ನಿತ್ಯ ಭವಿಷ್ಯ
ಬಗೆಹರಿಯ ದಂತಹ ಸಮಸ್ಯೆಗಳಿಗೆ ಭಗವತಿ ದೇವಿಯ ಪೂಜಾ ಶಕ್ತಿಯಿಂದ ವಿಶೇಷ ಪರಿಹಾರ : ಕರೆಮಾಡಿ | 19-02-2020 ಬುಧವಾರ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು
ಇಂದೇ ಕರೆ ಮಾಡಿ 9964584883
ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಮೇಷ ರಾಶಿ
ಈ ದಿನ ನಿಮ್ಮ ಸಂಸಾರಿಕ ಜೀವನದಲ್ಲಿ ವಿಶೇಷ ಸಂಗತಿಗಳು ನಡೆಯಬಹುದು. ಹಿರಿಯರು ಹೊಂದಿಕೊಳ್ಳುವಲ್ಲಿ ಸಮಸ್ಯೆಗಳು ಕಾಡಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ. ಸಾಮಾಜಿಕ ಕ್ಷೇತ್ರದಲ್ಲಿ ಗೌರವಾದರಗಳು ದೊರೆಯುವುದು. ವಿದ್ಯಾಭ್ಯಾಸದಲ್ಲಿ ತೃಪ್ತಿದಾಯಕ ಕಂಡುಬರಲಿವೆ ಆರ್ಥಿಕ ಸುಧಾರಣೆ, ಉದ್ಯಮ ಪ್ರಗತಿ, ಸ್ಥಿರಾಸ್ತಿ ಖರೀದಿ, ಸಹಕಾರಿಯಾಗಲಿದೆ. ಮನೆ ವಾಹನ, ಉಪಯುಕ್ತ ಸಲಕರಣೆಗಳ, ಖರೀದಿ ಅನಾಯಸವಾಗಿ ನಡೆಯಲಿದೆ. ಸಂಸ್ಥೆಯೊಂದರ ಆಡಳಿತ ಚುಕ್ಕಾಣಿ ಹಿಡಿಯುವಿರಿ. ವ್ಯಾಪಾರಿ, ಸಣ್ಣ ಉದ್ಯಮಿ ,ಸಾಹಿತಿ, ಕಲಾವಿದ ಹಾಗೂ ಮಹಿಳೆಯರ ಯೋಜನೆಗಳು, ದುಡಿಮೆಗಳಲ್ಲಿ, ಲಾಭ ಆಗಲಿವೆ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವೃಷಭ ರಾಶಿ
ಮಹಿಳೆಯರು ವಾಹನ ಖರೀದಿಮಾಡಲಿದ್ದಾರೆ. ವ್ಯಾಪಾರಿಗಳು ಉದ್ಯಮ ಬದಲಿಸುವ ಚಿಂತನೆ ಮಾಡುವರು. ಕ್ಷೀರ ಉದ್ಯಮಿಗಳು ಬಹುಮುಖ ಲಾಭದಲ್ಲಿರುವರು. ರೈತರು ಕೃಷಿಯಿಂದ ಒಳ್ಳೆಯ ಲಾಭದಲ್ಲಿರುವರು. ವಿದ್ಯಾರ್ಥಿಗಳು ಬಹುಮುಖ ಮಾಡಲಿದ್ದೀರಿ. ಬರಹಗಾರರು, ಉಪನ್ಯಾಸಕ, ಪ್ರವಚನಕಾರ ,ಸಾಹಿತಿ-ಕಲಾವಿದರ, ಜೀವನ ಸುಖ ಶಾಂತಿ ಗಳಿಂದ, ಸಂತೋಷವಾಗಿರುವರು. ಈ ದಿನ ಬಹುದಿನದ ಬೇಡಿಕೆ ಈಡೇರುವುದು. ಆರೋಗ್ಯಭಾಗ್ಯ ಅನುಕೂಲಕರವಾಗಿರುವುದು. ಧಾರ್ಮಿಕ ತಾಣಗಳಿಗೆ ಪ್ರವಾಸ ಮಾಡಲಿದ್ದೀರಿ. ಸ್ಥಿರಾಸ್ತಿ ಖರೀದಿಮಾಡಲಿದ್ದಾರೆ. ಸಮಸ್ಯೆಗಳು ಎದುರಿಸುವಿರಿ. ಬುದ್ಧಿವಂತಿಕೆಯಿಂದ ಪರಿಹಾರ ಹುಡುಕಿಕೊಳ್ಳಿ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮಿಥುನ ರಾಶಿ
ಈ ದಿನ ನಿಮ್ಮ ಉದ್ಯಮ ಪ್ರಗತಿ ಕ್ರಿಯಾಶೀಲವಾಗಿ ಸ್ಪಂದಿಸುವುದು. ತಕ್ಕಮಟ್ಟಿಗೆ ಲಾಭದಲ್ಲಿರುವರು. ಬೇಸರದ ಘಟನೆಗಳು ಒಂದೊಂದಾಗಿ ಎದುರಿಸುವಿರಿ. ಮನೆ ನಿರ್ಮಾಣದ ಕನಸು ನನಸಾಗುವುದು. ವ್ಯವಸಾಯ ವ್ಯಾಪಾರಿ ರಂಗಕರ್ಮಿಗಳು ಕಷ್ಟಪಡುವವರು, ತಕ್ಕಮಟ್ಟಿಗೆ ಲಾಭ ಪಡೆಯುವರು. ಕುಟುಂಬದಲ್ಲಿ ಮದುವೆ ನಡೆಯಲಿದೆ. ದೂರದ ಪ್ರಯಾಣ ಬೇಡ. ಪತಿ-ಪತ್ನಿ ಕೊಂಚ ನೆಮ್ಮದಿಯಾಗಿರುವಿರಿ. ಮನಸ್ತಾಪಗಳದಿಂದ ದೂರವಿರಿ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕಟಕ ರಾಶಿ
ಈ ದಿನ ಜೀವನ ಧನಾತ್ಮಕವಾಗಿ ಪರಿಣಮಿಸಲಿದೆ. ಹಿಡಿದ ಕೆಲಸಗಳು ಒಂದೊಂದಾಗಿ ಯಶಸ್ವಿ ಕಾಣಲಿದೆ. ದೂರದ ನೆಂಟರ ಆಗಮನ. ಖರ್ಚುವೆಚ್ಚಗಳ ಅಧಿಕವಾಗುವುದು. ನೌಕರಿಯಲ್ಲಿ ಬಡ್ತಿ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಚುರುಕಾಗಿರುವುದು ಉತ್ತಮ. ಮಗನಿಗೆ ಕನ್ಯಾ ಹುಡುಕಿಕೊಂಡು ಬರುವುದು. ವ್ಯವಸಾಯ ಆಧುನಿಕವಾಗಿ ಮಾರ್ಪಾಡಾಗುವ ದಿನವಾಗಿದೆ. ಹಿರಿಯ ನಾಗರಿಕರು ಏಕಾಂಗಿ ಕೊರಗುವರು.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಿಂಹರಾಶಿ
ನಿರುದ್ಯೋಗಿಗಳಿಗೆ ಕೆಲಸದ ಭಾಗ್ಯ ಸಿಗಲಿದೆ. ಹೊಸ ಕೆಲಸ ಹುಡುಕುವಲ್ಲಿ ಯಶಸ್ವಿಯಾಗಲಿದ್ದೀರಿ. ಮನೆ ಬದಲಾವಣೆಯಾಗುವ ಸಾಧ್ಯತೆ ಇದೆ. ಹೊಸ ಮನೆ ಕಟ್ಟುವ ವಿಚಾರ ಮಾಡಲಿದ್ದೀರಿ. ಕೈಗಾರಿಕೆಗಳು ಆತ್ಮೀಯ ಸ್ನೇಹಿತರಿಂದ ತೊಂದರೆಯಾಗಲಿದೆ. ಅಲಂಕಾರಿಕ ವಸ್ತುಗಳು ಖರೀದಿ ಮಾಡಲಿದ್ದೀರಿ. ವಾಹನ ಖರೀದಿ ಯೋಗ ಯಶಸ್ವಿಯಾಗಲಿದೆ. ಹಣಕಾಸಿನಲ್ಲಿ ಏರುಪೇರು.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕನ್ಯಾ ರಾಶಿ
ಪಾಲುದಾರಿಕೆ ಕಾರ್ಯಗಳು ತೊಂದರೆಯಾಗಲಿದೆ. ಹಣಕಾಸಿನಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಸಂಘರ್ಷ ಹಾದಿ ತುಳಿಯಬಾರದು. ಸ್ವಾರ್ಥ ಚಿಂತನೆ ಮಾಡಿ, ತೊಂದರೆ ಅನುಭವಿಸುವಿರಿ. ಕುಟುಂಬದಲ್ಲಿ ವಿರಸ ಆಗಲಿದೆ. ಅತ್ತೆ-ಸೊಸೆ ಮಧ್ಯೆ, ವೈಮನಸು ಸೃಷ್ಟಿಯಾಗಲಿದೆ. ಜಾನುವಾರು ವ್ಯಾಪಾರ ಮಾಡುವರಿಗೆ, ಒಳ್ಳೆಯ ಲಾಭವಿದೆ. ವಿವಾಹ ಪ್ರಯತ್ನ ಯಶಸ್ವಿಯಾಗಲಿದೆ. ಲೇವಾದೇವಿಯಲ್ಲಿ ನಷ್ಟ ಅನುಭವಿಸುವಿರಿ. ಮಾನಸಿಕ ಒತ್ತಡದಿಂದ, ಆರೋಗ್ಯದಲ್ಲಿ ತೊಂದರೆಯಾಗಲಿದೆ. ಯಾವುದೇ ಕೆಲಸ ಮಾಡಿದರು ಹರಸಾಹಸ ಮಾಡಿ ಗಳಿಸಬೇಕು.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ತುಲಾ ರಾಶಿ
ಇಂದು ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಲಿದೆ. ಹೆಂಡತಿಯ ಸಹಾಯ, ಅಣ್ಣ-ತಮ್ಮಂದಿರ ಸಹಾಯ, ಸ್ನೇಹಿತರ ಸಹಾಯ ದೊರೆಯಲಿವೆ. ದೈಹಿಕವಾಗಿ, ಮಾನಸಿಕವಾಗಿ ಸಮತೋಲನೆ ಕಾಪಾಡಿಕೊಳ್ಳಿ. ಕೃಷಿಯಲ್ಲಿ ನೀರಿನ ಸಮಸ್ಯೆ ಎದುರಿಸುವಿರಿ. ವ್ಯವಸಾಯದಿಂದ ಉತ್ತಮ ಆದಾಯ ಬರಲಿದೆ. ಮಹಿಳೆಯರಿಗೆ ಸಂಸ್ಥೆಯೊಂದರಲ್ಲಿ ಕೆಲಸ ಸಿಗಲಿದೆ. ಸರಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡಿದವರಿಗೆ ಸಿಹಿಸುದ್ದಿ ಸಿಗಲಿದೆ. ಟ್ರಾನ್ಸ್ಪೋರ್ಟ್ ವ್ಯವಹಾರದಿಂದ ದೂರವಿರಿ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವೃಶ್ಚಿಕ ರಾಶಿ
ಉದ್ಯೋಗದಲ್ಲಿ ಸ್ಥಾನಪಲ್ಲಟ ಆಗಲಿದೆ. ನಂಬಿಕೆಯಲ್ಲಿ ನಿರಾಸೆ ಉಂಟಾಗುವುದು. ಹರಸಾಹಸ ಮಾಡಿ ಯಶಸ್ಸು ಸಿಗಲಿದೆ. ಗೃಹ ನಿರ್ಮಾಣದ ವಿಚಾರ ಮನಸ್ಸಿಗೆ ಬರಲಿದೆ. ಮಹಿಳೆಯರಿಗೆ ಮದುವೆ ಯೋಗ ಬರಲಿದೆ. ತುಂಬಾ ದಿನದಿಂದ ಕಾಡುವ ಸಮಸ್ಯೆ ,ಇಂದು ಬಗೆಹರಿಯಲಿದೆ. ಉದ್ಯಮಿಗಳು ಹೊಸ ಹೊಸ ಉದ್ಯೋಗಕ್ಕೆ ಚಾಲನೆ ನೀಡುವರು. ಮಡದಿ ಮಕ್ಕಳಿಂದ ಮನಸ್ತಾಪ ಮತ್ತು ವಿರಸ ಕಾಡಲಿದೆ. ನಿಮ್ಮ ಭಾವನೆಗಳಿಗೆ ,ಯಾರು ಸ್ಪಂದನೆ ಮಾಡುವುದಿಲ್ಲ. ಏಕಾಂಗಿ ಆಗುವಿರಿ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಧನಸ್ಸು ರಾಶಿ
ನಿಮ್ಮ ವ್ಯವಹಾರದಲ್ಲಿ ಪ್ರಾಮಾಣಿಕತೆ ಎದ್ದುಕಾಣುವುದು. ಕುಟುಂಬ ಸಮೇತ, ಕೈಗಾರಿಕೆಯಲ್ಲಿ ಪಾಲ್ಗೊಂಡು ಯಶಸ್ವಿಸಿಗಲಿದೆ. ವ್ಯಾಪಾರಿಗಳು ಮತ್ತು ಕೈಗಾರಿಕಾ ಉದ್ಯಮಿಗಳಿಗೆ ಸಮಸ್ಯೆಗಳು ಕಾಡಲಿದೆ. ರೈತರು ಬೆಳೆ ಸಂರಕ್ಷಣೆ ಮುಂದಾಗುವರು. ಹಣಕಾಸಿನಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಅಣ್ಣ-ತಮ್ಮಂದಿರ ಕಡೆಯಿಂದ, ಬಂಧು ಬಳಗದಿಂದ, ಸ್ನೇಹಿತರ ಕಡೆಯಿಂದ ನಿಮಗೆ ಸಹಾಯ ಸಿಗಲಿದೆ. ಅಲಸ್ಯ ಕಾಡಲಿದೆ. ಜಾನುವಾರು ವ್ಯಾಪಾರ ಮಾಡುವವರಿಗೆ ಉತ್ತಮ ಲಾಭವಾಗಲಿದೆ. ಕುಟುಂಬ ಸದಸ್ಯರಲ್ಲಿ ಕಂಕಣಬಲ ಕೂಡಿ ಬರುವುದು.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮಕರ ರಾಶಿ
ಕೆಲವು ಸನ್ನಿವೇಶಗಳು ಮಾನಸಿಕವಾಗಿ ನೊಂದುವಿರಿ. ತಮ್ಮ ಉದ್ಯೋಗದಲ್ಲಿ ,ಯಾರು ಬೆಲೆ ನೀಡಲಾರರು. ಸಹೋದ್ಯೋಗಿಗಳು ಯಾರು ನಿಮಗೆ ಸಹಾಯ ಮಾಡಲಾರರು. ತಾಳ್ಮೆಯಿಂದ ಇರಿ ಧೃತಿಗೆಡಬೇಡಿ. ಅವಕಾಶಗಳು ತುಂಬಾ ಬರುವುದು , ಯಶಸ್ವಿಗೊಳಿಸಲು ಪ್ರಯತ್ನ ಮಾಡಿರಿ. ಕ್ಷುಲ್ಲಕ ಕಾರಣಕ್ಕೆ ಜಗಳ ಸೃಷ್ಟಿಯಾಗುವುದು. ತೀರ್ಥಯಾತ್ರ, ದೇವಸ್ಥಾನ ಪ್ರಯಾಣ ಬೆಳೆಸುವಿರಿ. ವೀಸಾ ಸಿಹಿಸುದ್ದಿ ಸಿಗಲಿದೆ. ವಿದೇಶ ಪ್ರಯಾಣ ಯಶಸ್ವಿಯಾಗಲಿದೆ. ವಾಹನ ಖರೀದಿ ಯೋಗ ಸಿಗಲಿದೆ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕುಂಭ ರಾಶಿ
ಬದುಕಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲ ವ್ಯಕ್ತಿ ಆಗುವಿರಿ. ಆರೋಗ್ಯಕರ ಸನ್ನಿವೇಶಗಳು ಅನುಭವಿಸುವಿರಿ. ಆಪ್ತ ಬಂಧು ಜೊತೆ ದೂರದ ಪ್ರಯಾಣ ಮಾಡಲಿದ್ದೀರಿ. ದಾರಿಯಲ್ಲಿ ಶುಭಶಕುನ ಕಾಣುವಿರಿ. ರಾಜಕೀಯ ಕ್ಷೇತ್ರದಲ್ಲಿ ಕ್ರಿಯಾಶೀಲ ವ್ಯಕ್ತಿಯಾಗಿ ಬೆಳೆಯುವಿರಿ. ರೈತರು ಉತ್ತಮ ಬೆಳೆ ತೆಗೆದುಕೊಳ್ಳುವಿರಿ. ಆದಾಯ ದುಪ್ಪಟ್ಟ ಆಗುವುದು. ಅಧಿಕಾರಿ ನಿಮ್ಮ ಜೊತೆ ಸಹಕರಿಸುವವರು. ಮನೆ ಕಟ್ಟುವ ವಿಚಾರ ,ಮನಸ್ಸಿಗೆ ಬರಲಿದೆ. ಯಾರ ಸಹಾಯವಿಲ್ಲದೆ ಮುನ್ನುಗ್ಗುವಿರಿ. ಸ್ವಯಂಚಾಲಿತ ಮನಸ್ಸಿನಿಂದ ,ಕಾರ್ಯಗಳನ್ನು ಮಾಡುವಿರಿ. ಅಡೆತಡೆ ಇಲ್ಲದೆ ಮುನ್ನುಗ್ಗುವಿರಿ. ಪತ್ನಿಯ ಮತ್ತು ಮಕ್ಕಳ ಸಹಕಾರ ಸಿಗಲಿದೆ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮೀನ ರಾಶಿ
ಆಸ್ತಿಪಾಸ್ತಿಗಳಲ್ಲಿ ಕಲಹ ಸೃಷ್ಟಿಯಾಗುವುದು. ಕ್ಷುಲ್ಲಕ ಕಾರಣಕ್ಕೆ ,ಸ್ನೇಹಿತರಿಂದ ಜಗಳ ಸೃಷ್ಟಿಯಾಗುವುದು. ಬಂಧು ಬಳಗದಿಂದ ಮನಸ್ತಾಪ ಆಗಲಿದೆ. ವ್ಯಾಜ್ಯಗಳ ಪರಿಹಾರ ಮುಂದೆ ಸಾಗುವುದು. ವಿವಾಹ ಕಾರ್ಯ ಮುಂದೆ ಸಾಗುವುದು. ಪತಿ-ಪತ್ನಿ ಮನಸ್ತಾಪ ಹೆಚ್ಚಿಗೆ ಆಗಲಿದೆ. ಪ್ರೇಯಸಿ ಪ್ರಿಯತಮ, ಕಡೆಯಿಂದ ಮನಸ್ತಾಪ ಸೃಷ್ಟಿಯಾಗಲಿದೆ. ಆರ್ಥಿಕ ಮುಗ್ಗಟ್ಟು ಅನುಭವಿಸುವಿರಿ. ಯಾರು ಸಹಾಯ ಮಾಡಲಾರರು. ತಾವು ಏಕಾಂಗಿ ಆಗುವಿರಿ. ಎದೆಗುಂದದೆ ಮುಂದೆ ಸಾಗಿರಿ. ದೂರದ ಪ್ರಯಾಣ ಬೇಡ. ವಾಹನ ಖರೀದಿ ಬೇಡ.
ಜ್ಯೋತಿಷ್ಯರು ಲಕ್ಷ್ಮಿ ಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 9964584883

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ
ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.
ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.
ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.
ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ3 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ4 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ5 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


