ಸಿನಿ ಸುದ್ದಿ
ನಟಿ ಶ್ರೀರೆಡ್ಡಿ ಮಂಚಕ್ಕೆ ಬರಲು ಆಕೆಯೇ ತಯಾರಿದ್ದಾಳೆ | ದೂರು ದಾಖಲು
ಸುದ್ದಿದಿನ ಡೆಸ್ಕ್ | ತೆಲುಗು ನಟಿ ಶ್ರೀ ರೆಡ್ಡಿ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಸದಾ ಸುದ್ದಿ ಮಾಡುತ್ತಾ ತಮಗಾದ ಅನ್ಯಾಯಕ್ಕೆ ಮಾಧ್ಯಮಗಳ ಮುಂದೆ ಆಗಾಗ ಕಾಣಿಸಿಕೊಳ್ಳುತ್ತಾರೆ. ಆದರೆ ಈಗ ಶ್ರೀ ರೆಡ್ಡಿ ಸುದ್ದಿಯಲ್ಲಿರುವುದು ಆರೋಪಿರೂಪದಲ್ಲಿ.
ಅಂದಹಾಗೆ ಈ ನಟಿಯ ಒಂದು ಚಿಕ್ಕ ಫ್ಲಾಶ್ ಬ್ಯಾಕ್ ನೋಡೋದಾದ್ರೆ, ಶ್ರೀ ರೆಡ್ಡಿಯು ಎ.ಆರ್.ಮುರಗಡೋಸ್, ಲಾರೆನ್ಸ್ ರಾಘವೇಂದ್ರ ಮತ್ತು ನಟ ಶ್ರೀಕಾಂತ್ ಸೇರಿದಂತೆ ಹಲವು ನಿರ್ಮಾಪಕರು ಸಿನೆಮಾಗಳಲ್ಲಿ ಅವಕಾಶ ಕೊಡುವುದಾಗಿ ಹೇಳಿ ನನ್ನನ್ನು ದೈಹಿಹವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು ಈ ನಟಿ.
ಆದರೆ ನಟಿಯ ಈ ಆರೋಪಗಳೆಲ್ಲವೂ ಸುಳ್ಳು ಎಂದು ಆಕ್ರೋಶವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ‘ವರಾಹಿ’ ಅವರು, “ಯಾವುದೇ ಸಾಕ್ಷಾಧಾರವಿಲ್ಲದೆ ನಟಿ ಶ್ರೀರೆಡ್ಡಿ ಆರೋಪಮಾಡಿದ್ದಾಳೆ, ಆಕೆಯ ಮುಖ್ಯ ಉದ್ದೇಶ ಏನೆಂದರೆ ಜನಪ್ರಿಯ ನಟರುಗಳ ಹೆಸರು ಕೆಡಿಸುವಂತೆ ತೋರುತ್ತದೆ”.
ಕೇವಲ ಹಣ ಮಾಡುವದಕ್ಕಾಗಿಯೇ ಈಕೆ ಉದ್ದೇಶಪೂರ್ವಕವಾಗಿ ಬೆದರಿಕೆಯಾಕಲು ಬಯಸುತ್ತಾಳೆ. ಹಾಗೇ ಆಕೆ ಹಲವರೊಂದಿಗೆ ಮಂಚಕ್ಕೆ ಬರಲು ಒಪ್ಪಿದ್ದಾಳೆ.
ಈಕೆಯ ಈ ನಡತೆ ವೇಶ್ಯಾವಾಟಿಕೆಗೆ ಕಾರಣವಾಗಿದೆ. ಕೂಡಲೇ ಆಕೆಯನ್ನು ಬಂಧಿಸ ಬೇಕು ಎಂದು ಆರೋಪಿಸಿ ನಟಿ ಶ್ರೀರೆಡ್ಡಿ ವಿರುದ್ಧ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986815401
ದಿನದ ಸುದ್ದಿ
ಶಾಲೆಯ ಮಕ್ಕಳಿಗೆ ಸಂವಿಧಾನದ ಪಾಠ ಮಾಡಿದ ಟಗರು ಡಾಲಿ : ವೈರಲ್ ಆಯ್ತು ವಿಡಿಯೋ..!

ಸುದ್ದಿದಿನ ಡೆಸ್ಕ್ : ನಟ ಧನಂಜಯ ಕೇವಲ ನಟನಲ್ಲ ಅವರಲ್ಲೊಬ್ಬ ಸಾಮಾಜಿಕ ಕಳಕಳಿಯ ಹೋರಾಟಗಾರನೂ ಇದ್ದಾನೆ. ಪ್ರಸ್ತುತ ವಿದ್ಯಾಮಾಗಳಿಗೆ ತೀಕ್ಷ್ಣವಾಗಿ ಅವರು ಪ್ರತಿಕ್ರಿಯೆಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಈ ಹಿಂದೆ ಚಕ್ರವರ್ತಿ ಸೂಲೆಬೇಲಿಗೆ ‘ಮೊದಲು ಮಾನವನಾಗು’ ಎಂದು ಕೌಂಟರ್ ಕೂಡಾ ಕೊಟ್ಟಿದ್ದರು. ವಚನ ಸಾಹಿತ್ಯದ ಓದುಗ ಪ್ರೇಮಿಯಾಗಿರುವ ಧನಂಜಯ ಸಾಮಾಜಿಕ ಅಸಮಾನತೆಯ ಕುರಿತಾಗಿ ಕೆಲವು ಸಂದರ್ಶನಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕ್ಕೊಂಡಿದ್ದಾರೆ ಕೂಡ.
ಜನವರಿ 26 ಮಂಗಳವಾರ ತಮ್ಮ ‘ ರತ್ನನ್ ಪರ್ಚಂಚ’ ಸಿನೆಮಾದ ಚಿತ್ರೀಕರಣದಲ್ಲಿ ಹಳ್ಳಿಯೊಂದರಲ್ಲಿ ತೊಡಗಿದ್ದ ಅವರನ್ನು ಹಳ್ಳಿಯ ಶಾಲೆಯ ಅಥಿತಿಯಾಗಿ ಶಿಕ್ಷಕರು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತಾಗಿ ಹಲವು ವಿಷಯಗಳನ್ನು ಮಕ್ಕಳ ಮುಂದೆ ಹಂಚಿಕೊಂಡರು.
ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲೆಯ ವಿಡಿಯೋವನ್ನು ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಶೆ ಪಡೆದಿದೆ.
ವಿಡಿಯೋ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ ನೋಡಿ
https://www.instagram.com/tv/CKfwMNVhCuD/?igshid=q1uhfeo2o41p
https://m.facebook.com/story.php?story_fbid=259559738862856&id=100044264957540
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಆತ್ಮಹತ್ಯೆ ; ಕಾರಣ ಏನು ಗೊತ್ತಾ..!?

ಸುದ್ದಿದಿನ,ಬೆಂಗಳೂರು : ಸೀಸನ್ ಮೂರರ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಶ್ರೀ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇತ್ತೀಚಿಗೆ ಕೆಲದಿನಗಳಿಂದ ಅತೀವ ಖಿನ್ನತೆಯಿಂದ ಬಳಲುತ್ತಿದ್ದರು.
ಮಾದನಾಯಕನಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಗತಿ ಬಡಾವಣೆಯ ಅಪಾರ್ಟ್ಮೆಂಟ್ ನಲ್ಲಿ ಜಯಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಅಂದಹಾಗೇ ಈ ಹಿಂದೆಯೂ ನಟಿ ಜಯಶ್ರೀ ಆತ್ಮಹತ್ಯೆಗೆ ಯತ್ನಿಸಿದ್ದರು. ಆನಂತ್ರ ಅವರು ಸಾವಿನಿಂದ ಬಚಾವ್ ಆಗಿದ್ದರು. ಆದ್ರೇ ಇದೀಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನನ್ನ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಅದರಿಂದ ಹೊರಬರಲು ಆಗುತ್ತಿಲ್ಲ ನನಗೆ ದಯಾಮರಣ ಕೊಡಿ ಎಂದು ತಮ್ಮ ಫೇಸ್ ಬುಕ್ ನಲ್ಲಿ ಲೈವ್ ಬಂದು ಕೆಲವು ದಿನಗಳ ಹಿಂದೆ ಕೇಳಿಕೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಿನಿಮಾ ಪಯಣಕ್ಕೆ ರೀ ಎಂಟ್ರಿ ಕೊಟ್ಟ ಮಂದಹಾಸ ಬೆಡಗಿ : ಬಿಂದುಶ್ರೀ

- ಮತ್ತೆ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ: ಬಟ್ಟಲು ಕಣ್ಣಿನ ಚೆಲುವೆ
- ಮ್ಯಾಂಚೆಸ್ಟರ್ ಬೆಡಗಿ ಸಿಕ್ತು ಬಿಗ್ ಆಫರ್
ವಿಶೇಷ ವರದಿ :ಈಶ್ವರ್ ಸಿರಿಗೇರಿ
ಸುದ್ದಿದಿನ ಡೆಸ್ಕ್ : ಮಾತೃ ಆಸೆ ಕೊನೆಗೂ ನನಸು ಮಾಡಿದ ಮ್ಯಾಂಚೆಸ್ಟರ್ ಹುಡುಗಿ ಈ ಸಿನಿ ಪಯಣವೇ ಒಂದು ರೀತಿಯ ನಿಂತ ನೀರಲ್ಲ ಎಂಬ ಸಾಕ್ಷಿಗೆ ಮೆಚ್ಚುಗೆ ಪಾತ್ರರಾದ ಬಿಂದುಶ್ರೀ ಅವರು ನೋಡಿದ ಕೂಡಲೇ ಪ್ರಸಿದ್ಧಿ ಎಂಬ ಮಾತು ಸುಳ್ಳಲ್ಲ. ಕಲರ್ ಫುಲ್ ಪಯಣದಲ್ಲಿ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಯಶಸ್ಸಿಯಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ ಈ ಬಟ್ಟಲು ಕಣ್ಣಿನ ಚೆಲುವೆ ಮ್ಯಾಂಚೆಸ್ಟರ್ ಸ್ಟಾರ್ ಬೆಡಗಿಯಾಗಿ ತಮ್ಮದೇ ಆದ ನೆಲೆಗೆ ಸಾಕ್ಷಿಯಾಗಿದ್ದಾರೆ. ಅದು ಏನೇ ಆಗಲಿ ಬಾಲ್ಯದಲ್ಲಿ ಸಿಕ್ಕ ಹಲವಾರು ಅವಕಾಶಗಳನ್ನು ಬಹಳ ಅದ್ಭತವಾಗಿ ಕಲರ್ ಫುಲ್ ಪ್ರತಿಭೆಗೆ ಅದರಲ್ಲೂ ಕನ್ನಡದಲ್ಲಿ ಮಿಚ್ಚಿದ್ದು ಕನ್ನಡಿಗರ ಹೆಮ್ಮೆ.
ಪ್ಯಾಶನ್ ನಿಂದ ನಟನಾ ವೃತ್ತಿಗೆ ಪಯಣ
ಪಕ್ಕ ಹಳಿ ಸೊಗಡಿನ ಚಿತ್ರಕ್ಕೆ ಸಿಕ್ತು ಇಷ್ಟು ದಿನಗಳ ನಂತರ ಅದ್ಭತ ಆಫರ್ಗಳು, ಈ ಸಾಲುಗಳ ಯಶಸ್ಸು ಬೆನ್ನಿಗೆ ಇದ್ದರು ಸಹ ಒಳ್ಳೆಯ ಚಿತ್ರಕಥೆಗೆ ಏಳಿ ಮಾಡಿಸಿದ ಈ ಸ್ಪೂರಧ್ರೂಪಿ ಚೆಲುವೆ. ಇನ್ನೂ ಅನೇಕ ಪ್ರತಿಭೆಗಳು ಕನ್ನಡದಲ್ಲಿ ಬಂದು ಹೋಗಿದ್ದು ಇತಿಹಾಸವೇ ಆದರೂ ಈ ಸಾಲಿಗೆ ಬಿಂದುಶ್ರೀ ಎಂಬ ನವ ಕಲರ್ ಫುಲ್ಗೆ ಹಾಗೂ ಹೊಸ ರೀತಿಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಪಾತ್ರ, ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕರೆ ಕೆಲಸ ಮಾಡಲು ತುದಿಗಾಲ ಮೇಲೆ ವೇಟಿಂಗ್ ಅಂತ ಹೇಳಬಹುದು.
ಮ್ಯಾಂಚೆಸ್ಟರ್ ಬೆಡಗಿಗೆ ಸಿನಿ ಲೋಕದಲ್ಲಿ ಸಂಸ್ಕೃತಿಯೇ ಬಿಂಬ
ಬಿಂದುಶ್ರೀ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ ಹುಡುಗಿ. ಸಿನಿಮಾರಂಗ ಹೊಸದೇನಲ್ಲ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. “ಶ್ರೀರಸ್ತು ಶುಭಮಸ್ತು”, ”ಶಿವಪ್ಪ ನಾಯಕ”,”ಪ್ರೀತ್ಸೋದ್ ತಪ್ಪಾ” ಸೇರಿದಂತೆ ಅನೇಕ ರೀತಿಯ ಸುಮಾರು ಮೂವತ್ತು ಸಿನೆಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು ಸುಳ್ಳಲ್ಲ. ಬೆಳ್ಳಿತೆರೆಯ ಜತೆಗೆ ಕಿರುತೆರೆಯಲ್ಲೂ ಇವರ ಪಯಣ ಅದ್ಭತ ಅಂತ ಹೇಳಬಹುದು. ಇನ್ನೋಂದು ವಿಚಾರ “ಕಾವ್ಯಾಂಜಲಿ”, “ಗೌತಮಿ” ಮೆಗಾ ಧಾರಾವಾಹಿಗಳಲ್ಲೂ ಬಣ ಹಚ್ಚಿದ್ದಾರೆ. ಬಣದ ಜತೆಗೆ ಅಧ್ಯಯನ ಕೂಡ ಮುಖ್ಯ ಎಂಬ ಕಾರಣಕ್ಕೆ ನಟನೆಯನ್ನು ಮೊಟಕುಗೊಳಿಸಿ, ಓದಿನತ್ತ ಗಮನಹರಿಸಿದ್ದರು ಬಿಂದುಶ್ರೀ. ಇನ್ನು, ಇವರ ತಂದೆ ಸಿವಿಲ್ ಎಂಜಿನಿಯರ್. ಅವರ ತಂದೆ ಮಾತಿನ ಪ್ರಕಾರ, ಪದವಿ ಪಡೆದರು. ಅದರಲ್ಲೂ ಅವರದು ಪದವಿಯಲ್ಲಿ ಹದಿನಾರನೇ ರ್ಯಾಂಕ್ ಎಂಬುದು ವಿಶೇಷ.
ಬಣ್ಣಕ್ಕೂಸೈ, ಟೆಕ್ಕಿಗೂ ಸೈ
ಬೆಂಗಳೂರು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಬಿಂದುಶ್ರೀ ಟೆಕ್ಕಿಯಾಗಿ ಮೂರು ವರ್ಷಗಳ ಸೇವೆ ಮಾಡಿದ್ದಾರೆ ಹಾಗೂ ಇವರ ತಾಯಿ ಶಾಸ್ತ್ರೀಯ ಸಂಗೀತ ಹಿನ್ನಲೆಯ ಅವರು. ಅವರ ಆಸೆಯಂತೆ ತಂದೆಯ ಮನವೊಲಿಸಿ, ಪುನಃ ನಟನೆಗೆ ರೆಡಿಯಾಗಿದ್ದಾರೆ. ಈ ಕುರಿತು ಸ್ವತಃ ಬಿಂದುಶ್ರೀ ಹೇಳುವುದಿಷ್ಟು, “ನನಗೆ ನಟನೆ ಮೇಲೆ ಆಸಕ್ತಿ ಇದೆ. ಹಾಗಂತ ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪರೂಪ ಎಂಬಂತಹ, ಚಾಲೆಂಜಿಂಗ್ ಇರುವ, ನಮ್ಮ ಸಂಸ್ಕ್ರತಿ ಬಿಂಬಿಸುವಂತಹ ಪಾತ್ರಗಳು ಬಂದರೆ ನಾನು ನಟನೆ ಮಾಡಲು ಇಷ್ಟಪಡ್ತೀನಿ. ಯಾವುದೇ ದೊಡ್ಡ ಬ್ಯಾನರ್ ಇದ್ದರೂ, ಸರಿ, ನನಗೆ ಒಪ್ಪುವ ಮಾತ್ರ ಸೈ ಎನ್ನುವುದು. ಬೇರೆ ರೀತಿಯ ಕಥೆಗೆ ಪಾತ್ರ ಮಾಡಲಾರೆ” ಎಂಬುದು ಬಿಂದುಶ್ರೀ ಅವರ ಅಭಿಪ್ರಾಯ.
ಮಹಿಷಾಸುರ ಸಿನೆಮಾವೇ ಮತ್ತೆ ಕಲರ್ ಫುಲ್ ಆಗಲು ಕಾರಣ
ಇತ್ತೀಚೆಗೆ ತೆರೆಕಂಡ ಬಹಳ ಪೌರಾಣಿಕ ಸಿನಿಮಾವಾದ ಬಿಂದುಶ್ರೀ ಅವರ ಬಾಲ್ಯದಲ್ಲಿ 30 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಜತೆಯಲ್ಲಿ ಅದರಲ್ಲೂ ಪ್ರಮುಖ ಹಳ್ಳಿ ಹುಡುಗಿಯಾಗಿ ಮಹಿಷಾಸುರ ಚಿತ್ರದಲ್ಲಿ ನಟಿಸಿದ್ದಾರೆ.
ಎಕ್ಸ್ ಲೆಂಟ್ ಆಗಿ ನಟನೆ ಮಾಡಿದ್ದಾರೆ ಇವರ ವಿಶೇಷ. ಇವರ ಎರಡನೇ ಚಿತ್ರ “ಲಡ್ಡು” ಸಿನಿಮಾ ಕೂಡ ಇಂದು ರಾಜ್ಯಾದ್ಯಾತ ಬಿಡುಗಡೆಯಾಗಲಿದೆ ಎಂಬುದು ಬಿಂದುಶ್ರೀ ಅವರ ಅಭಿಪ್ರಾಯ. ಇನ್ನೂ ಸದ್ಯದಲ್ಲೇ “ಮಿ. ಅಂಡ್ ಮಿಸಸ್ ಜಾನು” ಚಿತ್ರದಲ್ಲೂ ಬಿಂದುಶ್ರೀ ನಟಿಸುತ್ತಿದ್ದಾರೆ. ಸದ್ಯಕ್ಕೆ ಪ್ರಸ್ತುತವಾಗಿ ಬಿಂದುಶ್ರೀ ಮೂರು ಕಥೆ ಗಳನ್ನು ರೆಡಿ ಅಂಥ ಹೇಳಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ರಾಷ್ಟ್ರೀಯ ತನಿಖಾ ದಳದಿಂದ ಸಮನ್ಸ್ ಪಡೆದಿದ್ದ ಖಾಲ್ಸಾ ಏಡ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ..!
-
ದಿನದ ಸುದ್ದಿ7 days ago
ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕವೇ ತವರು..!
-
ದಿನದ ಸುದ್ದಿ7 days ago
ಕುರುಬ ಎಸ್ ಟಿ ಹೋರಾಟ | ಪಾದಯಾತ್ರೆಯಲ್ಲಿ ಕಾಗಿನೆಲೆ ಶ್ರೀ ಸರ್ಕಾರಕ್ಕೆ ಕೊಟ್ರು ಡೆಡ್ ಲೈನ್..!
-
ದಿನದ ಸುದ್ದಿ4 days ago
ಸಿನಿಮಾ ಪಯಣಕ್ಕೆ ರೀ ಎಂಟ್ರಿ ಕೊಟ್ಟ ಮಂದಹಾಸ ಬೆಡಗಿ : ಬಿಂದುಶ್ರೀ
-
ದಿನದ ಸುದ್ದಿ23 hours ago
ದಾವಣಗೆರೆ | ಅತ್ಯಾಚಾರ ಅಪರಾಧಿಗೆ 15 ವರ್ಷ ಸಜೆ, 26 ಸಾವಿರ ದಂಡ
-
ದಿನದ ಸುದ್ದಿ2 days ago
ದಾವಣಗೆರೆ | ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ : ಅಂತಿಮ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳ ಆಹ್ವಾನ
-
ದಿನದ ಸುದ್ದಿ7 days ago
ನಾರಾಯಣ ಗೌಡರು ಯಾರು..? ಅಂದ ಸಚಿವ ಡಾ.ಸುಧಾಕರ್ ಕ್ಷಮೆಯಾಚಿಸಲೇ ಬೇಕು
-
ಕ್ರೀಡೆ2 days ago
ಸಹಾಯಧನ ನೀಡಲು ಕ್ರೀಡಾಪಟುಗಳಿಂದ ಪ್ರಸ್ತಾವನೆಗಳ ಆಹ್ವಾನ