ರಾಜಕೀಯ
ಸುದ್ದಿ ಸ್ಪೋಟ | ಕೊನೆ ಗಳಿಗೆಯಲ್ಲಿ ಕೈ ಕೊಟ್ಟ ‘ಆಪರೇಶನ್ ಕಮಲ’ : ಜಾರಕಿಹೊಳಿ ವಿರುದ್ಧ ತಿರುಗಿಬಿದ್ದ ಶಾಸಕರು..!
ಸುದ್ದಿದಿನ ಡೆಸ್ಕ್ : ರಾಜ್ಯ ರಾಜಕಾರಣವನ್ನ ತಲ್ಲಣಗೊಳಿಸೋ ಅತಿದೊಡ್ಡ ಸುದ್ದಿ. ಕುಮಾರಸ್ವಾಮಿ ಸರ್ಕಾರದ ಅಳಿವು-ಉಳಿವಿನ ಸುದ್ದಿ. ಕಳೆದ ಭಾನುವಾರ ಭೇಟಿಯಾಗಿದ್ದ ಶ್ರೀರಾಮುಲು-ಜಾರಕಿಹೊಳಿ- ಸರ್ಕಾರ ಬೀಳಿಸೋ ವಿಚಾರದ ಬಗ್ಗೆ ಇಬ್ಬರ ನಡುವೆ ಮಾತುಕತೆ- ಅವರಿಬ್ಬರೂ ಮಾಡಿದ ಪ್ಲಾನ್ ಏನು..? ಹೆಚ್ಡಿಕೆ ಸರ್ಕಾರಕ್ಕೆ ಏನಾಗಲಿದೆ..? ಇದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ..
ಕೊನೆ ಗಳಿಗೆಯಲ್ಲಿ ಕೈಕೊಟ್ಟ ಆಪರೇಷನ್ ಕಮಲ
ಸದ್ಯಕ್ಕೆ ಕುಮಾರಸ್ವಾಮಿ ಸರ್ಕಾರ ಸೇಫ್.. ಸೇಫ್.. ಸೇಫ್.. ಬಂಡಾಯ ಎದ್ದಿದ್ದ ಕಾಂಗ್ರೆಸ್ ಶಾಸಕರೆಲ್ಲಾ ಕೂಲ್..ಕೂಲ್..ಕೂಲ್… ಆಗಿದ್ದಾರೆ.ತೋಂಟದಾರ್ಯ ಶ್ರೀಗಳ ಅಂತ್ಯಕ್ರಿಯೆ ದಿನ ರಾಮುಲು ಜತೆ ಜಾರಕಿಹೊಳಿ ಮಾತುಕತೆ ಯಾವುದೇ ಕಾರಣಕ್ಕೂ ನಾವು ಬಿಜೆಪಿಗೆ ಬರಲ್ಲ ಎಂದ ರಮೇಶ್ ಜಾರಕಿಹೊಳಿ.. ಸರ್ಕಾರ ಬೀಳಿಸೋ ನಂಬರ್ ನನ್ನ ಬಳಿ ಇಲ್ಲ, ಐದಾರು ಶಾಸಕರು ಸರ್ಕಾರ ಕೆಡವಲು ಆಗಲ್ಲ- ನಮಗೆ ಇನ್ನೊಂದು ಮಂತ್ರಿ ಸ್ಥಾನ ಕೊಡ್ತಾರೆ, ಆಪರೇಷನ್ ಕಮಲ ಇಲ್ಲಿಗೇ ನಿಲ್ಲಿಸೋಣ ಜಾರಕಿಹೊಳಿ ಹೇಳಿಕೆಯಿಂದ ಫುಲ್ ಶಾಕ್ ಆದ ಶ್ರೀರಾಮುಲು & ಜನಾರ್ದನ ರೆಡ್ಡಿ
ನಿಮ್ಮನ್ನ ಡಿಸಿಎಂ ಮಾಡುತ್ತೇವೆ.. ದಯವಿಟ್ಟು ಕೈ ಬಿಡಬೇಡಿ ಎಂದರು ಶ್ರೀರಾಮುಲು. ಈ ಹಿನ್ನಲೆಯಲ್ಲಿ ನಾಳೆಯಿಂದಲೇ ಬಳ್ಳಾರಿ ಉಪ ಚುನಾವಣಾ ಸಮರದ ಪ್ರಚಾರದಲ್ಲಿ ರಮೇಶ್ ಜಾರಕಿಹೊಳಿ ಭಾಗಿಯಾಗಲಿದ್ದಾರೆ.
ಆಪರೇಷನ್ ಕಮಲ ಠುಸ್ ಆಗ್ತಿದ್ದಂತೆ ಕಾಂಗ್ರೆಸ್ ಅತೃಪ್ತರಿಂದ ಪಕ್ಷಕ್ಕೆ ಮತ್ತೆ ನಿಷ್ಠೆ ರಮೇಶ್ ಜಾರಕಿಹೊಳಿಯನ್ನ ಹಿಗ್ಗಾ-ಮುಗ್ಗಾ ಜಾಡಿಸಿದ ಕಾಂಗ್ರೆಸ್ ಶಾಸಕರು, ನಮ್ಮನ್ನ ಚೆನ್ನೈಗೆ ಬರೋಕೆ ಹೇಳಿ ಮರ್ಯಾದೆ ಕಳೆದ್ರಿ ಎಂದ ಎಂಟಿಬಿ ಹಾಗೂ ಪಕ್ಷದ ಸಿಪಾಯಿ ಆಗಿದ್ದ ನನ್ನನ್ನ ಯಾಮಾರಿಸಿದ್ರಿ ಎಂದ್ರು ಸುಧಾಕರ್. ನಾನು ಇನ್ಮುಂದೆ ಜಾರಕಿಹೊಳಿಯನ್ನ ನಂಬಲ್ಲ ಎಂದ ಬಿ.ಸಿ.ಪಾಟೀಲ್. ನಿಮ್ಮ ಸಹವಾಸ ಬೇಡವೇ ಬೇಡ ಎಂದ ಶಾಸಕ ಶಿವರಾಮ್ ಹೆಬ್ಬಾರ್ . ಸರಿಯಾಗಿ ಪ್ಲಾನ್ ಮಾಡದೇ ನಮ್ಮ ಮರ್ಯಾದೆ ಕಳೆದ್ರಿ ಎಂದ ಅತೃಪ್ತ ಶಾಸಕರು ನೀವ್ ಏನ್ ಬೇಕಾದ್ರೂ ಮಾಡಿಕೊಳ್ಳಿ ನಾವು ದುಡ್ಡು ವಾಪಸ್ ಕೊಡಲ್ಲ ಎಂದ ಶಾಸಕರು ಜಾರಕಿಹೊಳಿ ವಿರುದ್ಧ ಅತೃಪ್ತರ ಆಕ್ರೋಶವ್ಯಕ್ತ ಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಕೈಗಾರಿಕೆ, ಐಟಿಬಿಟಿ ಹಬ್ ಆಗದಿರುವುದು ದುರದೃಷ್ಟಕರ : ಜಿ. ಬಿ. ವಿನಯ್ ಕುಮಾರ್ ವಿಷಾದ
ಸುದ್ದಿದಿನ,ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯು ನಿಜವಾಗಿಯೂ ಇಂಡಸ್ಟ್ರಿಯಲ್, ಐಟಿಬಿಟಿ ಹಬ್ ಇಷ್ಟರೊಳಗೆ ಆಗಬೇಕಿತ್ತು. ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಖ್ಯಾತಿ ಹೊಂದಿದ್ದ ಇಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳಿಲ್ಲ, ಐಟಿಬಿಟಿ ಇಲ್ಲದಿರುವುದು ದುರದೃಷ್ಟಕರ. ವಿಶ್ವದರ್ಜೆಯ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಬರಲು ಬಿಡುತ್ತಿಲ್ಲ. ಹಾಗಾಗಿ, ಬೆಳೆಯಲು ಅವಕಾಶ ಇಲ್ಲದಂತಾಗಿದೆ ಎಂದು ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ವಿಷಾದ ವ್ಯಕ್ತಪಡಿಸಿದರು.
ನಗರದ ಯುಬಿಡಿಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ “ಎಲೆಕ್ಟ್ರಾನಿಕ್ ಅಂಡ್ ಇನ್ಸ್ಟ್ರುಮೆಂಟೇಶನ್” ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಕಾಟನ್ ಮಿಲ್ ಗಳು, ಹತ್ತಿ ಮಿಲ್ ಗಳು, ರೈಸ್ ಮಿಲ್ ಗಳು ಹೆಚ್ಚಾಗಿದ್ದವು. ಆದ್ರೆ, ಇಂದು ಕಡಿಮೆಯಾಗಿದೆ. ಈಗ ಕೆಲ ಸಕ್ಕರೆ ಕಾರ್ಖಾನೆಗಳು, ಹೈಸ್ಕೂಲ್ ಗಳು, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆ ಮತ್ತು ಕಾಲೇಜುಗಳು, ಆಸ್ಪತ್ರೆಗಳು ಹೆಚ್ಚಾಗಿವೆ. ಎಲೆಕ್ಟ್ರಾನಿಕ್ ವಿಭಾಗದ ಯಾವ ಕೈಗಾರಿಕೆಗಳೂ ಇಲ್ಲ. ಐಟಿಬಿಟಿ ಬೆಳೆದೇ ಇಲ್ಲ. ಇದು ಆಗದಿರುವುದಕ್ಕೆ ಕಾರಣವೇನು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕಾದ ತುರ್ತು ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ವಿಶ್ವದಲ್ಲಿನ ಉತ್ಕೃಷ್ಟ ಗುಣಮಟ್ಟದ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಪ್ರಯತ್ನ ಪಡಿ. ಒಂದು ವೇಳೆ ಆಗದಿದ್ದರೆ ಇಲ್ಲಿಯೇ ಸಿಗುವ ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಕೊಂಡು ಕಷ್ಟಪಟ್ಟು ಓದಿ. ತಂತ್ರಜ್ಞಾನ, ಆಗುತ್ತಿರುವ ಬದಲಾವಣೆ, ಬರುತ್ತಿರುವ ಹೊಸ ಹೊಸ ಟೆಕ್ನಾಲಜಿ ಬಗ್ಗೆ ಜ್ಞಾನ ಪಡೆದುಕೊಳ್ಳಿ. ಆಗದು ಎಂದು ಕುಳಿತರೆ ಏನೂ ಆಗುವುದಿಲ್ಲ. ನಮ್ಮ ಕೈಯಲ್ಲಿ ಸಾಧ್ಯವೆಂದುಕೊಂಡು ಮುನ್ನಡೆದರೆ ಖಂಡಿತವಾಗಿಯೂ ಆಗಿಯೇ ಆಗುತ್ತದೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಮುನ್ನುಗ್ಗಿ ಎಂದು ಕರೆ ನೀಡಿದರು.
ಅತ್ಯುನ್ನತ ಸಂಸ್ಥೆಗಳಲ್ಲಿ ಪ್ರತಿಭೆ ಅನಾವರಣಗೊಳಿಸಲು, ಹೊಸದಾಗಿ ಆವಿಷ್ಕರಿಸಲು, ಜ್ಞಾನ ಹೆಚ್ಚಿಸಿಕೊಳ್ಳಲು ಹೆಚ್ಚಿನ ಅವಕಾಶ ಸಿಗುತ್ತವೆ. ಹಾಗಾಗಿ, ಇಲ್ಲಿ ವಿದ್ಯಾರ್ಥಿಗಳು ಸೇರಬೇಕೆಂಬ ಹೆಬ್ಬಯಕೆ ಹೊಂದಿರುತ್ತಾರೆ. ಪೋಷಕರೂ ಸಹ ಮಕ್ಕಳನ್ನು ಸೇರಿಸಲು ಆಸಕ್ತಿ ತೋರುತ್ತಾರೆ. ಹೊಸ ಹೊಸ ಸಂಶೋಧನೆ ಜೊತೆಗೆ ಪಠ್ಯೇತರ ಚಟುವಟಿಕೆಗಳು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ ಅವಕಾಶಗಳು ನಿಮ್ಮನ್ನೇ ಹುಡುಕಿಕೊಂಡು ಬರುತ್ತವೆ ಎಂದು ವಿನಯ್ ಕುಮಾರ್ ಅವರು ಕಿವಿಮಾತು ಹೇಳಿದರು.
ನಾನು ಪಿಡಿಒ ಅಧಿಕಾರಿಯಾಗಿ ಇದುವರೆಗೆ ಮುಂದುವರಿದಿದ್ದರೆ ಹೆಚ್ಚಿನದ್ದು ಎಂದರೆ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುತ್ತಿದ್ದೆ. ನಾನು ಐಎಎಸ್ ಇನ್ಸೈಟ್ಸ್ ಸಂಸ್ಥೆ ಶುರು ಮಾಡಿದ ಬಳಿಕ ಕರ್ನಾಟಕದ ಅರ್ಧದಷ್ಟು ಜಿಲ್ಲೆಗಳಲ್ಲಿ ನನ್ನ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ. ಹದಿನಾರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಡಿಸಿಪಿ, ಎಎಸ್ಪಿ, ತಹಶೀಲ್ದಾರ್, ಎಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಇಷ್ಟಪಟ್ಟು, ಶ್ರದ್ಧೆ, ಪ್ರಾಮಾಣಿಕತೆ, ನಿರಂತರ ಪರಿಶ್ರಮದಿಂದ ಸಾಧ್ಯವಾಯಿತು. ಯುವಪೀಳಿಗೆ ದೊಡ್ಡ ದೊಡ್ಡ ಕನಸು ಕಾಣಬೇಕು. ಆಗ ಕನಸು ನನಸಾಗುತ್ತದೆ. ಯಾವುದೇ ಜಿಲ್ಲೆಗಳಲ್ಲಿದ್ದರೂ ನಾನು ಯಾರಿಗೂ ಸಚಿವರಿಗೆ ಹಣ ಕೊಟ್ಟು ಹುದ್ದೆ ಕೊಡಿಸಬೇಕಿಲ್ಲ. ಇನ್ಸೈಟ್ಸ್ ಸಂಸ್ಥೆಯಲ್ಲಿ ಓದಿದವರು ಅವರ ಪರಿಶ್ರಮದಿಂದಲೇ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಎಂಜಿನಿಯರಿಂಗ್ ಓದಿದ ಮೇಲೆ ಕೆಲಸ ಸಿಗುತ್ತೋ ಇಲ್ಲವೋ, ಅಂಕ ಎಷ್ಟು ಬರುತ್ತದೆಯೋ ಏನೋ, ಕ್ಯಾಂಪಸ್ ನಲ್ಲಿ ಉದ್ಯೋಗ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿಯೇ ಇರಬೇಕಾಗುತ್ತದೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇರುತ್ತದೆಯೋ ಆ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ಕೌಶಲ್ಯ, ಸತತ ಪರಿಶ್ರಮ, ತಿಳಿದುಕೊಳ್ಳುವ ಆಸಕ್ತಿ, ಹುಡುಕುವ ತುಡಿತ, ಉತ್ತಮ ವ್ಯಕ್ತಿತ್ವ ಸೇರಿದಂತೆ ಅತ್ಯುತ್ತಮ ಗುಣಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತ ಹುದ್ದೆಗೇರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಯುಬಿಡಿಟಿ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಪಿ. ನಾಗರಾಜಪ್ಪ, ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವೇಳೆ ಜಿ. ಬಿ. ವಿನಯ್ ಕುಮಾರ್ ಅವರು ಕಾಲೇಜಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನನ್ನ ಬೆಸ್ಟ್ ಫ್ರೆಂಡ್ಸ್ ಬುಕ್ಸ್: ಜಿಬಿವಿ
ನನಗೆ ಪುಸ್ತಕ ಓದುವ ಹವ್ಯಾಸ ಮೊದಲಿನಿಂದಲೂ ಇತ್ತು. ನಾನು ಬೆಳೆದಿದ್ದು ಬಡತನದಲ್ಲಿ. ನಮ್ಮದು ಸಾಮಾನ್ಯ ಕುಟುಂಬ. ಪುಸ್ತಕ ಖರೀದಿಸಲು ತೊಂದರೆ ಇಲ್ಲ. ಪುಸ್ತಕಗಳು ನನ್ನ ಒಳ್ಳೆಯ ಗೆಳೆಯ. ಬೆಳಿಗ್ಗೆ ಮತ್ತು ರಾತ್ರಿಯ ವೇಳೆಯಲ್ಲಿ ಪುಸ್ತಕ ಹೆಚ್ಚಾಗಿ ಓದಿದ್ದರಿಂದ ನನಗೆ ಆತ್ಮವಿಶ್ವಾಸ, ಜ್ಞಾನ, ಪರಿಪಕ್ವತೆಗೆ ಅನುಕೂಲವಾಯಿತು. ಇಷ್ಟೊಂದು ಸಾಧನೆ ಮಾಡಲು ಪ್ರೇರಣೆ ನೀಡಿದ್ದೇ ಬುಕ್ಸ್ ಗಳು ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದರು.
ನಾನು ಕಳೆದ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ ಆಗಿತ್ತು. ಇಂಥ ತೀರ್ಮಾನಕ್ಕೆ ಬರುವುದು ಅಷ್ಟು ಸುಲಭವಲ್ಲ. ಇದರಿಂದ ಸಾಕಷ್ಟು ನಾನು ಕಲಿತಿದ್ದೇನೆ. ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಾಗಿ ಪುಸ್ತಕ ಓದಲೇಬೇಕು. ಕೇವಲ ಓದಿನಲ್ಲೇ ಮುಳುಗದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡರೆ ಅಕಾಡೆಮಿಕ್ ವಿಚಾರದಲ್ಲಿ ಯಶಸ್ಸು ಗಳಿಸಬಹುದು. ನಮ್ಮಲ್ಲಿ ಯಾವುದೇ ಕಾರಣಕ್ಕೂ ಅನಿಶ್ಚಿತತೆ ಇರಬಾರದು ಎಂದು ಕಿವಿಮಾತು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಧಿಕ ಸಾಲ ಸೌಲಭ್ಯ ; ಬ್ಯಾಂಕ್ ಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ
ಸುದ್ದಿದಿನಡೆಸ್ಕ್:ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ- ಎಂ.ಎಸ್.ಎಂ.ಇ ಗಳಿಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳು 5 ಲಕ್ಷ 75 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಾಲ ಸೌಲಭ್ಯ ನೀಡಬೇಕೆಂಬ ಗುರಿ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳು ಎಂ.ಎಸ್.ಎಂ.ಇ ಗಳಿಗೆ ಈ ಪ್ರಮಾಣದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಿಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಿನ್ನೆ ಎಸ್ಐಡಿಬಿಐ- ಸಿಡ್ಬಿ ಏರ್ಪಡಿಸಿದ್ದ ರಾಷ್ಟ್ರೀಯ ಎಂ.ಎಸ್.ಎಂ.ಇ ಕ್ಲಸ್ಟರ್ ಔಟ್ರೀಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ವಲಯದ ಬ್ಯಾಂಕ್ಗಳು ಎಂ.ಎಸ್.ಎಂ.ಇ ಗಳ ಬೆಳವಣಿಗೆಗೆ ಕೇವಲ ಶೇಕಡ 9.2 ರಷ್ಟು ಸಾಲಸೌಲಭ್ಯ ಕಲ್ಪಿಸುತ್ತಿವೆ. ಆದರೆ, ಖಾಸಗಿ ಬ್ಯಾಂಕ್ಗಳು ಶೇಕಡ 25 ರಷ್ಟು ಹಾಗೂ ಎನ್ಬಿಎಫ್ಸಿ ಗಳು ಶೇಕಡ 39 ರಷ್ಟು ಸಾಲ ಸೌಲಭ್ಯ ನೀಡುತ್ತಿವೆ ಎಂದು ವಿವರಿಸಿದರು.
ಮುದ್ರಾ ಯೋಜನೆಯಡಿ ಈ ಹಿಂದೆ ನೀಡಲಾಗುತ್ತಿದ್ದ ಸಾಲದ ಮೊತ್ತ 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಹೊಸ ವಿಭಾಗ ’ತರುಣ್ ಪ್ಲಸ್’ ಅಡಿಯಲ್ಲಿ ಸಾಲ ಪಡೆದ ಉದ್ಯಮದಾರರು ಸಾಲ ಮರುಪಾವತಿ ಮಾಡಿದಲ್ಲಿ ಅವರಿಗೆ 20 ಲಕ್ಷ ರೂಪಾಯಿವರೆಗೂ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಪಿಎಂ ಮುದ್ರಾ ಯೋಜನೆ ; 20 ಲಕ್ಷ ರೂವರೆಗೆ ಸಾಲ ಸೌಲಭ್ಯ ಹೆಚ್ಚಳ
ಸುದ್ದಿದಿನಡೆಸ್ಕ್:ಪಿಎಂ ಮುದ್ರಾ ಯೋಜನೆ’ಯಡಿ ಉದ್ಯಮದಾರರಿಗೆ ಈ ಹಿಂದೆ ನೀಡಲಾಗುತ್ತಿದ್ದ ಸಾಲದ ಮೊತ್ತ 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೊಸ ವಿಭಾಗ ’ತರುಣ್ ಪ್ಲಸ್’ ಅಡಿಯಲ್ಲಿ ಸಾಲ ಪಡೆದ ಉದ್ಯಮದಾರರು ಸಾಲ ಮರುಪಾವತಿ ಮಾಡಿದಲ್ಲಿ ಅವರಿಗೆ 20 ಲಕ್ಷ ರೂಪಾಯಿವರೆಗೂ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ನಿನ್ನೆ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಅಲ್ಲಂ ಪ್ರಶಾಂತ ಅಂಗಲಾಚಿ ಬೇಡಿದ್ರೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ
-
ದಿನದ ಸುದ್ದಿ3 days ago
ಅತ್ಮಕತೆ | ನೀರು ಸಾಬರೂ – ಎಸಿ ಮದನಗೋಪಾಲರೂ..
-
ದಿನದ ಸುದ್ದಿ3 days ago
ಪಿಎಂ ಮುದ್ರಾ ಯೋಜನೆ ; 20 ಲಕ್ಷ ರೂವರೆಗೆ ಸಾಲ ಸೌಲಭ್ಯ ಹೆಚ್ಚಳ
-
ದಿನದ ಸುದ್ದಿ3 days ago
ಅಧಿಕ ಸಾಲ ಸೌಲಭ್ಯ ; ಬ್ಯಾಂಕ್ ಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ
-
ದಿನದ ಸುದ್ದಿ4 days ago
ದಾವಣಗೆರೆ | ಹಾಸ್ಟೆಲ್ ಎಲ್ಲಾ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಮ್ಯಾಪ್ ಮಾಡಲು ಸೂಚನೆ : ಸಿಇಓ ಸುರೇಶ್ ಬಿ ಇಟ್ನಾಳ್
-
ದಿನದ ಸುದ್ದಿ3 days ago
ಕವಿತೆ | ಮುರುಕುಂಬಿ
-
ದಿನದ ಸುದ್ದಿ3 days ago
ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಕೈಗಾರಿಕೆ, ಐಟಿಬಿಟಿ ಹಬ್ ಆಗದಿರುವುದು ದುರದೃಷ್ಟಕರ : ಜಿ. ಬಿ. ವಿನಯ್ ಕುಮಾರ್ ವಿಷಾದ
-
ದಿನದ ಸುದ್ದಿ2 days ago
ದಾವಣಗೆರೆ | ಪರಿಶಿಷ್ಟ ಜಾತಿ, ಪಂಗಡದ ರೈತರಿಂದ ಅರ್ಜಿ ಆಹ್ವಾನ