ದಿನದ ಸುದ್ದಿ
ಶೀರೂರು ಶ್ರೀ ಸಾವಿನ ಹಿಂದೆ ವಿಷಕನ್ಯೆ ಕೈವಾಡ ಸಾಧ್ಯತೆ
ಶೀರೂರು ಶ್ರೀಗಳ ಅನುಮಾನಾಸ್ಪದ ಸಾವಿನ ಹಿಂದೆ ವಿಷಕನ್ಯೆಯೊಬ್ಬರ ಕೈ ಚಳಕ ನಡೆದಿರುವ ಎಲ್ಲ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುದ್ದಿದಿನ ಡೆಸ್ಕ್: ಶೀರೂರು ಶ್ರೀಗಳ ಅನುಮಾನಾಸ್ಪದ ಸಾವಿನ ಹಿಂದೆ ವಿಷಕನ್ಯೆಯೊಬ್ಬರ ಕೈ ಚಳಕ ನಡೆದಿರುವ ಎಲ್ಲ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶ್ರೀಗಳಿಗೆ ಆಪ್ತರಾಗಿದ್ದ ಭಕ್ತೆಯೊಬ್ಬರು ನೀಡಿದ ಅವಲಕ್ಕಿಯಲ್ಲಿ ವಿಷ ಇತ್ತೆಂದು ಹೇಳಲಾಗುತ್ತಿದ್ದು, ಅದನ್ನು ಸೇವಿಸಿದ ನಂತರ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಶ್ರೀಗಳ ಸಾವಿನ ಪ್ರಕರಣದಲ್ಲಿ ಭೂ ಮಾಫಿಯಾದ ಕೈವಾಡವೂ ಇರಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಉಡುಪಿಯ ಕಲ್ಸಂಕದಲ್ಲಿ ಮಠದ ಪಟ್ಟದ ದೇವರ ಹೆಸರಿನಲ್ಲಿದ್ದ ಜಾಗವನ್ನು ಗುತ್ತಿಗೆ ನೀಡಿ ನೂರು ಕೋಟಿ ರೂ.ಗೂ ಹೆಚ್ಚಿನ ವ್ಯವಹಾರದ ಪಾಲುದಾರಿಕೆಯಲ್ಲ ಶ್ರೀಗಳು ಕೈಹಾಕಿದ್ದರು. ಕನಕ ಮಾಲ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮುಂಬಯಿನ ಉದ್ಯಮಿಗಳು ಶ್ರೀಗಳಿಗೆ 26 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ವಿಚಾರವಾಗಿ ಸಾಲದ ಸುಳಿಗೆ ಸಿಕ್ಕಿದ್ದ ಶ್ರೀಗಳು ಅದನ್ನು ಬ್ಯಾಂಕ್ಗೆ ವಾಪಸ್ ನೀಡುವ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದರು ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.
ಮಹಿಳೆ ಜತೆ ಶ್ರೀಗಳ ನಂಟು?
ಶ್ರೀಗಳಿಗೆ ಆಪ್ತರಾಗಿದ್ದ ಉಡುಪಿ ಮೂಲದ ಮಹಿಳೆ ಸುತ್ತ ಪ್ರಕರಣವು ಗಿರಕಿ ಹೊಡೆಯುತ್ತಿದೆ. ಮೂಲಗಳ ಪ್ರಕಾರ ಮಠದ ಹಣಕಾಸು ವ್ಯವಹಾರಗಳನ್ನು ಸಂಪೂರ್ಣವಾಗಿ ಈ ಮಹಿಳೆಯೇ ನಿರ್ವಹಿಸುತ್ತಿದ್ದರು. ಶ್ರೀಗಳಿಂದ ಕಾರೊಂದನ್ನು ಪಡೆದಿದ್ದರು. ಈಕೆ ಫ್ಲಾಟ್ ಕೊಳ್ಳಲು ಶ್ರೀಗಳೇ ಹಣ ನೀಡಿದ್ದರು ಎನ್ನಲಾಗಿದೆ.
ಶ್ರೀಗಳಿಗೆ ಆಪ್ತರಾಗಿದ್ದ ಈ ಮಹಿಳೆಯೇ ಸಾವಿಗೆ ಕಾರಣ. ಮಠದ ಸಂಪೂರ್ಣ ಸ್ವತ್ತನ್ನು ತನ್ನ ಹೆಸರಿಗೆ ಪಡೆಯುವ ಸಲುವಾಗಿ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಮಠದ ಮಾಜಿ ವ್ಯವಸ್ಥಾಪಕಿಯೊಬ್ಬರು ಹಾಸನದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಿನದ ಸುದ್ದಿ
ಅಧಿಕಾರಿಗಳ ನಿರ್ಲಕ್ಷ್ಯ; ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲೇ ಓಪನ್ ಆಗಿದೆ ಡ್ರೈನೇಜ್ , ಆಪಾಯ ಕಟ್ಟಿಟ್ಟ ಬುತ್ತಿ..!

ಸುದ್ದಿದಿನ, ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆ ಆವರಣದಲ್ಲಿ ಡ್ರೈನೆಜ್ ಓಪನ್ ಆಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ನಗರಪಾಲಿಕೆಯ ಆವರಣದಲ್ಲಿನ ಕ್ಯಾಂಟೀನ್ ಮುಂದಿರುವ ಡ್ರೈನೇಜ್ ಸುಮಾರು ದಿನಗಳಿಂದ ಓಪನ್ ಆಗಿದೆ. ಆವರಣವು ಜನ ಸಮೂಹದಿಂದ ನಿತ್ಯವೂ ಕೂಡಿರುತ್ತದೆ. ಕ್ಯಾಂಟೀನ್ ಬರುವ ಜನರೂ ಕೂಡ ಹೆಚ್ಚಾಗಿಯೇ ಇರುತ್ತಾರೆ. “ಸುಮಾರು ಒಂದು ವಾರದಿಂದ ಈ ಗುಂಡಿ ಓಪನ್ ಆಗಿದ್ದು ಆಯತಪ್ಪಿ ಯಾರಾದರೂ ಬಿದ್ದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ” ಎನ್ನುತ್ತಿದ್ದಾರೆ ಸಾರ್ವಜನಿಕರು.
ಮಹಾನಗರ ಸಭೆಯ ಆವರಣದಲ್ಲೇ ಡ್ರೈನೇಜ್ ಓಪನ್ ಆಗಿದ್ದು, ಸರಿಪಡಿಸಲು ಅಧಿಕಾರಿಗಳು ನಿರ್ಲಕ್ಷವಹಿಸಿದ್ದು, ಇನ್ನು ನಗರದ ಇಂತಹ ಹಲವು ಸಮಸ್ಯೆಗಳನ್ನು ಪರಿಹರಿಸಲು ಎಷ್ಟು ದಿನ ಕಾಯ ಬೇಕು..? ಎಂದು ಸಾರ್ವಜನಿಕರಾದ ಮಹೇಶ್ ಎಂಬುವವರು ‘ಸುದ್ದಿದಿನ’ದ ಮುಂದೆ ಪ್ರಸ್ತಾಪಿಸಿದರು.
- ಓಪನ್ ಆಗಿರುವ ಡ್ರೈನೇಜ್ ಅನ್ನು ಶೀಘ್ರದಲ್ಲೇ ಮುಚ್ಚಿಸಲು ಕ್ರಮ ತೆಗೆದುಕೊಳ್ಳುತ್ತೇವೆ.
| ವಿಶ್ವನಾಥ್ ಪಿ ಮುದ್ದಜ್ಜಿ ,ಕಮೀಷನರ್, ಮಹಾನಗರ ಪಾಲಿಕೆ, ದಾವಣಗೆರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹಾವೇರಿ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಸುದ್ದಿದಿನ,ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣನಾದ ಹಾನಗಲ್ ತಾಲೂಕಿನ ಯಳ್ಳೂರ ಗ್ರಾಮದ ಸುನೀಲಗೌಡ ಮಹಾದೇವಗೌಡ ಪಾಟೀಲ ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಸಜೆ ಹಾಗೂ ರೂ.ಏಳು ಸಾವಿರ ದಂಡ ವಿಧಿಸಿ ಗುರುವಾರ ಹೆಚ್ಚುವರಿ ಜಿಲ್ಲಾ ವ ಸತ್ರ ಎಫ್.ಟಿ.ಎಸ್.ಸಿ.-1(ಪೊಕ್ಸೊ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಕೆ.ಎಸ್.ಜ್ಯೋತಿಶ್ರೀ ಅವರು ತೀರ್ಪು ನೀಡಿದ್ದಾರೆ.
ಆರೋಪಿ ಸುನೀಲಗೌಡ ಮಹಾದೇವಗೌಡ ಪಾಟೀಲ ಈತನು ಅಪ್ರಾಪ್ತ ಬಾಕಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಅವಳ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ರೇವಪ್ಪ ಕಟ್ಟಿಮನಿ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದನ್ನೂ ಓದಿ | ಕವಿತೆ | ಕಾಮಧೇನು
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ರೂ.ಏಳು ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಭಾದಿತಳಿಗೆ ರೂ.ಐದು ಲಕ್ಷ ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ ಎಂದು ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದಮಂಡಿಸಿದ ಹೆಚ್ಚುವರಿ ಜಿಲ್ಲಾ ವ ಸತ್ರ ಎಫ್.ಟಿ.ಎಸ್.ಸಿ.-1(ಪೊಕ್ಸೊ) ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ವಿನಾಯಕ ಎಸ್.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋವಿಡ್-19 ವ್ಯಾಕ್ಸಿನ್ ಡೇಟಾ ಎಂಟ್ರಿಗೆ ಜನ ಮಾಹಿತಿ ನೀಡ್ತಿಲ್ಲ ; ಲಸಿಕೆ ಹಾಕಿಸಿಕೊಳ್ಳೋಕೆ ಒಪ್ತಿಲ್ಲ..!

ಸುದ್ದಿದಿನ,ಬೆಂಗಳೂರು: ಕೊರೋನಾ ಎರಡನೇ ಅಲೆಯ ಆತಂಕದ ಮಧ್ಯೆ ಸಾರ್ವಜನಿಕರಿಗೆ ಕೋವಿಡ್-19 ವ್ಯಾಕ್ಸಿನ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಹೈ ರಿಸ್ಕ್ ಕೇಸ್ ಮತ್ತೆ 50 ವರ್ಷ ಮೇಲ್ಪಟ್ಟವರ ಪಟ್ಟಿಯನ್ನು ಸಿದ್ಧಗೊಳಿಸಲು ಆರೋಗ್ಯ ಇಲಾಖೆಯು ಹರಸಾಹಸ ಪಡುತ್ತಿದೆ.
ಮನೆ ಮನೆಗಳ ಸರ್ವೇ ವೇಳೆ ಕೋವಿಡ್-19 ವ್ಯಾಕ್ಸಿನ್ ಡೇಟಾ ಎಂಟ್ರಿಗೆ ಸಾರ್ವಜನಿಕರು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಿಯಾದ ಮಾಹಿತಿ ಸಿಗದ ಆಶಾ ಕಾರ್ಯಕರ್ತೆಯರು ಆರೋಗ್ಯಾಧಿಕಾರಿಗಳ ಪರದಾಟವನ್ನು ಪಬ್ಲಿಕ್ ಕನ್ಮಡ ಖಾಸಗಿವಾಹಿನಿಯು ವರದಿ ಮಾಡಿದೆ.
ಸಾರ್ವಜನಿಕರಿಗೆ ಮಾರ್ಚ್ 1 ರಿಂದ ಕೊರೊನಾ ಲಸಿಕೆಯನ್ನು ವಿತರಿಸಲು ಆರೋಗ್ಯ ಇಲಾಖೆಯು ತಯಾರಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಮತ್ತು ಹಲವು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲು ಇಲಾಖೆ ನಿರ್ಧಾರ ಮಾಡಿದೆ.
ಸಾರ್ವಜನಿಕರು ಸರಿಯಾದ ಮಾಹಿತಿ ನೀಡ್ತಿಲ್ಲ
ರಾಜ್ಯದಲ್ಲಿ 50 ವರ್ಷ ಮೇಲ್ಪಟ್ಟವರು ಮತ್ತು ಹಲವು ಕಾಯಿಲೆಯಿಂದ ಬಳಲುತ್ತಿರುವ ಜನ ಎಷ್ಟಿದ್ದಾರೆ ? ಎಷ್ಟು ವ್ಯಾಕ್ಸಿನ್ ಕೊಡಬೇಕು? ಫಲಾನುಭವಿಗಳು ಎಷ್ಟು ಮಂದಿ ಆಗುತ್ತಾರೆ ಎಂದು ತಿಳಿಯಲು ಸರ್ಕಾರ ಸರ್ವೇ ನಡೆಸುತ್ತಿದೆ.
ಈ ಸರ್ವೇಯನ್ನು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸ್ವಯಂ ಸೇವಕರು ನಡೆಸುತ್ತಿದ್ದಾರೆ. ಆದರೆ ಸರ್ವೇ ವೇಳೆ ಸಾರ್ವಜನಿಕರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಆರೋಗ್ಯ ಸಿಬ್ಬಂದಿ ಜೊತೆ ಶನಿವಾರ ಕನ್ನಡ ಸುದ್ದಿವಾಹಿನಿ ಸರ್ವೇಗೆ ಇಳಿದಾಗ ಅಲ್ಲಿನ ವಾಸ್ತವ ಬಯಲಾಗಿದೆ.
ಇದನ್ನೂ ಓದಿ | ಕೃಷಿ ಸಿಂಚಾಯಿ ಯೋಜನೆ | ಸಹಾಯಧನ ಪಡೆಯಲು ಅರ್ಜಿ ಆಹ್ವಾನ
ಪ್ಯಾಲೇಸ್ ಗುಟ್ಟಹಳ್ಳಿಯ ಜಟಕಾಸ್ಟಾಂಡ್ ವಸತಿ ಗೃಹದ ಸಂಕೀರ್ಣದ ಬಳಿ ಸುದ್ದಿವಾಹಿನಿ ಸರ್ವೇಗೆ ಇಳಿದಾಗ ಅಲ್ಲಿನ ಮನೆಯವರು ಸ್ಪಂದಿಸಿದ್ದಾರೆ. ಆರೋಗ್ಯ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ವ್ಯಾಕ್ಸಿನ್ ತೆಗೆದುಕೊಳ್ಳೋದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ.
ಬಾಂಧವ್ಯ ನಗರದಲ್ಲಿ ಸರ್ವೆಗೆ ಅಂತಾ ಒಂದು ಮನೆಗೆ ಸುದ್ದಿವಾಹಿನಿ ತಂಡ ತೆರಳಿದೆ ಅಲ್ಲಿನ ನಿವಾಸಿ ನಿಮಗೆ ಎಷ್ಟು ವಯಸ್ಸು ಎಂದರೆ ಅವರು ಒಂದು ಬಾರಿ 49 ವರ್ಷ ಎನ್ನುತ್ತಾರೆ. ಮತ್ತೊಮ್ಮೆ 51 ವರ್ಷ ಎನ್ನುತ್ತಾರೆ.
ಮನೆಯಲ್ಲಿಯೇ ಇದ್ದ ಅವರು ಆಧಾರ್ ಕಾರ್ಡ್ ವೋಟರ್ ಐಡಿ ಕೇಳಿದ್ರೆ ಇಲ್ಲ ಅಂತಾರೆ. ವ್ಯಾಕ್ಸಿನ್ ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಕೆಲವರು ನಾವು ಆರೋಗ್ಯವಾಗಿದ್ದು, ಲಸಿಕೆ ಬೇಡ ಅಂತ ಹೇಳುತ್ತಾರೆ ಎಂದು ವರದಿಯಲ್ಲಿ ಸುದ್ದಿವಾಹಿನಿ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ಲೈಫ್ ಸ್ಟೈಲ್6 days ago
ಏನಿದು ? ಗಡಿಮಾರಿ..!
-
ರಾಜಕೀಯ5 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
-
ದಿನದ ಸುದ್ದಿ7 days ago
ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು
-
ದಿನದ ಸುದ್ದಿ7 days ago
ಉತ್ತರ ಪ್ರದೇಶ ಬಜೆಟ್ 2021-22 | ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2,000 ಕೋಟಿ ಹಣ ; ಉದ್ಯೋಗಾವಕಾಶ ಹೆಚ್ಚಿಸಲು ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ
-
ಬಹಿರಂಗ6 days ago
ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್’
-
ನೆಲದನಿ6 days ago
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’