ದಿನದ ಸುದ್ದಿ
ಕೊರೋನ ಸೋಂಕಿನ ಪ್ರಭಾವ | ಭಾರತದಲ್ಲಿ 3 ನೇ ಹಂತದ ಮುನ್ನೆಚ್ಚರಿಕೆ ಕ್ರಮಗಳು : ತಪ್ಪದೇ ಓದಿ
-
ಕರೋನ ಸೋಂಕಿನ ಪ್ರಭಾವವನ್ನು ತಡೆಗಟ್ಟಲು, ಭಾರತದಲ್ಲಿ 3 ನೇ ಹಂತದ ಮುನ್ನೆಚ್ಚರಿಕೆ ಕ್ರಮಗಳು ಈ ಕೆಳಗಿನಂತಿವೆ, ತಪ್ಪದೇ ಓದಿ.
- ನಾವು ತೆಗೆದುಕೊಳ್ಳುವ ಹಾಲಿನ ಪಾಕೆಟ್ ಗಳನ್ನು ಮನೆಗೆ ತಂದ ಕೂಡಲೇ ನೀರಿನಲ್ಲಿ ತೊಳೆದು ಸಂಗ್ರಹಿಸುವುದು ಮತ್ತು ಕೈಗಳನ್ನು ತೊಳೆದುಕೊಳ್ಳುವುದು.
- ಮನೆಗೆ ಪತ್ರಿಕೆಗಳನ್ನು ಪಡೆಯುವುದನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸುವುದು.
- ಕೊರಿಯರ್ ಮೂಲಕ ಪಡೆಯುವ ವಸ್ತುಗಳನ್ನು , ಒಂದು ನಿರ್ದಿಷ್ಟ ಸ್ಥಳದಲ್ಲಿ ಇಡಲು ಕೊರಿಯರ್ ನೀಡುವ ವ್ಯಕ್ತಿ ಗೆ ಸೂಚಿಸಿ, 24 ಗಂಟೆಗಳ ನಂತರ ತೆರೆಯುವುದು.
- ಮನೆ ಕೆಲಸದವರಿಗೆ ವೇತನ ಸಹಿತ ರಜೆ ನೀಡಿ ನಮ್ಮ ಕೆಲಸ ನಾವೇ ಮಾಡಿ ಕೊಳ್ಳುವುದು ಸೂಕ್ತ.
- ಅನಿವಾರ್ಯ ಸಂದರ್ಭದಲ್ಲಿ, ಮನೆ ಕೆಲಸದವರ ಸೇವೆ, ಅವಶ್ಯ ವಿದ್ದಲ್ಲಿ, ಅವರಿಗೆ ಸ್ವಚ್ಛತೆ ಮತ್ತು ಕರೋನ ಹರಡುವಿಕೆ ಬಗೆಗೆ ಮಾಹಿತಿ ನೀಡುವುದು. ಮುಖ್ಯ ಬಾಗಿಲನ್ನು ಮುಟ್ಟದೆ , ಕಾಲಿಂಗ್ ಬೆಲ್ ಉಪಯೋಗಿಸಲು ಸೂಚಿಸುವುದು. ಅವರಿಗೆ ಪ್ರತಿನಿತ್ಯ ಮಾಸ್ಕ್ ನೀಡಿ, ಕಾಯ೯ನಿವ೯ಹಿಸಲು ಸೂಚಿಸುವುದು, ಮತ್ತು ಬಂದ ಕೂಡಲೇ ಮತ್ತು ಆಗಾಗ್ಗೆ ಕೈತೊಳೆದುಕೊಳ್ಳಲು ಸೂಚಿಸುವುದು. ಮನೆಯ ಇತರೆ ವಸ್ತುಗಳನ್ನು ಮುಟ್ಟದಂತೆ ಸೂಚಿಸಿ, ಅವರು ಸ್ಪಶಿ೯ಸಿರುವ ಕಾಲಿಂಗ್ ಬೆಲ್ ಸ್ವಿಚ್ ಮತ್ತು ಕೈತೊಳೆಯದೇ ಮುಟ್ಟಿ ರುವ ಇತರ ಭಾಗಗಳನ್ನು ಸ್ವಚ್ಛ ಗೊಳಿಸಲು ಸೂಚಿಸುವುದು.
- ನಾವು ಮನೆಗೆ ತಂದ ನಂತರ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಕೂಡಲೇ ತೊಳೆದು ಸಂಗ್ರಹಿಸುವುದು.
- ಮನೆ ಬಿಟ್ಟು ಹೊರಗಿನ ಎಲ್ಲಾ ಪ್ರಯಾಣ ವನ್ನು ತಾತ್ಕಾಲಿಕ ವಾಗಿ ಮುಂದೂಡುವುದು. ಅನಿವಾರ್ಯ ಪ್ರಯಾಣ ದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಾಧ್ಯವಾದಷ್ಟು ಉಪಯೋಗಿಸಬಾರದು. ಸ್ವಂತ ವಾಹನ ಅಥವಾ ಓಲಾ ಮತ್ತು ಉಬರ್ ಅನ್ನು ಸಹ ಬಳಸಬಹುದು.
- ಜಿಮ್ಗಳು, ಈಜುಕೊಳ ಮತ್ತು ಇತರ ವ್ಯಾಯಾಮ ಅಭ್ಯಾಸ ಗಳನ್ನು ತಾತ್ಕಾಲಿಕ ವಾಗಿ ನಿಲ್ಲಿಸುವುದು.
- ಬೋಧನೆಗಳು, ನೃತ್ಯ / ಸಂಗೀತ ತರಗತಿಗಳು ಇತ್ಯಾದಿಗಳನ್ನು ತಾತ್ಕಾಲಿಕ ವಾಗಿ ನಿಲ್ಲಿಸುವುದು.
- ಕಚೇರಿ ಕೆಲಸಗಳನ್ನು ಮನೆಯಲ್ಲಿ ಮಾಡುವುದು ಅಥವಾ ರಜೆ ಪಡೆದು ಮನೆ ಯಲ್ಲಿರುವುದು.
- ವಾಡಿಕೆಯ ವಾಕಿಂಗ್ ವ್ಯಾಯಾಮಕ್ಕೆ ಹೋಗುವುದನ್ನು ನಿಲ್ಲಿಸಿ ಮನೆಯಲ್ಲೇ ಮಾಡಿ ಕೊಳ್ಳುವುದು.
- ಒಟ್ಟಿನಲ್ಲಿ ಹೇಳುವುದಾದರೆ ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೆ ಇರುವುದು ಸೂಕ್ತ.
- ನಾನು ಸದೃಢವಾಗಿ ದ್ದೇನೆ, ಆರೋಗ್ಯ ವಾಗಿದ್ದೇನೆ, ನಮ್ಮ ಊರಿನಲ್ಲಿ ಕರೋನ ಸೋಂಕಿತರು ಇಲ್ಲ, ಮನೆ ಇಂದ ಸ್ವಲ್ಪ ಸಮಯ ಹೊರಗೆ ಹೋಗಿ ಬಂದರೆ ಏನೂ ಆಗುವುದಿಲ್ಲ , ಎಂಬ ನಿಲ೯ಕ್ಷ ಮನೋಭಾವ, ಉಡಾಫೆ ಸಲ್ಲದು.
- ಮನೆಯಲ್ಲಿನ ಎಲ್ಲಾ ಸಭೆ ಸಮಾರಂಭಗಳನ್ನು ಮುಂದೂಡುವುದು ಸೂಕ್ತ.ಹಾಗೂ ಸ್ನೇಹಿತರು ಗಳು ಮತ್ತು ಸಂಭಂದಿಕರು ಗಳ ಸಮಾರಂಭಗಳಿಗೆ, ಇತರ ಸಂಸ್ಥೆ ಗಳ ಸಭೆಗಳಿಗೆ ಭಾಗವಹಿಸದೇ ಇರುವುದು, ನಮ್ಮ ಕುಟುಂಬದವರಿಗೆ ಮತ್ತು ಇತರೆ ಯವರಿಗೆ ಕರೋನ ಹರಡುವುದನ್ನು ತಡೆಗಟ್ಟಲು ಅನಿವಾರ್ಯ ಎಂದು ಭಾವಿಸುವುದು.
- ಕರೋನ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೂಚಿಸುವ ಎಲ್ಲಾ ರೀತಿಯ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸುವುದು, ಎಲ್ಲಾ ಸಭ್ಯ ಗೌರವಾನ್ವಿತ ನಾಗರೀಕರ ಕತ೯ವ್ಯವಾಗಿರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.
2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.
3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.
6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.
7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.
8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.
9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್ಗಳ ಸಮತೋಲನಕ್ಕೆ ಬಹಳ ಮುಖ್ಯ.
10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.
ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoಕವಿತೆ | ದೇವರ ಹೂವು
-
ದಿನದ ಸುದ್ದಿ5 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ5 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoವಸತಿ ಯೋಜನೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ5 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

