ಕ್ರೀಡೆ
ವಿದೇಶಿ ಫುಟಬಾಲ್ ಅಭಿಮಾನಿಗಳ ಜತೆಗೆ ಲೈಂಗಿಕ ಸಂಪರ್ಕ ಹೊಂದದಂತೆ ರಷ್ಯಾದ ರಾಜಕಾರಣಿ ಹೇಳಿಕೆ
ಸುದ್ದಿದಿನ ಡೆಸ್ಕ್: ಫುಟ್ಬಾಲ್ ವರ್ಲ್ಡ್ ಕಪ್ ನೋಡಲು ಬರುವ ಅಭಿಮಾನಿಗಳ ಜತೆಗೆ ಲೈಂಗಿಕ ಸಂಪರ್ಕ ಹೊಂದಬಾರದಂತೆ ರಷ್ಯಾ ಸಂಸತ್ ಸಮಿತಿಯ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.
ಹುಡುಗಿಯೊಬ್ಬಳು ಹುಡುಗನನ್ನು ಭೇಟಿಯಾಗಬಹುದು, ಮಗುವಿಗೂ ಜನ್ಮ ನೀಡಬಹುದು, ಮದುವೆ ಆಗಬಹುದು, ಇಲ್ಲದೇನೂ ಇರಬಹುದು. ಇದರಿಂದ ಮಗುವೂ ಸಹ ಅವರಂತೆ ನೋವು ಅನುಭವಿಸುತ್ತದೆ. 1980ರಲ್ಲಿ ಮಾಸ್ಕೋ ನಡೆದ ಒಲಂಪಿಕ್ ನಂತರ ನಡೆದಿವೆ.
ಇಂತಹ ನಡವಳಿಕೆಗಳಿಂದ ಏಕ ಪೋಷಕ ಕುಟುಂಬಗಳಿಗೆ ಕಾರಣವಾಗಬಹುದು. ಒಂದೇ ಜನಾಂಗೀಯ ಪೋಷಕರಿಂದ ಮಕ್ಕಳು ಜನಿಸಿದರೆ ಒಳಿತು ಎಂದು ಗೋವೊರಿಟ್ ಮಾಸ್ಕ್ವಾ ರೆಡಿಯೋ ಕೇಂದ್ರದಲ್ಲಿ ಸಂಸತ್ತಿನ ಕೆಳಮನೆಯ ಕುಟುಂಬ ಮತ್ತು ಮಹಿಳೆ, ಮಕ್ಕಳ ಖಾತೆಯ ತಮಾರಾ ಪ್ಲೆಟ್ನೋವಾ ಹೇಳಿದ್ದಾರೆ. ಯುರೋಪ್ ಮತ್ತು ಪ್ರಪಂಚದಲ್ಲಿ ರಷ್ಯಾ ದೇಶವು ಎಚ್ಐವಿ ಪ್ರಕರಣ ಏರಿಕೆಯಲ್ಲಿ ಮುಂದಿದೆ. ಶೇ. ೫೦ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಭಿನ್ನಲಿಂಗೀಯರೊಂದಿಗಿನ ಲೈಂಗಿಕ ಸಂಪರ್ಕವೇ ಕಾಣವಾಗಿದೆ. ರಷ್ಯಾ ದೇಶಕ್ಕೆ ಸುಮಾರು ಒಂದು ಮಿಲಿಯನ್ ಫುಟ್ಬಾಲ್ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ 2 ಮಿಲಿಯನ್ ಟಿಕೆಟ್ ಮಾರಾಟವಾಗಿವೆ.

ಕ್ರೀಡೆ
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 6 ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್..!

ಸುದ್ದಿದಿನ ಡೆಸ್ಕ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 6,000 ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು.
ಭಾರತದ ನಾಯಕ ಕೊಹ್ಲಿ 196 ಪಂದ್ಯಗಳಲ್ಲಿ ಮೈಲಿಗಲ್ಲು ತಲುಪಿದ್ದು, ಚೆನ್ನೈನ ಸುರೇಶ್ ರೈನಾ (5,448 ರನ್), ದೆಹಲಿಯ ಶಿಖರ್ ಧವನ್ (5,428), ಹೈದರಾಬಾದ್ನ ಡೇವಿಡ್ ವಾರ್ನರ್ (5,384) ಮತ್ತು ಮುಂಬೈನ ರೋಹಿತ್ ಶರ್ಮಾ (5,368) ಗಿಂತ ಮುಂದಿದ್ದಾರೆ.
ಐಪಿಎಲ್ ಬೆನ್ನಟ್ಟುವಿಕೆಯಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೊಹ್ಲಿಯ ಅಜೇಯ 72 ರನ್ 20 ವರ್ಷದ ದೇವದತ್ ಪಡಿಕ್ಕಲ್ ಅವರು 52 ಎಸೆತಗಳಲ್ಲಿ 101 ವಿಕೆಟ್ಗಳನ್ನು ಗಳಿಸಿದರು.
ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 51 ಎಸೆತದಲ್ಲಿ ಶತಕ ಹೊಡೆದರು. ವಿರಾಟ್ ಕೊಹ್ಲಿ 54 ಎಸೆತದಲ್ಲಿ ಅರ್ಧಶತಕ ಹೊಡೆದರು. ಅಂತಿಮವಾಗಿ ಪಡಿಕ್ಕಲ್ 101 ರನ್(52 ಎಸೆತ, 11 ಬೌಂಡರಿ, 6 ಸಿಕ್ಸ್) ಹೊಡೆದರೆ ವಿರಾಟ್ ಕೊಹ್ಲಿ 72 ರನ್(47 ಎಸೆತ, 6 ಬೌಂಡರಿ, 5 ಸಿಕ್ಸರ್) ಹೊಡೆದರು.
ರಾಜಸ್ಥಾನ ರಾಯಲ್ಸ್ ಮಂದಿ ಬೌಲರ್ಗಳನ್ನು 7 ಪ್ರಯೋಗಿಸಿದ್ದರೂ ಆರಂಭಿಕ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲೇ ಇಲ್ಲ.
Another important win, great character shown by the boys. Onwards & Upwards 🙌💪#playbold @RCBTweets pic.twitter.com/NJmezk1xgq
— Virat Kohli (@imVkohli) April 22, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಕೊರೋನಾ ಪಾಸಿಟಿವ್ : ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

ಸುದ್ದಿದಿನ ಡೆಸ್ಕ್ : ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು “ವೈದ್ಯಕೀಯ ಸಲಹೆಯ ಮೇರೆಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿ ನಾನು ಆಸ್ಪತ್ರೆಗೆ ದಾಖಲಿಸಲಾಗಿದ್ದೇನೆ ಎಂದು ಶುಕ್ರವಾರ ಹೇಳಿದ್ದಾರೆ. ಅವರಿಗೆ ಕಳೆದ ವಾರ ಕೊರೋನಾ ಪಾಸಿಟಿವ್ ಬಂದಿತ್ತು.
ನಿಮ್ಮ ಶುಭಾಶಯಗಳು ಮತ್ತು ಪ್ರಾರ್ಥನೆಗಳಿಗೆ ನನ್ನ ಧನ್ಯವಾದಗಳು. ವೈದ್ಯಕೀಯ ಸಲಹೆಯಡಿಯಲ್ಲಿ ಮುನ್ನೆಚ್ಚರಿಕೆಯಾಗಿ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವೇ ದಿನಗಳಲ್ಲಿ ಗುಣಮುಖನಾಗಿ ಮನೆಗೆ ಮರಳುವ ಭರವಸೆ ಇದೆ. ಎಲ್ಲರೂ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ. ವಿಶ್ವಕಪ್ ಗೆದ್ದ 10 ನೇ ವಾರ್ಷಿಕೋತ್ಸವದಲ್ಲಿರುವ ಎಲ್ಲಾ ಭಾರತೀಯರಿಗೆ ಮತ್ತು ನನ್ನ ತಂಡದ ಆಟಗಾರರಿಗೆ ಶುಭಾಶಯಗಳು ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
Thank you for your wishes and prayers. As a matter of abundant precaution under medical advice, I have been hospitalised. I hope to be back home in a few days. Take care and stay safe everyone.
Wishing all Indians & my teammates on the 10th anniversary of our World Cup 🇮🇳 win.
— Sachin Tendulkar (@sachin_rt) April 2, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ದಾವಣಗೆರೆ | ಕ್ರೀಡೆಯಿಂದ ಮಾನಸಿಕ ನೆಮ್ಮದಿ : ಮೇಯರ್ ಎಸ್.ಟಿ ವೀರೇಶ್

ಸುದ್ದಿದಿನ,ದಾವಣಗೆರೆ: ಯಾವುದಾದರೂ ಕ್ರೀಡೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡಾಗ ನಿಮ್ಮ ಆರೋಗ್ಯ ಸುಧಾರಿಸಿ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಮಹಾನಗರಪಾಲಿಕೆಯ ಮಹಾಪೌರರಾದ ಎಸ್.ಟಿ ವೀರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ದಾವಣಗೆರೆ ಹಾಗೂ ದಾವಣಗೆರೆ ವಿಶ್ವವುದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾ.16 ರಂದು ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ದಾವಣಗೆರೆ ವಲಯ ಮತ್ತು ಅಂತರ ವಲಯದ ಬಾಲ್ ಬ್ಯಾಡ್ಮಿಂಟನ್ ಪುರುಷರ ಮತ್ತು ಮಹಿಳೆಯರ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ | ಜಾರಕಿಹೊಳಿ ಸಿಡಿ ಪ್ರಕರಣ | ನನ್ನ ಮನೆಗೆ ಭೇಟಿ ನೀಡಿ ಸಿಡಿ ಕೊಟ್ಟಿದ್ದರು : ದಿನೇಶ್ ಕಲ್ಲಹಳ್ಳಿ
ಯುವಕರು ಮೊಬೈಲ್ ಸಂಸ್ಕøತಿಗೆ ಒಳಗಾಗಿದ್ದಾರೆ. ತಮ್ಮ ಜವಬ್ದಾರಿಗಳ ಬಗ್ಗೆ ಅರಿವಿರದೆ ಸಮಯ ವ್ಯರ್ಥ ಮಾಡುತಿದ್ದಾರೆ. ಈ ಮೊಬೈಲ್ ವ್ಯಸನವನ್ನು ಮುಂದುವರೆಸದೆ ಯಾವುದಾದರೂ ಕ್ರೀಡೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿರಿ. ಕ್ರೀಡೆಯಿಂದ ನಿಮ್ಮ ಆರೋಗ್ಯ ಸುಧಾರಿಸುವುದಲ್ಲದೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇದರಿಂದ ನಿಮ್ಮ ಗುರಿಯನ್ನು ತಲುಪುವುದು ಸರಳವಾಗುತ್ತದೆ. ನಾನು ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನಾಗಿದ್ದು, ನನ್ನನ್ನು ಗುರುತಿಸಿ ಈ ದೊಡ್ಡ ಹುದ್ದೆಯನ್ನು ನೀಡಿದ್ದಾರೆ. ಹಾಗಾಗಿ ಏನೇ ಮಾಡಿದರೂ ನಮ್ಮಲ್ಲಿ ಧೃಢ ಸಂಕಲ್ಪ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ವೀರೇಶ್ ವಹಿಸಿದ್ದರು, ರಂಗಸ್ವಾಮಿ ಸ್ವಾಗತಿಸಿದರು. ಪ್ರೊ.ಭೀಮಣ್ಣ ಸುಣಗಾರ್ ನಿರೂಪಿಸಿದರು. ಡಾ. ಮಹೇಶ್ ಪಾಟೀಲ್ ವಂದಿಸಿದರು. ವೀರೇಂದ್ರ, ಸದಾಶಿವ, ಡಾ.ವೆಂಕಟೇಶ್, ತಿಪ್ಪೇಸ್ವಾಮಿ, ಬಸವರಾಜ್ ದಮ್ಮಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ನಿಶ್ಚಿತಾರ್ಥ ಸಂಭವ! ಶನಿವಾರ- ರಾಶಿ ಭವಿಷ್ಯ ಏಪ್ರಿಲ್-17,2021
-
ನಿತ್ಯ ಭವಿಷ್ಯ5 days ago
ಈ ರಾಶಿಯವರಿಗೆ ಸಂಜೆಯೊಳಗೆ ಒಂದು ಖುಷಿ ಸಂದೇಶ! ಭಾನುವಾರ- ರಾಶಿ ಭವಿಷ್ಯ ಏಪ್ರಿಲ್-18,2021
-
ದಿನದ ಸುದ್ದಿ5 days ago
ಸಾಮಾಜಿಕ ಸಂವರ್ಧನೆಗೆ ಸಾಹಿತ್ಯಿಕ ಚರ್ಚೆ ಅವಶ್ಯ : ಹಿರಿಯ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ
-
ದಿನದ ಸುದ್ದಿ5 days ago
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ
-
ದಿನದ ಸುದ್ದಿ3 days ago
ಹಳೇ ಕುಂದುವಾಡ ಮನಾ ಯುವ ಬ್ರಿಗೇಡ್, ಜರವೇ ನಾಲ್ಕನೇ ವಾರ್ಷಿಕೋತ್ಸವ | ಯುವಕರ ಸಮಾಜ ಮುಖಿ ಕೆಲಸಗಳು ಉತ್ತಮ ನಾಯಕತ್ವಕ್ಕೆ ಬುನಾದಿ : ಮೇಯರ್ ಎಸ್.ಟಿ.ವೀರೇಶ್
-
ದಿನದ ಸುದ್ದಿ5 days ago
ಡೀಲರ್ಶಿಪ್ಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ದಾವಣಗೆರೆ | ಮೇ 04 ರವರೆಗೆ ರಾತ್ರಿ ಕಫ್ರ್ಯೂ ಹಾಗೂ ವಾರಾಂತ್ಯ ಕಫ್ರ್ಯೂ ಘೋಷಣೆ