Connect with us

ದಿನದ ಸುದ್ದಿ

ರಂಗ ಕುಸುಮ ಪ್ರಕಾಶನ ಮತ್ತು ಕಲಾಕೇಂದ್ರದ 18 ನೇ ವರ್ಷಾಚರಣೆ | ಪುಸ್ತಕ ಲೋಕಾರ್ಪಣೆ, ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

Published

on

ಸುದ್ದಿದಿನ,ರಾಣೆಬೆನ್ನೂರು : ರಾಣೆಬೇನ್ನೂರಿನ ರಂಗ ಕುಸುಮ ಪ್ರಕಾಶನ ಮತ್ತು ಕಲಾಕೇಂದ್ರದ (ರಿ)18 ನೇ ವರ್ಷಾಚರಣೆ ನಿಮಿತ್ತ 16 ಅಕ್ಟೋಬರ್ 2022ರ ಭಾನುವಾರದಂದು ‘ಸಾಹಿತ್ಯ ಸಂಗಮ – ರಂಗ ಸಂಭ್ರಮ’ ಶೀರ್ಷಿಕೆಯಡಿ ರಾಣೆಬೇನ್ನೂರಿನ ವಾಗೀಶ ನಗರದಲ್ಲಿರುವ ಕಸಾಪ ಭವನದಲ್ಲಿ ವಿವಿಧ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ,ಕಿರು ನಾಟಕ ಸ್ಪರ್ಧೆಯಲ್ಲಿ ವಿಜೇತರುಗೆ ಬಹುಮಾನ ವಿತರರಣೆ ಮತ್ತು ಕವಿಗೋಷ್ಠಿ ಆಯೋಜನೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ರಂಗ ಕರ್ಮಿ ಶಿಕ್ಷಕ ವೆಂಕಟೇಶ ಈಡಿಗರ ಹೇಳಿದ್ದಾರೆ.

‘ಸಾಹಿತ್ಯ ಸಂಗಮ – ರಂಗ ಸಂಭ್ರಮ’ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿರುವ ‘ಶಿವಲೀಲಾಮೃತ’ ಮತ್ತು ‘ಸಂಕ್ರಾಂತಿ ಸಂಪ್ರೀತಿ’ ಕೃತಿಗಳನ್ನು ಶಿವಾನಂದ ಸೊಂಡುರು ಹಾಗೂ ದೇವರಾಜ ಹುಣಸಿಕಟ್ಟೆಯವರು ಪರಿಚಯ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಪ್ರಾಧ್ಯಾಪಕರಾದ ಡಾ. ಶಿವಕುಮಾರ ಎಂ.ಇ.ವಹಿಸಲಿದ್ದು; ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಕೆ.ರವೀಂದ್ರನಾಥ ಇವರು ಮುಖ್ಯ ಅತಿಥಿಗಳಾಗಿ ಆಹ್ವಾನಿತರಾಗಿರುವ ಸಮಾರಂಭದಲ್ಲಿ ಕಾರ್ಯಕ್ರಮ ಸಂಘಟಕ ವೆಂಕಟೇಶ ಈಡಿಗರ ಪ್ರಾಸ್ತಾವಿಕ ಮಾತುಗಳಿಗೆ ಧ್ವನಿಯಾಗಲಿದ್ದಾರೆ.’ಕನ್ನಡ ರಂಗಭೂಮಿ ಅಂದು -ಇಂದು’ ವಿಷಯದ ಕುರಿತು ಉಡುಪಿಯ ಗಣೇಶರಾವ್ ಎಲ್ಲೂರು ಉಪನ್ಯಾಸ ನಿಡಲಿದ್ದು; ‘ಕನ್ನಡ ಸಾಹಿತ್ಯದ ಮಹತ್ವ’ ವಿಷದ ಬಗ್ಗೆ ವೆಂಕಟೇಶ ಕುಲಕರ್ಣಿ ಉಪನ್ಯಾಸ ನೀಡುವರು.

ಮೈಸೂರಿನ ರಂಗಕರ್ಮಿ ನಾಗಚಂದ್ರ, ಬೆಂಗಳೂರಿನ ರಾಮಕೃಷ್ಣ ಬೆಳತೂಕ,ಗದಗಿನ ದತ್ತ ಪ್ರಸನ್ನ ಪಾಟೀಲ,ಬಸವ ಟಿ. ವಿ ಮುಖ್ಯ ಕಾರ್ಯನಿರ್ವಾಹಕ ಮಹೇಶ ಬೆಂಗಳೂರು ಇವರು ‘ಕರ್ನಾಟಕ ಕಲಾನಿಧಿ’ ಪ್ರಶಸ್ತಿಗೆ ಭಾಜನರಾದರೆ ಮಂಜುನಾಥ ಮಣಿಕಂಠ, ರಾಘವೇಂದ್ರ ಹಳಿ ಪೇಟ, ಸುಖದೇವ ಕಾಂಬ್ಳೆ, ಶ್ರೀಶೈಲ ಗುತ್ತೇದಾರ ಹಾಗೂ ಸುರೇಶ ಮಲ್ಲಾಡದ ಇವರು ‘ರಂಗ ಕುಸುಮ ಕಲಾನಿಧಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದು; ಸುನಿತ ಪ್ರಕಾಶ, ಪಾರ್ವತಿಬಾಯಿ ಕಾಶಿಕರ, ಮಹೇಶ ಕೆರೂರ, ಹಾಲ್ಯಾ ನಾಯ್ಕ, ಚನ್ನಬಸಪ್ಪ ಮಲ್ಲೂರ, ವೈಚಾರಿಕ ಸಾಹಿತಿ ಸುಭಾಷ್ ಹೇಮಣ್ಣಾ ಚವ್ಹಾಣ ಈ ಮಹನೀಯರಿಗೆ ‘ರಂಗಕಾವ್ಯ ಸಾಹಿತ್ಯ ಸಿರಿ’ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಿರುನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಲೇಖಕರಿಗೆ ಇದೇ ವೇದಿಕೆಯಲ್ಲಿ ಬಹುಮಾನ ವಿತರಣೆ ಮಾಡಲಾಗುವುದು.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹೆಸರು ನೊಂದಾಯಿಸಿಕೊಂಡಿರುವ ಸುಮಾರು ೪೫ ಕವಿ ಕವಯತ್ರಿಯವರು ಸ್ಪರ್ಧಾ ಸ್ವರೂಪದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನಗಳನ್ನು ವಾಚಿಸಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಿಜಯಕಾಂತ ಪಾಟೀಲರು ವಹಿಸಿದ್ದು; ಮಖ್ಯ ಅತಿಥಿಗಳಾಗಿ ಉಮಾದೇವಿ ಐರಣಿಯವರು ಆಗಮಿಸುವರು.

ಕವಿ ಚಂದ್ರಪ್ಪ ಬಾರಂಗಿ, ಆನಂದ ಹಕ್ಕೆನ್ನವರ ನಿರೂಪಿಸಲಿದ್ದು; ಶಕುಂತಲಾ ಅರ್ಕಾಚಾರಿ ಪ್ರಾರ್ಥಿಸಿದರೆ, ದಾವಲ ಮಲಿಕ ಸ್ವಾಗತಿಸುವರು. ಕವಯತ್ರಿ ದ್ರಾಕ್ಷಾಯಣಿ ಉದಗಟ್ಟಿ, ಲಕ್ಷ್ಮಿ ಅಡಕೆ,ಚನ್ನಬಸಪ್ಪ ನಾಡರ, ಪುಷ್ಷಾ ಮಂಜುನಾಥ ನಿರ್ವಹಿಸುವರು. ಬಸಮ್ಮ ಏಗಿನಗೌಡ್ರ,ಕಾವ್ಯಶ್ರೀ ಅಂಗಡಿ ವಂದಿಸುವರು.ಸಾಹಿತ್ಯ ಮತ್ತು ರಂಗಭೂಮಿ ಆಸಕ್ತ ಸಹೃದಯ ಶೋತೃ ಬಂಧು-ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಿಜೆಪಿಯ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ಎನ್.ಬಿ.ಭಾರ್ಗವಿ ದ್ರಾವಿಡ್ ಆಯ್ಕೆ

Published

on

ಸುದ್ದಿದಿನ,ಚಿತ್ರದುರ್ಗ : ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಯಾಗಿ ಚಿತ್ರದುರ್ಗದ ಶ್ರೀಮತಿ ಎನ್.ಬಿ.ಭಾರ್ಗವಿ ದ್ರಾವಿಡ್ ಅವರನ್ನು ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸದರಾದ ತೇಜಸ್ವಿ ಸೂರ್ಯ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜ್ ರವರು ಅಧಿಕೃತ ನೇಮಕ ಪತ್ರ ನೀಡುವುದರ ಮೂಲಕ ಆಯ್ಕೆ ಮಾಡಲಾಯಿತು.

ಭಾರ್ಗವಿ ದ್ರಾವಿಡ್ ಅವರು ಈ ಹಿಂದೆ ಭಾರತ ಸರ್ಕಾರವು ಚಿತ್ರದುರ್ಗ ನೆಹರು ಯುವ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಿತ್ತು. ಹಾಗೂ ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಲಾಗಿತ್ತು.

ಎಸ್.ಸಿ.ಮೋರ್ಚಾದ ರಾಜ್ಯ ಕಾರ್ಯ ಕಾರಿಣಿ ಸದಸ್ಯರಾಗಿ ಪ್ರವಾಸ ಕೈಗೊಂಡು ಕೆಲಸ ಮಾಡಿದ್ದರು. ಎ.ಬಿ.ವಿ.ಪಿ ಸಂಘಟನೆಯಲ್ಲಿಯೂಸಹ ಸಾಕಷ್ಟು ರಾಜ್ಯ ಮಟ್ಟದ ಜವಾಬ್ದಾರಿ ಗಳನ್ನು ನಿಭಾಯಿಸಿದ್ದರು.ಬರುವ 2024 ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಕೂಡ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಪಿಎಲ್, ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗಳಿಗಾಗಿ ಹೊಸ ಅರ್ಜಿಗಳನ್ನು ಏಪ್ರಿಲ್ 1 ರಿಂದ ಸ್ವೀಕರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ವಿಧಾನಸಭೆಗೆ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ಆದಾಯ1.20 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಅಂತಹವರನ್ನು ಬಿಪಿಎಲ್ ಚೀಟಿಯಿಂದ ಹೊರಗಿಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ : ಅವಧಿ ವಿಸ್ತರಣೆ

Published

on

ಸುದ್ದಿದಿನ ಡೆಸ್ಕ್ : ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಗಡುವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್‌ಗಿಂದು ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಅವರು, ಕಾಂಗ್ರೆಸ್‌ನ ಮಾದೇಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿ, ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಇದುವರೆಗೂ 18 ಲಕ್ಷ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದು ನಡೆಯಬೇಕಾಗಿರುವುದರಿಂದ ಮೂರು ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending