Connect with us

ದಿನದ ಸುದ್ದಿ

ಕನಯ್ಯ ಕುಮಾರ್-ರವೀಶ್ ಕುಮಾರ್-ಬ್ರಾಹ್ಮಣವಾದ

Published

on

  • ಮೂಲ ಇಂಗ್ಲಿಷ್ : ವಿಕಾಸ್ ಕುಮಾರ್ ( ದಲಿತ ಸಂಶೋಧನಾ ವಿದ್ಯಾರ್ಥಿ, ಐತಿಹಾಸಿಕ ಅಧ್ಯಯನ ಕೇಂದ್ರ. ಜೆಏನ್ ಯು),-ರಿತು (ಓಬಿಸಿ ಸಂಶೋಧನಾ ವಿದ್ಯಾರ್ಥಿ, ಇತಿಹಾಸ ವಿಭಾಗ,ದೆಹಲಿ ವಿಶ್ವವಿದ್ಯಾಲಯ)
  • ಅನುವಾದ: ಹರೀಶ್ ಎಂ ಜಿ

ಇಂದು ಪ್ರಖ್ಯಾತ ಯುವ ನಾಯಕನೆಂದು ಕರೆಸಿಕೊಳ್ಳುವ ಕನಯ್ಯ ಕುಮಾರ್ ಹೆಸರುವಾಸಿಯಾಗಿದ್ದು 9 ಫೆಬ್ರವರಿ 2016 ಜೆಏನ್ ಯುದಲ್ಲಿ ನಡೆದ ಘಟನೆಯಿಂದಾಗಿ. ಆಗ ಕನಯ್ಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ. ಆತ ಮುಗ್ಧ. ಆತನ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಈ ವಿವಾದಗಳಿಗೆ ಎಳೆದುತರಲಾಗಿದೆಯೆಂದು ಎಡಪಂಥಿಯ ಲಿಬರಲ್ ಮೀಡಿಯಾದವರು ಅನುಕಂಪ ವ್ಯಕ್ತಪಡಿಸಿದ್ದರು.

ಲೆಫ್ಟ್ ಲಿಬರಲ್ ದೃಶ್ಯ ಮಾಧ್ಯಮಗಳು ಕೊಟ್ಟ ನಿರಂತರ ಪ್ರಚಾರದಿಂದ ಕನಯ್ಯಗೆ ಭಾರತೀಯ ರಾಜಕೀಯ ರಂಗದ ಬಾಗಿಲುಗಳು ತೆರೆದುಕೊಂಡವು. ಸಾವಿರಾರು ವೇದಿಕೆಗಳಿಗೆ ಆತನನ್ನು ಆಹ್ವಾನಿಸಲಾಯಿತು. ಅತ್ಯತ್ತಮ ವಾಗ್ಮಿ, ಭವಿಷ್ಯದ ನಾಯಕನೆಂದು ಮೆರೆಸಲಾಯಿತು.

ಜೆಏನ್ ಯು ಘಟನೆಯ ನಂತರ, ವಿದ್ಯಾರ್ಥಿ ಸಂಘಟನೆಯ ನಾಯಕನಾಗಿ ಕನಯ್ಯ “ ಆಜಾದಿ” ಘೋಷಣೆಯನ್ನ ಜನಪ್ರಿಯಗೊಳಿಸಿದ. ಸಾಕಷ್ಟು ಬಿಜೆಪಿ ಮುಖಂಡರ ಜೊತೆ ಹಲವಾರು ಚರ್ಚೆಗಳಲ್ಲಿ ಭಾಗವಹಿಸಿದ. ಜೆಏನ್ ಯು ಘಟನೆಯ ಇನೊಬ್ಬ ಆರೋಪಿ ಉಮರ್ ಖಾಲಿದ್ ಕುರಿತು ಭಾರತೀಯ ಮೀಡಿಯಾ ಬೇರೆಯದೇ ಅಪ್ರೋಚ್ ಅನುಸರಿಸಿತ್ತೆನ್ನುವುದು ಇಲ್ಲಿ ಗಮನಾರ್ಹ.

ಖಾಲಿದ್ ಇಂದಿಗೂ ಬಲ ಪಂಥಿಯರ ಪ್ರಮುಖ ಟಾರ್ಗೆಟ್ ಆಗಿಯೇ ಉಳಿದಿದ್ದಾನೆ. ಮೀಡಿಯಾ ಮತ್ತು ಪ್ರಭುತ್ವ ಕನಯ್ಯ ಮತ್ತು ಉಮರ್ ನನ್ನ ನೆಡಸಿಕೊಂಡ ರೀತಿ ಹಾಗು ಅವರ ನಡುವಿನ ವ್ಯತ್ಯಾಸ, ಅವರ ವಿಭಿನ್ನ ಅಸ್ಮಿತೆಯಲ್ಲಿಯೇ ಇದೆ. ಕನಯ್ಯ ಮೇಲ್ಜಾತಿ ಹಿಂದೂ ಭೂಮಿಹಾರ ಸಮುದಾಯಕ್ಕೆ ಸೇರಿದರೆ, ಉಮರ್ ಒಬ್ಬ ಮುಸ್ಲಿಂ.

ಕನಯ್ಯ ಕುಮಾರ್ ತನ್ನ ಈ ಅಸ್ಮಿತೆಯನ್ನ ಹಲವು ಬಾರಿ ಮರೆಮಾಚಿದರು ಅಥವಾ ಅಷ್ಟಾಗಿ ಹೇಳಿಕೊಳ್ಳದಿದ್ದರು, ಬೇಗುಸರೈ ಚುನಾವಣೆ ವೇಳೆಯಲ್ಲಿ ಆತ ತನ್ನ ಮೇಲ್ಜಾತಿ ಹಿಂದೂ ಅಸ್ಮಿತೆಯೊಂದಿಗೆ ಗುರುತಿಸಿಕೊಳ್ಳುತ್ತಿದ್ದುದು ಸ್ಪಷ್ಟವಾಗಿತ್ತು.

ಬೇಗುಸರೈ ಕ್ಷೇತ್ರದ ಪ್ರಬಲ ಪ್ರತಿಸ್ಪರ್ಧಿ ಗಿರಿರಾಜ್ ಸಿಂಗ್ ಕೂಡ ಭೂಮಿಹಾರ್ ಸಮುದಾಯಕ್ಕೆ ಸೇರಿದ್ದವರೇ. ಭೂಮಿಹಾರ್ ಸಮುದಾಯದ ರಾಜಕೀಯಕ್ಕೆ ಖ್ಯಾತವಾಗಿದ್ದ ಕ್ಷೇತ್ರದಿಂದ ಅದೇ ಸಮುದಾಯಕ್ಕೆ ಸೇರಿದವರ ನಡುವೆ ಹಣಾಹಣಿ ನಡೆಯಿತು. ಸ್ಥಳ ಮತ್ತು ನೆಲ ಮನುಷ್ಯನಲ್ಲಿ ಇಷ್ಟೆಲ್ಲಾ ಬದಲಾವಣೆಯನ್ನ ತರಬಹುದು!

2015-16ರಲ್ಲಿ ಜೆಏನ್.ಯು ಅಂಬೇಡ್ಕರ್ ವಾದದ ನೆರಳಿನಲ್ಲಿತ್ತು. ಹೈದರಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆಗೆ ಶರಣಾದ ರೋಹಿತ್ ವೇಮುಲರ ಘಟನೆಯನ್ನ ರಾಜಕೀಯಕ್ಕಾಗಿ ಕನಯ್ಯ ತುಂಬಾ ಚನ್ನಾಗಿಯೇ ಬಳಸಿಕೊಂಡರು. ದಬ್ಬಾಳಿಕೆಗೆ ಒಳಪಟ್ಟ, ದಮನಿತ ಸಮಾಜದ ವಿಷಯಗಳಲ್ಲಿ ಕುಮಾರ್ ತನ್ನನ್ನ ತಾನು ತೊಡಗಿಸಿಕೊಂಡ. ಶೋಷಿತರ ಬಗ್ಗೆ ಮಾತನಾಡುವವರಲ್ಲಿ ಅಗ್ರಗಣ್ಯನಾದ.

ಮೀಡಿಯಾ ಕೂಡ ಈತನನ್ನ ಜಾತಿರಹಿತವಾಗಿಯೇ (casteless) ಬಿಂಬಿಸಿತು. ದಲಿತರ, ಶೋಷಿತರ, ದಮನಿತರ, ಹಿಂದುಳಿದ ವರ್ಗದವರ ರಾಜಕೀಯವನ್ನ, ದನಿಯನ್ನ ಮೇಲ್ಜಾತಿಯ ಕುಮಾರ್ ಸ್ವಾಧೀನಪಡಿಸಿಕೊಂಡಿದ್ದ, ತನ್ನದಾಗಿಸಿಕೊಂಡಿದ್ದ. ಹೀಗೆ ಸದಾ ವಂಚಿಸುವ ಮೇಲ್ಜಾತಿಯ ರಾಜಕೀಯ ಬಗ್ಗೆ ಯೋಚಿಸುವ ವ್ಯವಧಾನ ಭಾರತದಲ್ಲಾಗಲಿ ಜೆಏನ್ ಯುದಲ್ಲಾಗಲಿ ಇರಲಿಲ್ಲ.

ಬ್ರಹ್ಮಣವಾದಿ ಮೀಡಿಯಾಗಳು ನಿರ್ಲಜ್ಜ ರಾಜಕೀಯ
ಎಲ್ಲ ಮೇಲ್ಜಾತಿ ಮೀಡಿಯಾದವರು ಕನಯ್ಯಾನಿಗೆ ಅತಿಯಾಗಿ ಪ್ರಾಮುಖ್ಯತೆ ನೀಡಿದರೂ ಏನ್ ಡಿ ಟಿವಿಯ ಲಿಬರಲ್ ಪತ್ರಕರ್ತ ರವೀಶ್ ಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಕನಯ್ಯನಿಗೆ ವಿಶೇಷ ಗಮನ ನೀಡಿ ರಾತ್ರೋರಾತ್ರಿ ಸೆಲೆಬ್ರೆಟಿ ಮಾಡಿಬಿಟ್ಟ. ಜೆಏನ್ ಯು ವಿವಾದ ಸಮಯದಲ್ಲಿ ರವೀಶ್ ಕುಮಾರ್ ಕನಯ್ಯನಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತರೆ, 2019 ಬೇಗುಸರೈ ಚುನವಾಣೆ ವೇಳೆಗೆ ಅಲ್ಲಿಗೇ ಹೋಗಿ ಮೂರೂ ಬಾರಿ ಸುದೀರ್ಘ ಸಂದರ್ಶನ ನಡೆಸಿದ.

ಶಿಥಿಲಾವಸ್ತೆಯಲ್ಲಿದ ಆತನ ಮನೆ, ಅಂಗನವಾಡಿಯಲ್ಲಿ ಕೆಲಸ ಮಾಡುವ ಕನಯ್ಯನ ತಾಯಿ, ಗಾರ್ಡ್ ಕೆಲಸ ಮಾಡುವ ಸಹೋದರನ ಕುರಿತು ವರದಿಗಳು ಪ್ರಸಾರ ಮಾಡಿದ. ರವೀಶ್ ಕುಮಾರ ಕನಯ್ಯನನ್ನು ಕೆಳವರ್ಗದ ಬಡ ಅಭ್ಯರ್ಥಿಯೆಂದು ಬಿಂಬಿಸಿ, ಭಾರತೀಯ ಚುನಾವಣ ಇತಿಹಾಸದಲ್ಲೇ ಇದೊಂದು ವಿಶಿಷ್ಟಗಳಿಗೆಯೆಂದು ಕೊಂಡಾಡಿದ. ಹಣಬಲ, ತೋಳ್ಬಲಗಳ ಸಹಾಯವಿಲ್ಲದೆ ಸ್ಪರ್ಧಿಸುತ್ತಿರುವುದು ವಿಶೇಷವೆಂದ. ಸಮಾಜದ ಅಂಚಿನಲ್ಲಿರುವವರ ನೇತಾರನೆಂದ.

ರವೀಶ್ ಕುಮಾರ್ ಸ್ವತಃ ಬಿಹಾರಕ್ಕೆ ಸೇರಿದ ಮೇಲ್ಜಾತಿಯವನು. ಆತ ಕನಯ್ಯನನ್ನು ಸುರಕ್ಷಿತ ಜಾಗದಲ್ಲಿ ಕುಳ್ಳಿರಿಸಿದ. ಮೇಲ್ಜಾತಿಯ ಸವಲತ್ತು ಮತ್ತು ಕನಯ್ಯನ ರಾಜಕೀಯದಲ್ಲಿ ಅದರ ಪ್ರಭಾವನ್ನ ತುಂಬ ಸುಲಭವಾಗಿ ಕಡೆಗಣಿಸಿ ಮರೆಮಾಚಿದ. ಭೂಮಿಹಾರ್ ಸಮುದಾಯಕ್ಕೆ ಸೇರಿದವರಿಗೆ ಬಿಹಾರದಲ್ಲಿ ಸಿಗುವ ಸ್ಥಾನ-ಮಾನಗಳ ಕುರಿತು ಚರ್ಚಿಸಲೇ ಇಲ್ಲ ಅಥವಾ ಅದನ್ನ ನಾಜೂಕಾಗಿ ಪಕ್ಕಕ್ಕೆ ಸರಿಸಿದ.

ಐತಿಹಾಸಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೇಗುಸರೈ ಕ್ಷೇತ್ರದಲ್ಲಿ ಮೇಲ್ಜಾತಿ ಭೂಮಿಹಾರ್ ಸಮುದಾಯದವರ ಪ್ರಾಬಲ್ಯ ಕುರಿತು ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಮೇಲ್ಜಾತಿಯಲ್ಲಿ ಹುಟ್ಟಿದ್ದರಿಂದ ಕನಯ್ಯನಿಗೆ ಸಿಕ್ಕ ಲಾಭಗಳ, ಅವಕಾಶಗಳ ಬಗ್ಗೆ ರವೀಶ್ ಮಾತಾನಾಡಲಿಲ್ಲ. ಎಲ್ಲ ಲಿಬರೆಲ್ಗಳಂತೆ ಕನಯ್ಯ ಕೂಡ ಜಾತಿರಹಿತನಾದ. ಆದರೆ ಕ್ಷೇತ್ರದ ಜನ ಜಾತಿಯ ಹೊರತಾಗಿ ಕನಯ್ಯನನ್ನು ಪರಿಗಣಿಸಿದರೆ?

28 ಸೆಪ್ಟೆಂಬರ್ 2021 ರಂದು ಕನಯ್ಯ ವಿಧ್ಯುಕ್ತವಾಗಿ ಕಾಂಗ್ರೆಸ್ ಪಾರ್ಟಿ ಸೇರಿದ. ಏನ್ ಡಿಟಿವಿ ಕನಯ್ಯನನ್ನು ವಿದ್ಯಾರ್ಥಿಗಳ ನಾಯಕನೆಂದು ಕರೆದರೆ, ಜಿಗ್ನೇಶ್ ಮೆವಾನಿಯನ್ನ ಗುಜರಾತ್ನ ದಲಿತ ನಾಯಕನೆಂದು ಕರೆಯಿತು. ಈ ಚಾನಲ್ ಚುನಾಯಿತ ಎಂಎಲ್ಎ ಮೆವಾನಿಯನ್ನ ದಲಿತ ಸಮುದಾಯಕ್ಕೆ ಸೇರಿದ ಪ್ರಾಂತೀಯ ನಾಯಕನೆಂದರೆ, ಕನಯ್ಯನನ್ನು ವಿದ್ಯಾರ್ಥಿ ನಾಯಕನೆಂದು ಹೆಸರಿಸಿ ಆತನ ಮೇಲ್ಜಾತಿಯ ಅಸ್ಮಿತೆಯನ್ನೇ ಮುಚ್ಚಿಹಾಕಿ ಅತನನ್ನ ಜಾತಿರಹಿತನನ್ನಾಗಿ ಮಾಡಿಬಿಟ್ಟಿತು.

ಸಮಾರೋಪ

2019ರ ಲೋಕಸಭಾ ಚುನಾವಣೆ ಕನಯ್ಯನನ್ನ ಜನನಾಯಕ, ಸಾಮಾಜಿಕ ನ್ಯಾಯದ ಹರಿಕಾರನೆಂದು ಬಿಂಬಿಸಲಾಯಿತು. ಎಡ ಪಂಥೀಯ ಬುದ್ದಿಜೀವಿಗಳು ಹಾಗು ಪತ್ರಕರ್ತರು ಕನಯ್ಯ ಕುಮಾರ್ನಂತವರು ಭಾರತೀಯ ರಾಜಕಾರಣಕ್ಕೆ ಅತ್ಯಾವಶ್ಯಕನೆಂದು ಜನರಿಗೆ ಪದೇ ಪದೆ ಹೇಳಿದರು. ಕಮ್ಯುನಿಸ್ಟ್ ಪಾರ್ಟಿಯಿಂದ ಆತ ಚುನಾವಣ ಕಣಕ್ಕಿಳಿದರಿಂದ ಪ್ರಶಂಸಿಸಲಾಯಿತು. ಆತ ತನ್ನ ಖ್ಯಾತಿಯನ್ನ ಬಳಸಿಕೊಂಡು ಕಳೆಗುಂದಿದ ಕಮ್ಯುನಿಸ್ಟ್ ಪಾರ್ಟಿಗೆ ಹೊಸ ಚೈತನ್ಯವನ್ನೂ ತುಂಬಿದ.

ಚುನಾವಣೆ ವೇಳೆಯಲ್ಲಿ ರೋಟಿ ಹಾಗು ರೋಜ್ಗಾರ್ ಗಾಗಿ ಹೋರಾಟ ಮಾಡುತ್ತಿದೇನೆಂದು ಹೇಳಿದ. ಬೇರೆಲ್ಲ ಮೇಲ್ಜಾತಿ ನಾಯಕರಂತೆ, ಬಿಹಾರದ ಜಾತಿ ಆಧಾರಿತ ಶೋಷಣೆ ಕುರಿತು ಮಾತನಾಡಲಿಲ್ಲ. ಬಿಹಾರದಲ್ಲಿ ಬಹುಜನರ ಮೇಲೆ ಮೇಲ್ಜಾತಿ/ ಮತ್ತವನ ಜಾತಿಯವರೇ ನಡೆಸುವ ದೌರ್ಜನ್ಯಗಳ ಬಗ್ಗೆ ತನ್ನನ್ನ ತಾನು ಪ್ರಶ್ನಿಸಿಕೊಳ್ಳಲೆ ಇಲ್ಲ. ಆತನ ಚುನಾವಣ ಅಭಿಯಾನವೆಲ್ಲಾ ಮೋದಿಯವರಿಂದ ಉತ್ತರ ಕೇಳುವುದೇ ಆಗಿತ್ತು.

28 ಸೆಪ್ಟೆಂಬರಂದು ಆತ ಕಮ್ಯುನಿಸ್ಟನಾಗಿ ಉಳಿಯದೆ, ಗಾಂಧಿಯ ಅನುಯಾಯಿಯಾದ. ಕಾಂಗ್ರೆಸ್ ಸೇರ್ಪಡೆ ಸಮಯದಲ್ಲಿ ಮಾಡಿದ ಪತ್ರಿಕಾ ಗೋಷ್ಠಿಯಲ್ಲಿ ಗಾಂಧಿಯನ್ನ ಹಲವು ಬಾರಿ ಹಾಡಿ ಹೊಗಳಿದ. ಅಂಬೇಡ್ಕರ್, ಭಗತ್ ಸಿಂಗ್ ನಾಮಕಾವಸ್ತೆ ಭಾಷಣದಲ್ಲಿ ಬಂದು ಹೋದರು. ಹೀಗೆ ಕನಯ್ಯ ಸಂಪೂರ್ಣ ಗಾಂಧಿವಾದಿಯಾದ. ಕಮ್ಯುನಿಸ್ಟ್ ಪಾರ್ಟಿ ನಿಧಾನ ಗತಿಯಲ್ಲಿ ಕೆಲಸ ಮಾಡುತ್ತದೆ ಅದಕ್ಕೆ ಕಾಂಗ್ರೆಸ್ ಪಾರ್ಟಿಗೆ ಸೇರಿದೆನೆಂದ.

ಕನಯ್ಯ ಕಾಂಗ್ರೆಸ್ ಪಾರ್ಟಿಯಲ್ಲಿ ಯಾವ ಯಾವ ಬದಲಾವಣೆ ತರುತ್ತಾನೋ ಅದನ್ನ ಈಗಲೇ ಊಹಿಸುವುದು ಕಷ್ಟ. ಒಳಕಿತ್ತಾಟ, ಅಸೂಯೆಯ ಗೂಡಾಗಿರುವ ಕಾಂಗ್ರೆಸ್ ಪಾರ್ಟಿಯ ಹಿರಿಯ ನಾಯಕರು ಕನಯ್ಯ ವಿರುದ್ಧ ಅಸಮಾದಾನ ಹೊರಹಾಕಿ ಮತ್ತಷ್ಟು ಕಾಂಗ್ರೆಸ್ನ ಕುಸಿಯಲು ಕಾರಣನಾಗುವನೋ ಕಾದುನೋಡಬೇಕು.

ಕಮ್ಯುನಿಸ್ಟ್ ಪಾರ್ಟಿ ತನ್ನ ತೆಳುವಾದ ಸಿದ್ದಾಂತಗಳನ್ನ, ಸದಾ ಅಲುಗಾಡುವ ನಾಯಕತ್ವ ಬಗ್ಗೆ ಗಮನಹರಿಸಬೇಕು. ಒಂದಂತೂ ಸತ್ಯ ಕನಯ್ಯ ಕುಮಾರನ ಮೇಲ್ಜಾತಿ ಭೂಮಿಹಾರ್ ಹಿನ್ನಲೆ, ಮೀಡಿಯಾ ಬೆಂಬಲ ಆತನ ರಾಜಕೀಯ ಯಾನವನ್ನ ನಿರ್ವಿಘ್ನವಾಗಿಸಿದೆ. ಸಮಾಜದ ಅಂಚಿನಿಂದ ಬರುವವರ, ದಮನಿತರ ರಾಜಕೀಯ ಯಾನ ಎಂದಿಗೂ ಇಷ್ಟು ಸಲೀಸಾಗಿರದು.

ಕ್ಲಿಕ್ ಮಾಡಿ ಮೂಲ ಲೇಖನ ಓದಿ : Brahmanwad : Ravish Kumar and Kanhaiya Kumar

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್‌ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್‌ ಕುಣಿಗಲ್‌ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್.‌ ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್‌ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್‌ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್.‌ ಎನ್‌ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್‌ ಹಿರಿಯಡಕ  ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ  ʼಬಾವಿಗೆ ಬಿದ್ದರೂʼ, ಒಟ್ಟು ಈ  ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.

ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್‌. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.

ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.

ಕವಿತೆ ಸ್ಪರ್ಧೆ ಫಲಿತಾಂಶ

ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್‌ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.

ಫೈಜ್ನಟ್ರಾಜ್‌ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ  ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್‌ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.

ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್‌ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ  ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

Continue Reading

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending