Connect with us

ನಿತ್ಯ ಭವಿಷ್ಯ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿತ್ಯ ಬದುಕಿನ ಜ್ಯೋತಿಷ್ಯ ಮಾರ್ಗದರ್ಶನ : 16/07/2019 ಮಂಗಳವಾರ

Published

on

ತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಜ್ಯೋತಿಷ್ಯ ಮಾರ್ಗದರ್ಶನ. ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಕಂಡುಕೊಳ್ಳಲು  ಇಂದೇ ಕರೆಮಾಡಿ. ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್ ಮೊಬೈಲ್ : 9900494333.

ಮೇಷ ರಾಶಿ

ವಿದ್ಯಾಭ್ಯಾಸದಲ್ಲಿ ಕೋಪದಿಂದ ಮುಂದುವರಿಯಬೇಡಿ   ಶಾಂತಚಿತ್ತ ದಿಂದ ಸಾಗುವರ ಜೀವನದಲ್ಲಿ  ಸಾಧನೆ ಕಾಣುವುದು. ಉದ್ಯೋಗದಲ್ಲಿ  ಪ್ರಮೋಷನ್ ಸಿಗುವ ಚಾನ್ಸ್ ತುಂಬಾ ಚೆನ್ನಾಗಿದೆ.  ಧರ್ಮ ಕ್ಷೇತ್ರಗಳಿಗೆ ಭೇಟಿ ಮಾಡಿ. ವಿವಾಹ ನಿಮ್ಮ ಇಚ್ಛೆಯಂತೆ ನಡೆಯುವಂತಹ ಸಾಧ್ಯತೆ ಇದೆ. ದುರ್ಗಾದೇವಿಗೆ ಪೂಜೆ ಸಲ್ಲಿಸಿ. ವೃದ್ಧರು ನಿಮ್ಮ ಮಕ್ಕಳ ಜೊತೆಗೆ ಮನಸ್ತಾಪ ಮಾಡಿಕೊಳ್ಳಬೇಡಿ.(ಪರಿಹಾರಕ್ಕೆ ಕರೆಮಾಡಿ : 9900494333)

ವೃಷಭ ರಾಶಿ

ವಿದ್ಯಾಭ್ಯಾಸದಲ್ಲಿ ನಿಮಗೆ ಸಿಹಿ ಸುದ್ದಿ ಒದಗಿ ಬರುತ್ತದೆ. ಬೇರೆಯವರ ವಿಷಯ ಕುರಿತು ಹೆಚ್ಚಾಗಿ ಮಾತನಾಡಬೇಡಿ. ಉದ್ಯೋಗಿಗಳಿಗೆ ಶಾಂತಿಯುತವಾದ  ಜಯ ಒದಗಿ ಬರುತ್ತದೆ. ಅವಸರ ಮಾಡಬೇಡಿ ಶತ್ರುಗಳು ನಿಮ್ಮೋಳಗೆ ಇರುತ್ತಾರೆ. ವಿವಾಹದಲ್ಲಿ ಏರು ಪೇರು ಕಂಡುಬರುತ್ತದೆ. ಹೆಚ್ಚಾಗಿ ಆಸೆಯಿಂದ ಇರಬೇಡಿ. ವೃದ್ದರ ಜೀವನದಲ್ಲಿ ಮಕ್ಕಳ ಸಹಕಾರ ಉತ್ತಮ ವಿರುವುದು.(ಪರಿಹಾರಕ್ಕೆ ಕರೆಮಾಡಿ : 9900494333)

ಮಿಥುನ ರಾಶಿ

ವಿದ್ಯಾಭ್ಯಾಸ ಮಾಡುವವರು ಬುದ್ಧಿವಂತಿಕೆಯಿಂದ ನಡೆಯುವುದು  ಉತ್ತಮ. ಉದ್ಯೋಗಿಗಳಿಗೆ ಸಂಪತ್ತು ಒದಗಿ ಬರುವ ಕಾಲವಾಗಿದೆ. ಮಹಾವಿಷ್ಣುವಿನ ಪ್ರೇರಣೆ ಮಾಡಬೇಕು. ವಿವಾಹ ಸಂಬಂಧ ಪಟ್ಟ  ಕಾರ್ಯಕ್ರಮಗಳು ನಡೆಯುವುದು. ವೃದ್ಧರು ನಿಮ್ಮ ಕುಟುಂಬದವರಿಂದ ಹಾರೈಕೆ ಕಂಡುಬರುತ್ತದೆ.(ಪರಿಹಾರಕ್ಕೆ ಕರೆಮಾಡಿ ) 9900494333

ಕರ್ಕಾಟಕ ರಾಶಿ

ವಿದ್ಯಾಭ್ಯಾಸ ಚೆನ್ನಾಗಿ ಮುಂದುವರಿಸಿಕೊಂಡು ಹೋಗಬಹುದು. ಆಲಸ್ಯ ಮಾಡಬಾರದು.  ಉದ್ಯೋಗಿಗಳಿಗೆ ಅವಕಾಶಗಳು ಹುಡುಕುತ್ತಾ ಬರುತ್ತದೆ.  ಒಳ್ಳೆಯ ಆಯ್ಕೆ ಮಾಡಬೇಕು. ವಿವಾಹದಲ್ಲಿನ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಹುಡುಕಲು ಸಹಕರಿಸಿ. ವಯಸ್ಸಾದ ಹಿರಿಯರು ಮನೆಯಲ್ಲಿ ಮಕ್ಕಳಿಂದ  ಗೌರವ  ಪಡೆಯುತ್ತಾರೆ.(ಪರಿಹಾರಕ್ಕೆ ಕರೆಮಾಡಿ 9900494333)

ಸಿಂಹ ರಾಶಿ

ವಿದ್ಯಾಭ್ಯಾಸಗಳು ವಿಳಂಬ ಆಗಬಹುದು ಎಚ್ಚರದಿಂದ ಮುಂದುವರಿಸಿಕೊಂಡು ಹೋಗಬೇಕು. ಉದ್ಯೋಗಿಗಳಿಗೆ ಲಾಭ ಮತ್ತು ನಷ್ಟ ಎರಡೂ ಸಮಾನವಾಗಿ ಕಂಡುಬರುತ್ತದೆ. ವಿವಾಹದಲ್ಲಿ ಕುಟುಂಬದವರು ತಲೆದೂರಿ ಬರುತ್ತಾರೆ. ವೃದ್ಧರು ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ. (ಪರಿಹಾರಕ್ಕೆ ಕರೆಮಾಡಿ : 9900494333)

ಕನ್ಯಾ ರಾಶಿ

ವಿದ್ಯಾಭ್ಯಾಸ ಮಾಡಲು ಹೆಚ್ಚಾಗಿ ಶ್ರದ್ಧೆಯಿಂದ ಮುಂದುವರಿಯಬೇಕು. ಉದ್ಯೋಗಿಗಳಿಗೆ ಬೇರೆ ಬೇರೆ ಊರುಗಳಿಗೆ ಸಂಚಾರ ಒದಗಿ ಬರುತ್ತದೆ.  ವಿವಾಹದಲ್ಲಿ ಹೆಚ್ಚಿನ ಸಂಬಂಧಗಳು ಹುಡುಕುತ್ತಾ ಬರುತ್ತವೆ. ವೃದ್ಧರು ಖಾಯಿಲೆ ಅನಾರೋಗ್ಯದ ಕಾರಣ ಮನೆಯವರ ಸಹಾಯ ಪಡೆದು ಕೊಳ್ಳುವುದು ಉತ್ತಮ.(ಪರಿಹಾರಕ್ಕೆ ಕರೆಮಾಡಿ : 9900494333 )

ತುಲಾ ರಾಶಿ

ವಿದ್ಯಾಭ್ಯಾಸದಲ್ಲಿ ಕೆಲವು ದುಡುಕು ನಿರ್ಧಾರದಿಂದ ನಷ್ಟ ಅನುಭವಿಸುತ್ತಾರೆ.  ಉದ್ಯೋಗಿಗಳು ಸಂಸ್ಥೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಮಸ್ಯೆಗಳು ದೂರ ಮಾಡಬೇಕು. ವಿವಾಹದಲ್ಲಿ ಹೊರಗಿನಿಂದ ವಿವಿಧ ಸಂಬಂಧಗಳು ಬರುತ್ತವೆ. ವೃದ್ದರಿಗೆ ದೌರ್ಬಲ್ಯಗಳು ಕಂಡುಬರುತ್ತದೆ. (ಪರಿಹಾರಕ್ಕೆ ಕರೆಮಾಡಿ : 9900494333)

ವೃಶ್ಚಿಕ ರಾಶಿ

ವಿದ್ಯಾಭ್ಯಾಸದಲ್ಲಿ ಸ್ನೇಹಿತರೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಉದ್ಯೋಗಿಗಳು ಕೆಟ್ಟ ಮಿತ್ರರ ಸಹವಾಸ ತೊರೆದು ವಿವೇಚನೆಯಿಂದ ಪ್ರಯತ್ನ ಶೀಲರಾದರೆ ನಷ್ಟಗಳಿಂದ ಪಾರಗಬಹುದು. ವೃದ್ಧರು ರಕ್ತದೊತ್ತಡದಿಂದ ನರಳಬಹುದು. ಮನೆ ವ್ಯೆದ್ಯರ ಸಹಾಯ ಪಡೆಯಿರಿ.(ಪರಿಹಾರಕ್ಕೆ ಕರೆಮಾಡಿ : 9900494333)

ಧನಸ್ಸು ರಾಶಿ

ವಿದ್ಯಾಭ್ಯಾಸದಲ್ಲಿ ವಿಳಂಬಗಳು ಎದುರಿಸಬೇಕಾಗುತ್ತದೆ.  ಗಣಪತಿ ಪೂಜೆ ಮಾಡಬೇಕು.ಉದ್ಯೋಗಿಗಳು ಹಿಂಜರಿಕೆಯಿಂದ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ವಿವಾಹದಲ್ಲಿ ಇಷ್ಟ ಪಟ್ಟಂತೆ ಮನೆಯಲ್ಲಿ ನಿರ್ಧಾರ ಬರುತ್ತದೆ. ವೃದ್ಧರು ವ್ಯಥೆ ಚಿಂತನೆಯಿಂದ ಆರೋಗ್ಯವನ್ನು ಹಾಳುಮಾಡಿ ಕೊಳ್ಳಬೇಡಿ.(ಪರಿಹಾರಕ್ಕೆ ಕರೆಮಾಡಿ : 9900494333)

ಮಕರ ರಾಶಿ

ವಿದ್ಯಾಭ್ಯಾಸದ ಬಗ್ಗೆ ಏನಾದರೂ ವ್ಯತ್ಯಾಸ ಮಾಡಬೇಕು. ಹೆಚ್ಚಿನ ನಿಗಾವಹಿಸಿ. ಉದ್ಯೋಗಿಗಳು ಹೆಚ್ಚಾಗಿ ಶ್ರಮವಹಿಸಿ ದುಡಿಯಬೇಕು. ವಿವಾಹದಲ್ಲಿ ವಿವಾದಗಳು ಹೆಚ್ಚಾಗಿ ಬರುತ್ತವೆ. ವೃದ್ಧರು ಶನ್ಯೆಶ್ಚರ ದೇವರಿಗೆ ತುಳಸಿಯನ್ನು ಅರ್ಪಣೆ ಮಾಡಬೇಕು.(ಪರಿಹಾರಕ್ಕೆ ಕರೆಮಾಡಿ ) 9900494333.

ಕುಂಭ ರಾಶಿ

ವಿದ್ಯಾಭ್ಯಾಸದಲ್ಲಿ ಆಸಕ್ತಿಯಿಂದ ಹೊಸ ಹೊಸ ವಿಚಾರಗಳನ್ನು ಕಲಿಯಬಹುದು.  ಉದ್ಯೋಗಿಗಳಿಗೆ  ಹಣಕಾಸಿನ ಸಮಸ್ಯೆಗಳು ಬರತೊಡಗುತ್ತವೆ. ವಿವಾಹದಲ್ಲಿ ಪ್ರೀತಿಸಿದ ಹಾಗೆ ಮದುವೆ ಯೋಗ ಇರುತ್ತದೆ.  ವೃದ್ಧರು ಹೆಚ್ಚಿನ ಚಿಂತನೆಗಳನ್ನು ಮಕ್ಕಳ ಹತ್ತಿರ ಮಂಡಿಸಬೇಕು.(ಪರಿಹಾರಕ್ಕೆ ಕರೆಮಾಡಿ : 9900494333)

ಮೀನ ರಾಶಿ

ವಿದ್ಯಾಭ್ಯಾಸದಲ್ಲಿ ತೊಂದರೆ ಆಗಬಹುದು. ಶ್ರದ್ಧೆವಹಿಸಿ ಸಲಹೆ ಪಡೆಯುವುದು ಉತ್ತಮ.  ಉದ್ಯೋಗದಲ್ಲಿ ಬಹಳ ಯಶಸ್ಸು ಸಿಗುತ್ತದೆ. ಆತುರದಲ್ಲಿ ಹೋಗಬೇಡಿ.  ವಿವಾಹದಲ್ಲಿ ಅಡೆ ತಡೆ ನೆಚ್ಚಿನ ನೆರೆ ಹೊರೆ ರವರಿಂದ ಬರುತ್ತದೆ. ವಾದಗಳು ಮಂಡಿಸಬೇಕು. ವೃದ್ಧರು ಮಕ್ಕಳ ಜೊತೆಗೆ ವೈದ್ಯಕೀಯ ಸಲಹೆಗಳು ಪಡೆಯುವುದರಿಂದ ಆರೋಗ್ಯವನ್ನು ಕಾಪಾಡಬಹುದು.

ನಿಮ್ಮ ಯಾವುದೇ ಸಮಸ್ಯೆಗಳು ಎಷ್ಟೇ ಕಠಿಣವಾಗಿದ್ದರೂ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಇಂದೇ ಕರೆಮಾಡಿ. ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್, ಮೊಬೈಲ್ : 9900494333. 

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

Published

on

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ

Published

on

ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.

ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.

ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.

ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.

ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.

ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 days ago

ಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

ಸುದ್ದಿದಿನ,ದಾವಣಗೆರೆ: ದೇಶದ ಪ್ರಮುಖ ಆರೋಗ್ಯ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರನ್ಸ್ ಕಂಪನಿ ಲಿಮಿಟೆಡ್, ಕರ್ನಾಟಕದಲ್ಲಿ ಮಳೆಗಾಲದಲ್ಲಿ ಜನರನ್ನು ಕಾಡುವ ವಿವಿಧ ಬಗೆಯ...

ದಿನದ ಸುದ್ದಿ5 days ago

ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ...

ದಿನದ ಸುದ್ದಿ5 days ago

ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ...

ದಿನದ ಸುದ್ದಿ7 days ago

ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ

ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು  ತಿಳಿಸಿದ್ದಾರೆ. ಅಂತ್ಯಕ್ರಿಯೆಯನ್ನು...

ಅಂಕಣ1 week ago

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ...

ದಿನದ ಸುದ್ದಿ1 week ago

ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ...

ದಿನದ ಸುದ್ದಿ2 weeks ago

ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು

ಮುಖ್ಯಾಂಶಗಳು ​ ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ ​ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್ ಸುದ್ದಿದಿನ,​ದಾವಣಗೆರೆ:...

ದಿನದ ಸುದ್ದಿ2 weeks ago

ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ 

ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ...

ದಿನದ ಸುದ್ದಿ2 weeks ago

ಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ

ಸುದ್ದಿದಿನ,ದಾವಣಗೆರೆ: ಪ್ರೀತಿಸಿ ವಿವಾಹವಾಗಿದ್ದ ದಂಪತಿ ಜೀವಭಯದಿಂದ ಪೊಲೀಸ್ ರಕ್ಷಣೆ ಕೋರಿ ಠಾಣೆಗೆ ಬಂದಿದ್ದ ವೇಳೆ, ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ...

ಅಂಕಣ2 weeks ago

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ....

Trending