Connect with us

ರಾಜಕೀಯ

ಬಲಪಂಥೀಯ ದಾಳಿಯ ಕ್ರೋಡೀಕರಣಕ್ಕೆ ಎದುರಾಗಿ ವರ್ಗಪರ್ಯಾಯವನ್ನು ಆಧರಿಸಿದ ಎಡಪಂಥೀಯ ಪ್ರತಿಧಾಳಿ –ಇದೀಗ ದೇಶದಲ್ಲಿನ ಹೊಸಧ್ರುವೀಕರಣ : ಸೀತಾರಾಂಯೆಚುರಿ

Published

on

17ನೇ ಲೋಕಸಭಾ ಚುನಾವಣೆಗಳಲ್ಲಿ ಬಲಪಂಥೀಯರಿಗೆ ಒಂದು ದೊಡ್ಡ ವಿಜಯಸಿಕ್ಕಿದೆ, ಇದು ಕಳೆದ ಐದು ವರ್ಷಗಳಲ್ಲಿ ನಡೆಸಿದ ಬಲಪಂಥೀಯದಾಳಿಗಳ ಕ್ರೋಡೀಕರಣ, ಎಡಶಕ್ತಿಗಳು ದೊಡ್ಡ ಹಿನ್ನಡೆ ಅನುಭವಿಸಿವೆ, ಆದರೆ ಎಡಪಂಥೀಯರು, ಕೆಲವರು ಹೇಳುವ ಹಾಗೆ ನಿಶ್ಶಸ್ತ್ರರಾಗಿಲ್ಲ, ಅಥವ ನಿರ್ಮೂಲಗೊಂಡಿಲ್ಲ., ನೆನಪಿಟ್ಟುಕೊಳ್ಳಿ, ಬಲಪಂಥೀಯ ರಾಜಕೀಯ ದಾಳಿಯನ್ನು ಎಡಪಂಥೀಯ ರಾಜಕೀಯ ಪ್ರತಿಧಾಳಿ ಮಾತ್ರವೇ ಎದುರಿಸಬಲ್ಲದು. ಈ ಪ್ರತಿದಾಳಿ ಒಂದು ವರ್ಗ ಪರ್ಯಾಯವನ್ನು, ವರ್ಗರಾಜಕೀಯವನ್ನು ಆಧರಿಸಿದೆ. ಕೇಂದ್ರಸಮಿತಿಯಲ್ಲಿಸಿಪಿಐ(ಎಂ) ಈಗಇದನ್ನೇಮಾಡಲುನಿರ್ಧರಿಸಿದೆ” ಎಂದುಸೀತಾರಾಮ್‍ ಯೆಚುರಿ, ಸಿಪಿಐ(ಎಂ) ಪ್ರಧಾನಕಾರ್ಯದರ್ಶಿ ಹೇಳಿದ್ದಾರೆ.

ಅವರು ಜೂನ್‍ 7ರಿಂದ 9 ರವರೆಗೆ ನಡೆದ ಸಿಪಿಐ(ಎಂ)ನ ಕೇಂದ್ರ ಸಮಿತಿಯ ಚರ್ಚೆಗಳು, ನಿರ್ಧಾರಗಳ ಬಗ್ಗೆ ಪತ್ರಿಕಾ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಎಡಶಕ್ತಿಗಳು ಹಿಮ್ಮೆಟ್ಟುತ್ತಿಲ್ಲ, ಪ್ರತಿದಾಳಿ ನಡೆಸುತ್ತವೆ. ಇದೀಗ ಎಡಶಕ್ತಿಗಳು ಸೆಟೆದುನಿಲ್ಲುವ ಸಮಯ, ಆಧುನಿಕ ಭಾರತದ ಮೌಲ್ಯಗಳನ್ನು ಎತ್ತಿಹಿಡಿಯಲು, ನಮ್ಮ ಸಂವಿಧಾನದ ಆಶ್ವಾಸನೆಗಳನ್ನು ರಕ್ಷಿಸಿಕೊಳ್ಳಲು ಮತ್ತು ಜನಗಳ ಪ್ರಜಾಪ್ರಭುತ್ವ ಹಕ್ಕುಗಳು ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಿಕೊಳ್ಳಲು ಸೆಟೆದುನಿಲ್ಲುವ ಸಮಯ. ಬಲಪಂಥಬಲಗೊಂಡಾಗ, ಎಡಪಂಥವೂ ಶಕ್ತಿಶಾಲಿಯಾಗಬೇಕಾಗುತ್ತದೆ. ಇದೀಗ ದೇಶದಲ್ಲಿನ ಹೊಸಧ್ರುವೀಕರಣ, ಮೆದುಹಿಂದುತ್ವವು ಕಟ್ಟಾಹಿಂದುತ್ವಕ್ಕೆ ಉತ್ತರವಾಗದು, ಎಡಪಂಥಮಾತ್ರವೇ ಏಕೈಕ ಆಯ್ಕೆ ಎಂದು ಯೆಚುರಿ ಹೇಳಿದರು.

ಸಿಪಿಐ(ಎಂ) ಕೇಂದ್ರಸಮಿತಿ ಈ ಮೂರು ದಿನಗಳ ಸಭೆಯಲ್ಲಿ 17ನೇ ಲೋಕಸಭಾ ಚುನಾವಣೆಗಳ ಫಲಿತಾಂಶದ ಪ್ರಾಥಮಿಕ ವಿಮರ್ಶೆ ನಡೆಸಿದೆ. ಬಿಜೆಪಿ ಕಳೆದ ಐದುವರ್ಷಗಳಲ್ಲಿ ಹರಿಯಬಿಟ್ಟಿರುವ ಬಲಪಂಥೀಯ ದಾಳಿ ಈ ಜನಾದೇಶದೊಂದಿಗೆ ಕ್ರೋಡೀಕರಣಗೊಂಡಿದೆ ಎಂದು ವಿಶ್ಲೇಷಿಸಿರುವ ಕೇಂದ್ರಸಮಿತಿ, ಪ್ರತಿಪಕ್ಷಗಳ ವಿಫಲತೆ, ಎಡಶಕ್ತಿಗಳ ತೀವ್ರಪರಾಭವದ ಪ್ರಾಥಮಿಕ ವಿಮರ್ಶೆಯನ್ನು ನಡೆಸಿತು.

ಪಕ್ಷದ ಸ್ವತಂತ್ರಶಕ್ತಿ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಲೇ ಇವೆ ಎಂದು ಗಮನಿಸಿದ ಸಿಪಿಐ(ಎಂ) ಕೇಂದ್ರಸಮಿತಿ ಇಂತಹ ಒಂದು ಪ್ರವೃತ್ತಿ ಆಳಗೊಳ್ಳಲು ಕಾರಣವಾಗಿರುವ ವಿವಿಧ ಅಂಶಗಳನ್ನು ಚರ್ಚಿಸಿತು. ಮತ್ತು ಈ ಅವನತಿಯನ್ನು ತಡೆಯಲು ಹಾಗೂ ತಿರುಗುಮುರುಗುಗೊಳಿಸಲು ಪಕ್ಷವು ಕೈಗೊಳ್ಳುವ ತಕ್ಷಣದ ಸಂಘಟನಾತ್ಮಕ ಮತ್ತು ರಾಜಕೀಯ ಕ್ರಮಗಳನ್ನು ರೂಪಿಸಿತು.

ಈ ನಿರ್ಣಾಯಕ ಬಿಜೆಪಿ ವಿಜಯವು ಖಂಡಿತವಾಗಿಯೂ ಒಡ್ಡಲಿರುವ ಸವಾಲುಗಳನ್ನು ಎದುರಿಸಲು ದೇಶ ಮತ್ತು ಜನತೆ ಸಿದ್ಧರಾಗಬೇಕಾಗಿದೆ ಎಂಬ ತೀರ್ಮಾನಕ್ಕೆ ಕೇಂದ್ರಸಮಿತಿ ಬಂದಿದೆ. ಅದು ಇಂತಹ ನಾಲ್ಕು ಮುಖ್ಯಸವಾಲುಗಳನ್ನು ಗಮನಿಸಿ, ಅವನ್ನು ಎದುರಿಸುವ ಬಗೆಗಳನ್ನೂ ಗುರುತಿಸಿದೆ.

ಪಕ್ಷಕ್ಕೆ ಆಗಿರುವ ಹಿನ್ನಡೆಯಿಂದಾಗಿ ಉಂಟಾಗಿರುವ ಗಂಭೀರ ಸನ್ನಿವೇಶವನ್ನು ಎದುರಿಸಲು ಕೇಂದ್ರಸಮಿತಿ, ಪಕ್ಷದ ಕೊಲ್ಕತಾಪ್ಲೀನಂನ ಮಹತ್ವದ ನಿರ್ಣಯಗಳ ಜಾರಿಯ ವಿಮರ್ಶೆಯೂ ಸೇರಿದಂತೆ ಹಲವಾರು ಕ್ರಮಗಳನ್ನು ಮತ್ತು ಕಾರ್ಯಭಾರಗಳನ್ನು ಅಂಗೀಕರಿಸಿದೆ.

ಕೇಂದ್ರಸಮಿತಿಯ ಸಭೆ ಚುನಾಣಾ ಸುಧಾರಣೆಗಳ, ಅದರಲ್ಲೂ ಚುನಾವಣಾ ಆಯೋಗದ ಸುಧಾರಣೆಗಳ ಅಗತ್ಯ ಮತ್ತು ಇಲೆಕ್ಟ್ರಾನಿಕ್ಮತಯಂತ್ರಗಳ ಬಗ್ಗೆ ಎದ್ದಿರುವ ಸಂದೇಹಗಳನ್ನೂ ಚರ್ಚಿಸಿತು.

ಚುನಾವಣೆಗಳ ನಂತರ ಮುಂಬಯಿಯಲ್ಲಿ ಖ್ಯಾತ ಜಾತ್ಯತೀತಚಿಂತಕ ಡಾ. ರಾಮ್‍ ಪುನಿಯಾನಿಯವರಿಗೆ ಬೆದರಿಕೆಗಳು ಬರುತ್ತಿರುವುದನ್ನು ಕೇಂದ್ರಸಮಿತಿ ಖಂಡಿಸಿದೆ, ಹಾಗೂ ಚುನಾವಣಾ ಫಲಿತಾಂಶಗಳು ಪ್ರಕಟವಾಗುವ ಹಿಂದಿನ ದಿನವೇ ಜಾತಿಕಿರುಕುಳ-ದ್ವೇ಼ಷ ಪ್ರಚಾರಕ್ಕೆ ಬಲಿಯಾದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪಾಯಲ್ ‍ ತಡ್ವಿ ಆತ್ಮಹತ್ಯೆಯ ಬಗ್ಗೆ ದುಃಖ ವ್ಯಕ್ತಪಡಿಸಿದೆ.

ಈ ಸಭೆಯನಂತರ ಪ್ರಕಟಿಸಿರುವ ಸಿಪಿಐ(ಎಂ) ಕೇಂದ್ರಸಮಿತಿಯ ಹೇಳಿಕೆಯ ಪೂರ್ಣಪಾಟವನ್ನು ಈ ಮುಂದೆಕೊಡಲಾಗಿದೆ.

ಲೋಕ ಸಭಾಚುನಾವಣೆಗಳ ಪ್ರಾಥಮಿಕ ಪರಾಮರ್ಶೆ

ಬಿಜೆಪಿ ವಿಜಯ

17ನೇ ಲೋಕಸಭಾಚುನಾವಣೆಗಳ ತೀರ್ಪು ಬಿಜೆಪಿ ನೇತೃತ್ವದ ಎನ್‍.ಡಿ.ಎ. ಗೆ 2014ರಲ್ಲಿ ಗೆದ್ದುದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮತ್ತು ಹೆಚ್ಚಿನ ಮತಗಳಿಕೆಯನ್ನು ಕೊಟ್ಟಿದೆ. ಇದು ಅವರ ಪರವಾದ ಒಂದು ನಿರ್ಣಾಯಕ ಜನಾದೇಶವಾಗಿದೆ. ಬಿಜೆಪಿ ಕಳೆದ ಐದುವರ್ಷಗಳಲ್ಲಿ ಹರಿಯಬಿಟ್ಟಿರುವ ಬಲಪಂಥೀಯ ದಾಳಿ ಈ ಜನಾದೇಶದೊಂದಿಗೆ ಕ್ರೋಡೀಕರಣಗೊಂಡಿದೆ.

ಪುಲ್ವಾಮ ಮತ್ತು ಬಾಲಾಕೋಟ್‍ ನಂತರ ಜನಗಳ ನಡುವೆ ಕಥನವನ್ನು ಕಳೆದ ಐದುವರ್ಷಗಳಲ್ಲಿ ಎನ್.ಡಿ.ಎ. ಸರಕಾರ ಹೇರಿದ ಹತ್ತು-ಹಲವು ಜೀವನಾಧಾರದ ಪ್ರಶ್ನೆಗಳಿಂದ ಪಲ್ಲಟಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಂಕುಚಿತ ಕೋಮುವಾದಿ ರಾಷ್ಟ್ರವಾದಿ ಅಬ್ಬರದ ಹೊಸ ಕಥನಕ್ಕೆ ಹಲವಾರು ಅಂಶಗಳ ಮೂಲಕ ಮೋದಿಯ ವ್ಯಕ್ತಿತ್ವವನ್ನು ಕಟ್ಟಿದ್ದು ಇದಕ್ಕೆ ನೆರವಾಯಿತು. ಮಾಧ್ಯಮಗಳ ವಿಭಾಗಗಳು ಈ ಪ್ರಾಜೆಕ್ಟಿನಲ್ಲಿ ಪಾಲುದಾರರಾದವು. ಹಿಂದೆಂದೂ ಕಾಣದಂತಹ ಹಣಬಲದ ಬಳಕೆ ಈ ಚುನಾವಣೆಗಳಲ್ಲಿ ಕಂಡುಬಂತು. ಚುನಾವಣಾ ಬಾಂಡುಗಳ ಮೂಲಕ ಅಗಾಧ ಮೊತ್ತಗಳು ಬಿಜೆಪಿಗೆ ವರ್ಗಾಯಿಸಲ್ಪಟ್ಟವು. ಚುನಾವಣಾಆಯೋಗದ ಪಾತ್ರವೂತನ್ನಕೊಡುಗೆನೀಡಿತು.

ಪ್ರತಿಪಕ್ಷಗಳು

ಹೆಚ್ಚಿನ ಪ್ರತಿಪಕ್ಷಗಳು, ತಮಿಳುನಾಡು, ಆಂಧ್ರಪ್ರದೇಶ, ಇನ್ನು ಕೆಲವು ರಾಜ್ಯಗಳನ್ನು ಬಿಟ್ಟರೆ ಬೇರೆಡೆಗಳಲ್ಲಿ ದೊಡ್ಡ ನಷ್ಟವನ್ನು ಕಂಡಿವೆ. ಪ್ರತಿಪಕ್ಷಗಳು, ನಿರ್ದಿಷ್ಟವಾಗಿ ಕಾಂಗ್ರೆಸ್‍, ಚುನಾವಣೆಗಳ ಮೊದಲು ಮುಂದಿಟ್ಟ ಜಾತ್ಯತೀತ ಪ್ರತಿಪಕ್ಷಗಳ ಐಕ್ಯತೆಯನ್ನು ಪ್ರಸ್ತುತ ಪಡಿಸುವಲ್ಲಿ ವಿಫಲವಾದವು. ಕೋಮುವಾದಿದಾಳಿಗೆ ಎದುರಾಗಿ ಜಾತ್ಯತೀತತೆಯನ್ನು ರಕ್ಷಿಸಿಕೊಳ್ಳುವ ಒಂದು ಪ್ರಚಾರಾಂದೋಲನವನ್ನು ನಡೆಸಲಿಲ್ಲ. ಕಟ್ಟಾಹಿಂದುತ್ವಕ್ಕೆ ಮೆದುಹಿಂದುತ್ವ ಉತ್ತರವಲ್ಲ. ಹಿಂದುತ್ವ ಮತ್ತು ಜಾತ್ಯತೀತತೆಯ ನಡುವಿನ ಸೈದ್ಧಾಂತಿಕ ಸಮರವನ್ನು ಶಕ್ತಿಯುತವಾಗಿ ನಡೆಸಲಿಲ್ಲ.

ಸಿಪಿಐ(ಎಂ) ಮತ್ತು ಎಡಶಕ್ತಿಗಳಿಗೆ ತೀವ್ರಪರಾಭವ

ಸಿಪಿಐ(ಎಂ) ಮತ್ತು ಎಡಶಕ್ತಿಗಳು ಒಂದು ತೀವ್ರ ಹಿನ್ನಡೆಯನ್ನು, ವಿಶೇಷವಾಗಿ ಕೇರಳ, ಪಶ್ಚಿಮಬಂಗಾಲ ಮತ್ತು ತ್ರಿಪುರಾದಲ್ಲಿನ ತಮ್ಮ ಬಲಿಷ್ಟನೆಲೆಗಳಲ್ಲಿ, ಅನುಭವಿಸಿವೆ.ಪಶ್ಚಿಮಬಂಗಾಲ ಮತ್ತು ತ್ರಿಪುರಾ ಈ ಎರಡರಲ್ಲೂ ಚುನಾವಣೆಗಳು ತೀವ್ರಭಯೋತ್ಪಾದನೆ ಮತ್ತು ಹಿಂಸಾಚಾರದ ವಾತಾವರಣದಲ್ಲಿ ನಡೆದವು. ಇಂತಹ ಹಿಂಸಾಚಾರದಲ್ಲಿ ಪಶ್ಚಿಮಬಂಗಾಲದಲ್ಲಿ ಐವರು ಮತ್ತು ತ್ರಿಪುರಾದಲ್ಲಿ ಒಬ್ಬರು ಸಿಪಿಐ(ಎಂ) ಕಾರ್ಯಕರ್ತರು ಜೀವ ಕಳಕೊಂಡಿದ್ದಾರೆ.

ತ್ರಿಪುರಾ ಪಶ್ಚಿಮಕ್ಷೇತ್ರ ಮತ್ತು ಪಶ್ಚಿಮಬಂಗಾಲದ ಡೈಮಂಡ್‍ ಹಾರ್ಬರ್‍ ಕ್ಷೇತ್ರದಲ್ಲಿ ಬಹುಪಾಲು ಮತಗಟ್ಟೆಗಳಲ್ಲಿ ಚುನಾವಣಾ ಮೋಸನಡೆದಿದೆ, ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ದೂಷಿತಗೊಂಡಿದೆ. ಚುನಾವಣಾ ಆಯೋಗಕ್ಕೆ “ಮುಕ್ತ ಮತ್ತು ನ್ಯಾಯಯುತ ಮತದಾನ”ಗಳನ್ನು ನಡೆಸುವ ತನ್ನ ಆಶ್ವಾಸನೆಯನ್ನು ಜಾರಿಗೊಳಿಸಲು ಆಗಲಿಲ್ಲ.

ಈ ಮೂರು ರಾಜ್ಯಸಮಿತಿಗಳು ನಡೆಸಿರುವ ಪ್ರಾಥಮಿಕ ವಿಮರ್ಶೆಗಳನ್ನು ಕೇಂದ್ರಸಮಿತಿ ಚರ್ಚಿಸಿತು. ಒಂದು ವಿವರವಾದ ಮತಗಟ್ಟೆವಾರು ವಿಮರ್ಶೆ ನಡೆಯುತ್ತಿದ್ದು, ಅದರ ಆಧಾರದಲ್ಲಿ ಅಂತಿಮ ಅನುಭವಗಳ ಮೌಲ್ಯಮಾಪನ ಮಾಡಲಾಗುವುದು.

ಈ ಚುನಾವಣೆಗಳಲ್ಲಿ, ಬಿಜೆಪಿ ಮತ್ತು ಅದರ ಮಿತ್ರರನ್ನು ಸೋಲಿಸಬೇಕು, ಸಂಸತ್ತಿನಲ್ಲಿ ಎಡಪಕ್ಷಗಳ ಬಲವನ್ನು ಹೆಚ್ಚಿಸಬೇಕು ಮತ್ತು ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತಿತ ಸರಕಾರವನ್ನು ಸ್ಥಾಪಿಸಲು ಅನುವುಮಾಡಿಕೊಡಬೇಕು ಎಂದು ಸಿಪಿಐ(ಎಂ) ಕರೆನೀಡಿತ್ತು. ಈ ಧ್ಯೇಯೋದ್ದೇಶಗಳನ್ನು ಈ ಜನಾದೇಶ ನಿರಾಕರಿಸಿದೆ.

ಕೇರಳದಲ್ಲಿ ಮತದಾರರು ಒಂದು ಪರ್ಯಾಯ ಜಾತ್ಯತೀತ ಸರಕಾರವನ್ನು ರಚಿಸುವಲ್ಲಿ ಕಾಂಗ್ರೆಸ್‍ ಗೇ ಸಾಧ್ಯತೆ ಹೆಚ್ಚು ಎಂದು ಭಾವಿಸಿದರು. ಇದರ ಫಲಿತಾಂಶವಾಗಿ ಜಾತ್ಯತೀತ ಒಲವಿನ ಜನಗಳು ಮತ್ತು ಅಲ್ಪಸಂಖ್ಯಾತರು ಅವರಿಗೆ ಮತ ನೀಡುವಂತಾಯಿತು. ಶಬರಿಮಲೆ ಕುರಿತ ಸುಪ್ರಿಂಕೋರ್ಟ್‍ ತೀರ್ಪನ್ನು ಜಾರಿಗೊಳಿಸಲು ಬದ್ಧವಾಗಿದ್ದ ಎಲ್‍.ಡಿ. ಎಫ್‍. ಸರಕಾರದ ಸರಿಯಾದ ನಿಲುವನ್ನು ಕುರಿತಂತೆ ಬಿಜೆಪಿ ಮತ್ತು ಯುಡಿಎಫ್ ಆಸ್ತಿಕ ಜನ ವಿಭಾಗಗಳಲ್ಲಿ ಹಲವರಲ್ಲಿ ತಪ್ಪುಕಲ್ಪನೆಗಳನ್ನು ಸೃಷ್ಟಿಸಿದವು. ಈ ವಿಭಾಗಗಳನ್ನು ಮತ್ತೆ ನಮ್ಮತೆಕ್ಕೆಗೆ ತರಲು ಪಕ್ಷವು ಸರ್ವಪ್ರಯತ್ನಗಳನ್ನು ನಡೆಸುತ್ತದೆ.

ಪಶ್ಚಿಮಬಂಗಾಲದಲ್ಲಿ ಚುನಾವಣೆಗಳು ಅತ್ಯಂತ ಧ್ರುವೀಕೃತ ವಾತಾವರಣದಲ್ಲಿ ನಡೆದಿವೆ. ಮಾಧ್ಯಮ ಒಂದು ಅವಳಿಕಥನವನ್ನು ಕಟ್ಟಿ ಟಿಎಂಸಿ ಮತ್ತು ಬಿಜೆಪಿ ನಡುವೆ ಇಂತಹ ಧ್ರುವೀಕರಣದಲ್ಲಿ ನೆರವಾಗುವಲ್ಲಿ ಒಂದು ದೊಡ್ಡಪಾತ್ರವನ್ನು ವಹಿಸಿತು. ಕೋಮುವಾದ ಪ್ರೇರಿತ ಪ್ರಚಾರವು ಮತದಾರರನ್ನು ಮತ್ತಷ್ಟು ಧ್ರುವೀಕರಿಸಿತು. ಟಿಎಂಸಿ ವಿರುದ್ಧ ಅಧಿಕಾರ ಸ್ಥ-ವಿರೋಧಿ ಭಾವನೆ ಬಹಳಗಟ್ಟಿಯಾಗಿತ್ತು. ಅದಕ್ಕೆ ಸಿಪಿಐ(ಎಂ) ಮತ್ತು ಎಡಶಕ್ತಿಗಳು ಪರ್ಯಾಯ ಎಂದು ಮತದಾರರು ಕಾಣಲಿಲ್ಲ, ಇದರಿಂದಾಗಿ ನಮ್ಮ ಪಾರಂಪರಿಕ ಬೆಂಬಲಿಗರಲ್ಲಿ ಒಂದು ವಿಭಾಗ ಪಲ್ಲಟಗೊಳ್ಳುವಂತಾಯಿತು. ಬಜೆಪಿ-ವಿರೋಧಿ, ಟಿಎಂಸಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕ್ರೋಡೀಕರಿಸುವ ಎಡಪಕ್ಷಗಳ ಪ್ರಸ್ತಾವವನ್ನು ಸ್ವೀಕರಿಸಲು ಕಾಂಗ್ರೆಸ್‍ ನಿರಾಕರಿಸಿದ್ದು ಈ ಅವಳಿ ಕಥನವನ್ನು ಗಟ್ಟಿಗೊಳಿಸಿತು.

ತ್ರಿಪುರಾದಲ್ಲಿ ಎರಡರಲ್ಲಿ ಒಂದು ಸ್ಥಾನದಲ್ಲಿ ಸುಮಾರಾಗಿ ಚುನಾವಣಾ ಮೋಸವೇ ನಡೆದಿದೆ. ಮೀಸಲು ಎಸ್‍.ಟಿ. ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ, ಕಾಂಗ್ರೆಸ್‍ ಎರಡನೇ ಸ್ಥಾನಪಡೆದಿದೆ.

ಈ ಎರಡೂ ರಾಜ್ಯಗಳಲ್ಲಿ ಪಕ್ಷದಸಮಿತಿಗಳು ನಮ್ಮ ಪಾರಂಪರಿಕ ಬೆಂಬಲ ನೆಲೆಕುಗ್ಗುತ್ತಿರುವ ಬಗ್ಗೆ ಪ್ರಾಮಾಣಿಕ ಮೌಲ್ಯಮಾಪನ ನಡೆಸುತ್ತಿವೆ ಮತ್ತು ಈ ವಿಭಾಗಗಳನ್ನು ಮತ್ತೆ ನಮ್ಮತೆಕ್ಕೆಗೆ ತರಲು ತುರ್ತುಕ್ರಮಗಳನ್ನು ರೂಪಿಸಲಾಗುವುದು.

ಈ ಬಲಿಷ್ಟ ನೆಲೆಗಳ ಹೊರಗೆ, ಸಿಪಿಐ(ಎಂ) ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಚುನಾವಣಾ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಎರಡೂಸ್ಥಾನಗಳನ್ನು ಗೆದ್ದುಕೊಂಡಿದೆ. ಬೇರೆಲ್ಲ ರಾಜ್ಯಗಳಲ್ಲಿ ಸಿಪಿಐ(ಎಂ) ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಈ ಸ್ಥಾನಗಳಲ್ಲಿ, ಮಹಾರಾಷ್ಟ್ರದ ದಿಂಡೋರಿ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ 1,09,570 ಮತಗಳನ್ನು ಪಡೆದಿದೆ. ಒಡಿಶಾ ವಿಧಾನಸಭೆಯ ಚುನಾವಣೆಗಳಲ್ಲಿ ಸಿಪಿಐ(ಎಂ) ತನ್ನ ಬೊನೈ ಕ್ಷೇತ್ರವನ್ನು, ಕಳೆದ ಬಾರಿಗಿಂತ 20,000 ಹೆಚ್ಚುಮತಗಳನ್ನು (34.67%) ಗಳಿಸಿ ಉಳಿಸಿಕೊಂಡಿದೆ.

ಪಕ್ಷದ ಸ್ವತಂತ್ರ ಶಕ್ತಿ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಲೇ ಇವೆ ಎಂದು ಕೇಂದ್ರಸಮಿತಿ ಗಮನಿಸಿತು. ಇಂತಹ ಒಂದು ಪ್ರವೃತ್ತಿ ಆಳಗೊಳ್ಳಲು ಕಾರಣವಾಗಿರುವ ವಿವಿಧ ಅಂಶಗಳನ್ನು ಕೇಂದ್ರ ಸಮಿತಿ ಚರ್ಚಿಸಿತು. ಮತ್ತು ಈ ಅವನತಿಯನ್ನು ತಡೆಯಲು ಹಾಗೂ ತಿರುಗುಮುರುಗುಗೊಳಿಸಲು ಪಕ್ಷವುಕೈಗೊಳ್ಳುವ ತಕ್ಷಣದ ಸಂಘಟನಾತ್ಮಕ ಮತ್ತು ರಾಜಕೀಯ ಕ್ರಮಗಳನ್ನು ರೂಪಿಸಿತು.

ಚುನಾವಣೆಗಳ ನಂತರದ ಸವಾಲುಗಳು

ಈ ನಿರ್ಣಾಯಕ ಬಿಜೆಪಿ ವಿಜಯವು ಖಂಡಿತವಾಗಿಯೂ ಒಡ್ಡಲಿರುವ ಸವಾಲುಗಳನ್ನು ಎದುರಿಸಲು ದೇಶ ಮತ್ತು ಜನತೆ ಸಿದ್ಧರಾಗಬೇಕಾಗಿದೆ ಎಂಬ ತೀರ್ಮಾನಕ್ಕೆ ಕೇಂದ್ರಸಮಿತಿ ಬಂದಿದೆ. ಕೇಂದ್ರಸಮಿತಿ ಇಂತಹ ನಾಲ್ಕು ಸವಾಲುಗಳನ್ನು ಗಮನಿಸಿದೆ.

  1. ಬಿಜೆಪಿ ಈ ನಿರ್ಣಾಯಕ ವಿಜಯವನ್ನು ಅಭೂತಪೂರ್ವ ಹಣಬಲ ಮತ್ತು ಅಂತರ್ರಾಷ್ಟ್ರೀಯ ಹಾಗೂ ದೇಶೀಕಾರ್ಪೊರೇಟ್ಗಳ ಸಂಪೂರ್ಣ ಬೆಂಬಲದಿಂದ ಗೆದ್ದಿದೆ. ದೊಡ್ಡವ್ಯವಹಾರಸ್ಥರು ಮತ್ತು ಶ್ರೀಮಂತರಿಗೆ ಅನುಕೂಲಕರವಾದ ಜನ-ವಿರೋಧಿ ಆರ್ಥಿಕ ಸುಧಾರಣೆಗಳ ದಿಕ್ಪಥವನ್ನು ಅದು ಇನ್ನಷ್ಟು ತೀವ್ರಗೊಳಿಸಲು ಬಹುಪಾಲು ಜನತೆಯ ಮೇಲೆ ಮತ್ತಷ್ಟು ಹೆಚ್ಚಿನ ಸಂಕಟಗಳನ್ನು ಖಂಡಿತವಾಗಿಯೂ ಹೇರುತ್ತದೆ. ಇಂತಹ ಆರ್ಥಿಕ ಹೊಡೆತಗಳ ವಿರುದ್ಧ ಹೋರಾಟಗಳಲ್ಲಿ ಗರಿಷ್ಟ ಜನವಿಭಾಗಗಳನ್ನು ಅಣಿನೆರೆಸುವಲ್ಲಿ ಪಕ್ಷವು ನೇತೃತ್ವ ನೀಡುತ್ತದೆ.
  2. ಹಿಂದುತ್ವ ಕೋಮುವಾದಿ ಧ್ರುವೀಕರಣದ ಕ್ರೋಡೀಕರಣದಿಂದಾಗಿ ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಹೆಚ್ಚೆಚ್ಚು ಹಲ್ಲೆಗಳು ನಡೆಯಲಿವೆ, ಇದರಿಂದಾಗಿ, ಈ ಜನ ವಿಭಾಗಗಳ ಭದ್ರತೆ ಮತ್ತು ಜೀವನಾಧಾರ ಕುರಿತ ಆತಂಕಗಳು ಇನ್ನಷ್ಟು ಹದಗೆಡಲಿವೆ. ನಮ್ಮ ಸಂವಿಧಾನದಲ್ಲಿ ಪ್ರತಿಷ್ಟಾಪಿಸಿರುವ ಜಾತ್ಯತೀತತೆಯನ್ನು ರಕ್ಷಿಸುವ ಮತ್ತು ಬಲಪಡಿಸುವ ಕೆಲಸವನ್ನು ಪಕ್ಷವು ಈ ಹೋರಾಟಗಳಲ್ಲಿ ಸಾಕಷ್ಟು ವಿಶಾಲ ಪ್ರಮಾಣದಲ್ಲಿ ಜನವಿಭಾಗಗಳನ್ನು ಸೆಳೆದುಕೊಂಡು ಕೈಗೆತ್ತಿಕೊಳ್ಳುತ್ತದೆ.
  3. ಕಳೆದ ಐದುವರ್ಷಗಳಲ್ಲಿ ಎಲ್ಲಸಂವಿಧಾನಿಕ ಅಧಿಕಾರ ಪಡೆದಿರುವ ಸಂಸ್ಥೆಗಳಲ್ಲಿ ನಡೆದಿರುವ ಆರೆಸ್ಸೆಸ್‍ ನ ನುಸುಳಿಕೆ ಇನ್ನಷ್ಟು ತೀವ್ರಗೊಳ್ಳುವುದು ಖಂಡಿತ. ಇದು, ಸಂವಿಧಾನಿಕ ಗಣತಂತ್ರವನ್ನು ಆರೆಸ್ಸೆಸ್‍ ನ ಸೈದ್ಧಾಂತಿಕ ಯೋಜನೆಯಾದ ‘ಹಿಂದೂರಾಷ್ಟ್ರ’ವಾಗಿ ಪರಿವರ್ತಿಸಲು ಅನುವುಮಾಡಿಕೊಳ್ಳುವುದಕ್ಕಾಗಿ, ಇಂತಹ ಸಂವಿಧಾನಿಕ ಪ್ರಾಧಿಕಾರಗಳನ್ನು ಶಿಥಿಲಗೊಳಿಸುವ ದಿಕ್ಕಿನಲ್ಲಿ ಸಾಗಲಿದೆ. ಎಲ್ಲ ಸಂವಿಧಾನಿಕ ಪ್ರಾಧಿಕಾರಗಳನ್ನು ರಕ್ಷಿಸುವ ಮತ್ತು ಬಲಪಡಿಸುವ ಕೆಲಸವನ್ನು ಸಿಪಿಐ(ಎಂ) ಈ ಹೋರಾಟಗಳಲ್ಲಿ ಜತೆಗೂಡಲು ಸಿದ್ಧವಿರುವ ಇತರ ಎಲ್ಲ ಶಕ್ತಿಗಳೊಂದಿಗೆ ಪ್ರತಿಪಾದಿಸುತ್ತದೆ.
  4. ಬಿಜೆಪಿಯ ವಿಜಯವು ಭಾರತದಲ್ಲಿ ಒಂದು “ಭದ್ರತಾ’ ಪ್ರಭುತ್ವವನ್ನು ಸ್ಥಾಪಿಸುವ ಅಗತ್ಯವಿದೆಯೆಂಬುದರತ್ತ ಗಮನ ಕೇಂದ್ರೀಕರಿಸಿತ್ತು. ಇದರಿಂದಾಗಿ ವ್ಯಕ್ತಿಗಳ ಹಕ್ಕುಗಳನ್ನು, ನಿರ್ದಿಷ್ಟವಾಗಿ ಭಿನ್ನಾಭಿಪ್ರಾಯದ ಹಕ್ಕನ್ನುತೀವ್ರವಾಗಿ ಮೊಟಕುಗೊಳಿಸಲಾಗುತ್ತದೆ. ಈಗಾಗಲೇ ಅನಿಷ್ಟಕಾರಿ ಸಂಕೇತಗಳು ಕಾಣುತ್ತಿವೆ. ಒಂದಿಲ್ಲೊಂದುನೆ ಪದಲ್ಲಿ ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಖಾಸಗಿಪಡೆಗಳ ಹಲ್ಲೆಗಳು ತೀವ್ರಗೊಳ್ಳಲಿವೆ. ದುಡಿಯುವ ಜನಗಳ ಮತ್ತು ಧಾರ್ಮಿಕ, ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳು ದಾಳಿಗೆ ಒಳಗಾಗಲಿವೆ, ಅವರ ಬೇಟೆ ನಡೆಯಲಿದೆ.

ಈ ಸವಾಲುಗಳನ್ನುನೇರವಾಗಿ ಎದುರಿಸಲು, ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ನೆಚ್ಚಿಕೊಂಡಿರುವ ಸಾಧ್ಯವಾದಷ್ಟು ವಿಶಾಲವಾದ ಜನವಿಭಾಗಗಳನ್ನು ಅಣಿ ನೆರೆಸುವಲ್ಲಿ ಸಿಪಿಐ(ಎಂ) ನೇತೃತ್ವವಹಿಸುತ್ತದೆ.

ಕಾರ್ಯಭಾರಗಳು

ಪಕ್ಷಕ್ಕೆ ಈ ಹಿನ್ನಡೆಯಿಂದಾಗಿ ಉಂಟಾಗಿರುವ ಗಂಭೀರ ಸನ್ನಿವೇಶವನ್ನು ಎದುರಿಸಲು ಕೇಂದ್ರಸಮಿತಿ ಹಲವಾರು ಕ್ರಮಗಳನ್ನು ಮತ್ತು ಕಾರ್ಯಭಾರಗಳನ್ನು ಅಂಗೀಕರಿಸಿದೆ.

  1. ಜನಗಳೊಂದಿಗೆ ಸಂಪರ್ಕವನ್ನು ಆಳಗೊಳಿಸಲು ಮತ್ತು ವಿವಿಧರಂಗಗಳ ಚಟುವಟಿಕೆಗಳನ್ನು ಬಲಪಡಿಸಲು ನಿರ್ದಿಷ್ಟಕ್ರಮಗಳನ್ನು ನಿರ್ಧರಿಸಲಾಗಿದೆ. ಜೀವನಾಧಾರದ ಪ್ರಶ್ನೆಗಳನ್ನು ಕುರಿತ ಹೋರಾಟಗಳನ್ನು, ಪರಿಶಿಷ್ಟಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸಾಮಾಜಿಕ ದಮನದ ವಿರುದ್ಧ ಹೋರಾಟಗಳೊಂದಿಗೆ ಸಮಗ್ರೀಕರಿಸಲು ನಿರ್ದಿಷ್ಟ ಗಮನವನ್ನು ಕೊಡಲಾಗುವುದು.
  2. ಪಕ್ಷವು 2015ರಲ್ಲಿ ಕೊಲ್ಕತಾಪ್ಲೀನಂನಲ್ಲಿ ಅಂಗೀಕರಿಸಿದ ಪಕ್ಷದ ಸಂಘಟನೆ ಮತ್ತು ಅದರ ಕಾರ್ಯವೈಖರಿ ಕುರಿತ ಮಹತ್ವದ ನಿರ್ಣಯಗಳ ಜಾರಿಯ ಒಂದು ಪರಾಮರ್ಶೆಯನ್ನು ನಡೆಸುತ್ತದೆ. ಆಗಸ್ಟ್ಕೊನೆಯ ವೇಳೆಗೆ ರಾಜ್ಯಗಳು ಈ ಪರಾಮರ್ಶೆಯನ್ನು ಪೂರ್ಣಗೊಳಿಸಲಿದ್ದು, ಇದರ ಆಧಾರದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸುವ ಮತ್ತು ನಮ್ಮ ಕಾರ್ಯಕರ್ತರಲ್ಲಿ ಹುರುಪು ತುಂಬುವ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
  3. ಈ ಚುನಾವಣೆಗಳ ಅನುಭವವು ವ್ಯಾಪಕವಾದ ಚುನಾವಣಾ ಸುಧಾರಣೆಗಳ ಅಗತ್ಯವನ್ನು, ಚುನಾವಣಾ ಆಯೋಗವನ್ನು ಸುಧಾರಿಸಬೇಕಾದ ತುರ್ತನ್ನು ತೋರಿದೆ. ಚುನಾವಣಾ ಆಯುಕ್ತರುಗಳನ್ನು ತತ್ಕಾಲೀನ ಸರಕಾರ ನೇಮಿಸುವ ಬದಲು ಭಾರತದ ರಾಷ್ಟ್ರಪತಿಗಳ ನೇತೃತ್ವದ ಒಂದು ವ್ಯವಸ್ಥೆಯ ಮೂಲಕ ನೇಮಿಸುವಂತೆ ಮಾಡಲು, ಇದನ್ನು ಒಪ್ಪುವ ಎಲ್ಲ ರಾಜಕಿಯ ಅಭಿಪ್ರಾಯದವರನ್ನು ಸಿಪಿಐ(ಎಂ) ಅಣಿನೆರೆಸುತ್ತದೆ.
  4. ಇಲೆಕ್ಟ್ರಾನಿಕ್ಮತಯಂತ್ರ(ಇವಿಎಂ)ಗಳ ತಟಸ್ಥತೆಯ ಕುರಿತಂತೆ ಇರುವ ವಿವಿಧ ದೂರುಗಳು ಮತ್ತು ಈ ಯಂತ್ರಗಳಲ್ಲಿ ಕೈಯಾಡಿಸುವ ಸಾಧ್ಯತೆಯ ಬಗ್ಗೆ ಎದ್ದಿರುವ ಸಂದೇಹಗಳನ್ನು ಕುರಿತ ವರದಿಗಳ ಒಂದು ಅಧ್ಯಯನವನ್ನು ಸಿಪಿಐ(ಎಂ) ನಡೆಸುತ್ತದೆ ಮತ್ತು ಇತರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮಗಳನ್ನು ನಿರ್ಧರಿಸುತ್ತದೆ.

ಜಾತ್ಯತೀತ ಚಿಂತಕ ಡಾ. ರಾಮ್‍ ಪುನಿಯಾನಿಯವರಿಗೆ ಚುನಾವಣೆಗಳ ನಂತರ ಬೆದರಿಕೆಯ ಕರೆಗಳನ್ನು ಮಾಡಿರುವುದನ್ನು ಕೇಂದ್ರ ಸಮಿತಿ ಖಂಡಿಸಿದೆ.ಒಬ್ಬ ಯುವಪರಿಶಿಷ್ಟ ಬುಡಕಟ್ಟಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ. ಪಾಯಲ್‍ ತಡ್ವಿಯ ಆತ್ಮಹತ್ಯೆಯ ಬಗ್ಗೆ ಕೇಂದ್ರ ಸಮಿತಿ ತನ್ನ ದುಃಖವನ್ನು ವ್ಯಕ್ತಪಡಿಸಿದೆ. ಜಾತಿ ಕಿರುಕುಳಗಳು ಆಕೆಯನ್ನು ಆತ್ಮಹತ್ಯೆಯ ತ್ತತಳ್ಳಿದವು. ಮಹಾರಾಷ್ಟ್ರ ರಾಜ್ಯ ಸರಕಾರ ಅಪರಾಧಿಗಳ ವಿರುದ್ಧ ಮತ್ತು ಇಂತಹ ದ್ವೇಷಪ್ರಚಾರಗಳನ್ನು ಹುಟ್ಟಿಹಾಕುವವರ ವಿರುದ್ಧ ದೃಢವಾದ ಕ್ರಮವನ್ನು ಕೈಗೊಳ್ಳಬೇಕು.

ಕೃಪೆ : ಜನಶಕ್ತಿ

ಸುದ್ದಿದಿನ.ಕಾಂ|ವಾಟ್ಸಾಪ್| 9980346243

ದಿನದ ಸುದ್ದಿ

ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

Published

on

ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ 23ಕ್ಕೆ ಹೆಚ್ಚು ವಿದ್ಯಾರ್ಥಿನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ *ಮಹಬೂಬ್ ಭಾಷಾ* ಆಗ್ರಹಿಸಿದ್ದಾರೆ ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ ಯುವಜನರು ಹಾಗೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು, ಸಂವಿಧಾನ ವಿರೋಧಿ ನಡೆ ಹಾಗೂ ಹೋರಾಟವನ್ನು ಹತ್ತಿಕ್ಕು ಹೊನ್ನಾರವಾಗಿದೆ.

ನೀಟ್ ಹಗರಣ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಕಾರ್ಪೊರೇಟರ್ ಶಿಕ್ಷಣ ನೀತಿಗಳ ಕಾರಣ, ಪರೀಕ್ಷೆಯ ಅಕ್ರಮ ವಿರುದ್ಧ ಹೋರಾಟ ಎರಡನೇ ಸ್ವತಂತ್ರ ಸಂಗ್ರಾಯದ ರೀತಿಯಲ್ಲಿ ದೇಶದಿಂದ ವ್ಯಾಪಿಸುತ್ತಿದ್ದು, ಆಳುವ ಸರ್ಕಾರ ರಾಷ್ಟ್ರದ ಭವಿಷ್ಯ ವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದೆಂದು ಹೇಳಿದ್ದಾರೆ.

ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸುದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ

Published

on

ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ

ರಾಜಿನಾಮೆ ನೀಡಬೇಕು. ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ ,ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ವಿನಾಯಕ ಬಿ.ಎನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ.

ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ
ಯುವಜನರು, ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಸೊನಮ್ ವಾಂಗ್ಟಕ್ ಅವರನ್ನು ಏಕಾಏಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಸಂವಿಧಾನವಿರೋಧಿ ನಡೆ, ಹೋರಾಟ ಹತ್ತಿಕ್ಕುವ ಹುನ್ನಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀಟ್ ಹಗರಣ, ವಿದ್ಯಾರ್ಥಿಗಳ ಆತ್ಮ ಹತ್ಯೆಗೆ ಕಾರ್ಪೊರೇಟ್ ಶಿಕ್ಷಣ ನೀತಿಗಳು ಕಾರಣ. ನೀಟ್ ಪರೀಕ್ಷೆ ಅಕ್ರಮದ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ದೇಶದಾದ್ಯಂತ ವ್ಯಾಪಿಸುತ್ತಿದೆ. ಆಳುವ ಸರ್ಕಾರ ರಾಷ್ಟ್ರದ ಭವಿಷ್ಯವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದು’.ಎಂದು ತಿಳಿಸಿದ್ದಾರೆ.

ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಂದನೆಗಳೊಂದಿಗೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ

Published

on

ಸುದ್ದಿದಿನ,ದಾವಣಗೆರೆ‌ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು ಡಿಜಿಟಲೀಕರಣ ಸಾಧನೆ ಮಾಡಲಾಗಿರುವುದರಿಂದ, ಪ್ರಗತಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದರು.

ಅವರು ಮಂಗಳವಾರ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಒಟ್ಟು 1,97,048 ಮತದಾರರನ್ನು ಹೊಂದಿದ್ದು ಎಲ್ಲಾ 1,97,048 ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ ಇದುವರೆಗೆ ಒಟ್ಟು 1,81,890 ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದ್ದು, ಶೇಕಡಾ 92.31 ರಷ್ಟು ಗುರಿಯನ್ನು ತಲುಪಲಾಗಿದೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆಯಲ್ಲಿ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಗಣತಿ ನಮೂನೆಗಳ ಹಂಚಿಕೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಬಿರುಸಿನಿಂದ ಸಾಗಿದ್ದು, ಇನ್ನು ಕೇವಲ 4,165 ಫಾರ್ಮ್‌ಗಳು (ಶೇಕಡಾ 2.11) ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಇವೆ ಕ್ಷೇತ್ರದಲ್ಲಿ ಯಾವುದೇ ಹಂಚಿಕೆಯಾಗದ ಫಾರ್ಮ್‌ಗಳು ಬಾಕಿ ಉಳಿದಿಲ್ಲ, ಬಾಕಿ ಉಳಿದಿರುವ ಗಣತಿ ನಮೂನೆಗಳ ಗಣಕೀಕರಣ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಮನೆ ಮನೆ ಭೇಟಿ ಸಂದರ್ಭದಲ್ಲಿ ಇಂದಿನವರೆಗೆ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10,993 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 193 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 5059 ಶಾಶ್ವತ ವಲಸೆ, 3951 ಮರಣ ಪ್ರಕರಣ, 1760 ದ್ವಿಪ್ರತಿ ನಮೂನೆಗಳು ಹಾಗೂ 30 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ದಾವಣಗೆರೆ ತಾಲ್ಲೂಕು ತಹಶೀಲ್ದಾರ್‌ ರಾಜೇಶ್‌ ಕುಮಾರ್‌ ಸಿ ಅವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ6 days ago

ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,...

ದಿನದ ಸುದ್ದಿ7 days ago

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ

ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ....

ದಿನದ ಸುದ್ದಿ7 days ago

ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ

ಸುದ್ದಿದಿನ,ದಾವಣಗೆರೆ‌ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು...

ದಿನದ ಸುದ್ದಿ2 weeks ago

ಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

ಸುದ್ದಿದಿನ,ದಾವಣಗೆರೆ: ದೇಶದ ಪ್ರಮುಖ ಆರೋಗ್ಯ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರನ್ಸ್ ಕಂಪನಿ ಲಿಮಿಟೆಡ್, ಕರ್ನಾಟಕದಲ್ಲಿ ಮಳೆಗಾಲದಲ್ಲಿ ಜನರನ್ನು ಕಾಡುವ ವಿವಿಧ ಬಗೆಯ...

ದಿನದ ಸುದ್ದಿ2 weeks ago

ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ...

ದಿನದ ಸುದ್ದಿ2 weeks ago

ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ...

ದಿನದ ಸುದ್ದಿ2 weeks ago

ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ

ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು  ತಿಳಿಸಿದ್ದಾರೆ. ಅಂತ್ಯಕ್ರಿಯೆಯನ್ನು...

ಅಂಕಣ2 weeks ago

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ...

ದಿನದ ಸುದ್ದಿ3 weeks ago

ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ...

ದಿನದ ಸುದ್ದಿ3 weeks ago

ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು

ಮುಖ್ಯಾಂಶಗಳು ​ ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ ​ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್ ಸುದ್ದಿದಿನ,​ದಾವಣಗೆರೆ:...

Trending