ಲೈಫ್ ಸ್ಟೈಲ್
ಮೇಡ್ ಇನ್ ಚೈನಾ
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಉಂಟಾದಾಗ ಅಥವಾ ಭಾರತದಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಅಥವಾ ಅಜರ್ ಮಸೂದ್ ವಿಷಯ ಬಂದಾಗ ಅಥವಾ ಚೀನಾದ ಗಡಿಯಲ್ಲಿ ಘರ್ಷಣೆ ಉಂಟಾದಲೆಲ್ಲ ಎಲ್ಲರು ನಮ್ಮ ದೇಶದಲ್ಲಿ ಒಂದೇ ಮಾತುಗಳನ್ನ ನಾವು ಕೇಳಬಹುದು, ಅದು ಏನೆಂದರೆ ಚೀನಿ ವಸ್ತುಗಳನ್ನ ಬಹಿಷ್ಕರಿಸಿ ಯನ್ನುವುದು. ಆದರೆ ಒಂದು ಸರಿ ನಿಮ್ಮೆದೆ ಮೇಲೆ ಕೈಯಿಟ್ಟುಕೊಂಡು ಹೇಳಿ, ಚೀನಾದ ಎಲ್ಲ ವಸ್ತುಗಳನ್ನು ಬಹಿಷ್ಕರಿಸಿ ಬಿಡೋದಕ್ಕೆ ಸಾಧ್ಯವೇ?
ನಾವು ಬಳಕೆ ಮಾಡುವುದು ಎಲ್ಲವೂ ಮೇಡ್ ಇನ್ ಚೀನಾ ಇರುತ್ತವೆ. ನಮ್ಮ ಕಂಪ್ಯೂಟರ್ಗಳು ಮೇಡ್ ಇನ್ ಚೀನಾ, ನಮ್ಮ ಸೆಲ್ಫೋನ್ಗಳು ಮೇಡ್ ಇನ್ ಚೀನಾ ಕಡೆಗೆ ಸ್ವದೇಶಿ ಕಂಪನಿ ಅಂತ ಹೇಳಿಕೊಳ್ಳುವಷ್ಟು ಎಲೆಕ್ಟ್ರಾನಿಕ್ಸ್ ಕಂಪನಿಗಳು ತಮ್ಮ ವಸ್ತುಗಳನ್ನು ತಯಾರುಮಾಡುವುದು ಚಿನಾದಲ್ಲಿಯೇ. ಇನ್ನು ಅಮೇರಿಕಾದ ಐಫೋನ್ ಐಪ್ಯಾಡ್ ಎಲ್ಲವೂ ತಯಾರಗೋದು ಚಿನದಲ್ಲಿಯೇ! ಅವುಗಳ ಮೇಲೆ ಇರೋದು ಕೂಡ ಮೇಡ್ ಇನ್ ಚೀನಾ ಲೇಬಲ್.
ಚೀನಾ ಉತ್ಪಾದನಾ ಕ್ಷೇತ್ರದಲ್ಲಿ ಅತ್ಯಂತ ವ್ಯಾಪಿಸಿಕೊಂಡಿದಕ್ಕೆ ಕಾರಣವೇನು? ನಾವು ಬಳಸುವ ಆಹಾರ ಪದಾರ್ಥಗಳನ್ನು ಬಿಟ್ರೆ ಭಾರತದ ಹೋಟೆಲುಗಳಲ್ಲಿ ನಮ್ಮ ಫುಟ್ ಪಾತ್ ಗಳಲ್ಲಿ ನಾವು ತಿನ್ನುವ ಚಿನಿಸ್ ಪುಡ್ನ ಹೊರತುಪಡಿಸಿದರೆ ಉಳಿದೆಲ್ಲ ಎಲೆಕ್ಟ್ರೋನಿಕ್ ಐಟೆಮ್ಸ ಚೀನಾದಲ್ಲಿ ತಯಾರಾಗುವುದಕ್ಕೆ ಕಾರಣಗಳೇನು?
ಪಟಾಕಿಗಳಿಂದ ಹಿಡಿದು ರೋಬೋಗಳವರೆಗೆ ಕ್ಯಾಮರಾಗಳಿಂದ ಹಿಡಿದು ಜಗತ್ತಿನ ಅತಿ ದೊಡ್ಡ ಮಿಷನರಿಗಳ ವರೆಗೆ ಪ್ರತಿಯೊಂದು ಚೀನಾ ತಯಾರಿಸುವುದಕ್ಕೆ ಸಾಧ್ಯವಾಗ್ತಿರುವುದು ಹೇಗೆ? ನಾವು ಬಳಸುವ ಬಹುತೇಕ ವಸ್ತುಗಳ ಮೇಲೆ ಮೇಡ್ ಇನ್ ಚೀನಾ ಅಂತಯಾಕಿರುತ್ತದೆ? ಈ ಪ್ರಶ್ನೆಗೆ ಸಾಮಾನ್ಯವಾಗಿ ನಮಗೆ ಸಿಗುವ ಉತ್ತರ ಏನು ಅಂದ್ರೆ ಚೀನಾದಲ್ಲಿ ಲೇಬರ್ ಚೀಪು ಉತ್ಪಾದನಾ ವೆಚ್ಚ ಕಡಿಮೆ ಅನ್ನೋ ಕಾರಣಕ್ಕೆ ಎಲ್ಲ ಕಂಪನಿಗಳು ಎಲ್ಲವನ್ನು ಅಲ್ಲಿಯೇ ತಯಾರಿಸುತ್ತಾರೆ ಅನ್ನೋದು ನಿಜಾನ?
ಇವತ್ತು ಇಡೀ ಜಗತ್ತನ್ನು ಆವರಿಸುವುದಕ್ಕೆ ಇದೊಂದೇ ಕಾರಣವೇ? ಚೀನಾ ಅನ್ನುವುದು ಅಪ್ಪಟ ಕಮ್ಯುನಿಸ್ಟ್ ರಾಷ್ಟ್ರ, ಅಲ್ಲಿ ಲೇಬರ್ ಕಡಿಮೆ ವಿರುವುದು ಸಾಧ್ಯವಿಲ್ಲ, ಹಾಗಾದ್ರೆ ಭಾರತದಲ್ಲಿನ ಕಮ್ಯುನಿಸ್ಟ್ ಆಡಳಿತದ ರಾಜ್ಯಗಳಲ್ಲಿ ಕೂಡ ಹೀಗೆ ಇರಬೇಕಿತ್ತಲ್ಲವೇ?
ನಿಮಗೆ ನೆನಪಿರಲಿ ಈಗಿನ ಚೀನಾ, ಮಾವೋ ಪ್ರೆಸಿಡೆಂಟ್ ಆಗಿ ಇದ್ದ ಚಿನಗಿಂತ ಬಹಳ ವ್ಯತ್ಯಾಸವಿದೆ. ಮಾವೋ ಕಾಲದಲ್ಲಿ ಉತ್ಪಾದನೆ, ವ್ಯಾಪಾರ ಪ್ರತಿಯೊಂದನ್ನು ಸರ್ಕಾರವೇ ನೋಡಿಕೊಳ್ಳುತ್ತಿತ್ತು. ಚೀನಿ ಪ್ರಜೆಗಳಿಗೆ ತಮಗಾಗಿ ಏನನ್ನೂ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲ ಆದರೆ 1976ರಲ್ಲಿ ಮಾವೋ ವಿಧಿವಶರಾದ ನಂತರ ಚೀನಾದ ಆಡಳಿತ ಹಾಗೂ ಆರ್ಥಿಕತೆಯಲ್ಲಿ ಸಾಕಷ್ಟು ಬದಲಾವಣೆಗಳಾದವು ಕೈಗಾರಿಕೀಕರಣಕ್ಕೆ ಆದ್ಯತೆ ಕೊಡಲಾಯಿತು.
ಚೀನಾದಲ್ಲಿ ಫ್ಯಾಕ್ಟರಿಗಳು ಶುರುವಾದವು. ಕಾಲಕ್ರಮೇಣ ಚೀನಾದಲ್ಲಿ ಜಾಗ ಇದ್ದಲೆಲ್ಲ ಫ್ಯಾಕ್ಟರಿಗಳು ತುಂಬಿಕೊಂಡವು. ಈಗ ಚೀನಾ ವಿಶ್ವ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ರಫ್ತು ದೇಶ. ಅಮೇರಿಕಾ ಕೂಡ ಒಂದೇ ವರ್ಷದಲ್ಲಿ 220 ಬಿಲಿಯನ್ ಡಾಲರ್ ಗಳಷ್ಟು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಪ್ರತಿವರ್ಷ ಭಾರತ ಮಾರುಕಟ್ಟೆಗೆ 57 ಬಿಲಿಯನ್ ಡಾಲರ್ಗಳಷ್ಟು ವಸ್ತುಗಳು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ.
ಚೀನಾ ಇವತ್ತು ನಾನಾ ರಾಷ್ಟ್ರಗಳ ಜನರ ಹಣ ಮತ್ತು ಉದ್ಯೋಗ ಕಸಿದುಕೊಂಡು ಒಂದು ದೊಡ್ಡ ದೈತ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ. ಆದರೆ ಚೀನಾ ಅನ್ನೋ ದೇಶ ಹೇಗೆ ರಫ್ತು ಮಾರುಕಟ್ಟೆಯಲ್ಲಿ ದೈತ್ಯನಾಗಿ ಬೆಳೆಯೋದಕ್ಕೆ ಸಾಧ್ಯವಾಯಿತು, ಈ ಪ್ರಶ್ನೆಗೆ ಉತ್ತರ ಹುಡುಕಬೇಕು ಅಂದರೆ ಕಳೆದ 40 ವರ್ಷಗಳಲ್ಲಿ ಆದೇಶ ಗಳಿಸಿಕೊಂಡಿರುವ ಶಕ್ತಿ ಎಂಥದ್ದು ಅನ್ನೋದು ನಮಗೆ ಅರ್ಥ ಆಗಬೇಕು.
ಚೀನಾದಲ್ಲಿಲೇಬರ್ ಖರ್ಚು ಕಡಿಮೆ ಹಾಗಾಗಿ ಎಲ್ಲ ಕಂಪನಿಗಳು ತಮ್ಮ ವಸ್ತುಗಳನ್ನು ಚೀನಾದಲ್ಲಿ ತಯಾರಿಸುತ್ತಾರೆ ಎನ್ನುವುದಾದರೆ, ಕಡಿಮೆ ಬೆಲೆ ಕೆಲಸದವರು ಸಿಗುವ ಸಾಕಷ್ಟು ದೇಶಗಳು ಜಗತ್ತಲ್ಲಿ ಇಲ್ಲವೇ ಅಲ್ಲಿಗೆ ಯಾಕೆ ಕಂಪನಿಗಳು ಹೋಗ್ತಿಲ್ಲ? ಚೀನಾ ಕೈಗಾರಿಕರಣವನ್ನು ತೆರೆಯುತ್ತಿದಂತಲೆ ಅಲ್ಲಿ ಕೆಲಸಗಾರರ ಕ್ಷಮತೆಯನ್ನು ಹೆಚ್ಚಿಸುವ ಕೆಲಸಕ್ಕೆ ಕೈಹಾಕಿತು.
ಇವತ್ತು ಒಬ್ಬ ಅಮೆರಿಕನ್ ಒಂದು ವಾರದಲ್ಲಿ ಮಾಡಬಹುದಾದ ಕೆಲಸವನ್ನು ಚೀನಿಯರು ಎರಡು ದಿನಗಳಲ್ಲಿ ಮುಗಿಸುತ್ತಾರೆ.
ಉದಾಹರಣೆಗೆ, ಐಫೋನ್ ತನ್ನ ಸ್ಕ್ರೀನನ್ನು ಬದಲಾವಣೆ ಮಾಡಿ ಒಂದೇ ತಿಂಗಳಲ್ಲಿ ಪ್ರಾಡಕ್ಟನ್ನು ಮಾರುಕಟ್ಟೆಗೆ ಬರಬೇಕು ಅಂದುಕೊಂಡಾಗ ಚೀನಾದ ತಯಾರಿಕಾ ಕಂಪನಿ ಒಂದೇ ದನದಲ್ಲಿ 8000 ಕಾರ್ಮಿಕರನ್ನು ಒಗ್ಗೂಡಿಸಿ 10000ಐಫೋನು ಗಳಂತೆ ಸತತ 96 ಗಂಟೆಗಳ ಕಾಲ ಕೆಲಸ ಮಾಡುತ್ತಿತ್ತು. ಇದು ಚೀನಾದ ತಾಕತ್ತು. ಇಲ್ಲಿ ನುರಿತ ಕೆಲಸಗಾರರು ಸಿಗುತ್ತಾರೆ ಮತ್ತು ಅವರು ಮೈ ಬಗ್ಗಿಸಿ ದುಡಿತಾರೆ. ಇನ್ನು ಚೀನಾದಲ್ಲಿ ಎಲ್ಲ ರೀತಿಯ ಕಾರ್ಖಾನೆಗಳು ಇವೆ.
ಅಲ್ಲಿ ಕನೆಕ್ಟಿವಿಟಿ ಅನ್ನೋದು ಸಮಸ್ಯೆನೆಯಿಲ್ಲ. ಅಷ್ಟು ದೊಡ್ಡ ದೇಶದಲ್ಲಿ ಉತ್ತಮವಾದ ರೈಲು ಸಂಪರ್ಕ ಹಾಗೂ ಅತೀ ವೇಗದ ರೈಲುಗಳು ಇರುವುದರಿಂದ ದೇಶದ ನಾನಾ ಭಾಗಗಳನ್ನು ಏರ್ಪೋರ್ಟ್ ಮತ್ತು ಪೋರ್ಟ್ಗಳ ಜೊತೆಗೆ ಜೋಡಿಸೋದು ಸುಲಭವಾಗಿದೆ. ಸಾವಿರಾರು ಕಾರ್ಖಾನೆಗಳು ಸಮುದ್ರದ ತೀರದಲ್ಲಿಯೇ ಇರುವುದರಿಂದ ತಯಾರಿಸಿದ ವಸ್ತುಗಳನ್ನ ಆದಷ್ಟು ಬೇಗ ಅನ್ಯ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಕಾರ್ಮಿಕರ ಮುಷ್ಕರ ಕೂಡ ಇಲ್ಲ. ಟ್ರಾನ್ಸ್ಪೋರ್ಟೇಷನ್ ಕೂಡ ಅತಿ ಸುಲಭವಾಗಿದೆ.
ಯಾವುದಕ್ಕೂ ಅಲ್ಲಿ ಕೊರತೆ ಇಲ್ಲ. ಇದೆರೆಲ್ಲರ ಜೊತೆ ಅಲ್ಲಿ ಪೊಲಿಟಿಕಲ್ ಸ್ಟೇಬಿಲಿಟಿ ಇದೆ. ಈ ಎಲ್ಲ ಕಾರಣಗಳಿಂದ ಚೀನಾ ಆರ್ಥಿಕವಾಗಿ ಗಟ್ಟಿಗೊಳ್ತಿರೋದೆ ಅಲ್ಲ ವಿಶ್ವ ಮಾರುಕಟ್ಟೆಗಳನ್ನ ಆಳುವುದಕ್ಕೆ ಆ ದೇಶಕ್ಕೆ ಸಾಧ್ಯವಾಗಿದೆ. ಹಾಗಂತ ಆ ಡ್ರ್ಯಾಗನ್ ದೇಶ ಮುಂದೇನು ಹೀಗೆ ಇರುತ್ತಾ, ಅದು ಆ ದೇವರಿಗೆ ಗೊತ್ತು. ಯಾಕೆ ಅಂದ್ರೆ ಅತಿಯಾದ ಕೈಗಾರಿಕರಣ ಚೀನಾದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಿದೆ.
ಮುಂದೆ 10 ವರ್ಷದ ನಂತರ ನೀವು ಚೀನಾದಲ್ಲಿ ವಾಸಮಾಡ್ತೀನಿ ಅಂದ್ರು, ಅಲ್ಲಿ ನಿಮಿಷಕ್ಕೆ 5 ಸಿಗರೇಟ್ ಸೇದಿದಷ್ಟು ಹೊಗೆ ನಿಮ್ಮ ಶತೀರವನ್ನು ಸೇರಿಕೊಳ್ಳುತ್ತದೆ. ವಿಶ್ವದ ನಾನಾ ದೇಶಗಳ ಮೇಲಿನ ಮಾರುಕಟ್ಟೆ ಅವಲಂಬನೆ ಕೂಡ ಮುಂದೊಂದಿನ ಚೀನಾದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ. ಅದು ಪಾಕಿಸ್ತಾನ ಸೇರಿದಂತೆ ಹಲವು ಏಷ್ಯಾಯದ ದೇಶಗಳ ಮೇಲೆ ತನ್ನ ಬಂಡವಾಳ ಹೂಡುವ ಮೂಲಕ ತನ್ನ ಜನರಿಗೆ ಹೊಸ ಕೆಲಸ ಗಳನ್ನು ಕೊಡುವ ಪ್ರಯತ್ನದಲ್ಲಿದೆ.
ಒಂದು ಬಲಿಷ್ಠ ನಾಯಕತ್ವ ಮತ್ತು ಸ್ಥಿರ ಸರ್ಕಾರ ಹಾಗೂ ಅಲ್ಲಿನ ನಾಯಕರ ದೂರಲೋಚನೆ ಹಾಗೂ ಇಚ್ಚಾಶಕ್ತಿಗಳು ಇವತ್ತು ಚೀನಾದ ವಸ್ತುಗಳ ಮೇಲೆ ಇಡೀ ಜಗತ್ತು ಇವತ್ತು ಆಧಾರ ಪಡುವ ಹಾಗೆ ಮಾಡಿದೆ ಎಂದರೆ ಅದು ಖಂಡಿತ ಅತಿಶಯೋಕ್ತಿ ಅಲ್ಲ.
ನಮ್ಮ ಭಾರತದ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಚೀನಾ ನ ಸಡ್ಡು ಹೊಡಿಯೋದಕ್ಕೆ ಆಗ್ಲಿ ಹತ್ತಿರ ಹೋಗಕ್ಕೆ ಕೂಡ ಅದು ಎಷ್ಟು ವರ್ಷಗಳು ಬೇಕಾಗಬಹುದೇನೋ
ಇದೇ ಜಗತ್ತಿನ ಬಹುತೇಕ ವಸ್ತುಗಳು ಮೇಡ್ ಇನ್ ಚೀನಾ ಇರುವ ಕಾರಣಗಳು. ಇದನ್ನು ನಿಮ್ಮವರೊಂದಿಗೆ ಶೇರ್ ಮಾಡಿ.
– ಮನನ್ ಜೈನ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ1 day agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ1 day agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ2 days agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
-
ದಿನದ ಸುದ್ದಿ2 days agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ2 hours agoಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’

