ನಿತ್ಯ ಭವಿಷ್ಯ
ಉತ್ತಮ ಜ್ಯೋತಿಷ್ಯ ವಾಣಿ ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 11/08/2019 ಭಾನುವಾರ
ಈ ದಿನ ವಿಶೇಷವಾಗಿದೆ. 4 ರಾಶಿಯವರಿಗೆ ಬೃಹತ್ ಲಾಭ ದೊರೆಯುತ್ತದೆ. ತಿಳಿದು ಕೊಳ್ಳಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು. 9900494333.
ಮೇಷ ರಾಶಿ
ಉದ್ಯೋಗದಲ್ಲಿ ನೀವು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಮನೆಯಲ್ಲಿ ಕೆಲವು ಸುಧಾರಣೆಗಳು ಜಾರಿಗೆ ಬರುವ ಸಕಾಲವಾಗಿದೆ. ಆರೋಗ್ಯದಲ್ಲಿ ಮಾನಸಿಕವಾಗಿ ಚೈತನ್ಯ ಇರೋ ತರಹ ಕಂಡುಬರುತ್ತದೆ. ನೀವು ಶ್ರದ್ಧೆಯಿಂದ ಭಕ್ತಿಯಿಂದ ದೈವಿಕ ಶಕ್ತಿಯನ್ನು ಒಲಿಸಿಕೊಳ್ಳಬಹುದು. ಇಷ್ಟವಾದ ಸ್ಥಳಕ್ಕೆ ಪ್ರಯಾಣ ನಡೆಯುವುದು. ವಿದ್ಯಾಭ್ಯಾಸದಲ್ಲಿ ಮಕ್ಕಳನ್ನು ಪೋಷಕರು ಸಹಾಯಕಾರಿಯಾಗಿ ನಡೆಯುವುದು ಉತ್ತಮ. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಷಭ ರಾಶಿ
ಕುಟುಂಬದ ಹಿರಿಯರು ಕೆಲಸದಲ್ಲಿ ನೀವು ಮಾಡಿರುವಂತಹ ತಪ್ಪುಗಳನ್ನು ಮನವರಿಕೆ ಮಾಡಿಕೊಡುತ್ತಾರೆ. ದಾಂಪತ್ಯದಲ್ಲಿ ಹಿತಕರವಾದ ಸನ್ನೀವೇಶ ಇರುತ್ತದೆ. ಹಣಕಾಸಿನಲ್ಲಿ ಮುಗಟ್ಟು ಕಾಾಣಿಸಿಕೊಳ್ಳುತ್ತದೆ. ಸ್ನೇಹಿತರಲ್ಲಿ ಕೊಟ್ಟಿರುವಂತಹ ಹಣಕಾಸು ವಾಪಸ್ಸು ಬರುವಂತಹ ಸೂಚನೆಗಳು ಕಂಡುಬರುತ್ತದೆ. ನೆಗಡಿ ಶೀತದಿಂದ ಆರೋಗ್ಯ ಕ್ಷೀಣಿಸುತ್ತದೆ. ವಿವಾಹ ಶೀಘ್ರದಲ್ಲಿ ನಡೆಯುವುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ( ಪರಿಹಾರ ಮಾಡಲು ಕರೆಮಾಡಿ) 9900494333.
ಮಿಥುನ ರಾಶಿ
ನೀವು ಆರಾಮದಾಯಕವಾಗಿ ಪ್ರಯಾಣ ಮಾಡುತ್ತೀರಿ. ಭೂಮಿ ಕೊಳ್ಳಲು ನೀವು ಮುುಂದಾಗಬಹುದು. ಸ್ತ್ರೀಯರಲ್ಲಿ ಹೆಚ್ಚಾಗಿ ಆಕರ್ಷಣೆ ಹೊಂದುವಿರಿ. ವಾಯುಭಾದೆ ನಿಮಗೆ ಅನಾರೋಗ್ಯ ಉಂಟು ಮಾಡುತ್ತದೆ. ಗೆಳತಿಯೊಂದಿಗೆ ಉಪಹಾರ ಸೇವಿಸಲು ಆಚೆಗೆ ಹೋಗಬಹುದು. ಹಣಕಾಸಿನಲ್ಲಿ ಹೆಚ್ಚು ಖರ್ಚು ಉಂಟಾಗುತ್ತದೆ. ಉದ್ಯೋಗಕ್ಕಾಗಿ ಯೋಚನೆ ಮಾಡಬೇಕು. ಮದುವೆ ವಿಷಯದಲ್ಲಿ ಹುಡುಕಾಟ ಇರುತ್ತದೆ. ಜನವಶ, ವಶೀಕರಣ,ಮಾಟಮಂತ್ರ ತಡೆ, ಶತ್ರುನಾಶ, ( ಪರಿಹಾರ ಮಾಡಲು ಕರೆಮಾಡಿ) 9900494333.
ಕರ್ಕಾಟಕ ರಾಶಿ
ನೀವು ಇಷ್ಟ ಪಟ್ಟ ಸ್ತ್ರೀ ಬಗ್ಗೆ ಯೋಚನೆ ಮಾಡಿ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತದೆ. ಆಸ್ತೀ ಖರೀದಿಸುವ ಬಗ್ಗೆ ಹಿರಿಯರೊಂದಿಗೆ ಮಾರ್ಗದರ್ಶನ ಪಡೆಯುವುದು. ಚಳಿಯಿಂದ ನೀವು ತೊಂದರೆ ಅನುಭವಿಸುತ್ತೀರಿ. ಉದ್ಯೋಗದಲ್ಲಿ ಮುಖ್ಯ ವ್ಯಕ್ತಿಯನ್ನು ನೀವು ಅನುಸರಿಸಬೇಕು. ಇದರಿಂದ ಪ್ರಗತಿ ಸಾಧಿಸಬಹುದು. ಕಾಲ್ಪನಿಕ ವಿಚಾರ ನಿಮಗೆ ಖುಷಿ ತಂದು ಕೊಡುತ್ತದೆ. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ( ಪರಿಹಾರ ಮಾಡಲು ಕರೆಮಾಡಿ) 9900494333.
ಸಿಂಹ ರಾಶಿ
ಇಂದು ನೀವು ಮನೆಯಲ್ಲಿ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಬಳಸಬೇಕಾಗುತ್ತದೆ. ನಿಮ್ಮ ಮಡದಿಯ ಜೊತೆ ಪ್ರವಾಸಕ್ಕೆ ತೆರಳಲು ಒಳ್ಳೆಯ ದಿನವಾಗಿದೆ. ಉದ್ಯೋಗದಲ್ಲಿ ಕೆಲವು ಪ್ರಮುಖ ಕೆಲಸಕಾರ್ಯಗಳನ್ನು ನಿಭಾಯಿಸಿ ಬರುವುದು ಒಳ್ಳೆಯದು. ಆರೋಗ್ಯ ಅಷ್ಟು ಉತ್ತಮವಾಗಿ ಕಾಣಿಸುವುದಿಲ್ಲ. ಹಣಕಾಸು ವಿಷಯಕ್ಕೆ ಗಮನ ನೀಡಿ ಲಾಭ ಬರಬಹುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.
ಕನ್ಯಾ ರಾಶಿ
ಉದ್ಯೋಗದಲ್ಲಿ ನೀವು ಇತರರ ನೆರವನ್ನು ಪಡೆಯದೆ ಕೆಲಸಗಳನ್ನು ನಿಭಾಯಿಸುವಿರಿ. ನಿಮ್ಮ ಪ್ರೀತಿ-ಪ್ರೇಮದಲ್ಲಿ ನಿರಾಸೆಯನ್ನು ಹೊಂದಬಹುದು. ಇಷ್ಟಪಟ್ಟಿದ್ದ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಬಹುದು. ಮನೆಯಲ್ಲಿ ಸಮಾರಂಭಗಳನ್ನು ಕೈಗೊಳ್ಳಲು ಹೆಚ್ಚು ಹಣಕಾಸಿನ ಅವಶ್ಯಕತೆಯನ್ನು ಹೊಂದಿರಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವ್ಯಾಪಾರ ವ್ಯವಹಾರಗಳು ಉತ್ತಮವಾಗಿ ಸಾಗುವುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.
ತುಲಾ ರಾಶಿ
ಪ್ರಮುಖ ಉದ್ಯೋಗದಲ್ಲಿ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಕೆಲವು ತಿಳುವಳಿಕೆಗಳನ್ನು ಅರಿತುಕೊಳ್ಳಬೇಕು. ನೀವು ಮಾನಸಿಕವಾಗಿ ಧೃತಿಗೆಡಬೇಡಿ. ಈಗಿನ ಯಾವುದೇ ಸಮಯವನ್ನು ವ್ಯರ್ಥ ಮಾಡದೆ ಕುಟುಂಬದ ಜೊತೆ ಕಾಲ ಕಳೆಯಲು ಮುಖ್ಯವಾಗಿದೆ. ಇದರಿಂದ ವಿವಾಹ ಕಾರ್ಯಕ್ರಮಗಳ ಬಗ್ಗೆ ಚಿಂತನೆ ನಡೆಸುವುದು ಮುಖ್ಯವಾಗಿರುತ್ತದೆ. ನಿಮ್ಮ ಹಣಕಾಸು ಶೇಖರಣೆ ಈ ದಿನ ಸಹಾಯವಾಗುತ್ತದೆ. ಬೇಜಾಬ್ದಾರಿಯಿಂದ ಮಳೆಯಲ್ಲಿ ಆಚೆಕಡೆ ಹೋಗಬಾರದು ಅನಾರೋಗ್ಯ ಉಂಟಾಗುತ್ತದೆ. ನಿಮ್ಮ ಮಡದಿಗೆ ಮಧುರವಾದ ಮಾತುಗಳನ್ನು ಹೇಳುವುದರಿಂದ ಸರಸ ಸಲ್ಲಾಪಕ್ಕೆ ಅನುಕೂಲವಾಗುವುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಶ್ಚಿಕ ರಾಶಿ
ನಿಮ್ಮ ಸ್ವಂತ ವಿವೇಚನೆಯಿಂದ ಉದ್ಯೋಗದಲ್ಲಿ ದುಬಾರಿ ಸಾಹಸಕ್ಕೆ ಕೈಹಾಕುವುದು ಮುಖ್ಯವಾಗಿರುತ್ತದೆ. ಹಣಕಾಸನ್ನು ಕೇಳಲು ಸಂಬಂಧಿಗಳು ನಿಮ್ಮನ್ನು ಸಂಪರ್ಕಿಸಬಹುದು. ದಾಂಪತ್ಯ ಜೀವನದಲ್ಲಿ ಸಣ್ಣ ವಿಷಯಗಳಿಗೆ ಈದಿನ ಜಗಳವಾಡುವುದು. ಕುಟುಂಬದಲ್ಲಿ ಕಷ್ಟಕರವೆಂದು ತೋರುವ ಸಮಸ್ಯೆಗಳು ಪರಿಹರಿಸಲು ಯೋಚನೆ ಮಾಡಬೇಕು. ಆರೋಗ್ಯ ಕ್ಷೀಣಿಸಬಹುದು ಮಾನಸಿಕ ಶಕ್ತಿ ಹೊಂದಿರಬೇಕು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.
ಧನಸ್ಸು ರಾಶಿ
ಕುಟುಂಬದವರು ನಿಮ್ಮ ದಯೆ ಮತ್ತು ಕರುಣೆಯನ್ನು ದುರುಪಯೋಗ ಮಾಡಿಕೊಳ್ಳುವವರು. ಕೆಲವು ಅನಿರೀಕ್ಷಿತ ಪ್ರಯಾಣ ನಿಮಗೆ ಒದಗಿಬರುತ್ತದೆ. ದಾಂಪತ್ಯದಲ್ಲಿ ಒಳ್ಳೆಯ ಅನುಬಂಧ ಕಂಡುಬರುತ್ತದೆ. ಆರೋಗ್ಯಕ್ಕಾಗಿ ಉತ್ತಮ ಸಲಹೆ ಪಡೆಯಲು ವೈದ್ಯರನ್ನು ಸಂಪರ್ಕಿಸಿ. ಹಣಕಾಸನ್ನು ಒದಗಿಸಲು ಹರಸಾಹಸ ನಡೆಸಬೇಕು. ಸ್ನೇಹಿತರ ಸಮಸ್ಯೆಗಳು ನಿಮಗೆ ತೊಂದರೆ ಉಂಟು ಮಾಡುತ್ತದೆ. ಉದ್ಯೋಗದಲ್ಲಿ ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಬೇಕು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.
ಮಕರ ರಾಶಿ
ನಿಮ್ಮ ಕೆಲಸದಲ್ಲಿ ನಿಮಗೆ ಕೆಟ್ಟದ್ದು ಎನಿಸುವ ಕಾರ್ಯಗಳನ್ನು ಮಾಡದೆ ಇರುವುದು ಒಳ್ಳೆಯದು. ನಿಮ್ಮ ಕಾಲ್ಪನಿಕ ಚಿಂತನೆಗಳನ್ನು ಬಿಟ್ಟು ಮಡದಿಯೊಂದಿಗೆ ಪ್ರೀತಿ ಪಾತ್ರದಿಂದ ಜೊತೆಗೆ ಇರಬೇಕು. ಕೆಲವು ವಿಷಯಗಳು ಹೃದಯಾಘಾತ ತಂದು ಆರೋಗ್ಯ ಕೆಡುತ್ತದೆ. ಹಣಕಾಸಿನ ಒತ್ತಡ ಹೆಚ್ಚಾಗಿ ಇರುತ್ತದೆ. ನಿಮ್ಮ ಕುಟುಂಬದಲ್ಲಿ ಸಹಾಯವನ್ನು ಪಡೆಯಬೇಕು. ಈ ದಿನ ನಿಮ್ಮ ಕೆಲಸಗಳು ನಿಧಾನಗತಿಯಲ್ಲಿ ಸಾಗುವುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.
ಕುಂಭ ರಾಶಿ
ವಿದ್ಯಾಭ್ಯಾಸದಲ್ಲಿ ಚುರುಕಾದ ಬೆಳವಣಿಗೆ ನಡೆಯುವುದು. ಕುಟುಂಬದಲ್ಲಿ ಮದುವೆ ಕಾರ್ಯಗಳು ಮುಂದೂಡಲ್ಪಡುತ್ತದೆ. ಆರೋಗ್ಯ ಗಮನದಲ್ಲಿಟ್ಟುಕೊಂಡು ಪ್ರಯಾಣ ನಡೆಸಬೇಕು. ನಿಮಗೆ ಬರುವಂತಹ ಹಣಕಾಸು ಈ ದಿನ ತಡವಾಗಿ ಬಂದು ಸೇರುತ್ತದೆ. ಉದ್ಯೋಗದಲ್ಲಿ ವಿಶ್ರಾಂತಿ ಪಡೆದು ವೈವಾಹಿಕ ಜೀವನದಲ್ಲಿ ಸಂಗಾತಿ ಯೊಂದಿಗೆ ಕಾಲ ಕಳೆಯುವುದು ಉತ್ತಮ. ಆರೋಗ್ಯಕರವಾಗಿರಲು ಈ ದಿನ ಶಿವನಿಗೆ ಅಭಿಷೇಕ ಮಾಡುವುದು ಅಷ್ಟೇ ಮುಖ್ಯ. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.
ಮೀನಾ ರಾಶಿ
ನಿಮ್ಮ ವ್ಯಯಕ್ತೀಕ ಭಾವನೆಗಳು ಮತ್ತು ಅನುಭವಗಳು ಮಡದಿಯೊಂದಿಗೆ ಹಂಂಚಿಕೊಳ್ಳಬಾರದು. ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುವುದು ಉತ್ತಮ. ಉದ್ಯೋಗಕ್ಕಾಗಿ ಬೇರೆಯವರ ಮಾತು ಕೇಳಿ ಹೋಗಬಾರದು. ವ್ಯವಹಾರ ವ್ಯಾಪಾರ ಅವಕಾಶಗಳು ಬರುತ್ತವೆ. ಅವಸರದಲ್ಲಿ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಾಗುವುದಿಲ್ಲ. ಆರೋಗ್ಯಕರವಾಗಿರಲು ಧ್ಯಾನ ಮತ್ತು ವ್ಯಾಯಾಮ ಅನುಕೂಲವಾಗಬಹುದು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ
ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.
ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.
ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.
ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ2 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ4 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


