ಸಿನಿ ಸುದ್ದಿ
ದುನಿಯಾ ವಿಜಿ ‘ಖೈದಿ ನಂಬರ್ 9035’..!: ಈ ದಿನದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ಓದಿ
![](https://suddidina.com/wp-content/uploads/2018/09/Duniya-vijay-suddidina.jpg)
ಸುದ್ದಿದಿನ, ಬೆಂಗಳೂರು : ಪರಪ್ಪನ ಆಗ್ರಹಾರ ಜೈಲಿನಲ್ಲಿ ದುನಿಯಾ ವಿಜಿಗೆ ನಂಬರ್ ಖೈದಿ ನಂಬರ್ ಕೊಡಲಾಗಿದೆ. ಜೈಲು ಅಧಿಕಾರಿಗಳಿಂದ ವಿಜಿಗೆ ವಿಚಾರಣಾಧೀನ ಖೈದಿ ಸಂಖ್ಯೆ ಮಂಜೂರು ಮಾಡಿದ್ದಾರೆ. ದುನಿಯಾ ವಿಜಿಗೆ 9035, ಪ್ರಸಾದ್ 9036, ಮಣಿ 9037, ಪ್ರಸಾದ್ 9038. ನಾಲ್ವರು ಆರೋಪಿಗಳಿಗೆ UTP (ಯು.ಟಿ.ಪಿ : ಅಂಡರ್ ಟ್ರಯಲ್ ಪ್ರಿಸನರ್) ಸಂಖ್ಯೆ ನೀಡಿದ ಜೈಲು ಆಧಿಕಾರಿಗಳು.
ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ದುನಿಯಾ ವಿಜಯ್ ಕೋರ್ಟ್ ಮೊರೆ ಹೋಗುದ್ದಾರೆ. 8ನೇ ACMM ಕೋರ್ಟ್ಗೆ ಜಾಮೀನು ಕೋರಿ ಅರ್ಜಿಸಲ್ಲಿಸಿದ್ದಾರೆ. A1 ಪ್ರಸಾದ್, A2 ದುನಿಯಾ ವಿಜಯ್, A3 ಮಣಿ ಇಂದ ಅರ್ಜಿ ಸಲ್ಲಿಸಲಾಗಿದ್ದು, ಮೂವರು ಆರೋಪಿಗಳ ಪರ ವಕೀಲ ಶಿವಕುಮಾರ್ ವಕಾಲತ್ತು ನಡೆಸಲಿದ್ದಾರೆ. ನ್ಯಾ.ಮಹೇಶ್ ಬಾಬು ರಿಂದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಬಂದ 3 ಆರೋಪಿಗಳಿಗೆ ಜಾಮೀನು ಅರ್ಜಿ
ನೀಡದಂತೆ ವಾದ ಮಂಡಿಸಲಾಯ್ತು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಿರುವ ಸರ್ಕಾರಿ ಅಭಿಯೋಜಕರು.
ದುನಿಯಾ ವಿಜಯ್ ಪತ್ನಿಯರ ಬಡಿದಾಟ ಪ್ರಕರಣ
ಇಬ್ಬರು ಪತ್ನಿಯರ ಹೇಳಿಕೆ ದಾಖಲಿಸಿರುವ ಪೊಲೀಸರು, ಕೀರ್ತಿ ಮನೆಯಲ್ಲಿ ನೆನ್ನೆ ನಡೆದಿದ್ದ ಪತ್ನಿಯರಿಬ್ಬರ ಬಡಿದಾಟ, ಪರಸ್ಪರ ತಳ್ಳಾಡಿ, ಬಡಿದಾಡಿಕೊಂಡು,ಕೈ ಗಳಿಂದ ಹಲ್ಲೆ ಮಾಡಿಕೊಂಡು ಜಗಳ. ದುನಿಯಾ ವಿಜಯ್ ತಂದೆ-ತಾಯಿ ಇಬ್ಬರಿಂದಲೂ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು. ಕೀರ್ತಿ ಮತ್ತು ನಾಗರತ್ನ ಗಲಾಟೆಗೆ ಕಾರಣವೇನು ಎಂಬ ಅಂಶಗಳ ಕುರಿತ ಪೊಲೀಸರಿಗೆ ವಿವರಣೆ ಪಡೆಯಲಾಗಿದೆ. ಘಟನೆ ಸಂಪೂರ್ಣ ಚಿತ್ರಣ ಪೊಲೀಸರಿಗೆ ವಿವರಿಸಿರುವ ವಿಜಯ್ ಪೋಷಕರು. ವಿಜಯ್ ಮಕ್ಕಳ ಹೇಳಿಕೆ ದಾಖಲಿಸಲು ಪೊಲೀಸರ ನಿರ್ಧಾರ ಮಾಡಿದ್ದಾರೆ.
ಘಟನೆ ನಡೆದ ವೇಳೆ ಮನೆಯಲ್ಲಿ ಪ್ರತ್ಯಕ್ಷ ದರ್ಶಿಗಳಾಗಿದ್ದ ಮೂವರು ಮಕ್ಕಳ ಹೇಳಿಕೆಯನ್ನು ಸಂಜೆ ದಾಖಲಿಸಲು ನಿರ್ಧರಿಸಿರುವ ಗಿರಿನಗರ ಪೊಲೀಸರು.
ಪರಂ ಮೊರೆ ಹೋದ ಪಾನಿಪೂರಿಕಿಟ್ಟಿ
ಗೃಹಸಚಿವ ಜಿ. ಪರಮೇಶ್ವರ್ ಮೊರೆ ಹೋದ ಪಾನಿಪುರಿ ಕಿಟ್ಟಿಯು ದುನಿಯಾ ವಿಜಿ ಪ್ರಕರಣವನ್ನು ಸರ್ಕಾರಿ ವಿಶೇಷ ಅಭಿಯೋಜ ಕಾರಗಿ ಶ್ಯಾಂಮ್ ಸುಂದರ್ ಅವರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ. ಶ್ಯಾಂಮ್ ಸುಂದರ್ ವಿದ್ವತ್ ಪ್ರಕರಣವನ್ನು ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡಿದ್ರು,ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಂಡಿದ್ರು, ಹೀಗಾಗಿ ಅವರನ್ನೆ ನೇಮಕ ಮಾಡಬೇಕೆಂದು ಗೃಹಸಚಿವರ ಬಳಿ ಮನವಿ ಮಾಡಿದ್ದಾರೆ ಕಿಟ್ಟಿ.
ವಿಜಿ ಪತ್ನಿ ನಾಗರತ್ನ ಹೀಗಂದ್ರು
ಪಾನಿಪುರಿ ಕಿಟ್ಟಿ ಒಳ್ಳೆ ಮನುಷ್ಯ. ವಿಜಯ್ ಜೊತೆ ತುಂಬಾ ಚೆನ್ನಾಗೆ ಇದ್ರು. ಪಾನಿಪುರಿ ಕಿಟ್ಟಿ ಅವರ ಮನೆಯಿಂದ ಊಟ ತಂದು ವಿಜಯ್ ಗೆ ಕೊಟ್ತೀದ್ರು. ನನ್ನ ಗಂಡನ ಜೊತೆ ತುಂಬಾ ಚೆನ್ನಾಗಿದ್ರು. ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಯಾಕೆ ಗಲಾಟೆ ಆಯಿತು ಅನ್ನೋದು ಗೊತ್ತಿಲ್ಲ ವಿಜಿ ಪತ್ನಿ ನಾಗರತ್ನ ಹೇಳಿಕೆ ನೀಡಿದ್ದಾರೆ. ದುನಿಯಾ ವಿಜಯ್ ತಂದೆ ಅವರೇ ನನ್ನ ಬಗ್ಗೆ ತಪ್ಪು ಮಾಹಿತಿ ನೀಡ್ತೀದ್ದಾರೆ. ನಾಗರತ್ನಗೆ ಆಸ್ತಿ ಕೊಟ್ಟಿದೇವೆ ಅಂತಾ ಹೇಳಿಕೊಂಡು ಓಡಾಡ್ತೀದ್ದಾರೆ. ಅವರೇ ಹಾದಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ. ವಿಜಿ ಎರಡನೇ ಹೆಂಡ್ತಿ ಮೇಲೆ ದೂರು ನೀಡಿದ್ದ ನಾಗರತ್ನ . ನಿನ್ನೆ ದುನಿಯಾ ವಿಜಯ್ ಗಲಾಟೆ ವಿಚಾರ ಟಿವಿಯಲ್ಲಿ ನೋಡ್ದೆ. ಮಗಾ ಸಾಮ್ರಾಟ್ ಕೂಡಾ ವಿಜಯ್ ಜೊತೆ ಇದ್ರು ಅಂತಾ ನೋಡ್ದೆ. ಅದ್ಕೆ ಗಾಬರಿಯಾಗಿ ಕೀರ್ತಿ ಗೌಡ ಮನೆಗೆ ಹೋದೆ.ಯಾಕೆ ನನ್ನ ಮಗನನ್ನ ಅಷ್ಟೋತ್ತಿಗೆ ಕಳುಹಿಸಿದ್ರೆ ಅಂತಾ ಕೇಳ್ದೆ. ಆಗ ನಮ್ಮ ಮಾವಾ,ಅತ್ತೆ ಕೀರ್ತಿ ಗೌಡಗೆ ಸರ್ಫೋರ್ಟ್ ಮಾಡಿದ್ರು. ನಂತ್ರ ಮಾತಿಗೆ ಮಾತು ಬೆಳೆದು ಗಲಾಟೆ ಆಯಿತು, ಹೊಡೆದಾಟ ಆಯಿತು. ನಂತ್ರ ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಟ್ಟೆ.
ದುನಿಯಾ ವಿಜಯ್ ಗೆ ಬುದ್ಧಿ ಹೇಳೋರು ಯಾರು ಇಲ್ಲ
ಕಳೆದ ಎರಡು ವರ್ಷದಿಂದ ವಿಜಿ ಜೈಲು,ಪೊಲೀಸ್ ಠಾಣೆಗೆ ಹೋಗ್ತಾನೆ ಇದ್ದಾರೆ. ನಾನ್ ಬುದ್ಧಿ ಹೇಳೋಕೆ ಹೋದೆ ನನ್ನನ್ನ ದೂರ ಮಾಡಿದ್ರು. ಈಗ ಅವರು ದುಡ್ಡಿಗಾಗಿ ಬಂದವಳ ಜೊತೆ ಇದ್ದಾರೆ. ಅವ್ಳು ಸ್ವಲ್ಪ ದಿನ ಇರ್ತಾಳೆ ಆಮೇಲೆ ಹೋಗ್ತಾಳೆ. ಅವ್ರೆಲ್ಲ ದುಡ್ಡಿಗೆ ಬರೋರು. ಈಗ ಇವ್ರು ಜೈಲಿಗೆ ಹೋಗಿದ್ದಾರೆ, ನನ್ನ ಮಕ್ಕಳ ಗತಿ ಏನು. ಕೀರ್ತಿ ಗೌಡದು ದಾರಿದ್ರ ಕಾಲು.ಅವಳು ಕಾಲು ಇಟ್ಟಿದೆ ತಡ ವಿಜಯ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ನಾನ್ ಇದಿದ್ರೆ ಸುಮ್ಮನೆ ಇರ್ತಿದ್ನಾ..? ಈಗ ವಿಜಯ್ ಜೈಲಿಗೆ ಹೋಗೋಕ್ಕೆ ಕೀರ್ತಿ ಗೌಡನೇ ಕಾರಣ.
ಪಾನಿಪುರಿ ಕಿಟ್ಟಿ ಹೇಳಿಕೆ
ಮಾರುತಿ ಗೌಡ ಆರೋಗ್ಯ ಇನ್ನು ಚೇತರಿಕೆಯಾಗಿಲ್ಲ. ಎರಡಗಡೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ ಎನ್ನುತ್ತಿದ್ದಾನೆ ಮಾರುತಿ ಗೌಡ. ರಾತ್ರಿಯೆಲ್ಲಾ ಕತ್ತು ತುಂಬಾ ನೋವು ಎನ್ನುತ್ತಿದ್ದ. ಏನು ತಿಂದರು ಮಾರುತಿ ಗೌಡ ವಾಂತಿ ಮಾಡಿಕೊಳ್ಳುತ್ತಿದ್ದಾನೆ. ಬಾಯಿಗೆ 14 ಹೊಲಿಗೆ ಹಾಕಿದ್ರು ಊತ ಕಡಿಮೆಯಾಗಿಲ್ಲ. ಮಾರುತಿ ಬಾಯಿ ಹಾಗೂ ತುಟಿ ಮತ್ತಷ್ಟು ಊತುಕೊಂಡಂತಿದೆ. ಸಿಟಿ ಸ್ಕ್ಯಾನ್ ರಿಪೋರ್ಟ್ ಗಾಗಿ ಕಾಯುತ್ತಿದ್ದೇವೆ. 9 ಗಂಟೆಗೆ ಸಿಟಿ ಸ್ಕ್ಯಾನ್ ರಿಪೋರ್ಟ್ ಬಂದಿರಬೇಕು.ನಾವು ಡಿಸಿಎಂ ಭೇಟಿ ಗೆ ಬಂದಿದ್ದೇವೆ. ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಮಾರುತಿಗೌಡ ಎಂದು ಪಾನಿಪುರಿ ಕಿಟ್ಟಿ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಮತ್ತೆ ತಾಯಿಯಾಗಬೇಕು : ನಟಿ ಸಮಂತಾ
![](https://suddidina.com/wp-content/uploads/2024/11/Actress_Samantha_suddidina.jpg)
ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.
ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್ಬೌನ್ಸ್ ಕೇಸ್ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?
![](https://suddidina.com/wp-content/uploads/2024/11/Guruprasad_suddidina_director.jpg)
ಸುದ್ದಿದಿನಡೆಸ್ಕ್:ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಗುರುಪ್ರಸಾದ್ ಮೇಲೆ ಸಾಲು ಸಾಲು ಚೆಕ್ಬೌನ್ಸ್ ಕೇಸ್ಗಳಿದ್ದವು. ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿಕೊಂಡಿದ್ದರು. ಶ್ರೀನಿವಾಸ್ ಗೌಡ ಎಂಬುವರ ಜೊತೆ ಹಣದ ವ್ಯವಹಾರಕ್ಕೆ ಕಿರಿಕ್ ಕೂಡ ಆಗಿತ್ತು. ಗುರುಪ್ರಸಾದ್ಗೆ ಅಭಿಮಾನಿಯಾಗಿದ್ದ ಶ್ರೀನಿವಾಸ್ ಗೌಡ 25 ಲಕ್ಷ ಹಣ ನೀಡಿದ್ದರು. ಗುರುಪ್ರಸಾದ್ ಬರವಣಿಗೆ ಮೆಚ್ಚಿ ಜೊತೆಯಲ್ಲೇ ಇದ್ದರು ಶ್ರೀನಿವಾಸ್ ಗೌಡ.
ಹಣ ವಾಪಸ್ ಕೊಡಲಾಗದೇ ಕಿರಿಕ್ ಮಾಡಿಕೊಂಡಿದ್ದರು ನಿರ್ದೇಶಕ ಗುರುಪ್ರಸಾದ್ ಅವರು. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದ, ಗುರುಪ್ರಸಾದ್ ವಿರುದ್ದ ಕಾನೂನು ಸಮರ ಸಾರಿದ್ದರು. ಅಕ್ಟೋಬರ್ 24ರಂದು ಇದ್ದ ಕೋರ್ಟ್ವಿಚಾರಣೆಗೂ ಹಾಜರಾಗಿರಲಿಲ್ಲ ಗುರುಪ್ರಸಾದ್. ಮೆಡಿಕಲ್ ರಿಪೋರ್ಟ್ ನೀಡಿ ವಿಚಾರಣೆ ಮುಂದೂಡಿಸಿಕೊಂಡಿದ್ದರು.
ನಿನ್ನೆ ಅಂದರೆ ನವೆಂಬರ್ 2ಕ್ಕೆ ಗುರುಪ್ರಸಾದ್ ಹುಟ್ಟುಹಬ್ಬ ಇತ್ತು. ಶುಭಾಶಯ ಕೋರಲು ಕರೆಮಾಡಿದವರಿಗೂ ನಾಟ್ ರೀಚಬಲ್ ಬಂದಿತ್ತು ಮೊಬೈಲ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!
![](https://suddidina.com/wp-content/uploads/2024/11/mata_Guruprasad_suddidina.jpg)
ಸುದ್ದಿದಿನಡೆಸ್ಕ್:ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
52 ವರ್ಷದ ಕನಕಪುರ ಮೂಲದ ಗುರುಪ್ರಸಾದ್ ಇನ್ನಿಲ್ಲಾ.. ತುಮಕೂರು ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮಠ, ಎದ್ದೇಳು ಮಂಜುನಾಥ್ ಚಿತ್ರದ ಮೂಲಕ ಮನೆಮಾತಾಗಿದ್ದರು.
ನಿರ್ದೇಶಕ ʻಮಠʼ ಗುರುಪ್ರಸಾದ್ ಅವರು ನವೆಂಬರ್ 02, 1972 ರಂದು ರಾಮನಗರದಲ್ಲಿ ಜನಿಸಿದ್ದರು, ಅಂದರೆ ನಿನ್ನೆ ನಿರ್ದೇಶಕ ಗುರುಪ್ರಸಾದ್ ಹುಟ್ಟುಹಬ್ಬ ಇತ್ತು, ನಿನ್ನೆ ಬರ್ತ್ ಡೇ ವಿಶ್ ಮಾಡಲು ಕರೆಮಾಡಿದವರಿಗೆ ನೋ ಆನ್ಸರ್ ಅಂತ ಬರುತ್ತಿತ್ತು, ನಿರ್ದೇಶಕ ಗುರುಪ್ರಸಾದ್ ಅವರ ಮೊಬೈಲ್ ನಾಟ್ ರೀಚಬಲ್ ಆಗಿತ್ತು, ಗುರುಪ್ರಸಾದ್ ತಮ್ಮ ಜನ್ಮದಿನಕ್ಕೆ ಮುನ್ನವೇ ಜೀವನಕ್ಕೆ ಅಂತ್ಯ ಹಾಡಿಕೊಂಡಿದ್ದಾರೆ. ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ಗುರುಪ್ರಸಾದ್..!
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ಅಂತರಂಗ2 days ago
ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು
-
ದಿನದ ಸುದ್ದಿ2 days ago
ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ನಿಂದ ವಿದ್ಯಾರ್ಥಿ ವೇತನ ವಿತರಣೆ
-
ದಿನದ ಸುದ್ದಿ9 hours ago
ಬ್ಯಾಂಕ್ ದರೋಡೆ ಹೆಚ್ಚಳ ; ಭದ್ರತಾ ಮಾನದಂಡಗಳನ್ನು ಬ್ಯಾಂಕ್ಗಳು ಪಾಲನೆ ಮಾಡುವುದು ಕಡ್ಡಾಯ : ಎಸ್ಪಿ ಉಮಾ ಪ್ರಶಾಂತ್ ಸೂಚನೆ