ಬಹಿರಂಗ
ಹಿಂದೂ ಹೆಸರು ತಂದುಕೊಟ್ಟ ಸಿಂಧೂ ನದಿ
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರೊ. ಗ್ರೆಗೊರಿ ಪೊಸೆಲ್ ಕರಾವಳಿ ಕರ್ನಾಟಕದ ಸಣ್ಣ ಪುಟ್ಟ ಊರುಗಳನ್ನೆಲ್ಲ ಜಗತ್ತಿನ ಎಲ್ಲೆಲ್ಲಿಗೋ ಜೋಡಿಸಿ-‘ನಿನಗೆ ಗೊತ್ತಿಲ್ಲ, ನಿನ್ನೂರಿಗೆ ಕಡಲ ಸಂಪರ್ಕ ಜೋರಾಗಿತ್ತು’ ಅಂತ ಹೇಳಿ ನನ್ನನ್ನು ಬೆಚ್ಚಿ ಬೀಳಿಸುತ್ತಿದ್ದ. ಬಾರಕೂರನ್ನು ಮಧ್ಯ ಏಷಿಯಾದೊಡನೆ, ಮಲ್ಪೆ-ಭಟ್ಕಳಗಳನ್ನು ಗ್ರೀಸ್ನೊಡನೆ, ನೇತ್ರಾವತಿ ನದಿಯನ್ನು ಟೈಗ್ರಿಸ್- ನೈಲ್ ನದಿಗಳೊಡನೆ ಜೋಡಿಸಿದಾಗ ಆತನನ್ನು ಅಪ್ಪಿಕೊಳ್ಳುವಷ್ಟು ಖುಷಿಯಾಗುತ್ತಿತ್ತು.
ಆದರೆ ಗುಡಾಣ ಹೊಟ್ಟೆಯ, ಮುಖ ತುಂಬಾ ಗಡ್ಡದ, ರಸಿಕ ಶಿಖಾಮಣಿಯಾದ ಆತನನ್ನು ಅಪ್ಪಿಕೊಳ್ಳುವುದೂ ಅಸಾಧ್ಯವಾಗಿತ್ತು. ಪೊಸೆಲ್ ಒಮ್ಮೆ ನೇರವಾಗಿ ನನ್ನ ಕೊಠಡಿಗೆ ಬಂದು- ‘ನೀವು ಹಿಂದೂಗಳು, ನಿಮಗೆ ಹೆಸರು ತಂದುಕೊಟ್ಟ ಸಿಂಧೂ ನದಿಯನ್ನು ಎಂದಾದರೂ ನೋಡಿದ್ದೀರಾ? ನೋಡುವ ಕನಸಾದರೂ ಕಂಡಿದ್ದೀರಾ? ಅಂತ ಮುಖಕ್ಕೆ ತಿವಿಯುವಂತೆ ಕೇಳಿದ. ಸ್ವಲ್ಪ ಅವಮಾನವಾದರೂ ಬಿಡದೆ ನಾನಂದೆ- ನಾವು ಕುಳಿತಲ್ಲೇ ಹದಿನಾಲ್ಕು ಲೋಕಗಳನ್ನು , ಐವತ್ತಾರು ದೇಶಗಳನ್ನೂ ಕಾಣಬಲ್ಲೆವು, ಅದರೊಳಗೆ ಸಿಂಧೂ ನದಿಯೂ ಇರಬೇಕಲ್ಲ? ನೀವು ಯಕ್ಷಗಾನ ನೋಡಿದ್ದೀರಾ? ಅಂತ ಕೇಳಿದ.
ಆದರೆ ಆತ ಬಿಡಲಿಲ್ಲ. ‘ನಾವೆಲ್ಲ ಸಿಂಧೂ ನದಿ ದಡಕ್ಕೆ ಹೋಗೋಣ, ಹರಪ್ಪಾ ಮೊಹೆಂಜೊದಾರೋಗಳ ನಗರ ಸಂಸ್ಕøತಿಯನ್ನು ನಾನು ನಿಮಗೆ ವಿವರಿಸಬಲ್ಲೆ’ ಅಂದ. ಹರಪ್ಪಾ ಸಂಸ್ಕೃತಿಯ ಮೇಲೆ ಅಗಾಧ ಸಂಶೋಧನೆ ನಡೆಸಿ, ಬೃಹತ್ ಪುಸ್ತಕಗಳನ್ನು ಪ್ರಕಟಿಸಿದ ಪೊಸೆಲ್ನೊಡನೆ ನಾವು ಕೆಲವರು ಸಿಂಧೂ ನದಿ ನೋಡಲು ಹೊರಟಿದ್ದೆವು. ಅದೊಂದು ಅಸಾಮಾನ್ಯ ಅನುಭವ. ದೇಶ ವಿಭಜನೆಯ ಸಂದರ್ಭದಲ್ಲಿ ವಿಶಾಲ ಭಾರತದ ಭಾಗವಾಗಿದ್ದ ಸಿಂಧೂ ನದಿ ಮತ್ತು ಅದರ ಜೊತೆ ಸೇರಿಕೊಂಡಿದ್ದ ಸುಮಾರು ಐದು ಸಾವಿರವರ್ಷಗಳ ಇತಿಹಾಸ ಪಾಕಿಸ್ಥಾನದ ಪಾಲಾಯಿತು.
ಈಗ ಸಿಂಧೂ ನದಿಯು ಗಂಗಾ ಯಮುನೆಯರ ಹಾಗೆ ಭಾರತೀಯರ ನೆನಪಿನ ಭಾಗವಾಗಿಲ್ಲ, ಶ್ರದ್ಧೆಯ ಕೇಂದ್ರವಾಗಿಯೂ ಉಳಿದಿಲ್ಲ. ಅದಕ್ಕೊಂದು ಮೂರ್ತಿಯೂ ಇಲ್ಲ. ಪಾಕಿಸ್ಥಾನದ ಉತ್ತರ ದಿಕ್ಕಿನಲ್ಲಿರುವ ಕಾರಕೋರಂ ಬೆಟ್ಟಗಳವರೆಗೂ ಹಿಂದೊಮ್ಮೆ ಕಡಲು ಚಾಚಿಕೊಂಡಿತ್ತಂತೆ. ಕಾಲಾಂತರದಲ್ಲಿ ಕಡಲು ಹಿಂದೆ ಸರಿದಾಗ ಸಿಂಧೂ ನದಿಯೂ ಅದರ ಉಪನದಿಗಳೂ ಕಾಣಿಸಿಕೊಂಡು ಜನವಾಸಕ್ಕೆ ಯೋಗ್ಯವಾದ ವಾತಾವರಣ ನಿರ್ಮಾಣವಾಯಿತಂತೆ. ಸಿಂಧೂ ನದಿಯು ಮಾನಸ ಸರೋವರದ ಪರಿಸರದಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು, ಕಾರಕೋರಂ ಪರ್ವತ ಶ್ರೇಣಿಯ ಹಿಮವತ್ಪರ್ವತಗಳ ಎಡೆಯಿಂದ ಹೊರಬಂದು, ವಿಶಾಲವಾಗಿ ಹರಡಿಕೊಂಡು ಬಹು ಪ್ರಾಚೀನವಾದ ಸಂಸ್ಕøತಿಯೊಂದಕ್ಕೆ ಕಾರಣವಾಗಿ, ಕರಾಚಿಯ ಬಳಿ ಕಡಲನ್ನು ಸೇರುತ್ತದೆ. ಈ ನದಿಯು ಇದೀಗ ಪುರಾತನ ಮತ್ತು ಬೃಹತ್ ರಾಷ್ಟ್ರವೊಂದರ ( ಹಿಂದೂಸ್ಥಾನ, ಇಂಡಿಯಾ) ಪರ್ಯಾಯ ಹೆಸರು. ಜಗತ್ತಿನ ಅತಿ ದೊಡ್ಡ ಧರ್ಮಗಳಲ್ಲಿ ಒಂದಾದ ಹಿಂದೂ ಧರ್ಮಕ್ಕೆ ಅದರ ಹೆಸರಿನ ಬಲ.
ಮೂಲತಹ ಸಿಂಧೂ ಅಂದರೆ ‘ನೀರಿನ ಪ್ರವಾಹ’ ಎಂದಷ್ಟೇ ಅರ್ಥ. ಆ ನದಿಯನ್ನು ಸಪ್ತ ಸಿಂಧೂ ಎಂದು ಕರೆದರೂ ಅದರ ಐದು ಉಪನದಿಗಳಾದ ಝೇಲಂ, ಚೆನಾಬ್, ರಾವಿ, ಸಟ್ಲೆಜ್ ಮತ್ತು ಬಿಯಾಸ್ಗಳು ಮಾತ್ರ ಹೆಸರುವಾಸಿಯಾಗಿವೆ. ಸರಸ್ವತಿ ಮತ್ತು ಸಿಂಧೂಗಳನ್ನು ಉಳಿದೆರಡು ನದಿಗಳೆಂದು ಊಹಿಸಲಾಗಿದೆ. ಇದೂ ಒಂದು ಪೌರಾಣಿಕ ಕಲ್ಪನೆಯೇ ಹೊರತು ವಾಸ್ತವವಲ್ಲ ಎಂದೂ ವಾದಿಸುವವರೂ ಇದ್ದಾರೆ.
ಸಿಂಧೂ ನದಿಯ ಬಗ್ಗೆ ಋಗ್ವೇದ ಅತಿ ಗೌರವವನ್ನು ಪ್ರಕಟಿಸಿದೆ. ಅದರಲ್ಲಿ 176 ಬಾರಿ ಸಿಂಧೂ ನದಿಯ ಉಲ್ಲೇಖ ಬಂದಿದೆಯಂತೆ. ಸಿಂಧೂ ಪದವೇ ಮುಂದೆ ಪರ್ಶಿಯನ್ ಭಾಷೆಯಲ್ಲಿ ‘ಹಿಂದೂ’ ಆಗಿ, ಗ್ರೀಕರ ಬರೆಹಗಳಲ್ಲಿ ಇಂಡೋಸ್ ಆಗಿ, ಲ್ಯಾಟನ್ ಭಾಷೆಯಲ್ಲಿ ಇಂಡಸ್ ರೂಪವನ್ನು ಪಡೆದುಕೊಂಡಿತು. ಸಿಂಧೂ ನದಿಯ ದಂಡೆಗಳಲ್ಲಿ ಓಡಾಡಿದ ಗ್ರೀಕ್ ದೊರೆ ಅಲೆಕ್ಸಾಂಡರನು ಇಲ್ಲಿಯ ಜನರನ್ನು ‘ ಸಿಂಥೋಸ್’ ಎಂದು ಕರೆದ. ಇದುವೇ ಮುಂದೆ ‘ಹಿಂದೂಸ್’ ಆಗಿ ಕೊನೆಗೊಂಡಿತು. ಅರಬ್ ವ್ಯಾಪಾರಿಗಳು ಹಿಂದೂಸ್ ಇರುವ ಜಾಗವನ್ನು ‘ಹಿಂದೂಸ್ತಾನ್’ ಎಂದು ಕರೆದರು.
1920ರ ದಶಕದಲ್ಲಿ ಜಾನ್ ಮಾರ್ಶಲನು ಸಿಂಧು ಪ್ರಾಂತ್ಯದಲ್ಲಿ ಸಂಶೋಧನೆ ನಡೆಸುವವರೆಗೆ ಈ ನದಿ ನಿರ್ಮಾಣ ಮಾಡಿದ್ದ ಬಹು ದೊಡ್ಡ ಸಂಸ್ಕೃತಿಯೊಂದರ ಬಗೆಗೆ ನಮಗೆ ತಿಳಿದೇ ಇರಲಿಲ್ಲ. ಮಾರ್ಶಲನು ಅಲ್ಲಿಯ ಸ್ಥಳೀಯರೊಡನೆ ಮಾತಾಡುತ್ತಿದ್ದಾಗ ಅವರು ‘ಮೊಯೆಂಜೋದಾರೋ’ ಎಂಬ ಪದವನ್ನು ಬಳಸಿ ಸ್ಥಳವೊಂದನ್ನು ತೋರಿಸುತ್ತಾರೆ. ಆ ಪದಕ್ಕೆ ‘ಸತ್ತವರ ಸ್ಥಳ’ ಎಂದು ಅರ್ಥ.
ಅಲ್ಲಿ ಮಾರ್ಶಲನು ತನ್ನ ಉತ್ಖನನವನ್ನು ಮುಂದುವರಿಸಿದಾಗ ಕ್ರಿಸ್ತ ಶಕ ಪೂರ್ವ ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದಿನ, ಮತ್ತು ಸುಮಾರು ಎರಡು ಸಾವಿರ ವರ್ಷಗಳವರೆಗೆ ಬಾಳಿದ ಜಗತ್ತಿನ ಅತ್ಯಂತ ಪ್ರಾಚೀನ ಮತ್ತು ಸುದೀರ್ಘ ಸಂಸ್ಕೃತಿಯೊಂದು ಬೆಳಕಿಗೆ ಬಂತು.ಮೊಹೆಂಜಾದಾರೋದ ಪ್ರಖ್ಯಾತ ಉತ್ಖನನ ಸ್ಥಳದಲ್ಲಿ ನಿಂತಿದ್ದಾಗ ಪೊಸೆಲ್ ನನ್ನತ್ತ ನೋಡಿ ‘ನಿನ್ನ ಹಿರಿಯರು, ಅಂದರೆ ದ್ರಾವಿಡರು ಕಟ್ಟಿದ ಸಂಸ್ಕೃತಿಯಿದು’ ಎಂದು ಹೇಳಿ ನಕ್ಕರು, ನನಗೆ ನಗಲಾಗಲಿಲ್ಲ. ಅಲ್ಲಿದ್ದ ಮಾತೃ ಮೂಲೀಯ ಆಚರಣೆಗಳು, ಹರಪ್ಪಾ ಪರಿಸರದಲ್ಲಿ ಈಗಲೂ ಕೇಳಲು ಸಿಗುವ ಬ್ರಾಹುಈ ಭಾಷೆ ಮತ್ತಿತರ ವಿಷಯಗಳು ಸಿಂಧೂ ನದಿ ಸಂಸ್ಕೃತಿಯನ್ನು ದ್ರಾವಿಡರೊಂದಿಗೆ ಜೋಡಿಸುತ್ತವೆ. ಆದರೆ ಹರಪ್ಪಾ ಮೊಹೆಂಜೊದಾರೋ ಸಂಸ್ಕೃತಿಯು ಏಕರೂಪದಲ್ಲಿ ಎಂದೂ ಇರಲಿಲ್ಲ.
ಕಾಲಾಂತರದಲ್ಲಿ ಮಧ್ಯ ಏಷಿಯಾದಿಂದ ವಲಸೆ ಬಂದು ನೆಲೆಸಿದ ಹಲವು ಸಮುದಾಯಗಳು ಇವನ್ನು ಕಟ್ಟಿವೆ. ಅದರಲ್ಲಿ ದ್ರಾವಿಡರು ಮತ್ತು ಆರ್ಯರು ಬಹಳ ಮುಖ್ಯರು. ಆರ್ಯರು ಅಂದಾಗ ಅದನ್ನು ಸರಳೀಕರಿಸಿ ‘ಒಂದು ಗುಂಪು’ ಎಂದು ಭಾವಿಸಬೇಕಾಗಿಲ್ಲ. ಅದರಲ್ಲಿ ಮೂಲತಹ ಕಕೇಶಿಯನ್ ಬುಡಕಟ್ಟಿಗೆ ಸೇರಿದ ಪರ್ಷಿಯನರು ( ಉದಾಹರಣೆಗೆ ಪರ್ಷಿಯಾದ ಪ್ರಖ್ಯಾತ ಅರಸನಾದ ಡೇರಿಯಸ್ಸನ ಸಮಾಧಿಯಲ್ಲಿ- ಪರ್ಷಿಯನ್, ಪರ್ಷಿಯಾದ ಪುತ್ರ, ಆರ್ಯ ಮೂಲದ ಆರ್ಯ’ ಎಂದು ಕೆತ್ತಲಾಗಿದೆ), ಸಿಥಿಯನ್ನರು, ಹೂಣರು-ಹೀಗೆ ಅನೇಕ ಸಮುದಾಯಗಳು ಸೇರಿವೆ. ಅಂಥ ವಿವಿಧ ಸಮುದಾಯಗಳ ನಿರಂತರ ಆಕ್ರಮಣ ಮತ್ತು ಹೊಂದಾಣಿಕೆಯ ಫಲವಾಗಿ ರೂಪುಗೊಂಡ ಸಮ್ಮಿಶ್ರ ಸಂಸ್ಕ್ರತಿಯೊಂದನ್ನು ಸಿಂಧೂ ಸಂಸ್ಕೃತಿಯೆಂದು ಗುರುತಿಸಲಾಗಿದೆ.
ಕ್ರಿಸ್ತ ಶಕ ಏಳನೇ ಶತಮಾನದ ಆನಂತರ ಈ ಭಾಗವನ್ನು ಮುಸ್ಲಿಂ ಅರಸರು ಆಳಿದರು.
ಹೀಗೆ ಸಿಂಧೂ ನದಿ ದಂಡೆಯು, ಭೌಗೋಳಿಕವಾದ, ಸಾಮಾಜಿಕವಾದ, ಮಾನವಶಾಸ್ತ್ರೀಯವಾದ ಧಾರ್ಮಿಕವಾದ ಮತ್ತು ಭಾಷಿಕವಾದ ಒಂದು ಸಮ್ಮಿಶ್ರ ಸಂಸ್ಕೃತಿಯ ಉಗಮ ಸ್ಥಳ. ಆ ನದಿ ಈಗ ಭಾರತದಲ್ಲಿ ಬಹುತೇಕ ಇಲ್ಲ, ಆದರೆ ಅದರ ದಡದಲ್ಲಿದ್ದ ಸಮ್ಮಿಶ್ರ ಜೀವನ ಕ್ರಮ ನಮ್ಮಲ್ಲಿನ್ನೂ ಉಳಿದುಕೊಂಡಿದೆ.
ಸಿಂಧೂ ನದಿಯನ್ನು ತೋರಿಸಿದ ಗ್ರೆಗ್ 2011 ರಲ್ಲಿ ತೀರಿಕೊಂಡ. ಆತ ತೋರಿಸಿದ ಸಿಂಧೂ ನದಿ ದಂಡೆಯಲ್ಲಿ ಎಂದೋ ಒಮ್ಮೆ ನಾನು ಬದುಕಿದ್ದೆ ಅಂತನ್ನಿಸುವ ಹಾಗೆ ಮಾಡಿ ಆತ ಹೊರಟು ಹೋಗಿದ್ದ.
–ಪುರುಷೋತ್ತಮ ಬಿಳಿಮಲೆ
(ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಪುಸ್ತಕದಲ್ಲಿನ ( ಅಹರ್ನಿಶಿ ಪ್ರಕಾಶನ, ಶಿವಮೊಗ್ಗ) ‘ನದಿಗಳ ಕಥನ’ ಲೇಖನದ ಪುಟ್ಟ ಭಾಗ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್‌ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ4 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ4 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ4 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ5 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ5 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ5 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ



