ಸಿನಿ ಸುದ್ದಿ
‘ಉರಿ – ಸರ್ಜಿಕಲ್ ಸ್ಟೈಕ್’ ಎಂಬ ಸೈನಿಕರ ಅದ್ಬುತ ಕಾರ್ಯಾಚರಣೆ..!

ಭಾರತೀಯ ಸೇನಾ ಕಾರ್ಯಾಚರಣೆ ಸಂಬಂಧಿತ ಭಾರತೀಯ ಸಿನಿಮಾರಂಗದಲ್ಲಿ ಈವರೆಗೂ ಅನೇಕ ಚಿತ್ರಗಳು ಬಂದಿದೆ. ಹಿಂದಿ ಜತೆಗೆ ಪ್ರಾದೇಶಿಕ ಭಾಷೆಗಳಲ್ಲಿಯೂ ಸೈನಿಕರ ವೀರತೆ ಪ್ರದರ್ಶಿಸುವ ಕಥಾ ಚಿತ್ರಗಳು ವೀಕ್ಷಕರ ಗಮನ ಸೆಳೆದಿದೆ. ಕಾರ್ಗಿಲ್ ವಿಷಾಯಾಧರಿಸಿ ಹತ್ತಕ್ಕೂ ಅಧಿಕ ಸಿನಿಮಾಗಳು ತೆರೆಕಂಡಿದೆ. ಕಾರ್ಗಿಲ್ ಸಮರವನ್ನೇ ಮುಖ್ಯಕಥೆಯಾಗಿರಿಸಿಕೊಂಡ ಚಿತ್ರಗಳು ಹಣ ಗಳಿಸುವಲ್ಲಿ ಯಶಸ್ಸು ಕಂಡಿದೆ. ಈ ಮೂಲಕ ಸೈನಿಕರು, ಸೈನ್ಯದ ಕಥೆಯನ್ನು ಹೊಂದಿದ ಚಿತ್ರಗಳು ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ ಎಂಬುದು ಸಾಬೀತಾಗಿದೆ.
ಆದರೆ, ಇದೀಗ ಮತ್ತೊಂದು ಇತಿಹಾಸ ಸೖಷ್ಟಿಯಾಗಿದೆ. 2016 ರ ಸರ್ಜಿಕಲ್ ಸ್ಟೈಕ್ ಆಧರಿಸಿ ಉರಿ ಎಂಬ ಹೆಸರಿನ ಚಿತ್ರ ತೆರೆಕಂಡು ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ.
ಕಾಶ್ಮೀರ ಗಡಿಯಲ್ಲಿನ ಉರಿ ಎಂಬ ಗ್ರಾಮದ ಸೇನಾ ಶಿಬಿರದ ಮೇಲೆ ಬೆಳ್ಳಂಬೆಳಗ್ಗೆ ಪಾಕ್ ಭಯೋತ್ಪಾದಕರು ನುಸುಳಿ ಭಾರತದ ಹೆಮ್ಮೆಯ 19 ಯೋಧರನ್ನು ಬಲಿ ಪಡೆದಿದ್ದರು. ಈ ಭಯೋತ್ಪಾದಕರ ಕಾರ್ಯಾಚರಣೆ ಭಾರತೀಯರನ್ನು ರೊಚ್ಚಿಗೆಬ್ಬಿಸಿತ್ತು. ಅದರಲ್ಲಿಯೂ ಸೈನ್ಯದ ಅತ್ಯಂತ ಪರಾಕ್ರಮಿ ಯೋಧರೇ ಭಯೋತ್ಪಾದಕರಿಗೆ ಸುಲಭವಾಗಿ ಬಲಿಯಾಗಿದ್ದರು. ಭಾರತದ ಸೈನ್ಯದ ಪ್ರತಿಷ್ಟೆಗೂ ಈ ಘಟನೆ ಮಸಿ ಬಳಿದಿತ್ತು. ಸೈನ್ಯದ ಮರ್ಯಾದೆಯೂ ಪ್ರಶ್ನೆಯಾಗಿತ್ತು.
ಪ್ರಧಾನಿ, ರಕ್ಷಣಾ ಸಚಿವರೂ ಸೇರಿದಂತೆ ಎಲ್ಲರೂ ಹುತಾತ್ಮರ ಬಲಿದಾನಕ್ಕೆ ಮಮ್ಮಲ ಮರುಗಿದರು. ತಮ್ಮವರನ್ನು ವಂಚಿಸಿ ಬಲಿತೆಗೆದುಕೊಂಡದ್ದು ಭಾರತೀಯ ಸೈನಿಕರ ರಕ್ತ ಕುದಿಯುವಂತೆ ಮಾಡಿತ್ತು. ಪ್ರತಿಕಾರ ತೀರಿಸಿಯೇ ಸಿದ್ದ ಎಂದು ಸೈನಿಕರು ಯೋಜನೆ ರೂಪಿಸುತ್ತಿದ್ದರು.
ಇಂಥ ಸೈನಿಕರ ಚಿಂತನೆಗೆ ಬೆಂಬಲವಾಗಿ ನಿಂತದ್ದೇ ಕೇಂದ್ರ ರಕ್ಷಣಾ ಸಚಿವಾಲಯ. ಸೇನಾ ಪಡೆಗೆ ಎಲ್ಲಾ ರೀತಿಯ ನೆರವು ನೀಡಿ ಮುನ್ನುಗ್ಗಿ, ಪಾಕ್ ನೆಲೆಗೆ ನುಗ್ಗಿ ಅಲ್ಲಿ ಅವಿತಿಟ್ಟುಕೊಂಡಿರುವ ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಎಂದು ಆದೇಶ ನೀಡಿಯೇ ಬಿಟ್ಟಿತ್ತು. ಈ ಆದೇಶವನ್ನೇ ಕಾಯುತ್ತಿದ್ದ ಭಾರತೀಯ ಸೈನಿಕರಿಗೆ ಅಷ್ಟೇ ಸಾಕಿತ್ತು. ಯಾವ ರೀತಿ ರಾತ್ರೋರಾತ್ರಿ ಪಾಕ್ ನೆಲೆಗೆ ನುಗ್ಗಿ ಭಯೋತ್ಪಾದಕರ ಹುಟ್ಟಡಗಿಸಿದ್ದಲ್ಲದೇ ತಾವೂ ಸುರಕ್ಷಿತವಾಗಿ ಮರಳಿ ಭಾರತಕ್ಕೆ ಮರಳುತ್ತಾರೆ.
ಉರಿ ಸರ್ಜಿಕಲ್ ಸ್ಟೈಕ್ ಗೆ ಕೇವಲ 11 ದಿನಗಳಲ್ಲಿ ನಮ್ಮ ಸೇನಾ ಪಡೆ ಎಲ್ಲಾ ರೀತಿಯಲ್ಲಿಯೂ ಸಜ್ಜಾಗುವುದೇ ಅತ್ಯಂತ ರೋಮಾಂಚಕ. ಸೈನಿಕರ ಮನೋಸ್ಥೆರ್ಯ, ಜತೆಗೆ ಗರುಡ ಎಂಬ ಅತ್ಯಾಧುನಿಕ ಹದ್ದಿನ ದ್ರೋಣ್ ಕ್ಯಾಮರ ಕಾರ್ಯಾಚರಣೆಯೂ ಕುತೂಹಲಕಾರಿ.
ಭಾರತೀಯ ಸೇನಾ ಪಡೆ ಯಾವೆಲ್ಲಾ ರೀತಿಯಲ್ಲಿ ತಯಾರಿ ನಡೆಸಿ ಭಯೋತ್ಪಾದಕರ ಹುಟ್ಟಡಗಿಸಿಸುತ್ತಾರೆ ಎಂಬ ಅದ್ಬುತ ಕಥೆಯನ್ನು ಯುವ ನಿರ್ದೇಶಕರ ಆದಿತ್ಯ ಧರ್ ತನ್ನ ಮೊದಲ ಚಿತ್ರದಲ್ಲಿ ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ. ಕಾಶ್ಮೀರ – ಪಾಕ್ ಗಡಿಯ ನೈಜತೆಯನ್ನು ಸೈಬ್ರಿಯಾ ದೇಶದ ಕಾಡಿನಲ್ಲಿ ಚಿತ್ರಿಸಲಾಗಿದೆ. ವಿಕ್ಕಿ ಕೌಷಲ್ ಎಂಬ ನಟ ಸೇನಾಧಿಕಾರಿ ವಿಹಾನ್ ಸಿಂಗ್ ಪಾತ್ರದಲ್ಲಿ ನಟಿಸಿದ ರೀತಿಯೂ ಮೆಚ್ಚುಗೆಯಾಗುತ್ತದೆ. ಪ್ರಧಾನಿ ಮೋದಿ, ರಕ್ಷಣಾ ಸಚಿವ ಪರಿಕ್ಕರ್ ಸೇರಿದಂತೆ ಎಲ್ಲರ ಪಾತ್ರಗಳಲ್ಲಿಯೂ ನೈಜತೆಯಿದೆ. ನಿಜ ಘಟನೆಯೊಂದನ್ನು ಹೀಗೂ ಚಿತ್ರವಾಗಿಸಬಹುದು ಎಂಬುದಕ್ಕೆ ಉರಿ ಸಿನಿಮಾ ಸಾಕ್ಷಿಯಾಗುತ್ತದೆ.
ಸಾಮಾನ್ಯವಾಗಿ ಉರಿ ಸರ್ಜಿಕಲ್ ಸ್ಟೈಕ್ ನಂಥ ವಿಷಯವನ್ನು ಹೇಳುವಾಗ ಬಹಳಷ್ಟು ಸಂಗತಿಗಳಿಗೆ ಸೇನಾಡಳಿತ ಅನುಮತಿ ನೀಡುವುದಿಲ್ಲ. ಆದರೆ, ಈ ಚಿತ್ರದ ಮಟ್ಟಿಗೆ ಹಲವು ಸಂಗತಿಗಳನ್ನು ಪ್ರಸ್ತಾಪಿಸಲು ಅವಕಾಶ ನೀಡುವ ಮೂಲಕ ಬಾರತೀಯರಿಗೆ ಸೇನಾಕಾರ್ಯಾಚರಣೆಯ ವಿಷಯಗಳ ಮಾಹಿತಿ ನೀಡುವಲ್ಲಿ ಸಫಲವಾಗಿದೆ. ದೇಶಪ್ರೇಮವನ್ನು ಬಡಿದೆಬ್ಬಿಸುವ ಪ್ರಯತ್ನಕ್ಕೂ ಉರಿ ಚಿತ್ರ ನೆರವಾಗಿದೆ. ಈ ಮೂಲಕ ಸೈನ್ಯದ ಉದ್ದೇಶವೂ ಸಫಲವಾಗಿದೆ.
ಎಲ್ಲಿಯೂ ವಿಷಾಯಾಂತರಗೊಳ್ಳದೇ, ಉತ್ಪೇಕ್ಷೆಗೆಗೊಳಗಾಗದೇ ಸೀದಾಸಾದಾ ರೀತಿಯಲ್ಲಿಯೇ ಕಥೆ ಹೇಳುತ್ತಾ ಸಾಗುವ ಚಿತ್ರ ಅಂತಿಮವಾಗಿಯೂ ಬಹುಪರಾಕ್ ಎನಿಸಿಕೊಳ್ಳದೇ ದಿಡೀರ್ ಅಂತ್ಯಗೊಳ್ಳುತ್ತದೆ. ಇನ್ನೂ ಬೇಕಿತ್ತು ಎನಿಸುವಾಗಲೇ ಚಿತ್ರ ಮುಗಿಯುತ್ತದೆ. ಈ ಮೂಲಕ ಚಿತ್ರ ಮನಸ್ಸಿನಲ್ಲಿ ಹಲವು ದಿನಗಳ ಕನವರಿಕೆಗೆ ಕಾರಣವಾಗುತ್ತದೆ.
ರಾಜಕೀಯಕ್ಕಾಗಿನ ಚಿತ್ರವೇ?
ಇದು ಮೋದಿಗೆ ವೋಟ್ ತಂದುಕೊಡಲು ನೆರವಾಗುತ್ತದೆ. ಚಿತ್ರ ಹಣ ಮಾಡಲೆಂದೇ ನಿರ್ಮಿತವಾಗಿವೆ. ಇದೇನ್ ಮಹಾ ಎಂದೆಲ್ಲಾ ಕೆಲವರು ಬಾಲಿಶವಾದ ಹೇಳಿಕೆ ನೀಡುತ್ತಿದ್ದಾರೆ. ಇಂಥ ಹೇಳಿಕೆಗಳು ಬದಿಗಿರಲಿ.
ಪ್ರದಾನಿಯಾಗಿದ್ದ ವ್ಯಕ್ತಿ ಸೈನಿಕರಿಗೆ ಮುನ್ನುಗ್ಗಿ, ಸೋಲು ನನಗಿರಲಿ, ಗೆಲವು ನಿಮ್ಮದಾಗಿರಲಿ ಎಂದು ಹುರಿದುಂಬಿಸಿ ರಾತ್ರಿಯಿಡಿ ಜಾಗರಣೆ ಕುಳಿತು ಭಾರತೀಯ ಸೈನಿಕರ ಸ್ಥಿತಿ ಕಾರ್ಯಾಚರಣೆ ಸಂದರ್ಭ ಹೇಗಿದೆಯೋ ಎಂದು ತಲೆಕೆಡಿಸಿಕೊಳ್ಳುತ್ತಾರೆ ಎಂದರೆ ಅಂಥ ಪ್ರಧಾನಿ ಬಗ್ಗೆಯೂ ಗೌರವ ಬಾರದಿದ್ದರೆ ಹೇಗೆ? ಚುನಾವಣೆಯಲ್ಲಿ ಮತಗಳನ್ನು ಯಾರಿಗೆ ಹಾಕುತ್ತೇವೆಯೋ ಅದು ಅವರವರಿಗೆ ಬಿಟ್ಟದ್ದು. ಆದರೆ, ಸೈನಿಕರೇ ಭಯೋತ್ಪಾದಕರ ಹುಟ್ಟಡಗಿಸಿ ಬನ್ನಿ ಎಂದು ಧೈರ್ಯ, ಸ್ಥೆರ್ಯ, ಆಧುನಿಕ ಶಸ್ತ್ರಾಸ್ತಗಳನ್ನು ನೀಡಿದ ಆ ಪ್ರಧಾನಿಗೆ ಮೆಚ್ಚುಗೆ ಸೂಚಿಸದಿದ್ದರೆ ಹೇಗೆ?
ಇದೇ ಅನುಮತಿ ಮೊದಲೇ ಸಿಕ್ಕಿದ್ದರೇ?
ಕೆಲವು ದಶಕಗಳ ಹಿಂದೆ, ನನಗೆ 24 ಗಂಟೆಗಳ ಕಾಲಾವಕಾಶ ನೀಡಿ ಪಾಕಿಸ್ತಾನಿಗಳ ಹುಟ್ಟಡಗಿಸಿ ಬರುತ್ತೇನೆ ಎಂದಿದ್ದ ಕೊಡಗಿನ ಹೆಮ್ಮೆಯ ಜನರಲ್ ತಿಮ್ಮಯ್ಯ ಅವರಿಗೂ ಆ ಸಂದರ್ಭ ಸರ್ಜಿಕಲ್ ಸ್ಟೈಕ್ ಗೆ ಅನುಮತಿ ನೀಡಿದ್ದರೆ, ಕಾಶ್ಮೀರಕ್ಕೆ ಇಂದಿನ ದುರ್ಗತಿ ಬರುತ್ತಿರಲಿಲ್ಲವೇನೋ.
ಅದೇನೇ ಇರಲಿ.. ಉರಿ ಎಂಬ ಅಪರೂಪದ ಸಿನಿಮಾ ವೀಕ್ಷಿಸುವ ಮೂಲಕ ಸೈನಿಕ ಕಾರ್ಯಾಚರಣೆ ಹೇಗಿರುತ್ತೆ.. ಸೈನಿಕರ ಜೀವನ ಎಷ್ಟೊಂದು ಸಾಹಸಮಯ, ಯಾತನಾಮಯವಾಗಿರುತ್ತೆ ಎಂದು ತಿಳಿದುಕೊಳ್ಳುವ ಅಪೂರ್ವ ಅವಕಾಶವನ್ನು ಉರಿ ಎಂಬ ಚಿತ್ರ ನೀಡಿದೆ. ನಾನು ಸಿನಿಮಾಗಳನ್ನು ನೋಡೇದೇ ಇಲ್ಲ ಎಂಬ ಧೋರಣೆ ಬದಿಗಿಟ್ಟು ಭಾರತದ ಗಡಿಯನ್ನು ತಮ್ಮ ಪ್ರಾಣ ಒತ್ತೆಯಿಟ್ಟು ಕಾಯುತ್ತಿರುವ ಸೈನಿಕರಿಗಾಗಿಯಾದರೂ ಒಮ್ಮೆ ನೋಡಿ.
ಅಂದ ಹಾಗೆ, ಈವರೆಗೂ ನಾವು ನೀವೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಬಾಹುಬಲಿ -2 ಎಂಬ ಚಿತ್ರದ ಎಲ್ಲಾ ದಾಖಲೆಗಳನ್ನು ಉರಿ ಚಿತ್ರ ಪುಡಿಗಟ್ಟಿದೆ. ಕೇವಲ 23 ದಿನಗಳಲ್ಲಿ ಉರಿ ಚಿತ್ರ 200 ಕೋಟಿ ರು ಸಂಗ್ರಹಿಸಿ 500 ಕೋಟಿ ಸಂಗ್ರಹದತ್ತ ಮುನ್ನುಗ್ಗಿ ದೇಶದ ಇತಿಹಾಸದಲ್ಲಿಯೇ ಮಹೋನ್ನತ ದಾಖಲೆಗೆ ದಾಪುಗಾಲಿಡುತ್ತಿದೆ.
ಉರಿ ಎಂಬ ಚಿತ್ರವನ್ನು ನೋಡುತ್ತಿದ್ದಾಗ ಕೇಳಿಬರುತ್ತಿದ್ದ ಸೈನಿಕರ ಪರ ಘೋಷಣೆಗಳು, ವಂದೇ ಮಾತರಂ ಎಂಬ ಉದ್ಗೋಷ. ಚಪ್ಪಾಳೆಯ ಮಾರ್ಧನಿ. ಭಾರತದ ಸೇನಾ ಪಡೆಯ ಬಗ್ಗೆ ಭಾರತೀಯರಿಗೆ ಇರುವ ಹೆಮ್ಮೆಯ ದ್ಯೋತಕ ಎನ್ನಿಸಿತು. ಸೈನಿಕರ ವೀರಸಾಹಸವನ್ನು ಚಿತ್ರ ರೂಪದಲ್ಲಿ ವೀಕ್ಷಿಸಿದರರ ಸಂತೋಷದ ಕಂಬನಿ ನಮ್ಮ ಸೈನಿಕರಿಗೆ ತುಡಿಯುವ ಮನಸ್ಸುಗಳು ಇನ್ನೂ ಜೀವಂತವಿದೆ ಎಂಬ ಭಾವನೆಗೆ ಕಾರಣವಾಯಿತು. ಅವರವರ ಅಭಿಮಾನಿ ನಾಯಕರಿಗೆ ಪ್ರೇಕ್ಷಕರು ಥಿಯೇಟರ್ ಸೂರು ಹಾರಿಹೋಗುವಂತೆ ಚಪ್ಪಾಳೆ ತಟ್ಟಿ , ಶಿಳ್ಳೆ ಹೊಡೆದು ಸಂಭ್ರಮಿಸಿದ್ದನ್ನು ನೋಡಿದ್ದೇನೆ.
ಆದರೆ, ಚಿತ್ರವೊಂದನ್ನು ವೀಕ್ಷಿಸುತ್ತಲೇ ಕಣ್ಣೀರುಗರೆಯುತ್ತಾ, ಆ ವೀರ ಸೈನಿಕರಿಗೆ ಭಾಷ್ಪಾಂಜಲಿ ಹಾಕುತ್ತಿದ್ದ ಬಹಳ ಅಪರೂಪದ ಸನ್ನಿವೇಶವನ್ನೂ ನಾನು ನೋಡಿದೆ. ಅದೇ ಉರಿ ಎಂಬ ಸರ್ಜಿಕಲ್ ಸ್ಟ್ಕೈಕ್ ನ ಸಾರ್ಥಕತೆ.
(ಗಮನಿಸಿ – ಮಡಿಕೇರಿಯ ಕಾವೇರಿ ಚಿತ್ರಮಂದಿರ ಶ್ರ10, 2, 6 ಮತ್ತು 9 ಗಂಟೆ ಪ್ರದಶ೯ನ ಹಾಗೂ ಕುಶಾಲನಗರದ ಕೂರ್ಗ್ ಸಿನಿಫ್ಲೆಕ್ಸ್ ( 11, 2,5 ಮತ್ತು 8 ಗಂಟೆ ಪ್ರದಶ೯ನ) ಗಳಲ್ಲಿ ಗುರುವಾರದವರೆಗೆ ಉರಿ ಚಿತ್ರ ವೀಕ್ಷಿಸಬಹುದು.)
ಸೈನಿಕರಾಗಲಿಲ್ಲ, ಪರವಾಗಿಲ್ಲ. ಸೈನಿಕರ ಧೀರ ಕಾರ್ಯಾಚರಣೆಯನ್ನು 2.10 ಗಂಟೆ ಸಿನಿಮಾದಲ್ಲಿ ವೀಕ್ಷಿಸಿ ಅಭಿನಂದಿಸುವ ಅವಕಾಶ ಮಿಸ್ ಮಾಡಿಕೊಳ್ಳಬೇಡಿ.
– ಅನಿಲ್ ಎಚ್.ಟಿ
ಪತ್ರಕರ್ತ
ಮಡಿಕೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
777 ಚಾರ್ಲಿ ಚಿತ್ರಕ್ಕೆ ‘ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ’

ಸುದ್ದಿದಿನ ಡೆಸ್ಕ್ : 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2021 ಪ್ರಕಟವಾಗಿದ್ದು, ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಲಭಿಸಿವೆ.
ನಟ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಜೇಕಬ್ ವರ್ಗೀಸ್ ನಿರ್ದೇಶನದ ಸಾಕ್ಷ್ಯಚಿತ್ರ ಆಯುಷ್ಮಾನ್‌ಗೆ ಅತ್ಯುತ್ತಮ ಅನ್ವೇಷಣಾ ಚಿತ್ರ ಪ್ರಶಸ್ತಿ ಲಭಿಸಿದೆ.
ಅನಿರುಧ್ ಜತ್ಕರ್ ನಿರ್ದೇಶನದ ಬಾಳ ಬಂಗಾರ ಸಾಕ್ಷ್ಯಚಿತ್ರ ತೀರ್ಪುಗಾರರ ವಿಶೇಷ ಉಲ್ಲೇಖ ಪಡೆದಿದೆ. ಸಿನಿಮಾ ವಿಮರ್ಶೆ ವಿಭಾಗದಲ್ಲಿ ಹಿರಿಯ ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ ತೀರ್ಪುಗಾರರ ವಿಶೇಷ ಉಲ್ಲೇಖಕ್ಕೆ ಭಾಜನರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶ್ರೀಲಂಕಾದಲ್ಲಿ ಕನ್ನಡ ಚಲನಚಿತ್ರೋತ್ಸವ

ಸುದ್ದಿದಿನ, ಕೊಲೊಂಬೋ : ಶ್ರೀಲಂಕಾದ ರಾಜಧಾನಿ ಕೊಲೊಂಬೋದಲ್ಲಿನ ತರಂಗಿಣಿ ಸಿನಿಮಾ ಹಾಲ್‌ನಲ್ಲಿ ಏರ್ಪಡಿಸಿದ್ದ ಕನ್ನಡ ಚಲನಚಿತ್ರೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು.
ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಗೋಪಾಲ್ ಬಾಗ್ಳೆ, ಶ್ರೀಲಂಕಾದ ಬಹು ಮಾಧ್ಯಮ ಖಾತೆ ಸಚಿವ ಡಾ. ಬಂದೂಲ ಗುಣವರ್ಧನೆ ಹಾಗೂ ಸಂಸ್ಕೃತಿ ಖಾತೆ ಸಚೆವ ವಿಧುರವಿಕ್ರಮ ನಾಯಕ್ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ, ಕನ್ನಡ ಚಲನಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರ ಮಾತನಾಡಿದ ಸಚಿವ ಡಾ.ಗುಣವರ್ಧನೆ, ಉಭಯ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ, ಚಲನಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಮನರಂಜನಾ ಮಾಧ್ಯಮವು ಅತ್ಯಂತ ಜನಪ್ರಿಯ ಮಾಧ್ಯಮವಾಗಿದ್ದು, ಪ್ರಾದೇಶಿಕ ಚಲಚಿನಚಿತ್ರಗಳು, ಅದರಲ್ಲಿಯೂ ಭಾರತದ ಚಲನಚಿತ್ರ ಸಂಸ್ಕೃತಿಯ ಜೊತೆಗೆ ದೇಶದ ಪರಂಪರೆ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುತ್ತಿದೆ. ಸಾಮಾಜಿಕ ವಲಯದಲ್ಲಿ ಪ್ರಾದೇಶಿಕ ಬಾಷೆಯಲ್ಲಿ ಬರುವ ಚಿತ್ರಗಳು, ಚಿತ್ರ ಪ್ರೇಮಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿಗಳಿಗೆ, ಪಠ್ಯಕ್ರಮದ ಭಾಗವಾಗಿ ಹಲವು ಪ್ರದೇಶಗಳಲ್ಲಿ ಅಧ್ಯಯನಕ್ಕೂ ಅನುಕೂಲವಾಗಿದೆ. ಇತ್ತೀಚೆಗೆ ಶ್ರಿಲಂಕಾದ ವಿದ್ಯಾರ್ಥಿಗಳು ಇದರ ಅನುಭವವನ್ನು ಪಡೆದುಕೊಳ್ಳಲು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾರ್ಗದರ್ಶನ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಶ್ರೀಲಂಕಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 250 ರಿಂದ 300 ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಕಳೆದ ವರ್ಷ ನಾಲ್ಕನೇ ಬಹುದೊಡ್ಡ ಕಾರ್ಯಗಾರ ಆಯೋಜಿಸಲಾಗಿತ್ತು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶ್ರೀಲಂಕಾ ವಿದ್ಯಾರ್ಥಿಗಳಿಗೆ, ಚಲನಚಿತ್ರರಂಗದ, ತರಬೇತಿ, ವೀಕ್ಷಣೆ ಹಾಗೂ ನಿರ್ಮಾಣದ ಬಗ್ಗೆ ಹಲವು ರೀತಿ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಈ ವರ್ಷ ಅಮೆರಿಕ-ಅಮೆರಿಕ, ಇಷ್ಠಕಾಮ್ಯ, ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಕೊಟ್ರೇಶಿ ಕನಸು ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಏನಿದು ವಿಚಿತ್ರ | ನಟಿಯ ಡೈವೋರ್ಸ್ ಫೋಟೋಶೂಟ್..!

ಸುದ್ದಿದಿನ ಡೆಸ್ಕ್ : ನಟಿ ಶಾಲಿನಿ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಜನಮನಗೆದ್ದಿದ್ದಾರೆ. ಮೊದಲ ಮದುವೆಯ ವಿಚ್ಛೇದನದ ನಂತರ ಆಕೆ ಮೊಹಮ್ಮದ್ ಎಂಬುವವರನ್ನು ಮದುವೆಯಾಗಿದ್ದರು. ಆ ದಾಂಪತ್ಯದಲ್ಲಿ ಹಲವು ಸಮಸ್ಯೆಗಳಿಂದ ವಿಚ್ಛೇದನ ಪಡೆದರು. ಅದನ್ನು ಸಂಭ್ರಮಿಸಲು ಫೋಟೋಶೂಟ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.
ಮದುವೆಗೂ ಮುನ್ನ ತೆಗೆದಿರುವ ಫೋಟೋಶೂಟ್ಗಳು ಬಹಳಷ್ಟು ಬಂದಿವೆ. ಆದರೆ ವಿಚಿತ್ರ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಕ್ಕಾಗಿಯೇ ನಟಿ ಶಾಲಿನಿಫೋಟೋಗಳು ವೈರಲ್ ಆಗಿವೆ. ಡೈವೋರ್ಸ್ ಆಗಿದ್ದನ್ನೂ ಸಂಭ್ರಮಿಸುವ ಕಾರಣಕ್ಕಾಗಿ ಮಾಡಿದ ಈ ಫೋಟೋಶೂಟ್ ಈಗ ಹಲವರ ಗಮನ ಸೆಳೆದಿದೆ.
ಜೀ ತಮಿಳು ಶೋ ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ಮಗಳೊಂದಿಗೆ ಶಾಲಿನಿ ಭಾಗವಹಿಸಿದ್ದರು. ಖುಷ್ಬು ಅಭಿನಯದ ಮೀರಾ ತಮಿಳು ಧಾರಾವಾಹಿಯಲ್ಲಿ ಕೂಡ ಆಕೆ ನಟಿಸಿದ್ದಾರೆ. ಈ ಧಾರಾವಾಹಿಯ ಮೂಲಕ ನಟಿ ಖುಷ್ಪು ಹಲವು ವರ್ಷಗಳ ನಂತರ ಕಿರುತೆರೆಯಲ್ಲಿ ನಟಿಸಿದ್ದಾರೆ.
ಮಹಿಳೆಯೊಬ್ಬರು ‘ಡೈವೋರ್ಸ್ಡ್’ ಎಂಬ ಫಲಕ ಹಿಡಿದ, ಪತಿಯೊಂದಿಗೆ ಇದ್ದ ಫೋಟೋದಲ್ಲಿನ ಪತಿಯ ಮುಖದ ಭಾಗವನ್ನು ಹರಿದು ಪ್ರತ್ಯೇಕಿಸಿದ, ಪತಿ-ಪತ್ನಿ ಇಬ್ಬರೂ ಜೊತೆಗಿದ್ದ ಫೋಟೋವನ್ನು ಚಪ್ಪಲಿ ಕಾಲಿನಲ್ಲಿ ತುಳಿದು ಹೊಸಕಿ ಹಾಕಿದಂಥ ಫೋಟೋಗಳು ಈ ಫೋಟೋಶೂಟ್ನ ಪ್ರಮುಖ ಆಕರ್ಷಣೆ ಎನಿಸಿಕೊಂಡಿವೆ. ಅಲ್ಲದೆ, ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!’ ಎಂಬ ಫಲಕವನ್ನು ಹಿಡಿದು ಸಂತಸದಿಂದ ಬೀಗುವಂಥ ಫೋಟೋ ಮೂಲಕ ‘ಪತಿ ಎಂಬ ಒಂದು ಸಮಸ್ಯೆಯನ್ನು ನಿವಾರಿಸಿಕೊಂಡಿದ್ದೇನೆ’ ಎಂಬ ಸಂದೇಶವನ್ನೂ ಈಕೆ ಸಾರಿದ್ದಾರೆ.
ಶಾಲಿನಿ ಇನ್ಸ್ಟಾ ಅಕೌಂಟ್ ಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://instagram.com/shalu2626?igshid=YmMyMTA2M2Y=
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ5 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ4 days ago
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ