Connect with us

ದಿನದ ಸುದ್ದಿ

ಹೊನ್ನಾಳಿ | ನಾಳೆ ದಾನಿಹಳ್ಳಿಯಲ್ಲಿ ತರಳಬಾಳು ಜಾನಪದ ಸಂಭ್ರಮ

Published

on

ಸುದ್ದಿದಿನ ಡೆಸ್ಕ್ : ಬಹುನಿರೀಕ್ಷೆಯ ಹೊಸ ಆಯಾಮದೊಂದಿಗೆ, ಮತ್ತೊಷ್ಟು ಬದಲಾವಣೆಗಳನ್ನು ಮೈ ತುಂಬಿಕೊಂಡು,ಸಾಂಸ್ಕೃತಿಕ ಕನ್ನಿಕೆಯ ಕುವರಿಯಂತಿರುವ “ತರಳಬಾಳು ಜಾನಪದ ಸಿರಿಸಂಭ್ರಮ” 350 ಮಕ್ಕಳು ಸಂಭ್ರಮ ಮತ್ತು ಅಪರಿಮಿತ ಉತ್ಸಾಹದಿ ಜಾನಪದ ಲೋಕಕ್ಕೆ ಸರ್ವರನ್ನು ಕರೆದೊಯ್ಯಲು ಸಜ್ಜಾಗಿದ್ದಾರೆ.

ಕಳೆದ ವರ್ಷದ ಅಭೂತಪೂರ್ವಯಶಸ್ಸಿನ ಮಜಲು ಏರಿ ರಾಜ್ಯ, ಹೊರ ರಾಜ್ಯಗಳ ಎಲ್ಲಾ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಭ್ರಮದ ಸ್ಮರಣೀಯ ಸ್ವರ್ಗ ಸೃಷ್ಟಿಸಿ ಎಲ್ಲರ ಜನಮಾನಸದಿ ಮೆಚ್ಚುಗೆ ಗಳಿಸಿದ ಜಾನಪದ ಸಿರಿ ಸಂಭ್ರಮ ಈ ವರ್ಷದ ಪ್ರದರ್ಶನ ನೀಡಲು ಸನ್ನದ್ದವಾಗಿದೆ.

ಇತ್ತೀಚೆಗೆರಾಮಗಿರಿ,ಬಸವಾಪಟ್ಟಣ,ಹೊಳಲ್ಕೆರೆ,ಬಾಡ, ಸಿರಿಗೆರೆ, ವಿಜಯಪುರ ಜಿಲ್ಲೆಯ ಸಾಂಬಾ,ಸೇರಿದಂತೆ ಅನೇಕ ಕಡೆ ಯಶಸ್ವಿ ಪ್ರದರ್ಶನ ನೀಡಿ ಜನ ಮನ್ನಣೆಗಳಿಸಿರುವ ಸಿರಿ ಸಂಭ್ರಮದ ಮುಖ್ಯ ಉದ್ದೇಶವೇ ಆಧುನಿಕತೆಯ ಭರಾಟೆಯ ನಾಗಲೋಟದ ಈ ಕಾಲದಲ್ಲಿ ನಮ್ಮ ಪೂರ್ವಜರ ಸೃಷ್ಟಿ ಮತ್ತು ಸಂಸ್ಕೃತಿಯ ಸೃಜನಶೀಲ ಸಾಂಸ್ಕೃತಿಕ ಜಾನಪದೀಯ ಕಲಾ ಪ್ರಕಾರಗಳು ನಶಿಸಿ ಹೋಗುತ್ತಾ ಇತಿಹಾಸದ ಗರ್ಭಕ್ಕೆ ದಾಖಲಾಗುವ ಅಪಾಯಕಾರಿ ಬೆಳವಣಿಗೆಯನ್ನು ತಡೆಯುವ ಸಾಂಸ್ಕೃತಿಕ ಕೈಂಕರ್ಯವಾಗಿದೆ. ಜತನಿಂದ ಜೊತೆಗಿದ್ದ ಕಲಾ ಸೊಬಗನ್ನು ನಮ್ಮ ಯುವ ಜನಾಂಗಕ್ಕೆ ಪರಿಚಯಿಸುವ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಹಂಚುವ ಆಶಯದಿ ಬೀಜಾಂಕುರವಾಗಿದ್ದೇ “ತರಳಬಾಳು ಜಾನಪದ ಸಿರಿ ಸಂಭ್ರಮ “.

ಕಳೆದರು 6 ದಶಕಗಳಿಂದಲೂ ಶರಣ ಸಾಹಿತ್ಯ, ವಚನ ಪ್ರಸಾರ, ನಾಟಕಗಳ ರಚನೆ ಪ್ರದರ್ಶನ, ವೀರಗಾಸೆ ಸ್ಪರ್ಧೆ, ಭಜನೆ ಮೇಳಾ,ಸೋಬಾನೆ ಪದ ಸ್ಪರ್ಧೆ ಹೀಗೆ ಸಾವಿರಾರು ಕಾರ್ಯಕ್ರಮಗಳ ಮೂಲಕ ದೇಶದಾದ್ಯಂತ ಕನ್ನಡ ನಾಡಿನ ಸಾಂಸ್ಕೃತಿಕ ಸೊಬಗನ್ನು ದೇಶದಾದ್ಯಂತ ಪ್ರದರ್ಶಸಿ ಅರ್ಥಪೂರ್ಣ ಶರಣ ಸಂದೇಶ ಸಾರಿದ ಹಿರಿಮೆಯ ಹೆಗ್ಗಳಿಕೆ ತರಳಬಾಳು ಕಲಾಸಂಘಕ್ಕಿದೆ. ಪರಮ ಪೂಜನೀಯ #ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಸಾಂಸ್ಕೃತಿಕ ಸಂಕಲ್ಪದ ಆಶಯ ಮತ್ತು ದಿವ್ಯ ಮಾರ್ಗದರ್ಶನದಂತೆ ನವ ಮನ್ವಂತರದ ಹೊಸತನವೆಂಬಂತೆ ತರಳಬಾಳು ಕಲಾಸಂಘ ಕಳೆದ ವರ್ಷದಿಂದ ಜಾನಪದ ಸಿರಿ ಸಂಭ್ರಮದ ಹೆಸರಲ್ಲಿ ಸಂಸ್ಕೃತಿಯ ರಾಯಭಾರಿಯ ಸ್ಥಾನವನ್ನು ತುಂಬಲು ಯಶಸ್ವಿಯಾಗಿ ದಾಟಿ ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಈ ವರ್ಷದ ಮುಂದುವರಿದ ಪ್ರದರ್ಶನ ಹೊನ್ನಾಳಿ ತಾಲ್ಲೂಕಿನ ದಾನಿಹಳ್ಳಿಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಸಂಭ್ರಮವನ್ನು ಇಮ್ಮಡಿಯಾಗಿಸುವ ನಿಟ್ಟಿನಲ್ಲಿ ನವೆಂಬರ್ 1 ರ ಗುರುವಾರ ಸಂಜೆ 6:00 ಕ್ಕೆ ಸಾಂಸ್ಕೃತಿಕ ಲೋಕದ ದಿಗ್ದರ್ಶನದ ಅನಾವರಣವಾಗಲಿದೆ. ಅಪರೂಪದ ಸಾಂಸ್ಕೃತಿಕ ಕಲಾವೈಭವಕ್ಕೆ ತಾವೂ ಸಹ ಸಾಕ್ಷಿಯಾಗಬೇಕೆಂಬ ಬಯಕೆ ನಮ್ಮದಾಗಿದ್ದು ಜಾನಪದ ಕಲಾ ಪ್ರಕಾರಗಳ ವೈವಿದ್ಯತೆಯ ಸಂತಸದ ಸ್ವರ್ಗ ಸೃಷ್ಟಿಸುವ ನಮ್ಮ 350 ಮಕ್ಕಳ ಶ್ರಮದ ಸಾಕ್ಷಾತ್ಕಾರವು 25 ನೃತ್ಯ ವೈವಿಧ್ಯಗಳಲ್ಲಿ ಅವಿರ್ಭವಿಸಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಅಲ್ಲಂ ಪ್ರಶಾಂತ ಅಂಗಲಾಚಿ ಬೇಡಿದ್ರೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ

Published

on

ಸುದ್ದಿದಿನ,ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಹತ್ತಿರದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿ.ಎಂ ಸಿದ್ದರಾಮಯ್ಯ ಅವರ ಉಪಚುನಾವಣೆ ಅಂಗವಾಗಿ ಪ್ರಚಾರಕ್ಕೆ ಆಗಮಿಸುತ್ತಿದ್ದ ಮುಂಚೆಯೇ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತಗೆ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಣೆ ಮಾಡಿದ ಕೈಗಾರಿಕಾ ಭದ್ರತಾ ಸಿಬ್ಬಂದಿಗಳು ಇಲ್ಲ, ಈ ಸಮಯದಲ್ಲಿ ಅಲ್ಲಂ ಪ್ರಶಾಂತ ಇಲ್ಲ ನಾನು ಕಾಂಗ್ರೆಸ್ ಪಕ್ಷದ ಬಳ್ಳಾರಿ ಜಿಲ್ಲಾ ಅಧ್ಯಕ್ಷ, ಭದ್ರತಾ ಸಿಬ್ಬಂದಿಗಳಿಗೆ ವಿಮಾನ ನಿಲ್ದಾಣದಲ್ಲಿ ಅಂಗಲಾಚಿ ಬೇಡಿದರೂ ನಿರಾಕರಿಸಿದರು.

ಅಲ್ಲಂ ಪ್ರಶಾಂತ ಇಲ್ಲ ಸರ್ ನಾನು ಎಸ್.ಪಿ ಗೆ ಹೇಳುತ್ತೇವೆ, ಸಿಬ್ಬಂದಿ ಕೇಳಿ ಎಂದರು. ನಂತರ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಲ್ಲಂ ಪ್ರಶಾಂತ ಸರ್ ಹೇಳಿ ನಿಮ್ಮ ಸಿಬ್ಬಂದಿ ಕೇಳ್ತಾ ಇಲ್ಲ ಎಂದ ಕೂಡಲೇ, ಕೈ ಮಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ನಂದರೆಡ್ಡಿ ಅವರು ಹೇಳಿದ ಕೂಡಲೇ ವಿಮಾನ ನಿಲ್ದಾಣ ಪ್ರವೇಶ ಮಾಡಿದರು.

ಆದರೆ ಪ್ರಶಾಂತ ಪ್ರವೇಶ ದ್ವಾರದ ಮುಂದೆ ಕೇಳಿಕೊಂಡಾಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೋಭಾರಾಣಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ನಂದರೆಡ್ಡಿ, ಸೈಬರ್ ಕ್ರೈಮ್ ಸಿಪಿಐ ಠಾಧೋಡ್ ಜಿಲ್ಲಾ ಅದ್ಯಕ್ಷ ಅಲ್ಲಂ ಪ್ರಶಾಂತ ಮುಂದೆ ನೋಡಿಕೊಂಡು ಹಾದು ಹೋದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಮಾಜ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರ

Published

on

ಸುದ್ದಿದಿನ,ದಾವಣಗೆರೆ:ಎಂ.ಸಿ.ಸಿ. ಬ್ಲಾಕ್‍ನಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು #1374/19, ಎರಡನೇ ಮಹಡಿ, ಸರೂರ್ ಆರ್ಕೆಡ್ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಲೇಡಿಸ್ ಹಾಸ್ಟೆಲ್ ಎದುರು, ನೂತನ ಕಾಲೇಜು ರಸ್ತೆ ದಾವಣಗೆರೆ, ಇಲ್ಲಿಗೆ ನವಂಬರ್ 11 ರಿಂದ ಸ್ಥಳಾಂತರಿಸಲಾಗುವುದು ಎಂದು ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ ದೇವಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿಯ ಸಲ್ಲಿಸುವ ಅವಧಿಯನ್ನು ನವಂಬರ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ6 hours ago

ಅಲ್ಲಂ ಪ್ರಶಾಂತ ಅಂಗಲಾಚಿ ಬೇಡಿದ್ರೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ

ಸುದ್ದಿದಿನ,ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಹತ್ತಿರದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿ.ಎಂ ಸಿದ್ದರಾಮಯ್ಯ ಅವರ ಉಪಚುನಾವಣೆ ಅಂಗವಾಗಿ ಪ್ರಚಾರಕ್ಕೆ ಆಗಮಿಸುತ್ತಿದ್ದ ಮುಂಚೆಯೇ ಬಳ್ಳಾರಿ...

ದಿನದ ಸುದ್ದಿ1 day ago

ಸಮಾಜ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರ

ಸುದ್ದಿದಿನ,ದಾವಣಗೆರೆ:ಎಂ.ಸಿ.ಸಿ. ಬ್ಲಾಕ್‍ನಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು #1374/19, ಎರಡನೇ ಮಹಡಿ, ಸರೂರ್ ಆರ್ಕೆಡ್ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಲೇಡಿಸ್ ಹಾಸ್ಟೆಲ್ ಎದುರು,...

ದಿನದ ಸುದ್ದಿ2 days ago

ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ:ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿಯ ಸಲ್ಲಿಸುವ ಅವಧಿಯನ್ನು ನವಂಬರ್ 10 ರವರೆಗೆ ವಿಸ್ತರಿಸಲಾಗಿದೆ...

ದಿನದ ಸುದ್ದಿ3 days ago

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಜಗಳೂರು ಕಾಟಮ್ಮ ; ಸಾಧನೆಯ ಹೆಗ್ಗುರುತುಗಳು

ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ದಾವಣಗೆರೆ ಜಿಲ್ಲೆಯ ಜಗಳೂರು ಸೀಮೆ ಬುಡಕಟ್ಟು ಸಮುದಾಯಗಳ ನೆಲೆವೀಡು, ತಾಜಾ ಜಾನಪದ ಸಂಸ್ಕೃತಿಯು ಹಾಸು ಹೊಕ್ಕಾದ ಸಮೃದ್ಧ...

ದಿನದ ಸುದ್ದಿ3 days ago

ಹಿ.ಚಿ ಸಂಭ್ರಮದಲ್ಲಿ ನೆಲಮೂಲ ಸಂಸ್ಕೃತಿಯ ಪ್ರತಿಬಿಂಬದ ಪ್ರತಿನಿಧಿಗಳಿಗೆ ಜನಪದ ರಾಜ್ಯೋತ್ಸವ ಪ್ರಶಸ್ತಿ : ಜನಪದ ಸಿರಿಯ ಜರಗನಹಳ್ಳಿ ಕಾಂತರಾಜು

ಸುದ್ದಿದಿನ,ಬೆಂಗಳೂರು: ಕರ್ನಾಟಕದ ಬುಡಕಟ್ಟು ಜಾನಪದ ಅಧ್ಯಯನ, ಸಂಶೋಧನೆ, ಉಳಿವುಗಾಗಿ ಬದುಕನ್ನೇ ಮುಡಿಪಿಟ್ಟ ನಾಡಿನ ಖ್ಯಾತ ವಿದ್ವಾಂಸ ಪ್ರೊ. ಹಿ.ಚಿ ಬೋರಲಿಂಗಯ್ಯ ಅವರ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ ಮತ್ತು...

ದಿನದ ಸುದ್ದಿ3 days ago

ಕರ್ನಾಟಕ ಜಾನಪದ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರಕಟ

ಸುದ್ದಿದಿನಡೆಸ್ಕ್: ಕರ್ನಾಟಕ ಜಾನಪದ ಅಕಾಡೆಮಿಯು 2023 ನೇ ಸಾಲಿನ ರಾಜ್ಯದ 30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಸನ್ಮಾಸಿದೆ ಎಂದು...

ದಿನದ ಸುದ್ದಿ3 days ago

SC-ST | ರೈತರಿಗೆ ಪಶುಸಂಗೋಪನಾ ಚಟಿವಟಿಕೆಗಳ ತರಬೇತಿ

ಸುದ್ದಿದಿನ,ದಾವಣಗೆರೆ:ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ರೈತರಿಗೆ ಪಶುಸಂಗೋಪನಾ ಚಟುವಟಿಕೆಗಳ ತರಬೇತಿಯನ್ನು ಆಯೋಜಿಸಲಾಗಿದೆ. ನವೆಂಬರ್ 5, 6 ಮತ್ತು 29,30 ರಂದು ಆಧುನಿಕ ಹೈನುಗಾರಿಕೆ ತರಬೇತಿ, ನ.11...

ದಿನದ ಸುದ್ದಿ3 days ago

ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಕೇಂದ್ರೀಯ ಸೈನಿಕ ಮಂಡಳಿಯು ಭಾರತೀಯ ಸೇನೆಯ ಜೆ.ಸಿ.ಓ ರ್ಯಾಂಕ್‍ವರೆಗಿನ ಅಥವಾ ವಾಯು ಸೇನೆ, ನೌಕಾ ಸೇನೆಯ ತತ್ಸಮಾನ ರ್ಯಾಂಕ್‍ವರೆಗಿನ ಮಾಜಿ ಸೈನಿಕರ ಮಕ್ಕಳು, ದ್ವಿತೀಯ ಪಿ.ಯು.ಸಿ ಯಲ್ಲಿ...

ದಿನದ ಸುದ್ದಿ4 days ago

ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್‌ಬೌನ್ಸ್‌ ಕೇಸ್‌ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?

ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಗುರುಪ್ರಸಾದ್‌ ಮೇಲೆ ಸಾಲು ಸಾಲು ಚೆಕ್‌ಬೌನ್ಸ್‌ ಕೇಸ್‌ಗಳಿದ್ದವು. ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿಕೊಂಡಿದ್ದರು. ಶ್ರೀನಿವಾಸ್‌...

ದಿನದ ಸುದ್ದಿ4 days ago

‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!

ಸುದ್ದಿದಿನಡೆಸ್ಕ್:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. 52 ವರ್ಷದ ಕನಕಪುರ ಮೂಲದ ಗುರುಪ್ರಸಾದ್‌ ಇನ್ನಿಲ್ಲಾ.. ತುಮಕೂರು ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ....

Trending