Connect with us

ನಿತ್ಯ ಭವಿಷ್ಯ

ಇಂದು ಈ ರಾಶಿಯವರು ಜಮೀನು, ನಿವೇಶನ ಖರೀದಿ ಮಾಡುವ ಸಂಭವ : ಸಮಸ್ಯೆಗಳ ಪರಿಹಾರಕ್ಕೆ ಕರೆಮಾಡಿ | 29-12-2019

Published

on

ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ.ಶಾಸ್ತ್ರಂ ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್ : 9964584883

ಮೇಷ ರಾಶಿ

ಈ ರಾಶಿಗೆ ಸಪ್ತಮ ಸ್ಥಾನದಲ್ಲಿ ಶುಕ್ರ ಮತ್ತು ಅಷ್ಟಮ ಸ್ಥಾನದಲ್ಲಿ ಗುರು ಇರುವುದರಿಂದ, ಮನೆಯಲ್ಲಿ ಕುಟುಂಬ ಸದಸ್ಯರ ಮದುವೆ ಕಾರ್ಯ ನೆರವೇರಲಿದೆ. ಮನೆ ಕಟ್ಟುವ ಬಗ್ಗೆ ಚಿಂತನೆ ಮಾಡುವವರಿಗೆ ಶುಭದಾಯಕ.

ಹಳೆ ಮನೆಯನ್ನು ನವೀಕರಣ ಬಗ್ಗೆ ಚಿಂತನೆ ಮಾಡುವವರಿಗೆ ಒಳ್ಳೆಯದು. ಜಮೀನಲ್ಲಿ ಹೊಸ ಕಾರ್ಯಗಳನ್ನು ಮಾಡುವ ಯೋಜನೆ ಮಾಡುವಿರಿ. ಹೊಸ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಪ್ರೀತಿ-ಪ್ರೇಮ-ಪ್ರಣಯ ಸರಸ ಸಲ್ಲಾಪಗಳಲ್ಲಿ ವೇದನೆ ಅನುಭವಿಸುವಿರಿ. ತಾವು ಹಿರಿಯರ ವಿರೋಧಿಗಳ ಆಗುವಿರಿ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಷಭ ರಾಶಿ

ಈ ರಾಶಿಗೆ ಷಷ್ಟಮ ಸ್ಥಾನದಲ್ಲಿ ಶುಕ್ರ ಸಪ್ತಮದಲ್ಲಿ ಗುರು ಇರುವುದರಿಂದ ಪ್ರೀತಿ ವಿಚಾರದಲ್ಲಿ ಮನಸ್ತಾಪ ಸಾಧ್ಯತೆ ಇದೆ. ಹಣಕಾಸಿನಲ್ಲಿ ಏರುಪೇರು ಸಾಧ್ಯತೆಯಿದೆ. ನಮ್ಮ ಯೋಚನೆಗಳು ಪ್ರತಿಫಲ ಸಿಗಲಾರದು. ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ತಮ್ಮ ಹಿತೈಷಿಗಳು ವಿರೋಧಿಗಳ ಆಗುವರು. ಕುಟುಂಬ ಸದಸ್ಯರೊಡನೆ ಮನಸ್ತಾಪವಾಗುವುದು.

ಅಕ್ಕಪಕ್ಕದವರ ಮನೆ ಮಾಲಿಕರ ಕಡೆಯಿಂದ ಹಾಗೂ ಅಕ್ಕಪಕ್ಕದ ಹೊಲದ ಮಾಲಿಕರ ಕಡೆಯಿಂದ ಜಗಳವಾಗುವ ಸಾಧ್ಯತೆ ಇದೆ ಸಮಾಧಾನವಾಗಿದ್ದರೆ ಒಳಿತು. ಪ್ರೀತಿ ವಿಚಾರದಲ್ಲಿ ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ. ತಮ್ಮ ಹಣ ತಮಗೆ ಕೈ ಸೇರಲು ಚಿಂತಿಸುವಿರಿ. ಹೊಸ ವಾಹನ ಖರೀದಿ ವಿಳಂಬವಾಗುವುದು.

ಹೊಸ ಉದ್ಯಮ ಪ್ರಾರಂಭ ಮಾಡುವುದರ ಬಗ್ಗೆ ಯೋಚನೆ ಮಾಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕ ವೇದನೆ ಅನುಭವಿಸುವ ಸಾಧ್ಯತೆಯಾಗಲಿದೆ. ನೂತನ ಗೃಹ ಕಟ್ಟಡ ಪತ್ನಿಯ ಸಹಾಯದಿಂದ ಯಶಸ್ವಿಯಾಗಲಿದೆ. ಯಂತ್ರೋಪಕರಣಗಳ ಖರೀದಿ ವಿಳಂಬವಾಗಲಿದೆ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಿಥುನ ರಾಶಿ

ಪಂಚಮ ಸ್ಥಾನದಲ್ಲಿ ಶುಕ್ರ ಮತ್ತು ಷಷ್ಟಮ ಸ್ಥಾನದಲ್ಲಿ ಗುರು ಇರುವುದರಿಂದ ಹೊಸ ನಿವೇಶನ ಅಥವಾ ಜಮೀನು ಖರೀದಿಸುವ ಸಾಧ್ಯತೆ ಇದೆ. ನಿವೇಶನದಲ್ಲಿ ಮನೆ ಕಟ್ಟುವ ಯೋಚನೆ ಬರಲಿದೆ. ನವದಂಪತಿಗಳ ಸಂತಾನದ ಬಗ್ಗೆ ಸಿಹಿಸುದ್ದಿ ಸಿಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮನಸ್ತಾಪವಾಗುವ ಸಾಧ್ಯತೆ ಇದೆ.

ಪ್ರೇಮ ವಿವಾಹ ಆದವರು ಹಿರಿಯರ ವಿರೋಧಿಗಳು ಆಗುವರು, ಇಬ್ಬರ ನಡುವೆ ಮನಸ್ತಾಪ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೊಸ ಉದ್ಯೋಗ ಹುಡುಕುವಲ್ಲಿ ಯಶಸ್ವಿಯಾಗಲಿದ್ದೀರಿ.

ಹೊಸ ದಿನಸಿ ಅಂಗಡಿ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ಪ್ರೇಮ ವಿಚಾರದಲ್ಲಿ ಮನಸ್ತಾಪ ಸೃಷ್ಟಿಯಾಗಲಿದೆ. ಪತ್ನಿಯ ಸಹಾಯದಿಂದ ತಮ್ಮ ಸಮಸ್ಯೆ ಬಗೆಹರಿಯಲಿದೆ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕಟಕ ರಾಶಿ

ತಾವು ಮನಸ್ಸಿನಲ್ಲಿ ಏನೇ ವಿಚಾರ ಮಾಡಿ ಪ್ರಯತ್ನ ಮಾಡಿದರು ಎಲ್ಲವೂ ಪೆಂಡಿಂಗ್ ಆಗಲಿವೆ ಹಾಗೂ ಯಶಸ್ವಿಯಾಗಲಾರವು. ನೀವು ಪತ್ನಿ ಸಹಕಾರ ಪಡೆದರೆ, ಯಶಸ್ವಿಯಾಗಲು ಅವಕಾಶಗಳು ಇವೆ. ಹಣಕಾಸಿನ ವ್ಯವಹಾರದಿಂದ ಕೊಂಚ ನೆಮ್ಮದಿ ಸಿಗಲಿದೆ.

ಪಿತ್ರಾರ್ಜಿತ ಆಸ್ತಿಯ ಸಮಸ್ಯೆ ಮುಂದಿಡಲಾಗುವುದು. ಅಕ್ಕಪಕ್ಕದವರ ವಕ್ರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಅಕ್ಕಪಕ್ಕದವರ ಜಮೀನು ವಿಚಾರ ಮನಸ್ತಾಪವಾಗಲಿದೆ. ವಿರೋಧ ಇದ್ದರೂ ನಿಮ್ಮ ಜೀವನ ಮುಂದೆ ಸಾಗಲಿದೆ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಿಂಹರಾಶಿ

ತಾವು ಶುಭ ಫಲಗಳನ್ನು ಪಡೆಯುವುದು ತುಂಬಾ ಕಷ್ಟ. ತಮ್ಮ ದುಡ್ಡು ತಮ್ಮ ಕೈಸೇರಲು ಕಷ್ಟಪಡಬೇಕಾಗುತ್ತದೆ. ಪಿತ್ರಾರ್ಜಿತ ಆಸ್ತಿ ತಮ್ಮ ಕೈ ಸೇರಲು, ಹರಸಾಹಸ ಪಡಬೇಕಾಗುತ್ತದೆ. ಗುರು ಮತ್ತು ಶನಿ ಅಶುಭ ಸ್ಥಾನದಲ್ಲಿರುವುದರಿಂದ, ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ಹಿತೈಷಿಗಳು ತಮ್ಮ ವಿರೋಧಿಗಳ ಆಗುವವರು.

ವಾಹನ ಸವಾರಿ ಮಾಡುವಾಗ ಜಾಗೃತಿ ವಹಿಸಿ. ಅಕ್ಕ-ಪಕ್ಕ ಹೊಲ ಅಥವಾ ಅಕ್ಕಪಕ್ಕದ ಮನೆಯ ಜನರಿಂದ ಮನಸ್ತಾಪ ವಾಗುವ ಸಾಧ್ಯತೆ ಇದೆ. ಹೊಸ ಮನೆ ಕಟ್ಟುವ ಕಾಮಗಾರಿ ಕುಂಟಿತವಾಗುತ್ತದೆ. ತಮ್ಮ ವಿರೋಧಿಗಳು ಒಳಸಂಚು ಮಾಡಬಹುದು ಎಚ್ಚರಿಕೆವಹಿಸಿ. ತಮ್ಮ ಕುಟುಂಬದಲ್ಲಿ ಹಿತಕರ ವಾತಾವರಣ ಸೃಷ್ಟಿಯಾಗಲಿದೆ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕನ್ಯಾ ರಾಶಿ

ಈ ರಾಶಿಯಲ್ಲಿ ರವಿ ಮತ್ತು ಕುಜ ಮಿತ್ರ ಗ್ರಹಗಳು ಒಂದೇ ಮನೇಲಿ ಇರುವುದರಿಂದ, ಅಜಾತಶತ್ರು ಆಗುವಿರಿ. ಸಮಾಜದಲ್ಲಿ ರಾಜಮನ್ನಣೆ ಸಿಗಲಿದೆ. ತಮ್ಮ ಕುಟುಂಬದ ಸದಸ್ಯರು ತಮ್ಮ ಮಾತಿಗೆ ಮಾನ್ಯತೆ ಕೊಡಲಿದ್ದಾರೆ, ತಮ್ಮ ಸಮಸ್ಯೆಗಳು ಏನೇ ಇದ್ದರೂ ಬಗೆಹರಿಸಿಕೊಳ್ಳಬಹುದು.

ತುಂಬಾ ದಿನದಿಂದ ಕಾಡುವ ಸಮಸ್ಯೆ ಇಂದು ಬಗೆಹರಿಯಲಿದೆ. ಪತ್ನಿಯ ಸಹಾಯ ಮತ್ತು ಸಹಕಾರ ಪಡೆದುಕೊಳ್ಳುವುದು ಉತ್ತಮ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹೊಸ ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಪ್ರೀತಿ ವಿಚಾರದಲ್ಲಿ ವಿಳಂಬವಾಗುವುದು.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ತುಲಾ ರಾಶಿ

ಇಂದು ಬುಧ ಮತ್ತು ಶುಕ್ರ ಈ ರಾಶಿಯಲ್ಲಿ ಇರುವುದರಿಂದ ಮಿತೃತ್ವ ಸೃಷ್ಟಿಯಾಗುತ್ತದೆ. ವಿರೋಧಿಗಳು ತಮಗೆ ಮಿತ್ರರಾಗುವರು. ದ್ವೇಷ ಮಾಯವಾಗುವುದು. ಕುಟುಂಬದಲ್ಲಿ ಎಲ್ಲಾ ಕುಟುಂಬದ ಸದಸ್ಯರೊಡನೆ ಸಂತೋಷದ ದಿನವನ್ನು ಅನುಭವಿಸಿ ವಿರಿ. ಹೊಸ ಉದ್ಯಮದಲ್ಲಿ ಪ್ರಗತಿ ಕಾಣಲಿದೆ. ಹೊಸ ಗ್ರಹ ಕಟ್ಟಡದ ಬಗ್ಗೆ ಯಶಸ್ವಿಯಾಗಲಿದೆ.

ಜಮೀನು ಖರೀದಿ ಅಥವಾ ನಿವೇಶನ ಖರೀದಿ ಸಾಧ್ಯತೆ ಇದೆ. ಹೈನುಗಾರಿಕೆ ಉದ್ಯಮ ಪ್ರಾರಂಭ ಮಾಡುವವರಿಗೆ ಶುಭದಾಯಕ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪವಾಗುವ ಸಾಧ್ಯತೆ ಇದೆ, ಸಮಾಧಾನವಾಗಿದ್ದರೆ ಒಳಿತು. ಕುಟುಂಬದ ಜೊತೆ ದೇವದರ್ಶನ ಪ್ರಯಾಣ ಮಾಡುವಿರಿ. ಕೃಷಿಕರಿಗೆ ಸಮೃದ್ಧಿಯ ಬೆಳೆ ಸಿಗಲಿದೆ. ಜಮೀನಲ್ಲಿ ಹೊಸ ಚಟುವಟಿಕೆ ಮಾಡುವಿರಿ. ಪ್ರಯತ್ನ ತಕ್ಕಂತೆ ಫಲ ಸಿಗಲಿದೆ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಶ್ಚಿಕ ರಾಶಿ

ಈ ರಾಶಿಯಲ್ಲಿ ಗುರು ಇರುವುದರಿಂದ, ಸಾಲಗಾರರಿಂದ ಋಣಮುಕ್ತಿ ಆಗುವ ದಿನವಾಗಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಹೋಟೆಲ್ ಉದ್ಯಮದಾರರಿಗೆ ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ. ಪ್ರೀತಿ ವಿಚಾರದಲ್ಲಿ ಸಂಶಯ ಸೃಷ್ಟಿಯಾಗಿ ವಿರಸವಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರು ವಿರೋಧಿಗಳಆಗುವರು.

ಪಾಲುದಾರಿಕೆ ವ್ಯವಹಾರ ಬೇಡ. ಮಧ್ಯಸ್ಥಿಕೆ ಜನರಿಂದ ಕಿರುಕುಳ ಅನುಭವಿಸುವಿರಿ. ಸರಕಾರಿ ಉದ್ಯೋಗದಲ್ಲಿ ಬಡ್ತಿ ಮತ್ತು ಸ್ಥಾನಪಲ್ಲಟ ಆಗುವ ಸಾಧ್ಯತೆ ಇದೆ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಧನಸ್ಸು ರಾಶಿ

ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು. ತಮ್ಮ ವಿವೇಚನೆಗಳು ವಿಳಂಬವಾಗುವುದು. ಗೃಹ ಕಟ್ಟಡ, ನಿವೇಶನ ಖರೀದಿ ವಕ್ರದೃಷ್ಟಿಯಿಂದ ಮುಂದೂಡುವುದು. ಯಾರೋ ಮಾಡಿರುವಂತಹ ಅಪವಾದಕ್ಕೆ ತಾವು ಬಲಿಪಶು ಆಗುವಿರಿ.

ತಮ್ಮ ವಿರೋಧಿಗಳು ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ದೂರದ ಪ್ರಯಾಣ ಬೇಡ. ತಾವು ಮಧ್ಯಸ್ಥಿಕೆವಹಿಸಿ ಸಾಲ ಕೋಡಿಸಬಾರದು. ಉದ್ಯೋಗದಲ್ಲಿ ಕೆಲಸಗಾರರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಹಣಕಾಸಿನ ಚಿಂತೆ ಕಾಡಲಿದೆ. ತಾವು ಹಮ್ಮಿಕೊಂಡಿರುವ ಯೋಜನೆಗಳು ಯಾರಿಂದಲೂ ಸಹಕಾರ ಸಿಗಲಾರದು.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಕರ ರಾಶಿ

ಆರೋಗ್ಯದಲ್ಲಿ ಸಮಸ್ಯೆ ಕಾಡಲಿದೆ, ಜಾಗೃತೆ ವಹಿಸಿ. ನಂಬಿದವರ ಕಡೆಯಿಂದ, ಮನಸ್ತಾಪ ಆಗಲಿದೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ದೂರವಾಗಲಿದೆ. ಸುವರ್ಣ ಖರೀದಿ, ವಸ್ತ್ರ ಖರೀದಿ ಆಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ,ಕೊಂಚ ನೆಮ್ಮದಿ ಸಿಗಲಿದೆ. ಹಳೆಯ ಸಾಲ ವಸೂಲಾತಿ ಆಗುವುದು. ಲೇವಾದೇವಿಗಾರರಗೆ ಕೊಂಚ ನೆಮ್ಮದಿ ಸಿಗುವುದು. ಎಚ್ಚರಿಕೆಯಿಂದ ,ವಾಹನ ಚಲಾಯಿಸಿ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕುಂಭ ರಾಶಿ

ಮುಖ್ಯವಾದ ನಿರ್ಣಯ ಹಳೆ ವಿಚಾರದಲ್ಲಿ ತುಸು ಮಟ್ಟಿಗಿನ ಹೊಯ್ದಾಟವನ್ನು ಎದುರಿಸುವ ಸಾಧ್ಯತೆ ಅಧಿಕ. ತಾವು ಯಾವುದೇ ಕೆಲಸ ಕಾರ್ಯಕ್ಕೆ ಹಿಂಜರಿಕೆ ಮಾಡುವುದರಿಂದ ಕೆಲಸಕಾರ್ಯಗಳು ವಿಳಂಬವಾಗುವವು. ತಮ್ಮ ಬೆಂಬಲಕ್ಕೆ ಯಾರು ಬರಲಾರರು. ಪಿತ್ರಾರ್ಜಿತ ಆಸ್ತಿಯಲ್ಲಿ ಮನಸ್ತಾಪವಾಗುವುದು.

ತಮ್ಮ ಪ್ರಯತ್ನ ಕೈಗೆ ಬರುವ ತುತ್ತು ಬಾಯಿಗೆ ಬಾರದ ಹಾಗೆ ಭಾಸವಾಗುತ್ತದೆ. ಮಗಳ ಮದುವೆ ಯೋಚನೆ ತುಂಬಾ ಕಾಡಲಿದೆ. ಕುಟುಂಬ ಸದಸ್ಯರಲ್ಲಿ ತೀವ್ರ ಅನಾರೋಗ್ಯದಿಂದ ನರಳುವ ಸಾಧ್ಯತೆ ಇದೆ. ದಾಂಪತ್ಯ ಕಲಹ ಸೃಷ್ಟಿಯಾಗಲಿದೆ. ಅಣ್ಣತಮ್ಮಂದಿರು ವಿರೋಧಿಗಳಆಗುವರು.

ವ್ಯಾಪಾರದಲ್ಲಿ ನಷ್ಟ ಅನುಭವಿಸುವಿರಿ. ಲೇವಾದೇವಿ ವ್ಯಾಪಾರಸ್ಥರಿಗೆ ಕಷ್ಟವಾಗಲಿದೆ. ಟ್ರಾನ್ಸ್ಪೋರ್ಟ್ ಬಿಜಿನೆಸ್ ಮಾಡುವವರು ನಷ್ಟ ಅನುಭವಿಸಬೇಕಾಗುತ್ತದೆ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೀನ ರಾಶಿ

ಈ ರಾಶಿಯಲಿ ಚಂದ್ರ ಇರುವುದರಿಂದ ಕಷ್ಟಕಾರ್ಪಣ್ಯಗಳು ದೂರವಾಗುವ ಸನಿಹ ದಿನ ಬಂದಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಹಣಕಾಸಿನಲ್ಲಿ ಪ್ರಗತಿ ಕಾಣಲಿದೆ. ಕುಟುಂಬದ ಸದಸ್ಯರೊಡನೆ ಸಂತೋಷವಾಗಿ ಬಾಳುವಿರಿ. ಹೈನುಗಾರಿಕೆ ಉದ್ಯಮದಾರರು ಪ್ರಗತಿಯಾಗಲಿದೆ. ದಿನಸಿ ವ್ಯಾಪಾರಸ್ಥರು ಪ್ರಗತಿ ಹೊಂದುವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮನೋವೇದನೆ ಸೃಷ್ಟಿಯಾಗಲಿದೆ.

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
9964584883

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

Published

on

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ

Published

on

ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.

ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.

ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.

ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.

ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.

ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending