ದಿನದ ಸುದ್ದಿ
ಜನವರಿ 1 ರಂದು ಸುಕೋ ಬ್ಯಾಂಕ್ ‘ರಜತ ಸಂಭ್ರಮ’ : ಮೋಹಿತ್ ಮಸ್ಕಿ
ಸುದ್ದಿದಿನ,ಬಳ್ಳಾರಿ: ಸುಕೋ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಮೋಹಿತ್ ಮಸ್ಕಿ ಅವರು ಸುಕೋ ಬ್ಯಾಂಕ ಕ್ಕೇಂದ್ರ ಕಚೇರಿ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುಕೋ ಬ್ಯಾಂಕ್’ ತನ್ನ ಇಪ್ಪತ್ತೈದು ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಜನವರಿ 1, 2019 ರಿಂದ ವರ್ಷಪೂರ್ತಿ ತನ್ನ ಎಲ್ಲಾ ಶಾಖೆಗಳಲ್ಲಿ `ರಜತ ಸಂಭ್ರಮ’ವನ್ನು ಆಚರಿಸಲಿದೆ.
ಜನವರಿ 5ರ ಶನಿವಾರ ಬೆಳಗ್ಗೆ 6 ಗಂಟೆಗೆ `ರಜತ ಸಂಭ್ರಮ’ ಪ್ರಾರಂಭವಾಗಲಿದೆ. ರಜತ ಸಂಭ್ರಮ ಆಚರಣೆಯ ಅಂಗವಾಗಿ `ಸುಸ್ಥಿರ ಕೃಷಿ’ಗಾಗಿ ಮ್ಯಾರಥಾನ್ ಓಟ ಬೆಳಗ್ಗೆ 6 ಗಂಟೆಗೆ. ಮಧ್ಯಾಹ್ನ 12 ಗಂಟೆಗೆ ಬರಗೆದ್ದ ಕೃಷಿಕರ ಜೊತೆ ಜಿಲ್ಲಾ ಪಂಚಾಯಿತಿಯ `ನಜೀರ್‍ಸಾಬ್’ ಸಭಾಂಗಣದಲ್ಲಿ ಸಂವಾದ. `ಫುಡ್ ಟ್ಯಾಲೆಂಟ್ ಹಂಟ್ ಫಾರ್ ಸ್ಟಾರ್ಟ್‍ಅಪ್’ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದ ಮರೆಯಾದ ಖಾದ್ಯಗಳು ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆ, ಪ್ರದರ್ಶನ ಮತ್ತು ಕಡ್ಢಾಯ ಮಾರಾಟವನ್ನು ಬಸವಭವನದಲ್ಲಿ ಸಂಜೆ 6 ಗಂಟೆಗೆ. ಸಭಾಂಗಣದಲ್ಲಿ `ಸುಕೃತ ಕೃಷಿ’ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು `ಸುಕೋ ಸಂಗೀತ ಸಂಭ್ರಮ’ ಜಿûೀ ಟಿ.ವಿ ಯ ಸರೆಗಮಪದಲ್ಲಿ ವಿಜೇತರಾದ ಖ್ಯಾತ ಬಾಲ ಕಲಾವಿದರಿಂದ ನಡೆಯಲಿದೆ.
ಸುಸ್ಥಿರ ಕೃಷಿಗಾಗಿ ಸಾವಿರದ ಓಟ:-`ಸುಸ್ಥಿರ ಕೃಷಿ’ಗಾಗಿ ಧ್ಯೇಯವಾಕ್ಯದ ಅಡಿ ನಡೆಯುವ ಮ್ಯಾರಥಾನ್, ಜನವರಿ 5ರ ಶನಿವಾರ, ಬೆಳಗ್ಗೆ 6:15 ಗಂಟೆಗೆ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಪ್ರಾರಂಭ. ಗಡಿಗಿ ಚೆನ್ನಪ್ಪ ವೃತ್ತ, ರೈಲ್ವೆ ನಿಲ್ದಾಣ, ಎಚ್‍ಆರ್ ಗವಿಯಪ್ಪ ವೃತ್ತದಲ್ಲಿಯ ಶ್ರೀಬಸವೇಶ್ವರ ಪ್ರತಿಮೆ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ (ಓವರ್‍ಬ್ರಿಡ್ಜ್), ಬಸವನಕುಂಟೆ ಸರ್ಕಲ್, ವಾಲ್ಮೀಕಿ ವೃತ್ತ (ಎಸ್.ಪಿ. ಸರ್ಕಲ್) ಮೂಲಕ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ವಿರಾಮಗೊಳ್ಳಲಿದೆ.
ಕರ್ನಾಟಕದ ಕೃಷಿಸಾಧಕರು, ರೈತರು, ಸುಕೃತ ಕೃಷಿ ಪ್ರಶಸ್ತಿ ಪುರಸ್ಕøತರು, ಪ್ರಗತಿಪರರು, ಕೃಷಿ ತಜ್ಞರು, ವಿದ್ಯಾರ್ಥಿಗಳು ಮತ್ತು ನಗರವಾಸಿಗಳು ಸೇರಿ ಓಟದಲ್ಲಿ 1000ಕ್ಕೂ ಹೆಚ್ಚು ಜನ ಓಟಗಾರರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. 14 ವರ್ಷ ಮೇಲ್ಪಟ್ಟವರು ಓಟದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ರೂಪಾಯಿ 25,000, ದ್ವಿತೀಯ ರೂಪಾಯಿ 15,000 ಮತ್ತು ತೃತೀಯ ರೂಪಾಯಿ 10000 ಬಹುಮಾನ ನೀಡಲಾಗುತ್ತದೆ.
ಬರಗೆದ್ದ’ ಕೃಷಿಕರೊಂದಿಗೆ ಕೃಷಿ ಸಚಿವರ ಸಂವಾದ : ನಜೀರ್‍ಸಾಬ್ ಸಭಾಂಗಣ, ಜಿಲ್ಲಾ ಪಂಚಾಯಿತಿ, ಬಳ್ಳಾರಿ. ಸಮಯ : ಮಧ್ಯಾಹ್ನ 12 ಗಂಟೆಗೆ. ಬಳ್ಳಾರಿ ಜಿಲ್ಲಾ ಪಂಚಾಯಿತಿಯ ನಜೀರ್‍ಸಾಬ್ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಯಿಂದ `ಬರಗೆದ್ದ ಕೃಷಿಕರ ಜೊತೆ ಸಂವಾದ’. ಸುಕೋ ಬ್ಯಾಂಕ್ ಪ್ರಾಯೋಜಿತ `ಸುಕೃತ ಕೃಷಿ’ ಪ್ರಶಸ್ತಿ ಸಂಚಾಲನ ಸ್ವತಂತ್ರ ಸಮಿತಿಯು ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೇ, ಸ್ವಯಂ ಶ್ರಮ.ಹಾಗೂ ಛಲದಿಂದ ಕೃಷಿಯಲ್ಲಿ ಯಶಸ್ವನ್ನು ಸಾಧಿಸಿ, ನಾಡಿನ ಕೃಷಿಕರಿಗೆ ಮಾದರಿಯಾಗಿ, ಅನೇಕರಿಗೆ ಮಾರ್ಗದರ್ಶನ ನೀಡುತ್ತಿರುವ ಬರಗೆದ್ದ ಅನೇಕ ರೈತರನ್ನು ಭೇಟಿ ಮಾಡಿ, 45 ಸಾಧಕರನ್ನು ಗುರುತಿಸಿ, ಸಂವಾದಕ್ಕೆ ಆಯ್ಕೆ ಮಾಡಿದೆ.
ಈ ಸಾಧಕರು ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದರ ಹಿನ್ನಲೆ, ಶ್ರಮ, ಗುರಿ ತಲುಪಿದ ಯೋಜನೆ (ಪ್ಲಾನಿಂಗ್), ಯಶಸ್ಸು, ಎದುರಿಸಿದ ಸವಾಲುಗಳು, ಗುರಿ ತಲುಪಿದಾಗ ಸಿಕ್ಕ ಸಮಾಧಾನ ಇನ್ನಿತರೆಗಳ ಬಗ್ಗೆ ಮನದಾಳದ ಮಾತುಗಳ ಮೂಲಕ ತಮ್ಮ ಅನುಭವವನ್ನು ಸಂವಾದದಲ್ಲಿ ಹಂಚಿಕೊಳ್ಳಲಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಈ ಸಾಧಕರ ಶ್ರಮ ಮತ್ತು ಸಾಧನೆಯನ್ನು ನಾಡಿಗೆ ಪರಿಚಯಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ `ಸುಕೋ ಬ್ಯಾಂಕ್’ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪರೋಕ್ಷವಾಗಿ ಸೇವೆ ಸಲ್ಲಿಸುತ್ತಿರುವುದು ಸಂತೋಷದ ವಿಷಯ. `ಫುಡ್ ಟ್ಯಾಲೆಂಟ್ ಹಂಟ್ ಫಾರ್ ಸ್ಟಾರ್ಟ್‍ಅಪ್’
(ಆಹಾರ ಪ್ರತಿಭಾನ್ವೇಷಣೆಯಿಂದ ಉದ್ದಿಮೆಯತ್ತ)
ಅಡುಗೆ ಮನೆಗೆ ಸೀಮಿತವಾಗಿದ್ದ ಆಹಾರ ತಯಾರಿಸುವ ಪ್ರತಿಭೆಗಳನ್ನು ಉದ್ಯಮಿಗಳನ್ನಾಗಿ ರೂಪಾಂತರ ಮಾಡುವಲ್ಲಿ `ಸುಕೋ ಬ್ಯಾಂಕ್’ ಉತ್ತರ ಕರ್ನಾಟಕದ ಮರೆತುಹೋದ ತಿಂಡಿಗಳು ಮತ್ತು `ಸಿರಿಧಾನ್ಯ’ ಖಾದ್ಯಗಳ ತಯಾರಿಕೆಯ ಸ್ಪರ್ಧೆ – ಪ್ರದರ್ಶನ ಮತ್ತು ಕಡ್ಢಾಯ ಮಾರಾಟ ಮೇಳವನ್ನು, ಬಸವಭವನದಲ್ಲಿ ಸಂಜೆ 6 ಗಂಟೆಗೆ ಏರ್ಪಡಿಸಿದೆ ಎಂದರು.
ಸುಕೋ ಬ್ಯಾಂಕ್ ಕಾರ್ಯನಿರ್ವಹಿಸುವ 11 ಜಿಲ್ಲೆಗಳಲ್ಲಿ ಎರೆಡು ವಿಭಾಗಗಳಲ್ಲಿ (ಉತ್ತರ ಕರ್ನಾಟಕದ ಮರೆತುಹೋದ ಖಾದ್ಯಗಳು ಮತ್ತು ಸಿರಿಧಾನ್ಯ ಖಾದ್ಯಗಳು) ಸ್ಪರ್ಧೆ ನಡೆಯಲಿದೆ. ಸ್ಪರ್ಧಾಳುಗಳು ಎರೆಡೂ ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ. ಸ್ಪರ್ಧೆಯು ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆದು, ಕೊನೆಯ ಸುತ್ತಿನಲ್ಲಿ ಮೆಗಾ ಫೈನಲ್ (ಬಳ್ಳಾರಿಯಲ್ಲಿ) ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡದವರು, ಮೆಗಾ ಫೈನಲ್‍ಗೆ ಆಯ್ಕೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ರೂಪಾಯಿ 10,000, ದ್ವಿತೀಯ ರೂಪಾಯಿ 7500 ಮತ್ತು ತೃತೀಯ ಬಹುಮಾನವಾಗಿ ರೂಪಾಯಿ 5000 ನೀಡಲಾಗುತ್ತದೆ. ಮೆಗಾ ಫೈನಲ್‍ನಲ್ಲಿ ಪ್ರಥಮ ಬಹುಮಾನ ರೂಪಾಯಿ 25,000, ದ್ವಿತೀಯ ಬಹುಮಾನ ರೂಪಾಯಿ 15,000 ಮತ್ತು ತೃತೀಯ ಬಹುಮಾನವಾಗಿ ರೂಪಾಯಿ 10,000. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು ಹತ್ತಿರದ ಸುಕೋ ಬ್ಯಾಂಕ್ ಶಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.
ಈ ಮೂಲಕ ಪ್ರತಿಭಾನ್ವಿತ ಅಡುಗೆ ತಯಾರಿಕರನ್ನು ಪ್ರೋತ್ಸಾಹಿಸಿ, ಉದ್ಯಮ ಕ್ಷೇತ್ರಕ್ಕೆ ಪರಿಚಯ ಮಾಡಿ, ಆಹಾರ ಉದ್ಯಮದಲ್ಲಿ ಭದ್ರವಾಗಿ ನೆಲೆಯೂರಲು ಅಗತ್ಯ ತಾಂತ್ರಿಕ ಮತ್ತು ಆಡಳಿತಾತ್ಮಕ ನೆರವು ನೀಡುವ ಜವಾಬ್ದಾರಿ `ಸುಕೋ ಬ್ಯಾಂಕ್’ನದ್ದು. ಒಂದರ್ಥದಲ್ಲಿ ಪ್ರತಿಭಾನ್ವೇಷಣೆಯ ಜೊತೆ ಜೊತೆಯಲ್ಲಿ ಉದ್ಯಮಿಗಳಾಗುವ ಹೊಸ ಕನಸನ್ನು ಮೂಡಿಸುವ ಜವಾಬ್ದಾರಿಯುತ ಪ್ರಯತ್ನ ಸುಕೋ ಬ್ಯಾಂಕ್‍ನದ್ದಾಗಿದೆ.
ಜಿಲ್ಲಾವಾರು ಮತ್ತು ಮೆಗಾ ಫೈನಲ್‍ನ ಎಲ್ಲಾ ಸ್ಪರ್ಧೆಗಳಲ್ಲೂ ಜನಪ್ರಿಯ ನಟ, ಸಿಹಿಕಹಿ ಚಂದ್ರು ಪ್ರಮುಖ ತೀರ್ಪುಗಾರರು. ಮತ್ತು ಸಮನ್ವಯ ತೀರ್ಪುಗಾರರಾಗಿ ಮರ್ಚೇಡು ಮಲ್ಲಿಕಾಜುನಗೌಡ ಅವರು ಕಾರ್ಯನಿರ್ವಹಿಸಲಿದ್ದಾರೆ.
`ಸುಕೃತ ಕೃಷಿ’ ಪ್ರಶಸ್ತಿ ಮತ್ತು ಸುಕೋ ಸಂಗೀತ
ಸಂಭ್ರಮ:- ಸುಕೃತ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ ಆಯ್ಕೆ ಮಾಡಿರುವ, ನಾಡಿನ ದಿಕ್ಸೂಚಿ ಆಗಿರುವ ಓರ್ವ ಕೃಷಿಕರು ಮತ್ತು ಓರ್ವ ಕೃಷಿ ತಂತ್ರಜ್ಞಾನ ಸಾಧಕರಿಗೆ ಬಸವಭವನದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ, ಪಾರಿತೋಷಕ ಮತ್ತು ಅಭಿನಂದನೆಯ ಪ್ರಶಂಸಾ ಪತ್ರವನ್ನು ಒಳಗೊಂಡಿರುತ್ತದೆ. ಈಬಾರಿಯ `ಸುಕೃತ ಕೃಷಿ’ ಪ್ರಶಸ್ತಿ ಪುರಸ್ಕøತರ ಹೆಸರುಗಳನ್ನು ಸುಕೃತ ಪ್ರಶಸ್ತಿ ಸಂಚಾಲನಾ ಸಮಿತಿ ಶೀಘ್ರದಲ್ಲೇ ಪ್ರಕಟಿಸಲಿದೆ. ಕೃಷಿ ಸಾಧಕರ ಕುರಿತು ಸಾಕ್ಷ್ಯಚಿತ್ರ ಮತ್ತು ಪುಸ್ತಕವನ್ನು ಪ್ರಕಟಿಸಲಾಗುತ್ತದೆ. ಕಳೆದ ಬಾರಿ ಸುಕೃತ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿಯು ‘ಉತ್ತಮ ಕೃಷಿಕ’ ಪ್ರಶಸ್ತಿಯನ್ನು ಸಾಗರದ ಶ್ರೀ ಮುತ್ತಣ್ಣ ಪೂಜಾರ್ ಅವರಿಗೆ ‘ಉತ್ತಮ ಕೃಷಿ ತಂತ್ರಜ್ಞಾನ’ ಪ್ರಶಸ್ತಿಯನ್ನು ಶಿರಸಿಯ ಶ್ರೀ ಲಕ್ಷ್ಮೀ ನಾರಾಯಣ ಹೆಗಡೆ ಅವರಿಗೆ ಪ್ರದಾನ ಮಾಡಲಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು. ಪ್ರತೀ ಸಲ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ಮಾತ್ರ ಸುಕೋ ಬ್ಯಾಂಕ್ ನಿರ್ಧರಿಸಲಿದ್ದು, ವಿಜೇತರನ್ನು ನಿರ್ಧರಿಸುವುದು ಹಾಗೂ ಅವರ ಬಗ್ಗೆ ಸಾಕ್ಷ್ಯ ಚಿತ್ರ, ಪುಸ್ತಕಗಳನ್ನು ಪ್ರಕಟಿಸುವುದು ಕೃಷಿ ಪ್ರಶಸ್ತಿ ಸಂಚಾಲನಾ ಸ್ವತಂತ್ರ ಸಮಿತಿಯ ಜವಾಬ್ದಾರಿಯಾಗಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಜಿ. ಟಿ.ವಿ.ಯ ಸರಿಗಮಪ ಸರಣಿಯಲ್ಲಿ ವಿಜೇತರಾದ ಬಾಲ ಕಲಾವಿದರಾದ ಶ್ರೀ ಜ್ಞಾನೇಶ್, ಕು. ಪ್ರಕೃತಿ ರೆಡ್ಡಿ ಹಾಗೂ ಶ್ರೀ ವಿಶ್ವ ಪ್ರಸಾದ್ ಅವರು ಸುಕೋ ಸಂಗೀತ ಸಂಜೆಯನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಿದರು. ಮ್ಯಾನೇಜಿಂಗ್ ಡೈರೆಕ್ಟರ್ ಪರಿಮಾಳಚಾರ್ ಅಗ್ನಿಹೋತ್ರಿ, ಬೋರ್ಡ್ ಸೆಕ್ರೆಟರಿ ವೆಂಕಟೇಶ ರಾವ್ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಒಡಿಶಾ ರೈಲು ದುರಂತ; 80ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿಗೆ ಆಗಮನ

ಸುದ್ದಿದಿನ, ಬೆಂಗಳೂರು: ಒಡಿಶಾದ ರೈಲು ದುರಂತದಲ್ಲಿ ಪಾರಾದ 80ಕ್ಕೂ ಹೆಚ್ಚು ಕನ್ನಡಿಗರು ವಿಮಾನದ ಮೂಲಕ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಒಡಿಶಾಗೆ ತೆರಳಿದ್ದಾರೆ. ಎರಡು ವಿಮಾನಗಳಲ್ಲಿ 80ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿಗೆ ಆಗಮಿಸಿದ್ದು, ನಂತರ ರಾಜ್ಯ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ತಮ್ಮ ಊರಿಗೆ ತೆರಳಿದ್ದಾರೆ.
18 ಜನ ಮೈಸೂರಿಗೆ ಉಳಿದವರು ಹಾಸನ, ಚಿಕ್ಕಮಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಒಡಿಶಾ ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ಸಾಗಿದೆ. ಬಾಲಸೋರ್ ಸರ್ಕಾರಿ ಆಸ್ಪತ್ರೆಗೆ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ, ಅಲ್ಲಿನ ವೈದ್ಯಾಧಿಕಾರಿಗಳಿಂದ ರಾಜ್ಯದ ಗಾಯಾಳುಗಳ ಬಗ್ಗೆ ಮಾಹಿತಿ ಪಡೆದುಕೊಂಡರು, ಕನ್ನಡಿಗರ ಸುರಕ್ಷತೆ ಸಂಬಂಧ ಅಲ್ಲಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೂ ಸಚಿವರು ಸಮಾಲೋಚನೆ ನಡೆಸಿದ್ದಾರೆ.
ಒರಿಸ್ಸಾದ ಪುರಿಯಲ್ಲಿ ನಡೆದ ಜಾನಪದ ಜಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ 17 ಜನರ ಕಲಾವಿದರ ತಂಡ ರೈಲು ದುರಂತದ ಹಿನ್ನೆಲೆಯಲ್ಲಿ ಹಿಂದಿರುಗಿ ಬರಲಾಗದೆ ಅತಂತ್ರ ಸ್ಥಿತಿಯಲ್ಲಿದ್ದರು.
ಈ ಕಲಾತಂಡವನ್ನು ಕ್ಷೇಮವಾಗಿ ಕರೆತರಲು ನಮ್ಮ ಸರ್ಕಾರ ವಿಮಾನ ಪ್ರಯಾಣದ ವ್ಯವಸ್ಥೆ ಮಾಡಿದೆ.
ಕನ್ನಡಿಗರ ಹಿತ ಕಾಯಲು ಕಾಂಗ್ರೆಸ್ ಸದಾ ಬದ್ದ.… pic.twitter.com/b5PK9akslN
— Karnataka Congress (@INCKarnataka) June 4, 2023
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರೈತರಿಂದ ಖರೀದಿಸುವ ಹಾಲಿನ ದರ ಕಡಿಮೆ ಮಾಡುವಂತಿಲ್ಲ : ಸಿಎಂ ಸಿದ್ದರಾಮಯ್ಯ ಸೂಚನೆ

ಸುದ್ದಿದಿನ, ಬೆಂಗಳೂರು: ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹಾಲು ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಅಮೂಲ್ ದರ ಕಡಿತ ಮಾಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಹಾಲು ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಏಕಾಏಕಿ ದರ ಕಡಿತ ಮಾಡುವಂತಿಲ್ಲ. ಈ ಕುರಿತು ಸರ್ಕಾರದೊಂದಿಗೆ ಚರ್ಚಿಸಬೇಕು ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರು ಇಂದು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮನ

ಸುದ್ದಿದಿನ ಡೆಸ್ಕ್ : ಕೋಲ್ಕತಾದ ಹೌರಾದಲ್ಲಿ ಸಿಲುಕಿರುವ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರ್ನಾಟಕಕ್ಕೆ ಕರೆ ತರಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.
ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಎಲ್ಲರೂ ಆಗಮಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೋಲ್ಕತಾದಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ.
ಮುಂಜಾನೆ ಹೊರಡಲಿರುವ ಇಂಡಿಗೊ ವಿಮಾನ ಬೆಂಗಳೂರಿಗೆ ಬರಲಿದೆ. ಕೋಲ್ಕತಾದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಆಟಗಾರರೂ ಈ ರೈಲುಗಳಲ್ಲಿ ವಾಪಸಾಗುವ ವೇಳೆ ಈ ದುರಂತ ಸಂಭವಿಸಿದ್ದು, ತರಬೇತುದಾರರು ಸೇರಿ 32 ಜನರನ್ನು ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಕನ್ನಡಿಗರ ರಕ್ಷಣೆಗಾಗಿ ಸಚಿವ ಸಂತೋಷ್ ಲಾಡ್ ಅವರನ್ನು ಘಟನಾ ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈಲು ದುರಂತದಲ್ಲಿ 280ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ಘೋರ, ದುರದೃಷ್ಟಕರ ಘಟನೆ. ಅಪಘಾತ ಸುದ್ದಿಯಿಂದ ಅತೀವ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಅಪಘಾತದಲ್ಲಿ ಕನ್ನಡಿಗರ ಸಾವು – ನೋವಿನ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಪ್ರಾಥಮಿಕ ಮಾಹಿತಿ ಪಡೆದು ಕನ್ನಡಿಗರ ರಕ್ಷಣೆಗೆ ಹಾಗೂ ಅಗತ್ಯ ನೆರವು ಒದಗಿಸಲು ಘಟನಾ ಸ್ಥಳಕ್ಕೆ ಸಚಿವ ಸಂತೋಷ್ ಲಾಡ್ ತೆರಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದುರಂತದಲ್ಲಿ ಸಿಲುಕಿದ್ದ ಕನ್ನಡಿಗರೊಂದಿಗೆ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅಗತ್ಯ ನೆರವು ಒದಗಿಸಿ, ಸುರಕ್ಷಿತವಾಗಿ ವಾಪಸ್ ಕರೆ ತರಲಾಗುವುದು ಎಂದು ಧೈರ್ಯ ತುಂಬಿದರು. ರಾಜ್ಯ ಸರ್ಕಾರದ ತುರ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 1070ಅಥವಾ
080-22253707 ಅಥವಾ 080 – 22340676 ಅನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಜೂನ್ 1 ರಿಂದಲೇ ಗ್ಯಾರಂಟಿ ಯೋಜನೆ ಘೋಷಣೆ
-
ದಿನದ ಸುದ್ದಿ3 days ago
ಇಲ್ಲಿದೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಂಪ್ಲೀಟ್ ಡೀಟೆಲ್ಸ್
-
ದಿನದ ಸುದ್ದಿ5 days ago
ಹೋಟೆಲ್ಗಳಲ್ಲಿ ವಿವಿಧ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಐದು ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಸರ್ಕಾರ ಬದ್ಧ : ಮುಖ್ಯಮಂತ್ರಿ ಸಿದ್ದರಾಮಯ್ಯ
-
ದಿನದ ಸುದ್ದಿ3 days ago
ಐದು ಗ್ಯಾರಂಟಿ | ಫಲಾನುಭವಿಗಳ ಆಯ್ಕೆ ಮಾನದಂಡ
-
ದಿನದ ಸುದ್ದಿ5 days ago
ದಾವಣಗೆರೆ | ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಈ ವರ್ಷವೇ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಚಿಂತನೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
-
ದಿನದ ಸುದ್ದಿ2 days ago
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬಿತ್ತನೆ ಬೀಜ ಕೊರತೆಯಾಗದಂತೆ ರಾಜ್ಯಾದ್ಯಂತ ಕ್ರಮ