಲೋಕಯುಕ್ತ ಡಿವೈಎಸ್ಪಿ ಗಂಗಾವತಿ, ಬಾಷಾ. ಅಬ್ದುಲ್ ರೆಹಮಾನ್ ನಿ,ಪೋಲೀಸ್ ಅಧೀಕ್ಷರು,ಬಸವರಾಜ ಮುಖಂಡರು. ಮೋಹನ್ ಕುಮಾರ್ ಪೋಲೀಸ್ ಉಪನಿರೀಕ್ಷಕರು ಮಾಯಕೊಂಡ. ಸಿದ್ದಪ್ಪ ಎಂ ಗ್ರಾಮದ ಹಿರಿಯ ಮುಖಂಡರು, ರಂಗನಾಥ್ ಜೆ, ಶಿವರುದ್ರಪ್ಪ .ಏಜೀಜ್ ಅಹಮದ್. ಮಹೇಶ್. ಗ್ರಾಮಸ್ಥರು ಮುಖಂಡರು,ಗ್ಯಾಲಕ್ಸಿ ತಂಡದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- ಪ್ರಶಸ್ತಿ ವಿಜೇತ ನಿವೃತ್ತ ಎ.ಸಿ.ಪಿ ರುದ್ರಪ್ಪ ಎಮ್ .ಎನ್ ಮಾತು
ಸನ್ಮಾನ ಸ್ವೀಕರಿಸಿ ಮನದಾಳದ ಮಾತನಾಡಿದ ರಾಷ್ಟ್ರಪತಿ ಪದಕ ಪ್ರಶಸ್ತಿ ವಿಜೇತ ನಿವೃತ ಎ,ಸಿ,ಪಿ, ರುದ್ರಪ್ಪ ಎಮ್,ಎನ್ ನಾನು ಪೋಲಿಸ್ ಇಲಾಖೆಯ ವೃತ್ತಿಯಿಂದ ನಿವೃತ್ತಿ ಹೊಂದಿದಾಗ ಪುನಃ ನಾಲ್ಕು ದಿನಗಳ ವರೆಗೆ ಪೋಲೀಸ್ ಸಮವಸ್ತ್ರ ದರಿಸುವ ಬಾಗ್ಯ ಎಲ್ಲರಿಗೂ ಸಿಗುವುದಿಲ್ಲಾ ಇದು ನನ್ನ ಅದೃಷ್ಠ, ಇದಕ್ಕೆ ಕಾರಣ ನನ್ನ ತಂದೆ ತಾಯಿಗಳ ಆಶೀರ್ವಾದವೆ ಕಾರಣ ಎಂದರು.
ನನ್ನ ಸ್ನೇಹಿತರ ಜೊತೆ ಸೇರದೆ ಇದ್ದರೆ ನಾನು ಎಸ್ ಎಸ್ ಎಲ್ ಸಿ ವರೆಗೆ ಅಷ್ಟೇ ವಿಧ್ಯಾಭ್ಯಾಸಕ್ಕೆ ಕೊನೆಗೊಳ್ಳುತಿತ್ತು. ಈ ಪ್ರಶಸ್ತಿಗೆ ಮೇಲಾಧಿಕಾರಿಗಳ ಮಾರ್ಗದರ್ಶನ, ಸಹದ್ಯೋಗಿಗಳ ಸಹಕಾರ ಇರದೆ ಎನನ್ನು ಸಾದಿಸಲಾಗುವುದಿಲ್ಲಾ. ನನ್ನ ವೃತ್ತಿಯ ಜೀವನದಲ್ಲಿ ಸಮಸ್ಯೆಗಳಿರುವ ಸ್ಥಳಗಳಿಗೆ ವರ್ಗಾಹಿಸುತಿದ್ದರು.
ನಾನು ಯಾವುದಕ್ಕೂ ಅಂಜದೆ ಕರ್ತವ್ಯವನ್ನು ನಿರ್ವಹಿಸುತ್ತ ಬಂದಿದ್ದೇನೆ, ನನ್ನ ಮಡದಿ ನನ್ನ ವರ್ಗ ಆದ ಕೂಡಲೆ ಲಗೇಜ್ ಕಟ್ಟಿ ಕಟ್ಟಿ ತುಂಬಾನೆ ನೊಂದಿದ್ದಾರೆ ಎಂದರು. ಕರ್ತವ್ಯೆವನ್ನು ನಿರ್ವಹಿಸಿದ್ದ ಸ್ಥಳಗಳ ಬಗ್ಗೆ ಈ ಸಂದರ್ಭದಲ್ಲಿ ಮೆಲುಕು ಹಾಕಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಲೈಫ್ ಸ್ಟೈಲ್6 days ago
ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ : ವಿವೇಕಾನಂದ
-
ದಿನದ ಸುದ್ದಿ6 days ago
ಆಂದೋಲನ-ಈ ಜೀವ ಈ ಜೀವನ | ಅಂಗನವಾಡಿ ಕಾರ್ಯಕರ್ತೆಯ ಅಸಾಮಾನ್ಯ ಕರ್ತವ್ಯಪ್ರಜ್ಞೆ..!
-
ದಿನದ ಸುದ್ದಿ5 days ago
“ನೀನು ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು..?” : ಸಚಿವ ಈಶ್ವರಪ್ಪ
-
ಸಿನಿ ಸುದ್ದಿ6 days ago
ಬಾಂಬೆ ಹೀರೋಹಿನ್ ಗಳು ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ ಅಂದವರಿಗೆ ಹೀಗಂದ್ರು ನಟಿ ಕೃತ್ತಿಕಾ ರವೀಂದ್ರ..!
-
ದಿನದ ಸುದ್ದಿ4 days ago
ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು, ಸಂಜೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ್ರು ನಾಗೇಶ್..!
-
ದಿನದ ಸುದ್ದಿ5 days ago
ಸಚಿವ ಸಂಪುಟ ವಿಸ್ತರಣೆ : ಏಳು ಹೊಸ ಸಚಿವರ ಹೆಸರು ಫೈನಲ್ ಗೊಳಿಸಿದ ಯಡಿಯೂರಪ್ಪ
-
ದಿನದ ಸುದ್ದಿ4 days ago
ಕೋವಿದ್ ಪ್ರಭಾವಳಿಯಲ್ಲಿ ಪ್ರಭುತ್ವದ ಕ್ರೌರ್ಯ
-
ಲೈಫ್ ಸ್ಟೈಲ್4 days ago
ಪಕ್ಷಿ ಪರಿಚಯ | ಬೆಳ್ಗಣ್ಣ