Connect with us

ರಾಜಕೀಯ

ಸ್ವಾತಂತ್ರ್ಯದ ಮೇಲೆ ಪ್ರಹಾರಗಳು- ಈ ಆಗಸ್ಟ್ 15 ರಂದುಮೋದಿ-ಷಾ ಜೋಡಿಯ ಕಾಶ್ಮೀರ ಅತ್ಯಾಚಾರದ ಸಂದೇಶ

Published

on

  • ಮೋದಿ ಸರಕಾರ ಭಾರತದೊಂದಿಗೆ “ಜಮ್ಮು ಮತ್ತು ಕಾಶ್ಮೀರವನ್ನು ಸಮಗ್ರೀಕರಿಸಿರುವುದು” ತಮ್ಮ ಮಹಾಸಾಧನೆ ಎಂದು ಡಂಗುರ ಹೊಡೆಯುತ್ತಿದ್ದರೆ, ಅತ್ತ ಕಾಶ್ಮೀರದ ಜನತೆ, ಭಾರತದ ಇತರರೊಂದಿಗೆ ಹೋಲಿಸಿದರೆ ಸ್ವಾತಂತ್ರ್ಯದ ಅರ್ಥವಾದರೂ ಏನು ಎಂದು ಆಶ್ಚರ್ಯ ಪಡುವಂತಹ ವೈದೃಶ್ಯ ಕಣ್ಣಿಗೆ ರಾಚುತ್ತಿದೆ. ಸ್ವಾತಂತ್ರ್ಯ ಮತ್ತು ಗಣತಂತ್ರ ಸಂವಿಧಾನದೊಂದಿಗೆ ಬಂದಿರುವ ಸ್ವಾತಂತ್ರ್ಯಗಳು ಅಪಾಯದಲ್ಲಿವೆ. ಇದೀಗ ಮೋದಿ-ಷಾ ದ್ವಯರು ನಡೆಸಿರುವ ಕಾಶ್ಮೀರ ಅತ್ಯಾಚಾರ ನೀಡುತ್ತಿರುವ ಸಂದೇಶ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ಈ ಕ್ರೂರ ಪ್ರಹಾರವನ್ನು ಉಪೇಕ್ಷಿಸಿದರೆ ಅದರಿಂದ ದೇಶದ ಇತರ ಭಾಗಗಳಿಗೂ ಕೇಡು ಸಂಭವಿಸುತ್ತದೆ. ಸರ್ವಾಧಿಕಾರಶಾಹಿ ಆಳ್ವಿಕೆ ಯಾರನ್ನೂ ಬಿಡುವುದಿಲ್ಲ. ಇಂತಹ ಒಂದು ಸನ್ನಿವೇಶದಲ್ಲಿ, ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು, ಹೆಚ್ಚೆಚ್ಚು ಜನಗಳನ್ನು ಅಣಿನೆರೆಸುವ ಮೂಲಕ ಮತ್ತು ಐಕ್ಯ ಜನಾಂದೋಲನಗಳ ಮೂಲಕ ಸಾಧಿಸಬೇಕಾಗಿದೆ. ಆಗಸ್ಟ್ 15, ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಗ್ಗೂಡಿಸಿ ಈ ಸಾವು-ಬದುಕಿನ ಸಾಹಸಕಾರ್ಯವನ್ನು ಕೈಗೆತ್ತಿಕೊಳ್ಳುವ ದೃಢನಿರ್ಧಾರ ಮಾಡುವ ದಿನವಾಗಿದೆ.

ವರ್ಷ ಸ್ವಾತಂತ್ರ್ಯ ದಿನಾಚರಣೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಚಿಂದಿ ಮಾಡಿರುವ, ಬೃಹತ್ ಪ್ರಮಾಣದಲ್ಲಿ ಕಣಿವೆಯ ಜನಗಳಿಗೆ ಬೀಗ ಜಡಿದಿರುವ ಮಬ್ಬಿನಲ್ಲಿ ನಡೆಯುತ್ತಿದೆ. ಕೆಂಪುಕೋಟೆಯಲ್ಲಿ ಈ ಆಗಸ್ಟ್ 15ರಂದು ನರೇಂದ್ರ ಮೋದಿ ತ್ರಿವರ್ಣ ಧ್ವಜವನ್ನು ಆರೋಹಿಸುವಾಗ, ಅತ್ತ ಲಕ್ಷಾಂತರ ಕಾಶ್ಮೀರಿಗಳು ಸತತವಾಗಿ ಹನ್ನೊಂದನೇ ದಿನ ತಮ್ಮ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸಂಚರಿಸುವ, ತಮಗೆ ಬೇಕಾದವರನ್ನು ಸಂಪರ್ಕಿಸುವ, ಬದುಕು ನಡೆಸಲು ಕೆಲಸ ಮಾಡುವ, ಶಾಲೆಗೆ ಹೋಗುವ, ಆರೋಗ್ಯಪಾಲನೆ ಮತ್ತು ಔಷಧಿಗಳನ್ನು ಪಡೆಯುವ ಅವರ ಹಕ್ಕನ್ನು ಕಳಚಿ ಹಾಕಲಾಗಿದೆ. ಇವೆಲ್ಲವೂ ಸ್ವತಂತ್ರ ಭಾರತದ ನಾಗರಿಕರಾಗಿ ಇರುವ ಮೂಲಭೂತ ಹಕ್ಕುಗಳು.

ನೂರಾರು ಕಾಶ್ಮೀರಿ ರಾಜಕಾರಣಿಗಳು ಮತ್ತು ಕಾರ್ಯಕರ್ತರುಗಳು ಜೈಲುಗಳಲ್ಲಿದ್ದಾರೆ ಅಥವ ಗುಪ್ತಸ್ಥಳಗಳಲ್ಲಿ ಸ್ಥಾನಬದ್ಧತೆಯಲ್ಲಿದ್ದಾರೆ. ಹಲವರನ್ನು ಹೊರಗೊಯ್ದು ಆಗ್ರಾ, ಬರೇಲಿ, ಲಕ್ನೌ ಮುಂತಾದೆಡೆಗಳಲ್ಲಿ ಜೈಲುಗಳಲ್ಲಿ ಇಡಲಾಗಿದೆ. ಅವರೆಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ, ಅವರ ಕುಟುಂಬದವರು, ಸಂಬಂಧಿಕರು ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲವಾಗಿದೆ. ಮೋದಿ ಸರಕಾರ ಭಾರತದೊಂದಿಗೆ “ಜಮ್ಮು ಮತ್ತು ಕಾಶ್ಮೀರವನ್ನು ಸಮಗ್ರೀಕರಿಸಿರುವುದು” ತಮ್ಮ ಮಹಾಸಾಧನೆ ಎಂದು ಡಂಗುರ ಹೊಡೆಯುತ್ತಿದ್ದರೆ, ಅತ್ತ ಕಾಶ್ಮೀರದ ಜನತೆ, ಭಾರತದ ಇತರರೊಂದಿಗೆ ಹೋಲಿಸಿದರೆ ಸ್ವಾತಂತ್ರ್ಯದ ಅರ್ಥವಾದರೂ ಏನು ಎಂದು ಆಶ್ಚರ್ಯ ಪಡುವಂತಹ ವೈದೃಶ್ಯ ಕಣ್ಣಿಗೆ ರಾಚುತ್ತಿದೆ.

ಕಾಶ್ಮೀರಿಗಳಿಗೆ ಎಂತಹ ಅವಮಾನ ಮಾಡಲಾಗಿದೆ ಎಂಬುದು ಅವರನ್ನು ರಾಜಕೀಯ ಹಕ್ಕುಗಳನ್ನು ಕಸಿದುಕೊಂಡಿರುವ ರೀತಿಯಲ್ಲಿ ವ್ಯಕ್ತವಾಗುತ್ತದೆ. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸಿದ ನಂತರ, ಹೊಸ ವಿಧಾನಸಭೆ ಪುದುಚೇರಿಯ ಮಾದರಿಯಲ್ಲಿ ಇರುತ್ತದೆ, ಉಪರಾಜ್ಯಪಾಲರೆಂಬವರು ಹೇಳಿದ್ದೇ ಆಳ್ವಿಕೆಯಾಗುತ್ತದೆ. ಈ ಮೊಟಕುಗೊಳಿಸಿದ ವಿಧಾನ ಸಭೆಯ ಸಂಯೋಜನೆ ಕೂಡ ಬದಲಾಗಲಿದೆ. ಜಮ್ಮ ಮತ್ತು ಕಾಶ್ಮೀರ ಮರುಸಂಘಟನೆಯ ಮಸೂದೆ ಮತಕ್ಷೇತ್ರಗಳ ಮರುವಿಂಗಡಣೆಗೆ ಅವಕಾಶ ಕಲ್ಪಿಸಿದೆ. ಇದನ್ನು ಚುನಾವಣಾ ಆಯೋಗ ಮಾಡುತ್ತದೆ.

ಹಿಂದಿನ ವಿಧಾನಸಭೆಯ ಬಲ ಜಮ್ಮು ಮತ್ತು ಕಾಶ್ಮೀರ ವಿಭಾಗಗಳಿಂದ 83ಆಗಿತ್ತು. ಅದನ್ನು90ಕ್ಕೆ ಏರಿಸಲಾಗುತ್ತದೆ. ಈ ಮರುವಿಂಗಡಣೆಯ ಕಸರತ್ತಿನಲ್ಲಿ ಜಮ್ಮು ಭಾಗದ ಸೀಟುಗಳ ಸಂಖ್ಯೆ ಏರಲಿದೆ. ಹಿಂದಿನ ವಿಧಾನಸಭೆಯಲ್ಲಿ ಅದು37 ಇತ್ತು. ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸೀಟುಗಳನ್ನು ಪತ್ರ್ಯೇಕಿಸಿದಾಗ, ಕಾಶ್ಮೀರ ಕಣಿವೆಗೆ ಉಳಿಯುವ ಸೀಟುಗಳ ಸಂಖ್ಯೆಯಲ್ಲಿ (ಇದುವರೆಗೆ 46) ಕಡಿತವಾಗುತ್ತದೆ. ಈ ಮೂಲಕ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತದ ಆಶ್ವಾಸನೆ ಸಿಗುವಂತಾಗುತ್ತದೆ. ಉಪರಾಜ್ಯಪಾಲರು ಇಬ್ಬರು ಮಹಿಳಾ ಸದಸ್ಯರನ್ನು ನೇಮಿಸಲು ಅವಕಾಶ ಇರುವುದು ಅದನ್ನು ಇನ್ನಷ್ಟು ಖಾತ್ರಿಗೊಳಿಸುತ್ತದೆ.

ಇನ್ನೊಂದು ಕುಟಿಲ ನಡೆಯೆಂದರೆ, ಕಾಶ್ಮೀರ ಕಣಿವೆಯಲ್ಲಿ ಜನಸಂಖ್ಯಾ ಸಂಯೋಜನೆಯಲ್ಲಿ ಒಂದು ಬದಲಾವಣೆ ತರುವುದು. ಆರ್ಥಿಕ ಅಭಿವೃದ್ಧಿ ಮತ್ತು ಹೂಡಿಕೆಯ ಹೆಸರಲ್ಲಿ, ಜಮ್ಮು ಮತ್ತು ಕಾಶ್ಮೀರದ ಹೊರಗೆ ಇರುವ ಜನಗಳು ಕಣಿವೆ ಪ್ರದೇಶಕ್ಕೆ ಬಂದು ಭೂಮಿ ಖರೀದಿಸಲು ಮತ್ತು ನೆಲೆಸಲು ಉತ್ತೇಜನೆ ನೀಡಲಾಗುವುದು. ಅದಾಗಲೇ 2016ರಲ್ಲಿ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಾಜಿ ಯೋಧರನ್ನು ವಸತಿ ಕಾಲೊನಿಗಳಲ್ಲಿ ನೆಲೆಗೊಳಿಸುವ ಒಂದು ಪ್ರಸ್ತಾವ ಇತ್ತು. ಅದಕ್ಕೆ ಭೂಮಿ ನೀಡುವ ಮಾತೂ ಇತ್ತು. ಕಾಶ್ಮೀರದ ಜನಸಂಖ್ಯಾ ಸಂಯೋಜನೆಯನ್ನು ಬದಲಾಯಿಸುವುದು ಅಥವ ಕಾಶ್ಮೀರಿ ಜನಗಳ ಅಸ್ಮಿತೆಯನ್ನು ದುರ್ಬಲಗೊಳಿಸುವುದು ಇದರ ಗುರಿ.

ಬಹಳ ಕಾಲದಿಂದ ಕಾಶ್ಮೀರಿ ಜನಗಳ ನಾಗರಿಕ ಸ್ವಾತಂತ್ರ್ಯಗಳ ದಮನ ಮತ್ತು ಪ್ರಭುತ್ವದ ದಬ್ಬಾಳಿಕೆ ರೂಢಿಯಾಗಿ ಬಿಟ್ಟಿರುವ ದೇಶದ ಇತರ ಭಾಗಗಳ ಜನರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಸನ್ನಿವೇಶ ಹದಗೆಡುತ್ತಿರುವ ಸನ್ನಿವೇಶದ ಮತ್ತೊಂದು ಅಧ್ಯಾಯ ಮಾತ್ರ, ಅದನ್ನು ಕೇಂದ್ರ ಸರಕಾರ ದೃಢವಾಗಿ ನಿಭಾಯಿಸುತ್ತಿದೆ ಎಂದು ಕಾಣಬಹುದು.

ಆದರೆ ಹೀಗೆ ಭಾವಿಸುವುದು ಒಂದು ಪ್ರಮಾದವಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ಈ ಕ್ರೂರ ಪ್ರಹಾರವನ್ನು ಉಪೇಕ್ಷಿಸಿದರೆ ಅದರಿಂದ ದೇಶದ ಇತರ ಭಾಗಗಳಿಗೂ ಕೇಡು ಸಂಭವಿಸುತ್ತದೆ. ಸರ್ವಾಧಿಕಾರಶಾಹಿ ಆಳ್ವಿಕೆ ಯಾರನ್ನೂ ಬಿಡುವುದಿಲ್ಲ-ಭಿನ್ನ ಅಭಿಪ್ರಾಯ ಇರುವವರನ್ನು, ಪ್ರತಿಪಕ್ಷಗಳಿಲ್ಲಿ ಇರುವವರನ್ನು, ಮತ್ತು ತಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವ ಯಾರನ್ನೂ. ಸ್ವಾತಂತ್ರ್ಯ ಮತ್ತು ಗಣತಂತ್ರ ಸಂವಿಧಾನದೊಂದಿಗೆ ಬಂದಿರುವ ಸ್ವಾತಂತ್ರ್ಯಗಳು ಅಪಾಯದಲ್ಲಿವೆ. ಇದೀಗ ಮೊದಿ-ಷಾ ದ್ವಯರು ನಡೆಸಿರುವ ಕಾಶ್ಮೀರ ಅತ್ಯಾಚಾರ ನೀಡುತ್ತಿರುವ ಸಂದೇಶ.

ಸ್ವಾತಂತ್ರ್ಯ ದಿನದಂದು, ಕಳೆದ ಐದು ವರ್ಷಗಳ ಸರ್ವಾಧಿಕಾರಶಾಹಿ ಆಳ್ವಿಕೆ ಸಂವಿಧಾನದ ಅಡಿಯಲ್ಲಿರುವ ಎಲ್ಲ ಸಂಸ್ಥೆಗಳನ್ನು ಶಿಥಿಲಗೊಳಿಸುವ ದಾರಿಯಲ್ಲಿ ಸಾಗಿದೆ ಎಂಬುದನ್ನು ವೀಕ್ಷಿಸುವುದು ಕೂಡ ಉಚಿತವಾಗಿದೆ. ಇದರ ಒಂದು ಸಣ್ಣ ಉದಾಹರಣೆಯೆಂದರೆ, ಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಸ್ವಾತಂತ್ರ್ಯಗಳ ಮತ್ತು ಮೂಲಭೂತ ಹಕ್ಕುಗಳ ವ್ಯಾಪಕ ಪ್ರಮಾಣದ ಉಲ್ಲಂಘನೆಗಳನ್ನು ನಿಲ್ಲಿಸಲು ಮಧ್ಯಪ್ರವೇಶಿಸಲು ನಿರಾಕರಿಸಿರುವುದು.

ಇಂತಹ ಒಂದು ಸನ್ನಿವೇಶದಲ್ಲಿ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಜೀವನಾಧಾರದ ಹಕ್ಕೂ ಸೇರಿದಂತೆ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು, ಹೆಚ್ಚೆಚ್ಚು ಜನಗಳನ್ನು ಅಣಿನೆರೆಸುವ ಮೂಲಕ ಮತ್ತು ಐಕ್ಯ ಜನಾಂದೋಲನಗಳ ಮೂಲಕ ಸಾಧಿಸಬೇಕಾಗಿದೆ. ಆಗಸ್ಟ್ 15, ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಗ್ಗೂಡಿಸಿ ಈ ಸಾವು-ಬದುಕಿನ ಸಾಹಸಕಾರ್ಯವನ್ನು ಕೈಗೆತ್ತಿಕೊಳುವ್ಳ ದೃಢನಿರ್ಧಾರ ಮಾಡುವ ದಿನವಾಗಿದೆ.

ಪ್ರಕಾಶ ಕಾರಟ್

  • ಕೃಪೆ : ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ | ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ

Published

on

ಸುದ್ದಿದಿನ,ದಾವಣಗೆರೆ : ವಿಧಾನ ಪರಿಷತ್‍ನ ಆಗ್ನೆಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಜೂನ್ 3 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾರರಾಗಿರುವ ಶಿಕ್ಷಕರಿಗೆ ಹಾಗೂ ಪದವೀಧರರಿಗೆ ಮತದಾನ ಮಾಡಲು ವಿಶೇಷ ಸಾಂದರ್ಭಿಕ ರಜೆಯನ್ನು ನೀಡಲಾಗಿರುತ್ತದೆ.

ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಸೀಮಿತವಾದಂತೆ ಚಲಾಯಿಸಲಿರುವ ಮತದಾರರಿಗೆ ಮತದಾನದ ದಿನವಾದ ಜೂನ್ 3 ರ ಸೋಮವಾರದಂದು ವಿಶೇಷ ಸಾಂದರ್ಭಿಕ ರಜೆ ಯನ್ನು ಮಂಜೂರು ಮಾಡಲು ಆದೇಶಿಸಲಾಗಿದೆ.

ಮತದಾನ ಮಾಡುವ ಸಮಯದಲ್ಲಿ ಮತದಾರರನ್ನು ಗುರುತಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ ಮುಖ್ಯ ದಾಖಲಾತಿಯಾಗಿ ಹಾಜರು ಪಡಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಗುರುತಿನ ಚೀಟಿ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾರತ ಚುನಾವಣಾ ಆಯೋಗವು ನಿರ್ಧರಿಸಿರುವ ಪೂರಕ ದಾಖಲಾತಿಗಳ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ.

ಪೂರಕ ದಾಖಲಾತಿ

ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್‍ಕಾರ್ಡ್, ಇಂಡಿಯಾನ್ ಪಾಸ್ ಪೋರ್ಟ್, ಕೇಂದ್ರ, ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳು ಅಥವಾ ಇತರ ಖಾಸಗಿ ಕೈಗಾರಿಕಾ ಮನೆಗಳಿಂದ ಅದರ ಉದ್ಯೋಗಿಗಳಿಗೆ ನೀಡಲಾದ ಸೇವಾ ಗುರುತಿನ ಕಾರ್ಡ್, ಸಂಸದರು, ಶಾಸಕರು, ಎಂಎಲ್‍ಸಿಗಳಿಗೆ ಅಧಿಕೃತ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳಿಂದ ನೀಡಲಾದ ಸೇವಾ ಗುರುತಿನ ಕಾರ್ಡ್‍ಗಳು, ಇದರಲ್ಲಿ ಶಿಕ್ಷಕರು, ಪದವೀಧರರ ಕ್ಷೇತ್ರದ ಮತದಾರರನ್ನು ನೇಮಿಸಿಕೊಳ್ಳಬಹುದು, ವಿಶ್ವವಿದ್ಯಾಲಯವು ನೀಡಿದ ಪದವಿ, ಡಿಪ್ಲೋಮಾ ಮೂಲ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಿದ ದೈಹಿಕನ್ಯೂನತೆಯ ಪ್ರಮಾಣ ಪತ್ರ, ವಿಶಿಷ್ಟ ಅಂಗವೈಕಲ್ಯ ಕಾರ್ಡ್(UDID) ಮೂಲಕ ಮತದಾನ ಮಾಡಬಹುದು ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮತದಾನದಲ್ಲಿ ಮಹಿಳೆಯರದೇ ಮೇಲುಗೈ

Published

on

ಸುದ್ದಿದಿನ ಡೆಸ್ಕ್ : ಲೋಕಸಭೆಯ ಆರನೇ ಹಂತದ ಚುನಾವಣೆಯಲ್ಲಿ ಪುರುಷರಿಗಿಂತ ಶೇ.3ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದೇ ತಿಂಗಳ 25 ರಂದು ನಡೆದ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಮತದಾರರ ಅಂಕಿ-ಅಂಶವನ್ನು ಬಿಡುಗಡೆಗೊಳಿಸಿರುವ ಚುನಾವಣಾ ಆಯೋಗ, ಶೇಕಡ 61.95 ಅರ್ಹ ಪುರುಷ ಮತದಾರರಿಗೆ ಹೋಲಿಸಿದರೆ. ಶೇಕಡ 64.95 ಅರ್ಹ ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ, ಇದಲ್ಲದೆ, ಶೇಕಡ 18.67 ರಷ್ಟು ತೃತೀಯಲಿಂಗಿಗಳ ಮತದಾನದಲ್ಲಿ ಪಾಲ್ಗೊಂಡರು ಎಂದು ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243|

Continue Reading

ದಿನದ ಸುದ್ದಿ

ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಮಹಿಳೆ ಸಾವು

Published

on

ಸುದ್ದಿದಿನ ಡೆಸ್ಕ್ : ಇತ್ತೀಚೆಗಷ್ಟೇ ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.

ಬಿಎಸ್ ವೈ ಅವರ ಬಳಿ ಸಹಾಯ ಕೋರಲು ಹೋದಾಗ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಅನ್ನು ಮಹಿಳೆ ದಾಖಲಿಸಿದ್ದರು.

ದೂರುದಾರೆಯು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರನ್ನು ಹುಳಿಮಾವು ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಆದರೆ ನಿನ್ನೆಯಷ್ಟೇ ಅವರು ಚೆನ್ನಾಗಿದ್ದರು ಎಂದು ಮೂಲಗಳು ಹೇಳುತ್ತಿವೆ. ವೈದ್ಯರ ವರದಿಯನ್ನು ಪೊಲೀಸರು ಎದುರು ನೋಡುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending