Connect with us

ದಿನದ ಸುದ್ದಿ

ಶ್ರೀರಾಮ್ ಕೋಚಿಂಗ್ ಸೆಂಟರ್ ಶಿಬಿರದ ಸಮಾರೋಪ

Published

on

ಸುದ್ದಿದಿನ,ಹರಪನಹಳ್ಳಿ : ಇಲ್ಲಿನ ಮೇಗಳಪೇಟೆಯ ನವೋದಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶ್ರೀರಾಮ್ ಕೋಚಿಂಗ್ ಸೆಂಟರ್ ವತಿಯಿಂದ ಪ್ರತಿಭಾವಂತ ಬಡ S. S. L. C ವಿದ್ಯಾರ್ಥಿಗಳಿಗಾಗಿ ಏಪ್ರಿಲ್ ನಿಂದ 2 ತಿಂಗಳ ಕಾಲ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಶುಭ ಕೋರಿ ಸಿಹಿ ಹಂಚುವ ಮೂಲಕ ಸಮಾರೋಪಗೊಳಿಸಲಾಯಿತು.

ಅತಿಥಿಯಾಗಿ ಭಾಗವಹಿಸಿ ವಿವಿಧ ಆಟೋಟಗಳೊಂದಿಗೆ “ಸಾಧನೆಯ ಹಾದಿ ಹಾಗೂ ವ್ಯಕ್ತಿತ್ವ ವಿಕಸನ” ವಿಷಯ ಕುರಿತು ಮಾತನಾಡಿದ   ಗಂಗಾಧರ್ ಬಿ.ಎಲ್ ನಿಟ್ಟೂರ್  ಅಂತಿಮವಾಗಿ ಸಮಾರೋಪ ನುಡಿಗಳನ್ನಾಡಿದರು.

ಪ್ರತಿದಿನ ಬೆಳಗ್ಗೆ 10.30ರಿಂದ ಸಂಜೆ 4 ರವರೆಗೆ  2 ತಿಂಗಳ ಕಾಲ ನಡೆದ ಈ ಶಿಬಿರದಲ್ಲಿ ಪಠ್ಯ ಬೋಧನೆಯ ಜೊತೆ ವಾರಕ್ಕೆರೆಡು ದಿನದಂತೆ ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಸಹಕಾರಿಯಾದ ಚಟುವಟಿಕೆಗಳನ್ನು ಸಹ ಆಯೋಜಿಸಿದ್ದಕ್ಕಾಗಿ ವಿದ್ಯಾರ್ಥಿಗಳ ಪೋಷಕರು ಸಂತಸ ವ್ಯಕ್ತಪಡಿಸಿ  ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.

ಸಂಪನ್ಮೂಲ ವ್ಯಕ್ತಿ ಇಸ್ಮಾಯಿಲ್ ಎಲಿಗಾರ್, ಬಿಸಿಎಂ ತಾಲ್ಲೂಕು ವಿಸ್ತರಣಾಧಿಕಾರಿಗಳಾದ ಬಿ.ಸಿ ಚಂದ್ರಪ್ಪ, ಶಿಬಿರದ ಸಂಚಾಲಕರಾದ ಕೆ.ಎನ್ ರೇವಣಸಿದ್ದಪ್ಪ, ಶಿಕ್ಷಕ ಕೃಷ್ಣಮೂರ್ತಿ ಹಾಗೂ ನವೋದಯ ಶಾಲಾ ಸಂಸ್ಥಾಪಕರಾದ ಪಟೇಲ್ ಬೆಟ್ಟನಗೌಡ್ರು ಸೇರಿದಂತೆ ಇತರರು ಹಾಜರಿದ್ದರು. 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.

ದಿನದ ಸುದ್ದಿ

ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಸಮಾಜ ಸೇವಕ : ಇದು ಕೊರೊನಾ ಗೆದ್ದು ಬಂದವನ ಸೇವೆ

Published

on

  • ವರದಿ: ಗಿರಿಧರ್ ಕೊಂಪುಳೀರಾ

ಸುದ್ದಿದಿನ, ಕೊಡಗು : ಅಂದು ಸಣ್ಣದೊಂದು ಶೀತ ಜ್ವರ,ತನ್ನ ಮಗನಿಗೂ ಅದೇ ರೀತಿಯಾಗಿತ್ತು, ದೇವದೆಲ್ಲಡೆ ಅದೇನೋ ವಿಷಮ ಗಾಳಿಯಿಂದ ಖಾಯಿಲೆ ಹರಡುತಿದೆ,ಪರೀಕ್ಷಿಕೊಳ್ಳಿ ಎಂದು ಸರ್ಕಾರಗಳು ಪ್ರಚಾರ ಮಾಡುತ್ತಿದ್ದವು,ಯಾವುದಕ್ಕೂ ಪರೀಕ್ಷೆಗೆ ಹೋದರೆ ಸಾಲುಸಾಲು ಜನ ಮೂಗಿನಿಂದ,ಬಾಯಿಂದ ಸ್ಯಾಂಪಲ್ ಪಡೆಯುವುದು,ಇಷ್ಟು ಮಾಡುವುದಕ್ಕೆ ಒಂದು ದಿನವೇ ಸವೆದುಹೋಯಿತು, ಊಟವಿಲ್ಲ ನೀರಿಲ್ಲ,ತಾನೇಗೋ ಇರುತ್ತೇನೆ ಪುಟ್ಟ ಮಗನ ಕಥೆಯೇನು..?

ಹೌದು ಸಮಾಜ ಸೇವಕ ,ವೃತ್ತಿಯಲ್ಲಿ ವಕೀಲ,ಕೊಡಗಿನ ಹಿತ ಕಾಪಾಡಲು ಸದಾ ಮುಂದೆಯಿರುವ ಇವರ ಹೆಸರು
ಪವನ್ ಪೆಮ್ಮಯ್ಯ,ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿರುವ ಇವರು ಅದೆಲ್ಲಿಂದ ಕೊರೊನಾ ಒಕ್ಕರಿಸಿತೋ ಗೊತ್ತಿಲ್ಲ ದಿನನಿತ್ಯ ಸಾವಿರಾರು ಜನರು ಬರುವ ಜಿಲ್ಲಾ ನ್ಯಾಯಾಲಯ,ಜನರ ಮಧ್ಯೆಯೇ ಸೇವೆಗಳಲ್ಲಿ ಇರುವುದರಿಂದಲೋ ಕೊರೊನಾ ಪಾಸಿಟಿವ್ ಅಂತಾ ಧೃ಼ಡಪಟ್ಟು, ಆಸ್ಪತ್ರೆಯಲ್ಲಿ ಸಿಕ್ಕಿದ ಪುಡ್ಡು,ಬೆಡ್ಡು ಚಿಕಿತ್ಸೆಗೆ ಮಾತ್ರೆ ನುಂಗಿ ಕೊರೊನಾ ತನ್ನಿಂದ ಓಡಿಹೋಗುವಷ್ಟರ ಮಟ್ಟಿಗೆ ನಾಜೂಕಾಗಿ ಚಿಕಿತ್ಸೆ ತೆಗೆದುಕೊಂಡರು.

ಆಸ್ಪತ್ರೆಯಿಂದ ಯುದ್ದ ಗೆದ್ದ ಸಂಭ್ರಮವೇನೋ ಇತ್ತು ಆದರೆ ತಾನು ಕ್ವಾರಂಟೈನ್ ನಲ್ಲಿದ್ದ ಸಂದರ್ಭ ಆದ ಅನುಭವದಿಂದ ನಲುಗಿ ಇದೀಗ ಮತ್ತೆ ಜನರ ಮಧ್ಯೆ ಬಂದಿದ್ದಾರೆ.ಹೌದು ಕೊರೊನಾ ಪಾಸಿಟಿವ್ ಆಗಿ ನರಳುವ ರೋಗಿಗಳ ಕಷ್ಟ ಒಂದಡೆಯಾದರೆ,ಇನ್ನೊಂದೆಡೆ ಕೊರೊನಾ ಪೀಡಿತ ವ್ಯಕ್ತಿಯ ಮನೆಯವರ ಪಾಡು.

ಇದನ್ನೂ ಓದಿ |ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ

ಇದೀಗ ಲಾಕ್ ಡೌನ್,ಮಡಿಕೇರಿಯಲ್ಲಿ ಮಳೆ ಸಹ ಶುರುವಾಗಿದೆ.ಶುದ್ದ ಕುಡಿಯುವ ನೀರು ಆಸ್ಪತ್ರೆಯಲ್ಲಿದ್ದರೂ ಕುಡಿಯುವ ಹಾಗಿಲ್ಲ,ಮಕ್ಕಳು,ವೃದ್ದರೆನ್ನದೆ ಆಸ್ಪತ್ರೆಯತ್ತ ಮುಖ ಮಾಡುವ ಮಂದಿ ಹೊಟೇಲುಗಳಿಲ್ಲದೆ, ಆಹಾರಕ್ಕೂ ಪರದಾಡುವಂತಹವರಿಗೆ ಪವನ್ ಅನಧಾತರಾಗಿದ್ದಾರೆ.

ದಿನನಿತ್ಯ ಮಡಿಕೇರಿ ಜಿಲ್ಲಾಸಪ್ಪತ್ರೆ ಎದುರು ಒಂದೆರೆಡು ಯವಕರನ್ನು ಸೇರಿಸಿಕೊಂಡು ದಿನನಿತ್ಯ 300 ಮಂದಿಗೆ ತಾವೇ ಮನೆಯಲ್ಲಿ ತಯಾರಿಸಿ ಹೊಟ್ಟೆ ತುಂಬುವಷ್ಟು ನೀರು,ದೋಹ ತಣಿವಷ್ಟು ನೀರಿನ ವ್ಯವಸ್ಥೆಯನ್ನು ಆಸ್ಪತ್ರೆಯ ಬಳಿಯಲ್ಲೇ ಕೊರೊನಾದ ಸಕಲ ನಿಮ ಪಾಲಿಸಿಕೊಂಡು,ಅವರ ಬಳಿಗೆ ಬರುವವರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಆರಂಭದಲ್ಲಿ ಸ್ವಂತ ಖರ್ಚಿನಿಂದ ಸಣ್ಣ ಪ್ರಮಾಣದಲ್ಲಿ ಆರಂ‌ಭಿಸಿದ ಈ ಕಾರ್ಯಕ್ಕೆ,ಸ್ನೇಹಿತರು ಹಿತೈಶಿಗಳ ಪ್ರೋತ್ಸಾಹವಿದೆ. ಏನೇ ಆಗಲಿ ಸಮಾಜದಲ್ಲಿ ಕೊರೊನಾ ಜೊತೆಗೂ ಇತರರೊಂದಿಗೆ ಬೆರೆಯಬಹುದು,ಅವರ ಕಷ್ಟ ಸುಖದಲ್ಲಿ ಸುರಕ್ಷಿತವಾಗಿ ಭಾಗಿಯಾಗುತ್ತಿರುವುದಕ್ಕೆ ಇದಕ್ಕಿಂದ ಉದಾಹರಣೆ ಬೇಕಿಲ್ಲ.

ಕೃಪೆ : Mangalore information

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲೆಯಲ್ಲಿ 390 ಜನರಿಗೆ ಕೋವಿಡ್ ಸೋಂಕು ದೃಢ: 80 ಮಂದಿ ಬಿಡುಗಡೆ

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶುಕ್ರವಾರದ ವರದಿಯಲ್ಲಿ 390 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19,707 ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 182, ಚಳ್ಳಕೆರೆ 57, ಹಿರಿಯೂರು 28, ಹೊಳಲ್ಕೆರೆ 30, ಹೊಸದುರ್ಗ 77, ಮೊಳಕಾಲ್ಮುರು ತಾಲ್ಲೂಕಿನಲ್ಲಿ 16 ಪ್ರಕರಣ ಸೇರಿದಂತೆ ಒಟ್ಟು 390 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಶುಕ್ರವಾರ 80 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಶುಕ್ರವಾರ ಒಟ್ಟು 2139 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.  ವರದಿಯಲ್ಲಿ 390 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 19,707 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ | ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ 

ಕೋವಿಡ್‍ನಿಂದ ಇಂದು ಇಬ್ಬರು ಮೃತರಾಗಿದ್ದು ಇದುವರೆಗೆ ಒಟ್ಟು 101 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 17,356 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 2,250 ಸಕ್ರಿಯ ಪ್ರಕರಣಗಳು ಇವೆ.
ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 1,59,469 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.

ಈವರೆಗೆ 4,45,728 ಜನರ ಮಾದರಿ ಸಂಗ್ರಹಿಸಲಾಗಿದ್ದು, 4,23,932 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 1352 ಜನರ ವರದಿ ಬರುವುದು ಬಾಕಿ ಇದೆ. 737 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ

Published

on

ಸುದ್ದಿದಿನ ಡೆಸ್ಕ್ : ಲಾಕ್ ಡೌನ್ ನಡುವೆ ನಟ ಚಂದನ್ ಗೌಡ ಮತ್ತು ಕವಿತಾ ಗೌಡ ಶುಕ್ರವಾರ ವಿವಾಹವಾದರು.

ಕೆಲವೇ ಆಪ್ತರ‌ ಸಮ್ಮುಖದಲ್ಲಿ ಇವರ ಕಲ್ಯಾಣವುನೆರವೇರಿತು. ಚಂದನ್ ಮಾಸ್ಕ್ ಧರಿಸಿಕೊಂಡೇ ಮಾಂಗಲ್ಯಧಾರಣೆ ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮ ಹಂಚಿಕೊಂಡ ಜೋಡಿಯು ಮದುವೆ ಫೋಟೋ ಪೋಸ್ಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ31 mins ago

ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಸಮಾಜ ಸೇವಕ : ಇದು ಕೊರೊನಾ ಗೆದ್ದು ಬಂದವನ ಸೇವೆ

ವರದಿ: ಗಿರಿಧರ್ ಕೊಂಪುಳೀರಾ ಸುದ್ದಿದಿನ, ಕೊಡಗು : ಅಂದು ಸಣ್ಣದೊಂದು ಶೀತ ಜ್ವರ,ತನ್ನ ಮಗನಿಗೂ ಅದೇ ರೀತಿಯಾಗಿತ್ತು, ದೇವದೆಲ್ಲಡೆ ಅದೇನೋ ವಿಷಮ ಗಾಳಿಯಿಂದ ಖಾಯಿಲೆ ಹರಡುತಿದೆ,ಪರೀಕ್ಷಿಕೊಳ್ಳಿ ಎಂದು...

ನಿತ್ಯ ಭವಿಷ್ಯ1 hour ago

ನೀವು ಆರ್ಥಿಕವಾಗಿ ಸಂಕಷ್ಟ ಏಕೆ? ಎದುರಿಸುತ್ತಿದ್ದೀರಿ.. ಹಾಗಾದರೆ ಇಂದೇ ನಿಮ್ಮ ಜಾತಕ ಬರೆದು ಪರೀಕ್ಷಿಸೋಣ

ಜನ್ಮ ಕುಂಡಲಿಯಲ್ಲಿ ಈ ಗ್ರಹಗಳು ಇದ್ದರೆ ಆಗರ್ಭ ಶ್ರೀಮಂತರು..ಧನ ಯೋಗ ಪ್ರಾಪ್ತಿ.. ಶ್ರೀ ಸೋಮಶೇಖರ್ ಗುರೂಜಿ B.Sc Mob.No.9353488403 ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ...

ನಿತ್ಯ ಭವಿಷ್ಯ2 hours ago

ಈ ರಾಶಿಯವರಿಗೆ ಕುಟುಂಬದೊಂದಿಗೆ ವಿರಸ ಮನಸ್ತಾಪ ಕಂಡುಬರಲಿದೆ! ಹಣಕಾಸಿನ ತೊಂದರೆ ನಿವಾರಣೆಯಾಗಲಿದೆ! ಶನಿವಾರ ರಾಶಿ ಭವಿಷ್ಯ-ಮೇ-15,2021

ಸೂರ್ಯೋದಯ: 05:53 AM, ಸೂರ್ಯಸ್ತ: 06:36 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ವೈಶಾಖ ಮಾಸ, ವಸಂತ ಋತು, ಉತ್ತರಾಯಣ,...

ಲೈಫ್ ಸ್ಟೈಲ್3 hours ago

ಎದೆ ಹಾಲು ಶಿಶುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೊರೋನಾದಂತಹ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ

ಡಾ.ಜೋಶಿತಾ ನಾಯಕ್ , ಎಂಬಿಬಿಎಸ್ , ಡಿಜಿಒ, ಡಿಎನ್ ಬಿ, ಫರ್ಟಿಲಿಟಿ ಸ್ಪೆಷಲಿಸ್ಟ್ (ಐಎಂಎ ಎಎಂಎಸ್), ಸಿಐಎಂ, ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗ, ಅಪೊಲೊ ಕ್ರೇಡಲ್ &...

ದಿನದ ಸುದ್ದಿ13 hours ago

ಚಿತ್ರದುರ್ಗ | ಜಿಲ್ಲೆಯಲ್ಲಿ 390 ಜನರಿಗೆ ಕೋವಿಡ್ ಸೋಂಕು ದೃಢ: 80 ಮಂದಿ ಬಿಡುಗಡೆ

ಸುದ್ದಿದಿನ,ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶುಕ್ರವಾರದ ವರದಿಯಲ್ಲಿ 390 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19,707 ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ...

ದಿನದ ಸುದ್ದಿ15 hours ago

ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ

ಸುದ್ದಿದಿನ ಡೆಸ್ಕ್ : ಲಾಕ್ ಡೌನ್ ನಡುವೆ ನಟ ಚಂದನ್ ಗೌಡ ಮತ್ತು ಕವಿತಾ ಗೌಡ ಶುಕ್ರವಾರ ವಿವಾಹವಾದರು. ಕೆಲವೇ ಆಪ್ತರ‌ ಸಮ್ಮುಖದಲ್ಲಿ ಇವರ ಕಲ್ಯಾಣವುನೆರವೇರಿತು. ಚಂದನ್...

ಲೈಫ್ ಸ್ಟೈಲ್16 hours ago

ಬಡವರ ಸೇಬು ‘ಪೇರಲೆ’ ಹಣ್ಣು ತಿನ್ನಿ ಆರೋಗ್ಯವಾಗಿರಿ

ಇತ್ತೀಚಿನ ದಿನಗಳಲ್ಲಿ “ಕಿವಿ ಹಣ್ಣು” ತುಂಬಾ ಬಳಕೆಯಾಗುತ್ತಿದೆ. ಅದಕ್ಕೆ ಕಾರಣ ಅನಾರೋಗ್ಯದಿಂದ ನರಳುವವರಿಗೆ ಹಿಂದೆಲ್ಲಾ ಆಪಲ್, ಮೂಸಂಬಿ, ಕಿತ್ತಳೆ ತಿನ್ನಿ ಏನುತ್ತಿದ್ದ ವೈದ್ಯರು ಈಗ ವಿಟಮಿನ್ ಸಿ...

ದಿನದ ಸುದ್ದಿ17 hours ago

ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ನಿಧನ

ಸುದ್ದಿದಿನ, ಬೆಂಗಳೂರು : ನಾರಾಯಣ ಹೃದಯಾಲಯದಲ್ಲಿ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ (65) ಕೊರೋನಾದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಮಹದೇವ...

ದಿನದ ಸುದ್ದಿ17 hours ago

ದಾವಣಗೆರೆ | ಇಂದಿನಿಂದ 2ನೇ ಡೋಸ್ ಲಸಿಕೆ

ಸುದ್ದಿದಿನ,ದಾವಣಗೆರೆ:ಕೋವಿಡ್ 2ನೇ ಡೋಸ್ ಲಸಿಕೆಯನ್ನು ಮೇ.14 ರಿಂದ ನೀಡಲಾಗುವುದು. ಕೋವಿಡ್‍ಶೀಲ್ಡ್ ನ 2ನೇ ಡೋಸ್ ಲಸಿಕೆಯನ್ನು ನಗರವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಮೊದಲ ಡೋಸ್ ಪಡೆದು 7 ರಿಂದ...

ದಿನದ ಸುದ್ದಿ17 hours ago

ದಿವ್ಯ ಜ್ಯೋತಿ ಬಸವಣ್ಣ..!

ನೇತ್ರಾವತಿ ಸಿ ಎಂ .ನೆಲ್ಲಿಕಟ್ಟೆ ನಾ ಕಂಡಂತೆ ನನ್ನ ದೃಷ್ಠಿ ಕೋನದಲ್ಲಿ ಆಗಿನ 12 ನೇ ಶತಮಾನದಲ್ಲಿ ಆಲದ ಮರವಂತೆ ಆಳವಾಗಿ ಬೇರೂರಿದ್ದ ಜಾತಿಯನ್ನು ತೊಲಗಿಸಲು ಪ್ರಕಾಶಮಾನವಾಗಿ...

Trending