ದಿನದ ಸುದ್ದಿ
ವಾಹ್, ಮೋದೀಜೀ, ವಾಹ್..!
ಸ್ವಾತಂತ್ರ್ಯಾನಂತರದ ಅತ್ಯಂತ ಅತ್ಯಂತ ವಿಜ್ಞಾನ-ಅಪ್ರಿಯ ಸರಕಾರ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಇತರ ವಿಜ್ಞಾನ ಸಂಬಂಧಿ ನಿಧಿಗಳನ್ನು ತೀವ್ರವಾಗಿ ಕಡಿತ ಮಾಡಿರುವ ದಾಖಲೆ ಹೊಂದಿರುವ ಸರಕಾರ, ಖಾಸಗಿ ಚಮಚಾಗಳಿಗೆ ನೆರವಾಗಲು ಹೆಚ್.ಎ.ಎಲ್. ಗೆ ತಿವಿದಿರುವ ಸರಕಾರ, ಈಗ ರಾಜಕೀಯ ಪ್ರಯೋಜನಗಳಿಗಾಗಿ ಅಂತರಿಕ್ಷ ತಂತ್ರಜ್ಞಾನದ ಮುನ್ನಡೆಗಳನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ವಾಹ್, ಮೋದೀಜೀ ವಾಹ್!
-ಹೀಗೆಂದು “ಭಾರತೀಯ ವಿಜ್ಞಾನಿಗಳ ಸಾಧನೆಗಳಿಗೆ ಒಂದು ಸಾರ್ವತ್ರಿಕ ಚುನಾವಣೆಗಳ ಸಮಯದಲ್ಲಿ ರಾಜಕೀಯ ಬಣ್ಣ ಪಡೆಯುವುದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಲು ಇರುವ ವಿಶೇಷ ಕಾರಣಗಳ ಬಗ್ಗೆ ಇಡೀ ದೇಶ ತಿಳಿಯ ಬಯಸುತ್ತದೆ “ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ತಮ್ಮ ಟ್ವೀಟ್ ನಲ್ಲಿ ಉದ್ಗರಿಸಿದ್ದಾರೆ.
It is ironic that this most science-unfriendly govt after independence, which has slashed record funds for R&D & other science funding; which has shafted HAL to help private cronies, is now trying to exploit advances in space technology to seek political gains. Wah, Modiji, Wah!
— Sitaram Yechury (@SitaramYechury) March 27, 2019
That India had developed this capability was announced by DRDO in 2012. Following the successes of India’s anti-ballistic missile defence programme and the Agni series of missiles, this capability was incorporated into the anti-satellite weapon development programme. 2/n
— Sitaram Yechury (@SitaramYechury) March 27, 2019
(ಮಾಹಿತಿ ಕೃಪೆ : ಜನಶಕ್ತಿ ಮೀಡಿಯಾ)
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಗಿರೀಶ್ ಕುಮಾರ್.ಜಿ ಅವರಿಗೆ ಪಿಎಚ್.ಡಿ ಪದವಿ
ಬಳ್ಳಾರಿ/ ವಿಜಯನಗರ:ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ನಂಬರ್ 1. ಇಟಿಗಿ ಗ್ರಾಮದ, ಪ್ರಸ್ತುತ ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯ ಕೋಟೇಶ್ ಲೇಔಟ್ ನಿವಾಸಿಗಳಾದ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೌಡ್ರು ದೊಡ್ಡ ಹನುಮಂತಪ್ಪ ಮತ್ತು ನಾಗರತ್ನ ದಂಪತಿಗಳು ಮಗನಾದ ಗಿರೀಶ್ ಕುಮಾರ್.ಜಿ ಅವರಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಹತ್ತಿರದ ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ ಹಂಪಿಯಿಂದ ಪಿಎಚ್.ಡಿ ಪದವಿಯನ್ನು ನೀಡಲಾಯಿತು.
ಇವರು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗೇಂದ್ರ ಅವರು ಮಾರ್ಗದರ್ಶನದಲ್ಲಿ ‘ಕನ್ನಡ ಮುದ್ರಣ ಮಾಧ್ಯಮಗಳಲ್ಲಿ ಸೈಬರ್ ಅಪರಾಧಗಳ ಪ್ರತಿನೀಧಿಕರಣ’ ( ಬಳ್ಳಾರಿ ಜಿಲ್ಲೆಯ ಅನುಲಕ್ಷಿಸಿ) ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಈ ಸಮಯದಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತರು, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು,ತಂದೆ ತಾಯಿ, ಕುಟುಂಬದ ಸದಸ್ಯರು, ಸ್ನೇಹಿತರು ಶುಭಕೋರಿದರು.
29 ರಂದು ಪಿ.ಎಚ್.ಡಿ ಮೌಖಿಕ ಪರೀಕ್ಷೆ
29 ಅಕ್ಟೋಬರ್ 2025 ರಂದು ಕನ್ನಡ ವಿಶ್ವವಿದ್ಯಾಲಯ ವಿದ್ಯಾರಣ್ಯ ಹಂಪಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮೌಖಿಕ ಪರೀಕ್ಷೆ ನಡೆಯಿತು. ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ.ಪ್ರಶಾಂತ ಕುಮಾರ್, ಆಂತರಿಕ ವಿಶೇಷ ತಜ್ಞರಾದ ಡಾ.ಎ.ಎಸ್ ಪ್ರಭಾಕರ್, ಬಾಹ್ಯ ಮೌಲ್ಯಮಾಪಕರಾದ ಡಾ.ಪುಟ್ಟಸ್ವಾಮಿ, ಪ್ರಾಧ್ಯಾಪಕ,ಮೈಸೂರು ವಿಶ್ವವಿದ್ಯಾಲಯ, ಮಾರ್ಗದರ್ಶಕ ಸಹಾಯಕ ಪ್ರಾಧ್ಯಾಪಕ ಡಾ.ನಾಗೇಂದ್ರ, ವಿಭಾಗದ ಮುಖ್ಯಸ್ಥ ಡಾ. ಎಸ್.ವೈ ಸೋಮಶೇಖರ್, ವಿಭಾಗದ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
ವೃತ್ತಿ
ಗಿರೀಶ್ ಕುಮಾರ್.ಜಿ ಅವರು 2017 ರಿಂದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಈಟಿವಿ ಭಾರತ್, ಹೊಸಪೇಟೆ ಟೈಮ್ಸ್ ದಿನಪತ್ರಿಕೆ ವರದಿಗಾರಾಗಿ, ಆಕಾಶವಾಣಿ ತಾತ್ಕಾಲಿಕ ಉದ್ಘೋಷಕರಾಗಿ, ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀಮತಿ ಸರಳ ದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಪದವಿ ಕಾಲೇಜುಗಳಲ್ಲಿ ಮತ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮುಖ್ಯ ಆವರಣ ಮತ್ತು ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ 9 ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಹೊಸಪೇಟೆ ಟೈಮ್ಸ್ ದಿನಪತ್ರಿಕೆ ಬಳ್ಳಾರಿ ಜಿಲ್ಲೆಯ ವರದಿಗಾರರಾಗಿ ಮತ್ತು ಲೋಕಲ್ ಆಪ್ ನಲ್ಲಿ ಬಳ್ಳಾರಿ ಜಿಲ್ಲೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಪಿಎಚ್.ಡಿ ಸಾರಾಂಶ
ಕನ್ನಡ ಮುದ್ರಣ ಮಾಧ್ಯಮಗಳಲ್ಲಿ ಸೈಬರ್ ಅಪರಾಧಗಳ ಪ್ರತಿನೀಧಿಕರಣ (ಬಳ್ಳಾರಿ ಜಿಲ್ಲೆಯ ಅನುಲಕ್ಷಿಸಿ : ಬಳ್ಳಾರಿ ವಿಜಯನಗರ ಜಿಲ್ಲೆ) ಎಂಬ ವಿಷಯದ ಸಂಶೋಧನೆ ಕರ್ನಾಟಕ ರಾಜ್ಯದ ಕನ್ನಡದ ಮೊದಲ ಸಂಶೋಧನೆ ಮಹಾಪ್ರಬಂಧವಾಗಿದೆ.
ಈ ವಿಷಯದ ಕುರಿತು 2019 ರಿಂದ 2022 ಅವಧಿ ವರೆಗೆ ಅಧ್ಯಾಯ ಮಾಡಿ, ಸೈಬರ್ ಅಪರಾಧಗಳ ಬಳ್ಳಾರಿ ಜಿಲ್ಲಾ ಪಕ್ಷೀನೋಟ, ಸೈಬರ್ ಅಪರಾಧಗಳ ಹುಟ್ಟು, ಬೆಳವಣಿಗೆ, 4 ವರ್ಷಗಳ ಸೈಬರ್ ಅಪರಾಧಗಳ ಅಂಕಿ, ಸಂಖ್ಯೆಗಳು, ಪೈ ಮತ್ತು ಸ್ತಂಭ ನಕ್ಷೆಗಳು ಒಳಗೊಂಡಿದೆ. ಮುಖ್ಯವಾಗಿ ವಿಜಯ ಕರ್ನಾಟಕ ಮತ್ತು ವಿಜಯವಾಣಿ ದಿನಪತ್ರಿಕೆ ಹಾಗು ಮೈಸೂರಿನ ಪ್ರತಿನಿಧಿ ದಿನಪತ್ರಿಕೆಗಳಲ್ಲಿ ಬರಹ, ಲೇಖನ, ಅಂಕಣಗಳು ವಿಶೇಷ ವಿಶ್ಲೇಷಣೆ, ಸೈಬರ್ ಅಪರಾಧಗಳ ಬಗ್ಗೆ ಕರ್ನಾಟಕ ರಾಜ್ಯದ ಪೋಲಿಸ್ ಇಲಾಖೆಯ ಐ.ಪಿ.ಎಸ್, ಸಿ.ಪಿ.ಐ, ಪಿ.ಎಸ್.ಐ ಅಧಿಕಾರಿಗಳು, ಹಿರಿಯ ಪತ್ರಕರ್ತರು, ಸೈಬರ್ ತಜ್ಞರು, ವಂಚನೆ ಒಳಗಾದವರ ಸಂರ್ದಶನ ಮತ್ತು ವಿಶ್ಲೇಷಣೆ ಮತ್ತು ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಈ ಸಂಶೋಧನೆ ಒಳಗೊಂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ತವ್ಯ ಲೋಪ | ಆಯುಕ್ತೆ ಮಂಜುಶ್ರೀ, ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇಲ್ಲಿ ನಡೆದಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ತಕರಾರು ಅರ್ಜಿ ಸಲ್ಲಿಸಿ 5 ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ ಎನ್ ಹಾಗೂ ಮಂಗಳೂರು ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಡಾ.ಕೆ.ಎ.ಓಬಳಪ್ಪ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಡಾ.ಕೆ.ಎ.ಓಬಳಪ್ಪ ಇವರು ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇಲ್ಲಿ ಅಧಿಸೂಚನೆ ಹೊರಡಿಸಿರುವ ಕನ್ನಡ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಸಂದರ್ಶನಕ್ಕೂ ಹಾಜರಾಗಿರುತ್ತಾರೆ. ಆದರೆ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸದೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿರುತ್ತಾರೆ.
ಮಾಹಿತಿಹಕ್ಕು ಅಡಿಯಲ್ಲಿ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ದೃಢೀಕರಿಸಿ ನೀಡುವಂತೆ ಕೋರಿದಾಗಲೂ ಮಾಹಿತಿ ನೀಡದೆ ನಿರಾಕರಿಸಿರುತ್ತಾರೆ. ಯು.ಜಿ.ಸಿ ನಿಯಮಾವಳಿ ಪ್ರಕಾರ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸದೆ ವಿಷಯವಾರು ಮತ್ತು ಮೀಸಲಾತಿವಾರು 1:10, 1:15 ಅನುಪಾತದವರೆಗೂ ಮನಸ್ಸಿಚ್ಚೆಯಂತೆ ಸಂದರ್ಶನಕ್ಕೆ ಆಹ್ವಾನ ನೀಡಿ, ಕಾನೂನುಬಾಹಿರವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿರುತ್ತಾರೆ.
ಹೀಗಾಗಿ ಅಂತಿಮ ಆಯ್ಕೆ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸುವರೆಗೂ ಈ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕಾಲೇಜು ಶಿಕ್ಷಣ ಆಯುಕ್ತರು ಹಾಗೂ ಪ್ರಾದೇಶಿಕ ಜಂಟಿ ನಿರ್ದೇಶಕರುಗಳಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆದರೆ ತಕರಾರು ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ಸ್ಪಷ್ಟನೆ ನೀಡದೆ ನಿಯಮಬಾಹಿರವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲಾಗಿರುತ್ತದೆ. ಆದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನರೇಗಾ ಕಾರ್ಮಿಕ ಕೆಲಸದ ಸ್ಥಳದಲ್ಲಿ ನಿಧನ : ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ
ಸುದ್ದಿದಿನ,ದಾವಣಗೆರೆ:ನವೆಂಬರ್ 10 ರ ಬೆಳಿಗ್ಗೆ 10 ಗಂಟೆ ಸುಮಾರಿಗೆ, ಹೊನ್ನಾಳಿ ತಾಲ್ಲೂಕು ಹಿರೇಗೋಣಿಗೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇರುವ ಸರ್ವೆ ನಂ 67ರಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಕಂದಕ ನಿರ್ಮಾಣ ಕೆಲಸದ ಕೂಲಿ ಕೆಲಸದಲ್ಲಿ ನಿರತರಾಗಿದ್ದ ಜಿಕ್ರಿಯಾ ಸಬಾದ್ ಬಿನ್ ನಿಯಾಸಾಬ್ ಸುಮಾರು ವಯಸ್ಸು 61, ಜಾಬ್ ಕಾರ್ಡ್ ಸಂಖ್ಯೆ ಕೆಎನ್ -12-005-037-004/396, ಹಠಾತ್ತನೆ ಕುಸಿದು ಬಿದ್ದು ಸ್ಥಳದಲ್ಲೇ ನಿಧನರಾಗಿರುವರು.
ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಕಾಮಗಾರಿ ಸ್ಥಳಗಳಲ್ಲಿ ನಿಯಮಿತ ಆರೋಗ್ಯ ತಪಾಸಣೆ ಮತ್ತು ಸುರಕ್ಷತೆಯ ಮಹತ್ವವನ್ನು ಒತ್ತಿ ಹೇಳಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮತ್ತು ಅವರಿಗೆ ಎಲ್ಲಾ ಸರ್ಕಾರಿ ಸವಲತ್ತುಗಳು ಮತ್ತು ಸಹಾಯವನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಹೊನ್ನಾಳಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಹೊನ್ನಾಳಿ ವಲಯ ಅರಣ್ಯ ಅಧಿಕಾರಿ ಮತ್ತು ಹಿರೇಗೋಣಿಗೆರೆ ಗ್ರಾಮ ಪಂಚಾಯತ್ ಪಿಡಿಓ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days agoಕರ್ತವ್ಯ ಲೋಪ ; ಪಿ.ಮಣಿವಣ್ಣನ್, ಕ್ರೈಸ್ ಇ.ಡಿ ಕಾಂತರಾಜು ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ16 hours agoಕರ್ತವ್ಯ ಲೋಪ | ಆಯುಕ್ತೆ ಮಂಜುಶ್ರೀ, ಜಂಟಿ ನಿರ್ದೇಶಕಿ ಕೆ.ಆರ್.ಕವಿತಾ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಸಚಿವ ಪ್ರಿಯಾಂಕ ಖರ್ಗೆ ಪಂಚಾಯತ್ ರಾಜ್ ಇಲಾಖೆ ನಿರ್ಲಕ್ಷ್ಯ | ದೂರು ನೀಡಿ 6 ತಿಂಗಳಾದರೂ ಯಾವುದೇ ಕ್ರಮವಿಲ್ಲ ; ವಕೀಲ ಡಾ.ಕೆ.ಎ.ಓಬಳಪ್ಪ ಆರೋಪ
-
ದಿನದ ಸುದ್ದಿ2 days agoಹೊಳಲ್ಕೆರೆ | ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ; ನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಖರೀದಿ ವ್ಯವಹಾರ ಪ್ರಾಂಶುಪಾಲ ಡಾ ಎಸ್.ಪಿ ರವಿ ವಿರುದ್ಧ ಲೋಕಾಯುಕ್ತಕ್ಕೆ ವಕೀಲ ಡಾ.ಓಬಳೇಶ್ ದೂರು
-
ದಿನದ ಸುದ್ದಿ2 days agoಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ | 8 ಕುಲಸಚಿವರು, 10 ಹಣಕಾಸು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು
-
ದಿನದ ಸುದ್ದಿ2 days agoದಾವಣಗೆರೆ | ತಾತ್ಕಲಿಕ ಉಪ ಪೊಲೀಸ್ ಠಾಣೆಗೆ ಎಸ್ ಪಿ ಉಮಾ ಪ್ರಶಾಂತ್ ಚಾಲನೆ
-
ದಿನದ ಸುದ್ದಿ18 hours agoನರೇಗಾ ಕಾರ್ಮಿಕ ಕೆಲಸದ ಸ್ಥಳದಲ್ಲಿ ನಿಧನ : ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ
-
ದಿನದ ಸುದ್ದಿ2 days agoದಾವಣಗೆರೆಯಿಂದ ಶ್ರೀಶೈಲಂಗೆ ನೂತನ ಬಸ್ ಮಾರ್ಗಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಚಾಲನೆ

