Connect with us

ಕ್ರೀಡೆ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಸುದ್ದಿದಿನ ಕನ್ನಡ ಬೆಳಗಿನ ಪ್ರಮುಖ ಸುದ್ದಿಗಳು

  1. ಇಂದು ಭಾರತದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಹಾರ್‌ಲಾಲ್ ನೆಹರು ಅವರ ಪುಣ್ಯತಿಥಿ. ಸ್ವಾತಂತ್ರ‍್ಯ ನಂತರ ಪ್ರಧಾನಿಯಾಗಿ ದೇಶವನ್ನು ಮುನ್ನೆಡೆಸಿದ್ದ ಅವರು, 1964ರ ಮೇ 27 ರಂದು ನಿಧನರಾದರು. 16 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಅವರನ್ನು ಇಂದು ದೇಶ ಸ್ಮರಿಸುತ್ತಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ಪಂಡಿತ್ ಜವಹಾರ್‌ಲಾಲ್ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
  2. ಪರಿಸರ, ಸಾಮಾಜಿಕ ಆಡಳಿತಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಾಗಿದೆ ಎಂದು ವಿಮಾನ ನಿಲ್ದಾಣದ ಪರಿಸರ ಮತ್ತು ಸಾಮಾಜಿಕ ಆಡಳಿತ ವಿಭಾಗದ ಮುಖ್ಯಸ್ಥ ಎಲ್. ಶ್ರೀಧರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ’ದಿ ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ’ ದಿಂದ ಆಯೋಜಿಸಿದ್ದ ಇಎಸ್‌ಜಿ ಸಮಾವೇಶದಲ್ಲಿ ಮಾತನಾಡಿ, ಶೀಘ್ರದಲ್ಲೇ ವಿಮಾನ ನಿಲ್ದಾಣದಲ್ಲಿ ಮಳೆ ನೀರಿನ ಸಂಗ್ರಹದ ಮೂಲಕ ಶೇಖಡ 100ರಷ್ಟು ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದರು.
  3. ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಇಂದು ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಳಗಾವಿಯಲ್ಲಿ ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಂಸ್ಥೆ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಕೆಎಲ್‌ಇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
  4. ಜಮ್ಮು-ಕಾಶ್ಮೀರದ ಅನಂತ್ ನಾಗ್-ರಾಜೌರಿ ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಮಟ್ಟದ ಮತದಾನವಾಗಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜನರನ್ನು ಅಭಿನಂದಿಸಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳ ಬಲವರ್ಧನೆಗೆ ಜನರ ಪಾಲ್ಗೊಳ್ಳುವಿಕೆ ಪ್ರಮುಖ ಕೊಡುಗೆ ನೀಡಲಿದೆ. ಜಮ್ಮು-ಕಾಶ್ಮೀರದ ನಾಗರಿಕರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ್ದಾರೆ ಎಂದು ಹೇಳಿದ್ದಾರೆ.
  5. ಉತ್ತರ ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತ ಬೀತಿ ಹಿನ್ನೆಲೆಯಲ್ಲಿ ಸನ್ನದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮಹತ್ವದ ಸಭೆ ನಡೆಸಿದರು. ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಅಧಿಕಾರಿಗಳು ಚಂಡಮಾರುತ ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
  6. ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ 8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಬಾಂಗ್ಲಾದೇಶದ ವಿಪತ್ತು ನಿರ್ವಹಣೆ ಹಾಗೂ ಪರಿಹಾರ ಖಾತೆ ರಾಜ್ಯ ಸಚಿವ ಮಹಿಬೂರ್ ರೆಹಮಾನ್ ಮಾತನಾಡಿ, ಜನರ ಸುರಕ್ಷತೆಗಾಗಿ ವ್ಯಾಪಕ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.
  7. ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್‌ನ ತಲಾ 13, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್‌ನ 3 ಮತ್ತು ಚಂಡೀಗಢ್ ಕೇಂದ್ರಾಡಳಿತ ಪ್ರದೇಶದ 1 ಲೋಕಸಭಾ ಕ್ಷೇತ್ರಗಳಲ್ಲಿ ಜೂನ್ 1 ರಂದು ಮತದಾನ ನಡೆಯಲಿದೆ.
  8. ಕೆನರಾ ಬ್ಯಾಂಕ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಕಂಪ್ಯೂಟರ್ ಡಿಟಿಪಿ/ ಗ್ರಾಫಿಕ್ ಡಿಸೈನಿಂಗ್ ಕುರಿತು 45 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ.
  9. ರಾಜ್‌ಕೋಟ್ ಅಗ್ನಿ ದುರಂತದಲ್ಲಿ. ಮೃತಪಟ್ಟವರನ್ನು ಗುರುತು ಹಚ್ಚಲು ಡಿಎನ್‌ಎ ಮಾದರಿಯನ್ನು ಅಗತ್ಯ ಪರಿಕ್ಷೆಗಾಗಿ ಕಳುಹಿಸಲಾಗಿದೆ. ಈ ದುರಂತದ ವಿಚಾರವನ್ನು ಗುಜರಾತ್ ಹೈಕೋರ್ಟ್ ಖುದ್ದಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಈ ಪ್ರಕರಣ ಇಂದು ವಿಚಾರಣೆಗೆ ಬರಲಿದೆ.
  10. ಹಿರಿಯ ಬಿಜೆಪಿ ನಾಯಕ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಿರ್ಜಾಪುರ್‌ದಲ್ಲಿ ನಿನ್ನೆ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿ, ಐಎನ್‌ಡಿಐ ಮೈತ್ರಿಕೂಟ ಜಾತಿವಾದಿ ಹಾಗೂ ಕೋಮುವಾದಿ ಎನ್ನುವುದನ್ನು ದೇಶದ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಬಿಜೆಪಿ ಎನ್‌ಡಿಎ ಬಡವರು, ದುರ್ಬಲರು ಮತ್ತು ಹಿಂದುಳಿದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
  11. ಹಿರಿಯ ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಅವರು, ಹಿಮಾಚಲ ಪ್ರದೇಶದ ಶಿಮ್ಲಾ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಚುನಾವಣಾ ರ‍್ಯಾಲಿ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ಹೋರಾಡುತ್ತಿರುವ ಚುನಾವಣೆಯಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಈ ಕ್ಷಣದ ಪ್ರಮುಖ ಸುದ್ದಿಗಳು

Published

on

ರಾಜ್ಯದಲ್ಲಿ ಜರುಗಿದ ಈ ಕ್ಷಣದ ಕೆಲವು ಸುದ್ದಿಗಳ ಪ್ರಮುಖಾಂಶಗಳು ( ಕನ್ನಡ ನ್ಯೂಸ್; ಕನ್ನಡ ಸುದ್ದಿ)

  1. ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸದಿದ್ದರೆ ಕುಡಿಯುವ ನೀರು ಕಲುಷಿತಗೊಳ್ಳುವ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಗ್ರಾಮೀಣ ನೀರು ಸರಬರಾಜು ಇಲಾಖೆಯ ಇಂಜಿನಿಯರ್‌ಗಳು ಕಟ್ಟೆಚ್ಚರ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.
  2. ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ತೆರಿಗೆ ಏರಿಕೆ ಹಾಗೂ ಇತರ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ಬೆಂಗಳೂರಿನಲ್ಲಿಂದು ವಿಧಾನಸೌಧದವರೆಗೆ ಸೈಕಲ್ ಜಾಥಾ ನಡೆಸಿತು. ಪಕ್ಷದ ಕಚೇರಿಯಿಂದ ವಿಧಾನಸೌಧದವರೆಗೆ ಜಾಥಾದಲ್ಲಿ ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
  3. ಪ್ರತಿಯೊಂದು ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಡಿ ನಮೂದಿಸಿರುವ ಮಾನದಂಡದಂತೆ ಎಲ್‌ಇಡಿ ದೀಪಗಳನ್ನು ಅಳವಡಿಸದಿದ್ದರೆ ವಾಹನಗಳ ಸವಾರರುಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.
  4. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ್ದಾರೆ. ಪ್ರಧಾನಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೇಶಕ್ಕಾಗಿ ಅಪ್ರತಿಮ ಸೇವೆಯನ್ನು ಸಲ್ಲಿಸುತ್ತಿದ್ದು, ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.
  5. ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದ ಕಳ್ಳಬಟ್ಟಿ ಸರಾಯಿ ದುರಂತದಲ್ಲಿ 33 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳಬಟ್ಟಿ ಸರಾಯಿ ಸೇವಿಸಿ ಅಸ್ವಸ್ಥರಾಗಿದ್ದ ಜನರನ್ನು ಕಲ್ಲಕುರಿಚಿ, ಸೆಲಂ ಮತ್ತು ಪುದುಚೇರಿಯ ಜೆಐಪಿಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
  6. ಕೇಂದ್ರ ಸರ್ಕಾರದ ಆದೇಶದಂತೆ 2019ರ ಏಪ್ರಿಲ್‌ಗಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳಿಗೆ ಹೈಸೆಕ್ಯೂರಿಟಿ ನೋಂದಣಿ ಫಲಕ ಅಳವಡಿಕೆ ಗಡುವನ್ನು ರಾಜ್ಯ ಸರ್ಕಾರ ಸೆಪ್ಟೆಂಬರ್ 15ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಕುಂದುವಾಡ ಪ್ರೀಮಿಯರ್ ಲೀಗ್ -6 ; ಡಿ ರಾಕ್ಸ್ ತಂಡಕ್ಕೆ ರೋಚಕ ಜಯ

Published

on

ಸುದ್ದಿದಿನ,ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್ ಹಾಗೂ ಜನತಾ ರಕ್ಷಣಾ ವೇದಿಕೆಯಿಂದ ಚಿಲ್ಡ್ರನ್ ಕುಂದುವಾಡ ಪ್ರೀಮಿಯರ್ ನಡೆದಿದ್ದು, ಈ ಪಂದ್ಯಾವಳಿಯಲ್ಲಿ ಡಿ ರಾಕ್ಸ್ ತಂಡ ರೋಚಕವಾಗಿ ಒಂದು ರನ್ ನಿಂದ ಗೆದ್ದು ಬೀಗಿದೆ.

ಪ್ರತಿ ವರ್ಷದಂತೆ ಈ ವರ್ಷವು ಕುಂದುವಾಡ ಪ್ರೀಮಿಯರ್ ಲೀಗ್ -6 ಆಯೋಜನೆ ಮಾಡಲಾಗಿತ್ತು, ಈ ಭಾರೀ ವಿಶೇಷವಾಗಿ ಗೋಲ್ಡನ್ ಕೆಪಿಎಲ್(ಬಂಗಾರದ ಕಪ್) ನ್ನು ಇಡಲಾಗಿತ್ತು, ಮಳೆ ನಿರಂತರ ಆಗಮಿಸಿದ ಹಿನ್ನಲೆ ಗೋಲ್ಡನ್ ಕಪ್ ಮುಂದೂಡಲಾಯಿತು. ಈ ಮಧ್ಯೆ ಮಳೆ ಬಿಡುವು ನೀಡಿದ ಹಿನ್ನಲೆ ಭಾನುವಾರ ಚಿಲ್ಡ್ರನ್ ಕೆಪಿಎಲ್ ಪಂದ್ಯ ನಡೆಸಲಾಯಿತು, ಐದನೇ ತರಗತಿಯಿಂದ 8ನೇ ತರಗತಿ ಒಳಗಿನ ಮಕ್ಕಳು ಮಾತ್ರ ಈ ಟೂರ್ನಿಯಲ್ಲಿ ಭಾಗವಹಿಸಿದ್ದರು.

ನಾಲ್ಕು ತಂಡಗಳನ್ನ ರಚಿಸಲಾಗಿತ್ತು, ಡೆವಿಲ್ಸ್ ಕ್ರಿಕೇಟರ್ಸ್, ಡಿ ರಾಕ್ಸ್, ಶ್ರೀ ವಿನಾಯಕ ಕ್ರಿಕೇಟರ್ಸ್, ಜೂನಿಯರ್ಸ್ ಸ್ನೇಹ ಬಳಗ ತಂಡಗಳು ಭಾಗವಹಿಸಿದ್ದವು, ಗ್ರಾಮದ ಹಿಡಿಯ ಮುಖಂಡರು ಪಂದ್ಯಾವಳಿ ಉದ್ಘಾಟಿಸಿದರು, ಡೆವಿಲ್ಸ್ ಹಾಗೂ ಡಿ ರಾಕ್ಸ್ ತಂಡ ಫೈನಲ್ ಪ್ರವೇಶ ಪಡೆದಿದ್ದವು, ಮೊದಲ ಬ್ಯಾಟ್ ಮಾಡಿದ ಸಂಜಯ್ ಲೋಕಿಕೆರೆ ನಾಯಕತ್ವದ ಡಿ ರಾಕ್ಸ್ ತಂಡ ನಿಗಧಿತ 4 ಓವರ್ ಗಳಲ್ಲಿ 28ರನ್ ಗಳಿಸಿತು, ಗುರಿ ಬೆನ್ನಟ್ಟಿದ ಗೌಡ್ರು ಪುನೀತ್ ನಾಯಕತ್ಸ ಡೆವಿಲ್ಸ್ ತಂಡ ರೋಚಕ ಹಣಾಹಣಿಯಲ್ಲಿ ಕೇವಲ 1 ರನ್ ನಿಂದ ಸೋತು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆಯಬೇಕಾಯಿತು.

ಕೊನೆಯ ಎಸೆತದಲ್ಲಿ ಗೆಲ್ಲಲು ಮೂರು ರನ್ ಗಳ ಅವಶ್ಯಕತೆ ಇತ್ತು, ಕೊನೆಯ ಎಸೆತ ಬಿಗಿ ಬೌಲಿಂಗ್ ದಾಳಿ ನಡೆಸಿದ ಬೌಲರ್ ಕೇವಲ ಒಂದು ರನ್ ಬಿಟ್ಟುಕೊಟ್ಟರು ಇದರೊಂದಿಗೆ ಕೇವಲ ಒಂದು ರನ್ ನಿಂದ ಡಿ ರಾಕ್ಸ್ ತಂಡ ವಿಜಯಶಾಲಿಯಾಯಿತು, ಇನ್ನೂ ಮೂರನೇ ಸ್ಥಾನಕ್ಕಾಗಿ ಶ್ರೀ ವಿನಾಯಕ ಕ್ರಿಕೇಟರ್ಸ್ ಹಾಗೂ ಜೂನಿಯರ್ಸ್ ಸ್ನೇಹಬಳಗ ತಂಡ ಸೆಣಸಾಟ ನಡೆಸಿದವು.

ಈ ಪಂದ್ಯದಲ್ಲಿ ಶ್ರೀ ವಿನಾಯಕ ತಂಡ ಸುಲಭವಾಗಿ ಗೆಲುವು ಪಡೆಯುದರೊಂದಿಗೆ ಮೂರನೇ ಬಹುಮಾನ ಪಡೆಯಿತು, ಜೂನಿಯರ್ಸ್ ಸ್ನೇಹ ಬಳಗ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇನ್ನೂ ಎಲ್ಲಾ ಪಂದ್ಯಗಳು ರೋಚಕವಾಗಿದ್ದವು, ಮಕ್ಕಳಿಗಷ್ಟೆ ಈ ಪಂದ್ಯಾವಳಿಯಲ್ಲಿ ಅವಕಾಶ ಇದ್ದಿದ್ದರಿಂದ ಆಟಕ್ಕೆ ಎಲ್ಲರಿಗೂ ಅವಕಾಶ ಸಿಕ್ಕಿತ್ತು, ಅಷ್ಟೆ ಉತ್ಸಾಹಕರಾಗಿ ಮಕ್ಕಳು ಪಾಲ್ಗೊಂಡಿದ್ದು ಚಿಲ್ಡ್ರನ್ ಕೆಪಿಎಲ್ ಯಶಸ್ವಿಯಾಗಿ ಮುಗಿದಿದೆ, ಇನ್ನೂ ಗೋಲ್ಡನ್ ಕೆಪಿಎಲ್ ಟೂರ್ನಿಯನ್ನೂ ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್‌ ನಿಧನ

Published

on

ಸುದ್ದಿದಿನಡೆಸ್ಕ್ :ಮಾಧ್ಯಮ ಲೋಕದ ದಿಗ್ಗಜ, ಉದ್ಯಮಿ ಹಾಗೂ ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್‌ (87) ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ 4:50ಕ್ಕೆ ಕೊನೆಯುಸಿರೆಳೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending