Connect with us

ಸಿನಿ ಸುದ್ದಿ

ಭೀಮ ಪರಂಬರೈ ಹಾಗೂ ಕಬಿಲನ್ ರಂಜಿತ್..!

Published

on

  • ಬಸವರಾಜು ಕಹಳೆ

Float like a butterfly, sting like a bee”
Muhammad Ali

ಗಾಯಗೊಂಡಿದ್ದು ನಿನ್ನ ಮೈಯಷ್ಟೇ, ನಿನ್ನ ಮನಸ್ಸಲ್ಲ.”

ಇಲ್ಲಿ ನಮ್ಮಂಥವರಿಗೆ ಅವಕಾಶ ಸುಲಭವಾಗಿ ಬರುವುದಿಲ್ಲ. ಈ ಆಟ ನಮ್ಮದು. ಎದುರು ಬರುವವನ ಚಡ್ಡಿ ಒದ್ದೆಯಾಗಬೇಕು. ಮುನ್ನುಗು ಕಬಿಲನ್ ಈ ಕಾಲ ನಮ್ಮದು”
ಇಂಥದ್ದೊಂದು ಡೈಲಾಗ್ ಕಿವಿಗೆ ಬೀಳುತ್ತಿರುವಾಗಲೇ ಸೀನ್ ಮಧ್ಯೆ ಬಾಬಾ ಸಾಹೇಬರ ಭಾವಚಿತ್ರ ಎದ್ದು ಕಾಣುತ್ತದೆ. ಹೀಗೆ ಸಿನಿಮಾದ ಉದ್ಧಕ್ಕೂ ಆಗೊಮ್ಮೆ ಈಗೊಮ್ಮೆ ಬುದ್ಧ, ಭೀಮರು ಎದ್ದು ಕಾಣುತ್ತಾರೆ.

ಕೊಳಗೇರಿಯ ಗುಡಿಸಲುಗಳ ಮಧ್ಯೆ ಬುದ್ಧನ ವಿಗ್ರಹದ ಪಕ್ಕದಲ್ಲೇ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುವ ಸನ್ನಿವೇಶ ವಿಶಿಷ್ಟ ಪ್ರತಿಮೆಯಂತೆ ಕಾಣುತ್ತದೆ. ನವ ವಧು ವರರ ಕೈಗೆ ಉಡುಗೊರೆಯಾಗಿ ಬುದ್ಧ, ಭೀಮರ ಫೋಟೋ ಕೊಡುವ ದೃಶ್ಯ ಎದೆಗೂಡಲ್ಲಿ ಸರಪಟಾಕಿ ಹಚ್ಚುತ್ತದೆ. ದ್ರಾವಿಡ ಸ್ವಾಭಿಮಾನದ ಕಪ್ಪು ಪತಾಕೆಯನ್ನು ಬಿಳಿ ಮುಗಿಲಿನಲ್ಲಿ ಹಾರಿಸಿದ ಪೆರಿಯಾರ್ ಕಂಡಾಗಲೂ ಹುಚ್ಚೆದ್ದು ಕುಣಿಯುವ ಉತ್ಸಾಹ ಮೂಡುತ್ತದೆ

ಅಣ್ಣ ಪಾ.ರಂಜಿತ್ ಸಿನಿಮಾ ಅನ್ನೋ ಬಾಕ್ಸಿಂಗ್ ರಿಂಗ್​ನಲ್ಲಿ ಎದುರಾಳಿಗೆ ತಿಕ ಮಕ ನೋಡದೇ ಯಕ್ಕಾಮಕ್ಕಾ ಗುದ್ದಿ ಕೆಡವಿ ಭೀಮ ಪರಂಪರೆಯ ತಾಕತ್ತು ಎಂಥದ್ದು ಅನ್ನೋದನ್ನ ತೋರಿಸಿದ್ದಾರೆ. ಸರ್ಪಟ್ಟ ಪರಂಬರೈ ಸಿನಿಮಾ ನನ್ನ ಕಣ್ಣಿಗೆ ಒಂದೇ ಗುಕ್ಕಿನಲ್ಲಿ ಕಾಣಿಸಿದ್ದು ಹೀಗೆ. ಇಲ್ಲಿ ನನಗೆ ಕಂಡಿದ್ದು ಸರ್ಪಟ್ಟ ಅನ್ನೋ ನಾಲ್ಕು ಪಟ್ಟದ ಕತ್ತಿಗಳ ಕಥೆಯಲ್ಲ. ವರ್ಣಾಶ್ರಮದ ನಾಲ್ಕು ವರ್ಗಗಳ ಪೈಕಿ ಕೊನೆಯ ಶೂದ್ರ ಪರಂಪರೆ ಗೆದ್ದ, ಗೆಲ್ಲುತ್ತಿರುವ, ಗೆಲ್ಲಬೇಕಿರುವ ಕಥೆಯಂತೆ ಕಾಣುತ್ತದೆ.

ಕಬಿಲನ್ (ಆರ್ಯ) ನನಗೆ ಬರೀ ಪಾತ್ರದಂತೆ ಕಾಣುವುದಿಲ್ಲ. ಜಾತಕ ಕಥೆಗಳು ಹೇಳುವಂತೆ ಬುದ್ಧನ ಮತ್ತೊಂದು ಅವತಾರವೇ ಆದ ಕಪಿಲನೇ ಕಬಿಲನ್ ಅನಿಸುತ್ತದೆ. ಇಬ್ಬರೂ ನಿರೀಶ್ವರವಾದವನ್ನೇ ಸಾರಿದ್ದವರು. ಸಿನಿಮಾದಲ್ಲಿ ಕಬಿಲನ್ ಸಿದ್ಧಾರ್ಥನಂತೆಯೂ ಕಾಣುತ್ತಾನೆ. ಅಣ್ಣ ಪಾ.ರಂಜಿತ್ ಎಲ್ಲಾ ಸಿನಿಮಾಗೂ ಹಾಡುಗಳನ್ನು ಬರೆದುಕೊಟ್ಟ ಕವಿ ಕಬಿಲನ್ ಪ್ರೇರಣೆಯಿಂದ ಹುಟ್ಟಿದ ವ್ಯಕ್ತಿತ್ವದಂತೆ ಕಾಣುತ್ತದೆ. ಆರ್ಯನನ್ನು ಮೊದಲು ನೋಡಿದ್ದು ಆ್ಯಟ್ಲಿಯ ರಾಜರಾಣಿಯಲ್ಲೇ. ಆ ಬಳಿಕ ಮದರಾಸಿಪಟ್ಟಿನಂ ನೋಡಿದ್ದೇವೆ. ಈ ಎರಡೂ ಸಿನಿಮಾಗಳಿಗಿಂತಲೂ ಕಬಿಲನ್ ಆಗಿ ಜೀವ ತುಂಬುವ ಕೆಲಸ ಮಾಡಿದ್ದಾನೆ ಆರ್ಯ.

ಪಶುಪತಿ ರಂಗನ್ ವಾತಿಯರ್, ಬೀಡಿ ತಾತ, ವೆಂಬುಲಿ, ಡ್ಯಾಡಿ, ಡ್ಯಾನ್ಸಿಂಗ್ ರೋಸಿ ಈ ಎಲ್ಲಾ ಪಾತ್ರಗಳಿಗಿಂತಲೂ ಹೆಚ್ಚು ನನ್ನನ್ನು ಆಕರ್ಷಿಸಿದ್ದು ಎರಡೇ ಎರಡು ಪಾತ್ರ. ಆ ಪಾತ್ರಗಳೇ ಮರಿಯಮ್ಮ ಹಾಗೂ ಬಾಕ್ಯಮ್ಮ. ವಿಶೇಷ ಅಂದ್ರೆ 60 ಸೆಕೆಂಡ್ ಕಾಲ ಬಂದು ಹೋಗುವ ನಮ್ಮ ಕನ್ನಡಿಗ ಕಿಶೋರ್​ಗಿಂತಲೂ ಮರಿಯಮ್ಮ ಹಾಗೂ ಭಾಕ್ಯಮ್ಮ ಪಾತ್ರಗಳು ಈ ಸರ್ಪಟ್ಟ ಪರಂಪರೆಯನ್ನು ಎಳೆದೊಯ್ದ ಸ್ವಾಭಿಮಾನದ ಸೀರೆಯುಟ್ಟ ಕುಸ್ತಿ ಪಟು​ಗಳಂತೆ ಕಾಣುತ್ತಾರೆ.

ಒಬ್ಬಳು ಪುಟ್ಟ ಮಗನೊಂದಿಗೆ ಗಂಡನನ್ನು ಉಳಿಸಿಕೊಳ್ಳೋದಕ್ಕೆ ಸಾಹಸಪಡುವ ಹೆಣ್ಣು ಹುಲಿಯಂತೆ ಕಾಣುತ್ತಾಳೆ. ಮತ್ತೊಬ್ಬಳು ಕುಡಿದು ಮಲಗಿದ ಗಂಡನನ್ನು ಕಾಪಾಡೋದಕ್ಕೆ ಹಸುಗೂಸಿನೊಂದಿಗೆ ಬಗೆದು ಹಾಕುವ ಬಾಣಂತಿ ಹುಲಿಯಂತೆ ಗೆಬರುತ್ತಾಳೆ, ಅಬ್ಬರಿಸುತ್ತಾಳೆ. ರಂಜಿತ್ ಅಣ್ಣನ ಸಿನಿಮಾಗಳಲ್ಲಿ ಇಂಥಾ ಪವರ್​​ಫುಲ್ ಪಾತ್ರಗಳು ಪ್ರತೀ ಸಿನಿಮಾದಲ್ಲೂ ನೋಡಬಹುದು. ಕಬಾಲಿಯ ಕುಮುದವಲ್ಲಿ, ಕಾಲಾನ ಸೆಲ್ವಿ, ಜರೀನಾರಿಗಿಂತಲೂ ಪವರ್​ಫುಲ್ ಪಾತ್ರಗಳು ಮರಿಯಮ್ಮ ಹಾಗೂ ಬಾಕ್ಯಮ್ಮ. ಕಮ್ಮನೆಯ ಕಪ್ಪು ಸಂಸ್ಕೃತಿಯ ಸಣ್ಣ ತುಣುಕಿನಂತೆ ದುಷಾರ ವಿಜಯನ್ ಮರಿಯಮ್ಮನಾಗಿ ಕಾಣುತ್ತಾಳೆ.

“ಅವಕಾಶ ನಮಗಾಗಿ ಬರೋದಿಲ್ಲ. ಅವಕಾಶವನ್ನು ನಾವೇ ಹುಡುಕುತ್ತಾ ಹೋಗಬೇಕು. ಅದನ್ನು ಮನಸ್ಸಿನಲ್ಲಿ ಇಟ್ಟುಕೋ ಗೆಲುವು ನಿನ್ನದೇ. ಹೋಗಪ್ಪಾ ಹೋಗು” ಎನ್ನುವಾಗ ಬೀಡಿ ತಾತನ ಎದುರಿಗೆ ನಿಂತ ಕಬಿಲನ್ ಮಧ್ಯೆ ಮಹಾಸಮುದ್ರ ರಣಕೇಕೆ ಹಾಕುತ್ತಿರುತ್ತದೆ. ಕಡುಗತ್ತಲಿನಲ್ಲಿ ಟೈಟಲ್ ಕಾರ್ಡ್​ನಲ್ಲಿ ಓಡುತ್ತಾ ಸಾಗುವ ನೆತ್ತರುಂಡ ಅಕ್ಷರಗಳು. ಅಲ್ಲಲ್ಲಿ ಕತ್ತಲ ಸೀರೆಯುಡಿಸಿ ತೆಗೆದ ಸೀನ್​ಗಳು ಮತ್ತೊಮ್ಮೆ ಸರ್ಪಟ್ಟ ಪರಂಪರೆಯನ್ನು ನೋಡಬೇಕಿನಿಸುತ್ತದೆ.

My films are an extension of my ideology ಎನ್ನುವ ಪಾ. ರಂಜಿತ್ ಆಡಿದ ಮಾತಿನ ಪ್ರತೀ ಅಕ್ಷರ ಒಂದೊಂದು ಸೀನ್​​ನಲ್ಲಿ ಕಾಣುತ್ತದೆ. ಇಲ್ಲಿ ಐಡಿಯಾಲಜಿ ಅನ್ನೋ ದೊಡ್ಡ ಶಬ್ಧ ಅರ್ಥವಾಗದ ಮಂತ್ರದಂತೆ ಕೇಳಿಸೋದೂ ಇಲ್ಲ. ಕಾಣಿಸೋದೂ ಇಲ್ಲ. ಬದಲಿಗೆ ತಮಟೆಯ ಏಟಿನಂತೆ, ಜೇನ್ನೊಣದ ಕುಟುಕಿನಂತೆ ಅನುಭವಿಸಬಹುದು. ಮೊಲದ ಬಾಡು, ದನದ ಬಾಡು ತಿಂದಷ್ಟೇ ಖುಷಿಯಾಗುತ್ತದೆ.

ಬ್ರಿಟಿಷರು ಕಲಿಸಿ ಹೋದ ಬಾಕ್ಸಿಂಗ್ ನಲ್ಲಿ ಹೆಚ್ಚುಗಾರಿಕೆಯ ಪರಂಪರೆಗಾಗಿ ನಡೆಯುವ ಕಾದಾಟದ ಕಥೆ ಎಂದು ಸುಲಭಕ್ಕೆ ಹೇಳಬಹುದಾದ ಸಿನಿಮಾವನ್ನು ಎದೆಗಣ್ಣಿನಿಂದ ನೋಡಬೇಕಷ್ಟೇ. ರಂಗನ್ ವಾತಿಯರ್ ಹೇಳುವಂತೆ, “ನಿಮಗಿಂತ ಗಂಡ್ಸು ಇಲ್ಲಿ ಯಾರೂ ಇಲ್ಲ ಅನ್ನೋದನ್ನ ಸದಾ ತಲೆಯಲ್ಲಿ ಇಟ್ಟುಕೊಂಡಿರಬೇಕು”. ಎಂದಿನಂತೆ ಕ್ಯಾಮರಾ ವರ್ಕ್, ಮ್ಯೂಸಿಕ್ ಚೆನ್ನಾಗಿದೆ. ಕಿಶೋರ್​ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

‘ಕಣ್ಣಪ್ಪ’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಭಾಸ್‌ ನಟನೆ

Published

on

ಸುದ್ದಿದಿನ ಡೆಸ್ಕ್ : ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ‘ಕಣ್ಣಪ್ಪ’ ಚಿತ್ರಕ್ಕೆ ಇನ್ನೊಬ್ಬ ಸ್ಟಾರ್‌ ನಟನ ಎಂಟ್ರಿಯಾಗಿದೆ. ಅದು ಬೇರಾರು ಅಲ್ಲ, ಪ್ರಭಾಸ್.

ಈಗಾಗಲೇ ಅಕ್ಷಯ್‌ ಕುಮಾರ್‌, ಮೋಹನ್‌ ಬಾಬು, ಮೋಹನ್‌ ಲಾಲ್‌, ಶರತ್‌ಕುಮಾರ್‌ ಮುಂತಾದವರು ‘ಕಣ್ಣಪ್ಪ’ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗ ಈ ಸ್ಟಾರ್‌ ತಾರಾಬಳಗಕ್ಕೆ ಪ್ರಭಾಸ್‌ ಅವರ ಎಂಟ್ರಿಯೂ ಆಗಿದೆ.

ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಮುಖೇಶ‍್‍ ಕುಮಾರ್‌ ಸಿಂಗ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲಿ ಶಿವನ ಪರಮ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಲಿದ್ದಾರೆ. ಹಾಲಿವುಡ್‌ನ ಶೆಲ್ಡೋನ್‌ ಚಾವ್‌ ಅವರ ಛಾಯಾಗ್ರಹಣ, ಕೇಚ ಖಂಫಕದೀ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು

Published

on

ಮದ್ಯಾಹ್ನದ ಸುದ್ದಿಮುಖ್ಯಾಂಶಗಳು

  1. ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
  2. ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
  3. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
  4. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
  5. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
  6. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಹಾಲಿವುಡ್‌ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
  7. ಐಸಿಸಿ ವಿಶ್ವ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್‌ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
  8. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರದ ಟಿಕೆಟ್‍ ಮೇಲೆ ಶೆ.20ರಷ್ಟು ಕಡಿತ

Published

on

ಸುದ್ದಿದಿನ ಡೆಸ್ಕ್ : ರಕ್ಷಿತ್‍ ಶೆಟ್ಟಿ ಮತ್ತು ರುಕ್ಷಿಣಿ ವಸಂತ್‍ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್‍ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್‍ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್‍, ಅಚ್ಯುತ್‍ ಕುಮಾರ್‍, ರಮೇಶ್‍ ಅರವಿಂದ್‍ ಮುಂತಾದವರು ನಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending