Connect with us

ಕ್ರೀಡೆ

ವಿರಾಟ್ ಕೊಹ್ಲಿ ಡಯಟ್ ಸೀಕ್ರೆಟ್ ಇಲ್ಲಿದೆ ನೋಡಿ

Published

on

ಸುದ್ದಿದಿನ ಡೆಸ್ಕ್: ಭಾರತ ಕ್ರಿಕೆಟ್ ತಂಡದ ನಾಯಕ, ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಂದರೆ ಕೋಟ್ಯಂತರ ಅಭಿಮಾನಿಗಳಿಗೆ ಇಷ್ಟ.

ವಿರಾಟ್ ಕೊಹ್ಲಿ ಅನುಸರಿಸುವ ಜೀವನ ಪದ್ದತಿಯನ್ನು ಅವರ ಅಭಿಮಾನಿಗಳು ಕಾತುರದಿಂದ ನೋಡುತ್ತಿರುತ್ತಾರೆ. ಜೊತೆಗೆ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಏನು ತಿನ್ನುತ್ತಾರೆ ಎಂಬುದರ ಬಗ್ಗೆ ಅನೇಕರಿಗೆ ಕುತೂಹಲವಿದೆ. ಅವರು ಅನುಸರಿಸುವ ಡಯಟ್ ಪದ್ಧತಿ ಇಲ್ಲಿದೆ ನೋಡಿ

ವಿರಾಟ್ ಕೊಹ್ಲಿ ಡಯಟ್ ಮಂತ್ರ

  1. ಬೆಳಗ್ಗೆ ತಿಂಡಿ- ಆಮ್ಲೆಟ್ (3 ಮೊಟ್ಟೆಗಳ ಬಿಳಿ ಭಾಗ & 1 ಇಡೀ ಮೊಟ್ಟೆ).
    ಸ್ನ್ಯಾಕ್ಕ್ಸ್& ಪೇಯ- ನೆಲಗಡಲೆ ಬೆಣ್ಣೆ, ನಿಂಬೆ ಹಣ್ಣಿನೊಂದಿಗೆ ಗ್ರೀನ್ ಟೀ.
  2. ಮಧ್ಯಾಹ್ನ ಊಟ- ಗ್ರಿಲ್ಡ್ ಚಿಕನ್, ಬೇಯಿಸಿದ ಆಲೂಗಡ್ಡೆ, ಹಸಿರು ತರಕಾರಿ & ಪಾಲಕ್, ಕೆಂಪು ಮಾಂಸ.
  3. ರಾತ್ರಿ ಊಟ, ಸೀ ಫುಡ್ ( ಬೇಯಿಸಿದ /ಗ್ರಿಲ್ಡ್).

ಕ್ರೀಡೆ

ಕ್ಲಸ್ಟರ್ ಮಟ್ಟದ ಕ್ರೀಡಾಕೂಟ : ಕಂದಗಲ್ಲು ಸರ್ಕಾರಿ ಶಾಲೆಯ ಬಾಲಕಿಯರಿಗೆ ಸಮಗ್ರ ಪ್ರಶಸ್ತಿ

Published

on

ಸುದ್ದಿದಿನ, ದಾವಣಗೆರೆ : ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕಂದಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ.

ಬಾಲಕಿಯರ ವಾಲಿಬಾಲ್ ವಿಭಾಗದಲ್ಲಿ ಕಲ್ಪನಾ ಮತ್ತು ತಂಡ ಪ್ರಥಮ, ಬಾಲಕಿಯರ ಥ್ರೋಬಾಲ್ ವಿಭಾಗದಲ್ಲಿ ಕೋಮಲ ಮತ್ತು ತಂಡ ಪ್ರಥಮ, ಬಾಲಕಿಯರ ವಿಭಾಗದ 100 ಮೀಟರ್, 200 ಮೀಟರ್, ಮತ್ತು 400 ಮೀಟರ್ ವಿಭಾಗದಲ್ಲಿ ಕೋಮಲ ಪ್ರಥಮ, ರಿಲೇ 4* 100 ವಿಭಾಗದಲ್ಲಿ ನಿಖಿತಾ ಮತ್ತು ತಂಡ ತೃತೀಯ, ಗುಂಡು ಎಸೆತ ವಿಭಾಗದಲ್ಲಿ ಕಲ್ಪನಾ ತೃತೀಯ, ತಟ್ಟೆ ಎಸೆತ ವಿಭಾಗದಲ್ಲಿ ಕೋಮಲ ಪ್ರಥಮ. ಬಾಲಕರ 200 ಮೀಟರ್ ಓಟದ ವಿಭಾಗದಲ್ಲಿ ಮಾರುತಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಸರ್ಕಾರಿ ಶಾಲಾ ಮಕ್ಕಳ ಈ ಸಾಧನೆಗೆ ಶಾಲಾ ಶಿಕ್ಷಕ ಸಿಬ್ಬಂದಿ, ಎಸ್.ಡಿ.ಎಂ.ಸಿ ಸಿಬ್ಬಂದಿ, ಕಂದಗಲ್ಲು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಪೋಷಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ವಿಶ್ವಕಪ್ ಶೂಟಿಂಗ್ ಪಂದ್ಯಾವಳಿ; ಭಾರತದ ರೈತಮ್ ಸಂಗ್ವಾನ್‌ಗೆ ಕಂಚಿನ ಪದಕ

Published

on

ಸುದ್ದಿದಿನ ಡೆಸ್ಕ್ : ಅಜರ್ ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಪಂದ್ಯಾವಳಿಯ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ರೈತಮ್ ಸಂಗ್ವಾನ್ ಕಂಚಿನ ಪದಕ ಗೆದ್ದಿದ್ದಾರೆ.

ಅಂತಿಮ ಸುತ್ತಿನಲ್ಲಿ ಅವರು,219.1 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು, ಕಂಚಿನ ಪದಕ ತಮ್ಮದಾಗಿಸಿಕೊಂಡರು. ವಿಶ್ವಕಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಇದು ಸಂಗ್ವಾನ್ ಅವರ ಪ್ರಥಮ ವೈಯಕ್ತಿಕ ಪದಕವಾಗಿದೆ.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್: ಭಾರತದ ಚಿರಾಗ್ ಮತ್ತು ಸಾತ್ವಿಕ್ ಜೋಡಿಗೆ ಸ್ವರ್ಣ ಪದಕ

Published

on

ಸುದ್ದಿದಿನ, ದುಬೈ : ದುಬೈನಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಮಲೇಷ್ಯಾದ ಟಿಯೊ ಇ ಯಿ ಮತ್ತು ಒಂಗ್ ಯೆವ್ ಸಿನ್ ವಿರುದ್ಧ 16-21,21-17ಮತ್ತು 21-19 ಗೇಮ್ ಗಳ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದೆ.1965ರಲ್ಲಿ ದಿನೇಶ್ ಖನ್ನಾ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ನಂತರ ಭಾರತಕ್ಕೆ ಒಲಿದ ಮೊದಲ ಸ್ವರ್ಣ ಪದಕ ಇದಾಗಿದೆ.

ಭಾರತ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿರುವ ಚಿರಾಗ್ ಮತ್ತು ಸಾತ್ವಿಕ್ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಹಾಗೂ ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಪುರುಷರ ಡಬಲ್ಸ್ ಜೋಡಿಯಾಗಿರುವ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿಗೆ ಅಭಿನಂದನೆಗಳು ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending