ರಾಜಕೀಯ
ಬಿಜೆಪಿಯಿಂದ ಜೆಡಿಎಸ್ ಗೆ ಬರಲು 20 ಶಾಸಕರು ರಡಿ ಇದ್ದಾರೆ: ಎಚ್.ಡಿ.ರೇವಣ್ಣ
ಸುದ್ದಿದಿನ ಡೆಸ್ಕ್: ಆಪರೇಷನ್ ಪಕ್ಷಗಳ ಕುರಿತು ರಾಜಕೀಯ ನಾಯಕರು ಘಳಿಗೆಗೊಂದು ಹೇಳಿಕೆ ನೀಡುತ್ತಿದ್ದಾರೆ. ಈಗ ಆ ಸಾಲಿಗೆ ಸಚಿವ ಎಚ್.ಡಿ. ರೇವಣ್ಣ ಸೇರಿದ್ದಾರೆ.
ಬಿಜೆಪಿಯಿಂದ 20 ಶಾಸಕರು ಜೆಡಿಎಸ್ ಪಕ್ಷಕ್ಕೆ ಬರಲು ರಡಿ ಇದ್ದಾರೆ. ನಾವೇ ಅವರನ್ನು ಬೇಡ ಅಂತ ಸುಮ್ಮನಿದ್ದೇವೆ, ನಮಗೆ ಯಾವುದೇ ಆಪರೇಶನ್ ಮಾಡುವ ಅಗತ್ಯವಿಲ್ಲ ಎಂದು ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.
ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು ಎ ಟೀಂ, ಬಿ ಟೀಂ ಎಂದು ಹೇಳಿದ್ದರು. ಹೀಗೆ ಹೇಳದೆ ಇದ್ದಿದ್ದರೆ, ಬಿಜೆಪಿ ಇನ್ನೂ 30 ಕ್ಷೇತ್ರಗಳಲ್ಲಿ ಸೋಲು ಕಾಣುತ್ತಿತ್ತು, ಯಡಿಯೂರಪ್ಪ ಅವರು ಹಿರಿಯರಿದ್ದಾರೆ ಅವರು ಆರೋಗ್ಯವಾಗಿರಲಿ ಎಂದು ಹೇಳಿದ್ದಾರೆ.

ದಿನದ ಸುದ್ದಿ
ದಾವಣಗೆರೆ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವಮೂರ್ತಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2022-23ನೇ ಸಾಲಿನ 5054 ವಿಶೇಷ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ದಾವಣಗೆರೆ ತಾಲ್ಲೂಕು ಶಾಮನೂರು-ದೇವರಬೆಳಕೆರೆ ರಸ್ತೆಯಿಂದ ದುರ್ಗಾಂಬಿಕ ಕ್ಯಾಂಪ್, ನಾಗಮ್ಮ ಕೇಶವಮೂರ್ತಿ ಬಡಾವಣೆ ಹಾಗೂ ನಾಗನೂರು ಗ್ರಾಮಗಳ ಕೂಡು ರಸ್ತೆಗಳ ಅಂದಾಜು 500 ಲಕ್ಷ ಮೊತ್ತದ ಕಳಪೆ ಕಾಮಗಾರಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ಕರ್ತವ್ಯ ಲೋಪ ಎಸಗಿದ ಶ್ರೀ ಶಿವಮೂರ್ತಿ, ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ದಾವಣಗೆರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
2022-23ನೇ ಸಾಲಿನ 5054 ವಿಶೇಷ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ದಾವಣಗೆರೆ ತಾಲ್ಲೂಕು ಶಾಮನೂರು-ದೇವರಬೆಳಕೆರೆ ರಸ್ತೆಯಿಂದ ದುರ್ಗಾಂಬಿಕ ಕ್ಯಾಂಪ್, ನಾಗಮ್ಮ ಕೇಶವಮೂರ್ತಿ ಬಡಾವಣೆ ಹಾಗೂ ನಾಗನೂರು ಗ್ರಾಮಗಳ ಕೂಡು ರಸ್ತೆಗಳ ಕಾಮಗಾರಿಯನ್ನು ಅಂದಾಜು 500 ಲಕ್ಷ ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ಸದರಿ ಕಾಮಗಾರಿ ನಡೆದು ಒಂದು ವರ್ಷದ ಒಳಗಾಗಿ ರಸ್ತೆಯು ಹಾಳಾಗಿರುತ್ತದೆ. ಹೀಗಾಗಿ ಸದರಿ ಕಾಮಗಾರಿಗೆ ಸಂಬAಧಿಸಿದ ದಾಖಲೆಗಳನ್ನು ಮಾಹಿತಿಹಕ್ಕು ಅಡಿಯಲ್ಲಿ ಪಡೆದು ಪರಿಶೀಲನೆ ಮಾಡಿದಾಗ, ಅಂತಿಮ ಬಿಲ್ಲನ್ನು ಮಂಜೂರು ಮಾಡುವ ಪೂರ್ವದಲ್ಲಿಯೇ ಸದರಿ ಕಾಮಗಾರಿಯು ಹದಗೆಟ್ಟಿರುವ ಮಾಹಿತಿ ಪಡೆದು, ಮಾಹಿತಿಹಕ್ಕು ಅಡಿಯಲ್ಲಿ ಸಂಬಂಧಿಸಿದ ಕಡತಗಳನ್ನು ಪಡೆದು ಪರಿಶೀಲನೆ ಮಾಡಿದಾಗ ಕಳಪೆ ಕಾಮಗಾರಿ ನಡೆದಿರುವುದು ಕಂಡು ಬಂದ ಕಾರಣ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರಿಗೆ ದೂರು ನೀಡಲಾಗಿತ್ತು.
ಈ ದೂರು ಅರ್ಜಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರು ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ, ದಾವಣಗೆರೆ ಇವರಿಗೆ ನಮ್ಮ ದೂರು ಅರ್ಜಿಯನ್ನು ವರ್ಗಾಹಿಸಿ, ‘ಸದರಿ ವಿಷಯದ ಕುರಿತು ಸ್ಥಳ ಪರಿಶೀಲನೆ ನಡೆಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಮನವಿದಾರರಿಗೆ ಹಿಂಬರಹ ನೀಡುವಂತೆ’ ತಿಳಿಸಿರುತ್ತಾರೆ. ಆದರೆ 3 ತಿಂಗಳು ಕಳೆದರೂ ಕಾರ್ಯಪಾಲಕ ಅಭಿಯಂತರರಾದ ಶ್ರೀ ಶಿವಮೂರ್ತಿ ಇವರು ಯಾವುದೇ ತನಿಖೆ ನಡೆಸದೆ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಸಿದ್ದತೆ: ಮತದಾರರ ಪಟ್ಟಿ ವೀಕ್ಷಕರಿಂದ ರಾಜಕೀಯ ಪಕ್ಷಗಳೊಂದಿಗೆ ಸಭೆ, ಹಕ್ಕು, ಆಕ್ಷೇಪಣೆಗಳನ್ನು ನಿಗಧಿತ ಅವಧಿಯಲ್ಲಿ ಸಲ್ಲಿಸಲು ಮುಖಂಡರಿಗೆ ಸಲಹೆ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕರ‍್ಯಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ವೀಕ್ಷಕರು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದ್ದು ನಿಗಧಿತ ಅವಧಿಯಲ್ಲಿ ಹಕ್ಕು, ಆಕ್ಷೇಣೆಗಳಿದ್ದಲ್ಲಿ ಸಲ್ಲಿಸಲು ರ‍್ಕಾರದ ಕರ‍್ಯರ‍್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ಡಾ; ಶಮ್ಲಾ ಇಕ್ಬಾಲ್ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು. ಜನವರಿ 3 ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ, ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಆಕ್ಷೇಪಣೆ ಮತ್ತು ಹಕ್ಕುಗಳನ್ನು ಸಲ್ಲಿಸಲು ಜನವರಿ 24 ರವರೆಗೆ ಅವಕಾಶವಿದೆ. ಜನವರಿ 11 ರಂದು ನಡೆದ ವಿಶೇಷ ಅಭಿಯಾನದಲ್ಲಿ 85 ರ‍್ಜಿಗಳು ಸ್ವೀಕೃತವಾಗಿದ್ದು, ಮುಂದಿನ ಅಭಿಯಾನವು ಜನವರಿ 18 ರಂದು ನಡೆಯಲಿದೆ. ಫೆಬ್ರವರಿ 14 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಮತಗಟ್ಟೆಗಳ ಪುನರ್ ವಿಂಗಡಣೆ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಹಿಂದೆ 217 ಮತಗಟ್ಟೆಗಳಿದ್ದವು. ನಿಯಮದಂತೆ 1200 ಕ್ಕಿಂತ ಹೆಚ್ಚು ಮತದಾರರಿರುವ ಕಡೆ ಹೊಸ ಮತಗಟ್ಟೆಗಳನ್ನು ಸೃಜಿಸಿ, ಪ್ರಸ್ತುತ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 24 ಮತಗಟ್ಟೆಗಳ ಸ್ಥಳ ಬದಲಾವಣೆ ಮಾಡಲಾಗಿದ್ದು, ಮೂಲಭೂತ ಸೌರ‍್ಯಗಳಾದ ರ‍್ಯಾಂಪ್ ಮುಂತಾದವುಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.
ರಾಜಕೀಯ ಪಕ್ಷಗಳಿಗೆ ಎರಡು ಪ್ರಮುಖ ಮನವಿಗಳನ್ನು ಮಾಡಿ ಬಿಎಲ್ಎ ಪ್ರತಿಯೊಂದು ಮತಗಟ್ಟೆ ಮಟ್ಟದಲ್ಲಿ ರಾಜಕೀಯ ಪಕ್ಷಗಳು ತಮ್ಮ ಏಜೆಂಟ್ಗಳನ್ನು ನೇಮಕ ಮಾಡಿ ಪಟ್ಟಿಯನ್ನು ನೀಡಬೇಕು. ಇದರಿಂದ ಮೃತ ಮತದಾರರ ಹೆಸರು ಕೈಬಿಡುವುದು ಮತ್ತು ವಿಳಾಸ ಬದಲಾವಣೆ ಕರ‍್ಯ ಸುಲಭವಾಗುತ್ತದೆ. ಹೆಸರು ಸರ‍್ಪಡೆಗೆ ಯುವ ಮತದಾರರು ಹಾಗೂ ಕೈಬಿಟ್ಟು ಹೋದ ರ‍್ಹ ಮತದಾರರ ಹೆಸರನ್ನು ಸೇರಿಸಲು ಸಹಕರಿಸಬೇಕು ಎಂದರು.
ಕ್ಷೇತ್ರದ ಮತದಾರರ ವಿವರ
ಕರಡು ಪಟ್ಟಿಯಂತೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2,31,158 ಮತದಾರರಿದ್ದಾರೆ. ಇದರಲ್ಲಿ ಪುರುಷ ಮತದಾರರು 1,13,555 ಹಾಗೂ ಮಹಿಳಾ ಮತದಾರರು 1,17,603 ಇದ್ದು, ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಲಿಂಗ ಅನುಪಾತ
ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಲಿಂಗ ಅನುಪಾತವು 1036 ಆಗಿದ್ದು, ಇದು ಜಿಲ್ಲೆಯ ಜನಗಣತಿ ಅನುಪಾತಕ್ಕಿಂತ 972 ಮತ್ತು ರಾಜ್ಯದ ಸರಾಸರಿಗಿಂತಲೂ ಹೆಚ್ಚಿದೆ. ಮತದಾರರ ಜನಸಂಖ್ಯೆ ಅನುಪಾತ ಶೇ. 83.62 ರಷ್ಟಿದೆ. ಯುವ ಮತದಾರರಾದ 18-19 ವಯೋಮಾನದವರು ಕ್ಷೇತ್ರದಲ್ಲಿ ಒಟ್ಟು 1,692 ಮತದಾರರಿದ್ದು ಇದರಲ್ಲಿ 905 ಪುರುಷ, 787 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ವಿಕಲಚೇತನ ಮತದಾರರು ಒಟ್ಟು 2,544 ಮತದಾರರಿದ್ದು, ಇದರಲ್ಲಿ 1,397 ಪುರುಷರು ಮತ್ತು 1,147 ಮಹಿಳೆಯರಿದ್ದಾರೆ.
ವಿವಿಧ ವಯೋಮಾನದ ಮತದಾರರ ಅಂಕಿ-ಅಂಶಗಳು
ಯುವ ಮತದಾರರು, 18-19 ರ‍್ಷ ವಯೋಮಾನದ ಒಟ್ಟು 1,692 ಯುವ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 905 ಪುರುಷರು ಮತ್ತು 787 ಮಹಿಳಾ ಮತದಾರರಿದ್ದಾರೆ.
20-29 ರ‍್ಷ: ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರಿರುವ ವಿಭಾಗಗಳಲ್ಲಿ ಇದೂ ಒಂದು. ಒಟ್ಟು 43,616 ಮತದಾರರಿದ್ದು, ಇದರಲ್ಲಿ 21,601 ಪುರುಷರು, 22,002 ಮಹಿಳೆಯರು ಮತ್ತು 13 ತೃತೀಯ ಲಿಂಗಿ ಮತದಾರರಿದ್ದಾರೆ.
30-39 ರ‍್ಷ: ಈ ವಯೋಮಾನದಲ್ಲಿ ಒಟ್ಟು 55,814 ಮತದಾರರಿದ್ದಾರೆ. ಇದರಲ್ಲಿ 26,450 ಪುರುಷರು, 29,349 ಮಹಿಳೆಯರು ಮತ್ತು 15 ತೃತೀಯ ಲಿಂಗಿ ಮತದಾರರಿದ್ದಾರೆ.
ಮಧ್ಯವಯಸ್ಕರು: 40-49 ರ‍್ಷ: ಒಟ್ಟು 55,400 ಮತದಾರರಿದ್ದು, ಇದರಲ್ಲಿ 27,507 ಪುರುಷರು, 27,885 ಮಹಿಳೆಯರು ಮತ್ತು 8 ತೃತೀಯ ಲಿಂಗಿಗಳು ಸೇರಿದ್ದಾರೆ.
50-59 ರ‍್ಷ: ಈ ವಿಭಾಗದಲ್ಲಿ ಒಟ್ಟು 37,167 ಮತದಾರರಿದ್ದಾರೆ 18,917 ಪುರುಷರು, 18,245 ಮಹಿಳೆಯರು ಮತ್ತು 5 ತೃತೀಯ ಲಿಂಗಿಗಳು.
ಹಿರಿಯ ನಾಗರಿಕರು
60-69 ರ‍್ಷ: ಒಟ್ಟು 21,314 ಮತದಾರರಿದ್ದಾರೆ 10,484 ಪುರುಷರು, 10,826 ಮಹಿಳೆಯರು ಮತ್ತು 4 ತೃತೀಯ ಲಿಂಗಿಗಳು. 70-79 ರ‍್ಷ: ಈ ವಯೋಮಾನದ ಒಟ್ಟು 10,870 ಮತದಾರರಿದ್ದಾರೆ. ಇದರಲ್ಲಿ 5,310 ಪುರುಷರು ಮತ್ತು 5,560 ಮಹಿಳಾ ಮತದಾರರಿದ್ದಾರೆ.
80 ರ‍್ಷ ಮೇಲ್ಪಟ್ಟವರು
ಕ್ಷೇತ್ರದಲ್ಲಿ ಒಟ್ಟು 4,734 ಹಿರಿಯ ಮತದಾರರಿದ್ದಾರೆ 2,149 ಪುರುಷರು ಮತ್ತು 2,585 ಮಹಿಳೆಯರು ಇದ್ದಾರೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಮಹಿಳಾ ಮತ್ತು ಪುರುಷರಿಗೆ ಸಮಾನ ವೇತನ ನೀಡಿದ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆಗೆ ಅಸಮಧಾನ
ದಾವಣಗೆರೆ: ಅಭಿವೃದ್ಧಿ ಕಾಮಗಾರಿ ದೆಹಲಿ ಮಟ್ಟದಲ್ಲಿ ತೀರ್ಮಾನ ಆಗಬೇಕಿಲ್ಲ. ಪಂಚಾಯತ್‍ನಲ್ಲಿ ಗ್ರಾಮಸಭೆ ಮೂಲಕ ಗ್ರಾಪಂ ಸದಸ್ಯರು ತೀರ್ಮಾನ ಕೈಗೊಂಡು ನಮ್ಮ ಹಳ್ಳಿಯಲ್ಲಿ ಇಷ್ಟು ಶೌಚಾಲಯ ಆಗಬೇಕು. ಇಷ್ಟು ಶಾಲೆಗಳ ಅಭಿವೃದ್ಧಿ ಆಗಬೇಕು. ನಮ್ಮ ಹೊಲದ ರಸ್ತೆಗಳು ಅಭಿವೃದ್ಧಿ ಆಗಬೇಕು. ಜಲಮೂಲಗಳ ಶುದ್ದೀಕರಣ, ಹೂಳೆತ್ತಿ ಅಂತರ್ಜಲ ಹೆಚ್ಚಳದ ಮೂಲಕ ಸ್ವಾವಲಂಬಿ ಹಳ್ಳಿಯ ರೂಪುರೇಷ ಹಾಕಿಕೊಂಡು ಪಂಚಾಯತ್‍ನಲ್ಲಿ ತೀರ್ಮಾನ ಮಾಡಿಕೊಂಡರೆ ಜನರು ಉದ್ಯೋಗ ಖಾತರಿಯಲ್ಲಿ ಹಳ್ಳಿಯನ್ನು ಕಟ್ಟುವ ಕೆಲಸ ಮಾಡುತ್ತಾರೆ ಎಂದು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ (Dr.Prabha Malikarjun) ತಿಳಿಸಿದರು.
ಅವರು ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ಮನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೂಲಿಕಾರರ ಕುಂದುಕೊರತೆಗಳ ಪರಿಶೀಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು (Dr.Prabha Malikarjun) ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆ ಅನುಷ್ಟಾನದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಕೆಲಸ ಮಾಡಿ ಜನರಿಗೆ ಉದ್ಯೋಗ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೊನ್ನೂರು ಗ್ರಾಪಂನಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದರಿಂದ ಇಲ್ಲಿನ ಗ್ರಾಪಂ ಉದ್ಯೋಗ ಖಾತರಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ ಎಂದು ಅವರು (Dr.Prabha Malikarjun) ಶ್ಲಾಘಿಸಿದರು.
ಮನರೇಗಾದಿಂದ ದೇಶದಲ್ಲಿ 5 ರಿಂದ 6 ಕೋಟಿ ಜನ ಕೂಲಿಕಾರ್ಮಿಕರು ಆರ್ಥಿಕವಾಗಿ ಸಬಲರಾಗಿದ್ದಾರೆ. 2005 ರಿಂದ 2026 ರವರೆಗೆ ಸುಮಾರು 20 ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ ಮನರೇಗಾ ಯೋಜನೆ ಕಾರಣವಾಗಿತ್ತು. ಈಗ ಇದನ್ನು ಕೇಂದ್ರ ಸರ್ಕಾರ ಬದಲಾಯಿಸಿ ವಿಕಸಿತ ಭಾರತ-ಗ್ಯಾರಂಟೀ ಫಾರ್ ರೋಜಗಾರ್ ಮತ್ತು ಆವೀಜಿಕ ಮಿಷನ್ ವಿಬಿ-ಜಿ.ರಾಮ್ ಜಿ ಕಾಯ್ದೆ-2005 ಎಂದು ಬದಲಿಸಿದ್ದು ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಗೆ ಪೆಟ್ಟು ನೀಡಲು ಮುಂದಾಗಿದೆ. ಮಹಿಳಾ ಮತ್ತು ಪುರುಷರಿಗೆ ಸಮಾನವಾದ ಕೆಲಸ ಕೊಡುವ ಯೋಜನೆವೊಂದಿದ್ದರೆ ಅದು, ‘ಮನರೇಗಾ’ ಯೋಜನೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಪುರುಷನ ಹೆಸರಿಟ್ಟ ‘ಮನರೇಗಾ’ಯೋಜನೆಯ ಹೆಸರನ್ನೇ ಅಳಿಸುವ ಕೆಲಸ ಮಾಡಿದೆ ಎಂದು ಸಂಸದರು (Dr.Prabha Malikarjun) ಅಸಮಧಾನ ವ್ಯಕ್ತಪಡಿಸಿದರು.

ಶಾಸಕರಾದ ಕೆ.ಎಸ್.ಬಸವಂತಪ್ಪ ಅವರು ಹಳ್ಳಿ ಜನರ ದನಿಯಾಗಿ, ಅವರ ಕಷ್ಟ-ಸುಖಗಳನ್ನು ಅಂಚಿಕೊಂಡಿದ್ದಾರೆ. ಅವರು ಬಡವರ ಕಷ್ಟ-ಸುಖಗಳನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಅವರ ಜೊತೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಅವರಿಂದ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿದೆ. ಸ್ವಯಂ ಉದ್ಯೋಗದಲ್ಲಿ ನೀವು ಹೇಗೆ ಆರ್ಥಿಕವಾಗಿ ಸಬಲರಾಗಬಹುದು ಎಂಬ ಬಗ್ಗೆ ತಿಳಿಸಿದ್ದಾರೆ ಎಂದು (Dr.Prabha Malikarjun) ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ, ದೇಶದಲ್ಲಿ ದುಡಿಯುವ ವರ್ಗಕ್ಕೆ ಕೆಲಸ ಕೊಡಬೇಕೆಂಬ ಉದ್ದೇಶದಿಂದ 2005ರಲ್ಲಿ ಯುಪಿಎ ಸರ್ಕಾರ ನೇತೃತ್ವ ವಹಿಸಿದ್ದ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರು ‘ಮನರೇಗಾ’ ಯೋಜನೆ ಜಾರಿಗೊಳಿಸುವ ಮೂಲಕ ದುಡಿಯುವ ವರ್ಗಕ್ಕೆ ಕೆಲಸ ಕೊಟ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡಿತು. ಅಂದಿನಿಂದ ಈವರೆಗೆ ದೇಶದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಮನರೇಗಾ’ ಯೋಜನೆ ಜಾರಿಗೊಳ್ಳುವ ಪೂರ್ವದಲ್ಲಿ ಇಲ್ಲಿನ ಹಳ್ಳಿಯ ಜನರು ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯ ಹಾಗೂ ರಾಜ್ಯದ ಕಾಫಿನಾಡು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದರು. ಯಾವಾಗ ಹಿಂದಿನ ಯುಪಿಎ ಸರ್ಕಾರ ‘ಮನರೇಗಾ’ ಯೋಜನೆ ಜಾರಿಗೊಳಿಸಿತು. ಅಂದಿನಿಂದ ಈವರೆಗೂ ಹಳ್ಳಿಯ ಜನರು ಬದುಕು ಕಂಡುಕೊಂಡು ಆರ್ಥಿಕವಾಗಿ ಸಬಲರಾದರು. ಆದರೆ ಈಗ ಕೇಂದ್ರ ಸರ್ಕಾರ ‘ಮನರೇಗಾ’ ಹೆಸರು ಬದಲಾಯಿಸುತ್ತಿದೆ ಎಂದು (Dr.Prabha Malikarjun) ಅಸಮಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಗಿತ್ತೆ ಮಾಧವ ವಿಠ್ಠಲ್ ರಾವ್, ತಾಪಂ ಇಓ ರಾಮಭೋವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.



