ನಿತ್ಯ ಭವಿಷ್ಯ
ರಾಶಿ ಮಂಡಲದಲ್ಲಿ ಶುಕ್ರಗ್ರಹ ಮತ್ತು ಜ್ಯೋತಿಷ್ಯ ಮಾರ್ಗದರ್ಶನ ಪರಿಹಾರ : 26/07/2019 ಶುಕ್ರವಾರ
ಶುಕ್ರಗ್ರಹದ ಪ್ರಭಾವ ಹಣಕಾಸು ಯೋಗ ಶೀಘ್ರ ವಿವಾಹ ದೋಷಗಳು ಮತ್ತು ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಕಂಡುಕೊಳ್ಳಬಹುದು. ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.
ಹಿಮಕುಂಡ ಮೃಣಾಲಾಭಂ ದೈತಾ ನಾಂ ಪರಮ ಗುರುಂ |
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ||
ಬೀಜಾಕ್ಷರ ಮಂತ್ರ– ಓಂ ದ್ರಾಂ ದ್ರೀಂ ದ್ರೌಂ ಸಃ ಶ್ರೀ ಶುಕ್ರಾಯ ನಮಃ
ಶುಕ್ರಗ್ರಹ– ವೈವಾಹಿಕ ಜೀವನ ಉತ್ತಮವಾಗಿರಲು ಶೀಘ್ರ ವಿವಾಹ ಪತ್ನಿಯ ವಿಶ್ವಾಸ ಪಡೆಯಲು ಧನ ಕನಕ ಪಡೆಯಲು ಮತ್ತು ಶುಕ್ರನ ಕ್ರೂರ ಫಲಗಳಿಗೆ ಪರಿಹಾರವಾಗಿ ಶುಕ್ಲಪಕ್ಷದ ಮೊದಲ ಶುಕ್ರವಾರದಿಂದ 21ರಿಂದ 31 ವಾರಗಳು ಆ ದಿನ ಸ್ನಾನದ ನಂತರ ಬಿಳಿ ವಸ್ತ್ರ ಮತ್ತು ಬಿಳಿಯ ಚಂದನವನ್ನು ಧರಿಸಿಕೊಂಡು ಕುಳಿತಿರುವ ಪಂಚಲೋಹ ಅಥವಾ ಯಾವುದಾದರೂ ಲೋಹ ಅಥವಾ ಕಲ್ಲಿನ ಶ್ರೀ ಲಕ್ಷ್ಮಿ ವಿಗ್ರಹಕ್ಕೆ ಶುದ್ಧ ಜಲ ಮತ್ತು ಹಾಲಿನ ಅಭಿಷೇಕ ಮಾಡಿ 16 ಬಿಳಿಯ ಹೂವು ಸಮರ್ಪಿಸಿ ದೀಪ ಆರತಿ ಯಿಂದ ಪೂಜಿಸಿ ಶ್ರೀಲಕ್ಷ್ಮಿ ಅಷ್ಟೋತ್ತರ ಪಠಿಸಿ ಅನಂತರ ಮೇಲಿನ ಸ್ತೋತ್ರವನ್ನು 108 ಸಲ ಪಠಿಸಿ ನಂತರ ಅಭಿಷೇಕದ ಹಾಲನ್ನು ಸ್ವೀಕರಿಸಿ ನವಗ್ರಹ ಗಳಿಗೆ 6 ಪ್ರದರ್ಶನ ಮಾಡಿ ಅವರೆಕಾಳು ದಕ್ಷಿಣೆ ಸಹಿತ ದಾನ ಮಾಡಿ
ಮೇಷ ರಾಶಿ
ಕುಟುಂಬದಲ್ಲಿ ಸಂತೋಷ ಕೂಟಗಳು ನಡೆಯುತ್ತವೆ ಉದ್ಯೋಗಸ್ಥ ರಲ್ಲಿ ಜಯ ಕಾಣುವುದು. ನಿಮ್ಮ ಬಯಕೆಗಳು ಈಡೇರುವ ಸಮಯ ಕೀರ್ತಿ ಗೌರವ ಲಭಿಸುವುದು. ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಮೂಡುತ್ತದೆ. ವೈವಾಹಿಕ ಜೀವನ ಸಂತಸದಿಂದ ಇರಲು ಸಾಧ್ಯವಾಗುತ್ತದೆ. ನಿಮಗೆ ಯಾವಾಗಲೂ ಕಾಡುವ ಶತ್ರುಗಳು ದೂರವಾಗುತ್ತಾರೆ. (ಪರಿಹಾರಕ್ಕೆ ಕರೆಮಾಡಿ)9900494333.
ವೃಷಭ ರಾಶಿ
ಅನಾರೋಗ್ಯದ ಸಲುವಾಗಿ ನಿಮ್ಮ ವೈದ್ಯರ ಸಲಹೆ ಪಡೆಯುವುದು ಸೂಕ್ತವಾಗುತ್ತದೆ. ಸ್ನೇಹಿತರು ನಿಮ್ಮನ್ನು ವಂಚಿಸುತ್ತಾರೆ. ಪ್ರೇಮಿಗಳಿಗೆ ಆಪತ್ಕಾಲ ಉಂಟಾಗುತ್ತದೆ. ಅನ್ಯ ಜನರಿಂದ ಕಿರಿಕಿರಿ ವಾದವಿವಾದಗಳು ಕಂಡುಬರುತ್ತದೆ. ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ವ್ಯಾಪಾರಿಗಳಿಗೆ ಲಾಭದಾಯಕ ಇರುತ್ತದೆ. ಕುಟುಂಬದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಉತ್ತಮ ಎನಿಸುತ್ತದೆ. ವಿವಾಹದಲ್ಲಿ ಲಾಭವಿದೆ. ಶುಕ್ರಗ್ರಹದ ಪ್ರಭಾವ ದೋಷಗಳು ಪರಿಹಾರಕ್ಕೆ ಮೇಲಿನ ಭಾಗದಲ್ಲಿ ತಿಳಿಸಿದಂತೆ ನಡೆದುಕೊಳ್ಳಿ. (ಪರಿಹಾರಕ್ಕೆ ಕರೆಮಾಡಿ) 9900494333.
ಮಿಥುನ ರಾಶಿ
ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ದೊರಕುತ್ತದೆ. ಪಿತ್ರಾರ್ಜಿತ ಆಸ್ತಿ ನಿಮ್ಮ ಕೈತಪ್ಪಿಹೋಗದಂತೆ ನೋಡಿಕೊಳ್ಳಿ. ಪ್ರೇಮಿಗಳು ಕಷ್ಟ ಅನುಭವಿಸಬೇಕಾಗುತ್ತದೆ. ರಕ್ತಸಂಬಂಧದ ಕಾಯಿಲೆ ಉಂಟಾಗಬಹುದು. ವೈದ್ಯರಲ್ಲಿ ಪರೀಕ್ಷೆ ಮಾಡಿಕೊಳ್ಳಿ. ಹಣಕಾಸಿನಲ್ಲಿ ಇರುವ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಕುಟುಂಬದವರು ಹೆಚ್ಚಾಗಿ ನಿಮ್ಮನ್ನು ತಿರಸ್ಕಾರ ಮಾಡುತ್ತಾರೆ. ಜನರಲ್ಲಿ ಅಪನಂಬಿಕೆ ಹುಟ್ಟುತ್ತದೆ. ಉದ್ಯಮದಲ್ಲಿ ಲಾಭವಿದೆ.
ಕರ್ಕಾಟಕ ರಾಶಿ
ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಸಾಧಿಸುವವರು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಷ್ಟ ಆಗುತ್ತದೆ. ಕುಟುಂಬದ ಸಮಸ್ಯೆಗಳಿಗೆ ಮನಸ್ಸು ಕೆಡಿಸಿಕೊಳ್ಳಬೇಡಿ. ಉದ್ಯೋಗದಲ್ಲಿ ನಿಮಗೆ ಉತ್ತಮ ಅವಕಾಶಗಳು ಬಂದರೂ ಯಶಸ್ಸು ಕಡಿಮೆ ಇರುತ್ತದೆ. ಮದುವೆ ವಿಷಯದಲ್ಲಿ ಅಪವಾದದ ಸುಳಿಯಲ್ಲಿ ಸಿಲುಕುವರು. ಆರೋಗ್ಯದ ಕಿರಿಕಿರಿ ಕೌಟುಂಬಿಕ ಕಲಹ ಮಾನಸಿಕತೆ ಕಾಡುತ್ತದೆ.
ಸಿಂಹ ರಾಶಿ
ವಿದ್ಯಾರ್ಥಿಗಳು ಪ್ರೇಮ ಪ್ರಕರಣದ ಕನಸಿನಲ್ಲಿ ತಮ್ಮ ಗುರಿ ಮರೆಯುವರು. ಉದ್ಯೋಗದಲ್ಲಿ ತಾಳ್ಮೆಯಿಂದ ಪ್ರಯತ್ನಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಚಂಚಲ ಮನಸ್ಸನ್ನು ಬಿಡಬೇಕು. ಹಿರಿಯರು ನಿಮ್ಮ ಸಹಾಯಕ್ಕೆ ಬರಲಾರರು. ಅನಾರೋಗ್ಯಕ್ಕೆ ಸಂಬಂಧಪಟ್ಟ ಚಿಕಿತ್ಸೆಯನ್ನು ಸರಿಯಾದ ಕ್ರಮದಲ್ಲಿ ಮಾಡಿಕೊಳ್ಳಿ. ಕನ್ಯಾರಾಶಿ:- ಉದ್ಯೋಗಸ್ಥರು ಯಶಸ್ಸು ಗಳಿಸಬೇಕಾದರೆ ಸರಿಯಾದ ವಿವೇಚನೆಯಿಂದ ಪ್ರಯತ್ನಿಸುವ ಅವಶ್ಯಕತೆ ಇದೆ. ನೀವು ಋಣಬಾಧೆಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ವಿವಾಹದಲ್ಲಿ ಯಶಸ್ಸು ಕಂಡು ಬರುವುದಿಲ್ಲ. ಆರೋಗ್ಯ ಸಮಸ್ಯೆಯನ್ನು ಹೆಂಡತಿ ಮತ್ತು ಮಕ್ಕಳಲ್ಲಿ ಕಾಣಬಹುದು. ಗುಪ್ತ ಶತ್ರುಗಳು ನಿಮ್ಮ ಸೋಲಿಗೆ ಕಾಯುತ್ತಾ ಇರುತ್ತಾರೆ. ಹಣಕಾಸು ವಿಷಯದಲ್ಲಿ ಸಾಲವಾಗಿ ಬೇರೆಯವರಿಗೆ ನೀಡಬೇಡಿ.
ತುಲಾ ರಾಶಿ
ಉದ್ಯೋಗಸ್ಥ ರಲ್ಲಿ ಹಲವು ವಿಘ್ನಗಳು ಕಂಡುಬಂದರು ಯಶಸ್ಸನ್ನು ಸಾಧಿಸಬಲ್ಲರು. ವಿವಾಹದ ವಿಚಾರದಲ್ಲಿ ಸಂತೋಷ ಕಂಡುಬರುತ್ತದೆ. ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಕುಟುಂಬದಲ್ಲಿ ಸಹಕಾರ ದೊರೆಯುತ್ತದೆ. ಅನಿರೀಕ್ಷಿತ ಪ್ರಯಾಣದಿಂದ ಹಣಕಾಸು ವ್ಯಯವಾಗುತ್ತದೆ. ಪ್ರೇಮಿಗಳಿಗೆ ಎರಡು ಕುಟುಂಬದಿಂದ ವಿರೋಧ ವ್ಯಕ್ತವಾಗುತ್ತದೆ. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳುವುದು. ಮನೆ ಕಟ್ಟುವ ಯೋಗ ಕಂಡುಬರುತ್ತದೆ ಶುಕ್ರಗ್ರಹ ಫಲ ಪರಿಹಾರಕ್ಕೆ ಮೇಲಿನ ಭಾಗದಲ್ಲಿ ತಿಳಿಸಿದಂತೆ ನಡೆದುಕೊಳ್ಳಿ.
ವೃಶ್ಚಿಕ ರಾಶಿ
ಕ್ರಯವಿಕ್ರಯಗಳಲ್ಲಿ ಬಂಡವಾಳ ನಷ್ಟವಾಗಬಹುದು. ದುರ್ಜನರ ಸಹವಾಸದಿಂದ ಅಪಮಾನ ಉಂಟಾಗುತ್ತದೆ. ಕುಟುಂಬದಲ್ಲಿ ಅತಿಥಿಗಳ ಸೇವೆಯನ್ನು ಮಾಡುತ್ತೀರಿ. ಉನ್ನತ ಸ್ಥಾನದಲ್ಲಿರುವವರಿಗೆ ಕೆಲವು ಅಡೆತಡೆಗಳು ಬರಬಹುದು. ಧಾರ್ಮಿಕ ಪ್ರಜ್ಞೆ ಕಡಿಮೆಯಾಗುವುದು. ಮರೆಯುವ ರೋಗ ನಿಮ್ಮನ್ನು ಕಾಡುತ್ತದೆ. ಸ್ವಂತ ದುಡಿಮೆಯಲ್ಲಿ ಮುನ್ನುಗ್ಗಿ ಜಯ ಕಾಣಬಹುದು. ಭೂ ವ್ಯವಹಾರದಲ್ಲಿ ಲಾಭ ಕಾಣುತ್ತದೆ. ದಾಂಪತ್ಯ ಜೀವನ ಸುಖಕರ ವಾಗಿರುವುದು.
ಧನಸ್ಸು ರಾಶಿ
ನಿಮ್ಮಲ್ಲಿ ಉದ್ಯೋಗಕ್ಕಾಗಿ ಆತ್ಮವಿಶ್ವಾಸ ಹೆಚ್ಚಿನ ರೀತಿಯಲ್ಲಿ ಇರುತ್ತದೆ. ಧಾರ್ಮಿಕ ಕಾರ್ಯಗಳು ನಿಂತುಹೋಗುತ್ತವೆ. ಸ್ತ್ರೀ ಮೂಲಕ ಹಣಕಾಸು ವ್ಯಯವಾಗುವುದು. ತಂದೆ-ತಾಯಿ ಆರೋಗ್ಯ ವಿಷಮಿಸಬಹುದು. ಹೊಸ ವಾಹನ ಖರೀದಿಸುವ ಯೋಗವಿರುತ್ತದೆ. ವಿದ್ಯಾರ್ಥಿಗಳು ಯಶಸ್ಸನ್ನು ಕಾಣಬಹುದು.
ಮಕರ ರಾಶಿ
ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಮನಸ್ತಾಪ ಕಿರಿಕಿರಿಯಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕುಟುಂಬದವರಿಂದ ವಿರೋಧ ಎದುರಿಸಬೇಕಾಗುತ್ತದೆ. ರಾಜಕೀಯದಲ್ಲಿ ಯಶಸ್ಸು ಕಾಣಬಹುದು. ಕೋರ್ಟ್ ಕೆಲಸಗಳಲ್ಲಿ ಪ್ರಚಂಡ ಜಯ ದೊರೆಯುತ್ತದೆ. ದೈವಾನುಗ್ರಹದಿಂದ ಎಲ್ಲಾ ಕಷ್ಟಗಳು ಪರಿಹಾರವಾಗಿ ಸಂತೋಷ ತುಂಬಿರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಕುಂಭ ರಾಶಿ
ಸತಿ-ಪತಿಯರ ನಡುವೆ ಸಮಸ್ಯೆ ಕಂಡುಬರುವ ಕಂಡುಬರುವ ಸಾಧ್ಯತೆಗಳು ಇವೆ. ವ್ಯಾಪಾರ ಉದ್ಯೋಗದಲ್ಲಿ ಪ್ರಗತಿ ಧನಲಾಭ ಹೊಂದಬಹುದು. ದೂರದ ಬಂಧುಗಳು ನಿಮ್ಮ ಏಳಿಗೆಯನ್ನು ಸಹಿಸುವುದಿಲ್ಲ. ವಿದೇಶ ಪ್ರಯಾಣ ಯೋಗ ಕಂಡುಬರುತ್ತದೆ. ವಿವಾಹದಲ್ಲಿ ಶುಭ ವಿಚಾರಗಳು ಕಾಣುತ್ತದೆ. ಶತ್ರುಗಳಿಂದ ದೂರ ಇರುವುದು ಒಳ್ಳೆಯದು. ವೃತ್ತಿಧರ್ಮ ಮರೆತು ಹಣದ ವ್ಯಾಮೋಹಕ್ಕೆ ತುತ್ತಾಗಬಹುದು. ಆರೋಗ್ಯದಲ್ಲಿ ತಲೆನೋವು ನಿಮ್ಮನ್ನು ಕಾಡುತ್ತದೆ.
ಮೀನಾ ರಾಶಿ
ಸಾಲವನ್ನು ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಮಾಡಬೇಡಿರಿ. ಸಹೋದರರ ಸಹವಾಸದಿಂದ ಹಲವಾರು ವಿಚಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಮಾನಸಿಕ ತೃಪ್ತಿ ಹೊಂದಬಹುದು. ಕೆಲವು ವಿಷಯಗಳಲ್ಲಿ ಅಶುಭ ವಾರ್ತೆಯನ್ನು ಕೇಳುತ್ತೀರಿ. ಯಾರನ್ನು ನಂಬದೇ ಇರುವುದು ಉತ್ತಮ ಎನಿಸುತ್ತದೆ. ಯೋಗ ಮತ್ತು ವ್ಯಾಯಾಮ ದಿಂದ ಆರೋಗ್ಯ ಹೆಚ್ಚಿಸಬಹುದು. ಮದುವೆ ಕಾರ್ಯಗಳಿಗೆ ಸಕಾಲ ಭಾಗ್ಯ ಒದಗಿ ಬರುತ್ತದೆ. ( ಪರಿಹಾರಕ್ಕೆ ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!
ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ.
http://Visit : www.suddidina.com
ಮೇಷ: ಹಣಕಾಸಿನ ವಿಚಾರದಲ್ಲಿ ಶುಭ ದಿನ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.
ವೃಷಭ: ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿ ಬರಲಿವೆ. ಮಾತಿನ ಮೇಲೆ ನಿಯಂತ್ರಣ ಇರಲಿ. ಪ್ರಯಾಣದ ಯೋಗವಿದೆ.
ಮಿಥುನ: ಉದ್ಯೋಗದಲ್ಲಿ ಪ್ರಗತಿಯ ಸೂಚನೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಉಲ್ಲಾಸ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.
ಕರ್ಕಾಟಕ: ವ್ಯಾಪಾರದಲ್ಲಿ ಲಾಭದ ನಿರೀಕ್ಷೆ. ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಹಳೆಯ ಸಾಲ ವಸೂಲಿಯಾಗಲಿದೆ.
ಸಿಂಹ: ಆತ್ಮವಿಶ್ವಾಸ ಹೆಚ್ಚಾಗುವ ದಿನ. ಸರ್ಕಾರಿ ಕೆಲಸಗಳು ಸುಗಮವಾಗಿ ನಡೆಯಲಿವೆ. ಮಕ್ಕಳಿಂದ ಶುಭ ಸುದ್ದಿ ಸಿಗಲಿದೆ.
ಕನ್ಯಾ: ಕೆಲಸದ ಒತ್ತಡ ಹೆಚ್ಚಿರಬಹುದು, ತಾಳ್ಮೆಯಿಂದ ಇರಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಸಂಜೆ ವೇಳೆಗೆ ಶುಭ ಸುದ್ದಿ.
ತುಲಾ: ಹೊಸ ಅವಕಾಶಗಳು ಬಾಗಿಲು ತಟ್ಟಲಿವೆ. ನಿಮ್ಮ ಪ್ರತಿಭೆಗೆ ಮನ್ನಣೆ ಸಿಗಲಿದೆ. ಪ್ರೇಮ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ.
ವೃಶ್ಚಿಕ: ಆಸ್ತಿ ವಿಚಾರದಲ್ಲಿ ಜಯ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ.
ಧನು: ಧೈರ್ಯದಿಂದ ಕೈಗೊಂಡ ನಿರ್ಧಾರ ಯಶಸ್ಸು ತರಲಿದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬಗೆಹರಿಯಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ.
ಮಕರ: ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ. ಕಛೇರಿಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ.
ಕುಂಭ: ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ಸಿಗುವ ದಿನ. ಹೊಸ ವಸ್ತು ಖರೀದಿ ಯೋಗವಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚಾಗಲಿದೆ.
ಮೀನ: ಮನಸ್ಸಿನಲ್ಲಿ ಗೊಂದಲಗಳು ನಿವಾರಣೆಯಾಗಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ದೂರದ ಸಂಬಂಧಿಯಿಂದ ಸುದ್ದಿ ಬರಲಿದೆ.

ನಿತ್ಯ ಭವಿಷ್ಯ
ಮೇಷದಿಂದ ಮೀನದವರೆಗೆ: ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯದಲ್ಲಿ ಏನಿದೆ?
ಸುದ್ದಿದಿನ,ರಾಶಿಭವಿಷ್ಯ: ಇಂದಿನ ದಿನವು ಪ್ರತಿಯೊಂದು ರಾಶಿಗೂ ವಿಭಿನ್ನ ಅನುಭವಗಳನ್ನು ತರುವ ಸಾಧ್ಯತೆ ಇದೆ. ಕೆಲವರಿಗೆ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಮತ್ತೊಂದೆಡೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಿರ್ಧಾರ ಅಗತ್ಯವಾಗಬಹುದು. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಕೆಲವು ರಾಶಿಗಳಿಗೆ ದೊರೆಯಲಿದ್ದು, ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಅಧ್ಯಯನ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ದಿನದ ಪ್ರಮುಖ ನಿರ್ಧಾರಗಳಲ್ಲಿ ಆತುರಕ್ಕಿಂತ ವಿವೇಕಕ್ಕೆ ಆದ್ಯತೆ ನೀಡುವುದು ಉತ್ತಮ.
http://Visit : www.suddidina.com
ಮೇಷ ರಾಶಿ
ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚು ತಪ್ಪಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಬೇಕು.
ವೃಷಭ ರಾಶಿ
ಬಹುದಿನಗಳಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ಕುಟುಂಬದವರ ಸಲಹೆ ಉಪಯುಕ್ತವಾಗಲಿದೆ. ಆರೋಗ್ಯದ ಕಡೆ ಗಮನ ನೀಡಿ.
ಮಿಥುನ ರಾಶಿ
ಕೆಲಸದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗಲಿದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಸಹಕಾರಿಯಾಗಬಹುದು. ಹಣದ ವ್ಯವಹಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಮುಂದುವರಿಯಿರಿ.
ಕಟಕ ರಾಶಿ
ಕುಟುಂಬದ ವಿಚಾರಗಳು ಹೆಚ್ಚಿನ ಗಮನ ಸೆಳೆಯಬಹುದು. ಉದ್ಯೋಗದಲ್ಲಿ ಒತ್ತಡ ಕಂಡುಬಂದರೂ ಸಮಾಧಾನದಿಂದ ನಿರ್ವಹಿಸಿ. ಆತುರದ ನಿರ್ಧಾರಗಳಿಂದ ದೂರವಿರುವುದು ಒಳಿತು.
ಸಿಂಹ ರಾಶಿ
ವೃತ್ತಿಜೀವನದಲ್ಲಿ ಪ್ರಗತಿಯ ಸೂಚನೆಗಳಿವೆ. ಹಿರಿಯರಿಂದ ಮೆಚ್ಚುಗೆ ದೊರೆಯಬಹುದು. ಹಣಕಾಸಿನ ಸ್ಥಿತಿ ಸುಧಾರಿಸುವ ಅವಕಾಶವಿದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು.
ಕನ್ಯಾ ರಾಶಿ
ಹೊಸ ಯೋಜನೆ ಆರಂಭಿಸಲು ದಿನ ಅನುಕೂಲಕರವಾಗಿರಬಹುದು. ಕೆಲಸದಲ್ಲಿ ಏಕಾಗ್ರತೆ ಹೆಚ್ಚಲಿದೆ. ಖರೀದಿ ಮಾಡುವಾಗ ಅಗತ್ಯ-ಅನಗತ್ಯವನ್ನು ಅಳೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ತುಲಾ ರಾಶಿ
ಸಂಬಂಧಗಳಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾದರೂ ಮಾತುಕತೆಯಿಂದ ಪರಿಹರಿಸಬಹುದು. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಬರಬಹುದು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ.
ವೃಶ್ಚಿಕ ರಾಶಿ
ಹಳೆಯ ಕೆಲಸವೊಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಎಚ್ಚರಿಕೆಯ ಹೆಜ್ಜೆ ಅಗತ್ಯ. ಕುಟುಂಬದವರಿಂದ ಬೆಂಬಲ ಸಿಗಲಿದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.
ಧನು ರಾಶಿ
ಹೊಸ ಅವಕಾಶಗಳು ನಿಮ್ಮ ಗಮನ ಸೆಳೆಯಬಹುದು. ದೂರದ ಪ್ರಯಾಣದ ಯೋಜನೆ ರೂಪುಗೊಳ್ಳಬಹುದು. ಹಣದ ವಿಚಾರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆತ್ಮವಿಶ್ವಾಸ ಹೆಚ್ಚಲಿದೆ.
ಮಕರ ರಾಶಿ
ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಯೋಜನೆಯಂತೆ ಕಾರ್ಯನಿರ್ವಹಿಸಿದರೆ ಯಶಸ್ಸು ಸಿಗಲಿದೆ. ಹಿರಿಯರ ಮಾರ್ಗದರ್ಶನ ಪ್ರಯೋಜನಕಾರಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ.
ಕುಂಭ ರಾಶಿ
ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಮಯ. ಉದ್ಯೋಗದಲ್ಲಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ಮಾಹಿತಿ ಸಂಗ್ರಹಿಸಿ ನಿರ್ಧರಿಸಿ. ಸ್ನೇಹಿತರಿಂದ ನೆರವು ದೊರೆಯಬಹುದು.
ಮೀನ ರಾಶಿ
ಮನಸ್ಸಿನ ಗೊಂದಲಗಳು ನಿಧಾನವಾಗಿ ಕಡಿಮೆಯಾಗಬಹುದು. ಕುಟುಂಬದೊಂದಿಗೆ ಸಂತಸದ ಕ್ಷಣಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಉಳಿತಾಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಪರಿಶ್ರಮದ ಫಲ ದೊರೆಯಬಹುದು.



