ನಿತ್ಯ ಭವಿಷ್ಯ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ : 28-01-2020 ಮಂಗಳವಾರ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ 9964584883
ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಮೇಷ ರಾಶಿ
ಕಾರ್ಯಕ್ಷೇತ್ರದಲ್ಲಿ ಸ್ವಯಂಪರೀಕ್ಷೆ ಆರಂಭಗೊಂಡಿದೆ. ದೈವಾನುಗ್ರಹ ನಿಮ್ಮನ್ನು ಉತ್ತೇಜಿಸಲಿದೆ. ನಿಮ್ಮ ಅಗಾಧ ಅನುಭವ ಹಾಗೂ ಪ್ರಯತ್ನಬಲ, ಆತ್ಮವಿಶ್ವಾಸ ವೃತ್ತಿರಂಗದಲ್ಲಿ ಬೆಳಕಿಗೆ ಬರಲಿದೆ. ಸೂಕ್ತ ಸಮಯಕ್ಕಾಗಿ ಮಾತ್ರ ಕಾಯುವುದು ಅನಿವಾರ್ಯವಾದೀತು. ಸಾಮಾಜಿಕವಾಗಿ ಬುದ್ಧಿವಂತಿಕೆಯಲ್ಲಿ ಬದುಕುವ ಸನ್ನಿವೇಶವಿದು. ಕೌಟುಂಬಿಕವಾಗಿ ಹೆಚ್ಚಿನ ನಿರೀಕ್ಷೆ ನಿರಾಸೆ ತಂದೀತು. ಟೀಕೆಗಳನ್ನು ಎದುರಿಸಲು ನೀವು ಸಿದ್ಧರಾಗಬೇಕಾದೀತು. ಆರ್ಥಿಕವಾಗಿ ಪರಿಸ್ಥಿತಿಯು ಸುಧಾರಿಸುತ್ತ ಹೋಗಲಿದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವೃಷಭ ರಾಶಿ
ವೃತ್ತಿರಂಗದಲ್ಲಿ ಅನಾವಶ್ಯಕ ರೀತಿಯಲ್ಲಿ ಕೆಲಸಕ್ಕೆ ಬಾರದ ಗಾಸಿಪ್‌ಗ್ಳೇ ನಿಮ್ಮನ್ನು ಹತಾಶೆಗೊಳಿಸಲಿದೆ. ಧೈರ್ಯ, ಪ್ರಯತ್ನ ಬಲದಿಂದ ಮುಂದುವರಿಯಿರಿ. ಹಾಗೇ ನಿರ್ಧಾರಗಳಿಂದ ಹಿಂದೆ ಸರಿಯದಿರಿ. ಆರ್ಥಿಕ ಮಟ್ಟ ನಿರೀಕ್ಷಿಸಿದ ರೀತಿಯಲ್ಲಿ ಹೆಚ್ಚಿನ ಕೆಲಸಕಾರ್ಯಗಳಿಗೆ ಅನುಕೂಲವನ್ನು ತಂದುಕೊಡಲಿದೆ. ಈ ಮಧ್ಯೆ ಅನಿರೀಕ್ಷಿತ ಧನಾಗಮನ ಕೂಡ ಅಚ್ಚರಿ ತಂದುಕೊಡಲಿದೆ. ವೈಯಕ್ತಿಕವಾಗಿ ಕಳಕೊಂಡಿದ್ದ ಅಸ್ತಿತ್ವವನ್ನು ಪುನಃ ಸಂಪಾ ದಿಸಲಿದ್ದೀರಿ. ಹಾಗೇ ವ್ಯವಸ್ಥೆಯ ಬೆಂಬಲ ಸಿಗಲಿದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮಿಥುನ ರಾಶಿ
ವೃತ್ತಿರಂಗದಲ್ಲಿ ಬದಲಾವಣೆಗೆ ನೀವು ಸಿದ್ಧರಾಗಬೇಕಾದೀತು. ಸಮಸ್ಯೆಗಳು ತಮ್ಮಿಂದ ತಾವೇ ಉಪಶಮನ ಆಗಲಿವೆ. ಕೌಟುಂಬಿಕವಾಗಿ ಸಣ್ಣ ಸಣ್ಣ ವಿಷಯಗಳಲ್ಲಿ ಅಸಮಾಧಾನ ತೋರಿಬರ ಬಹುದು. ನಿಮ್ಮ ವ್ಯಕ್ತಿತ್ವವನ್ನು ಸ್ವಾಭಿಮಾನದಿಂದ ಕಾಪಾಡಿಕೊಳ್ಳಿರಿ. ದೂರ ಸಂಚಾರ, ವಾಹನ ಚಾಲನೆಯಲ್ಲಿ ಮಿತಿ ಇರಲಿ. ವಾರಾಂತ್ಯದಲ್ಲಿ ಅನಿರೀಕ್ಷಿತ ಧನಾಗಮನ ಅಚ್ಚರಿ ತಂದೀತು. ಅವಿವಾಹಿತರು ಕ್ರಿಯಾಶೀಲರಾದಲ್ಲಿ ವೈಯಕ್ತಿಕ ಸಂಬಂಧಗಳ ಪ್ರಸ್ತಾವಗಳು ಬರಲಿವೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕರ್ಕಾಟಕ ರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ನಾನಾ ರೀತಿಯ ಪೈಪೋಟಿಯ ವಾತಾವರಣ ತೋರಿ ಬರಲಿದೆ. ಕಠಿಣ ಪರಿಶ್ರಮ, ಪ್ರಯತ್ನ ಬಲದ ಕಾರ್ಯಶೀಲತೆ ನಿಮ್ಮ ವೃತ್ತಿ ಬದುಕಿನ ಮೇಲೆ ಭಾರೀ ಪರಿಣಾಮ ಬೀರಲಿದೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಬಂದೀತು. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಲಿವೆ. ಆದರೂ ಸಣ್ಣಸಣ್ಣ ವಿಷಯಗಳಲ್ಲಿ ಮನಸ್ಸನ್ನು ಕೆಡಿಸಿಕೊಳ್ಳುವಂತಾದೀತು. ತಾಳ್ಮೆ-ಸಮಾಧಾನವಿರಲಿ. ಗೋಚರದ ರಾಹು, ಕೇತುಗಳ ಪ್ರತಿಕೂಲತೆಯಿಂದ ಆರೋಗ್ಯ ಕೆಡಲಿದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಿಂಹ ರಾಶಿ
ಸಾಮಾಜಿಕ ಪ್ರತಿಷ್ಠೆಗಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ನಾನಾ ರೀತಿಯಲ್ಲಿ ಧನವ್ಯಯ ಉಂಟಾಗಲಿದೆ. ವಾಸ್ತವದ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದಲ್ಲಿ ಉತ್ತಮ. ಭವಿಷ್ಯದ ಸಮಸ್ಯೆಗಳನ್ನು ಚೆನ್ನಾಗಿ ಅರಿತುಕೊಂಡು ಮುಂದುವರಿದಲ್ಲಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾಗಲು ಹೆಚ್ಚಿನ ಹೊಂದಾಣಿಕೆ ಮಾಡಿಕೊಳ್ಳಬೇಕಾದೀತು. ಯಾವುದೇ ಒತ್ತಡಕ್ಕೆ ತಲೆಬಾಗದಿರಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕನ್ಯಾ ರಾಶಿ
ಕಾರ್ಯಕ್ಷೇತ್ರದಲ್ಲಿ ಬುದ್ಧಿವಂತಿಕೆಯ ಪ್ರಯೋಗಕ್ಕೆ ಇದೇ ಸಕಾಲ. ಯಾವುದೇ ವಾದ- ವಿವಾದಗಳಲ್ಲಿ ಸಿಕ್ಕಿಕೊಳ್ಳದಂತೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ಕೌಟುಂಬಿಕವಾಗಿ ಹೆಚ್ಚಿನ ಸಹಕಾರ ಹಾಗೂ ಉತ್ಸಾಹದ ಪ್ರತಿಕ್ರಿಯೆ ಸಮಾಧಾನ ತಂದೀತು. ಆರ್ಥಿಕವಾಗಿ ಖರ್ಚು ವೆಚ್ಚಗಳನ್ನು ನಿಭಾಯಿಸಬಹುದಾಗಿದೆ. ಸಾಮಾಜಿಕವಾಗಿ ನಿಮ್ಮ ಗೌರವಕ್ಕೆ ಸಂಬಂಧಿಸಿದಂತೆ ಸ್ವಾಭಿಮಾನವನ್ನು ಕಾಪಾಡಿಕೊಳ್ಳಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಕಾಳಜಿ, ಜವಾಬ್ದಾರಿ ಎಲ್ಲ ರೀತಿಯಲ್ಲಿ ಅನುಕೂಲವಾಗಲಿದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ತುಲಾ ರಾಶಿ
ನಿಮ್ಮ ಕೌಶಲ್ಯವನ್ನು ಒರೆಗೆ ಹಚ್ಚಿ ಕಾರ್ಯಸಾಧನೆಗೆ ಇಳಿಯಿರಿ. ಯಶಸ್ಸು ನಿಮ್ಮದಾದೀತು. ಸಾಮಾಜಿಕವಾಗಿ ಹೆಚ್ಚಿನ ಅನುಕೂಲಕರ ವಾತಾವರಣ ತೋರಿಬರುವುದಿಲ್ಲವಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ರಾಜಕೀಯ ವರ್ಗದವರು ಭವಿಷ್ಯದ ಸಮಸ್ಯೆಗಳನ್ನು ತಾವೇ ನಿರ್ಧರಿಸಬೇಕಾಗುತ್ತದೆ. ಆತ್ಮವಿಮರ್ಶೆಗೆ ಸರಿಯಾದ ಕಾಲವಿದು. ಯೋಚಿಸಿ, ಚಿಂತಿಸಿ ಮುಂದುವರಿಯಿರಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವೃಶ್ಚಿಕ ರಾಶಿ
ನಿಮ್ಮ ಮೇಲೆ ನೀವೇ ಹತೋಟಿಯನ್ನು ಕಾಯ್ದುಕೊಳ್ಳುವುದು ಅಗತ್ಯವಿದೆ. ದೈವಾನುಗ್ರಹ ಎಲ್ಲ ರೀತಿಯಲ್ಲಿ ನಿಮ್ಮ ಮುನ್ನಡೆಗೆ ಸಹಾಯವಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮೆದುರು ಭಾರೀ ಸವಾಲಿದೆ. ಎಚ್ಚರ. ಅನುಕೂಲ ಕಾರ್ಯಕ್ಷೇತ್ರದ ಆಯ್ಕೆ ಮಾಡಿ. ಬುದ್ಧಿವಂತಿಕೆಯ ಪ್ರಯೋಗಕ್ಕೆ ಇದು ಸಕಾಲವಾಗಲಿದೆ. ಕಳೆದುಕೊಂಡಿದ್ದ ಅವಕಾಶಗಳನ್ನು ಪೂರ್ಣ ಪಡೆಯಲಿದ್ದೀರಿ. ಆದರೂ ಕೆಲವೊಂದು ಸಮಸ್ಯೆಗಳನ್ನು ನೀವೇ ನಿಭಾಯಿಸಬೇಕಾದೀತು. ವಿದ್ಯಾರ್ಥಿಗಳಿಗೆ ಅನುಕೂಲವಾದ ವಾರವಿದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಧನುಸ್ಸು ರಾಶಿ
ಕಾರ್ಯರಂಗದಲ್ಲಿ ನಿಮ್ಮ ಸ್ವಾಭಿಮಾನಕ್ಕೆ ತೀರಾ ಚ್ಯುತಿಯೇನೂ ತೋರಿಬರಲಾರದು. ಸಿಡುಕುತನ, ಸಿಟ್ಟು-ಸೆಡವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿರಿ. ಕಾರ್ಯಸಾಧನೆಗೆ ಸುಲಭವಾದೀತು. ನಿರುದ್ಯೋಗಿಗಳಿಗೆ ವಿವಿಧ ರೀತಿಯ ಅವಕಾಶಗಳು ಒದಗಿಬಂದು ಭವಿಷ್ಯದ ಹಾದಿಯನ್ನು ಸುಗಮಗೊಳಿಸಲಿದೆ. ಈ ಬೆಳವಣಿಗೆಗಳಿಂದ ನಿಮ್ಮನ್ನು ಅವಲಂಬಿಸಿದವರು ಸಮಾಧಾನ, ಸಂತಸಗೊಂಡಾರು. ಅವಿವಾಹಿತರು ಖಚಿತ ನಿರ್ಧಾರವನ್ನು ತೆಗೆದುಕೊಳ್ಳುವಂತಾದೀತು. ಆರ್ಥಿಕವಾಗಿ ಖರ್ಚು- ವೆಚ್ಚಗಳನ್ನು ಹತೋಟಿಯಲ್ಲಿಡಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮಕರ ರಾಶಿ
ಎಲ್ಲ ವಿಚಾರಗಳಲ್ಲಿ ಹೊಸ ಹೊಸ ಆಸೆಗಳು ಚಿಗುರಲಿವೆ. ಸಾಮಾಜಿಕವಾಗಿ ಪರಿವರ್ತನೆಯು ಸದ್ಯದಲ್ಲೇ ತೋರಿಬರಲಿದೆ. ಲೆಕ್ಕಾಚಾರದಿಂದ ಆರ್ಥಿಕ ಸಮಸ್ಯೆಯು ನಿವಾರಣೆಯಾಗಿ ಲಾಭದಾಯಕ ಆದಾಯ. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭವಿದೆ. ವೈವಾಹಿಕ ಸಂಬಂಧಗಳು ಆಗಾಗ ಹಿನ್ನಡೆಗೆ ಸರಿದರೂ ಕ್ರಿಯಾಶೀಲರಾಗಿ ಮುಂದುವರಿದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಶುಭ ಸೂಚನೆ ತೋರಿ ಬರಲಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಲಿವೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕುಂಭ ರಾಶಿ
ಕಾರ್ಯರಂಗದಲ್ಲಿ ಆಗಾಗ ಎಡರುತೊಡರುಗಳಿದ್ದರೂ ನಿಮ್ಮ ಶ್ರಮಕ್ಕೆ ಯಶೋಭಾಗ್ಯ ಅಭಿವೃದ್ಧಿಯನ್ನು ತಂದು ಕೊಟ್ಟಾನು. ಆರ್ಥಿಕವಾಗಿ ಖರ್ಚು ವೆಚ್ಚಗಳಿದ್ದರೂ ಆಗಾಗ ಧನಾಗಮನದಿಂದ ಅನುಕೂಲವಾಗಲಿದೆ. ವೃತ್ತಿರಂಗದಲ್ಲಿ ಗುಣಮಟ್ಟ ಅನುಷ್ಠಾನ ಪಡೆಯದಿರುವುದಕ್ಕೆ ಹಿರಿಯ ಅಧಿಕಾರಿ ವರ್ಗದವರ ನಿರ್ಲಕ್ಷ್ಯ ಕಾರಣವಾದೀತು. ಸಾಂಸಾರಿಕವಾಗಿ ನೆಮ್ಮದಿಯ ದಿನಗಳು. ಮಿತ್ರಬಾಂಧವರ ಆಗಮನ ಹಾಗೂ ಸಾಮಾಜಿಕವಾಗಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿರಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮೀನ ರಾಶಿ
ವ್ಯಾಪಾರ- ವ್ಯವಹಾರಗಳಲ್ಲಿ ವಿಲೀನತೆ, ಹೊಂದಾಣಿಕೆ, ಸ್ವಾಧೀನ ಪ್ರಕ್ರಿಯೆಗಳು ನಡೆಯಲಿವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಯತ್ನಬಲ, ಕೆಲಸಕಾರ್ಯಗಳಿಗೆ ಪ್ರತಿಫಲ ಲಭಿಸುವುದು. ಆದರೂ ಹಿತಶತ್ರುಗಳು ಕ್ರೂರ ರೂಪದಿಂದ ಶೋಷಣೆ ಮಾಡುವರು. ಜಾಗ್ರತೆ ಇರಲಿ. ರಾಜಕೀಯ ವರ್ಗದವರಿಗಂತೂ ರಾಜಕಾರಣಿಗಳನ್ನು ಓಲೈಸುವ ಪ್ರಸಂಗ ಬಂದೀತು. ಸಾಂಸಾರಿಕವಾಗಿ ಉದಾರ ದೃಷ್ಟಿಯಲ್ಲಿ ಎಲ್ಲರನ್ನೂ ಪ್ರೀತಿಸಿ, ಪೋಷಿಸಿ, ರಕ್ಷಿಸಿ ಸಂಭಾಳಿಸಿರಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 9964584883

ದಿನದ ಸುದ್ದಿ
ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!
ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ.
http://Visit : www.suddidina.com
ಮೇಷ: ಹಣಕಾಸಿನ ವಿಚಾರದಲ್ಲಿ ಶುಭ ದಿನ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.
ವೃಷಭ: ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿ ಬರಲಿವೆ. ಮಾತಿನ ಮೇಲೆ ನಿಯಂತ್ರಣ ಇರಲಿ. ಪ್ರಯಾಣದ ಯೋಗವಿದೆ.
ಮಿಥುನ: ಉದ್ಯೋಗದಲ್ಲಿ ಪ್ರಗತಿಯ ಸೂಚನೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಉಲ್ಲಾಸ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.
ಕರ್ಕಾಟಕ: ವ್ಯಾಪಾರದಲ್ಲಿ ಲಾಭದ ನಿರೀಕ್ಷೆ. ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಹಳೆಯ ಸಾಲ ವಸೂಲಿಯಾಗಲಿದೆ.
ಸಿಂಹ: ಆತ್ಮವಿಶ್ವಾಸ ಹೆಚ್ಚಾಗುವ ದಿನ. ಸರ್ಕಾರಿ ಕೆಲಸಗಳು ಸುಗಮವಾಗಿ ನಡೆಯಲಿವೆ. ಮಕ್ಕಳಿಂದ ಶುಭ ಸುದ್ದಿ ಸಿಗಲಿದೆ.
ಕನ್ಯಾ: ಕೆಲಸದ ಒತ್ತಡ ಹೆಚ್ಚಿರಬಹುದು, ತಾಳ್ಮೆಯಿಂದ ಇರಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಸಂಜೆ ವೇಳೆಗೆ ಶುಭ ಸುದ್ದಿ.
ತುಲಾ: ಹೊಸ ಅವಕಾಶಗಳು ಬಾಗಿಲು ತಟ್ಟಲಿವೆ. ನಿಮ್ಮ ಪ್ರತಿಭೆಗೆ ಮನ್ನಣೆ ಸಿಗಲಿದೆ. ಪ್ರೇಮ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ.
ವೃಶ್ಚಿಕ: ಆಸ್ತಿ ವಿಚಾರದಲ್ಲಿ ಜಯ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ.
ಧನು: ಧೈರ್ಯದಿಂದ ಕೈಗೊಂಡ ನಿರ್ಧಾರ ಯಶಸ್ಸು ತರಲಿದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬಗೆಹರಿಯಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ.
ಮಕರ: ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ. ಕಛೇರಿಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ.
ಕುಂಭ: ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ಸಿಗುವ ದಿನ. ಹೊಸ ವಸ್ತು ಖರೀದಿ ಯೋಗವಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚಾಗಲಿದೆ.
ಮೀನ: ಮನಸ್ಸಿನಲ್ಲಿ ಗೊಂದಲಗಳು ನಿವಾರಣೆಯಾಗಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ದೂರದ ಸಂಬಂಧಿಯಿಂದ ಸುದ್ದಿ ಬರಲಿದೆ.

ನಿತ್ಯ ಭವಿಷ್ಯ
ಮೇಷದಿಂದ ಮೀನದವರೆಗೆ: ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯದಲ್ಲಿ ಏನಿದೆ?
ಸುದ್ದಿದಿನ,ರಾಶಿಭವಿಷ್ಯ: ಇಂದಿನ ದಿನವು ಪ್ರತಿಯೊಂದು ರಾಶಿಗೂ ವಿಭಿನ್ನ ಅನುಭವಗಳನ್ನು ತರುವ ಸಾಧ್ಯತೆ ಇದೆ. ಕೆಲವರಿಗೆ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಮತ್ತೊಂದೆಡೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಿರ್ಧಾರ ಅಗತ್ಯವಾಗಬಹುದು. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಕೆಲವು ರಾಶಿಗಳಿಗೆ ದೊರೆಯಲಿದ್ದು, ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಅಧ್ಯಯನ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ದಿನದ ಪ್ರಮುಖ ನಿರ್ಧಾರಗಳಲ್ಲಿ ಆತುರಕ್ಕಿಂತ ವಿವೇಕಕ್ಕೆ ಆದ್ಯತೆ ನೀಡುವುದು ಉತ್ತಮ.
http://Visit : www.suddidina.com
ಮೇಷ ರಾಶಿ
ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚು ತಪ್ಪಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಬೇಕು.
ವೃಷಭ ರಾಶಿ
ಬಹುದಿನಗಳಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ಕುಟುಂಬದವರ ಸಲಹೆ ಉಪಯುಕ್ತವಾಗಲಿದೆ. ಆರೋಗ್ಯದ ಕಡೆ ಗಮನ ನೀಡಿ.
ಮಿಥುನ ರಾಶಿ
ಕೆಲಸದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗಲಿದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಸಹಕಾರಿಯಾಗಬಹುದು. ಹಣದ ವ್ಯವಹಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಮುಂದುವರಿಯಿರಿ.
ಕಟಕ ರಾಶಿ
ಕುಟುಂಬದ ವಿಚಾರಗಳು ಹೆಚ್ಚಿನ ಗಮನ ಸೆಳೆಯಬಹುದು. ಉದ್ಯೋಗದಲ್ಲಿ ಒತ್ತಡ ಕಂಡುಬಂದರೂ ಸಮಾಧಾನದಿಂದ ನಿರ್ವಹಿಸಿ. ಆತುರದ ನಿರ್ಧಾರಗಳಿಂದ ದೂರವಿರುವುದು ಒಳಿತು.
ಸಿಂಹ ರಾಶಿ
ವೃತ್ತಿಜೀವನದಲ್ಲಿ ಪ್ರಗತಿಯ ಸೂಚನೆಗಳಿವೆ. ಹಿರಿಯರಿಂದ ಮೆಚ್ಚುಗೆ ದೊರೆಯಬಹುದು. ಹಣಕಾಸಿನ ಸ್ಥಿತಿ ಸುಧಾರಿಸುವ ಅವಕಾಶವಿದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು.
ಕನ್ಯಾ ರಾಶಿ
ಹೊಸ ಯೋಜನೆ ಆರಂಭಿಸಲು ದಿನ ಅನುಕೂಲಕರವಾಗಿರಬಹುದು. ಕೆಲಸದಲ್ಲಿ ಏಕಾಗ್ರತೆ ಹೆಚ್ಚಲಿದೆ. ಖರೀದಿ ಮಾಡುವಾಗ ಅಗತ್ಯ-ಅನಗತ್ಯವನ್ನು ಅಳೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ತುಲಾ ರಾಶಿ
ಸಂಬಂಧಗಳಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾದರೂ ಮಾತುಕತೆಯಿಂದ ಪರಿಹರಿಸಬಹುದು. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಬರಬಹುದು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ.
ವೃಶ್ಚಿಕ ರಾಶಿ
ಹಳೆಯ ಕೆಲಸವೊಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಎಚ್ಚರಿಕೆಯ ಹೆಜ್ಜೆ ಅಗತ್ಯ. ಕುಟುಂಬದವರಿಂದ ಬೆಂಬಲ ಸಿಗಲಿದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.
ಧನು ರಾಶಿ
ಹೊಸ ಅವಕಾಶಗಳು ನಿಮ್ಮ ಗಮನ ಸೆಳೆಯಬಹುದು. ದೂರದ ಪ್ರಯಾಣದ ಯೋಜನೆ ರೂಪುಗೊಳ್ಳಬಹುದು. ಹಣದ ವಿಚಾರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆತ್ಮವಿಶ್ವಾಸ ಹೆಚ್ಚಲಿದೆ.
ಮಕರ ರಾಶಿ
ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಯೋಜನೆಯಂತೆ ಕಾರ್ಯನಿರ್ವಹಿಸಿದರೆ ಯಶಸ್ಸು ಸಿಗಲಿದೆ. ಹಿರಿಯರ ಮಾರ್ಗದರ್ಶನ ಪ್ರಯೋಜನಕಾರಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ.
ಕುಂಭ ರಾಶಿ
ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಮಯ. ಉದ್ಯೋಗದಲ್ಲಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ಮಾಹಿತಿ ಸಂಗ್ರಹಿಸಿ ನಿರ್ಧರಿಸಿ. ಸ್ನೇಹಿತರಿಂದ ನೆರವು ದೊರೆಯಬಹುದು.
ಮೀನ ರಾಶಿ
ಮನಸ್ಸಿನ ಗೊಂದಲಗಳು ನಿಧಾನವಾಗಿ ಕಡಿಮೆಯಾಗಬಹುದು. ಕುಟುಂಬದೊಂದಿಗೆ ಸಂತಸದ ಕ್ಷಣಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಉಳಿತಾಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಪರಿಶ್ರಮದ ಫಲ ದೊರೆಯಬಹುದು.

ನಿತ್ಯ ಭವಿಷ್ಯ
Today Rashi Bhavishya September 1 2026: ಇಂದಿನ ರಾಶಿಭವಿಷ್ಯ; ಈ 5 ರಾಶಿಗೆ ಶುಭಫಲ
ಸುದ್ದಿದಿನ,ರಾಶಿಭವಿಷ್ಯ: ಸೆಪ್ಟೆಂಬರ್ 1, 2026ರ ದಿನವು ಹಲವು ರಾಶಿಗಳಿಗೆ ಹೊಸ ಅವಕಾಶಗಳು, ಆರ್ಥಿಕ ಪ್ರಗತಿ ಮತ್ತು ವೃತ್ತಿಯಲ್ಲಿ ಮುನ್ನಡೆಯ ಸೂಚನೆ ನೀಡುತ್ತಿದೆ. ಜ್ಯೋತಿಷ್ಯಾಧಾರಿತ ದಿನಭವಿಷ್ಯದ ಪ್ರಕಾರ ಮೇಷ, ವೃಷಭ, ಮಿಥುನ, ತುಲಾ ಮತ್ತು ಮಕರ ರಾಶಿಯವರಿಗೆ ವಿಶೇಷವಾಗಿ ಅನುಕೂಲಕರ ಬೆಳವಣಿಗೆಗಳ ಸಾಧ್ಯತೆ ಇದೆ.
ಆದರೆ ಪ್ರತಿಯೊಂದು ರಾಶಿಗೂ ದಿನ ಒಂದೇ ರೀತಿಯಾಗಿರುವುದಿಲ್ಲ. ಕೆಲವರಿಗೆ ಹಣಕಾಸಿನಲ್ಲಿ ಲಾಭದ ಸೂಚನೆ ಇದ್ದರೆ, ಇನ್ನು ಕೆಲವರು ಆರೋಗ್ಯ, ಖರ್ಚು, ಕುಟುಂಬ ಸಂಬಂಧ ಅಥವಾ ಕೆಲಸದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಬೇಕಾಗುತ್ತದೆ.

http://Visit : www.suddidina.com
ಮೇಷ ರಾಶಿ
ಆರ್ಥಿಕ ಸಮಸ್ಯೆಗಳಿಂದ ಸ್ವಲ್ಪ ಪರಿಹಾರ ದೊರೆಯುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿ ಕಾಣಬಹುದು. ಆದರೆ ಆರೋಗ್ಯ ಮತ್ತು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.
ವೃಷಭ ರಾಶಿ
ಹಣಕಾಸಿನ ವಿಚಾರದಲ್ಲಿ ಉತ್ತಮ ದಿನ. ಕುಟುಂಬದ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಲಿದೆ. ಶಿಕ್ಷಣ ಹಾಗೂ ವ್ಯವಹಾರದಲ್ಲಿ ಯಶಸ್ಸಿನ ಸಾಧ್ಯತೆ ಇದೆ. ಖರ್ಚು ಹೆಚ್ಚಾಗದಂತೆ ನಿಯಂತ್ರಿಸುವುದು ಮುಖ್ಯ.
ಮಿಥುನ ರಾಶಿ
ನಿರೀಕ್ಷಿತ ಯಶಸ್ಸು ದೊರೆಯುವ ಸಾಧ್ಯತೆ ಇದೆ. ಹಳೆಯ ಕೆಲಸದ ಸಮಸ್ಯೆಗಳು ಬಗೆಹರಿಯಬಹುದು. ಕೋರ್ಟ್ ಅಥವಾ ಕಾನೂನು ಸಂಬಂಧಿತ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆ ಸಾಧ್ಯ. ಆದರೆ ಯಾರಿಗೂ ದೊಡ್ಡ ಮೊತ್ತದ ಹಣ ಸಾಲ ನೀಡಬೇಡಿ.
ಕಟಕ ರಾಶಿ
ಕುಟುಂಬದ ವಿಚಾರಗಳಲ್ಲಿ ಹೆಚ್ಚಿನ ಗಮನ ನೀಡಬೇಕಾದ ದಿನ. ಯಾವುದೇ ಕೆಲಸವನ್ನು ಯೋಜನೆಯೊಂದಿಗೆ ಆರಂಭಿಸಿದರೆ ಉತ್ತಮ ಫಲಿತಾಂಶ ಸಿಗಬಹುದು. ಮಾನಸಿಕ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.
ಸಿಂಹ ರಾಶಿ
ಕೆಲಸದಲ್ಲಿ ಶ್ರಮ ಹೆಚ್ಚಿಸಬೇಕಾದ ದಿನ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಬಹುದು. ಕುಟುಂಬದಲ್ಲಿದ್ದ ಕೆಲವು ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಅಧಿಕಾರಿಗಳು ಅಥವಾ ಹಿರಿಯರೊಂದಿಗೆ ಮಾತನಾಡುವಾಗ ತಾಳ್ಮೆ ಅಗತ್ಯ.
ಕನ್ಯಾ ರಾಶಿ
ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಪ್ರಯತ್ನಗಳು ಫಲ ನೀಡುವ ಸಾಧ್ಯತೆ ಇದೆ. ಕೆಲಸದಲ್ಲಿನ ಅಡೆತಡೆಗಳು ದೂರವಾಗಬಹುದು. ವೃತ್ತಿಗೆ ಸಂಬಂಧಿಸಿದ ಶುಭ ಸುದ್ದಿ ಸಿಗುವ ನಿರೀಕ್ಷೆಯಿದೆ. ದೊಡ್ಡ ಹೂಡಿಕೆ ಮತ್ತು ದೂರ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ.
ತುಲಾ ರಾಶಿ
ಹಠಾತ್ ಆರ್ಥಿಕ ಲಾಭದ ಅವಕಾಶಗಳು ಬರಬಹುದು. ಆದಾಯ ಹೆಚ್ಚಿಸುವ ಪ್ರಯತ್ನಗಳಿಗೆ ಉತ್ತಮ ಸಮಯ. ಕುಟುಂಬದವರೊಂದಿಗೆ ಮನಸ್ಸಿನ ಮಾತುಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಿ. ಕೋಪ ಹಾಗೂ ಮಾತಿನ ಮೇಲೆ ನಿಯಂತ್ರಣ ಇರಲಿ.
ವೃಶ್ಚಿಕ ರಾಶಿ
ಶುಭ ಸುದ್ದಿಯ ನಿರೀಕ್ಷೆಯಿದೆ. ಅದೃಷ್ಟದ ಬೆಂಬಲ ದೊರೆಯುವ ಸಾಧ್ಯತೆ ಇದ್ದು, ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬಹುದು. ವ್ಯವಹಾರದಲ್ಲಿ ಹಣಕಾಸಿನ ಲಾಭದ ಅವಕಾಶವಿದೆ. ಆದರೆ ಅನಗತ್ಯ ಪ್ರಯಾಣ ಮತ್ತು ವಾದಗಳಿಂದ ದೂರವಿರಿ.
ಧನು ರಾಶಿ
ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಹುದು. ದೂರದ ಸ್ಥಳದಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಬಹುದು. ಆದರೆ ಖರ್ಚು ಹೆಚ್ಚಾಗದಂತೆ ನೋಡಿಕೊಳ್ಳಿ ಹಾಗೂ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಮಕರ ರಾಶಿ
ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸೂಚನೆ ಇದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಮೆಚ್ಚುಗೆ ದೊರೆಯಬಹುದು. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವ ಸಾಧ್ಯತೆ ಇದೆ. ವೃತ್ತಿ ಮತ್ತು ಉದ್ಯಮದಲ್ಲಿ ಪ್ರಮುಖ ನಿರ್ಧಾರಗಳನ್ನು ವಿಳಂಬ ಮಾಡದೆ ಸೂಕ್ತವಾಗಿ ತೆಗೆದುಕೊಳ್ಳಿ.
ಕುಂಭ ರಾಶಿ
ಉನ್ನತ ಅಧಿಕಾರಿಗಳ ಸಹಕಾರದಿಂದ ವೃತ್ತಿಯಲ್ಲಿ ಮುನ್ನಡೆ ಸಾಧಿಸಬಹುದು. ನಾಯಕತ್ವದ ಸಾಮರ್ಥ್ಯ ಹೆಚ್ಚಲಿದೆ. ಸಂಬಂಧಿಕರ ಭೇಟಿ ಸಾಧ್ಯ. ಕುಟುಂಬದಲ್ಲಿ ಅನಗತ್ಯ ಸಂಘರ್ಷಕ್ಕೆ ಅವಕಾಶ ಕೊಡಬೇಡಿ. ವ್ಯವಹಾರದಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ.
ಮೀನ ರಾಶಿ
ಗುರುಗತಿಯ ಅನುಕೂಲದಿಂದ ಕೆಲವು ವಿಚಾರಗಳಲ್ಲಿ ಪ್ರಗತಿ ಸಾಧ್ಯ. ವಿದೇಶಕ್ಕೆ ಸಂಬಂಧಿಸಿದ ಅವಕಾಶ ಅಥವಾ ಶುಭ ಸುದ್ದಿ ಸಿಗಬಹುದು. ಆದರೆ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚು ಮತ್ತು ದೊಡ್ಡ ಹೂಡಿಕೆಗಳನ್ನು ತಪ್ಪಿಸುವುದು ಉತ್ತಮ.
ಸೂಚನೆ: ಮೇಲಿನ ರಾಶಿಭವಿಷ್ಯ ಜ್ಯೋತಿಷ್ಯಾಧಾರಿತ ಸಾಮಾನ್ಯ ಮಾಹಿತಿಯಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಫಲಿತಾಂಶ ಭಿನ್ನವಾಗಬಹುದು.


