Connect with us

ದಿನದ ಸುದ್ದಿ

ಕಾರು ಕಳುವಾದರೆ ಇನ್ಸುರೆನ್ಸ್ ಕ್ಲೇಮ್‍ಗೆ ಬೇಕು ಎರಡು ಕೀಗಳು

ಒಂದು ವೇಳೆ ನಿಮ್ಮ ಕಾರು ಕಳುವಾಗಿ ಪೊಲೀಸರಿಗೆ ದೂರು ನೀಡಿ ಇನ್ಸೂರೆನ್ಸ್ ಕ್ಲೇಮ್ ಮಾಡಲು ಹೋದರೆ ಅಲ್ಲಿ ಕಾರಿನ ಎರಡೂ ಒರಿಜಿನಲ್ ಕೀಗಳನ್ನು ಕೇಳುತ್ತಾರೆ. ಏಕೆಂದರೆ ಇಂಥ ಪ್ರಕರಣಗಳಲ್ಲಿ ಒರಿಜಿನಲ್ ಕೀಗಳನ್ನು ಇನ್ಸೂರೆನ್ಸ್ ಕಂಪನಿಗಳಿಗೆ ಸಲ್ಲಿಸುವುದು ಕಡ್ಡಾಯ.

Published

on

ಸುದ್ದಿದಿನ ಡೆಸ್ಕ್: ಒಂದು ವೇಳೆ ನಿಮ್ಮ ಕಾರು ಕಳುವಾಗಿ ಪೊಲೀಸರಿಗೆ ದೂರು ನೀಡಿ ಇನ್ಸೂರೆನ್ಸ್ ಕ್ಲೇಮ್ ಮಾಡಲು ಹೋದರೆ ಅಲ್ಲಿ ಕಾರಿನ ಎರಡೂ ಒರಿಜಿನಲ್ ಕೀಗಳನ್ನು ಕೇಳುತ್ತಾರೆ. ಏಕೆಂದರೆ ಇಂಥ ಪ್ರಕರಣಗಳಲ್ಲಿ ಒರಿಜಿನಲ್ ಕೀಗಳನ್ನು ಇನ್ಸೂರೆನ್ಸ್ ಕಂಪನಿಗಳಿಗೆ ಸಲ್ಲಿಸುವುದು ಕಡ್ಡಾಯ.
ದಿಲ್ಲಿ ಮೂಲದ ವ್ಯಕ್ತಿ ಸುರೇಶ್ ಎಂಬುವರು ತಮ್ಮ ಹೋಂಡಾ ಸಿಟಿ ಕಾರನ್ನು ಮನೆ ಮುಂದೆ ಪಾರ್ಕ್ ಮಾಡಿದ್ದಾಗ ಕಾರು ಕಳುವಾಗಿದೆ. ಪೊಲೀಸರಿಗೆ ದೂರು ನೀಡಿ ಅದನ್ನು ಇನ್ಸುರೆನ್ಸ್ ಕಂಪನಿಗೆ ಸಲ್ಲಿಸಿದಾಗ ಕಾರಿನ ಎರಡು ಒರಿಜಿನಲ್ ಕೀಗಳನ್ನು ಸಲ್ಲಿಸುವಂತೆ ಕೇಳಿದ್ದಾರೆ. ಸುರೇಶ್ ಅವರ ಬಳಿ ಇದ್ದ ಒಂದು ಕೀ ಕಳೆದುಹೋಗಿದ್ದ ಕಾರಣ ಅವರು ಸಲ್ಲಿಸಲು ಸಾಧ್ಯವಾಗಿಲ್ಲ.
ತಮ್ಮ ಸಬೂಬು ಬರೆದು ಅರ್ಜಿ ಜತೆ ಸೇರಿಸಿ ಕೊಟ್ಟಾಗ ಇನ್ಸುರೆನ್ಸ್ ಕಂಪನಿಯು ಅರ್ಜಿಯನ್ನು ವಜಾ ಮಾಡಿ ವಿಮೆ ಹಣ ನೀಡುವುದು ಅಸಾಧ್ಯ ಎಂದಿದೆ.
ಕೇಂದ್ರ ರಸ್ತೆ ಸಂಚಾರ ಇಲಾಖೆಯ ಪ್ರಕಾರ ವ್ಯಕ್ತಿಯು ಕಾರು ಕೊಂಡಾಗ ನೀಡುವ ಎರಡು ಕೀಗಳು ಕಳೆದುಹೋಗಿದ್ದರೆ ಡ್ಯೂಪ್ಲಿಕೆಟ್ ಕೀಗಳನ್ನು ಬಳಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಒರಿಜಿನಲ್ ಕೀಗಳನ್ನು ಸಲ್ಲಿಸಬೇಕೆಂಬ ನಿಯಮ ಸರಿಯಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್, ಇನ್ಸುರೆನ್ಸ್, ಆರ್‍ಟಿಒ ಕಚೇರಿಗಳಿಗೆ ಅಲೆಯುತ್ತಿರುವ ಸುರೇಶ್ ಹೈರಾಣಾಗಿರುವುದಂತೂ ನಿಜ.

Advertisement
Click to comment

Leave a Reply

Your email address will not be published. Required fields are marked *

ದಿನದ ಸುದ್ದಿ

ಜಗಳೂರು | ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಮಿತಿಯಿಂದ ದೇವರ ಎತ್ತುಗಳಿಗೆ ಮೇವು ಸಂಗ್ರಹಣೆ

Published

on

ಸುದ್ದಿದಿನ, ಜಗಳೂರು : ಮ್ಯಾಸ ಬೇಡ/ಮ್ಯಾಸ ನಾಯಕ ಬುಡಕಟ್ಟು ಜನಾಂಗವು ರಾಜ್ಯದಲ್ಲಿ ವಿಶಿಷ್ಟವಾದ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿದ ಸಮೂದಾಯವಾಗಿದೆ. ಆನಾಧಿಕಾಲದಿಂದಲೂ ಸಂರಕ್ಷಣೆ ಮಾಡಿಕೊಂಡು ಬಂದಿರುವ ದೇವರ ಎತ್ತುಗಳು ಇಂದು ಮೇವು ನೀರು ಇಲ್ಲದೆ ಸತ್ತು ಹೊಗುತ್ತಿವೆ. ದೇವರ ಎತ್ತಿನ ಕಿಲಾರಿ ಗಳು ದೇವರ ಎತ್ತುಗಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟಪಡುತ್ತಿದ್ದಾರೆ.

ಈ ಜನಾಂಗಕ್ಕೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದವರ ಅನುದಾನ ಸಾಕಷ್ಟು ದುರ್ಭಳಕೆಯಾಗುತ್ತಿದೆ. ಸುಮಾರು ವರ್ಷಗಳಿಂದ ದೇವರ ಎತ್ತುಗಳಿಗೆ ಮೇವು ನೀರಿನ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲು ಮನವಿ ಮಾಡಿದರು ಸಹ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಈಗಾಗಲೇ ಎಲ್ಲಾ ಗುಡಿಕಟ್ಟೆಗಳ ಸುಮಾರು ದೇವರ ಎತ್ತುಗಳು ಮೇವು ನೀರು ಇಲ್ಲದೆ ಸತ್ತು ಹೋಗಿವೆ.

ಈ ಬಗ್ಗೆ ಟಿವಿ ಮತ್ತು ಪತ್ರಿಕಾ ಮಾದ್ಯಮದಲ್ಲಿ ಸಕಾಷ್ಟು ಬಾರಿ ವರಿದಿಯಾಗಿದೆ. ಆದರೂ ಸಹ ಸರ್ಕಾರ ಮೇವು ನೀರಿನ ಸೌಲಭ್ಯವನ್ನು ಅನುಕೂಲ ಮಾಡದೆ ಬುಡಕಟ್ಟು ಜನರನ್ನು ಕಡೆಗಣಿಸಿದೆ. ಹಿಗಾದರೆ ಬುಡಕಟ್ಟು ಜನರು ಉಳಿಸಿಕೊಂಡು ಬಂದ ದೇವರ ಎತ್ತುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಸಮಿತಿ ವತಿಯಿಂದ “ದೇವರ ಎತ್ತುಗಳಿಗೆ ಮೇವು ಸಂಗ್ರಹ “ ʼಒಂದು ಹೊರೆ ಹುಲ್ಲು ನೀಡಿ, ನಮ್ಮ ಪೂರ್ವಜರ ಪ್ರತೀಕವಾಗಿರುವ ದೇವರ ಎತ್ತುಗಳನ್ನು ಉಳಿಸಿಕೊಳ್ಳೂಣʼ ಎಂದು ಮ್ಯಾಸ ನಾಯಕ ಬುಡಕಟ್ಟು ಜನರು ಮತ್ತು ಮುಖ್ಯವಾಹಿನಿಯ ಎಲ್ಲಾ ಸಾರ್ವಜನಿಕರಿಂದ ಮೇವು ಸಂಗ್ರಹ ಮಾಡಲಾಗುತ್ತದೆ.

ಇದರ ಭಾಗವಾಗಿ ಇಂದು ಜಗಳೂರು ತಾಲ್ಲೂಕು ಮಾದಮುತ್ತೇನಹಳ್ಳಿ ಗ್ರಾಮದ ಕಾಮಗೇತಿ ಬೆಡಗಿನ ಶ್ರೀಮತಿ ಜಯಮ್ಮ ಮತ್ತು ಶ್ರೀ ತಿಮ್ಮಲಾಪುರದ ಪಾಲಯ್ಯ ಇವರ ಮಕ್ಕಳು ಒಂದು ಲೋಡ್‌ ರಾಗಿ ಹುಲ್ಲನ್ನು ಖರಿದಿಸಿ ದೇವರ ಎತ್ತುಗಳಿಗೆ ನೀಡಿರುತ್ತಾರೆ.

ಮ್ಯಾಸ ಮಂಡಲದ ಸಮಸ್ತ ನೆಂಟರು ಬಂಟರು ಹಾಗೂ ಸರ್ವ ಸಾರ್ವಜನಿಕರು ಈ ಒಂದು ಮೇವು ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ ಪ್ರತಿಯೊಬ್ಬರು ತಮ್ಮ ತಮ್ಮ ಗ್ರಾಮದಲ್ಲಿ ಮೇವು ಸಂಗ್ರಹಿಸಿ ಮ್ಯಾಸ ಮಂಡಲದ ಎಲ್ಲಾ ಗುಡಿಕಟ್ಟೆಯ ದೇವರ ಎತ್ತುಗಳಿಗೆ ನೀಡಬೇಕೆಂದು ಕೋರಿಕೊಳ್ಳುತ್ತೇವೆ.

ಮೇವು ಸಂಗ್ರಹಿಸಿದವರು ನಮ್ಮ ಸಮಿತಿಗೆ ತಿಳಿಸಿದರೆ ಮೇವುನ್ನು ತೆಗೆದುಕೊಂಡು ಹೋಗಿ ದೇವರ ಎತ್ತುಗಳಿಗೆ ತಲುಪಿಸುತ್ತೇವೆ ಎಂದು ಈ ಮೂಲಕ ತಿಳಿಯಪಡಿಸುತ್ತೇವೆ. ಶ್ರೀಮತಿ ಜಯಮ್ಮ ಶ್ರೀ ಪಾಲಯ್ಯ ಕುಟುಂಬದವರು ಭಕ್ತಿ ಪೂರ್ವಕವಾಗಿ ಉರಿಮೆ ವಾಧ್ಯದೊಂದಿಗೆ ಪೂಜೆ ಸಲ್ಲಿಸಿ ದೇವರ ಎತ್ತುಗಳ ಉಳಿವಿಗಾಗಿ ಕೋರಿಕೊಂಡರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಮ್ಯಾಸ ಬೇಡ ಅಥವಾ ಮ್ಯಾಸ ನಾಯಕ ಬುಡಕಟ್ಟು ಜನರ ದೇವರ ಎತ್ತುಗಳ ಗೊಳು ಕೇಳಬೇಕೆಂದು ಮನವಿ ಮಾಡುತ್ತೇವೆ. ಮತ್ತು ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕೆಂದು ಒತ್ತಾಯಿಸುತ್ತೇವೆ.

ಈ ಸಂದರ್ಭದಲ್ಲಿ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಮಿತಿಯ ಕಾರ್ಯದರ್ಶಿಯಾದ ದೊಡ್ಡಮನಿ ಪ್ರಸಾದ್‌, ಉಪಾಧ್ಯಕ್ಷರಾದ ಎಂ ಕೆ ಬೋಸಪ್ಪ, ಕೆ.ಬಿ.ಓಬಣ್ಣ, ಕವಲಹಳ್ಳಿ ಕಾಮಣ್ಣ, ಕಿಲಾರಿ ಬಡಯ್ಯ, ದಿಬ್ದಹಳ್ಳಿ ರಮೇಶ, ಪೂಜಾರ್‌ ನಾಗರಾಜ ಮತ್ತು ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಸಂಗೀತ ನೃತ್ಯ ತರಬೇತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2020-21ನೇ ಸಾಲಿಗೆ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ ಗುರು ಶಿಷ್ಯ ಪರಂಪರೆ ಯೋಜನೆಯಡಿ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾಕೀರ್ತನ ಮತ್ತು ಗಮಕ ಕಲಾಪ್ರಕಾರಗಳಲ್ಲಿ ಕಲಿಯಲು ಆಸಕ್ತಿಯುಳ್ಳ ಅಭ್ಯಾಸ ಮಾಡುತ್ತಿರುವ/ಹೆಚ್ಚಿನ ಅಭ್ಯಾಸ ಮಾಡಲ್ಚಿಸುವ ವಿದ್ಯಾರ್ಥಿಗಳಿಗೆ 3 ತಿಂಗಳವರೆಗೆ ತರಬೇತಿ ನೀಡಲು ಅರ್ಜಿಯನ್ನು ಆಹ್ವಾನಿಸಿದೆ.

ಅಭ್ಯರ್ಥಿಗಳು 16 ರಿಂದ 26 ವರ್ಷದ ವಯೋಮಾನದವರಾಗಿರಬೇಕು. ಅರ್ಜಿಯನ್ನು ಅಕಾಡೆಮಿಯ ವೇಳೆಯಲ್ಲಿ ವೆಬ್‍ಸೈಟ್ https//karnatakasangeetanrityaacademy.com
ಮೂಲಕ ಪಡೆದು ಸಲ್ಲಿಸಬಹುದು. ಬೇರೆ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಆಯಾ ಜಿಲ್ಲೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದ್ದು ಜ.30 ಅರ್ಜಿ ಸಲ್ಲಿಸಲಯ ಕಡೆಯ ದಿನವಾಗಿರುತ್ತದೆ.

ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ ರಸ್ತೆ ಬೆಂಗಳೂರು-560002 ಇಲ್ಲಿಗೆ ಸಲ್ಲಿಸಬೇಕೆಂದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಬನಶಂಕರಿ ವಿ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉತ್ತಮ ಕೈಗಾರಿಕಾ ನೀತಿ ಜಾರಿ ; ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ : ಬಿ.ಎಸ್.ಯಡಿಯೂರಪ್ಪ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಕರ್ನಾಟಕ ಉದ್ಯಮ ಸ್ನೇಹಿ ರಾಜ್ಯವಾಗಿದ್ದು, ಉತ್ತಮ ಕೈಗಾರಿಕಾ ನೀತಿ ಜಾರಿ ಮಾಡುವ ಮೂಲಕ ದೊಡ್ಡ ದೊಡ್ಡ ಪ್ರಮಾಣದ ಉದ್ಯಮಗಳನ್ನು ರಾಜ್ಯಕ್ಕೆ ತಂದು ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ.

ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮ ಬಳಿಯ ಸಾಯಿಪ್ರಿಯ ಶುಗರ್ಸ್ ಲಿ. ಯೂನಿಟ್ ಆವರಣದಲ್ಲಿ ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹ ಸಂಸ್ಥೆ ವತಿಯಿಂದ ಭಾನುವಾರದಂದು ಏರ್ಪಡಿಸಿದ ಸಮಾರಂಭದಲ್ಲಿ ನೂತನ ಕಾರ್ಖಾನೆ ಗಳ ಉದ್ಘಾಟನೆ, ನಿರಾಣಿ ಸಮೂಹ ದಿಂದ 75 ಸಾವಿರ ಟಿಸಿಡಿ ಕಬ್ಬು ನುರಿಸುವ, 260 ಮೆ.ವ್ಯಾ. ಸಹ ವಿದ್ಯುತ್, 26 ಲಕ್ಷ ಲೀ. ಇಥೆನಾಲ್ ಪ್ರತಿದಿನ ಬಯೋ ಸಿ.ಎನ್.ಜಿ. ಮತ್ತು ಸಿಒ2 ಉತ್ಪಾದನೆ ಗಳ ವಿಸ್ತರಣೆ ಯೋಜನೆಗಳಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ವರುಣ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಮುಂಬರುವ 2 ವರ್ಷ ಕಬ್ಬು ಬೆಳೆಗಾರರರಿಗೆ ನೀರಿನ ತೊಂದರೆ ಆಗಲಿಕ್ಕಿಲ್ಲ ಎಂದರು. ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ರೈತರು ನೆಮ್ಮದಿಯ ಜೀವನ ನಡೆಸಲು ಶ್ರಮಿಸುವೆ. ಕೊರೊನಾ ಸಂದರ್ಭದಲ್ಲಿ ರಾಜ್ಯ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು, ಆದರೂ ರಾಜ್ಯದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ ಎಂದರು.

ಮುರುಗೇಶ್ ನಿರಾಣಿಯವರು ಸಕ್ಕರೆ ಕಾರ್ಖಾನೆ ಆರಂಭಿಸಿ, 10 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಸೃಷ್ಟಿ ಮಾಡಿದ್ದಾರೆ. ಕಬ್ಬಿನ ರಸದಿಂದ ಇಥೆನಾಲ್ ತಯಾರಿಸಿ ಪರಿಸರ ಸಂರಕ್ಷಣೆ ಮಾಡುತ್ತಿದ್ದಾರೆ. ದೇವರು ಅವರಿಗೆ ಇನ್ನಷ್ಟು ಉದ್ಯೋಗ ಸೃಷ್ಟಿಸುವ ಶಕ್ತಿ ನೀಡಲಿ.

ದೇಶಕ್ಕೆ ವಲ್ಲಬಾಯಿ ಪಟೇಲ್ ನಂತರ ಅಮಿತ ಶಾ ಅವರು ಉತ್ತಮ ಗೃಹ ಸಚಿವರಾಗಿ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಳಪಡಿಸಲಾಗುವುದು ಎಂದು ಅವರಿಗೆ ಈ ವೇದಿಕೆಯ ಮೂಲಕ ಭರವಸೆ ನೀಡುವೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending