Connect with us

ದಿನದ ಸುದ್ದಿ

‘ಹಂಡಿ ಜೋಗಿ ಸಮುದಾಯ’ಕ್ಕಿಲ್ಲ ಮೂಲಭೂತ ಸೌಕರ್ಯ; ಹೋರಾಟಕ್ಕೆ ಸಜ್ಜು

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಚಿತ್ರದುರ್ಗ : ಹಂಡಿ ಜೋಗಿ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡದಿದ್ದರೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದಾಗಿ ಸಮುದಾಯದ ಪ್ರತಾಪ್ ಜೋಗಿ ಎಚ್ಚರಿಕೆ ನೀಡಿದರು.

ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಶ್ರೀ ನುಂಕೆಮಲೆ ಬೆಟ್ಟ ಶ್ರೀ ಕಾಲಭೈರವೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಹಂಡಿ ಜೋಗಿ ಸಮುದಾಯದವರು ಬಳ್ಳಾರಿ ಹೊಸಪೇಟೆ ಸಿರುಗುಪ್ಪ ಚಿತ್ರದುರ್ಗ ಜಿಲ್ಲೆಗಳಿಂದ ಭಾಗವಹಿಸಿದ್ದ ಪ್ರತಾಪ್ ಜೋಗಿ ಮಾತನಾಡಿ ಹಂಡಿಜೋಗಿ ಸಮುದಾಯವು ಬಹಳ ಹಿಂದುಳಿದಿರುವ ಸಮುದಾಯ ಈ ಸಮುದಾಯಕ್ಕೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಇದಕ್ಕೆ ಕಾರಣ ಸಂಘಟನೆಯ ಕೊರತೆ ಮಕ್ಕಳಿಗೆ ಶಿಕ್ಷಣ ಕೊಡಬೇಕು ಆಗ ಅಭಿವೃದ್ಧಿ ಸಾಧ್ಯ ಶ್ರೀ ನುಂಕೆಮಲೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸುಮಾರು ಒಂಬತ್ತು ವರ್ಷಗಳಿಂದಲೂ ಬಂದು ದೇವಸ್ಥಾನದ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಕೂಡಿಟ್ಟ ಹಣವನ್ನು ಶ್ರೀಮಠಕ್ಕೆ ಕೊಟ್ಟು ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಂಡು ಹೋಗ್ತಾ ಇರೋದು ಸ್ವಾಗತಾರ್ಹ ಎಂದರು.

ಉತ್ತಮವಾದಂತಹ ಸಂಘಟನೆ ಮಾಡಿದರೆ ಪ್ರಜಾಪ್ರತಿನಿಧಿಗಳು ಮಾತನ್ನು ಕೇಳ್ತಾರೆ ಇಲ್ಲ ಅಂತಂದ್ರೆ ಹಂಡಿಜೋಗಿ ಎಂದರೆ ನಮ್ಮನ್ನು ಬಹಳ ಕೀಳಾಗಿ ನೋಡುತ್ತಾರೆ ಸಂಘಟನೆ ಬಹಳ ಅತ್ಯವಶ್ಯಕ ಈಗ ನಮ್ಮ ವೃತ್ತಿಯೂ ಡಬ್ಬಾ ರಿಪೇರಿ ಬೀಗ ರಿಪೇರಿ ಒಂದೂರಿನಿಂದ ಒಂದೂರಿಗೆ ಜೀವನ ಮಾಡದೇ ನಮ್ಮ ಪರಿಸ್ಥಿತಿಯೇ ಇದನ್ನೆಲ್ಲ ತಡೆಯಬೇಕು.ಒಂದು ವಾರದ ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳಿಗೆ ವಸತಿ ಸೌಲಭ್ಯ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ಕೋಡಿ ಎಂದು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ. ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದಲ್ಲಿ ಅತಿ ಹೆಚ್ಚು ಹಣ ಕೇವಲ ಸಿಸಿ ರೋಡ್ ಬೇರೆ ಬೇರೆ ಸಮುದಾಯಗಳು ಹೆಚ್ಚು ಸವಲತ್ತುಗಳನ್ನು ತಗೊಳ್ತಾರೆ ಇದನ್ನೆಲ್ಲಾ ನೀವು ತಗೋಬೇಕು ಅಂತ ಅಂದ್ರೆ ನೀವು ಮುನ್ನುಗ್ಗಬೇಕು ಆಗ ಮಾತ್ರ ಸಾಧ್ಯ ಎಂದು ಆತ್ಮಸ್ಥೈರ್ಯವನ್ನು ಪ್ರತಾಪ್ ಜೋಗಿ ಹೇಳಿದರು.

ಈ ಸಂದರ್ಭದಲ್ಲಿ ಹಂಡಿಜೋಗಿ ಬಳ್ಳಾರಿ ಜಿಲ್ಲಾಧ್ಯಕ್ಷ ರಮೇಶ್,ನಾರಣಪ್ಪ ಸಿರಿಗೆರೆ ,ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ,ಯರಿಸ್ವಾಮಿ, ಮಲ್ಲಿಕಾರ್ಜುನ, ಭೀಮಪ್ಪ ಅಗರಿ, ಮಚ್ಚೇಂದ್ರ, ಮೈಲಾರಿ ಶ್ರೀಮಠಕ್ಕೆ ಕಾಣಿಕೆಯನ್ನು ಅರ್ಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಜೈವಿಕ ಗೊಬ್ಬರಗಳ ಮಾರಾಟ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಜೈವಿಕ ಕೇಂದ್ರದಲ್ಲಿ, ಉತ್ತಮ ಗುಣಮಟ್ಟದ ಜೈವಿಕ ನಿಯಂತ್ರಕಗಳಾದ ಟ್ರೈಕೋಡರ್ಮ, ಸೂಡೊಮೋನಾಸ್ ಹಾಗೂ ಜೈವಿಕ ಗೊಬ್ಬರಗಳಾದ ದ್ರವರೂಪದ ಜೈವಿಕ ಗೊಬ್ಬರ ಘನರೂಪದ ಜೈವಿಕ ಗೊಬ್ಬರ ಅಜಟೋಬ್ಯಾಕ್ಟರ್ ಜೈವಿಕ ಗೊಬ್ಬರ ಗಳನ್ನು ತಯಾರು ಮಾಡಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಇವುಗಳು ಮಣ್ಣಿನ ಜೈವಿಕ ಮತ್ತು ಭೌತಿಕ ಗುಣಗಳನ್ನು ಕಾಪಾಡಿ ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ, ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆಸಕ್ತ ರೈತರು ಉತ್ತಮ ಗುಣಮಟ್ಟದ ಜೈವಿಕ ನಿಯಂತ್ರಕ ಹಾಗೂ ಜೈವಿಕ ಗೊಬ್ಬರಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಮೊ.ಸಂ:9611556835 ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬೆಂಗಳೂರು : ಐಷಾರಾಮಿ ಹೋಟೆಲ್‌ಗಳಿಗೆ ಬಾಂಬ್ ಬ್ಲಾಸ್ಟ್ ಬೆದರಿಕೆ

Published

on

ಸುದ್ದಿದಿನ ಡೆಸ್ಕ್ : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಮೂರು ಐಷಾರಾಮಿ ಹೊಟೇಲ್‌ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ.

ಇಂದು ಬೆಳಗ್ಗೆ ಹೊಟೇಲ್ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದಾಗ ಬೆದರಿಕೆ ಸಂದೇಶ ಬೆಳಕಿಗೆ ಬಂದಿದೆ. ಮಧ್ಯರಾತ್ರಿ 2 ಗಂಟೆಗೆ ಬಾಂಬ್ ಸ್ಫೋಟಿಸುವುದಾಗಿ ಉಲ್ಲೇಖಿಸಲಾಗಿದೆ. ತಕ್ಷಣವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊಟೇಲ್‌ಗೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ತೆರಳಿ, ಪರಿಶೀಲನೆ ನಡೆಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

HELPLINE | ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣ ; ಸಂತ್ರಸ್ತರು ಎಸ್‌ಐಟಿ ಸಂಪರ್ಕಿಸಿ

Published

on

ಸುದ್ದಿದಿನ ಡೆಸ್ಕ್ : ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸಹಾಯವಾಣಿಗೆ ಈವರೆಗೆ 30ಕ್ಕೂ ಹೆಚ್ಚು ಕರೆಗಳು ಬಂದಿವೆ.

ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತರು ಎಸ್‌ಐಟಿ ಸಂಪರ್ಕಿಸಿ ದೂರು ನೀಡಬಹುದು. ಅವರು ಹೇಳಿದ ಸ್ಥಳಕ್ಕೆ ಬಂದು ಮಾಹಿತಿ ಸಂಗ್ರಹಿಸಲು ತಂಡ ಸಿದ್ಧವಿದೆ. ಗುರುತು ಹಾಗೂ ಮಾಹಿತಿ ವಿಷಯದಲ್ಲಿ ಗೌಪ್ಯತೆ ಕಾಪಾಡಲಾಗುತ್ತದೆ. ನೇರವಾಗಿ ಅಧಿಕಾರಿಗಳನ್ನೂ ಸಂಪರ್ಕಿಸಬಹುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಸಹಾಯವಾಣಿ: 6360938947

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ6 hours ago

ಜೈವಿಕ ಗೊಬ್ಬರಗಳ ಮಾರಾಟ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಜೈವಿಕ ಕೇಂದ್ರದಲ್ಲಿ, ಉತ್ತಮ ಗುಣಮಟ್ಟದ ಜೈವಿಕ ನಿಯಂತ್ರಕಗಳಾದ ಟ್ರೈಕೋಡರ್ಮ, ಸೂಡೊಮೋನಾಸ್ ಹಾಗೂ ಜೈವಿಕ ಗೊಬ್ಬರಗಳಾದ ದ್ರವರೂಪದ ಜೈವಿಕ ಗೊಬ್ಬರ ಘನರೂಪದ ಜೈವಿಕ ಗೊಬ್ಬರ...

ದಿನದ ಸುದ್ದಿ7 hours ago

ಬೆಂಗಳೂರು : ಐಷಾರಾಮಿ ಹೋಟೆಲ್‌ಗಳಿಗೆ ಬಾಂಬ್ ಬ್ಲಾಸ್ಟ್ ಬೆದರಿಕೆ

ಸುದ್ದಿದಿನ ಡೆಸ್ಕ್ : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಮೂರು ಐಷಾರಾಮಿ ಹೊಟೇಲ್‌ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ. ಇಂದು ಬೆಳಗ್ಗೆ ಹೊಟೇಲ್ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದಾಗ ಬೆದರಿಕೆ...

ದಿನದ ಸುದ್ದಿ7 hours ago

HELPLINE | ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣ ; ಸಂತ್ರಸ್ತರು ಎಸ್‌ಐಟಿ ಸಂಪರ್ಕಿಸಿ

ಸುದ್ದಿದಿನ ಡೆಸ್ಕ್ : ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸಹಾಯವಾಣಿಗೆ ಈವರೆಗೆ 30ಕ್ಕೂ ಹೆಚ್ಚು ಕರೆಗಳು ಬಂದಿವೆ. ದೌರ್ಜನ್ಯಕ್ಕೆ...

ದಿನದ ಸುದ್ದಿ7 hours ago

ಜೂನಿಯರ್ ಅಮಿತಾಬ್ ಬಚ್ಚನ್ ನಿಧನ

ಸುದ್ದಿದಿನ ಡೆಸ್ಕ್ : ಜೂನಿಯರ್ ಅಮಿತಾಬ್ ಬಚ್ಚನ್, ಜನಪ್ರಿಯ ಕಿರುತೆರೆ ನಟ ಫಿರೋಜ್ ಖಾನ್‌ ಅವರು ಉತ್ತರ ಪ್ರದೇಶದ ಬದೌನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ‘ಭಾಬಿಜಿ ಘರ್...

ದಿನದ ಸುದ್ದಿ8 hours ago

ದಾವಣಗೆರೆ | ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ದಾವಣಗೆರೆ ಇಲ್ಲಿ ಐಟಿಐ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಸಂಸ್ಥೆ ಎನ್‍ಸಿವಿಟಿ ಯಿಂದ ಸಂಯೋಜನೆ ಪಡೆದ...

ದಿನದ ಸುದ್ದಿ8 hours ago

ಪ್ರಜ್ವಲ್‌ ಪೋಲಿಸರಿಗೆ ಶರಣಾಗಿ ವಿಚಾರಣೆ ಎದುರಿಸಬೇಕು : ಮೊಮ್ಮಗನಿಗೆ ಮಾಜಿ ಪ್ರಧಾನಿ ದೇವೇಗೌಡ ಎಚ್ಚರಿಕೆ

ಸುದ್ದಿದಿನ ಡೆಸ್ಕ್ : ಪ್ರಜ್ವಲ್‌ನು ಎಲ್ಲಿದ್ದರೂ ಬಂದು ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು ಎಂದು ಯಾವುದೇ ಮುಲಾಜು, ಮರ್ಜಿಯಿಲ್ಲದೆ ಹೇಳಬಲ್ಲೆ ಮತ್ತು ಹೇಳುತ್ತಿದ್ದೇನೆ ಎಂದು ಮಾಜಿ...

ದಿನದ ಸುದ್ದಿ11 hours ago

ಬಿತ್ತನೆ ಬೀಜ – ರಸಗೊಬ್ಬರಕ್ಕೆ ಕೊರತೆ ಇಲ್ಲ : ಸಚಿವ ಎನ್.ಚಲುವರಾಯ ಸ್ವಾಮಿ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಮುಂಗಾರು ಹಂಗಾಮಿಗೆ 5 ಲಕ್ಷ 35 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ...

ಕ್ರೀಡೆ12 hours ago

ಮಧ್ಯಾಹ್ನದ ಪ್ರಮುಖ ಸುದ್ದಿಗಳು

ಮದ್ಯಾಹ್ನದ ಪ್ರಮುಖ ಸುದ್ದಿಗಳು ದೇಶಾದ್ಯಂತ 5 ಹಂತಗಳ ಚುನಾವಣೆ ಪೂರ್ಣಗೊಂಡಿದ್ದು, ಇನ್ನು ಎರಡು ಹಂತಗಳ ಚುನಾವಣೆ ಬಾಕಿ ಉಳಿದಿದೆ. 6ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 58...

ದಿನದ ಸುದ್ದಿ12 hours ago

ಕೌಶಲ್ಯಭಿವೃದ್ದಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಪ್ರಾದೇಶಿಕ ತರಬೇತಿ ಕೇಂದ್ರಗಳ ಸಹಯೋಗದಿಂದ 60 ದಿನಗಳ ಕಾಲ ಪರಿಶಿಷ್ಟ...

ದಿನದ ಸುದ್ದಿ12 hours ago

ಅನಧಿಕೃ ಬಿತ್ತನೆ ಬೀಜಗಳ ಖರೀದಿ ; ಎಚ್ಚರಿಕೆ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಮುಂಗಾರು ಹಂಗಾಮು ಚುರುಕಾಗಿದ್ದು, ಭೂಮಿ ಸಿದ್ದತೆ, ಸಮಗ್ರ ಬೆಳೆ ನಿರ್ವಹಣೆ ಜೊತೆಗೆ ಉತ್ತಮ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಬಹು ಮುಖ್ಯ....

Trending