ದಿನದ ಸುದ್ದಿ
ರಾಮದಾಸ್ ಮನೆ ಮುಂದೆ ಪ್ರೇಮ ಕುಮಾರಿ ಆತ್ಮಹತ್ಯೆಗೆ ಯತ್ನ
ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಅವರ ಮನೆ ಮುಂದೆ ಪ್ರೇಮ ಕುಮಾರಿ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಸುದ್ದಿದಿನ ಡೆಸ್ಕ್: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಅವರ ಮನೆ ಮುಂದೆ ಪ್ರೇಮ ಕುಮಾರಿ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಜಯನಗರದಲ್ಲಿರುವ ಶಾಸಕ ರಾಮದಾಸ್ ಅವರ ಮುಂದೆ ಬೆಳಗ್ಗೆ ಇಂದ ಕಾದು ಕುಳಿತಿದ್ದ ಪ್ರೇಮ ಕುಮಾರಿ ಅವರು, ಶಾಸಕರನ್ನು ಭೇಟಿ ಮಾಡಲು ಅವಕಾಶ ಕೇಳಿದಾಗ ಅವರ ಬೆಂಬಲಿಗರು ಬಿಡಲಿಲ್ಲ. ಇದರಿಂದ ಮನನೊಂದ ಪ್ರೇಮ ಕುಮಾರಿ ಅವರು ವೇಲ್‍ಅನ್ನು ಕುತ್ತಿಗೆಗೆ ಬಿಗಿದು ಕಂಬಕ್ಕೆ ನೇಣುಹಾಕಿಕೊಳ್ಳಲು ಯತ್ನಿಸಿದರು. ಅಲ್ಲದೇ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪ್ರೇಮ ಕುಮಾರಿ ಅವರನ್ನು ಸುತ್ತುವರಿದು ಅವರಿಗೆ ನೀರು ಕುಡಿಸಿದರು.
#ಶಾಸಕ #ರಾಮದಾಸ್ ಮನೆ ಮುಂದೆ #ಪ್ರೇಮಕುಮಾರಿ ಆತ್ಮಹತ್ಯೆಗೆ ಯತ್ನ.#ramdas #premkumari #suddidina #ಸುದ್ದಿದಿನ
Posted by SuddiDina News on Saturday, 21 July 2018
ಸ್ಥಳಕ್ಕೆ ಬಂದ ಪೊಲೀಸರು ಪ್ರೇಮ ಕುಮಾರಿ ಅವರನ್ನು ಕರೆದೊಯ್ಯಲು ಯತ್ನಿಸಿದರು. ಆದರೆ ಅವರು ಜಗ್ಗಲಿಲ್ಲ. ನನ್ನ ಪಾಡಿಗೆ ನಾನು ಕುಳಿತಿದ್ದೇನೆ. ಒಮ್ಮೆ ರಾಮದಾಸ್ ಅವರನ್ನು ಭೇಟಿಯಾಗಲು ಅವಕಾಶ ಕೊಡಿ ಅಥವಾ ನನ್ನ ಹೆಣವನ್ನು ಇಲ್ಲಿಂದ ತೆಗೆದುಕೊಂಡು ಹೋಗಿ ಎಂದು ಅವರು ಗೋಳಾಡುತ್ತಿದ್ದರು.
ರಾಮದಾಸ್ ಅವರು ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ ಮಾತನ್ನು ಮರೆತಿದ್ದಾರೆ. ನನ್ನ ಸಂಕಷ್ಟವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಅವರು ಪೊಲೀಸರನ್ನು ಅಂಗಲಾಚಿ ಬೇಡಿಕೊಂಡರು.
ದಿನದ ಸುದ್ದಿ
ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸೇವೆ : ಜಿಲ್ಲಾ ಸಮಿತಿ ಸದಸ್ಯತ್ವಕ್ಕೆ ನೇಮಕ ಮಾಡಲು ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕ್ಯುಲರ್ ಡಿಸ್ಟ್ರೋಫಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಕ್ಲೆರೋಸಿಸ್ (Crebral Palsy, Muscular Dystrophy, Parkinson’s and Multiple Sclerosis) ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಮಾಹೆಯಾನ ರೂ.1000/-ಗಳ
ಪ್ರ್ರೋತ್ಸಾಹಧನವನ್ನು ನೀಡುವ ಯೋಜನೆಯಡಿ ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಒಂದು ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಯನ್ನು ಜಿಲ್ಲಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲು ನವಂಬರ್ 21 ರೊಳಗಾಗಿ ಕಚೇರಿಗೆ ಮನವಿ ಸಲ್ಲಿಸಬಹುದು.
ಜಿಲ್ಲಾ ಸಮಿತಿಯ ಸದಸ್ಯತ್ವಕ್ಕೆ ಕನಿಷ್ಠ ಎರಡು ವರ್ಷಕ್ಕೂ ಹೆಚ್ಚು ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರಬೇಕು, ಸಂಸ್ಥೆಯು ಪಿಡಬ್ಲ್ಯೂಡಿ ಆಕ್ಟ್-2016 ರನ್ವಯ ನೋಂದಣಿಯಾಗಿರಬೇಕು. ಸೆರೆಬ್ರಲ್ ಪಾಲ್ಸಿ, ಮಸ್ಕ್ಯುಲರ್ ಡಿಸ್ಟ್ರೋಫಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಕ್ಲೆರೋಸಿಸ್ ಈ ಅಂಗವಿಕಲತೆಗಳ ಸೇವೆ ಸಲ್ಲಿಸಿದ ಬಗ್ಗೆ ದಾಖಲೆ ಸಲ್ಲಿಸುವುದು. ಪ್ರಸಕ್ತ ಸಾಲಿಗೆ ಸದರಿ ಯೋಜನೆಯ ಜಿಲ್ಲಾ ಸಮಿತಿಯ ಸದಸ್ಯರನ್ನು ನೇಮಿಸಿಕೊಳ್ಳಲಾಗುವುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಾ.ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಂದ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ತೋಟಗಾರಿಕೆ ಇಲಾಖೆಯಿಂದ ಹೊನ್ನಾಳಿ ಮತ್ತು ನ್ಯಾಮತಿ ಗ್ರಾಮ ಪಂಚಾಯಿತಿಯಲ್ಲಿ 2025-26ನೇ ಸಾಲಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಪಹಣಿ, ಆಧಾರ್, ಉದ್ಯೋಗ ಚೀಟಿ, ಸಣ್ಣ, ಅತಿಸಣ್ಣ, ರೈತರ ಪ್ರಮಾಣ ಪತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೊನ್ನಾಳಿ ಅಥವಾ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕಬ್ಬಳ ಗ್ರಾಮದ ಮಹಿಳೆ ನಾಪತ್ತೆ
ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಬಸವಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯ ಕಬ್ಬಳ ಗ್ರಾಮದ ಮೇಘ.ಟಿ 29 ವರ್ಷ, ಇವರು ಕಳೆದ ಮೇ 1 ರಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ತನ್ನ ಗಂಡನ ಮನೆ ಇರುವ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಗಂಡನ ಮನೆಗೆ ಹೋಗದೇ, ತವರು ಮನೆಗೂ ವಾಪಾಸ್ ಬಂದಿರುವುದಿಲ್ಲ.
ಚಹರೆ ವಿವರ. 5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಹೊಂದಿರುತ್ತಾರೆ, ಹೋಗುವಾಗ ನೀಲಿ ಬಣ್ಣದ ಟಾಪ್ ಕಪ್ಪು ಬಣ್ಣದ ಲೆಗ್ಗಿನ್ಸ್ ಧರಿಸಿರುತ್ತಾರೆ. ಕನ್ನಡ ಮತ್ತು ತೆಲುಗು ಮಾತಾನಾಡುತ್ತಾಳೆ, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಬಸವಾಪಟ್ಟಣ ಪೊಲೀಸ್ ಠಾಣೆ ಪಿಎಸ್‍ಐ ದೂ.ಸಂ: 9480803260 ಸಂಖ್ಯೆಗೆ ಮಾಹಿತಿ ನೀಡಲು ಪೊಲೀಸ್ ಠಾಣೆಯ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ4 days ago
ಅತ್ಮಕತೆ | ನೀರು ಸಾಬರೂ – ಎಸಿ ಮದನಗೋಪಾಲರೂ..
-
ದಿನದ ಸುದ್ದಿ5 days ago
ಪಿಎಂ ಮುದ್ರಾ ಯೋಜನೆ ; 20 ಲಕ್ಷ ರೂವರೆಗೆ ಸಾಲ ಸೌಲಭ್ಯ ಹೆಚ್ಚಳ
-
ದಿನದ ಸುದ್ದಿ5 days ago
ಅಧಿಕ ಸಾಲ ಸೌಲಭ್ಯ ; ಬ್ಯಾಂಕ್ ಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ
-
ದಿನದ ಸುದ್ದಿ4 days ago
ಕವಿತೆ | ಮುರುಕುಂಬಿ
-
ದಿನದ ಸುದ್ದಿ4 days ago
ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಕೈಗಾರಿಕೆ, ಐಟಿಬಿಟಿ ಹಬ್ ಆಗದಿರುವುದು ದುರದೃಷ್ಟಕರ : ಜಿ. ಬಿ. ವಿನಯ್ ಕುಮಾರ್ ವಿಷಾದ
-
ದಿನದ ಸುದ್ದಿ6 days ago
ದಾವಣಗೆರೆ | ಹಾಸ್ಟೆಲ್ ಎಲ್ಲಾ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಮ್ಯಾಪ್ ಮಾಡಲು ಸೂಚನೆ : ಸಿಇಓ ಸುರೇಶ್ ಬಿ ಇಟ್ನಾಳ್
-
ದಿನದ ಸುದ್ದಿ3 days ago
ದಾವಣಗೆರೆ | ಪರಿಶಿಷ್ಟ ಜಾತಿ, ಪಂಗಡದ ರೈತರಿಂದ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ರಾಜ್ಯದಲ್ಲಿ ಭಾರೀ ಮಳೆ ಸಂಭವ ; ಐದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್