Connect with us

ನಿತ್ಯ ಭವಿಷ್ಯ

ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ : 05-02-2020 ಬುಧವಾರ

Published

on

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ :9964584883

ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883

ಮೇಷ ರಾಶಿ 

ನೀವು ಅಂದುಕೊಂಡಿದ್ದಕ್ಕಿಂತ ಬೇಗನೆ ನಿಮ್ಮ ಕಾರ್ಯ ಯೋಜನೆಗಳು ಮುಗಿಯುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಸುತ್ತಮುತ್ತಲೂ ಪ್ರಭಾವಿ ಜನರ ಹಸ್ತಕ್ಷೇಪ ಇರುತ್ತದೆ. ಇದರಿಂದ ನಿಮಗೆ ಒಳಿತೇ ಅಗುವುದು. ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚಾಗುವ ಸಂದರ್ಭ ಇದೆ. ದೂರದಿಂದ ನೆಂಟರು ದಿಢೀರನೆ ಮನೆಗೆ ಆಗಮಿಸುವ ಸಾಧ್ಯತೆ ಇದೆ. ಬಹುದಿನಗಳ ನಂತರ ಮನಸ್ಸಿನ ದುಃಖವನ್ನು ಪರರ ಮುಂದೆ ತೋಡಿಕೊಳ್ಳುವಿರಿ. ಇದರಿಂದ ಮನಸ್ಸು ಹಗುರ ಆಗುವುದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಷಭ ರಾಶಿ

ಸರ್ರನೆ ಮನಸ್ಸಿಗೆ ಬಂದಿದ್ದನ್ನು ಕಾರ್ಯಗತಗೊಳಿಸಬೇಡಿ. ಸದ್ಯದ ಪರಿಸ್ಥಿತಿಯಲ್ಲಿ ನೀವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಮಾತಿನಲ್ಲಿ ಹಿಡಿತವಿರಲಿ. ಮಾತಿಗೆ ಮಾತು ಬೆಳೆದು ತೀವ್ರವಾದ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುವುದು. ಹಾಗಾಗಿ ಮಾತಿನಲ್ಲಿ ಸೋತು ಎದುರಾಳಿಯ ಹೃದಯವನ್ನು ಗೆಲ್ಲುವ ಚಾಕಚಕ್ಯತೆಯನ್ನು ತೋರಿ. ಶಾಂತಿಯಿಂದ ಕಾರ್ಯ ನಿರ್ವಹಿಸಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಿಥುನ ರಾಶಿ

ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹೋದರ, ಸಹೋದರಿಯರು ಸಹಾಯ ಮಾಡುವರು. ಆದಾಗ್ಯೂ ಮನಸ್ಸಿನ ಅವ್ಯಕ್ತ ಭಯ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರನ್ನು ಭಜಿಸಿ.
ವಿರೋಧಿಗಳು ಕಣ್ಣಾಮುಚ್ಚಾಲೆ ಆಟ ಆಡುವುದು ಇದ್ದಿದ್ದೆ. ಗ್ರಹಗಳು ಕೆಟ್ಟಾಗ ಮಡದಿ ಮಕ್ಕಳೇ ಮಾತು ಕೇಳದ ಪರಿಸ್ಥಿತಿಯಿರುತ್ತದೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ನೀವು ನಂಬಿದ ದೈವವನ್ನು ಮನಸಾರೆ ಸ್ಮರಿಸಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕಟಕ ರಾಶಿ

ಸ್ವಾಭಿಮಾನ ಮತ್ತು ದುರಾಭಿಮಾನಗಳಿಗೆ ಕೂದಲೆಳೆ ಅಂತರ ಮಾತ್ರ. ನೀವು ಅತಿ ಚಾಣಾಕ್ಷ ಮತಿ ಎಂದು ಎಲ್ಲರೂ ಬಲ್ಲರು. ಆದರೆ ಅದೇ ನಿಮಗೆ ಅಹಂಕಾರವಾಗಬಾರದು. ಹಾಗಾಗಿ ಸಾರ್ವತ್ರಿಕವಾಗಿ ತಲೆಬಾಗಿ ನಡೆಯುವುದು ಕ್ಷೇಮ.ಜನರು ನಿಮ್ಮನ್ನು ಹಿಂದಿನಿಂದ ಟೀಕಿಸುತ್ತಾರೆ ಎಂಬ ಪೂರ್ವಗ್ರಹಿಕೆ ಇಟ್ಟುಕೊಳ್ಳದೆ ಕಾರ್ಯ ಪ್ರವೃತ್ತರಾಗಿ. ಟೀಕಿಸುವ ಜನ ಯಾವಾಗಲೂ ಇರುತ್ತಾರೆ. ಅವರ ಟೀಕೆಯಲ್ಲಿನ ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು ಅವರ ಬಾಯಿಗೆ ಬೀಗ ಹಾಕಿ

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಿಂಹ ರಾಶಿ

ಹಣದ ಮುಗ್ಗಟ್ಟು ಉಂಟಾಗುವುದಿಲ್ಲ. ಆದರೆ ಅನವಶ್ಯಕ ಸಂಗತಿಗಳಿಗೆ ಹಣ ವ್ಯಯಿಸುವುದನ್ನು ನಿಲ್ಲಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ. ಈ ಬಗ್ಗೆ ಮನೆಯ ಸದಸ್ಯರು ಕೂಡ ಸಹಕರಿಸುವರು.
ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಹೋಗದು ಎಂಬ ಗಾದೆ ಮಾತಿನಂತೆ ನಿಮ್ಮ ವ್ಯವಹಾರದಲ್ಲಿನ ಕಿಂಚಿತ್‌ ಲೋಪವು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇರುತ್ತದೆ. ಕುಲದೇವರ ಮೊರೆ ಹೋಗುವುದು ಒಳ್ಳೆಯದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕನ್ಯಾ ರಾಶಿ

ಭವಿಷ್ಯದ ಬಗೆಗಿನ ಅತಂತ್ರಗಳಿಗೆ ವಿರಾಮ ಸಿಗುವ ಸಾಧ್ಯತೆ ಇದೆ. ಮನೆಯ ಹಿರಿಯರೊಬ್ಬರ ಸಹಾಯ, ಸಹಕಾರ ದೊರೆಯಲಿದ್ದು ಸರ್ಕಾರದ ವತಿಯಿಂದ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವಂತೆ ಆದೇಶ ಕೈ ಸೇರುವುದು.ಮುಂದಿನ ದಿನಗಳ ಬಗ್ಗೆ ಮುಂದಾಲೋಚನೆ ಮಾಡಬಾರದು ಎಂಬುದೇನಿಲ್ಲ. ಆದರೆ ನಾಳೆಯ ಊಟವನ್ನು ಇಂದೇ ಮಾಡಿ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ಇಂದಿನ ಕಾರ್ಯಕ್ರಮವನ್ನು ಹೇಗೆ ಶಿಸ್ತುಬದ್ಧವಾಗಿ ಪೂರ್ಣಗೊಳಿಸಬಹುದು ಎಂಬುದರ ಬಗ್ಗೆ ಚಿಂತಿಸಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ತುಲಾ ರಾಶಿ

ನಿಶ್ಚಯವಾದ ಯಶಸ್ಸಿಗೆ ಕಲ್ಲುಹಾಕುವವರಿದ್ದಾರೆ. ಎಚ್ಚರದ ಹೆಜ್ಜೆಯೇ ನಿಮ್ಮ ಗುರಿಯಾಗಿರಲಿ. ನಿಮ್ಮ ಮುಂದೆ ಆಡಿಕೊಂಡ ವ್ಯಕ್ತಿಗಳು ನಿಮ್ಮ ಕಾರ್ಯವೈಖರಿಯನ್ನು ನೋಡಿ ಬೆರಗಾಗುವರು.
ನಿಮ್ಮದೇ ಆದ ಗುರಿ ತಲುಪುವಲ್ಲಿಗೆಳೆಯರ ವಿಶೇಷ ಬೆಂಬಲ ಲಭ್ಯವಾಗಲಿದೆ. ಮನಸ್ಸನ್ನು ಸಮಾಧಾನ ಮಾಡಿಕೊಳ್ಳಿ. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಒಳಿತಾಗುವುದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಶ್ಚಿಕ ರಾಶಿ

ಮನಸ್ಸು ಬೇಡದ ವಿಚಾರಗಳತ್ತಲೇ ಗಿರಕಿ ಹೊಡೆಯುತ್ತಿರುವುದರಿಂದ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಸೋಮವಾರ ಈಶ್ವರ ದೇವಾಲಯದಲ್ಲಿರುದ್ರಾಭಿಷೇಕ ಮಾಡಿಸಿ.
ನಿಮ್ಮ ಹತ್ತಿರದ ಸಂಬಂಧಿಗಳು ಚುಚ್ಚಿ ಚುಚ್ಚಿ ಮಾತನಾಡಿ ನಿಮ್ಮನ್ನು ಕೆರಳಿಸುವ ಸಾಧ್ಯತೆ ಇದೆ. ಆದರೆ ಅವರ ಮಾತಿಗೆ ಉತ್ತರ ಕೊಡದೆ ಸುಮ್ಮನಿರಿ. ನಿಮ್ಮ ಮನೋಕಾಮನೆಗಳು ಭಗವಂತನ ದಯೆಯಿಂದ ನೆರವೇರುವುದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಧನಸ್ಸು ರಾಶಿ

ಸ್ವಚ್ಛತೆಯೇ ದೇವರು ಎಂದರು ಅನುಭಾವಿಗಳು. ಅಂತೆಯೇ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಕಸ ಮತ್ತು ಕೊಳೆಯಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಿ. ಇದರಿಂದ ಮನಸ್ಸು ಖುಷಿ ಅನುಭವಿಸುವುದು ಮತ್ತು ಸುತ್ತಮುತ್ತಲು ಸ್ವಚ್ಛತೆ ಇರುವುದು.ತಾಳ್ಮೆಯಿಂದ ಇರುವುದು ಸೋಲಲ್ಲ. ಬದುಕಿನ ಘನತೆಗಾಗಿ ಬೇಕಾದಂತಹ ತಾಳ್ಮೆಯನ್ನು ಸಂಪಾದಿಸಿ ಗೆಲ್ಲುವಿರಿ. ಪ್ರಯಾಣ ಕಾಲದಲ್ಲಿ ಎಚ್ಚರ ಇರಲಿ. ಸಣ್ಣ ಪುಟ್ಟ ಪೆಟ್ಟುಗಳು ಆಗುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಕರ ರಾಶಿ

ವಿನಾಕಾರಣ ಅನೀರಿಕ್ಷಿತ ಬೆಳವಣಿಗೆಯೊಂದು ಸಂಭವಿಸಿ ಕೂಡಿಟ್ಟ ಹಣಕ್ಕೆ ಸಂಚಕಾರ ಬರುವುದು. ವಿಪರೀತವಾಗಿ ಹಣ ಕೈಬಿಡುವುದು. ಈ ಬಗ್ಗೆ ಎಚ್ಚರದಿಂದ ಇರಿ. ಬೇರೊಬ್ಬರ ವ್ಯವಹಾರದಲ್ಲಿಜಾಮೀನು ಪತ್ರಕ್ಕೆ ಸಹಿ ಹಾಕದಿರಿ.ಬೇಕಿರದ ಮಾತುಗಳನ್ನೇ ಆಡಿ ತಮಾಷೆ ನೋಡುವಂತಹ ಮಂದಿಯನ್ನು ದೂರವಿಡಿ. ಇದರಿಂದ ನಿಮ್ಮ ವರ್ಚಸ್ಸು ಗೌರವ ಹೆಚ್ಚುವುದು. ಆರ್ಥಿಕ ಸ್ಥಿತಿ ಸದೃಢವಾಗಿರುವುದು.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕುಂಭ ರಾಶಿ

ಕಾರಣವಿಲ್ಲದ ಆರೋಪವನ್ನು ನಿಮ್ಮ ಮೇಲೆ ಹೊರಿಸಿ ಮನೋಬಲ ಕುಗ್ಗಿಸುವವರ ಬಗ್ಗೆ ಎಚ್ಚರದಿಂದ ಇರಿ. ತಲೆನೋವು ಮುಂತಾದ ತೊಂದರೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.‘ಸಕಲಗ್ರಹಬಲ ನೀನೇ ಸರಸಿಜಾಕ್ಷ’ ಎಂದು ಭಗವಂತನ ಮೊರೆ ಹೋಗುವುದರಿಂದ ಬಂದಂತಹ ಆಪತ್ತು ದೂರವಾಗುವುದು. ಭಗವಂತನನ್ನು ಆರಾಧಿಸುವ ಮೂಲಕ ಇಚ್ಛಿತ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳುವಿರಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೀನ ರಾಶಿ

ಹಿರಿಯರ ಆಶೀರ್ವಾದದ ಫಲವಾಗಿ ಮನಃಸ್ಥೆತ್ರೖರ್ಯ ಸಂಪಾದಿಸಿಕೊಂಡು ಜೀವನದಲ್ಲಿಗೆಲ್ಲಲು ಮುಂದಾಗುವಿರಿ. ಅದಕ್ಕೆ ಸುತ್ತಮುತ್ತಲಿನ ವಾತಾವರಣ ನಿಮಗೆ ಸಹಕಾರಿಯಾಗಿ ನಿಲ್ಲುವುದು. ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಿ. ನಿಮ್ಮ ಮನಸ್ಸು ಪ್ರಸನ್ನತೆಯಲ್ಲಿಇರಲಿ. ಭೀಮಬಲ ಸಂಪ್ರಾಪ್ತಿಯಿಂದ ಎಲ್ಲಾಕೆಲಸ ಕಾರ್ಯಗಳಲ್ಲಿಯಶಸ್ಸು ದೊರೆಯುವುದು. ನಿಮ್ಮ ಹೆಚ್ಚಿನ ಸಂತೋಷಕ್ಕೆ ಮಕ್ಕಳು ಮತ್ತು ಮೊಮ್ಮಕ್ಕಳು ಕಾರಣೀಭೂತರಾಗುವರು. ಅವರಿಗೆ ಶುಭ ಹಾರೈಸುವಿರಿ.

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.  9964584883

ದಿನದ ಸುದ್ದಿ

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!

Published

on

ಇಂದಿನ ರಾಶಿ ಭವಿಷ್ಯ - ಸೆಪ್ಟೆಂಬರ್ 10, 2026

ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ.

http://Visit : www.suddidina.com

ಮೇಷ: ಹಣಕಾಸಿನ ವಿಚಾರದಲ್ಲಿ ಶುಭ ದಿನ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.

ವೃಷಭ: ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿ ಬರಲಿವೆ. ಮಾತಿನ ಮೇಲೆ ನಿಯಂತ್ರಣ ಇರಲಿ. ಪ್ರಯಾಣದ ಯೋಗವಿದೆ.

ಮಿಥುನ: ಉದ್ಯೋಗದಲ್ಲಿ ಪ್ರಗತಿಯ ಸೂಚನೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಉಲ್ಲಾಸ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.

ಕರ್ಕಾಟಕ: ವ್ಯಾಪಾರದಲ್ಲಿ ಲಾಭದ ನಿರೀಕ್ಷೆ. ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಹಳೆಯ ಸಾಲ ವಸೂಲಿಯಾಗಲಿದೆ.

ಸಿಂಹ: ಆತ್ಮವಿಶ್ವಾಸ ಹೆಚ್ಚಾಗುವ ದಿನ. ಸರ್ಕಾರಿ ಕೆಲಸಗಳು ಸುಗಮವಾಗಿ ನಡೆಯಲಿವೆ. ಮಕ್ಕಳಿಂದ ಶುಭ ಸುದ್ದಿ ಸಿಗಲಿದೆ.

ಕನ್ಯಾ: ಕೆಲಸದ ಒತ್ತಡ ಹೆಚ್ಚಿರಬಹುದು, ತಾಳ್ಮೆಯಿಂದ ಇರಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಸಂಜೆ ವೇಳೆಗೆ ಶುಭ ಸುದ್ದಿ.

ತುಲಾ: ಹೊಸ ಅವಕಾಶಗಳು ಬಾಗಿಲು ತಟ್ಟಲಿವೆ. ನಿಮ್ಮ ಪ್ರತಿಭೆಗೆ ಮನ್ನಣೆ ಸಿಗಲಿದೆ. ಪ್ರೇಮ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ.

ವೃಶ್ಚಿಕ: ಆಸ್ತಿ ವಿಚಾರದಲ್ಲಿ ಜಯ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ.

ಧನು: ಧೈರ್ಯದಿಂದ ಕೈಗೊಂಡ ನಿರ್ಧಾರ ಯಶಸ್ಸು ತರಲಿದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬಗೆಹರಿಯಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ.

ಮಕರ: ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ. ಕಛೇರಿಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ.

ಕುಂಭ: ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ಸಿಗುವ ದಿನ. ಹೊಸ ವಸ್ತು ಖರೀದಿ ಯೋಗವಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚಾಗಲಿದೆ.

ಮೀನ: ಮನಸ್ಸಿನಲ್ಲಿ ಗೊಂದಲಗಳು ನಿವಾರಣೆಯಾಗಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ದೂರದ ಸಂಬಂಧಿಯಿಂದ ಸುದ್ದಿ ಬರಲಿದೆ.

Continue Reading

ನಿತ್ಯ ಭವಿಷ್ಯ

ಮೇಷದಿಂದ ಮೀನದವರೆಗೆ: ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯದಲ್ಲಿ ಏನಿದೆ?

Published

on

ಇಂದು ಯಾರಿಗೆ ಹಣಲಾಭ? ಯಾರಿಗೆ ಹೊಸ ಅವಕಾಶ? 12 ರಾಶಿಗಳ ದಿನಭವಿಷ್ಯ ಇಲ್ಲಿದೆ

ಸುದ್ದಿದಿನ,ರಾಶಿಭವಿಷ್ಯ: ಇಂದಿನ ದಿನವು ಪ್ರತಿಯೊಂದು ರಾಶಿಗೂ ವಿಭಿನ್ನ ಅನುಭವಗಳನ್ನು ತರುವ ಸಾಧ್ಯತೆ ಇದೆ. ಕೆಲವರಿಗೆ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಮತ್ತೊಂದೆಡೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಿರ್ಧಾರ ಅಗತ್ಯವಾಗಬಹುದು. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಕೆಲವು ರಾಶಿಗಳಿಗೆ ದೊರೆಯಲಿದ್ದು, ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಅಧ್ಯಯನ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ದಿನದ ಪ್ರಮುಖ ನಿರ್ಧಾರಗಳಲ್ಲಿ ಆತುರಕ್ಕಿಂತ ವಿವೇಕಕ್ಕೆ ಆದ್ಯತೆ ನೀಡುವುದು ಉತ್ತಮ.

http://Visit : www.suddidina.com

ಮೇಷ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚು ತಪ್ಪಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಬೇಕು.

ವೃಷಭ ರಾಶಿ

ಬಹುದಿನಗಳಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ಕುಟುಂಬದವರ ಸಲಹೆ ಉಪಯುಕ್ತವಾಗಲಿದೆ. ಆರೋಗ್ಯದ ಕಡೆ ಗಮನ ನೀಡಿ.

ಮಿಥುನ ರಾಶಿ

ಕೆಲಸದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗಲಿದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಸಹಕಾರಿಯಾಗಬಹುದು. ಹಣದ ವ್ಯವಹಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಮುಂದುವರಿಯಿರಿ.

ಕಟಕ ರಾಶಿ

ಕುಟುಂಬದ ವಿಚಾರಗಳು ಹೆಚ್ಚಿನ ಗಮನ ಸೆಳೆಯಬಹುದು. ಉದ್ಯೋಗದಲ್ಲಿ ಒತ್ತಡ ಕಂಡುಬಂದರೂ ಸಮಾಧಾನದಿಂದ ನಿರ್ವಹಿಸಿ. ಆತುರದ ನಿರ್ಧಾರಗಳಿಂದ ದೂರವಿರುವುದು ಒಳಿತು.

ಸಿಂಹ ರಾಶಿ

ವೃತ್ತಿಜೀವನದಲ್ಲಿ ಪ್ರಗತಿಯ ಸೂಚನೆಗಳಿವೆ. ಹಿರಿಯರಿಂದ ಮೆಚ್ಚುಗೆ ದೊರೆಯಬಹುದು. ಹಣಕಾಸಿನ ಸ್ಥಿತಿ ಸುಧಾರಿಸುವ ಅವಕಾಶವಿದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು.

ಕನ್ಯಾ ರಾಶಿ

ಹೊಸ ಯೋಜನೆ ಆರಂಭಿಸಲು ದಿನ ಅನುಕೂಲಕರವಾಗಿರಬಹುದು. ಕೆಲಸದಲ್ಲಿ ಏಕಾಗ್ರತೆ ಹೆಚ್ಚಲಿದೆ. ಖರೀದಿ ಮಾಡುವಾಗ ಅಗತ್ಯ-ಅನಗತ್ಯವನ್ನು ಅಳೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ತುಲಾ ರಾಶಿ

ಸಂಬಂಧಗಳಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾದರೂ ಮಾತುಕತೆಯಿಂದ ಪರಿಹರಿಸಬಹುದು. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಬರಬಹುದು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ.

ವೃಶ್ಚಿಕ ರಾಶಿ

ಹಳೆಯ ಕೆಲಸವೊಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಎಚ್ಚರಿಕೆಯ ಹೆಜ್ಜೆ ಅಗತ್ಯ. ಕುಟುಂಬದವರಿಂದ ಬೆಂಬಲ ಸಿಗಲಿದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.

ಧನು ರಾಶಿ

ಹೊಸ ಅವಕಾಶಗಳು ನಿಮ್ಮ ಗಮನ ಸೆಳೆಯಬಹುದು. ದೂರದ ಪ್ರಯಾಣದ ಯೋಜನೆ ರೂಪುಗೊಳ್ಳಬಹುದು. ಹಣದ ವಿಚಾರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆತ್ಮವಿಶ್ವಾಸ ಹೆಚ್ಚಲಿದೆ.

ಮಕರ ರಾಶಿ

ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಯೋಜನೆಯಂತೆ ಕಾರ್ಯನಿರ್ವಹಿಸಿದರೆ ಯಶಸ್ಸು ಸಿಗಲಿದೆ. ಹಿರಿಯರ ಮಾರ್ಗದರ್ಶನ ಪ್ರಯೋಜನಕಾರಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ.

ಕುಂಭ ರಾಶಿ

ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಮಯ. ಉದ್ಯೋಗದಲ್ಲಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ಮಾಹಿತಿ ಸಂಗ್ರಹಿಸಿ ನಿರ್ಧರಿಸಿ. ಸ್ನೇಹಿತರಿಂದ ನೆರವು ದೊರೆಯಬಹುದು.

ಮೀನ ರಾಶಿ

ಮನಸ್ಸಿನ ಗೊಂದಲಗಳು ನಿಧಾನವಾಗಿ ಕಡಿಮೆಯಾಗಬಹುದು. ಕುಟುಂಬದೊಂದಿಗೆ ಸಂತಸದ ಕ್ಷಣಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಉಳಿತಾಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಪರಿಶ್ರಮದ ಫಲ ದೊರೆಯಬಹುದು.

Continue Reading

ನಿತ್ಯ ಭವಿಷ್ಯ

Today Rashi Bhavishya September 1 2026: ಇಂದಿನ ರಾಶಿಭವಿಷ್ಯ; ಈ 5 ರಾಶಿಗೆ ಶುಭಫಲ

Published

on

ರಾಶಿಭವಿಷ್ಯ ಸೆಪ್ಟೆಂಬರ್ 1: ಈ 5 ರಾಶಿಗೆ ಅದೃಷ್ಟದ ಬಾಗಿಲು ಓಪನ್‌! ಹಣ, ಉದ್ಯೋಗ, ವ್ಯವಹಾರದಲ್ಲಿ ಶುಭಫಲ; ನಿಮ್ಮ ರಾಶಿ ಹೇಗಿದೆ?

ಸುದ್ದಿದಿನ,ರಾಶಿಭವಿಷ್ಯ: ಸೆಪ್ಟೆಂಬರ್‌ 1, 2026ರ ದಿನವು ಹಲವು ರಾಶಿಗಳಿಗೆ ಹೊಸ ಅವಕಾಶಗಳು, ಆರ್ಥಿಕ ಪ್ರಗತಿ ಮತ್ತು ವೃತ್ತಿಯಲ್ಲಿ ಮುನ್ನಡೆಯ ಸೂಚನೆ ನೀಡುತ್ತಿದೆ. ಜ್ಯೋತಿಷ್ಯಾಧಾರಿತ ದಿನಭವಿಷ್ಯದ ಪ್ರಕಾರ ಮೇಷ, ವೃಷಭ, ಮಿಥುನ, ತುಲಾ ಮತ್ತು ಮಕರ ರಾಶಿಯವರಿಗೆ ವಿಶೇಷವಾಗಿ ಅನುಕೂಲಕರ ಬೆಳವಣಿಗೆಗಳ ಸಾಧ್ಯತೆ ಇದೆ.

ಆದರೆ ಪ್ರತಿಯೊಂದು ರಾಶಿಗೂ ದಿನ ಒಂದೇ ರೀತಿಯಾಗಿರುವುದಿಲ್ಲ. ಕೆಲವರಿಗೆ ಹಣಕಾಸಿನಲ್ಲಿ ಲಾಭದ ಸೂಚನೆ ಇದ್ದರೆ, ಇನ್ನು ಕೆಲವರು ಆರೋಗ್ಯ, ಖರ್ಚು, ಕುಟುಂಬ ಸಂಬಂಧ ಅಥವಾ ಕೆಲಸದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಬೇಕಾಗುತ್ತದೆ.

http://Visit : www.suddidina.com

ಮೇಷ ರಾಶಿ

ಆರ್ಥಿಕ ಸಮಸ್ಯೆಗಳಿಂದ ಸ್ವಲ್ಪ ಪರಿಹಾರ ದೊರೆಯುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿ ಕಾಣಬಹುದು. ಆದರೆ ಆರೋಗ್ಯ ಮತ್ತು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ವೃಷಭ ರಾಶಿ

ಹಣಕಾಸಿನ ವಿಚಾರದಲ್ಲಿ ಉತ್ತಮ ದಿನ. ಕುಟುಂಬದ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಲಿದೆ. ಶಿಕ್ಷಣ ಹಾಗೂ ವ್ಯವಹಾರದಲ್ಲಿ ಯಶಸ್ಸಿನ ಸಾಧ್ಯತೆ ಇದೆ. ಖರ್ಚು ಹೆಚ್ಚಾಗದಂತೆ ನಿಯಂತ್ರಿಸುವುದು ಮುಖ್ಯ.

ಮಿಥುನ ರಾಶಿ

ನಿರೀಕ್ಷಿತ ಯಶಸ್ಸು ದೊರೆಯುವ ಸಾಧ್ಯತೆ ಇದೆ. ಹಳೆಯ ಕೆಲಸದ ಸಮಸ್ಯೆಗಳು ಬಗೆಹರಿಯಬಹುದು. ಕೋರ್ಟ್‌ ಅಥವಾ ಕಾನೂನು ಸಂಬಂಧಿತ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆ ಸಾಧ್ಯ. ಆದರೆ ಯಾರಿಗೂ ದೊಡ್ಡ ಮೊತ್ತದ ಹಣ ಸಾಲ ನೀಡಬೇಡಿ.

ಕಟಕ ರಾಶಿ

ಕುಟುಂಬದ ವಿಚಾರಗಳಲ್ಲಿ ಹೆಚ್ಚಿನ ಗಮನ ನೀಡಬೇಕಾದ ದಿನ. ಯಾವುದೇ ಕೆಲಸವನ್ನು ಯೋಜನೆಯೊಂದಿಗೆ ಆರಂಭಿಸಿದರೆ ಉತ್ತಮ ಫಲಿತಾಂಶ ಸಿಗಬಹುದು. ಮಾನಸಿಕ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.

ಸಿಂಹ ರಾಶಿ

ಕೆಲಸದಲ್ಲಿ ಶ್ರಮ ಹೆಚ್ಚಿಸಬೇಕಾದ ದಿನ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಬಹುದು. ಕುಟುಂಬದಲ್ಲಿದ್ದ ಕೆಲವು ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಅಧಿಕಾರಿಗಳು ಅಥವಾ ಹಿರಿಯರೊಂದಿಗೆ ಮಾತನಾಡುವಾಗ ತಾಳ್ಮೆ ಅಗತ್ಯ.

ಕನ್ಯಾ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಪ್ರಯತ್ನಗಳು ಫಲ ನೀಡುವ ಸಾಧ್ಯತೆ ಇದೆ. ಕೆಲಸದಲ್ಲಿನ ಅಡೆತಡೆಗಳು ದೂರವಾಗಬಹುದು. ವೃತ್ತಿಗೆ ಸಂಬಂಧಿಸಿದ ಶುಭ ಸುದ್ದಿ ಸಿಗುವ ನಿರೀಕ್ಷೆಯಿದೆ. ದೊಡ್ಡ ಹೂಡಿಕೆ ಮತ್ತು ದೂರ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ.

ತುಲಾ ರಾಶಿ

ಹಠಾತ್ ಆರ್ಥಿಕ ಲಾಭದ ಅವಕಾಶಗಳು ಬರಬಹುದು. ಆದಾಯ ಹೆಚ್ಚಿಸುವ ಪ್ರಯತ್ನಗಳಿಗೆ ಉತ್ತಮ ಸಮಯ. ಕುಟುಂಬದವರೊಂದಿಗೆ ಮನಸ್ಸಿನ ಮಾತುಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಿ. ಕೋಪ ಹಾಗೂ ಮಾತಿನ ಮೇಲೆ ನಿಯಂತ್ರಣ ಇರಲಿ.

ವೃಶ್ಚಿಕ ರಾಶಿ

ಶುಭ ಸುದ್ದಿಯ ನಿರೀಕ್ಷೆಯಿದೆ. ಅದೃಷ್ಟದ ಬೆಂಬಲ ದೊರೆಯುವ ಸಾಧ್ಯತೆ ಇದ್ದು, ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬಹುದು. ವ್ಯವಹಾರದಲ್ಲಿ ಹಣಕಾಸಿನ ಲಾಭದ ಅವಕಾಶವಿದೆ. ಆದರೆ ಅನಗತ್ಯ ಪ್ರಯಾಣ ಮತ್ತು ವಾದಗಳಿಂದ ದೂರವಿರಿ.

ಧನು ರಾಶಿ

ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಹುದು. ದೂರದ ಸ್ಥಳದಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಬಹುದು. ಆದರೆ ಖರ್ಚು ಹೆಚ್ಚಾಗದಂತೆ ನೋಡಿಕೊಳ್ಳಿ ಹಾಗೂ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಮಕರ ರಾಶಿ

ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸೂಚನೆ ಇದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಮೆಚ್ಚುಗೆ ದೊರೆಯಬಹುದು. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವ ಸಾಧ್ಯತೆ ಇದೆ. ವೃತ್ತಿ ಮತ್ತು ಉದ್ಯಮದಲ್ಲಿ ಪ್ರಮುಖ ನಿರ್ಧಾರಗಳನ್ನು ವಿಳಂಬ ಮಾಡದೆ ಸೂಕ್ತವಾಗಿ ತೆಗೆದುಕೊಳ್ಳಿ.

ಕುಂಭ ರಾಶಿ

ಉನ್ನತ ಅಧಿಕಾರಿಗಳ ಸಹಕಾರದಿಂದ ವೃತ್ತಿಯಲ್ಲಿ ಮುನ್ನಡೆ ಸಾಧಿಸಬಹುದು. ನಾಯಕತ್ವದ ಸಾಮರ್ಥ್ಯ ಹೆಚ್ಚಲಿದೆ. ಸಂಬಂಧಿಕರ ಭೇಟಿ ಸಾಧ್ಯ. ಕುಟುಂಬದಲ್ಲಿ ಅನಗತ್ಯ ಸಂಘರ್ಷಕ್ಕೆ ಅವಕಾಶ ಕೊಡಬೇಡಿ. ವ್ಯವಹಾರದಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ.

ಮೀನ ರಾಶಿ

ಗುರುಗತಿಯ ಅನುಕೂಲದಿಂದ ಕೆಲವು ವಿಚಾರಗಳಲ್ಲಿ ಪ್ರಗತಿ ಸಾಧ್ಯ. ವಿದೇಶಕ್ಕೆ ಸಂಬಂಧಿಸಿದ ಅವಕಾಶ ಅಥವಾ ಶುಭ ಸುದ್ದಿ ಸಿಗಬಹುದು. ಆದರೆ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚು ಮತ್ತು ದೊಡ್ಡ ಹೂಡಿಕೆಗಳನ್ನು ತಪ್ಪಿಸುವುದು ಉತ್ತಮ.

ಸೂಚನೆ: ಮೇಲಿನ ರಾಶಿಭವಿಷ್ಯ ಜ್ಯೋತಿಷ್ಯಾಧಾರಿತ ಸಾಮಾನ್ಯ ಮಾಹಿತಿಯಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಫಲಿತಾಂಶ ಭಿನ್ನವಾಗಬಹುದು.

Continue Reading

Trending