ಸಿನಿ ಸುದ್ದಿ
‘ಕಿಚ್ಚ’ನಿಗೆ ಶುಭ ಕೋರಿದ ಜನಾರ್ಧನ ರೆಡ್ಡಿ
ಸುದ್ದಿದಿನ ಡೆಸ್ಕ್ | ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ ನೇತೃತ್ವದಲ್ಲಿ ಸೆಪ್ಟೆಂಬರ್ 8 ಮತ್ತು 9ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕೆಸಿಸಿ (ಕನ್ನಡ ಚಲನಚಿತ್ರ ಕ್ರಿಕೆಟ್ ಕಪ್) ಎರಡನೇ ಆವೃತ್ತಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಶುಭ ಕೋರಿದ್ದಾರೆ.
ಸ್ಯಾಂಡಲ್ವುಡ್ ತಾರೆಯರು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಇರುವ ಕ್ರೀಡಾಪ್ರತಿಭೆ ಬೆಳಕಿಗೆ ತರಲು ನಟ ಸುದೀಪ್ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿರುವುದು ಅತೀವ ಸಂತಸ ತಂದಿದೆ. ಪ್ರಕ್ರಿಯೆಯಲ್ಲೂ ಅವರು ನನ್ನನ್ನು ತೊಡಗಿಸಿಕೊಂಡಿದ್ದಾರೆ. ಇದರ ಯಶಸ್ಸಿಗೆ ಅವರಿಗೆ ಸಾಥ್ ನೀಡಲು ಹರ್ಷವೆನಿಸುತ್ತಿದೆ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿಸಲು ನಟ ಸುದೀಪ್ ತಾರೆಯರ ಕ್ರಿಕೆಟ್ ಹಮ್ಮಿಕೊಂಡಿರುವುದು ಅಪಾರ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಕೆಸಿಸಿ ಮೊದಲ ಆವೃತ್ತಿಯನ್ನು ಸುದೀಪ್ ಯಶಸ್ವಿಯಾಗಿ ನಡೆಸಿದ್ದರು. ಅವರೊಂದಿಗೆ ನಾನೂ ಕೈಜೋಡಿಸಿದ್ದೆ.
ಈ ಬಾರಿಯ ಕೆಸಿಸಿಯಲ್ಲಿ ಒಟ್ಟು ಆರು ತಂಡಗಳು ಸೆಣಸಲಿವೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕಾರ್ತಿಕ ಗೌಡ, ಜಾಕ್ ಮಂಜು, ನಿರ್ದೇಶಕರಾದ ನಂದಕಿಶೋರ್, ಕೃಷ್ಣ ಹಾಗೂ ಸದಾಶಿವ ಶೆಣೈ ಈ ತಂಡಗಳ ನಾಯಕತ್ವ ವಹಿಸಿದ್ದಾರೆ. ಇವರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು, ಸಿನೆಮಾ ನಟರು ಕೂಡ ಭರ್ಜರಿ ಬ್ಯಾಟ್ ಬೀಸಲಿದ್ದಾರೆ. ಈ ಬಾರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗರು ಭಾಗವಹಿಸುತ್ತಿರುವುದು ವಿಶೇಷ.
ಯಾವ ತಂಡದಲ್ಲಿ ಯಾರು
ಕದಂಬ ಲಯನ್ಸ್ ತಂಡದಲ್ಲಿ ಸುದೀಪ್ ಜೊತೆ ವೀರೇಂದ್ರ ಸೆಹವಾಗ್ ಆಡಲಿದ್ದಾರೆ. ಹೊಯ್ಸಳ ಈಗಲ್ಸ್ ತಂಡದಲ್ಲಿ ಉಪೇಂದ್ರ ಅವರೊಂದಿಗೆ ಹರ್ಷೆಲ್ ಗಿಬ್ಸ್ ಕಣಕ್ಕೆ ಇಳಿಯಲಿದ್ದಾರೆ. ಒಡೆಯರ್ ಚಾರ್ಜರ್ಸ್ ತಂಡದಲ್ಲಿ ನಟ ಗಣೇಶ ಅವರೊಂದಿಗೆ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ ಆಡಲಿದ್ದಾರೆ. ಗಂಗಾ ವಾರಿಯರ್ಸ್ ತಂಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಲಾನ್ಸ್ ಕ್ಲೂಸ್ನರ್ ಬ್ಯಾಟಿಂಗದ ಮಾಡಲಿದ್ದಾರೆ. ರಾಷ್ಟ್ರಕೂಟ ಪ್ಯಾಂಥರ್ಸ್ ಟೀಮ್ನಲ್ಲಿ ಓವೈ ಷಾ ಹಾಗೂ ಯಶ್ ಕ್ರೀಡಾಕೌಶಲ್ಯ ಪ್ರದರ್ಶಿಸಲಿದ್ದಾರೆ. ಇನ್ನು ವಿಜಯನಗರ ಪೇಟ್ರಿಯಾಟ್ಸ್ ತಂಡದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಅವರೊಂದಿಗೆ ಆಸೀಸ್ ಕ್ರಿಕೆಟ್ ತಂಡದ ಮಾಜಿ ವಿಕೆಟ್ಕೀಪರ್ ಆ್ಯಡಂ ಗಿಲ್ಕ್ರಿಸ್ಟ್ ಆಡಲಿದ್ದಾರೆ.
ಆರು ತಂಡಗಳ ಆಟಗಾರರ ಪ್ರಕ್ರಿಯೆಯಲ್ಲಿ ಸುದೀಪ್ ಅವರು ನನ್ನನ್ನು ತೊಡಿಕೊಳ್ಳಲು ಅವಕಾಶ ನೀಡಿದ್ದು ಹರ್ಷ ತಂದಿದೆ. ಸುದೀಪ್ ಅವರ ಶ್ರಮ ಸಾರ್ಥಕವಾಗಿದೆ ಎಂದು ವಿಶ್ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ನಾಲ್ಕನೇ ಮದುವೆಗೆ ಸಜ್ಜಾದ್ರು ನಟಿ ವನಿತಾ ವಿಜಯಕುಮಾರ್
ಸುದ್ದಿದಿನಡೆಸ್ಕ್:ಹಿರಿಯ ನಟ ವಿಜಯಕುಮಾರ್ ಮತ್ತು ಅವರ ಎರಡನೇ ಪತ್ನಿ ನಟಿ ಮಂಜುಳಾ ಅವರ ಹಿರಿಯ ಪುತ್ರಿ ವನಿತಾ ವಿಜಯಕುಮಾರ್. ತಮ್ಮ 15 ನೇ ವಯಸ್ಸಿನಲ್ಲಿಯೇ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದರು.
ಆ ಸಾಲಿನಲ್ಲಿ ನಟ ವಿಜಯ್ ಜೊತೆಗೆ ವನಿತಾ ವಿಜಯಕುಮಾರ್ 1995 ರಲ್ಲಿ ನಟಿಸಿದ್ದ ‘ಚಂದ್ರಲೇಖಾ’ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದು ಸೋಲು ಕಂಡಿತು. ಇದಾದ ಬಳಿಕ ‘ಮಾಣಿಕ್ಯಂ’ ಚಿತ್ರದಲ್ಲಿ ನಟಿಸಿದ ವನಿತಾ ವಿಜಯಕುಮಾರ್, ತೆಲುಗು ಮತ್ತು ಮಲಯಾಳಂನಲ್ಲಿ ತಲಾ ಒಂದು ಚಿತ್ರದಲ್ಲಿ ಮಾತ್ರ ನಟಿಸಿದ್ದಾರೆ.
ಮೊದಲ ಪತಿಗೆ ವಿಚ್ಛೇದನ ನೀಡಿದ ಕೆಲವೇ ತಿಂಗಳಲ್ಲಿ ಆನಂದ್ ಜಯರಾಜನ್ ಎಂಬವರನ್ನು ಎರಡನೇ ಮದುವೆಯಾದರು ವನಿತಾ ವಿಜಯಕುಮಾರ್. ಎರಡನೇ ಪತಿಯ ಮೂಲಕ ಜಯನಿತಾ ಎಂಬ ಮಗಳು ವನಿತಾಗೆ ಜನಿಸಿದಳು. ಬಳಿಕ 2012 ರಲ್ಲಿ ಅವರಿಂದಲೂ ವಿಚ್ಛೇದನ ಪಡೆದರು. ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿ.. ಅವರೇ ನಿರ್ಮಾಪಕರಾಗಿ ಕಣಕ್ಕಿಳಿದು ಮತ್ತೆ ಕಮ್ ಬ್ಯಾಕ್ ಕೊಟ್ಟ ಚಿತ್ರ ‘ಎಂಜಿಆರ್, ಶಿವಾಜಿ, ರಜನಿ, ಕಮಲ್’. ಈ ಚಿತ್ರವನ್ನು ನೃತ್ಯ ನಿರ್ದೇಶಕ ರಾಬರ್ಟ್ ಮಾಸ್ಟರ್ ನಿರ್ಮಿಸಿ ನಾಯಕನಾಗಿಯೂ ನಟಿಸಿದ್ದರು. ರಾಬರ್ಟ್ಗೆ ಜೋಡಿಯಾಗಿ ವನಿತಾ ನಟಿಸಿದ್ದರು.
ಈ ಪ್ರೇಮ ವಿವಾದ ವನಿತಾ ಅವರ ಜೀವನದಲ್ಲಿ ಅಂತ್ಯಗೊಂಡ ನಂತರ, ನಿಜ ಜೀವನದಲ್ಲಿ.. ಅವರ ಕುಟುಂಬದಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆಸ್ತಿ ವಿಚಾರವಾಗಿ ನಡೆದ ಗಲಾಟೆ ವನಿತಾ ವಿಜಯಕುಮಾರ್ ಅವರನ್ನು ಕುಟುಂಬದಿಂದ ಸಂಪೂರ್ಣವಾಗಿ ದೂರ ಮಾಡಿತು. ಒಂದು ಹಂತದಲ್ಲಿ ಆರ್ಥಿಕವಾಗಿ ಹಲವು ಕಷ್ಟಗಳನ್ನು ಅನುಭವಿಸುತ್ತಿದ್ದ ವನಿತಾ ವಿಜಯಕುಮಾರ್ ಅವರಿಗೆ ಮತ್ತೆ ಬೆಳ್ಳಿತೆರೆಗೆ ಮರಳಲು ಅವಕಾಶ ಮಾಡಿಕೊಟ್ಟಿದ್ದು, ಬಿಗ್ ಬಾಸ್ ಕಾರ್ಯಕ್ರಮ.
ಈ ಚಾನೆಲ್ ಸಂಬಂಧ ಪೀಟರ್ ಪಾಲ್ ಎಂಬುವವರೊಂದಿಗೆ ಸ್ನೇಹ ಬೆಳೆಸಿದ್ದು, ಇಬ್ಬರ ನಡುವೆ ಮೂಡಿದ ಪ್ರೇಮ 2020 ರಲ್ಲಿ ಮದುವೆಯಲ್ಲಿ ಕೊನೆಗೊಂಡಿತು. ಕ್ರಿಶ್ಚಿಯನ್ ಸಂಪ್ರದಾಯದಂತೆ ಮನೆಯಲ್ಲೇ ನಡೆದ ಈ ಮದುವೆ ಸರಿಯಾಗಿ ನೋಂದಣಿಯಾಗಲಿಲ್ಲ. ಇನ್ನು ಪೀಟರ್ ಪಾಲ್ ಅವರ ಕುಡಿತದ ಚಟದಿಂದಾಗಿ ಮೂರೇ ತಿಂಗಳಲ್ಲಿ ವನಿತಾ ವಿಜಯಕುಮಾರ್ ಅವರಿಂದ ದೂರವಾದರು. ಇದಾದ ಬಳಿಕ ತಮ್ಮ ಸಿನಿಮಾ ಜೀವನದತ್ತಲೇ ಗಮನ ಹರಿಸಿರುವ ವನಿತಾ, ಸತತವಾಗಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನಟನೆಯ ‘ಅಂಧಗನ್’ ಚಿತ್ರದಲ್ಲಿಯೂ ಅವರ ಅಭಿನಯ ಮೆಚ್ಚುಗೆ ಗಳಿಸಿತು.
ವಿವಾದಗಳಿಗೆ ಹೆಸರಾಗಿರುವ ವನಿತಾ ವಿಜಯಕುಮಾರ್, ಈಗ ನಾಲ್ಕನೇ ಮದುವೆಗೆ ಸಿದ್ಧರಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಅದೇನೆಂದರೆ ‘ಎಂಜಿಆರ್ ಶಿವಾಜಿ ರಜನಿ ಕಮಲ್’ ಚಿತ್ರದಲ್ಲಿ ನಟಿಸುವಾಗ ತಮ್ಮೊಂದಿಗೆ ಪ್ರೇಮ ಸುದ್ದಿಯಲ್ಲಿ ಸಿಲುಕಿಕೊಂಡಿದ್ದ ಬಿಗ್ ಬಾಸ್ ಸೆಲೆಬ್ರಿಟಿ ರಾಬರ್ಟ್ ಮಾಸ್ಟರ್ಗೆ.. ಬೀಚ್ನಲ್ಲಿ, ಬಿಕಿನಿ ತೊಟ್ಟು ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಇದೇ ವೇಳೆ ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 5 ರಂದು ಮಹತ್ವದ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗನ್ ಮಿಸ್ ಫೈರ್ | ಬಾಲಿವುಡ್ ನಟ ಗೋವಿಂದ ಆಸ್ಪತ್ರೆಗೆ ದಾಖಲು
ಸುದ್ದಿದಿನ,ಮುಂಬೈ:ಗನ್ ಮಿಸ್ ಫೈರ್ ಆದ ಕಾರಣ ಬಾಲಿವುಡ್ ನಟ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಆದರೆ ಗುಂಡು ಗೋವಿಂದ ಅವರ ಕಾಲಿಗೆ ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ವರದಿಯ ಪ್ರಕಾರ ತನ್ನದೇ ಗನ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ನಡೆದಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಗೋವಿಂದ ಅವರ ಬಳಿಯಿದ್ದ ಗನ್ಗೆ ಪರವಾನಗಿ ಪಡೆದುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ನಟ ಗೋವಿಂದ ಹಾಗೂ ಕುಟುಂಬಸ್ಥರು ಈ ಕುರಿತು ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಟ ದರ್ಶನ್ಗೆ ರಾಜಾತಿಥ್ಯ ; ಏಳು ಮಂದಿ ಜೈಲು ಅಧಿಕಾರಿ, ಸಿಬ್ಬಂದಿ ಅಮಾನತು
ಸುದ್ದಿದಿನಡೆಸ್ಕ್:ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಏಳುಮಂದಿ ಜೈಲು ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲರ್ ಶರಣಬಸವ ಅಮೀನಗಢ, ಸಹಾಯಕ ಜೈಲರ್ ಪುಟ್ಟಸ್ವಾಮಿ, ಜೈಲ್ ಹೆಡ್ ವಾರ್ಡರ್ಗಳಾದ ವೆಂಕಪ್ಪ, ಸಂಪತ್, ವಾರ್ಡರ್ಗಳಾದ ಬಸಪ್ಪ, ಪ್ರಭು, ಶ್ರೀಕಾಂತ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಘಟನೆ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧವೂ ಸಹ ತನಿಖೆ ನಡೆಯುತ್ತಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಇನ್ನೊಂದೆಡೆ, ಜೈಲಿನಲ್ಲಿ ನಟ ದರ್ಶನ್ ಹಾಗೂ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ನಿರ್ದೇಶಿಸಿದ್ದಾರೆ. ಅಲ್ಲದೆ, ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಜನ್ಮದಿನ ; ದೇಶದೆಲ್ಲೆಡೆ ಸ್ಮರಣೆ
-
ದಿನದ ಸುದ್ದಿ6 days ago
ಬಾಪೂಜಿ ಪ್ರಬಂಧ ಸ್ಪರ್ಧೆ ; ಸಚಿವರಿಂದ ವಿಜೇತರಿಗೆ ನಗದು ಬಹುಮಾನ ವಿತರಣೆ
-
ದಿನದ ಸುದ್ದಿ6 days ago
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಇದೇ ಆರ್ಥಿಕ ವರ್ಷದಲ್ಲಿ ಕಾಮಗಾರಿ ಪ್ರಾರಂಭ ; 2027 ಕ್ಕೆ ಜನವರಿಯೊಳಗೆ ರೈಲು ಸಂಚಾರಕ್ಕೆ ಕ್ರಮ : ಸಚಿವರಾದ ವಿ.ಸೋಮಣ್ಣ
-
ದಿನದ ಸುದ್ದಿ4 days ago
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ದಿನದ ಸುದ್ದಿ2 days ago
ಗುರುಕುಲ ಶಾಲೆಯ ಮಕ್ಕಳೊಂದಿಗೆ ಬೆರೆತ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ7 days ago
KEA | ನಾಳೆ ಪಿಎಸ್ಐ ಪರೀಕ್ಷೆ, ದಾವಣಗೆರೆಯಲ್ಲಿ ಸುಗಮ ಪರೀಕ್ಷೆ ನಡೆಸಲು ಕಟ್ಟೆಚ್ಚರ ; ಇಲ್ಲಿದೆ ಸಂಪೂರ್ಣ ಮಾಹಿತಿ, ಮಿಸ್ ಮಾಡ್ದೆ ಓದಿ
-
ದಿನದ ಸುದ್ದಿ4 days ago
ಇನ್ನು ನಾಲ್ಕು ದಿನಗಳಲ್ಲಿ ಎರಡು ಕಂತಿನ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ
-
ದಿನದ ಸುದ್ದಿ4 days ago
ಗ್ರಂಥಾಲಯ ಇಲಾಖೆಯಿಂದ 2021 ರ ಮೊದಲ ಆವೃತಿಯಲ್ಲಿ ಆಯ್ಕೆಯಾದ ಪುಸ್ತಕಗಳ ಪ್ರಕಟ