Connect with us

ಕ್ರೀಡೆ

ಫಿಪಾ ವಿಶ್ವಕಪ್ ಟೂರ್ನಿ ಪುಟ್ಬಾಲ್ ತಯಾರಾಗಿದ್ದು ಎಲ್ಲಿ ಗೊತ್ತಾ..?

Published

on

Photo Courtesy: Daily Times

ಸುದ್ದಿದಿನ ಡೆಸ್ಕ್ : ಷ್ಯಾದಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರು ಫುಟ್ಬಾಲ್ ಫಿಫಾ ವಿಶ್ವ ಕಪ್ ಟೂರ್ನಿಗೆ ಬಹುತೇಕ ತಯಾರಿಗಳು ಪೂರ್ಣಗೊಂಡಿವೆ. ಅಂದಹಾಗೆ, ಈ ಟೂರ್ನಿಯಲ್ಲಿ ನ ಪಂದ್ಯಗಳಿಗೆ ಬಳಸುವ ಪುಟ್ಬಾಲ್ ಚೆಂಡು ತಯಾರಾಗುವುದು ಪಾಕಿಸ್ತಾನದ ಸೈಲ್ ಕೋಟ್ ನಲ್ಲಿ.

ಅಡಿಡಾಸ್ ಟೆಲ್ ಸ್ಟಾರ್ 18 ಚೆಂಡನ್ನು ಈ ಸಲದ ಫಿಪಾ ವಿಶ್ವಕಪ್ ಪಂದ್ಯಲ್ಲಿ ಬಳಸಲಾಗುತ್ತೆ. ಈ ಚಂಡನ್ನು ಪಾಕಿಸ್ತಾನದಲ್ಲಿ‌ ತಯಾರಿಸಲಾಗಿದೆ. ಈ ಟೋರ್ನಿಗೆ ಚಂಡನ್ನು ತಯಾರಿಸುತ್ತಿರುವುದು ಇದೇ ಮೊದಲೇನಲ್ಲ. 2014 ರಲ್ಲಿ ನಡೆದ ಬ್ರೆಜಿಲ್ ವಿಶ್ವಕಪ್ ಟೂರ್ನಿಯ ಬ್ರಝೂಕಾ ಚೆಂಡನ್ನೂ ಕೂಡಾ ಪಾಕಿಸ್ತಾನದಲ್ಲಿಯೇ ತಯಾರಿಸಲಾಗಿತ್ತು.

ಫಿಫಾ ವಿಶ್ವಕಪ್‌ಗಾಗಿ 40 ಮಿಲಿಯನ್ ಚೆಂಡುಗಳನ್ನ ಪಾಕಿಸ್ತಾನ ತಯಾರಿಸಿದೆ. ವಿಶೇಷವಾಗಿ ಅಡಿಡಾಸ್ ಟೆಲ್‌ಸ್ಟಾರ್ 18 ಚೆಂಡನ್ನಶೂನ್ಯ ಗುರುತ್ವಾಕರ್ಷಣೆಯಲ್ಲಿ ಈ ಚೆಂಡನ್ನ ತಯಾರಿಸಲಾಗಿದೆ. ಕೃತಕ ಉಪಗ್ರಹದಲ್ಲಿ ತಯಾರಿಸಲಾದ ಈ ಚೆಂಡು, ಈ ಬಾರಿಯ ಫುಟ್ಬಾಲ್ ಟೂರ್ನಿಯ ವಿಶೇಷತೆಯಲ್ಲೊಂದು.

ಈ ಫೀಫಾ ವಿಶ್ವಕಪ್‌ ಗೆ ಸುಮಾರಯ 40ಮಿಲಿಯನ್ ಚೆಂಡುಗಳನ್ನು, ಅಡಿಡಾಸ್ ಟೆಲ್ ಸ್ಟಾರ್ 18 ನ್ನು ಶೂನ್ಯ ಗುರುತ್ವಾಕರ್ಷಣೆಯಲ್ಲಿ ತಯಾರಿಸಲಾಗಿದೆಯಂತೆ. ಕೃತಕ ಉಪಗ್ರಹದಲ್ಲಿ ತಯಾರಿಸಿರುವ ಈ ಚೆಂಡು ಟೂರ್ನಿಯ ವಿಷೇಶವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ

ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಮರಳಿ ತಂಡಕ್ಕೆ..!

Published

on

ಸುದ್ದಿದಿನ ಡೆಸ್ಕ್: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಗುರುವಾರ ಮತ್ತೆ ಕ್ರಿಕೆಟ್‌ಗೆ ಮರಳಲಿದ್ದಾರೆ. ರಾಜ್ಯದ ನ್ಯೂ ಸೌತ್ ವೇಲ್ಸ್‌ನ ಏಕದಿನ ಪಂದ್ಯದಲ್ಲಿ ಅವರು ತೊಡೆಸಂದು ಒತ್ತಡದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಜನವರಿಯಲ್ಲಿ ಗಬ್ಬಾದಲ್ಲಿ ನಡೆದ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ನಂತರ ಅನುಭವಿ ಎಡಗೈ ಆಟಗಾರ ಡೇವಿಡ್ ಆಡಲಿಲ್ಲ.ಕಾರಣ ನವೆಂಬರ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದರು.

ಇದನ್ನೂ ಓದಿ | ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ

ಕಳೆದ ತಿಂಗಳು ಈ ತೊಡೆಯ ಗಾಯವು ಬೇಗ ಗುಣವಾಗುವುದು ಕಷ್ಟ ಎಂದು ಗುಣವಾಗುವುದು ಕಷ್ಟ ಎಂದು ಅವರು ಹೇಳಿದ್ದರು. ಆದರೆ ನ್ಯೂ ಸೌತ್ ವೇಲ್ಸ್ ತರಬೇತುದಾರ ಫಿಲ್ ಜಾಕ್ವೆಸ್ ಅವರು ಗುರುವಾರ ದೇಶೀಯ ಮಾರ್ಷ್ ಏಕದಿನ ಕಪ್ನಲ್ಲಿ ದಕ್ಷಿಣ ಆಸ್ಟ್ರೇಲಿಯಾವನ್ನು ಎದುರಿಸಲು ಯೋಗ್ಯರಾಗಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ

Published

on

ಸುದ್ದಿದಿನ,ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಮಾರ್ಚ್ 2021ನೇ ಮಾಹೆಯಲ್ಲಿ ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ (Sports Science) 8 ರಿಂದ 13 ವರ್ಷ ವಯೋಮಾನದೊಳಗಿನ ವಯೋಮಿತಿಯ ಬಾಲಕ/ಬಾಲಕಿಯರಿಗೆ ವೈಜ್ಞಾನಿಕವಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಲಿದ್ದಾರೆ.

ಜಿಲ್ಲೆಯಲ್ಲಿ ಮಾ.05 ರಂದು ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಸಂಘಟಿಸಲಾಗುವುದು. 08 ರಿಂದ 13 ವರ್ಷ ವಯೋಮಾನದೊಳಗಿನ ವಯೋಮಿತಿಯ ಬಾಲಕ/ಬಾಲಕಿಯರು ತಮ್ಮ ಜನ್ಮ ದಿನಾಂಕ, ಆಧಾರ್ ಕಾರ್ಡ್ ದಾಖಲೆ ಸಲ್ಲಿಸಬೇಕು. ಪ.ಜಾತಿ/ಪ.ಪಂ ಕ್ಕೆ ಸೇರಿದ ಕ್ರೀಡಾಪಟುಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಮಾ.03 ರೊಳಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಕಚೇರಿ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸಬೇಕು.

ಇದನ್ನೂ ಓದಿ | ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್‌ ಆರ್‌ ಅಶ್ವಿನ್

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ದೂ.ಸಂ: 08192-237480, ಮೊ.ಸಂ: 9480796263, 7019565606ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್‌ ಆರ್‌ ಅಶ್ವಿನ್‌

Published

on

ಸುದ್ದಿದಿನ,ಅಹಮದಾಬಾದ್‌: ಟೀಂ ಇಂಡಿಯಾದ ಸ್ಪಿನ್ನರ್‌ ಆರ್‌ ಅಶ್ವಿನ್‌ ಅವರು ಅತಿ ಕಡಿಮೆ ಪಂದ್ಯಗಳಲ್ಲಿ 400 ವಿಕೆಟ್‌ಗಳನ್ನು ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಭಾರತದ ಪರ ಹೊಸ ದಾಖಲೆಯನ್ನು ಬರೆದಿದ್ದಾರೆ.

ಅಶ್ವಿನ್ 77ನೇ ಪಂದ್ಯವನ್ನು ಆಡುತ್ತಿದ್ದು ಇಂಗ್ಲೆಂಡಿನ ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್‌ ಸ್ಟೋಕ್ಸ್‌ ವಿಕೆಟ್‌ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದು, ವಿಶ್ವದಲ್ಲಿ ಈ ಸಾಧನೆಯನ್ನು ಮಾಡಿದ ಆಟಗಾರರ ಪಟ್ಟಿಯಲ್ಲಿ ಅಶ್ವಿನ್‌ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್‌(72ಪಂದ್ಯ) ಮೊದಲ ಸ್ಥಾನದಲ್ಲಿದ್ದಾರೆ.

400 ವಿಕೆಟ್‌ ಗಡಿ ದಾಟಿದ ಭಾರತದ 4ನೇ ಬೌಲರ್‌ ಅಶ್ವಿನ್‌ ಆಗಿದ್ದು, ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ 619ವಿಕೆಟ್, ಕಪಿಲ್‌ ದೇವ್‌ 434ವಿಕೆಟ್, ಹರ್ಭಜನ್‌ ಸಿಂಗ್‌ 417 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌, ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ 4 ವಿಕೆಟ್‌ ಪಡೆದಿದ್ದಾರೆ. ಈ ಪಂದ್ಯಕ್ಕೂ ಮೊದಲು 76 ಪಂದ್ಯಗಳ 142 ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡಿ 394 ವಿಕೆಟ್‌ಗಳನ್ನು ಪಡೆದಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending