Connect with us

ರಾಜಕೀಯ

ಡಾ.ರಾಜ್‍ಕುಮಾರ್ ನೆನಪಾಗುತ್ತಿದ್ದಾರೆ..!

Published

on

ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್

ಡಾ.ರಾಜ್‍ಕುಮಾರ್ ನೆನಪಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯವನ್ನು ಪ್ರತಿನಿಧಿಸುತ್ತಿರುವ ನಾವು ಅವರು ಸಿನಿಮಾಗಳ ಮೂಲಕ ಕಟ್ಟಿಕೊಟ್ಟ ಆಕೃತಿಗಳೊಂದಿಗೆ ಸಂವಾದ ಏರ್ಪಡಿಸಿಕೊಳ್ಳುವ ಅನಿವಾರ್ಯತೆ ಮನಗಾಣಿಸುವ ಹಾಗೆ ನನ್ನ ಪ್ರಜ್ಞೆಯ ಆವರಣವನ್ನು ಮತ್ತೆ ಮತ್ತೆ ಪ್ರವೇಶಿಸುತ್ತಿದ್ದಾರೆ. ಹಿಂದಿನ ಮಾದರಿಗಳು ಹೀಗೆ ನೆನಪಾಗುತ್ತಲೇ ಇರಬೇಕು. ಇಂಥ ನೆನಪುಗಳೊಂದಿಗಿನ ಯಾನ ಅವುಗಳನ್ನು ಸಮಾಜದಲ್ಲಿ ಅಧಿಕೃತವಾಗಿ ನೆಲೆಗೊಳಿಸಬೇಕು. ಮರೆವಿನ ಕೂಪಕ್ಕೆ ಅವು ತಳ್ಳಲ್ಪಡದ ಹಾಗೆ ಎಲ್ಲ ಕಾಲದ ಪೀಳಿಗೆಗಳಿಗೆ ದಾಟಿಕೊಳ್ಳುತ್ತಿರಬೇಕು. ಕೆಟ್ಟದ್ದು ವಿಜೃಂಭಿಸುವಾಗೆಲ್ಲಾ ಮೌಲಿಕ ಮಾದರಿಗಳ ನೆನಪುಗಳು ಧುಮ್ಮಿಕ್ಕಬೇಕು.

ಆ ಮೂಲಕ ಜನಸಮೂಹ ಹೊಸದಾಗಿ ಆಲೋಚಿಸುವುದಕ್ಕೆ ಪ್ರೇರಣೆಯಾಗಬೇಕು.
ನನ್ನೊಳಗೆ ಈಗ ರೂಪುಗೊಳ್ಳುತ್ತಿರುವ ಈ ಬಗೆಯ ಚಿಂತನೆಯ ವ್ಯಕ್ತಿಗತ ಸಾಧ್ಯತೆಯು ಜನಸಮೂಹದ ಸಾಧ್ಯತೆಯೂ ಆಗಿ ಆದ್ಯತೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದೆನ್ನಿಸುತ್ತಿದೆ. ಹಾಗಾಗುತ್ತದಾ? ಉತ್ತರಗಳ ಬದಲು ಸಂಕೀರ್ಣ ಸವಾಲುಗಳೇ ಕಣ್ಣೆದುರು ಬಂದು ನಿಲ್ಲುತ್ತವೆ. ಚಿಂತಿಸುವಿಕೆಯ ವ್ಯಕ್ತಿಗತ ಸಾಮಥ್ರ್ಯ ಜನಸಮೂಹದೊಳಗೂ ಸಮ್ಮಿಳಿತಗೊಂಡು ರೂಪುಗೊಳ್ಳಬಹುದಾದ ವೈಚಾರಿಕ ಸೌಂದರ್ಯವು ದೇಶವನ್ನು ಉನ್ನತಿಯ ಕಡೆಗೆ ಕೊಂಡೊಯ್ಯುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಇಂಥ ಸಾಧ್ಯತೆಗಳ ಕಡೆಗೆ ಗಮನಹರಿಸದ ಹಾಗೆ ಜನಸಮೂಹದ ಮನಸ್ಥಿತಿಯನ್ನು ಸಂಪೂರ್ಣವಾಗಿ ಜಡಗೊಳಿಸುವ ರೀತಿಯಲ್ಲಿ ನಮ್ಮ ಜನಪ್ರಿಯ ಸಂಸ್ಕøತಿಯ ವಿಕೃತಿಗಳು ದಟ್ಟವಾಗಿವೆ. ಇದರೊಂದಿಗೆ ಅವು ಪ್ರಜಾತಾಂತ್ರಿಕ ವ್ಯವಸ್ಥೆಯ ಜೀವಾಳವೇ ಆಗಿರುವ ಆಯ್ಕೆಯ ಸಂವೈಧಾನಿಕ ಹಕ್ಕಿನ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಹಾಗೆ ತಡೆಯೊಡ್ಡುತ್ತಿವೆ.

ತಾರೆಯರ ಅಪಕ್ವ ನಿಲುವು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಸಂಸ್ಕøತಿಯನ್ನು ಪ್ರತಿನಿಧಿಸುವ ಖ್ಯಾತನಾಮ ತಾರೆಯರ ನಡೆಯನ್ನು ತಾರ್ಕಿಕವಾಗಿ ವಿಶ್ಲೇಷಿಸಬೇಕಿದೆ. ಒಂದು ಪಕ್ಷದ ಅಥವಾ ಅಭ್ಯರ್ಥಿಯ ಪರ ನಿಂತುಕೊಳ್ಳುವ ಅಪಕ್ವ ನಿಲುವಿನೊಂದಿಗೆ ಕನ್ನಡದ ಜನಪ್ರಿಯ ಸಿನಿಮಾ ನಾಯಕ ನಟರ ನಿಲುವುಗಳು ಸುದ್ದಿಗೆ ಗ್ರಾಸ ಒದಗಿಸಿರುವಾಗ ಡಾ.ರಾಜ್‍ಕುಮಾರ್ ಎಂಬ ಹೆಸರಿನೊಂದಿಗಿನ ನೆನಪಿನ ಬಿಂಬಗಳು ಹೊಸ ಪೀಳಿಗೆಯನ್ನು ಆವರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ಅಗತ್ಯ ಮಾತ್ರವಲ್ಲ, ಸಾಂದರ್ಭಿಕ ಅನಿವಾರ್ಯತೆಯೂ ಹೌದು. ಸಾರ್ವಕಾಲಿಕವಾಗಿ ನೆಲೆನಿಲ್ಲುವ ಆಲೋಚನಾಕ್ರಮಗಳನ್ನು ದಾಟಿಸುವುದಕ್ಕೆ ಬೇಕಾದ ಪೂರಕ ವಾತಾವರಣದ ವೇದಿಕೆ ನಿರ್ಮಿಸಿಕೊಳ್ಳುವ ಕಲೆ, ಪ್ರತಿಭೆ ಮತ್ತು ಸಾಮಾಜಿಕ ಅಸ್ಮಿತೆಯ ಅಪೂರ್ವ ಸಂಯೋಜನೆಯ ಪ್ರಯೋಜನ ಜನಸಮೂಹಕ್ಕೆ ದಕ್ಕಬೇಕು. ಇದಕ್ಕೆ ಸಂಬಂಧಿಸಿದಂತೆ ವಿಶಿಷ್ಠವಾದ ಮಾದರಿಗಳನ್ನು ಡಾ.ರಾಜ್‍ಕುಮಾರ್ ಅವರ ಸಾಂಸ್ಕøತಿಕ ನಾಯಕತ್ವದ ಮೂಲಕವೇ ಕಂಡುಕೊಳ್ಳಬೇಕು.

ಡಾ.ರಾಜ್ ಜನಪರ ಕಲಾತ್ಮಕತೆ

ರಾಜ್‍ಕುಮಾರ್ ಅವರು ಏಕೆ ಈ ಕ್ಷಣಕ್ಕೆ ನೆನಪಾಗಬೇಕು ಎಂಬ ಜಿಜ್ಞಾಸೆಗೆ ಪ್ರತಿಯಾಗಿ ಅವರ ಮೌಲಿಕ ಸಿನಿಮಾಗಳ ಪಾತ್ರವೈವಿಧ್ಯತೆ, ಭಾಷಿಕ ಚಳುವಳಿಯೊಂದಿಗೆ ಗುರುತಿಸಿಕೊಳ್ಳುವ ಬದ್ಧತೆ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನಸಮೂಹದ ನೆರವಿಗೆ ಧಾವಿಸಿದ ಅವರ ಕಾಳಜಿಯುತ ಮಾದರಿಗಳು ಕಣ್ಣಮುಂದೆ ಬಂದುನಿಲ್ಲುತ್ತವೆ. ಅವರು ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳ ಪರ ನಿಲ್ಲಲಿಲ್ಲ. ನಿರ್ದಿಷ್ಟ ಅಭ್ಯರ್ಥಿಯ ಪರ ಮತ ಹಾಕುವಂತೆ ಪ್ರಚಾರಗಳ ರ್ಯಾಲಿಗಳಿಗೆ ಹೋಗಲಿಲ್ಲ. ಸಮಸ್ತ ಕನ್ನಡಿಗರನ್ನು ಅಭಿಮಾನಿ ದೇವರುಗಳನ್ನಾಗಿ ಗ್ರಹಿಸಿದವರು ಅವರು. ಆ ಅಭಿಮಾನವನ್ನು ಅಧಿಕಾರ ರಾಜಕಾರಣಕ್ಕೆ ಗೆಲುವು ತಂದುಕೊಡುವ ಉದ್ದೇಶಕ್ಕೆ ಬಳಸಿಕೊಳ್ಳಲಿಲ್ಲ. ‘ಅವರು ಕರೆದರೆ ಜೊತೆಯಾಗಿ ನಿಲ್ಲುತ್ತೇನೆ’ ಎಂಬ ಆರಾಧನಾ ಭಾವವನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ.

ಕನ್ನಡಿಗರ ಹೃದಯದ ಸಾಮ್ರಾಜ್ಯದಲ್ಲಿ ನೆಲೆಸುವ ಅಪ್ಪಟ ಕಲಾತ್ಮಕ ಹಂಬಲ ಅವರನ್ನು ಅಧಿಕಾರ ರಾಜಕಾರಣದ ಹತ್ತಿರ ಹೋಗಲು ಬಿಡಲಿಲ್ಲ. ಅತ್ಯುನ್ನತ ಸ್ಥಾನದ ಆಮಿಷವೊಡ್ಡಿದರೂ ಅದರಿಂದ ಎಚ್ಚರದ ದೂರವನ್ನು ಕಾಯ್ದುಕೊಂಡರು. ಭಾಷಿಕ ಚಳುವಳಿಗಳ ಜೊತಗೆ ಗುರುತಿಸಿಕೊಂಡರು. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಅವರ ನಡೆಯು ಕನ್ನಡ ಸಿನಿಮಾದ ಪ್ರಭಾವವನ್ನು ವಿಸ್ತರಿಸುವುದಕ್ಕೆ ನೆರವಾಗಿತ್ತು. ಅವರ ಅಭಿನಯದ ಸಿನಿಮಾಗಳು ಜನಪ್ರಿಯ ಸಂಸ್ಕøತಿ ಒಳಗೊಳ್ಳಬಹುದಾದ ಮೌಲಿಕ ಲಕ್ಷಣಗಳನ್ನು ದೃಢೀಕರಿಸಿದವು. ಈ ಹಿನ್ನೆಲೆಯ ಕಾರಣಕ್ಕಾಗಿಯೇ ರಾಜಕಾರಣಕ್ಕಿಂತಲೂ ಕನ್ನಡದ್ದೇ ಆದ ಸಾಮುದಾಯಿಕ ಕಲಾತ್ಮಕ ಪಾತ್ರನಿರ್ವಹಣೆಯ ಕಡೆಗೆ ಅವರು ಹೆಚ್ಚು ಆದ್ಯತೆ ನೀಡಿದರು.

Rajadharma a column by Dr.N k padmanabh

ರಾಜಕಾರಣದ ವಿಚ್ಛಿದ್ರಕಾರಕ ಪ್ರಾಬಲ್ಯ

ಭಾರತದ ಅಧಿಕಾರ ರಾಜಕಾರಣಕ್ಕೆ ವಿಚಿತ್ರ ಬಗೆಯ ವಿಚ್ಛಿದ್ರಕಾರಕ ಪ್ರಾಬಲ್ಯವಿದೆ. ಇದರ ಆಕರ್ಷಣೀಯ ಸ್ವರೂಪವು ಈ ಪ್ರಾಬಲ್ಯದ ಸುಳಿವನ್ನು ಬಿಟ್ಟುಕೊಡುವುದೇ ಇಲ್ಲ. ಇಂಥ ರಾಜಕಾರಣವು ಪ್ರಭಾವೀ ವ್ಯಕ್ತಿತ್ವಗಳಿಂದ ಹಿಡಿದು ಜನಸಾಮಾನ್ಯರನ್ನು ಸದಾ ಆಕರ್ಷಿಸುತ್ತಲೇ ಇರುತ್ತದೆ. ಅದರ ಆಕರ್ಷಣೀಯ ಗುಣದಲ್ಲಿಯೇ ಇರುವ ಮತ್ತೊಂದು ಅಪಾಯಕಾರಿ ಮುಖ ಗೋಚರಿಸದಂತೆ ಅದು ವಿಜೃಂಭಿಸುತ್ತಿರುತ್ತದೆ. ಅಭಿನಯದ ಮೂಲಕ ಜನಜನಿತರಾಗಿ ವ್ಯಾಪಕ ಪ್ರಭಾವ ದಕ್ಕಿಸಿಕೊಂಡವರನ್ನು ಹುಡುಕಿ ಇದು ತನ್ನ ಖೆಡ್ಡಾಕ್ಕೆ ಬೀಳಿಸಿಕೊಳ್ಳುತ್ತದೆ.

ಈ ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಹೊಳೆಸುವ ವೈಚಾರಿಕ ಆಕೃತಿಗಳನ್ನು ಸೃಷ್ಟಿಸುವ ಚಿಂತಕರನ್ನು, ಅವರ ನಿಲುವುಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಅಜೆಂಡಾ ಕಾರ್ಯರೂಪಕ್ಕೆ ತರುವುದರ ಕಡೆಗೇ ಅದರ ಗಮನವಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿರುವ ಯಥಾಸ್ಥಿತಿವಾದಿ ಜನಪ್ರಿಯ ತಾರೆಗಳನ್ನು, ಅವರ ಪ್ರಭಾವವನ್ನೂ ಮತಬೆಳೆಯ ಫಸಲು ತೆಗೆಯುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುತ್ತದೆ. ಬದಲಾವಣೆಯ ಚಾಲಕ ಶಕ್ತಿಯಾಗಿ ಪ್ರಮುಖ ಪಾತ್ರವಹಿಸುವ ಕಲಾತ್ಮಕ ವಲಯದ ಅಗಾಧತೆಯನ್ನು ಒಡೆದು ತನ್ನ ಅಧಿಕಾರ ಲಾಭದ ಹವಣಿಕೆಗಳಿಗಾಗಿ ಬಳಸಿಕೊಳ್ಳುತ್ತದೆ. ಡಾ.ರಾಜ್‍ಕುಮಾರ್ ಕಲಾತ್ಮಕತೆಯ ಕುರಿತಾದ ಸ್ಪಷ್ಟ ನಿಲುವುಗಳೊಂದಿಗೆ ಇದ್ದುದರಿಂದ ಅಧಿಕಾರ ರಾಜಕಾರಣದ ಆಕರ್ಷಣೆ ಮತ್ತು ಆಮಿಷಗಳಿಗೆ ಒಳಗಾಗಲಿಲ್ಲ.

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಜನಪ್ರಿಯ ನಟ-ನಟಿಯರು ಅಧಿಕಾರ ರಾಜಕಾರಣವನ್ನು ಪ್ರವೇಶಿಸಿ ಯಶಸ್ಸು ಕಂಡ ಉದಾಹರಣೆಗಳಿದ್ದರೂ ರಾಜ್‍ಕುಮಾರ್ ಆ ಹಾದಿ ಅನುಸರಿಸಲಿಲ್ಲ. ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳ ಮುಖೇನ ತೆಲುಗು ಸಮುದಾಯವನ್ನು ಬಹುವಾಗಿ ಪ್ರಭಾವಿಸಿದ್ದ ಎನ್.ಟಿ.ರಾಮರಾವ್ ಅಲ್ಲಿ ಮುಖ್ಯಮಂತ್ರಿಯಾದರು. ಎಂ.ಜಿ.ಆರ್, ಜಯಲಲಿತಾ ತಮಿಳುನಾಡಿನಲ್ಲಿ ಅಧಿಕಾರದ ಉನ್ನತ ಹಂತ ತಲುಪಿದವರು. ಇದೀಗ ರಜನೀಕಾಂತ್ ರಾಜಕೀಯದ ಹಾದಿಗೆ ಆದ್ಯತೆ ನೀಡಿದ್ದಾರೆ. ಕುತೂಹಲದ ಸಂಗತಿ ಎಂದರೆ ಇಡೀ ಕರ್ನಾಟಕದಾದ್ಯಂತ ಪ್ರಭಾವೀಯಾಗಿದ್ದರೂ ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಹಂಬಲ ರಾಜ್ ಅವರ ಹತ್ತಿರವೂ ಸುಳಿಯಲಿಲ್ಲ ಎಂಬುದು.

ಸಂಯಮಪೂರ್ಣ ಎಚ್ಚರದ ಪ್ರಜ್ಞೆ

ರಾಜ್ ಅವರೊಳಗಿದ್ದ ಅಂಥ ಸಂಯಮಪೂರ್ಣ ಎಚ್ಚರ ಈಗಿನ ನಟರಿಗೆ ಸಾಧ್ಯವಾಗುತ್ತಿಲ್ಲ. ಅಭಿನಯ ಕಲಾತ್ಮಕತೆಯ ಮೂಲಕವೇ ವಿವಿಧ ಬಗೆಗಳಲ್ಲಿ ಜನಸಮೂಹದ ಮೇಲೆ ಪ್ರಭಾವ ಬೀರುವ ಬದ್ಧತೆ ರೂಢಿಸಿಕೊಳ್ಳುವ ಅನಿವಾರ್ಯತೆಯನ್ನು ಕಾಡಿಸಿಕೊಳ್ಳುತ್ತಿಲ್ಲ. ‘ನನಗೆ ಇಂತಿಷ್ಟು ವರ್ಷ ಜನಪ್ರಿಯತೆ ಇರುತ್ತದೆ, ಈ ಅವಧಿಯಲ್ಲಿ ಹಣ ದುಡಿದುಕೊಳ್ಳಬೇಕು’ ಎಂಬ ಆಸೆಯೇ ಈಗಿನ ನಟರನ್ನು ನಿಯಂತ್ರಿಸುತ್ತಿದೆ. ಬೆಂಗಳೂರಿನ ಹೊರಗೆ ಜಿಲ್ಲಾಕೇಂದ್ರಗಳಲ್ಲಿ ಒಳ್ಳೆಯ ಉದ್ದೇಶದೊಂದಿಗೆ ಆಯೋಜಿತವಾಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅತಿಹೆಚ್ಚು ಸಂಭಾವನೆ ಬೇಡುವ ಮನಸ್ಥಿತಿ ಇವರೊಳಗಿನ ಕಲಾತ್ಮಕತೆಯನ್ನು ಕೊಲ್ಲುತ್ತಿದೆ.

ಸದಭಿರುಚಿ ಮೂಡಿಸುವ ನಿಜವಾದ ಕಾಳಜಿ ಇದ್ದಿದ್ದರೆ ಇವರು ‘ಒಳ್ಳೆಯ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ’ ಎಂಬ ಕೊರಗು ವ್ಯಕ್ತಪಡಿಸುವ ಬದಲು ರಾಜ್ಯದಾದ್ಯಂತ ಅರಿವಿನ ಆಂದೋಲನ ಕೈಗೊಳ್ಳುತ್ತಿದ್ದರು. ಕೆಟ್ಟದ್ದರ ಕಡೆಗೆ ವಾಲಿದ ಅಭಿಮಾನಿ ಸಂಸ್ಕøತಿಯ ಊನಗಳನ್ನು ಸರಿಪಡಿಸಿ ಸದಭಿರುಚಿಯ ಸಿನಿಮಾಗಳಿಗೆ ವ್ಯಾಪಕ ಬೆಂಬಲ ತಂದುಕೊಳ್ಳುವುದರ ಕಡೆಗೆ ಗಮನ ಹರಿಸುತ್ತಿದ್ದರು. ಬೇರೆ ರಾಜ್ಯಗಳಲ್ಲಿ ಕನ್ನಡದ ಸಿನಿಮಾ ನಿರ್ಮಾಣದ ಚಟುವಟಿಕೆಗಳು ನಡೆಯುತ್ತಿದ್ದ ಕಾಲದಲ್ಲಿ ಕನ್ನಡಿಗರಿಗೆ ಹತ್ತಿರವಾಗಿ ಇಲ್ಲಿಯ ಸಿನಿಮಾವನ್ನು ಜನಜನಿತವಾಗಿಸಿದ ರಾಜ್ ಮಾದರಿಯನ್ನು ಮುಂದುವರೆಸುವ ಕಾರ್ಯದಲ್ಲಿ ನಿರತರಾಗುತ್ತಿದ್ದರು.

ರಾಜಕೀಯ ಸಾಮಂಜಸ್ಯದ ಪ್ರಶ್ನೆ

ಹಾಗಾಗುವುದಕ್ಕೆ ಜನಪ್ರಿಯ ಸಂಸ್ಕøತಿಯ ಒಳಗೇ ಇರುವ ವಿಕಾರಗಳು ಅವರನ್ನು ಬಿಡುತ್ತಿಲ್ಲ. ಇದರ ಜೊತೆಗೆ ಅಧಿಕಾರ ರಾಜಕಾರಣದ ಯಥಾಸ್ಥಿತಿವಾದದೊಂದಿಗಿನ ಹುನ್ನಾರದ ಪ್ರಾಬಲ್ಯ ನಟರೊಳಗೂ ಆರಾಧನಾ ಭಾವವನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ. ನಟರೊಳಗಿನ ಕಲಾತ್ಮಕತೆಯನ್ನು ಸೋಲಿಸುವ ಅದರ ಕಾರ್ಯಸೂಚಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಬಲ ಬಂದಿದೆ. ಈ ಕಾರಣಕ್ಕಾಗಿಯೇ ಜನಪ್ರಿಯ ಸಿನಿಮಾ ನಟರು ರಾಜಕೀಯ ರಂಗವನ್ನು ಪ್ರವೇಶಿಸಿ ಆರ್ಥಿಕವಾಗಿ ಬಲಾಢ್ಯರಾಗುವ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಒಂದು ಕ್ಷೇತ್ರ ಪ್ರತಿನಿಧಿಸುವವರೊಬ್ಬರು ರಾಜಕೀಯ ರಂಗವನ್ನು ಪ್ರವೇಶಿಸುವುದರ ಹಿಂದೆ ಪ್ರಾಮಾಣಿಕ ಕಳಕಳಿಗಳ ಆಧಾರವಿರಬೇಕಾಗುತ್ತದೆ. ಅದರ ಬದಲು ಯಥಾಸ್ಥಿತಿವಾದದ ಜೊತೆಗೇ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುವ ಮನುಷ್ಯಸಹಜ ದೌರ್ಬಲ್ಯ ಪ್ರದರ್ಶಿಸುವುದು ರಾಜಕೀಯ ಸಾಮಂಜಸ್ಯದ ( Politically Correct) ನಡೆ ಎನ್ನಿಸಿಕೊಳ್ಳುವುದಿಲ್ಲ.

ರಾಜಕೀಯ ಪ್ರಬುದ್ಧತೆಯನ್ನು ಅಳವಡಿಸಿಕೊಳ್ಳುವ ಹಂಬಲವೂ ಇಂಥವರೊಂದಿಗೆ ಇರುವುದಿಲ್ಲ.
ರಾಜಕೀಯ ಪ್ರಬುದ್ಧತೆ ಪ್ರದರ್ಶಿಸುವ ಸಾಮಥ್ರ್ಯ ಇದ್ದವರೂ ಸದ್ಯದ ಸುದ್ದಿವಾಹಿನಿಗಳ ಪ್ರಬಲರ ಪರವಾದ ಅಜೆಂಡಾಕ್ಕೆ ಅನುಗುಣವಾದ ವಿಧ್ವಂಸಕ ಪ್ರಯತ್ನಗಳ ಹೊಡೆತಕ್ಕೀಡಾಗಿ ಹಿನ್ನೆಲೆಗೆ ಸರಿದುಬಿಡುತ್ತಾರೆ. ಸುದ್ದಿವಾಹಿನಿಗಳ ಈ ಬಗೆಯ ಪ್ರಹಾರ ಕಲಾವಲಯದವರಲ್ಲಿ ಭಯ ಮೂಡಿಸಿಬಿಡುತ್ತದೆ. ಆಗ ತಮ್ಮ ಜನಪ್ರಿಯತೆಯನ್ನು ಅಧಿಕಾರ ರಾಜಕಾರಣದ ಪಾದಗಳಿಗೆ ಸಮರ್ಪಿಸುವ ಮನೋಧರ್ಮವನ್ನು ಮೂಡಿಸಿಬಿಡುತ್ತದೆ. ಇರುವಷ್ಟು ದಿನ ಚಾಲ್ತಿಯಲ್ಲಿರಬೇಕು ಎಂಬ ಆಸೆ ಚಿಗುರೊಡೆದು ಅವರೊಳಗಿನ ಕಲಾಶಕ್ತಿಯನ್ನು ನಲುಗಿಸಿಬಿಡುತ್ತದೆ.

ಜನಪ್ರಿಯ ಪ್ರತಿಭಾನ್ವಿತರು ಅಧಿಕಾರ ರಾಜಕಾರಣದ ಪ್ರಾಬಲ್ಯವನ್ನು ಅಧಿಕೃತವಾಗಿ ಪ್ರಶ್ನಿಸಬಹುದು ಎಂಬ ಭರವಸೆಯನ್ನು ಕಳೆದ ಸಲ ಲೋಕಸಭೆ ಚುನಾವಣೆಯ ಸಂದರ್ಭ ಮೂಡಿಸಿತ್ತು. ಈ ದೇಶಕ್ಕೆ ಪ್ರಶ್ನಾತೀತ ನಾಯಕ ಇರಬಾರದು, ಪ್ರಶ್ನೆಗಳನ್ನು ಆಲಿಸಿ ಬದಲಾವಣೆಯನ್ನು ನೆಲೆಗೊಳಿಸುವ ಚಿಂತಕ ನಾಯಕ ಬೇಕು ಎಂಬ ಸಂವಾದವನ್ನು ಅಧಿಕೃತವಾಗಿ ದೇಶಾದ್ಯಂತ ಹುಟ್ಟುಹಾಕುವ ಪ್ರಯತ್ನವನ್ನು ಪ್ರಕಾಶ್ ರೈ ನಿರ್ವಹಿಸಿದರು. ಆದರೆ, ಸುದ್ದಿವಾಹಿನಿಗಳ ಜನಪ್ರಿಯ ವರಸೆಗಳು ಈ ಸಂವಾದವನ್ನು ವಿಸ್ತರಿಸುವ ಬದಲು ಮೊಟಕುಗೊಳಿಸಿದವು. ಅದರೊಂದಿಗೆ ಅಧಿಕಾರ ರಾಜಕಾರಣದ ಎಲ್ಲ ಬಗೆಯ ವಿಕೃತಿಗಳ ದಾಳಿ ಹೊಸದಾಗಿ ಆಲೋಚಿಸುವ ಶಕ್ತಿಯನ್ನೇ ಕುಂದಿಸಿತು. ಜನಪ್ರಿಯ ಸುದ್ದಿಯ ಕೇಂದ್ರಗಳು ಮತ್ತು ರಾಜಕಾರಣದ ಸಂಕುಚಿತತೆಯ ಮನಸ್ಥಿತಿಗಳು ಒಟ್ಟಾಗಿ ಇಂಥದ್ದೊಂದು ಸಾಧ್ಯತೆಯನ್ನೇ ಇಲ್ಲವಾಗಿಸುವಲ್ಲಿ ಯಶಸ್ಸು ಕಂಡಿವೆ.

ಕಾಡುತ್ತಿರುವ ರಾಜ್ ಆಕೃತಿಗಳು

ಈ ಹಂತದಲ್ಲಿಯೇ ಮತ್ತೊಂದು ಲೋಕಸಭೆ ಚುನಾವಣೆ ಎದುರಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕಾರಣ ಪಕ್ಷಾತೀತವಾಗಿ ವಿವಿಧ ಹಂತಗಳಲ್ಲಿ ಚಾಲ್ತಿಯಲ್ಲಿದೆ. ಸಮಸ್ಯೆಗಳಿಂದ ಇಡೀ ದೇಶ ಜರ್ಝರಿತವಾಗುತ್ತಲೇ ಇದೆ. ಎಲ್ಲ ಕಾಲದಲ್ಲೂ ಸುಧಾರಣೆಯ ಹೆಜ್ಜೆಗಳು ಕಂಡರೂ ಅವುಗಳ ವೇಗವನ್ನು ಹೆಚ್ಚಿಸುವ ದಾರ್ಶನಿಕ ನಾಯಕತ್ವವನ್ನು ಕಂಡುಕೊಳ್ಳುವಲ್ಲಿ ಇಲ್ಲಿಯ ಪ್ರಜಾಸತ್ತಾತ್ಮಕ ಪ್ರಯೋಗಶಾಲೆ ಸೋತಿದೆ. ಭಾರೀ ಬದಲಾವಣೆಯಾಗುತ್ತಿದೆ ಎನ್ನುವ ಭಾವ ಬರುವ ಹಾಗೆ ಜನಪ್ರಿಯ ಮಾಧ್ಯಮಗಳು ಭ್ರಮೆಗಳನ್ನು ಹುಟ್ಟಿಸಿವೆ. ಜನಪ್ರಿಯ ನಟರು ಪಕ್ಷಗಳ ಮತಬೆಳೆ ತೆಗೆಯಲು ಬೇಕಾಗುವ ಸರಕಿನ ಗೊಂಬೆಗಳಾಗಿದ್ದಾರೆ. ಇದನ್ನು ದೃಢಪಡಿಸುವಂತೆ ಖ್ಯಾತ ನಟ ಅಂಬರೀಷ್ ಪತ್ನಿ ಸುಮಲತಾ ಅವರ ಗೆಲುವಿಗೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟರು ಬೆಂಬಲವಾಗಿ ನಿಂತಿದ್ದಾರೆ.

ಸ್ಪಷ್ಟವಾಗಿರುವ ಯಾವುದೇ ಬಗೆಯ ರಾಜಕೀಯ ನಿಲುವು ತಳೆಯದೇ ಪ್ರಚಾರದ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಗೆ ಮನ್ನಣೆ ನೀಡಿದ ಕನ್ನಡಿಗರಿಗೆ ಪ್ರತಿಯಾಗಿ ಸಾಮಾಜಿಕ ನೆಲೆಯಲ್ಲಿ ಋಣ ತೀರಿಸುವ ಸಮಂಜಸ ರಾಜಕೀಯ ಪ್ರಜ್ಞೆ ನಿರೂಪಿಸುವ ಲಕ್ಷಣಗಳೇನೂ ಕಾಣಿಸುತ್ತಿಲ್ಲ. ಡಾ.ರಾಜ್‍ಕುಮಾರ್ ಸಾಧ್ಯವಾಗಿಸಿಕೊಂಡ ಸಾಂಸ್ಕøತಿಕ ನಾಯಕತ್ವದ ಗುಣಸ್ವಭಾವಗಳೂ ಗೋಚರಿಸುತ್ತಿಲ್ಲ. ಈ ಇಲ್ಲಗಳ ಮಧ್ಯೆಯೇ ‘ರಾಜ್ ಮನೋಧರ್ಮದ’ ಸೃಜನಶೀಲ ಆಕೃತಿಗಳು ಈಗ ಮತ್ತೆ ಮತ್ತೆ ಕಾಡುತ್ತಿವೆ. ಇವು ಕನ್ನಡದ ಜನಪ್ರಿಯ ಸಂಸ್ಕøತಿಯ ಆವರಣದೊಳಗೆ ಮತ್ತೆ ಪ್ರಾಶಸ್ತ್ಯ ಪಡೆಯುತ್ತವೆಯೇ? ಅಂಥದ್ದೊಂದು ಆಶಾವಾದಿ ನಿರೀಕ್ಷೆಯಲ್ಲಿ……

ಡಾ.ಎನ್.ಕೆ. ಪದ್ಮನಾಭ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಅಂಗನವಾಡಿ ; ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭ : ಸಿಎಂ ಸೂಚನೆ

Published

on

ಸುದ್ದಿದಿನಡೆಸ್ಕ್:ರಾಜ್ಯದ ಅಂಗನವಾಡಿಗಳಲ್ಲಿ, ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವ ಕುರಿತು ಅಧ್ಯಯನಕ್ಕೆ, ತ್ವರಿತವಾಗಿ ತಜ್ಞರ ಸಮಿತಿ ರಚಿಸಿ, ಎರಡು ತಿಂಗಳೊಳಗೆ ವರದಿ ಪಡೆಯುವಂತೆ, ಶಾಲಾ ಶಿಕ್ಷಣ ಖಾತೆ ಸಚಿವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.


  • ಲ್ಯಾಟರಲ್ ಪ್ರವೇಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಿಪ್ಲೊಮೊ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಕಾಲೇಜುಗಳ ಲ್ಯಾಟರಲ್ ಪ್ರವೇಶಕ್ಕೆ ನಡೆಸಿದ್ದ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ಸರಿ ಉತ್ತರ ಪ್ರಕಟಿಸಿದೆ. ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಕೆಇಎ ಪ್ರಕಟಿಸಿದೆ.


ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆರೋಗ್ಯ ಇಲಾಖೆ ನೇಮಕಾತಿ ; ಸಚಿವ ದಿನೇಶ್ ಗುಂಡೂರಾವ್ ರಿಂದ ಸಿಹಿ ಸುದ್ದಿ

Published

on

ಸುದ್ದಿದಿನಡೆಸ್ಕ್:ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಇದ್ದು, ಹಂತ ಹಂತವಾಗಿ ವೈದ್ಯರ ನೇಮಕ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಡಿಕೇರಿಯಲ್ಲಿ ನಿನ್ನೆ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿಯೇ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯ ದೊರೆಯುವಂತಾಗಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಿಎಸ್‌ಟಿ ಭಾರತೀಯರ ಜೀವನ ಸುಧಾರಿಸುವ ಸಾಧನ : ಪ್ರಧಾನಿ ಮೋದಿ

Published

on

ಸುದ್ದಿದಿನಡೆಸ್ಕ್:ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿಗೆ ಏಳು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಜಿಎಸ್‌ಟಿ, 140 ಕೋಟಿ ಭಾರತೀಯರ ಜೀವನವನ್ನು ಸುಧಾರಿಸುವ ಸಾಧನವಾಗಿದೆ. ಇದರ ಜಾರಿಯ ಬಳಿಕ ಬಡವರು ಮತ್ತು ಜನಸಾಮಾನ್ಯರಿಗೆ ಗಮನಾರ್ಹ ಉಳಿತಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಹೇಳಿದ್ದಾರೆ.

ಜಿಎಸ್‌ಟಿ ಜಾರಿಯಾದ ನಂತರ ಗೃಹಬಳಕೆಯ ವಸ್ತುಗಳು ಹೆಚ್ಚು ಅಗ್ಗವಾಗಿವೆ ಎಂದಿರುವ ಅವರು, ಜನರ ಜೀವನವನ್ನು ಪರಿವರ್ತಿಸುವ ಈ ಸುಧಾರಣೆಗಳ ಪ್ರಯಾಣವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ3 hours ago

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ ಜಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ...

ದಿನದ ಸುದ್ದಿ4 hours ago

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ

ಸುದ್ದಿದಿನ,ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ. 29 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ....

ದಿನದ ಸುದ್ದಿ6 hours ago

ಟಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

ಸುದ್ದಿದಿನ,ದಾವಣಗೆರೆ:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂನ್ 30 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು....

ದಿನದ ಸುದ್ದಿ18 hours ago

ವಿದ್ಯಾರ್ಥಿನಿಲಯಗಳಿಗೆ ಬಾಡಿಗೆ ಕಟ್ಟಡಗಳು ಬೇಕಾಗಿದೆ ; ಸಂಪರ್ಕಿಸಿ

ಸುದ್ದಿದಿನ,ದಾವಣಗೆರೆ:ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಮಂಜೂರಾಗಿರುವ 8 ಮೆಟ್ರಿಕ್ ನಂತರ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ನಗರದಲ್ಲಿ ವಿದ್ಯಾರ್ಥಿನಿಲಯಗಳನ್ನು ನಡೆಸಲು ಕನಿಷ್ಠ 900 ಚದರ ಮೀಟರ್ ವಿಸ್ತಿರ್ಣವುಳ್ಳ ಸುಸಜ್ಜಿತವಾದ...

ದಿನದ ಸುದ್ದಿ19 hours ago

ನೀಟ್ ಅಕ್ರಮ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕಳಂಕ : ಸಾಬೀರ್ ಜಯಸಿಂಹ

ಸುದ್ದಿದಿನ,ದಾವಣಗೆರೆ:ದೇಶದ ಅತ್ಯಂತ ಕಠಿಣಾತಿ ಕಠಿಣ ಪರೀಕ್ಷೆ ನೀಟ್​​​ನಲ್ಲೂ ಗೋಲ್​​ಮಾಲ್ ನಡೆದಿದೆ. ಬಳಿಕ ನೆಟ್​​​ಪರೀಕ್ಷೆಗೂ ಅಕ್ರಮದ ವಾಸನೆ ಬಡಿದಿದ್ದರಿಂದ ಪರೀಕ್ಷೆ ರದ್ದಾಗಿದೆ. ಪರೀಕ್ಷೆಗಳ ಅಕ್ರಮದ ವಿರುದ್ಧ ದೇಶಾದ್ಯಂತ ಆಕ್ರೋಶ...

ದಿನದ ಸುದ್ದಿ20 hours ago

ಹಿರಿಯ ನಾಗರಿಕರಿಗಿರುವ ಸರ್ಕಾರಿ ಸೌಲಭ್ಯಗಳೇನು..? ; ಮಾಹಿತಿಗೆ ಸಂಪರ್ಕಿಸಿ

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ಹಾಗೂ ಇತರೆ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಅರಿವು ಮೂಡಿಸುವ ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುವ...

ದಿನದ ಸುದ್ದಿ1 day ago

ಇನ್ನು ಜನನ-ಮರಣ ಪ್ರಮಾಣ ಪತ್ರ ಕೊಡುವ ಅಧಿಕಾರ ಗ್ರಾಮ ಪಂಚಾಯತಿಗೆ

ಸುದ್ದಿದಿನಡೆಸ್ಕ್:ರಾಜ್ಯದಲ್ಲಿ ಜನನ ಅಥವಾ ಮರಣ ನೋಂದಣಿ ಮಾಡಿ 30 ದಿನಗಳ ಒಳಗೆ ಪ್ರಮಾಣಪತ್ರ ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಮುಖ್ಯ ನೋಂದಣಾಧಿಕಾರಿ ಸುತ್ತೊಲೆ ಹೊರಡಿಸಿದ್ದಾರೆ. ಇದು...

ದಿನದ ಸುದ್ದಿ1 day ago

ಅಂಗನವಾಡಿ ; ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭ : ಸಿಎಂ ಸೂಚನೆ

ಸುದ್ದಿದಿನಡೆಸ್ಕ್:ರಾಜ್ಯದ ಅಂಗನವಾಡಿಗಳಲ್ಲಿ, ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವ ಕುರಿತು ಅಧ್ಯಯನಕ್ಕೆ, ತ್ವರಿತವಾಗಿ ತಜ್ಞರ ಸಮಿತಿ ರಚಿಸಿ, ಎರಡು ತಿಂಗಳೊಳಗೆ ವರದಿ ಪಡೆಯುವಂತೆ, ಶಾಲಾ ಶಿಕ್ಷಣ ಖಾತೆ ಸಚಿವರಿಗೆ,...

ದಿನದ ಸುದ್ದಿ1 day ago

ಆರೋಗ್ಯ ಇಲಾಖೆ ನೇಮಕಾತಿ ; ಸಚಿವ ದಿನೇಶ್ ಗುಂಡೂರಾವ್ ರಿಂದ ಸಿಹಿ ಸುದ್ದಿ

ಸುದ್ದಿದಿನಡೆಸ್ಕ್:ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಇದ್ದು, ಹಂತ ಹಂತವಾಗಿ ವೈದ್ಯರ ನೇಮಕ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಡಿಕೇರಿಯಲ್ಲಿ ನಿನ್ನೆ ತಿಳಿಸಿದ್ದಾರೆ....

ದಿನದ ಸುದ್ದಿ1 day ago

ಜಿಎಸ್‌ಟಿ ಭಾರತೀಯರ ಜೀವನ ಸುಧಾರಿಸುವ ಸಾಧನ : ಪ್ರಧಾನಿ ಮೋದಿ

ಸುದ್ದಿದಿನಡೆಸ್ಕ್:ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿಗೆ ಏಳು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ, 140 ಕೋಟಿ ಭಾರತೀಯರ ಜೀವನವನ್ನು ಸುಧಾರಿಸುವ...

Trending